ಪ್ರಚಲಿತ

ಮುಗಿಯದ ಸಿದ್ಧು ಸರ್ವಾಧಿಕಾರ! ಇನ್ನೂ ಎಷ್ಟು ಪೋಲಿಸ್ ಇಲಾಖೆ ದಿನ ನಿಮ್ಮ ದೌರ್ಜನ್ಯ ಸಹಿಸಿಕೊಂಡಿರಬೇಕು ಮುಖ್ಯಮಂತ್ರಿಗಳೇ?!

ಸಿದ್ದರಾಮಯ್ಯನ ಸರಕಾರ ಸರಕಾರಿ ನೌಕರರನ್ನು ಗುಲಾಮರೆಂದುಕೊಂಡಿದ್ದಾರೇನೋ…!? ಸರಕಾರಿ ನೌಕರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ? ಸರಕಾರ ಮಾಡಿದ ಅನಾಚಾರಗಳನ್ನು ನೋಡುತ್ತಾ ಸುಮ್ಮನಿರಬೇಕೇ? ಜೀವಮಾನ ಪೂರ್ತಿ ಆತ ಸರಕಾರದ ಗುಲಾಮನಾಗಿಯೇ ಬದುಕಬೇಕಾ? ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾನ್ ಉನ್‍ಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೂ ಏನು ವ್ಯತ್ಯಾಸವಿದೆ ಹೇಳಿ… ಸರಕಾರಿ ನೌಕರರಿಗೊಂದು ನ್ಯಾಯ, ಸರಕ್ಕಾರಕ್ಕೊಂದು ನ್ಯಾಯ ಅಂದರೆ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವೆನ್ನಲು ಸಾಧ್ಯನಾ ಸ್ವಾಮೀ…?

ಈ ಮಾತುಗಳನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನ ಬಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಫೇಸ್‍ಬುಕ್‍ನಲ್ಲಿ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಪ್ರಕಟಿಸಿರುವುದಕ್ಕೆ ಅವರನ್ನು ಹುದ್ದೆಯಿಂದಲೇ ಅಮಾನತು ಮಾಡುವ ಶಿಕ್ಷೆಯನ್ನು ಸರಕಾರ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ರಾಜಶಿವಪ್ಪ ಅವರು ಅಮಾನತುಗೊಳಗಾದವರು… ಎಂಥಾ ಶಿಕ್ಷೆ ನೋಡಿ… ಒಂದುದ ವೇಳೆ ಅವರು ಮಾಡಿದ್ದು ತಪ್ಪೇ ಆಗಿದ್ದರೆ ಅವರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಬಹುದಿತ್ತು.

ಬರೇ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೇ ಅಮಾನತು ಮಾಡುವುದಾದದರೆ ಸರಕಾರಿ ನೌಕರರ ಮೇಲೆ ಯಾವ ರೀತಿ ದರ್ಬಾರ್ ನಡೆಸಿರಬಹುದೆಂದು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಈ ದರ್ಬಾರ್‍ನಿಂದಲೇ ಖಡಕ್ ಪೊಲೀಸ್ ಅಧಿಕಾರಿಗಳಾದ ಗಣಪತಿ, ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

ಅಷ್ಟಕ್ಕೂ ಶಿವಪ್ಪ ಅವರು ಫೇಸ್‍ಬುಕ್‍ನಲ್ಲಿ ಅಂಥದ್ದೇನು ಅವಹೇಳನಕಾರಿ ಪೋಸ್ಟ್ ಮಾಡಿರಲಿಲ್ಲ. ಸಿದ್ದರಾಮಯ್ಯನ ಅನಾಚರವನ್ನೇ ಪೋಸ್ಟ್ ಮಾಡಿ ಮಂಗಳಾರತಿ ಎತ್ತಿದ್ದರು. `ಕೋಟ್ಯಂತರ ಹಿಂದೂ ಜನ ಆರಾಧಿಸುವ ನಾಡಿನ ಪ್ರಮುಖ ದೇವಸ್ಥಾನವನ್ನು ಮಾಂಸದ ಊಟ ಸೇವಿಸಿ ದೇವರ ದರ್ಶನ ಮಾಡಿದ ಮುಖ್ಯಮಂತ್ರಿ…’ ಎಂದು ಬರೆದು ಮುಖ್ಯಮಂತ್ರಿ ಸಿದ್ದು ಹಾಗೂ ಪ್ರಧಾನಿ ಮೋದಿಯ ಧರ್ಮಸ್ಥಳ ಭೇಟಿಯನ್ನು ತುಲನೆ ಮಾಡಿ ಸಂದೇಶ ಪ್ರಕಟಿಸಿದ್ದರು.

ಇಷ್ಟಕ್ಕೇ ಅವರನ್ನು ಅಮಾನತು ಮಾಡಲಾಯಿತು… ಛೇ ಅಮಾನತುಗೊಂಡ ಪೇದೆಗೆ ನ್ಯಾಯ ಒದಗಿಸುವವರ್ಯಾರು? ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎನ್ನುವುದೇ ಅತ್ಯಂತ ನೋವಿನ ವಿಷಯ…

ಸಿದ್ದರಾಮಯ್ಯನ ಸರಕಾರದಿಂದ ಹಿಂದೂಗಳು ಯಾವ ರೀತಿ ಪಡಬಾರದ ಪಡಿಪಾಟಲು ಅನುಭವಿಸುತ್ತಿದ್ದಾರೆಂದು ಅವರಿಗೇ ಗೊತ್ತು.. ಇಂಥಾ ಜನರು ಸರಕಾರವನ್ನು ಹಿಗ್ಗಾಮುಗ್ಗ ಟೀಕಿಸುತ್ತಿದ್ದಾರೆ. ಈ ಸರಕಾರ ಯಾವಾಗ ತೊಲಗುತ್ತೋ ಎಂದು ಜನರು ಉಸಿರುಬಿಗಿಹಿಡಿದು ಕಾಯುತ್ತಿದ್ದಾರೆ. ಪೊಲೀಸರೂ ಕೂಡಾ ಪ್ರಜೆಗಳೇ ಆಗಿರುವುದರಿಂದ ಸರಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸಂವಿಧಾನದತ್ತ ಹಕ್ಕಿದೆ. ಇದನ್ನು ಮೊಟಕುಗೊಳಿಸಲು ಸಿದ್ದರಾಮಯ್ಯ ಯಾರು? ಈ ಮುಂಚೆ ಶಿವಪ್ಪ ಅವರು `ಮೈಲಾರಿ ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ’ ಎಂದು ಪ್ರಕಟಿಸಿ ಸಿದ್ದರಾಮಯ್ಯನನ್ನು `ಸಿದ್ದುಖಾನ್’ ಎಂದು ಸಂಬೋಧಿಸಿ ಫೇಸ್‍ಬುಕ್‍ನಲ್ಲಿ ಹಾಕಿದ್ದರು. ಇದರಿಂದ ಧ್ವೇಷಗೊಂಡಿದ್ದ ಕಾಂಗಿಗಳು ಶಿವಪ್ಪನವರಿಗಾಗಿ ಹೊಂಚುಹಾಕಿ ಕುಳಿತಿದ್ದರು. ಮೊನ್ನೆ ಶಿವಪ್ಪ ಮತ್ತೆ ಪೋಸ್ಟ್ ಮಾಡಿದರೋ ಸರ್ವಾಧಿಕಾರಿ ಸಿದ್ದುಗೆ ಅಷ್ಟೇ ಸಾಕಾಯಿತು. ಶಿವಪ್ಪರನ್ನು ಅಮಾನತುಗೊಳಿಸಿ ಧ್ವೇಷ ತೀರಿಸಿಕೊಂಡರು..

ಒಂದು ವೇಳೆ ಶಿವಪ್ಪ ಮೋದಿಯನ್ನು ಬೈಯ್ದಿದ್ದರೆ ಸಿದ್ದು ಸರಕಾರ ಪ್ರಮೋಷನ್ ಕೊಡುತ್ತಿತ್ತೋ ಏನೋ…?

ನಾನು ಕೇಳುವ ಪ್ರಶ್ನೆ ಏನೆಂದರೆ ನೀವು ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿದ್ದು ಒಂದು ತಪ್ಪಾದರೆ ಅದನ್ನು ಸಮರ್ಥಿಸಿಕೊಂಡು ಕೋಟ್ಯಂತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಇನ್ನೊಂದು ತಪ್ಪು. ನಿಮ್ಮ ಘನಾಂದರಿ ಕೆಲಸವನ್ನು ಪ್ರಶ್ನಿಸಿದ್ದಕ್ಕೆ ಅಮಾನತು ಶಿಕ್ಷೆ ಕೊಡುವುದಾದದರೆ ನೀವು ದೇವಸ್ಥಾನಕ್ಕೆ ಮೀನು ತಿಂದು ಹೋಗಿದ್ದಕ್ಕೆ ಯಾರು ಶಿಕ್ಷೆ ಕೊಡಬೇಕು? ನಿಮ್ಮ ಸರಕಾರದಲ್ಲಿ ಇದಕ್ಕೆ ಅವಕಾಶ ಇದೆಯೇ?

ಮಾಂಸಹಾರ ತಿಂದು ದೇವಾಲಯಕ್ಕೆ ಹೋದ ಸಿದ್ದರಾಮಯ್ಯರನ್ನು ಅಣಕಿಸಿದ ಪೇದೆಗೆ ಅಮಾನತು ಶಿಕ್ಷೆ ಕೊಡುವುದಾದರೆ, ಪ್ರದಾನಿ ಮೋದಿಯವರನ್ನು ಪದೇ ಪದೇ ಅಣಕಿಸಿ ಅವಮಾನಿಸುತ್ತಿರುವ ಸಿದ್ದರಾಮಯ್ಯನಿಗೆ ಯಾವ ಶಿಕ್ಷೆ ಕೊಡುವುದು!?

ಅಲ್ಲಾ ಸಿದ್ದುಖಾನ್ ಅವರೇ.. ಹಿಂದು ಧರ್ಮನಿಂದಕರನ್ನು ಸಕಲ ಸರಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ಮಾಡುತ್ತೀರಿ? ಆದರೆ ಸರಕಾರಿ ಬಡನೌಕರನೋರ್ವ ಮಾಡಿದ ಚಿಕ್ಕ ತಪ್ಪಿಗಾಗಿ ಅಮಾನತು ಶಿಕ್ಷೆ ಕೊಡುತ್ತೀರಲ್ವಾ… ನಿಮ್ಮ ಕಣ್ಣಲ್ಲಿ ನೀರು ಹರಿಯುವುದೇ ಇಲ್ಲ ರಕ್ತ ಹರಿಯುವುದೇ?

ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಕಟಿಸಿದ್ದಕ್ಕೆ ತಾನು ಕಷ್ಟಪಟ್ಟು ಗಳಿಸಿದ ಕೆಲಸದಿಂದಲೇ ಅಮಾನತು ಮಾಡುವುದೆಂದರೆ ಇದ್ಯಾವ ಕ್ರೂರಿ ಸರಕಾರ ಸ್ವಾಮೀ?
ಒಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮಟ್ಟಹಾಕಿದ ಸಿದ್ದರಾಮಯ್ಯನ ನಡೆಯನ್ನು ಪ್ರಶ್ನಿಸುವವರ್ಯಾರೂ ಇಲ್ಲವೇ…?

ಯಾವುದೋ ನಾಲ್ಕು ನಾಲಾಯಕ್ ರಾಜಕಾರಣಿಗಳ ಮಾತುಕೇಳಿ ಪೊಲೀಸ್ ನೌಕರನನ್ನು ಅಮಾನತು ಆದೇಶ ಹೊರಡಿಸಿದ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಾನೊಬ್ಬ ಸರಕಾರದ ಕೈಗೊಂಬೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನಿಜವಾಗಿಯೂ ತಾಖತ್ ಇದ್ದಿದ್ದರೆ ಕಟೀಲು ದುರ್ಗಾದೇವಿ ಸೇರಿ ಹಲವು ಹಿಂದೂ ದೇವರನ್ನು ಕೀಳಾಗಿ ನಿಂದಿಸಿದ್ದ ಜಬ್ಬಾರ್ ಮಂಗಳೂರು ಎಂಬ ಮತಾಂಧನನ್ನು ಎಂದೋ ಬಂಧಿಸಿರುತ್ತಿದ್ದರು. ಆದರೆ ಅದನ್ನೆಲ್ಲಾ ಮಾಡಲಾಗದ ಸುಧೀರ್ ಅವರು ಸರಕಾರದ ಮಾತುಕೇಳಿ ಪೊಲೀಸ್ ನೌಕರರನ್ನು ಅಮಾನತು ಮಾಡಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.

ಜಸ್ಟೀಸ್ ಫಾರ್ ಶಿವಪ್ಪ….

ಕನ್ನಡಿಗರೇ ಒಬ್ಬ ಬಡ ಪೊಲೀಸ್ ನೌಕರನಿಗೆ ಇಷ್ಟೊಂದು ಅನ್ಯಾಯ ನಡೆದರೂ ಇನ್ನೂ ಕಣ್ಣಿದ್ದೂ ಕುರುಡರಂತೆ ನೋಡಿ ಸುಮ್ಮನಾಗಿದ್ದೀರಲ್ವಾ… ಛೇ ಎಲ್ಲಿ ಹೋಯಿತು ನಿಮ್ಮ ಹೋರಾಟದ ಕಿಚ್ಚು? ರಾಜಕಾರಣಿಯನ್ನು ಟೀಕಿಸಿದ ಮಾತ್ರಕ್ಕೆ ಹುದ್ದೆಯಿಂದಲೇ ಅಮಾನತುಮಾಡುತ್ತಾರೆಂದರೆ ನಾಳೆ ಉಳಿದ ನೌಕರರ ಪಾಡೇನು? ಸರಕಾರಿ ನೌಕರರೆಂದರೆ ಗುಲಾಮರೇ? ಇಂದು ಶಿವಪ್ಪ… ಹಾಗಾದರೆ ನಾಳೆ…?

ಜಸ್ಟೀಸ್ ಫಾರ್ ಶಿವಪ್ಪ. ಶಿವಪ್ಪ ಅವರು ಮಾಡಿದ್ದು ಖಂಡಿತಾ ತಪ್ಪಲ್ಲ.. ಇವರಿಗೆ ನ್ಯಾಯ ಒದಗಲೇ ಬೇಕು. ಸರಕಾರ ಕೂಡಲೇ ಅವರ ಅಮಾನತು ಆದೇಶವನ್ನು
ರದ್ದುಗೊಳಿಸಿ ನ್ಯಾಯ ಒದಗಿಸಬೇಕು. ಅದಕ್ಕಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಟ ನಡೆಸಿ ಶಿವಪ್ಪನವರಿಗೆ ನ್ಯಾಯ ಒದಗಿಸಬೇಕಾಗಿದೆ. ಸಾವಿರ ಧ್ವನಿಗಳಲ್ಲಿ
ಒಕ್ಕೊರಳಿನಿಂದ ಖಂಡಿಸಿದರೆ ಖಂಡಿತಾ ಶಿವಪ್ಪರಿಗೆ ನ್ಯಾಯ ಒದಗುತ್ತದೆ.

ಜಸ್ಟಿಸ್ ಫಾರ್ ಶಿವಪ್ಪ. ಶಿವಪ್ಪರಿಗೆ ಖಂಡಿತಾ ನ್ಯಾಯ ಸಿಗಬೇಕು…

-ಚೇಕಿತಾನ

Tags

Related Articles

Close