ಅಂಕಣದೇಶಪ್ರಚಲಿತ

ಮೊಯೀನ್ ಖುರೇಶಿ ಯಾರು ಗೊತ್ತೇ?! ಈತನ ಬಂಧನ ಯಾಕಾಯಿತೆಂದು ಗೊತ್ತೇ?! ಕಾಂಗ್ರೆಸ್ ಗೆ ಯಾಕೆ ಖುರೇಶಿ ಅತಿ ಮುಖ್ಯವಾದ ವ್ಯಕ್ತಿ ಎಂಬುದು ಗೊತ್ತೇ?!

ನರೇಂದ್ರ ಮೋದಿ ಸರಕಾದ ಅಸ್ತಿತ್ವಕ್ಕೆ ಬಂದ ನಂತರ ದೇಶದ ಸ್ಥಿತಿಯಲ್ಲಿ ಹಲವು ರೀತಿಯ ಗಣನೀಯ ಬದಲಾವಣೆಗಳಾಗುತ್ತಿರುವುದು ಕಂಡುಬರುತ್ತಿದೆ. ಹಲವು
ರೀತಿಯ ಧೋ ನಂಬರ್ ಬಿಸಿನೆಸ್‍ಗಳ ಬಾಗಿಲುಗಳು ಮುಚ್ಚಲಾರಂಭಿಸಿವೆ. ಭ್ರಷ್ಟರ ಮೇಲೆ ದಾಳಿ ನಡೆಯುತ್ತಿದ್ದು, ಭ್ರಷ್ಟರೆಲ್ಲಾ ಜೈಲು ಸೇರುತ್ತಿದ್ದಾರೆ. ಭಾರತದ
ರಾಜಕೀಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕಾಣುತ್ತಿದ್ದು, ದೇಶ ಕೂಡಾ ಪ್ರಗತಿಯ ಪಥದಲ್ಲಿ ಮುಂದುವರಿಯುತ್ತಿದೆ. ಇದೇ ಸಂದರ್ಭದಲ್ಲಿ ವ್ಯಕ್ತಿಯೋರ್ವನ ಬಂಧನ ನಡೆದಿದ್ದು, ಈ ಬಂಧನ ದೇಶವನ್ನು 70 ವರ್ಷಗಳಿಂದ ಕೊಳ್ಳೆ ಹೊಡೆದಿದ್ದ ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಮೊಯಿನ್ ಖುರೇಶಿ…!!
ಮೊಯಿನ್ ಖುರೇಶಿ ಒಬ್ಬ ಪ್ರಮುಖ ಮಾಂಸ ರಫ್ತುದಾರ. ಈತ ತನ್ನ ಶಿಕ್ಷಣವನ್ನು ದೆಹಲಿಯ ದಿ ಎಲೈಟ್ ಡೂನ್ ಸ್ಕೂಲ್ ಹಾಗೂ ಸೈಂಟ್ ಸ್ಟೀಫನ್ಸ್ ಕಾಲೇಜ್‍ನಲ್ಲಿ ನಡೆಸಿದ್ದಾರೆ. ಖುರೇಶಿ ದೇಶದ ಹಲವು ಪ್ರಮುಖ ವ್ಯಕ್ತಿಗಳ ಜೊತೆ ಉತ್ತಮ ಬಾಂಧವ್ಯಹೊಂದಿದ್ದು, ಈ ಬಾಂಧವ್ಯದಿಂದ ಅನೇಕರು ಹಲವು ರೀತಿಯ ಲಾಭ ಪಡೆದುಕೊಂಡಿದ್ದಾರೆ. 1993ರಲ್ಲಿ ಉತ್ತರ ಪ್ರದೇಶದ ರಾಂಪುರ್ ಎಂಬಲ್ಲಿ ಖುರೇಶಿ ಮಾಂಸ ವ್ಯವಹಾರದಲ್ಲಿ ತೊಡಗಿದರು. ಇದಾದ ಬಳಿಕ ಖುರೇಶಿಯ ವ್ಯವಹಾರ ಉತ್ತುಂಗಕ್ಕೆ ಸಾಗುತ್ತಾ ಬಂದಿತ್ತಲ್ಲದೆ, ಆ ಬಳಿಕ ಆತ ತಿರುಗಿ ನೋಡಲಿಲ್ಲ. ಅನೇಕ ಅಕ್ರಮಗಳಲ್ಲಿ ತೊಡಗಿ ಹಾಯಾಗಿದ್ದ ಮೊೈನ್ ಖುರೇಶಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ. ಈತನ ಬಂಧನಕ್ಕೆ ಕಾರಣವೇನು ಗೊತ್ತಾ? ದೇಶದ ಕೆಲವೊಂದು ಉನ್ನತ ಸಮಾಜ ಸೇವಕ’ರ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವುದು. ಈ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈತನನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈತ ತನಿಖೆಗೆ ಸಹಲಕರಿಸುತ್ತಿಲ್ಲ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.

ಖುರೇಶಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸಲು ಹಲವರ ನಿಕಟ ಸಂಪರ್ಕ ಹೊಂದಿದ್ದರು. ಇದರಿಂದ ಆತನಿಗೂ ಲಾಭ, ಈತನ ಜೊತೆ ಸಂಬಂಧಹೊಂದಿದವರಿಗೂ ಲಾಭವಿತ್ತು. ಖುರೇಶಿಯ ಡೈರಿಯಲ್ಲಿ ಸಿಬಿಐ ಮಾಜಿ ನಿರ್ದೇಶಕ ಎ.ಪಿ ಸಿಂಗ್ ಭೇಟಿಯಾಗಿರುವ ವಿಷಯವನ್ನು ಬರೆದಿರುವುದನ್ನು ಗಮನಿಸಿದ ಸಿಬಿಐ ಸಿಂಗ್ ಅವರನ್ನು ಬಂಧಿಸಿತ್ತು. ಖುರೇಶಿಗೆ ಸಿಬಿಐನ ಮತ್ತೊಬ್ಬ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಜೊತೆಯಲ್ಲೂ ಸಂಪರ್ಕವಿದ್ದು, 15 ತಿಂಗಳ ಅವಧಿಯಲ್ಲಿ 90 ಸಲ ಖುರೇಶಿಯನ್ನು ಭೇಟಿಯಾಗಿದ್ದರು. ಎಂದು ಉಲ್ಲೇಖವಿದೆ. ಖುರೇಶಿಯ ಪತ್ನಿಯೂ ಸಿನ್ಹಾ ಅವರನ್ನು ಆಗಾ ಭೇಟಿಯಾಗುತ್ತಿದ್ದರೆಂದು ಹೇಳಲಾಗುತ್ತಿದೆ.

ಮೊೈನ್ ಖುರೇಶಿಯನ್ನು ಈ ಮುಂಚೆ ಎರಡು ಸಲ ಬಂಧಿಸಲಾಗಿದ್ದು, ಎರಡು ಪ್ರಕರಣಗಳನ್ನು ದಾಖಲಿಸಲಾಗಿತ್ತು. 2015ರಲ್ಲಿ ಖುರೇಶಿ ವಿರುದ್ಧ ಅಕ್ರಮ ಹಣ
ವರ್ಗಾವಣೆ ತಡೆ ಕಾಯಿದೆ(ಪಿಎಂಎಲ್‍ಎ) ಪ್ರಕಾರ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿತ್ತು. ಖುರೇಶಿ ಹವಾಲ ಮುಖಾಂತರ ಲಂಡನ್, ಪ್ಯಾರಿಸ್, ಸ್ವಿಝರ್‍ಲ್ಯಾಂಡ್, ಹಾಂಗ್‍ಕಾಂಗ್ ಮುಂತಾದ ಕಡೆಗಳಿಗೆ ದೇಶದ ಕೆಲವೊಂದು ಉನ್ನತ ಹುದ್ದೆಯಲ್ಲಿದ್ದ ಸಮಾಜಸೇವಕರ ದೊಡ್ಡ ಪ್ರಮಾಣದ ಹಣವನ್ನು ಹವಾಲ ಮುಖಾಂತರ ಸಾಗಿಸುವುದನ್ನು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿತ್ತು.

ಆದಾಯ ತೆರಿಗೆ ಅಧಿಕಾರಿಗಳು ಇಷ್ಟು ಮಾತ್ರವಲ್ಲ, ಇನ್ನೂ ಅನೇಕ ವಿಷಯಗಳನ್ನು ಪತ್ತೆಹಚ್ಚಿತ್ತು. ಖುರೇಶಿ ದೇಶದ ಹಲವು ಪ್ರಭಾವಶಾಲಿ ವ್ಯಕ್ತಿಗಳಿಂದ ಹಣ
ಸಂಗ್ರಹಿಸಿ ವಿದೇಶಿ ಬ್ಯಾಂಕ್‍ಗಳಿಗೆ ವರ್ಗಾಯಿತ್ತಿರುವುದನ್ನೂ ಪತ್ತೆ ಹಚ್ಚಿತ್ತು. ಈ ಬಗ್ಗೆ ಕೆಲವೊಂದು ಮೂಲಗಳಿಂದ ಐಟಿ ಇಲಾಖೆಗೆ ಸಂದೇಶಗಳೂ ಬಂದಿತ್ತು. ಖುರೇಶಿ ಹೈದರಬಾದ್‍ನ ಉದ್ಯಮಿಯೊಬ್ಬರ ಕೋಟಿಗಟ್ಟಲೆ ಹಣವನ್ನು ವರ್ಗಾಯಿಸಿದ್ದಾರೆನ್ನಲಾಗಿದೆ. ಬೇರೆ ಕಡೆ ವಲಸೆಹೋಗಿದ್ದ ವ್ಯಕ್ತಿಗಳ ಜೊತೆಯೂ ಖುರೇಶಿಗೆ ಸಂಪರ್ಕವಿದ್ದಿತ್ತು. ಖುರೇಶಿ ವಿರುದ್ಧ ಹಣ ವರ್ಗಾವಣೆ, ಭ್ರಷ್ಟಾಚಾರ, ಬಹಿರಂಗಪಡಿಸದ ಆಸ್ತಿ ವಿಚಾರವಾಗಿ ಹಲವು ಪ್ರಕರಣಗಳೂ ದಾಖಲಾಗಿದೆ. ಖುರೇಶಿ ಸ್ವಲ್ಪ ವರ್ಷದಲ್ಲೇ ಸುಮಾರು 25 ಕಂಪೆನಿಗಳನ್ನು ತೆರದಿದ್ದರು. 2011ರಲ್ಲಿ ಏರ್‍ಪೋರ್ಟ್ ಅಧಿಕಾರಿಗಳನ್ನು ತನ್ನ ತೆಕ್ಕೆಗೆ ಹಾಕಲು ನೋಡಿರುವುದು ವರದಿಯಾಗಿತ್ತು. ಖುರೇಶಿ ಸ್ವಿಝರ್‍ಲ್ಯಾಂಡ್, ದಕ್ಷಿಣ ಆಫ್ರಿಕಾ, ದುಬೈಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅವುಗಳೆಲ್ಲಾ ಸ್ಕ್ಯಾನರ್‍ಗ: ನಿಯಂತ್ರಣದಲ್ಲಿತ್ತು.

ಖುರೇಶಿ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ರಹಾತ್ ಫತೇಹ್ ಅಲಿ ಖಾನ್‍ಳ ಮಗಳು ಪೆರ್ನಿಯಾಳನ್ನು ಮದುವೆಯಾದ. ಒಮ್ಮೆ ದೆಹಲಿಯ ವಿಮಾನ ನಿಲ್ದಾಣದಲ್ಲಿ
ಸಾಕಷ್ಟು ಬಹಿರಂಗಪಡಿಸದ ಹಣದೊಂದಿದೆ ಸಿಕ್ಕಿಬಿದ್ದ ಘಟನೆಯೂ ನಡೆದಿತ್ತು.ಹಲವು ಆರೋಪಗಳಿದ್ದರೂ ಖುರೇಶಿಯನ್ನು ಈತನಕ ಬಂಧಿಸಿರಲಿಲ್ಲ. ಈತ ಸೋನಿಯಾ ಗಾಂಧಿ ಜೊತೆ ನಿಕಟವರ್ತಿಯಾಗಿರುವುದರಿಂದ ಬಂಧಿಸದಂತೆ ರಕ್ಷಿಸಲಾಗುತ್ತಿದೆ ಎಂದು ಕಳೆದಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರು. ಸಿಬಿಐಯ ಇತ್ತೀಚಿನ ತನಿಖಾ ವರದಿಯ ಪ್ರಕಾರ ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವಿಗೂ ಖುರೇಶಿಗೂ ಸಂಬಂಧವಿರಬಹುದೆಂದು ತಿಳಿಸಿತ್ತು. ಸುನಂದಾ ಪುಷ್ಕರ್ ಕೊಲೆಯಲ್ಲಿ ಈತನ ಪಾತ್ರವೂ ಇರಬಹುದೆಂದು ಶಂಕಿಸಲಾಗಿದೆ.

ಕಾಂಗ್ರೆಸ್ ಜೊತೆ ಖುರೇಶಿಗಿದೆ ನಿಕಟ ಸಂಬಂಧ!!

ಮೊೈನ್ ಖುರೇಶಿಗೆ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಜೊತೆ ಮೊದಲಿಂದಲೂ ಒಡನಾಟವಿದೆ. ಆತನ ಪುತ್ರಿ ಪೆರ್ನಿಯಾ ದುಬೈ ಮೂಲದ ವಾಣಿಜ್ಯೋದ್ಯಮಿಯನ್ನು ಮದುವೆಯಾದಳು. ಆತ ಯುಪಿಎ ಅವಧಿಯಲ್ಲಿ ಮಂತ್ರಿಯಾಗಿದ್ದ ಜಿತಿನ್ ಪ್ರಸಾದ್ ಜೊತೆ ಉತ್ತಮ ಒಡನಾಟ ಹೊಂದಿದ್ದಾನೆ.
ಇಷ್ಟು ಮಾತ್ರವಲ್ಲದೆ ಈತನಿಗೆ ಪಾಕಿಸ್ತಾನದ ಕೆಲವೊಂದು ಉದ್ಯಮದ ಜೊತೆಯೂ ವ್ಯವಹಾರ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು. ಪಾಕಿಸ್ತಾನದ ಜೊತೆಯೂ ಹಣ ವರ್ಗಾವಣೆ ದಂಧೆಯಲ್ಲಿ ಖುರೇಶಿ ಶಾಮೀಲಾಗಿದ್ದು, ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‍ಐ ಜೊತೆಯೂ ಹಣದ ಚಟುವಟಿಕೆ ಇತ್ತೆಂದು ಆರೋಪಿಸಲಾಗಿದೆ.
ಜಾರಿ ನಿರ್ದೇಶನಾಲಯದ ನ್ಯಾಯಾಧೀಶ ಅಂಕುರು ಭಾರದ್ವಾಜ್ ಅವರು ಖುರೇಶಿಗೆ ಆಗಸ್ಟ್ 31ರವರೆಗೆ ಕಸ್ಟಡಿ ವಿಧಿಸಿ ಆದೇಶಿಸಿದ್ದಾರೆ. ಸುಮಾರು 200 ಕೋಟಿ ರೂ.ನಷ್ಟು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪವಿದೆ. ಒಂದು ವೇಳೆ ಈತನಿಗೆ ಪಾಕಿಸ್ತಾನದ ಐಎಸ್‍ಐ ಜೊತೆ ಸಂಬಂಧವಿರುವುದು ಕಂಡುಬಂದಿದೆ. ಜೊತೆಗೆ ಈತನ ಬಂಧನದ ಬಳಿಕ 10 ಜನಪಥ್ ಪ್ರದೇಶವೂ ಕೂಡಾ ಮುಖ್ಯವಾಹಿನಿಗೆ ಬರಬಹುದು. ಇಲ್ಲಿ ಇರುವುದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಇದೆಲ್ಲಾ ರಾಜ್ಯಸಭಾ ಚುನಾವಣೆಯ ನಂತರ ಅಹ್ಮದ್ ಪಾಟೇಲ್‍ಗೆ ಮತ್ತೊಂದು ತಲೆನೋವು ಶುರುವಾದಂತಾಗಿದೆ.

ಮೊೈನ್ ಖುರೇಶಿ ಬಲೆಗೆ ಬಿದ್ದಿರುವು ದೊಡ್ಡ ಮೀನಾಗಿದ್ದು, ಈತನ ಬಂಧನದ ಬಳಿಕ ಇನ್ನೂ ದೊಡ್ಡ ದೊಡ್ಡ ತಿಮಿಂಗಿಲಗಳು ಬಲೆಗೆ ಬೀಳುವ ಸಾಧ್ಯತೆ ಇದೆ.
ಯಾಕೆಂದರೆ ಈತನಿಗೆ ಸಾರ್ವಜನಿಕ ಸೇವೆಯಲ್ಲಿನ ಅತಿ ದೊಡ್ಡ ದೊಡ್ಡ ಗಣ್ಯರು, ದೊಡ್ಡ ದೊಡ್ಡ ರಾಜಕಾರಣಿಗಳು, ಪ್ರಭಾವಿ ಉದ್ಯಮಿಗಳು, ಪ್ರಭಾವಿ ಮಾಧ್ಯಮದವರ ಜೊತೆ ನಿಕಟ ಸಂಬಂಧವಿರುವುದು ಪತ್ತೆಯಾಗಿದೆ. ಈತ ಅಧಿಕಾರಿಗಳಲ್ಲಿ ಎಲ್ಲಾ ವಿಷ್ಯ ಬಾಯ್ಬಿರೆ ಹಲವರ ಕುತ್ತಿಗೆಗೆ ಬರಬಹುದು. ಇದು ದೇಶದಲ್ಲಿ ದೊಡ್ಡದೊಂದು ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಬಹುದು. ಅಗಸ್ಟಾ ವೆಸ್ಟ್‍ಲ್ಯಾಂಡ್ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣಗಳೂ ಮತ್ತೊಮ್ಮೆ ಸಂಚಲನ ಸೃಷ್ಟಿಸಬಹುದು.

Original source; https://rightlog.in/2017/08/moin-qureshi-01/

-ಚೇಕಿತಾನ

Tags

Related Articles

Close