ಪ್ರಚಲಿತ

ಮೈಸೂರಿನಲ್ಲಿ ನಡೆಯುತ್ತಿರುವುದು ಸಾಹಿತ್ಯ ಸಮ್ಮೇಳನವೋ ಕಾಂಗ್ರೆಸ್ ಪ್ರಚಾರ ಸಮ್ಮೇಳನವೋ? ಚಂಪಾ ಏನಿದು ಬೀದಿರಂಪಾ!!!

ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಂದುಕೊಂಡಿದ್ದೀರಾ… ಖಂಡಿತಾ ಇಲ್ಲ. ಇಲ್ಲಿ ಅಕ್ಷರಶಃ ಕಾಂಗ್ರೆಸ್ ಪ್ರಚಾರ ಸಮ್ಮೇಳನ ನಡೆಯುತ್ತಿದೆ. ಸಿದ್ದರಾಮಯ್ಯ ತನ್ನನ್ನು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮಾಡಿಕೊಂಡಿರುವುದಕ್ಕೆ ಚಂಪಾ ಅದರ ಋಣ ತೀರಿಸುತ್ತಿದ್ದಾರೆ. ಚಂಪಾರಿಗೆ ಈ ರೀತಿ ಮಾತನಾಡುವ ಬದಲು ನೇರವಾಗಿ ಕಾಂಗ್ರೆಸ್‍ಗೆ ಸೇರಬಹುದಿತ್ತು. ಅಥವಾ ಲೇಖನಿಯನ್ನು ಬದಿಗಿಟ್ಟು ಕಾಂಗ್ರೆಸ್ ಪರ ಪ್ರಚಾರ ನಡೆಸಬಹುದಿತ್ತು. ಆದರೆ ಅದೆಲ್ಲಾ ಬಿಟ್ಟು ಚಂಪಾ ಮಾಡಿದ್ದು ಮಾತ್ರ ಬೀದಿರಂಪ… ಇದನ್ನೆಲ್ಲಾ ನೋಡುವಾಗ ಇದನ್ನು ಯಾವ ನಾಲಗೆಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಅನ್ನಬೇಕೋ ಎಂದು ಗೊತ್ತಾಗುತ್ತಿಲ್ಲ.

ಈ ಚಂಪಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ಬಗ್ಗೆ, ಕನ್ನಡಕ್ಕೆ ಒಳಿತಾಗುವ ಬಗ್ಗೆ ಏನಾದ್ರೂ ಮಾತಾಡ್ತಾರೆ ಅಂದುಕೊಂಡರೆ ಅವರು ಮಾಡಿದ್ದು ಮಾತ್ರ ಪಕ್ಕಾ ರಾಜಕೀಯ. ಇಲ್ಲವಾದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸುವ ಕೆಲಸವನ್ನು ಮಾಡ್ತಾ ಇರ್ಲಿಲ್ಲ. ಈ ಮಹಾಪುರುಷ ಇಷ್ಟು ಇಷ್ಟು ಮಾತ್ರ ಮಾಡಿದ್ದಲ್ಲ, ಸಿದ್ದರಾಮಯ್ಯನ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ ಎಂದು ಬಹಿರಂಗವಾಗಿ ಮತಯಾಚನೆ ಕೂಡಾ ಮಾಡಿದ್ದಾರೆ. ಈ ಮೂಲಕ ತನ್ನನ್ನು ಸಮ್ಮೇಳನಾಧ್ಯಕ್ಷ ಮಾಡಿದ್ದಕ್ಕೆ ಸಿದ್ದರಾಮಯ್ಯನ ಋಣ ತೀರಿಸಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಸಮ್ಮೇಳನದಲ್ಲೇ ತರಾಟೆಗೆ ತೆಗೆದುಕೊಂಡ ಚಂಪಾ ಈ ಮೋದಿ ಬಿಜೆಪಿ, ಗುಜರಾತ್‍ಗೆ ಮಾತ್ರ ಪ್ರಧಾನಿ ಅಲ್ಲ, ಇಡೀ ದೇಶಕ್ಕೆ ಪ್ರಧಾನಿ, ಮೋದಿಯ ಯೋಜನೆಗಳು ಕೇವಲ ಬಿಜೆಪಿಗರಿಗಷ್ಟೇ ಮೀಸಲಾಗಿದೆ. ನಿಮ್ಮ ಸಿದ್ಧಾಂತ ಏನೇ ಇರಲಿ ಎಂದು ಟೀಕಿಸಿದ್ದಾರೆ. ಅದ್ಯಾವ ಸೀಮೆಯ ಭಾಷಣ ಇದು? ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏನನ್ನು ಮಾತಾಡಬೇಕೋ ಅದನ್ನೆಲ್ಲಾ ಮಾತಾಡದೆ ಬಾಯಿಗೆ ಬೀಗ ಹೊಡೆಸಿಕೊಂಡಿರುವ ಚಂಪಾ ಮೋದಿಯನ್ನು ಟೀಕಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅಷ್ಟಕ್ಕೂ ಸಾಹಿತ್ಯ ಸಮ್ಮೇಳನದ ವೇದಿಕೆ ಮೋದಿಯವರನ್ನು ಟೀಕಿಸುವ ವೇದಿಕೆಯಾ? ಯಾವ ರಾಜಕೀಯ ಪುಢಾರಿಗೂ ಕಮ್ಮಿ ಇಲ್ಲದಂತೆ ಮತಾಡುವ ಚಂಪಾನನ್ನು ಸಾಹಿತಿ ಎನ್ನಲು ಸಾಧ್ಯವೇ?

ತಾನೊಬ್ಬ ಬಂಡಾಯ ಸಾಹಿತಿ ಎಂದು ಘೋಷಿಸಿಕೊಂಡಿರುವ ಚಂಪಾರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಬೇಕು ಆದರೆ ಭುವನೇಶ್ವರಿ ದೇವರಿಗೆ ಪೂಜೆ ಸಲ್ಲಿಸಲು ನಿರಾಕರಿಸಿ ಇಡೀ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಇಂಥವರನ್ನೇ ಸಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಅರಮನೆಯ ಆವರಣದಲ್ಲಿ ಕರ್ನಾಟಕದ ಏಕೈಕ ಭುವನೇಶ್ವರಿ ದೇಗುಲಕ್ಕೆ ಪ್ರವೇಶಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರೆ ಚಂಪಾನ ಗಂಟೇನು ಹೋಗುತ್ತಿತ್ತು? ಇದರಲ್ಲಿ ಭಾಗವಹಿಸ;ಲು ಆಗದಿದ್ದರೆ ಸಮ್ಮೇಳನಾಧ್ಯಕ್ಷನಾಗುವ ದರ್ದು ಏನಿತ್ತು?

ಚಂಪಾ ಅವರು ತನ್ನ ವರ್ಚಸ್ಸಿಗೆ ತಕ್ಕಂತೆ ಮಾತಾಡಿದ್ದಾರೆಯೇ? ಸಮ್ಮೇಳನಾಧ್ಯಕ್ಷನಾಗಿ ತನ್ನ ಘನತೆಯನ್ನು ಕಾಪಾಡಿಕೊಂಡಿದ್ದಾರೆಯೇ?

ಚಂಪಾ ಅವರಿಗೆ ನಿಜವಾಗಿಯೂ ರಾಜಕೀಯ ಬೇಕೇ? ಬೇಕಿದ್ದರೆ ಸಿದ್ದರಾಮಯ್ಯನವರಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಕೇಳಿ ಸ್ಪರ್ಧಿಸಲಿ. ತನ್ನ ಪಕ್ಷದ ಮತಪ್ರಚಾರ ನಡೆಸಲು ಒಂದು ಸಮಾವೇಶ ನಡೆಸಲಿ ಅದು ಬಿಟ್ಟು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಂಗ್ರೆಸ್‍ಗೆ ಮತ ಹಾಕಿ ಎಂದು ಬೊಬ್ಬೆ ಹೊಡೆಯುವುದು ಯಾಕೆ? ಮೋದಿಯವರ ಯೋಜನೆಗಳ ಬಗ್ಗೆ ಒಂದೂ ಗೊತ್ತಿಲ್ಲದೆ ಅಜ್ಞಾನಿಯಂತೆ ಮಾತಾಡುವ ಚಂಪಾ ಅದ್ಯಾವ ಸೀಮೆಯ ಸಾಹಿತಿ?

ಕಾಂಗ್ರೆಸ್ ಪರ ಬಿಟ್ಟಿ ಪ್ರಚಾರ ನಡೆಸುವ ಚಂಪಾ ಅವರ ರಾಜಕೀಯ ಕತೆ ಏನೆಂದು ಗೊತ್ತಾದರೆ ಕರ್ನಾಟಕದ ಜನರು ಬಿದ್ದು ಬಿದ್ದು ನಕ್ಕಾರು.. ಯಾಕೆ ಗೊತ್ತೇ? ಚಂಪಾ ಅವರು ಯಾವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರೋ ಆ ಕನ್ನಡ ಸಾಹಿತ್ಯ ಪರಿಷತ್ತು ಇರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಒಮ್ಮೆ ಸ್ಪರ್ಧಿಸಿದ್ದರು. ಆ ವೇಳೆ ಚಂಪಾವರು ಠೇವಣಿಯನ್ನೇ ಕಳೆದುಕೊಂಡಿದ್ದರು. 200 ಚಿಲ್ಲರೆ ಮತ ಪಡೆಯಲೂ ಆಗದ ಚಂಪಾ ತಾನೆಷ್ಟು ಮಹಾನ್ ವ್ಯಕ್ತಿ ಎಂಬುವುದನ್ನು ಅಂದೇ ಅರ್ಥ ಮಾಡಿಕೊಂಡಿದ್ದರೆ ಒಳ್ಳೆಯದಿತ್ತು. ಕನ್ನಡ ಪಕ್ಷ ಎಂಬ ಹೊಸ ಪಕ್ಷದಿಂದ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು ಇದೇ ಚಂಪಾ.

 

ಎಸ್ ಎಲ್ ಭೈರಪ್ಪ, ಶತವಧಾನಿ ಗಣೇಶ್, ಚಿದಾನಂದ ಮೂರ್ತಿಯಂಥವರು ಮಾತಾಡುವಾಗ ಉರಿದು ಬೀಳುವ ಚಂಪಾ ತನ್ನ ಸಿದ್ಧಾಂತವೇ ಶ್ರೇಷ್ಠ ಎಂದು ನಂಬಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೋದಾಗ ಸ್ವಾಮೀಜಿಗಳ ಕಾಲಿಗೆ ಬೀಳುವ ಚಂಪಾ, ಬೆಂಗಳೂರಿಗೆ ಬಂದ ಅಪ್ಪಟ ಜಾತ್ಯತೀತರಂತೆ ಸೋಗುಹಾಕುತ್ತಾರೆ. ಐದು ಸಾವಿರ ವರ್ಷಗಳಿಂದ ನಮ್ಮನ್ನಾಳುತ್ತಿರುವ ವೈದಿಕ ಬ್ರಾಹ್ಮಣರು, ವೀರಶೈವ ಮತ್ತು ಲಿಂಗಾಯತರು ಕೋಮುವಾದ ತರಲು ಹೆಗಲುಗಳಾಗಿ ಪರಿಣಮಿಸಿದ್ದಾರೆ ಎಂದು ಒಮ್ಮೆ ಹೇಳಿರುವುದು ಚಂಪಾರಿಗೆ ಮರೆತುಹೋಯಿತೇ? ಸ್ವಾತಂತ್ರ್ಯ ಬಂದಾಗಿನಿಂದ ಬ್ರಾಹ್ಮಣ ಬನಿಯಾಗಳೇ ದೇಶದ ಆಳ್ವಿಕೆ ನಡೆಸುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಸಾಕ್ಷಿಯಾಗಿ ನಿಂತಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಒಂದು ಜಾತಿಯನ್ನು ಎಳೆದು ತಂದು ಆ ಜಾತಿಯ ಮೇಲೆ ಆರೋಪ ಮಾಡುವ ಅಪ್ಪಟ ಜಾತೀವಾದಿಯಾಗಿದ್ದಾರೆ ಚಂಪಾ. ರಾಮಾಯಣ ಓದುವವರೆಲ್ಲಾ ಭಯೋತ್ಪಾದಕರು ಎಂದು ತನ್ನ ನಾಲಗೆಯನ್ನು ತನಗೆ ಬೇಕಾದಂತೆ ಹರಿಯಬಿಟ್ಟಿದ್ದ ಚಂಪಾ ಮೇಲೆ ಈ ಮುಂಚೆ ಪ್ರಕರಣ ದಾಖಲಾಗಿತ್ತು. ಇಂತಹಾ ಚಂಪಾರನ್ನು ಸಮ್ಮೇಳನಾಧ್ಯಕ್ಷ ಮಾಡಿದ್ದು ಎಷ್ಟು ಸರಿ? ಕರ್ನಾಟಕದಲ್ಲಿ ಬೇರೆ ಯಾರು ಸಾಹಿತಿಗಳೇ ಇರಲಿಲ್ಲವೇ?

ಇಷ್ಟೆಲ್ಲಾ ಎಡವಟ್ಟು ಮಾಡಿದ್ದ ಚಂಪಾನನ್ನು ಇಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕನ್ನಡ ನಾಡು ನುಡಿ ರಕ್ಷಣೆ ಇತ್ಯಾದಿ ವಿಷಯಗಳಿಗೆ ವೇದಿಕೆಯಾಗಬೇಕಾಗಿದ್ದ ಸಮ್ಮೇಳನದಲ್ಲಿ ರಾಜಕೀಯ ಪ್ರಸ್ತಾಪವನ್ನು ಮಾಡಿರುವುದು ಚಂಪಾರಿಗೆ ಶೋಭೆ ತರುತ್ತದೆಯೇ? ಇಂಥಹಾ ಕಹಿ ಘಟನೆ ಎಂದೂ ನಡೆದಿರಲಿಲ್ಲ. ಪಕ್ಕಾ ಲೋಕಲ್ ರಾಜಕಾರಣಿಯಂತೆ ಶಿಕ್ಷಣ ಸಚಿವ ತನ್ವೀರ್ ಸೇಠ್‍ರನ್ನು ಸಂಪುಟದಿಂದ ಕೈಬಿಡಿ. ಅವರು ಸರಿಯಿಲ್ಲ. ಇಂದು ಸಮ್ಮೇಳನಕ್ಕೂ ಕೂಡ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲು ಸಮ್ಮೇಳನವನ್ನೇ ವೇದಿಕೆಯನ್ನಾಗಿಸಬೇಕಿತ್ತೇ?

ಒಟ್ಟಾರೆ ಚಂಪಾ ಅವರು 83ನೇ ಸಾಹಿತ್ಯ ಸಮ್ಮೇಳನವನ್ನು ಕಾಂಗ್ರೆಸ್ ಮತಪ್ರಚಾರದ ಸಮ್ಮೇಳನವನ್ನಾಗಿಸಿದ್ದು ವಿಪರ್ಯಾಸ….!

ಚೇಕಿತಾನ

Tags

Related Articles

Close