ಅಂಕಣದೇಶಪ್ರಚಲಿತರಾಜ್ಯ

ಮುಗ್ಧರನ್ನು ಹೇಗೆ ಬೇಕಾದರೂ ಮೂರ್ಖರನ್ನಾಗಿ ಮಾಡಬಹುದು ಎನ್ನುವುದಕ್ಕೆ ದಕ್ಷಿಣ ಕನ್ನಡದಲ್ಲಿ ವೈರಲ್ ಆಗಿರುವ ವಿಡಿಯೋನೇ ಸಾಕ್ಷಿ!!

ಸಾಮಾಜಿಕ ಜಾಲತಾಣಗಳಲ್ಲಿ ಅದೆಷ್ಟೊ ವಿಡಿಯೋಗಳು ಹರಿದಾಡುತ್ತಿರುತ್ತವೆ.ಅದವುದಕ್ಕೂ ತಲೆಕೆಡಿಸಿಕೊಳ್ಳದ ನಾನು ಇತ್ತಿಚಿಗೊಂದು ವಿಡಿಯೋ ವೈರಲ್ ಆಗಿರುವುದನ್ನು ಕಂಡು ಸ್ವಲ್ಪ ವಿಚಲಿತಳಾಗಿ ಈ ಲೇಖನ ಬರೆಯಲು ಇಚ್ಚಿಸಿದೆ.

ಈ ವಿಡಿಯೋದಲ್ಲಿರುವುದು ಕಮ್ಯುನಿಸ್ಟ್ ಪಕ್ಷದ ಅಂಗವಾದ DYFI ನ ಸಭೆಯಲ್ಲಿ ಕಮ್ಮಿನಿಷ್ಠ ನಾಯಕ ಮುನೀರ್ ಕಾಟಿಪಲ್ಲನ ಭಾಷಣ
ಈ ಭಾಷಣವೇ ನನ್ನನ್ನು ಕೊಂಚ ಮಟ್ಟಿಗೆ ಕಾಡಿರಿವುದು ಕಮ್ಮಿನಿಷ್ಠ ಪಕ್ಷದ ನಾಯಕನಾಗಿರುವ ಮುನೀರ್ ಕಾಟಿಪಲ್ಲ ಇವರು ಕಾವ್ಯಶ್ರೀ ಸಾವಿನ ವಿಷಯದಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸುತ್ತಾ ನಂತರ ತನ್ನ ಕಮ್ಮಿನಿಷ್ಠ ಬುದ್ಧಿಯಂತೆ ದಕ್ಷಿಣ ಕನ್ನಡ ಜನರ ಬದುಕು ಹಾಗೂ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಅದರೆ ದಕ್ಷಿಣ ಕನ್ನಡದ ಆರ್ಥಿಕತೆಯ ಬಗ್ಗೆ ಮಾತನಾಡುವ ಈತ ಕಮ್ಯುನಿಸ್ಟ್ ಪಕ್ಷ ಆಳಿದ ಕೇರಳ ಹಾಗೂ ಪಶ್ಚಿಮ ಬಂಗಾಳ ಕೈಗಾರಿಕೆಗಳಿಲ್ಲದೆ ಹಿಂದುಳಿದುದರ ಬಗ್ಗೆ ಯಾವುದೇ ಚಕಾರವೆತ್ತಿಲ್ಲ.

ಸತ್ಯ ಸತ್ಯತೆಯ ಬಗ್ಗೆ ಅರಿವಿಲ್ಲದೇ ದಕ್ಷಿಣ ಕನ್ನಡದ ಜನರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ?
ಜನರ ಬವಣೆ ಮತ್ತು ಬದುಕಿನ ಬಗ್ಗೆ ಮಾತನಾಡಿ ಗೋವಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅನ್ನುತ್ತಾನೆ ಈ ಮುನಿರ. ಅದೆಷ್ಟೋ ಸಂಸಾರಗಳು ದನಗಳನ್ನು ಸಾಕಿ ಅದರ ಉತ್ಪನ್ನದಿಂದಲೇ ಬದುಕು ಸಾಗಿಸುತ್ತಿರುವಾಗ ಅವರ ಮನೆಯ ಆ ಉತ್ಪಾದಕ ಶಕ್ತಿಯೇ ಕಳ್ಳತನವಾದಗ ಆ ಸಂಸಾರಗಳ ಬದುಕು ಕಷ್ಟವಾಗಿ ಬೀದಿಗೆ ಬರುವುದು ಈ ಕಮ್ಮಿನಿಷ್ಠನಿಗೆ ತಿಳಿದಿಲ್ಲವೇ ? ಬದುಕಿನ ಬಗ್ಗೆ ಪುಂಖನುಪಂಖವಾಗಿ ಮಾತನಾಡುವ ಈತ ಲವ್ ಜಿಹಾದ್ ಎಂಬ ಭಯನಕ ಕೃತ್ಯದಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ವಿವಾಹವಾಗಿ, ಮತಾಂತರಗೊಳಿಸಿ ನಡುವೀದಿಯಲ್ಲಿ ಬಿಟ್ಟ ಮೇಲೆ ನಂತರ ಆ ಹೆಣ್ಣುಮಕ್ಕಳ ಅತಂತ್ರ ಬದುಕಿನ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ ಈ ಮುನೀರ? ತನ್ನ ಕಪಟ ಭಾಷಣದಲ್ಲಿ ಹಿಂದುಗಳ ಆರಾಧ್ಯಾ ದೈವಗಳಾದ ಕೋಟಿ ಚೆನ್ನಯ್ಯ, ಬಬ್ಬರಿಯ, ಕೊರಗಜ್ಜನಂತವರ ಆದರ್ಶವಾಗಿರಬೇಕು ಎಂದು ಬೊಗಳೆ ಬಿಡುವವ ತನ್ನ ಹಿಂದಿರುವ ಬ್ಯಾನರ್ನಲ್ಲಿ ಕ್ಯೂಬಾದ ಚಿಗುವೇರಾ ಎನ್ನುವ ಮಾವೋವಾದ ಪ್ರೇರಿತನ ಭಾವಚಿತ್ರವನ್ನು ಹಾಕಿದನ್ನು ಕಂಡಾಗ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ ಅದಲ್ಲದೆ ಚಿಗುವೇರಾನೊಂದಿಗೆ ಭಗತ್ ಸಿಂಗ್ ನ ಹೋಲಿಕೆ ಬೇರೆ.

ಇಷ್ಟೆಲ್ಲ ಶಾಂತಿ ಸಂಧಾನದ ಬಗ್ಗೆ ಮಾತನಾಡುವವ ಅದೆಷ್ಟೋ ಲಕ್ಷ ಜನರ ಹತ್ಯೆಗೆ ಪ್ರೇರಣೆಯಾಗಿರುವ ಕಮ್ಯೂನಿಸ್ಟ್ ನಾಯಕನ ಭಾವಚಿತ್ರ ಹಾಕಲಾರ ಇವತ್ತು ನಾವೆಲ್ಲರೂ ಮುಸ್ಲಿಂ ಉಗ್ರವಾದದ ಬಗ್ಗೆ ಮಾತನಾಡತ್ತೇವೆ ಅದರೆ ಇಲ್ಲಿ ಯಾರಿಗೂ ಗೊತ್ತಿಲ್ಲದ ವಿಷಯವೊಂದಿದೆ.ಈ ಕೆಂಪು ಉಗ್ರವಾದ ಇಡೀ ವಿಶ್ವದಲ್ಲೇ ಒಂದು 1.5 ಮಿಲಿಯನ್ ನಷ್ಟು ಬಲಿ ತೆಗೆದು ಕೊಂಡಿದೆ. ಅದರೂ ಮುನೀರನ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಬಾವುಟ ಹಾರಿಸಬೇಕಂತೆ! ಇಡೀ ವಿಶ್ವದ ಕತೆ ಬಿಡಿ ನಮ್ಮ ಮಗ್ಗುಲಲ್ಲಿರುವ ರಾಜ್ಯವಾದ ಕೇರಳದಲ್ಲಿ ವಾರಕ್ಕೊಂದಂತೆ ಕಮ್ಯೂನಿಸ್ಟ್ ರ ಕೈಯಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವಾಗ ಅದರ ಬಗ್ಗೆ ಸೊಲ್ಲೆತ್ತದೆ ದಕ್ಷಿಣ ಕನ್ನಡದಲ್ಲಿ ಪ್ರಸ್ತುತವಾಗಿ ಆಗುತ್ತಿರುವ ಹತ್ಯೆಯ ಹತ್ತು ಪಟ್ಟು ಜಾಸ್ತಿಯಾಗಲಿ ಎಂದು ಇವನ ನೀತಿಯೇ?

WATCH!! How Muneer Kattipalla fooled Dakshin Kannada.

ಬರೀ ಮಾತಿನಲ್ಲಿ ಕೋಟಿ ಚೆನ್ನಯ್ಯ, ಕೊರಗಜ್ಜ, ಬಬ್ಬರಿಯಾ ಎಂದರೆ ಸಾಲದು ಸ್ವಾಮಿ..! ಹಿಂದೆ ಬ್ಯಾನರ್ನಲ್ಲಿ ನಿಮ್ಮ ಒಳಗಿರುವ ಹೃದಯದಲ್ಲಿ ನೋಡುವ ದೃಷ್ಟಿಯಲ್ಲಿ ಇವರೆಲ್ಲರೂ ರಾರಜಿಸಿದರೆ ಮಾತ್ರ ಇಂಥವರ ಮಾತಿಗೆ ಬೆಲೆ ಇರುತ್ತದೆ. ಬರೀ ರಾಜಕೀಯ ದೃಷ್ಟಿಯಿಂದ ಇಂತಹ ಸೂಕ್ಷ್ಮ ವಿಚಾರಗಳನ್ನು ಮೆಲುಕು ಹಾಕುವುದು ವ್ಯರ್ಥ ಪ್ರಯತ್ನವಷ್ಟೇ. ನಾವು ನಮ್ಮವರು ಎಂಬುದು ಹೃದಯದಿಂದ ಹುಟ್ಟಬೇಕೇ ಹೊರತು ಕೇವಲ ಮುಗ್ಧ ಜನರ ಕಣ್ಣಿಗೆ ಮಣ್ಣೆರೆಚುವಂತಿರಬಾರದು. ಮೊದಲು ತಮ್ಮ ದರ್ಮದಲ್ಲಿರುವ ಕೆಲವು ಅನಿಷ್ಠ ಪದ್ಧತಿಗಳ ಬಗ್ಗೆ ಮಾತನಾಡಿ ಅವುಗಳನ್ನು ಹುಟ್ಟಡಗಿಸಲು ಪ್ರಯತ್ನಿಸಿ ನಂತರ ಬಂದು ಉಳಿದವರಿಗೆ ಭಾಷಣ ಬಿಗಿದರೆ ಅದರೊಳಗೊಂದು ಅರ್ಥವಿದ್ದಿತ್ತೇನೋ!!

ಕಾವ್ಯ ಅಂಚನ್

Tags

Related Articles

Close