ಅಂಕಣ

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತನೀಡಿ! ಮತ್ತೆ ಈ ಸುಖಗಳನ್ನು ಅನುಭವಿಸಲು ಸಿದ್ಧರಾಗಿ!

ಒಂದು ರಾಜಕೀಯ ಪಕ್ಷವು ಸಾಮಾನ್ಯವಾಗಿ ಯಾವುದೇ ಧರ್ಮದೊಂದಿಗೆ  ಸಂಯೋಜಿಸಬಾರದು. ಆದರೆ ಇಂದು ಎಲ್ಲಾ ರಾಜಕೀಯ ಪಕ್ಷಗಳು ನಿರ್ದಿಷ್ಟ ಧರ್ಮದೊಂದಿಗೆ  ತಮ್ಮ ಸಂಬಂಧ  ಹೊಂದಿವೆ.  ಆದರೆ ಅದು ಸಮಸ್ಯೆ ಅಲ್ಲ.. ಒಂದು ಪಕ್ಷವು ಧರ್ಮವನ್ನು ನಾಶಮಾಡಲು ಆರಂಭಿಸಿದಾಗ ಸಮಸ್ಯೆ ಆರಂಭವಾಗುತ್ತದೆ. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷ ಮಾಡುತ್ತಿರುವುದು ಇದೇ.!!

ಪ್ರಪಂಚದ ಹಗರಣಗಳ ನಾಯಕ!!

ಹಗರಣಗಳಲ್ಲಿ ಕಾಂಗ್ರೆಸ್‍ನ ಪಾತ್ರ ಬಹಳ ಮಹತ್ವದ್ದು!! ಯಾಕೆಂದರೆ ಯಾವುದೇ ಹಗರಣದಲ್ಲಿ ನೋಡಿದರೂ ಕಾಂಗ್ರೆಸ್ಸಿಗರ ಪಾತ್ರವೇ ನಮಗೆ ಕಾಣ ಸಿಗುವುದು. ಇವರು ಈ ಹಗರಣ ಎಂಬ ಪದವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಬೇರೆ ಯಾವುದೇ ಪಕ್ಷಗಳಿಗೆ ಬೀಟ್ ಮಾಡಲು ಸಾಧ್ಯವಿಲ್ಲ ಎಂಬುವ ಹಾಗೆ ಹಗರಣವನ್ನು ಒಂದು ಸ್ಪರ್ಧೆಯ ತರಹ ಪರಿಗಣಿಸಿದ್ದಾರೆ!!ಇವರ ಹಗರಣಗಳ ಬಗ್ಗೆ ಒಂದು ಕಣ್ಣು ಹಾಯಿಸಿದರೆ ಶಾಕ್ ಆಗುವುದಂತು ಖಂಡಿತಾ!! ಯಾಕೆಂದರೆ ಇವರು ಮಾಡಿರುವ ಘನಾಂಧಾರಿ ಕೆಲಸ ಅಷ್ಟು ಪ್ರಸಿದ್ಧಿ ಹೊಂದಿದೆ. !!! ಇಂತಹ ಹಗರಣಗಳಲ್ಲಿ ಭಾಗಿಯಾಗಿಲ್ಲದಿದ್ದರೆ ಖಂಡಿತವಾಗಿಯೂ ಇಡೀ ಭಾರತ ಒಂದು ಉತ್ತಮ ಅಭಿವೃದ್ಧಿ ಹೊಂದಿದ ದೇಶವಾಗುತ್ತಿತ್ತು.

ಕೇಸರಿ/ ಹಿಂದೂ ಭಯೋತ್ಪಾದನೆ

ಹಿಂದುಗಳನ್ನು ಭಯೋತ್ಪಾದಕರಂತೆ ಬಿಂಬಿಸಲು ಪ್ರಯತ್ನಿಸಿದ ಕಾಂಗ್ರೆಸ್ ತಾವು ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುವುದನ್ನು ಮನಗೊಳ್ಳಬೇಕಾಗಿದೆ.!! ವಿದೇಶಿ ರಾಷ್ಟ್ರದಲ್ಲಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮುಗ್ಧ ಮುಸ್ಲಿಮ್ ಯುವಕರನ್ನು ಬಂಧಿಸಿದಾಗ ನನ್ನ ನಿದ್ದೆ ಕೆಟ್ಟಿದೆ ಎಂದು ಡಾ. ಮನಮೋಹನ್ ಸಿಂಗ್ ತನ್ನ ಹೇಳಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.. ಆದರೆ ಅದೇ ಮುಗ್ಧ ಹಿಂದೂಗಳು ಚಿತ್ರಹಿಂಸೆಗೊಳಗಾದಾಗ ಎಲ್ಲಾ ಕಾಂಗ್ರೆಸ್ಸಿಗರು ಒಳಗೊಳಗೆ ಖುಷಿ ಪಡುತ್ತಿದ್ದರು.. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ತರಹ ವರ್ತಿಸುತ್ತಿದ್ದರು. ಇದರಿಂದ ತಿಳಿಯುತ್ತದೆ ಯಾರು ಭಯೋತ್ಪಾದಕರು ಎಂದು…!!

ಹೌದು!! ನಾವು ಮಾತನಾಡುತ್ತಿರುವುದು ಕೇಸರಿ ಭಯೋತ್ಪಾದನೆಯ ಬಗ್ಗೆ. ಹಿಂದೂ ಸಮುದಾಯವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುವುದೇ ಕಾಂಗ್ರೆಸ್‍ನ ಪ್ರಮುಖ ಯೋಜನೆ. ಈ ಕಾಂಗ್ರೆಸ್‍ನ ಅದ್ಭುತ ಶೋಧಕ್ಕೆ ನೊಬೆಲ್ ಪ್ರಶಸ್ತಿಯೇ ದೊರಕಬೇಕು. ರಾಷ್ಟ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿಂದ ಜನ ಬಸವಳಿದಿರುವಾಗ ಭಯೋತ್ಪಾದನೆಯ ಹೊಸ ಬಗೆಯನ್ನು ಕಂಡುಹಿಡಿದು ಅದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಕ್ರಿಯೇಟೀವ್ ಹೆಸರು ಕೊಟ್ಟಿರುವುದಕ್ಕೆ ನಿಮಗೆ ಏನನ್ನಬೇಕೋ? ಭಯೋತ್ಪಾದನೆ ಯಾವುದೇ ಧರ್ಮ, ಕೋಮು, ಸಂಪ್ರದಾಯ, ವಿಚಾರಧಾರೆ, ಬಣ್ಣಕ್ಕೆ ಸಂಬಂಧಿಸಿದ್ದಲ್ಲ. ಏನಿದ್ದರೂ ಭಯೋತ್ಪಾದಕರು ಮಾನವೀಯತೆಯ ಬದ್ಧ ವೈರಿಗಳು ಎಂದು ಹೇಳಿದ್ದ ನೀವೇ ಕೇಸರಿ ಭಯೋತ್ಪಾದನೆಯನ್ನು ಸಂಶೋಧಿಸಿದ್ದೀರಿ ಮತ್ತು ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಕೇಸರಿ ಬಣ್ಣ ಸನಾತನ ಕಾಲದಿಂದಲೂ ಈ ರಾಷ್ಟ್ರದೊಂದಿಗೆ ಬೆಸೆದುಕೊ0ಡಿರುವ ಸ್ಪೂರ್ತಿಯ ವರ್ಣ. ಜಗದಲ್ಲಿ ಈ ಭಾರತವನ್ನು ಗುರುತಿಸುವುದು ಇದೇ ಕೇಸರಿ ವರ್ಣದಿಂದ. ಸನಾತನ ಸಂಸ್ಕøತಿಯ ಪ್ರತೀಕವಾಗಿ ಹಿರಿಯರು ಕೇಸರಿಗೆ ನಮ್ಮ ರಾಷ್ಟ್ರೀಯ ಧ್ವಜ ತಿರಂಗಾದಲ್ಲಿ ಸ್ಥಾನ ನೀಡಿದ್ದಾರೆ. ಏನೇ ಆಗಲಿ ಅಲ್ಪ ಸಂಖ್ಯಾತರ ಮತಗಳಿಸಿಕೊಂಡು ಕುರ್ಚಿ ಉಳಿಸಿಕೊಳ್ಳಬೇಕೆಂಬ ಧಾವಂತದಲ್ಲಿ ಮಾಡುತ್ತಿರುವ ಈ ತುಷ್ಟೀಕರಣ ಮುಂದೆ ಸ್ವತ: ಕಾಂಗ್ರೆಸ್‍ನ ಕೊರಳಿಗೆ ಉರುಳಾಗಬಹುದು.

ದಿಗ್ವಿಜಯಸಿಂಗ್

2008 ನವೆಂಬರ್‍ನಲ್ಲಿ ನಡೆದ ಪಾಕಿಸ್ತಾನ ಮೂಲದ ಇಸ್ಲಾಮ್ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್‍ -ಎ- ತೊಯ್ಬಾದ ಸುಮಾರು 12 ಜನ ಉಗ್ರರು ಭಾರತದ ಒಳ ನುಸುಳಿ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬ್ ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವ ಹಾಗೂ ಅಪಾರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದು ತಿಳಿದೇ ಇದೆ. ಆದರೆ ದ್ವಿಗ್ವಿಜಯ್ ಸಿಂಗ್ ಮಾತ್ರ ಇದು ಆರ್‍ಎಸ್‍ಎಸ್ ಮಾಡಿರುವ ಕೈವಾಡ ಎಂದು ಅಜೀಜ್ ಬ್ರೂನಿಯವರ ಸಂಪಾದಕತ್ವದಲ್ಲಿ ಬಂದಿದ್ದ 26/11, ಆರ್‍ಎಸ್‍ಎಸ್ ನ ಷಡ್ಯಂತ್ರ (ಮುಂಬೈ ದಾಳಿ ಆರ್‍ಎಸ್‍ಎಸ್‍ನ ಷಡ್ಯಂತ್ರ) ಎಂಬ ಪ್ರಚೋದನಕಾರಿ ಶೀರ್ಷಿಕೆಯನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಆದರೆ ಇಡೀ ಪ್ರಪಂಚಕ್ಕೆ ತಿಳಿದಿದೆ 2008 ರ ಮುಂಬೈ ದಾಳಿಯನ್ನು ಮಾಡಿದ್ದು ಪಾಕಿಸ್ತಾನಿ ಭಯೋತ್ಪಾದಕರೆಂದು. ಆರ್‍ಎಸ್‍ಎಸ್ ಪಿತೂರಿ ಎಂದು ಇಡೀ ಜಗತ್ತನ್ನು ಮೋಸಗೊಳಿಸಲು ದಿಗ್ವಿಜಯ ಸಿಂಗ್ ಪ್ರಯತ್ನಿಸಿದ್ದರು. ಹಲವಾರು ಸಂದರ್ಭಗಳಲ್ಲಿ ದಿಗ್ವಿಜಯ್ ಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿಸಿದೆ ಎಂದು ಹೇಳಿದಾಗ ಯಾವ ಕಾಂಗ್ರೆಸ್ಸಿಗರೂ ಖಂಡಿಸಿಲ್ಲ.!!

ಪಾಕ್‍ಗೆ ಕರುಣೆ ತೋರುತ್ತಿರುವ ಕಾಂಗ್ರೆಸ್!!

ಪಾಕಿಸ್ತಾನ ಮತ್ತು ಕಾಂಗ್ರೆಸ್‍ಗೆ ಏನೋ ಅವಿನಾಭಾವ ಸಂಬಂಧವಿದೆ ಎಂದು ಅಂದುಕೊಳ್ಳಬಹುದು. ಭಾರತೀಯ ಸೇನೆಯು ಪಾಕಿಸ್ತಾನದ ಜೊತೆ ಯುದ್ಧ ಮಾಡಿದರೆ ಕಾಂಗ್ರೆಸ್ಸಿಗರಿಗೆ ಅದೇನೋ ಸಂಕಟ!!.. ಪಾಕಿಸ್ತಾನದ ಭಯೋತ್ಪಾದಕರಿಗೆ ಏನಾದರೂ ತೊಂದರೆಯಾದರೆ ತಮ್ಮ ಕುಟುಂಬದವರಿಗೆ ಏನೋ ಆಯಿತು ಎನ್ನುವ ತರಹ ಸಂಕಟ ಪಡುತ್ತಾರೆ!!.. ಹಾಗಾದರೆ ಎಷ್ಟರ ಮಟ್ಟಿಗೆ ಕಾಂಗ್ರೆಸ್ ಮತ್ತು ಪಾಕ್ ಸಂಬಂಧ ಗಟ್ಟಿಯಾಗಿದೆ ಎಂಬುವುದನ್ನು ಅರಿತುಕೊಳ್ಳಬಹುದು. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸಲು ಪಾಕಿಸ್ತಾನದ ಸಹಾಯವನ್ನು ಕೇಳಿದ್ದರು. !! ಕಾಂಗ್ರೆಸ್ ಪಕ್ಷವು ಭಯೋತ್ಪಾದಕರನ್ನು ಪೋಷಿಸಿ ಅವರನ್ನು ಪ್ರತ್ಯೇಕವಾದಿಗಳು ಎಂದು ಕರೆದಿದೆ ಅಷ್ಟೇ!!

ಹಿಂದೂ ವಿರೋಧಿ ನೀತಿಗಳು

ಕಾಂಗ್ರೆಸ್ಸಿಗರು ಹಿಂದೂ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ.!! ಹಿಂದೂಗಳ ಎಲ್ಲಾ ನೀತಿಗಳನ್ನು ವಿರೋಧಿಸುವಲ್ಲಿ ಕಾಂಗ್ರೆಸ್ ಎತ್ತಿದ ಕೈ!! ಮೋದಿ ಸರಕಾರ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡುವುದನ್ನು ಖಂಡಿಸಿದಾಗ ಕೇರಳದಲ್ಲಿ ಹಗಲಲ್ಲೇ ಗೋವನ್ನು ಹತ್ಯೆ ಮಾಡಲಾಯಿತು. ಸಿದ್ದರಾಮಯ್ಯ ಗೋ ಮಾಂಸ ತಿನ್ನುವುದಕ್ಕೆ ಪ್ರೋತ್ಸಾಹ ಕೂಡಾ ನೀಡಿದ್ದರು!! ರಾಹುಲ್ ಗಾಂಧಿ ಕೂಡಾ ಇದಕ್ಕೆಲ್ಲಾ ಬೆಂಬಲವನ್ನು ನೀಡುತ್ತಿದ್ದಾರೆ. ಚರ್ಚ್‍ಗೆ ಒಂದು ಸಣ್ಣ ಕಲ್ಲು ಬಿತ್ತು ಎಂದರೆ ಇಡೀ ಕಾಂಗ್ರೆಸ್ಸಿಗರಿಗೆ ರಕ್ತ ಉಕ್ಕಿ ಹರಿಯುತ್ತದೆ.. ಇದನ್ನು ತಡೆಯಲು ಹರಸಾಹಸ ಪಡುತ್ತಾರೆ. ಆದರೆ ಅದೆಷ್ಟೋ ಹಿಂದೂ ದೇವಾಲಗಳನ್ನು ನಾಶ ಮಾಡಿದರೂ ಕಾಂಗ್ರೆಸ್‍ನ ಒಬ್ಬನೂ ವಿರೋಧಿಸಲಿಲ್ಲ ಎಂಬುವುದು ವಿಷಾದನೀಯ!!.. ಕಾಂಗ್ರೆಸ್ ಒಂದು ಪಕ್ಷ ಎಂಬ ಮಾತ್ರಕ್ಕೆ ಹಿಂದುತ್ವವನ್ನು ಮರೆತು ಬಿಟ್ಟಿದ್ದಾರೆಯೇ? “ವಿನಾಶ ಕಾಲೇ ವಿಪರೀತ ಬುದ್ಧಿ” ಎಂಬ ಮಾತಿನಂತೆ ಈ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ!!

ಹಿಂದೂಗಳ ಪರಿವರ್ತನೆಗಾಗಿ ಕಾಂಗ್ರೆಸ್ ಅನುಮತಿ

ವ್ಯಕ್ತಿಯು ಮತ್ತೊಂದು ಧರ್ಮದ ತತ್ವಗಳನ್ನು ಇಷ್ಟಪಟ್ಟರೆ ಆ ನಿರ್ದಿಷ್ಟ ಧರ್ಮವನ್ನು ಅವನು ಅನುಸರಿಸಬಹುದು. ಆದರೆ ಒಬ್ಬ ಮನುಷ್ಯನಿಗೆ ಬಲವಂತವಾಗಿ ಹಣವನ್ನು ನೀಡಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪರಿವರ್ತನೆಗೊಳಿಸುವುದು ಅಥವಾ ಭರವಸೆ ನೀಡುವುದು ತುಂಬಾ ಅನ್ಯಾಯಕರ!!..ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಹಿಂದುಗಳ ಸಾಮೂಹಿಕ ಪರಿವರ್ತನೆಗೆ ವಿರೋಧಿಸಿಲ್ಲ. ಆದರೆ ಹಿಂದೂಗಳು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದವರು ಮತ್ತೆ ಹಿಂದೂ ಧರ್ಮಕ್ಕೆ ಮರಳಲು ಬಯಸಿದಾಗ ಕಾಂಗ್ರೆಸ್ ಇದನ್ನು ವಿರೋಧಿಸುವ ಮೊದಲ ಪಕ್ಷವಾಗಿತ್ತು.!!! ಯಾಕೆ ಈ ಪಕ್ಷಪಾತವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ!!

ಅಲ್ಪಸಂಖ್ಯಾತರ ಮೇಲ್ಮನವಿ ನೀತಿ

ಜಾತ್ಯಾತೀತತೆಯ ಪದದ ಬಗ್ಗೆ ಕಾಂಗ್ರೆಸ್ ಯಾವ ರೀತಿಯಾಗಿ ವರ್ತಿಸುತ್ತಿದೆ ಎಂಬುವುದನ್ನು ಗಮನಿಸಬೇಕಾಗಿದೆ. ಕರ್ನಾಟಕದಲ್ಲಿ ನಿಯಮಿತವಾಗಿ ಆರ್‍ಎಸ್‍ಎಸ್ ಅಥವಾ ಹಿಂದೂ ಸಂಘಟನೆಯವರು ಸಾವನ್ನಪ್ಪುತ್ತಾರೆ. ಆದರೆ ಇದನ್ನು ಕಾಂಗ್ರೆಸ್ ನಾಯಕರು ಯಾವ ಕಾರಣಕ್ಕೂ ಪ್ರಶ್ನಿಸುವುದಿಲ್ಲ. ಯಾಕೆಂದರೆ ಇದು ಅವರ ಮತ ಬ್ಯಾಂಕ್ ರಾಜಕಾರಣದ ಮೇಲೆ ಪರಿಣಾಮ ಬೀರುತ್ತದೆ. ಅದೆಷ್ಟೋ ಹಿಂದೂಗಳನ್ನು, ಹಿಂದೂ ದೇವಾಲಯಗಳನ್ನು ನಾಶ ಮಾಡಿದ ಆ ಟಿಪ್ಪುವಿಗೆ ಕಾಂಗ್ರೆಸ್‍ನಿಂದ ವ್ಯಾಪಕವಾಗಿ ಅವನ ಹುಟ್ಟಿದ ದಿನವನ್ನು ನವೆಂಬರ್ ಹತ್ತರಂದು ಆಚರಿಸುತ್ತಾರೆ!!!..ಅದೇ ದೇಶಕ್ಕಾಗಿ ಹೋರಾಟ ಮಾಡಿದ ಯೋಧರಿಗೆ ನೀವು ಗೌರವ ಸಲ್ಲಿಸಿದರೆ ನಿಮ್ಮ ಜೀವನ ಸಾರ್ಥಕತೆಯನ್ನು ಹೊಂದಬಹುದು. ಟಿಪ್ಪು ಜಯಂತಿ ಮಾಡಲು ನಿಮ್ಮ ಮನಸ್ಸಾಕ್ಷಿಯಾದರೂ ಯಾವ ರೀತಿ ಒಪ್ಪುತ್ತದೋ ? ಅದೆಷ್ಟೋ ಹಿಂದೂಗಳ ಕೊಲೆ, ಹಿಂದೂ ದೇವಾಲಯಗಳ ನಾಶ, ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದಕ್ಕಾಗಿ ಈ ದೇಶ ದ್ರೋಹಿಯ ಹುಟ್ಟು ಹಬ್ಬವನ್ನು ನೀವು ಆಚರಿಸಲೇ ಬೇಕ?

ದೇಶ ವಿಭಜನೆ

ನಿಜವಾದ ದೇಶದ್ರೋಹಿಗಳು ಎಂದರೆ ನೆಹರು ಮತ್ತು ಜಿನ್ನಾ. ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ನಡುವಿನ ಪ್ರಧಾನಿ ಪಟ್ಟದ ಕಿತ್ತಾಟವೇ ದೇಶ ವಿಭಜನೆಗೆ ಮುನ್ನುಡಿ ಹಾಡಿತ್ತು ಎಂಬುವುದು ಗುಟ್ಟಾಗೇನೂ ಉಳಿದಿಲ್ಲ.!! ಹೀಗಾಗಿ ನೆಹರೂ ಭಾರತದ ವಿಭಜನೆಯನ್ನು ಒಳಗೊಳಗೇ ಅಪೇಕ್ಷಿಸಿದ್ದರು ಎಂಬುವುದು ಇಲ್ಲಿ ಗಮನಿಸ ಬೇಕಾದ ಅಂಶ!! ಮೊಹಮ್ಮದ್ ಅಲಿ ಜಿನ್ನಾ ಕೂಡಾ ತಮ್ಮ ಪಟ್ಟನ್ನು ಬಿಡಲಿಲ್ಲ.!! ಆದರೆ ಗಾಂಧಿ ನೆಹರೂಗೆ ಮನವೊಲಿಸಲು ಪ್ರಯತ್ನಿಸಿದ್ದರು!! ಆದರೆ ಅಂತಿಮವಾಗಿ ನೆಹರು ದುರಾಶೆಯೇ ವಿಜಯಶಾಲಿಯಾಯಿತು.!!! ಹೀಗಾಗಿ ಇಬ್ಬರೂ ಪ್ರಧಾನಿಗಳಾಗಬೇಕೆಂಬ ಕೆಟ್ಟ ಹಟದಿಂದಾಗಿ ಅನಿವಾರ್ಯವಾಗಿ ಮತ್ತು ರಾಜಕೀಯ ಕುಚೇಷ್ಟೆಗಾಗಿ ಭಾರತವನ್ನು ಇಬ್ಭಾಗ  ಮಾಡಲಾಯಿತು.!!ವಿಭಜನೆಯ ಸಮಯದಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆಯನ್ನು ಯಾರಿಗಾದರೂ ಮರೆಯಲು ಸಾಧ್ಯವೇ?

ನಿಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೊದಲು ಒಂದು ಬಾರಿ ಯೋಚಿಸಿ ಹಿಂದೂಗಳೇ.. ಇಲ್ಲಿ ನಾವು ಪರಿಗಣಿಸಿರುವ ಎಂಟು ಅಂಶಗಳನ್ನು ಮನಗಂಡು ನಂತರ ಮತಗಟ್ಟೆಗೆ ಹೋಗಿ!! ನಿಮ್ಮ ಮನಸ್ಸಾಕ್ಷಿಯನ್ನು ಒಮ್ಮೆ ಕೇಳಿ ಯಾರಿಗೆ ಮತ ಚಲಾವಣೆ ಮಾಡಿದರೆ ದೇಶ ಪ್ರಗತಿ ಹೊಂದಬಹುದು ಎಂದು.. ತಪ್ಪಿ ಒಂದು ಮತ ಕೂಡಾ ಕಾಂಗ್ರೆಸ್‍ಗೆ ಹೋದರೆ ನಿಮ್ಮ ಒಂದು ಸಣ್ಣ ತಪ್ಪು ಇಡೀ ಹಿಂದೂ ಸಮುದಾಯವನ್ನು ಹೇಗೆ ಹಾಳು ಮಾಡಬಹುದು ಎಂದು ನಂತರ ನಿಮಗೆ ಅರ್ಥವಾಗುತ್ತದೆ.

-ಪವಿತ್ರ

Tags

Related Articles

Close