ಅಂಕಣ

ಮೂರು ವರ್ಷದ ಸಸ್ಯಶಾಸ್ತ್ರೀಯ ಅಧ್ಯಯನವೊಂದು ರಾಮಾಯಣ ಸುಳ್ಳಲ್ಲ ಎಂದು ಧೃಢೀಕರಿಸಿದ್ದು ಹೇಗೆ ಗೊತ್ತೇ?!

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ಆದರೆ ಕೆಲವು ಬುದ್ಧಿ ಜೀವಿಗಳು
ರಾಮಾಯಣವನ್ನು ಕೇವಲ ಇದೊಂದು ಮಹಾಕಾವ್ಯ ಮತ್ತು ರಾಮ ಒಬ್ಬ ಕಾಲ್ಪನಿಕ ಮಾತ್ರ ಎಂದು ಪರಿಗಣಿಸಿದ್ದರು..!! ಇಂತಹ ಬುದ್ಧಿ ಜೀವಿಗಳು ತಮ್ಮ
ಸಂದೇಹವನ್ನು ಬಿಟ್ಟು ಬಿಡಲು ಸಿದ್ಧರಾಗಬೇಕು.!! ಕೆಲವು ವರ್ಷಗಳ ಹಿಂದೆ ಚೆನ್ನೈ ಮೂಲದ ಇಬ್ಬರು ಸಸ್ಯಶಾಸ್ತ್ರಜ್ಞರು ಮೂರು ವರ್ಷಗಳ ಕಾಲ ನಡೆಸಿದ
ಅಧ್ಯಯನದಿಂದ ಹೊರಬಂದಿದ್ದಾರೆ!! ಈ ರಾಮಾಯಣವು ವಾಲ್ಮಿಕಿಯಿಂದ ರಚಿಸಲ್ಪಟ್ಟ ನಿಜವಾದ ರಾಮನ ಜೀವನ ಕಥೆ ಎಂದು ತಿಳಿದು ಬಂದಿದೆ.!! ಈ ಅವಧಿಯ ಸತ್ಯಗಳು, ಸಿದ್ಧಾಂತಗಳು, ವಿಜ್ಞಾನ ಮತ್ತು ಪರಿಸರವನ್ನು ರಾಮಾಯಣ ಸಂಯೋಜಿಸುತ್ತದೆ.!!

ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟಿರುವ 182 ಸಸ್ಯಗಳು(ಹೂವುಗಳು, ಹಣ್ಣುಗಳು, ಮರಗಳು) ಎಲ್ಲಾ ನಿಜವೆಂದು ಪರಿಗಣಿಸಲ್ಪಟ್ಟಿದೆ. ಎಮ್. ಅಮೃತಲಿಂಗಮ್ ಮತ್ತು ಪಿ. ಸುಧಾಕರ್ ಈ ಎರಡು ಸಸ್ಯ ಶಾಸ್ತ್ರಜ್ಞರು ಚೆನ್ನೈನ ಸಿಪಿಆರ್‍ನ ಪರಿಸರ ಶಿಕ್ಞಣ ಕೇಂದ್ರದ ಜೊತೆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ರಾಮಾಯಣದಲ್ಲಿ ವಾಲ್ಮೀಕಿ ಉಲ್ಲೇಖಿಸಿದ ಓರ ಮತ್ತು ಪ್ರಾಣಿಗಳ ಅಸ್ತಿತ್ವವನ್ನು ಅವರು ಒಪ್ಪಿಕೊಂಡಿದೆ ಎಂದು ಪರಿಸರ ಶಿಕ್ಷಣ ಕೇಂದ್ರ ಹೇಳಿದೆ.

14 ವರ್ಷಗಳ ಕಾಲ ಕಾಡಿನ ಗಡಿಪಾರು ಭಾಗವಾಗಿ ಉತ್ತರದಿಂದ ದಕ್ಷಿಣಕ್ಕೆ ಅಯೋಧ್ಯದಿಂದ ರಾಮ ದೇವರು, ಸೀತಾ ದೇವಿ, ಹಾಗು ಲಕ್ಷ್ಮಣ ಪ್ರಯಾಣಿಸಿದ
ಮಾರ್ಗವನ್ನು ಪತ್ತೆಹಚ್ಚಿದ್ದಾರೆ.!! ಇದು ವಾಲ್ಮಿಕಿ ಬರೆದಿರುವ ರಾಮಾಯಣದಲ್ಲಿ ಕೂಡಾ ಸ್ಪಷ್ಟತೆ ಇದೆ. ಅವರು ಆಶ್ಚರ್ಯಚಕಿತರಾದರು ಯಾಕೆಂದರೆ ವಾಲ್ಮಿಕಿ
ಹೇಳಿರುವ ರಾಮಾಯಣದಲ್ಲಿ ಎಲ್ಲಾ ಸಸ್ಯ ಜಾತಿಗಳನ್ನು ಗುರುತಿಸಬಹುದು.!!

ನಂತರ ಎಮ್. ಅಮೃತಲಿಂಗಮ್ ಮತ್ತು ಪಿ. ಸುಧಾಕರ್ ಅವರು ಪ್ರಯಾಣವನ್ನು ಅಯೋಧ್ಯೆಯಿಂದ ಪ್ರಾರಂಭಿಸಿ ಚಿತ್ರಕೂಟದ ಉಷ್ಣವಲಯದ ಮತ್ತು ಪತನಶೀಲ ಅರಣ್ಯವನ್ನು ತಲುಪಿದರು. ವಾಲ್ಮೀಕಿ ತನ್ನ ಓರಾ ಪ್ರಾಣಿ ಮತ್ತು ಭೌಗೋಳಿಕತೆಯನ್ನು ತಿಳಿಸಿದ್ದರು. ಇವರು ವೀಕ್ಷಣೆ ಮಾಡಬೇಕಾದರೆ ವಾಲ್ಮೀಕಿಯ ರಾಮಾಯಣದಲ್ಲಿ ಓರಾ ಮತ್ತು ಫೌನಾ ಎಂಬ ಪ್ರಾಣಿ ಬಗ್ಗೆ ಉಲ್ಲೇಖದಲ್ಲಿತ್ತು. ಅದೇ ಸ್ಥಳದಲ್ಲಿ ಇವರು ವೀಕ್ಷಣೆ ಮಾಡಿದಾಗ ಅದೇ ಸ್ಥಳದಲ್ಲಿ ಆ ಪ್ರಾಣಿ ಅಸ್ತಿತ್ವದಲ್ಲಿದೆ ಎಂಬುವುದನ್ನು ಅವರು ಕಂಡುಕೊಂಡರು. ನಂದಿತಾ ಕೃಷ್ಣಾರನ್ನು ಇದು ಗಮನ ಸೆಳೆಯಿತು ಇವರು ಸಿಪಿಆರ್‍ಇಇಸಿಯ ಮೇಲ್ವಿಚಾರಕರಾಗಿದ್ದರು.

ಕೃಷ್ಣನ ಪ್ರಕಾರ ರಾಮಾಯಣವು ಭೌಗೋಳಿಕವಾಗಿ ಬಹಳ ಸೂಕ್ತವಾಗಿದೆ. ತಮ್ಮ ಮಾರ್ಗದ ಎಲ್ಲಾ ಸ್ಥಳಗಳು ಇನ್ನೂ ಸ್ಪಷ್ಟವಾಗಿ ಗುರುತಿಸಬಹುದು ಮತ್ತು ಇನ್ನೂ ಇದು ಮುಂದುವರಿದ ಸಂಪ್ರದಾಯವಾಗಿದೆ. ವ್ಯಕ್ತಿಯು ತನ್ನ ಕಲ್ಪನೆಗೆ ತಕ್ಕ ಇಂತಹ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ. ಸ್ಥಳೀಯ ಜಾನಪದ ಕಥೆಗಳಲ್ಲಿ ಅದನ್ನು ಬಿಡಲು ಸಾಧ್ಯವಿಲ್ಲ. ವಾಲ್ಮೀಕಿ ಸಸ್ಯಗಳು, ಕಾಡು ಪ್ರಾಣಿಗಳು, ಮರಗಳು ಇವುಗಳನೆಲ್ಲಾ ರಾಮಾಯಣದಲ್ಲಿ ಸ್ಪಷ್ಟಪಡಿಸುವಾಗಿ ಬರೆದಿದ್ದು ಎಲ್ಲಿ ಕೂಡಾ ಎಡವಿಲಿಲ್ಲ ಎಂಬುವುದು ಅವರಿಗೆ ಸ್ಪಷ್ಟವಾಯಿತು.

ರಾಮಾಯಣದಲ್ಲಿ ರಾಮ, ಸೀತಾ ಮತ್ತು ಲಕ್ಷ್ಮಣ ದಂಡಕಾರಣ್ಯದಲ್ಲಿ ಪ್ರವೇಶಿಸುವಾಗ ಜಾಗರೂಕರಾಗಿ ಎಂದು ರಾಮಾಯಣದಲ್ಲಿ ಬರೆದಿತ್ತು ಎಂದು ಸುಧಾಕರ್
ಹೇಳಿದರು. ಆ ಅರಣ್ಯದಲ್ಲಿ ಕಾಡು ಸಿಂಹಗಳನ್ನು ಹೊಂದಿತ್ತು. ಆದರೆ ಈಗ ಆ ಸ್ಥಳದಲ್ಲಿ ಯಾವುದೇ ಹುಲಿ, ಸಿಂಹಗಳು ಇರಲಿಲ್ಲ. ಏಕೆಂದರೆ ಬೇಟೆಗಾರರಿಂದ ಕಾಡು ಪ್ರಾಣಿಗಳನ್ನು ಕೊಲ್ಲಲ್ಪಟ್ಟಿತ್ತು. ಆದರೆ ಭಿಂಬೆತ್ಕಾಸ್ ಇತಿಹಾಸಪೂರ್ವ ವರ್ಣಚಿತ್ರಗಳು ವಾಲ್ಮೀಕಿಯ ವೀಕ್ಷಣೆಗೆ ಸೇರಿದ್ದವು.

ಅಮೃತಾಲಿಂಗಮ್ ಮತ್ತು ಸುಧಾಕರ್ ದಂಡಕಾರಣ್ಯದಿಂದ ಪಂಚವಟಿ ಮತ್ತು ಕಿಷ್ಕಿಂದೆಯನ್ನು ತಲುಪಿದರು. ಕಿಷ್ಕಿಂದಾದಲ್ಲಿ ಶುಷ್ಕ ಮತ್ತು ತೇವಾಂಶದ
ವಾತವರಣವನ್ನು ಕಂಡುಕೊಂಡರು. ವಾಲ್ಮೀಕಿ ಬರೆದ ರಾಮಾಯಣದಲ್ಲಿ ಇದನ್ನೆಲ್ಲಾ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.!! ಎಂದು ಅಮೃತಾಲಿಂಗಮ್ ಸ್ಪಷ್ಟಪಡಿಸುತ್ತಾರೆ.

ಮಹಾಕಾವ್ಯದಲ್ಲಿ ಉಲ್ಲೇಖಿಸಲಾದ ಚಿತ್ರಕೂಟ ಮತ್ತು ದಂಡಕಾರಣ್ಯ ಪ್ರದೇಶಗಳು ಮಧ್ಯಪ್ರದೇಶ , ಒಡಿಶಾ ಮತ್ತು ಆಂದ್ರಪ್ರದೇಶದ ಮಧ್ಯೆ ಹರಡಿವೆ. ರಾವಣನಿಂದ ಸೀತಾ ದೇವಿಯನ್ನು ಅಪಹರಿಸಿದ ಪಂಚವಟಿ ಗೋದಾವರಿ ನದಿಯ ದಡದಲ್ಲಿದ್ದು, ಈಗ ಇದು ಆಧುನಿಕ ಮಹಾರಾಷ್ಟ್ರವಾಗಿದೆ. ಈ ಪ್ರದೇಶದ ವಿವಿಧ ಪ್ರಾಣಿ ಮತ್ತು ಹಕ್ಕಿ ಜಾತಿಗಳನ್ನು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಇವು ಹಂಸ ,ಕರಾಂಡವ, ಕ್ರುಂಕ್, ಮಯೂರ, ಸರಸ ಇವೆಲ್ಲವೂ ಕೂಡಾ ಈ ಪ್ರದೇಶದಲ್ಲಿ ಕಾಣ ಸಿಗುತ್ತದೆ.

ರಾಮನು ಲಕ್ಷ್ಮಣ ಮತ್ತು ಸೀತಾ ದೇವಿಯ ಸಂಭಾಷಣೆಯಲ್ಲಿ ರಾಮನ ಸಹಾನುಭೂತಿಯ ಬಗ್ಗೆ ಉಲ್ಲೇಖಿಸಲಾಗಿದೆ. ಸಸ್ಯಗಳು ಮತ್ತು ಮರಗಳು ಅವುಗಳು ತಮ್ಮ ಪ್ರಯಾಣದ ಸಮಯದಲ್ಲಿ ಕಾಣಿಸುತ್ತದೆ. ಇಂದಿಗೂ ನಾವು ಸ್ಥಳ ವೀಕ್ಷಣೆಯನ್ನು ಮಾಡಿದಾಗ ಇದನ್ನೆಲ್ಲಾ ಗಮನಿಸಬಹುದು. ತುಳಸಿ, ಆಲ, ಪುನ್ನಾಗಾ ರಾಮಾಯಣ ಕೇವಲ ಕಥೆಯಲ್ಲ ಎಂಬ ಸಿದ್ಧಾಂತವನ್ನು ದೃಢೀಕರಿಸುವ ಕೆಲವು ಸಿದ್ಧಾಂತವನ್ನು ದೃಢೀಕರಿಸುವ ಕೆಲವು ಉದಾಹರಣೆಗಳಿವೆ. ಆದ್ದರಿಂದ ರಾಮಾಯಣ ಕೇವಲ ಕಥೆಯಲ್ಲ ಇದು ಸತ್ಯ ಘಟನೆ.!!

ಈ ಸಂಶೋಧನೆಯು ಅವರನ್ನು ಶ್ರೀಲಂಕಾಕ್ಕೆ ಕರೆದೊಯ್ಯಿತು. ಅಲ್ಲಿ ಅವರು ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟಿರುವ ಓರಾ ಮತ್ತು ಫೌನಾ ಪ್ರಾಣಿಗಳನ್ನು ಕಾಣಬಹುದು. ಅಶೋಕ ಮರಗಳ ಉಪಸ್ಥಿತಿಯಿಂದ ರಾವಣನ ಉಪಸ್ಥಿತಿಯಿಂದ ರಾವಣನ ಸಸ್ಯ ಶಾಸ್ತ್ರೀಯ ತೋಟವನ್ನು ಅಶೋಕ ವನ ಎಂದು ಕರೆಯಲಾಗುತ್ತಿತ್ತು. ನಿತ್ಯ ಹರಿದ್ವರ್ಣದ ಅಶೋಕ ತೋಟವನ್ನು ಅಶೋಕ ವನ ಎಂದು ಕರೆಯಲಾಗುತ್ತದೆ. ನಿತ್ಯ ಹರಿದ್ವರ್ಣದ ಅಶೋಕ ವನವನ್ನು ಎಲ್ಲಾ ಉದ್ಯಾನಗಳಲ್ಲಿ ಪ್ರಕೃತಿ ಚಿತ್ರಿಸಿರುವ ಉದ್ಯಾನವನವೆಂದು ವಿವರಿಸಬಹುದು ಎಂದು ಅಮೃತಾಲಿಂಗಮ್ ತಿಳಿಸಿದರು.

ವಾಲ್ಮೀಕಿಯು ರಾಮಾಯಣದಲ್ಲಿ ನಡೆದ ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ಸ್ಪಷ್ಟ ಪಡಿಸಿದ್ದಾರೆ. ಆದರೆ ಅವರು ಸಮಯ ಮತ್ತು ಸ್ಥಳವನ್ನು ಮಾತ್ರ ಒದಗಿಸಿಲ್ಲ
ಎಂದು ಅವರು ಹೇಳಿದರು. ಅಮೃತಾಲಿಂಗಮ್ ಮತ್ತು ಸುದಾಕರ್‍ನ ಹೇಳಿಕೆಗಳು ವಾಲ್ಮೀಕಿಯ ರಾಮಾಯಣದಲ್ಲಿ ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯತೆ ಎಂಬ ಪುಸ್ತಕದಲ್ಲಿ ಪ್ರಕಟಿಸಲ್ಪಟ್ಟಿದೆ.

ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ
ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟುರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ.

Source :Sanskrithi Magazine

-ಶೃಜನ್ಯಾ

Tags

Related Articles

Close