ಪ್ರಚಲಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 300 ಕೋಟಿ ರೂಪಾಯಿ ಭೂಹಗರಣ ಬಹಿರಂಗ!!

ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಮಾಡಿದ ಭ್ರಷ್ಟಚಾರ ಪ್ರಕರಣಗಳು ಹೊರ ಬರುತ್ತಲೇ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ!! ಆದರೆ ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ ಸರಕಾರದಲ್ಲಿ, ಅದೆಷ್ಟೋ ಭ್ರಷ್ಟಚಾರಗಳ ಕರಾಳ ಮುಖಗಳು ಬೆಳಕಿಗೆ ಬರಲಿವೆಯೋ ಗೊತ್ತಿಲ್ಲ.. ಆದರೆ, ಈ ಹಿಂದೆ ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ಬಿ.ಜೆ ಪುಟ್ಟಸ್ವಾಮಿ ಅವರು ಸಿದ್ದರಾಮಯ್ಯ ಕುಟುಂಬದ ಸ್ಪೋಟಕ ಭ್ಟಷ್ಟಚಾರ ಪ್ರಕರಣವನ್ನು ದಾಖಲೆ
ಬಿಡುಗಡೆಗೊಳಿಸಿದ್ದಕ್ಕಾಗಿ ಕರ್ನಾಟಕದ ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದರು!! ಆದರೆ ಸಿಎಂ ಸಿದ್ದರಾಮಯ್ಯ ಭೂಹಗರಣದಲ್ಲಿ ತೊಡಗಿರುವ ಮಾಹಿತಿಯನ್ನು ಇದೀಗ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ!!

ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಕೈಬಿಟ್ಟಿರುವುದಾಗಿ ಬಿಜೆಪಿ ಮಂಗಳವಾರ ಗಂಭೀರವಾಗಿ
ಆರೋಪಿಸಿದೆ!! ಅಷ್ಟೇ ಅಲ್ಲದೇ, ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ,
ವಿಧಾನಪರಿಷತ್ ಸದಸ್ಯ ಬಿಜೆ ಪುಟ್ಟಸ್ವಾಮಿ ಬೆಂಗಳೂರು ಉತ್ತರ ವಲಯದ ಭೂಪಸಂದ್ರದ ಸರ್ವೆನಂಬ್ರ 20, 21ರಲ್ಲಿನ 6.26 ಎಕರೆ ಬೆಲೆ ಬಾಳುವ ಭೂಮಿಯನ್ನು ಸಿಎಂ ಸಿದ್ದರಾಮಯ್ಯನವರು ಡಿನೋಟಿಫೈ ಮಾಡಿರುವುದಾಗಿ ದೂರಿದ್ದಾರೆ!!

ಅಷ್ಟೇ ಅಲ್ಲದೇ, ಡಿನೋಟಿಫಿಕೇಶನ್ ಆಗಿರುವ ಭೂಮಿಯ ಮೂಲ ಮಾಲೀಕರು ಸೈಯದ್ ಅವರ ಹೆಸರು ಇದೀಗ ಕೇಳಿ ಬಂದಿದ್ದು, ಸೈಯದ್ ಅವರು ಸ್ವತಃ
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನುವ ವಿಚಾರ ಇದೀಗ ಬಯಲಾಗಿದೆ!! ವಿಪರ್ಯಾಸ ಎಂದರೆ, ಸುಪ್ರೀಂನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ
ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಈ ಭೂಮಿಯನ್ನು ಬೇರೊಬ್ಬರ ಹೆಸರಿಗೆ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿರುವುದಾಗಿಯೂ ತಿಳಿಸಿದ್ದಾರೆ!!

ಈ ಹಿಂದೆ ಬಿ.ಜೆ ಪುಟ್ಟಸ್ವಾಮಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಸದಸ್ಯರ ಬಗ್ಗೆ 30 ವಿಷಯಗಳ ಕುರಿತಾದ ಭ್ರಷ್ಟಚಾರ ಕುರಿತು ದಾಖಲೆ ಸಂಗ್ರಹ
ಮಾಡಲಾಗಿದ್ದು, ಮೂರು ದಿನಕ್ಕೊಮ್ಮೆ ಒಂದೊಂದು ಭ್ರಷ್ಟಚಾರ ಕುರಿತಾದ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಇದೀಗ 300ಕೋಟಿ ರೂಪಾಯಿ ಬೆಲೆ ಬಾಳುವ ಜಮೀನಿನ ಬಗ್ಗೆ ಮಾಹಿತಿಯನ್ನು ಹೊರಹಾಕಿದ್ದಾರೆ!!

ಅಲ್ಲದೇ, ಸಿದ್ದು ಪುತ್ರ ಯತೀಂದ್ರ ವಿರುದ್ದ ಈ ಹಿಂದೆಯೂ ಭ್ರಷ್ಟಚಾರ ಪ್ರಕರಣ ಹೊರಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ನೂರಾರು ಕೋಟಿ ಬೇನಾಮಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ತೂರು ಕನಕದಾಸ ಎನ್ನುವವರು ಡಾ.ಯತೀಂದ್ರ ಒಡೆತನದ ಮ್ಯಾಟ್ರಿಕ್ ಇಮೇಜಿಂಗ್ ಸಲ್ಯೂಶನ್ಸ್ ಕಂಪನಿಯ ವಿರುದ್ದವೂ ದೂರು ದಾಖಲಿಸಿ ಬೇನಾಮಿ ಆಸ್ತಿ ವ್ಯವಹಾರಗಳ ಕಾಯ್ದೆ ಅಡಿಯಲ್ಲಿ ತನಿಖೆ ಆಗ್ರಹಿದ್ದರು. ಇಷ್ಟೇ ಅಲ್ಲದೇ ಸಿದ್ದರಾಮಯ್ಯ ವಿರುದ್ದ ಹಲವಾರು ಭ್ರಷ್ಟಚಾರ ಪ್ರಕರಣಗಳು ದಾಖಲಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಯುತ್ತಲೇ ಇದೆ!! ಭ್ರಷ್ಟಚಾರದ ವಿರುದ್ದವಾಗಿ ದೂರು ದಾಖಲಾಗಿದ್ದರು ಕೂಡ ಈ ಬಗ್ಗೆ ಯಾವುದೇ ಕ್ರಮ ಜರಗದಿರುವುದು ಮಾತ್ರ ವಿಪರ್ಯಾಸ!!

ಎಸಿಬಿಯಲ್ಲಿ ಮುಖ್ಯಮಂತ್ರಿಗಳ ವಿರುದ್ದ ಈವರೆಗೆ 25ಕ್ಕೂ ಹೆಚ್ಚು ದೂರುಗಳು ದಾಖಲಾಗಿದೆ. ಅಷ್ಟೇ ಅಲ್ಲದೇ ಅನೇಕ ಮಂತ್ರಿಗಳು, ಐಎಎಸ್ ಅಧಿಕಾರಿಗಳ
ವಿರುದ್ದವೂ ಕೂಡ ದೂರು ದಾಖಲಾಗಿದೆ!!! ಆದರೆ, ಈ ದೂರುಗಳಿಗೆ ಸಂಬಂಧಿಸಿದಂತೆ ಯಾವುದೇ ಎಫ್‍ಐಆರ್ ದಾಖಲಿಸಿಲ್ಲ ಮತ್ತು ವಿಚಾರಣೆಯೂ ಆಗಿಲ್ಲ.
ಆದ್ದರಿಂದ ಒಂದು ವರ್ಷದಲ್ಲಿ ಎಷ್ಟು ದೂರುಗಳು ದಾಖಲಾಗಿವೆ? ಎಷ್ಟು ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿ ವಿಚಾರಣೆ ನಡೆಸಲಾಗಿದೆ ಎಂಬುವುದನ್ನು ಎಸಿಬಿ
ಅಧಿಕಾರಿಗಳು ಬಹಿರಂಗಪಡಿಸಿಲ್ಲ!!

ಆದರೆ, ಇದೀಗ ಕೇಳಿ ಬಂದ ಆರೋಪಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ 300 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಕೈಬಿಟ್ಟಿದ್ದು, ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಡಿನೋಟಿಫೈ ಮಾಡಿದ್ದಾರೆ ಎಂದರೆ ಅದೆಷ್ಟು ಅಕ್ರಮ ಆಸ್ತಿಗಳ ಒಡೆಯನಾಗಿದ್ದಾರೆ ನಮ್ಮ ಸಿಎಂ ಸಿದ್ದರಾಮಯ್ಯ!!!

ಮೂಲ: Original Link

– ಅಲೋಖಾ

Tags

Related Articles

Close