ಪ್ರಚಲಿತ

ಮುಖ್ಯಮಂತ್ರಿಯಾದ ಯೋಗಿ ದೇವಸ್ಥಾನದ ಪೂಜೆ ಮಾಡುವುದು ನಿಷಿದ್ಧ : ಓವೈಸಿ !

ಯೋಗಿ ಆದಿತ್ಯನಾಥ್. ಉತ್ತರ ಪ್ರದೇಶದ ಮುಖ್ಯಮಂತ್ರಿ. ಅದಕ್ಕೂ ಮುಂಚೆ ಅವರೊಬ್ಬ ಸಂತ ಕುಲದ ಶ್ರೇಷ್ಠ ಸನ್ಯಾಸಿ. ಹಿಂದೂಗಳ ಹೃದಯ ಸಾಮ್ರಾಟ. ತನ್ನ ಉಗ್ರ ಹಿಂದುತ್ವವಾದದಿಂದಲೇ ಹಿಂದೂಗಳ ಮನಗೆದ್ದು ದೇಶದಲ್ಲಿಯೇ ಹಿಂದುತ್ವದ ಬೆಂಕಿ ಚೆಂಡು ಎಂದು ಗುರುತಿಸಿಕೊಂಡವರು. ತನ್ನ ಪ್ರಖರವಾದ ಮಾತುಗಳಿಂದ ಜನರನ್ನು ಮಂತ್ರಮಂತ್ರಮುಗ್ದರನ್ನಾಗಿಸಿ ದೇಶ ಸೇವೆಯ ಮುಖ್ಯ ವೇದಿಕೆಗೆ ಬರುವಂತೆ ಪ್ರಯತ್ನ ಪಟ್ಟವರು ಯೋಗಿ ಆದಿತ್ಯನಾಥರು.

ಜನ ನಾಯಕ ಅಂದ ಮೇಲೆ ಯಾರಿಗೆ ತಾನೆ ವಿರೋಧ ಇರಲ್ಲ ಹೇಳಿ. ಅದ್ರಲ್ಲೂ ಯೋಗಿಗೆ ಕೆಲವು ಬುದ್ಧಿಜೀವಿಗಳ ವಿರೋಧದ ನಡುವೆಯೂ ಉಗ್ರರ ಬೆದರಿಕೆ ಬೇರೆ. ಇವುಗಳೆಲ್ಲದರ ಮಧ್ಯೆ ದೇಶಕ್ಕಾಗಿ, ಹಿಂದುತ್ವಕ್ಕಾಗಿ ಜೀವವನ್ನೇ ಕೊಡಲು ಸಿದ್ಧರಾಗಿ ತನ್ನ ವೀರ ಪೌರುಷವನ್ನು ತೋರಿಸಿದ್ದರು ಸಿಡಿಲಮರಿ ಯೋಗಿ ಆದಿತ್ಯನಾಥ್. ಸಂತರಾಗಿದ್ದರೂ ಕೂಡ ಸಮಾಜದ ಬದಲಾವಣೆಗಾಗಿ ರಾಜಕೀಯದ ಹಾದಿಯನ್ನು ತುಳಿದು ದೇಶದ ಅತಿ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನೇರವಾದ ನಡೆ ನುಡಿಗಳಿಂದ ಸಾಮಾಜಿಕ ಕ್ಷೇತ್ರದಲ್ಲಿಯೂ, ಧಾರ್ಮಿಕ ಕ್ಷೇತ್ರದಲ್ಲಿಯೂ, ರಾಜಕೀಯ ಕ್ಷೇತ್ರದಲ್ಲಿಯೂ ಮಿಂಚಿನ ವೇಗದಲ್ಲಿ ಸಂಚರಿಸಿ ಉತ್ತರ ಪ್ರದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿ ಮುಖ್ಯಮಂತ್ರಿ ಗದ್ದುಗೆಗೆ ಏರಿದವರು.

ಅದ್ಯಾವಾಗ ಒಬ್ಬ ಸಂತ ಭಾರತದ ಶ್ರೇಷ್ಟ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದನೋ ಅಂದಿನಿಂದ ಸೋಕಾಲ್ಡ್ ಸೆಕ್ಯುಲರಿಸಂ ನಾಯಕರ ಎದೆಗೆ ಸಿಡಿಲು
ಬಡಿದಂತಾಗಿತ್ತು. ಯೋಗಿ ಮಾಡುವ ಪ್ರತಿಯೊಂದು ಕೆಲಸದಲ್ಲೂ ತಪ್ಪು ಗಡುಕುವ ಕೆಲಸ ಮಾಡುತ್ತಿದ್ದ ಸೋಗಲಾಡಿಗಳು ಅವರ ಹೆಸರು ಹಾಳು ಮಾಡಲು ಅವಿರತ ಪ್ರಯತ್ನ ಪಟ್ಟಿದ್ದರು. ಆದ್ರೆ ಯೋಗಿ ಜಗ್ಗಲೇ ಇಲ್ಲ.

ಈಗ ಇನ್ನೊಬ್ಬ ದೇಶದ್ರೋಹಿ ಆದಿತ್ಯನಾಥರ ಬಗ್ಗೆ ಮತನಾಡಿದ್ದಾನೆ. ಅವನು ಮತ್ಯಾರೂ ಅಲ್ಲ. ಇಡೀ ದೇಶದ ಮಕ್ಕಳಿಗೆ ದೇಶಭಕ್ತಿಯ ಅಮೃತವನ್ನುಣಿಸುವ ಭಾರತ ಮಾತೆಯನ್ನು ಕುರಿತು ಸಮಸ್ತ ಭಾರತೀಯರು ಹೆಮ್ಮೆಯಿಂದ ಘೋಷಿಸುವ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ನನ್ನ ಕುತ್ತಿಗೆಗೆ ಕತ್ತಿ ಹಿಡಿದು ಹೇಳಿಸಿದರೂ ನಾನು ಹೇಳೋದಿಲ್ಲ ಎಂದು ಬೊಗಳಿದ ಎಐಎಂಐಎ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ. ಈ ದೇಶದ್ರೋಹಿ ದೂರ್ತ ಇಂದು ದೇಶಭಕ್ತ ಯೋಗಿಯ ಬಗ್ಗೆ ಮಾತನಾಡುತ್ತಾನೆ. ಕೆಲವರು ಅಧಿಕಾರದ ಮದದಿಂದ ತಾವು ಆರಾಧಿಸಿಕೊಂಡು ಬರುತ್ತಿದ್ದ ದೇವರನ್ನೇ ಮರೆತುಬಿಡುತ್ತಾರೆ. ಆದ್ರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯ ಹುದ್ದೆಯನ್ನು ಅಲಂಕರಿಸಿದರೂ ತನ್ನ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಎಂದಿನಂತೆ ಯೋಗೀಜೀ ಇತ್ತೀಚೆಗೆ ಘೋರಖ್ ಪುರದ ಘೋರಖ್ ನಾಥ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಕ್ಕೆ ಈ ಓವೈಸಿ ಬಾಯಿಗೆ ಬಂದಹಾಗೆ ಬೊಗಳಿದ್ದಾನೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿರುವುದು ಸರಿಯಲ್ಲ ಎಂದಿದ್ದಾನೆ.

ಅರೆ ಇದ್ಯಾವ ನ್ಯಾಯ ಸ್ವಾಮೀ… “ನಮಗೆ 15 ನಿಮಿಷ ಸಮಯ ಕೊಡಿ, ಎಲ್ಲಾ ಪೊಲೀಸರು ಸುಮ್ಮನಿರಿ, ಈ ದೇಶದ ಎಲ್ಲಾ ಹಿಂದೂಗಳನ್ನು ಕೊಂದು ಹಾಕುತ್ತೇನೆ” ಎಂದು ಹುಚ್ಚು ನಾಯಿ ಬೊಗಳಿದಂತೆ ಬೊಗಳಬಹುದಂತೆ, ದೇವಸ್ಥಾನದಲ್ಲಿ ದೇಶದ ಹಿತಕ್ಕಾಗಿ ಪೂಜೆ ಮಾಡುವುದು ತಪ್ಪೇ..?

“ಯಾರನ್ನಾದರು ಸಿಬಿಐ ಬಂಧಿಸಿದರೆ ನನಗೆ ತಿಳಿಸಿ, ನಿಮಗೆ ನಾನು ಕಾನೂನಿನ ಬೆಂಬಲ ನೀಡುತ್ತೇನೆ” ಎಂದು ಘಂಟಾಘೋಷವಾಗಿ ಹೇಳಬಹುದಂತೆ, ಧಾರ್ಮಿಕ ದತ್ತಿಯ ಭಾಗವಾಗಿರುವ ದೇವಸ್ಥಾನದಲ್ಲಿ ಪೂಜೆ ಮಾಡುವುದು ತಪ್ಪೇ..?

ದೇಶ ಅವನತಿಯ ಅಂಚಿಗೆ ತಲುಪಿರುವಾಗ ಪ್ರಧಾನಿಯಾಗಿ ಬಂದು ದೇಶವನ್ನು ಜಾಗತಿಕ ಮಟ್ಟದಲ್ಲಿಯೇ ಭಾರತವನ್ನು ತಲೆಎತ್ತುವಂತೆ ಮಾಡಿದ ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ಕೊಟ್ಟದ್ದು ತಪ್ಪಂತೆ, ಉತ್ತರ ಪ್ರದೇಶದಲ್ಲಿ ಆವರಿಸಿದ್ದ ಕ್ರಿಮಿನಲ್ ಚಟುವಟಿಕೆಗಳನ್ನು ಅಧಿಕಾರ ವಹಿಸಿ ಒಂದೇ ತಿಂಗಳಲ್ಲಿ ರೌಡಿಗಳ ಹುಟ್ಟಗಿಸಿದ ಮುಖ್ಯಮಂತ್ರಿ ದೇವಾ¯ಯದಲ್ಲಿ ಪೂಜೆ ಮಾಡುವುದು ತಪ್ಪೇ..? ಉತ್ತರ ಪ್ರದೇಶದ ಗಲ್ಲಿಗಲ್ಲಿಗಳಲ್ಲಿ ರಸ್ತೆ ತಡೆ ಮಾಡಿ ಗಂಟಲು ಹರಿಯುವವರೆಗೂ ನಮಾಜ್ ಮಾಡಿ ಬಾಂಗ್ ಹೊಡೆದು ಸಾರ್ವಜನಿಕರಿಗೆ ಕಿರಿಕಿರಿ ಮಾಡಬಹುದಂತೆ, ದೇವಸ್ಥಾನದಲ್ಲಿ ಶಾಂತಿಯುತವಾಗಿ ಲೋಖಕಲ್ಯಾಣಕ್ಕಾಗಿ ದೇವರ ಧ್ಯಾನ ಮಾಡಬಾರದಂತೆ…

ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿ ಸಾವಿರಾರು ಜನರ ಮಾರಣ ಹೋಮವನ್ನೇ ನಡೆಸುತ್ತಿರುವಾಗ, ಭಯೋತ್ಪಾದಕರು ಅಮಾಯಕರು ಎಂದು
ಸಿಂಪತಿ ತೋರಿಸುವ ಈ ದೇಶದ್ರೋಹಿ ಓವೈಸಿ ಭಯೋತ್ಪಾದಕರ ಪಾಲಿಗೆ ಸಿಂಹವಾಗಿರುವ ಸಿಎಂ ಯೋಗಿ ಆದಿತ್ಯನಾಥರ ಬಗ್ಗೆ ಮಾತನಾಡುತ್ತಾನೆ. ಉಗ್ರ ಅಫ್ಜಲ್ ಗೆ ಗಲ್ಲು ಶಿಕ್ಷೆಯಾದಾಗ ಅವನ ಮೇಲೆ ಮಮಕಾರ ತೋರಿಸಿದ ಇದೇ ಓವೈಸಿ ಇಂದು ಸಂವಿಧಾನದ ಬಗ್ಗೆ ಮಾತಾನಾಡ್ತಾನೆ. ಇಂತಹವನಿಂದ ನಮಗೆ ಪಾಠವೇ..?

ಇಂದು ದೇಶಕ್ಕೆ ಮಾರಕವಾಗಿರುವುದು ನರಿ ಬುದ್ಧಿಯ ಓವೈಸಿ ಸಹೋದರರಂತಹ ದೇಶದ್ರೋಹಿಗಳಿಂದಲೇ ಹೊರತು ಕಾವಿ ತೊಟ್ಟು ಧರ್ಮಕ್ಕಾಗಿ, ದೇಶಕ್ಕಾಗಿ
ಮಿಡಿಯುವ ಯೋಗಿ ಆದಿತ್ಯನಾಥರಲ್ಲ.

“ಐಸಿಸ್ ಉಗ್ರರಿಗೆ ಕಾನೂನು ನೆರವು ನೀಡುತ್ತೇವೆ” ಎಂದು ಬೊಗಳಿದ ದೇಶದ್ರೋಹಿ ಓವೈಸಿ. ಅವನ ಬಾಯಿಯಿಂದ ಯೋಗಿ ಆದಿತ್ಯನಾಥರಿಗೆ ಸಂವಿಧಾನದ
ಪಾಠವಂತೆ. ಥೂ ನಿನ್ನ ಜನ್ಮಕ್ಕಿಷ್ಟು. ರಸ್ತೆ ಅಗಲೀಕರಣ ಸಂಧರ್ಭದಲ್ಲಿ ಕಾನೂನು ರೀತಿಯಲ್ಲೇ ಮಸೀದಿ ಒಡೆದರು ಎಂಬ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳ ಮೇಲೆ ಕೈ ಹಾಕಿ ಬಂಧನ ವಾರೆಂಟ್ ಜಾರಿಯಾದರೂ ಕೋರ್ಟ್ ಆದೇಶವನ್ನೇ ಉಲ್ಲಂಘಿಸಿದ ಈ ಮತಾಂಧನಿಂದ ಯೋಗಿ ಆದಿತ್ಯನಾಥರಿಗೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯ ಪಾಠ.

ಇಂದು ನಮ್ಮ ದೇಶ ಸ್ವಲ್ಪವಾದರೂ ಹಾಳಾಗಿದೆ ಅಂತಿದ್ದರೆ ಅದು ಇಂತಹ ದೇಶದ್ರೋಹಿಗಳಿಂದ. ಅಸಹಿಷ್ಣುತೆ, ಅಸಹಿಷ್ಣುತೆ ಎಂದು ಬೊಬ್ಬೆ ಬಿಡುವ ಕೆಲವು
ಜಾತ್ಯಾತೀತ ನಾಯಕರಿಗೆ ಇಂತವರ ಹೇಳಿಕೆಗಳು ಕೇಳುವುದೇ ಇಲ್ಲ. ಅಯ್ಯೋ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದಿಯಪ್ಪಾ ಎಂದು ಕೊಚ್ಚಿಕೊಳ್ಳುತ್ತಾ
ಗರಬಡಿದವರಂತೆ ಮೌನಕ್ಕೆ ಶರಣಾಗಿರುತ್ತಾರೆ. ದೇಶಕ್ಕೆ ಮಾರಕವಾಗಿರುವ ಉಗ್ರರನ್ನು ಮಟ್ಟಹಾಕುವ ಜೊತೆ ಜೊತೆಗೆ, ಉಗ್ರರಿಗೆ ಪರೋಕ್ಷವಾಗಿ ಸಹಕಾರ
ಮಾಡುವಂತಹ ಇಂತಹ ಆಂತರಿಕ ಉಗ್ರರನ್ನು ಗಲ್ಲಿಗೇರಿಸಬೇಕಿದೆ.

ಇಂದು ದೇಶದ ಸಂವಿದಾನದ ಅವಿಭಾಜ್ಯ ಅಂಗವಾಗಿರುವ ಮುಖ್ಯಮಂತ್ರಿ ಸ್ಥಾನದಲ್ಲಿರುವ ಯೋಗಿ ಆದಿತ್ಯನಾಥರಿಗೆ ಪೂಜೆ ಮಾಡಬಾರದೆಂದು ಕಾನೂನಿನ ಪಾಠ ಹೇಳುತ್ತಿರುವ ಈ ಅಬ್ಬೆಪಾರಿಗಳು ಮುಂದೊಂದು ದಿನ ಆದ್ಯಾತ್ಮಿಕ ದೇಶವಾದ ಭಾರತದಲ್ಲಿ ಸಾಮಾನ್ಯ ಪ್ರಜೆಗೂ ದೇವಸ್ಥಾನದಲ್ಲಿ ಪೂಜೆ ಮಾಡಲು ಕಾನೂನಿನ ಪಾಠ ಹೇಳಲು ಮುಂದಾಗಬಹುದು. ಇದು ದೇಶಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಮಾರಕ. ಏಕೆಂದರೆ ಭಾರತ ಮುಂದೊಂದು ದಿನ “ವಿಶ್ವಗುರು”………

-ಸುನಿಲ್ ಪಣಪಿಲ

Tags

Related Articles

Close