ಪ್ರಚಲಿತ

ಮೇವಾನಿಯವರೇ, ಮೋದಿಯ ತಾಯಿಯನ್ನು ಕೇಳುವ ಮೊದಲು ನಿಮ್ಮ ಹೆತ್ತ ತಾಯಿಯನ್ನೊಮ್ಮೆ (ಗೊತ್ತಿದ್ದರೆ) ಕೇಳಿ ನೋಡಿ ನಿಮ್ಮ ಹುಟ್ಟಿನ ಬಗ್ಗೆ!!!! ನಮ್ಮ ದೇಶದ ಪ್ರಧಾನಿಯ ಬಗ್ಗೆ ಮಾತನಾಡಿದರೆ ಜಾಗ್ರತೆ!!!!!!

‘ಅಲ್ಪವಿದ್ಯಾ ಮಹಾಗರ್ವಿ’ ಎನ್ನುವಂತೆ ನಾಲಗೆ ಹರಿಬಿಡುವ ಒಂದಷ್ಟು so-called ಪ್ರಗತಿಪರರಿಗೆ ಬಹುಷಃ ಗೌರೀ ಲಂಕೇಶ್ ಸಾವಿನಿಂದ ಬುದ್ಧಿಭ್ರಮಣೆಯಾಗಿದೆ
ಎಂಬುದಂತೂ ಸತ್ಯ! ಬಿಡಿ! ಬುದ್ಧಿ ಸರಿ ಇರುವವರು ಪ್ರಗತಿಪರರಾಗೊಲ್ಲ ಎಂಬುದು ನಿಮ್ಮ ತರ್ಕವಾದರೆ ನನ್ನ ಸಹಮತವೂ ಇದೆ!

ಏನಾದರೂ ‘ಮೋದಿ’ ಕಾರಣ!!!

ಅಲ್ಲ ಸ್ವಾಮಿ! ಗೌರೀ ಲಂಕೇಶ್ ಹತ್ಯೆಯಾದರೂ, ಕಲಬುರ್ಗಿ ಹತ್ಯೆಯಾದರೂ, ಪನ್ಸಾರೆ ಹತ್ಯೆಯಾದರೂ ಹೋಗಲಿ! ‘ಉಗ್ರರ ಬೆಂಬಲಿಸುವವರ’ ಮನೆಯ
ಕೋಳಿಯೊಂದು ಸತ್ತರೂ ಅದಕ್ಕೆ ಮೋದಿಯೇ ಹೊಣೆಗಾರರು ಹೇಗಾಗುತ್ತಾರೆ?! ಈ ಎಡಪಂಥೀಯರೆಂಬ ಊಳಿಡುವ ನರಿಗಳಿಗೆ ಗೌರೀ ಲಂಕೇಶ್ ಹತ್ಯೆಯ ಬಗ್ಗೆ ಇರುವ ಅನುಕಂಪಕ್ಕಿಂತ, ತಿರುಪೆ ಎತ್ತಲು, ಮೋದಿಯನ್ನು ಇನ್ನಷ್ಟು ಬೈಯ್ಯಲು, ಬಲಪಂಥೀಯರ ವಿರುದ್ಧವಾಗಿ ಇನ್ನಷ್ಟು ಕೂಗಲು ಒಂದು ನೆಪ ಸಿಕ್ಕಿತೇ ವಿನಃ ಆಕೆಯ ಹತ್ಯೆಗೆ ನ್ಯಾಯ ಕೊಡಿಸುವ ಯಾವ ದರ್ದೂ ಇವಕ್ಕಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿರುವಾಗಲೇ ನರಿಗಳ ಊಳಿಡುವ ಸದ್ದು ಕಿವಿಗಪ್ಪಳಿಸುತ್ತದೆ!

ಮೋದಿ ತಾಯಿಯನ್ನಲ್ಲ ಭೇಟಿ ಮಾಡಲಿಕ್ಕಿರುವುದು ಮೇವಾನಿ!!

ಆಕೆಯ ಹತ್ಯೆ ಖಂಡಿಸುವಂತೆ ನಾಟಕವಾಡಿ ಇಂದು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಬೃಹತ್ (?) ಪ್ರತಿಭಟನೆಯಲ್ಲಿ ಗೌರೀ ಲಂಕೇಶ್ ಳ ದತ್ತು ಪುತ್ರ ಜಿಗ್ನೇಶ್ ಮೇವಾನಿ ಬಹಳಷ್ಟು ಪ್ರಚಾರ ಗಿಟ್ಟಿಸಿದ್ದಾರೆ!

ಏನೆಂದಿರಿ ಮೇವಾನಿ?!

ಎಂ.ಎಂ.ಕಲಬುರ್ಗಿ ಹಂತಕರು ಎಲ್ಲಿ ಎಂದು ಗೌರಿ ಕೇಳಿದ್ದಕ್ಕೆ ಉತ್ತರ ಕೊಡಲಾಗದ ಕೇಂದ್ರ ಸರಕಾರ ಆಕೆಯನ್ನು ಕೊಂದಿದೆ! ನ್ಯಾಯ ಸಿಗುವವರೆಗೆ ಹೋರಾಟ
ನಡೆಸೋಣ! ಸಂಗಾತಿಗಳೇ, ನಾವೆಲ್ಲರೂ ದೆಹಲಿಗೆ ಪ್ರಯಾಣಿಸೋಣ! ಮೋಹನ್ ಭಾಗವತ್ ಮತ್ತು ಮೋದಿಯ ಎದೆ ಮೇಲೆ ಕುಳಿತು ಹೋರಾಡೋಣ! ಗುಜರಾತ್ ನ ಗಾಂಧೀ ನಗರಕ್ಕೂ ಹೋಗಿ ಮೋದಿಯ ತಾಯಿಯನ್ನು ಭೇಟಿ ಮಾಡಿ ಇಂಥ ನಾಲಾಯಕ್ ಪುತ್ರನಿಗೆ ಏಕೆ ಜನುಮ ನೀಡಿದಿರಿ ಎಂದು ಕೇಳೋಣ! ಗೌರಿ ಪುತ್ರನಾಗಿ ಹೇಳುತ್ತೀನಿ! ನನ್ನ ಉಸಿರಿರುವವರೆಗೂ ಹಿಂದೂ ಸಂಸ್ಥೆಯಂತಿರುವ ಭಾರತವನ್ನು ನಿರ್ಮಾಣ ಮಾಡಲು ಬಿಡುವುದಿಲ್ಲ! ಬದಲಾಗಿ ಪ್ರಗತಿಪರ, ಜಾತ್ಯಾತೀತ ಭಾರತವನ್ನು ಮಾಡುತ್ತೇನೆ!”

ವ್ಹಾ! ಎಂತಹ ಸಂಸ್ಕಾರ ನಿಮ್ಮದೆಂದು ಮತ್ತೊಮ್ಮೆ ಸಾಬೀತಾಗಿದೆ! ಕಲಬುರ್ಗಿ ಹತ್ಯೆಯಾಗಲೆಂದೇ ಕಾದು ಕುಳಿತಿರುವಷ್ಟು ಅಥವಾ ಪಿತೂರಿ ನಡೆಸಲು ಮೋದಿಗೆ ಮಾಡಲು ಬೇರೆ ಕೆಲಸವಿರಲಿಲ್ಲವಾ ಮೇವಾನಿ?! ಸಮಾವೇಶದ ಹೆಸರಿನಲ್ಲಿ ತಿರುಪೆ ಎತ್ತಲು ನಿಮಗೆ ಸಮಯವಿರಬಹುದು! ಆದರೆ, ಘನತೆಯೆತ್ತ ಮೋದಿಗಲ್ಲ ಎಂಬುದು ನೆನಪಿರಲಿ!

ಗೌರಿಯನ್ನು ಕೊಂದಿರಿ ಎಂದಿರಿ! ನಿಮ್ಮ ಅವಿವೇಕತನಕ್ಕೊಂದು ಧಿಕ್ಕಾರವಿರಲಿ ಮೇವಾನಿ! ನಿಮ್ಮ ತಾಯಿಯ ಹತ್ಯೆಯ ಮೊದಲು ಆಕೆಗೆ ಭದ್ರತೆ ಒದಗಿಸುವುದು ಯಾರ ಕರ್ತವ್ಯವಾಗಿತ್ತು?! ಸ್ವತಃ ಆಕೆಯ ತಮ್ಮನೇ ‘ನಕ್ಸಲ್’ ರಿಂದ ಬೆದರಿಕೆ ಬರುತ್ತಿತ್ತೆಂದು ಒಪ್ಪಿಕೊಂಡಾಗ ಆಕೆಯನ್ನು ರಕ್ಷಿಸಲಾಗದ ನಿಮ್ಮ ಅಸ್ತಿತ್ವದ ಬಗ್ಗೆಯೇ ನನಗೆ ಪ್ರಶ್ನೆಯಿದೆ! ನೀವು ದತ್ತು ಪುತ್ರ ಸರಿ! ಆದರೆ, ‘ಪುತ್ರ’ನೇ ಆಗಿ ಕರ್ತವ್ಯ ನಿಭಾಯಿಸಿದ್ದೀರೇನು?!

ನ್ಯಾಯ ಸಿಗುವವರೆಗೂ ಹೋರಾಟವೇ?! ನಿಮ್ಮ ಕಾಲ ಕೆಳಗೇ ಬಿದ್ದಿರುವ ನ್ಯಾಯವನ್ನು ಮೆಟ್ಟಿ ನಿಂತು ಸಂಘದವರ ಮೇಲೆ ಹರಿಹಾಯಲು ಆಕೆಯ ಸಾವನ್ನೇ
ನೆಪವಾಗಿಸಿ ರಣಹದ್ದುಗಳಂತೆ ಕುಕ್ಕುತ್ತಿರುವ ನೀವು ಎಂದಾದರೂ ನ್ಯಾಯಕ್ಕೋಸ್ಕರ ಹೋರಾಡಿದ್ದೀರೇನು?!

ಎದೆ ಮೇಲೆ ಕುಳಿತು ಹೋರಾಡುವಷ್ಟು ನೈತಿಕತೆ ನಿಮಗಿದೆಯೇ ಮೇವಾನಿ?! ನಿಜವಾದ ಜಾತ್ಯಾತೀತದ ಸಿದ್ಧಾಂತವನ್ನೇ ತಿರುಚಿ ಕೊಂದ ನೀವೆಲ್ಲಿ?! ಭಾರತದ
ಹಿತವನ್ನು ಬಯಸಿ ಬದುಕುತ್ತಿರುವ ಮೋದಿಯೆಲ್ಲಿ?! ಹುಟ್ಟಿದ ಧರ್ಮಕ್ಕೆ ನ್ಯಾಯವಾಗಿ ಬದುಕುತ್ತಿರುವ ಮೋಹನ್ ಭಾಗವತ್ ಎಲ್ಲಿ?! ನಿಮ್ಮ ಸ್ಥಾನವನ್ನೊಮ್ಮೆ
ಅವಲೋಕಿಸಿದರೆ ಗೊತ್ತಾದೀತು ನಿಮಗ್ಯಾವ ನೈತಿಕತೆ ಇದೆಯೆಂದು?!

ಮೋದಿಯ ತಾಯಿಯನ್ನು ಭೇಟಿಯಾಗಿ ನಾಲಾಯಕ್ ಮಗನಿಗೆ ಯಾಕೆ ಜನ್ಮ ಕೊಟ್ಟಿರಿ ಎಂದು ಕೇಳೋಣ ಎಂದು ಅಬ್ಬರಿಸುವ ಮುನ್ನ ಹಿಂತಿರುಗಿ ನಿಮ್ಮ ಬದುಕನ್ನು ಅವಲೋಕಿಸಬೇಕಾಗಿತ್ತು ಮೇವಾನಿ ಸಾಹೇಬರೇ!!! ಯಾರು ನಾಲಾಯಕ್ ಮಗ ಎಂಬುದು ಗೊತ್ತಾಗಿ ಬಿಡುತ್ತಿತ್ತೇನೋ!!! ಮಾತನಾಡಲು ನಾಲಿಗೆ ಇದೆಯೆಂಬುದನ್ನೇ ದುರ್ಬಳಕೆ ಮಾಡಿಕೊಂಡರೆ ಮು0ದೊಂದು ದಿನ ನಿಮ್ಮದೇ ಸಮಾಜ ನಿಮ್ಮ ಜನುಮದ ಬಗ್ಗೆ, ಜನನಿಯ ಬಗ್ಗೆ ಪ್ರಶ್ನೆ ಮಾಡುತ್ತದೆ! ಉತ್ತರಿಸುತ್ತೀರಾ?!

ದೇಶವನ್ನು ತುಂಡು ಮಾಡುತ್ತೇವೆಂದ ಕನ್ಹಯ್ಯಾ ಹಾಗೂ ಉಮರ್ ನ ತಾಯಿಯನ್ನು ಕೇಳಲು ನಿಮಗೆ ನೈತಿಕತೆಯಿರಲಿಲ್ಲ ಅಲ್ಲವೇ?! ಯಾವ ಜಾತ್ಯಾತೀತತೆ
ನಿಮ್ಮದು?! ಇಸ್ಲಾಮೀಕರಣ ನಿಮ್ಮ ಜಾತ್ಯಾತೀತತೆಯೇ?! ಕ್ರೈಸ್ತ ಸಮಾಜ ನಿಮ್ಮ ಜಾತ್ಯಾತೀತತೆಯೇ?! ಹತ್ಯೆಯ ಹೆಸರಿನಲ್ಲಿ ತಿರುಪೆ ಎತ್ತುವ ಅನೈತಿಕತೆ ನಿಮ್ಮ ಜಾತ್ಯಾತೀತತೆಯೇ?! ದೇಶವನ್ನು ತುಂಡರಿಸುವುದು ನಿಮ್ಮ ಜಾತ್ಯಾತೀತತೆಯೇ?! ಅಥವಾ ತಮ್ಮ ಅಸ್ತಿತ್ವದ ಬಗ್ಗೆ ಯೋಚಿಸದೇ ಪರರ ಹುಟ್ಟಿನ ಬಗ್ಗೆ ಪ್ರಶ್ನಿಸುವುದು ನಿಮ್ಮ ಜಾತ್ಯಾತೀತತೆಯೇ?! ಸಂಘದವರ ಹೆಣ್ಣು ಮಕ್ಕಳನ್ನು ಲೈಂಗಿಕ ಗುಲಾಮರೆಂದು ಹಳಿಯುವುದು ಜಾತ್ಯಾತೀತತೆಯೇ?! ಯಾವುದು ನಿಮ್ಮ ಜಾತ್ಯಾತೀತತೆ?!

ಮೋದಿಯೊಬ್ಬರು ದೇಶ ಕಂಡ ನೀಚ ವ್ಯಕ್ತಿ ಎಂದ ನಿಮಗೆ ನಿಕಾಹ್ ಹಲಾಲ್ ನೀಚತನ ಅನ್ನಿಸಲಿಲ್ಲದ ಕಾರಣ?! ತ್ರಿವಳಿ ತಲಾಕ್ ನೀಚವೆನಿಸಲಿಲ್ಲದ ಕಾರಣ?!
ಕೆದಕಿದರೆ ಇನ್ನೊಂದಿಷ್ಟು ಉದ್ದಕ್ಕೆ ಸಮಾಜವೂ ಕಾರಣ ಕೇಳುತ್ತದೆ! ಕೊನೆ ಕೊನೆಗೆ ನಿಮ್ಮ ಗಂಜಿಯ ಅವಶ್ಯಕತೆಯ ಬಗೆಗೂ!!!

ಮೊದಲು ಜಾತ್ಯಾತೀತತೆಯೆಂದರೆ ಎಂಬುದನ್ನು ಅರಿಯಿರಿ! ನಾಲಗೆ ಎಲ್ಲರಿಗೂ ಇದೆ ಎನ್ನುವುದು ತಿಳಿದಿರಲಿ! ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂಬ ಅರಿವಿರಲಿ! ನೇರವಾಗಿ ಹೇಳುತ್ತೇನೆ! ಎಲ್ಲರ ಹುಟ್ಟಿನ ಬಗೆಗೆ ನಾವೂ ಪ್ರಶ್ನಿಸಬಲ್ಲೆವು!!!

– ತಪಸ್ವಿ

Tags

Related Articles

Close