ಪ್ರಚಲಿತ

ಮೋದಿಯನ್ನು ಇವರ್ಯಾಕೆ ಇಷ್ಟು ದ್ವೇಷಿಸುತ್ತಾರೆ?! ಮೋದಿ ವಿರೋಧಿಗಳ ಬಗ್ಗೆ ಒಂದು ವಿಶ್ಲೇಷಣೆ!

ಭಾರತದ ಗೌರವಾನ್ವಿತ ಪ್ರಧಾನಿ ನರೇಂದ್ರಮೋದಿಯವರನ್ನು ಜನರು ದ್ವೇಷಿಸಲು ಕೂಡ ಇಷ್ಟಪಡುತ್ತಾರೆ!! ಸಹಜವಾಗಿ, ಪ್ರಧಾನಿ ಮೋದಿಯವರು ಹಲವು ಕಡೆಗಳಲ್ಲಿ ಅನೇಕ ಬೆಂಬಲಿಗರನ್ನು ಮತ್ತು ಅನುಯಾಯಿಗಳನ್ನು ಹೊಂದಿದ್ದಾರಲ್ಲದೇ, ಇವೆರಲ್ಲರೂ ಕೂಡ ಮೋದಿಯನ್ನು ಇಷ್ಟಪಡುತ್ತಾರೆ. ಆದರೆ ಮೋದಿಯನ್ನು ವಿರೋಧಿಸುವುದು ಮಾತ್ರ ಇಲ್ಲಿರುವ ಮಾಧ್ಯಮಗಳು ಎನ್ನುವುದು ವಿಪರ್ಯಾಸ!! ಅಷ್ಟೇ ಅಲ್ಲದೇ ಮೋದಿಯ ಮೇಲೆ ದ್ವೇಷಕಾರುವ ಕೆಲಮಾಧ್ಯಮಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿರುವುದು ಮಾತ್ರ ನಿಜ!!

ನಾನು ಭಾರತೀಯ ಮೂಲದ ಯು.ಎಸ್ ಪ್ರಜೆ. ವೈಯಕ್ತಿಕವಾಗಿ ಮತ್ತು ವೃತ್ತಿಪರ ಕಾರಣಗಳಿಂದ ನಾನು ಭಾರತದಲ್ಲಿ ವಾಸಿಸುತ್ತಿದ್ದೇನೆ ಹಾಗಾಗಿ ನಾನು
ಭಾರತದಲ್ಲಿಯೇ ಕೆಲಸವನ್ನು ಮಾಡುತ್ತಿದ್ದೇನಲ್ಲದೇ, ಅನೇಕ ಹೂಡಿಕೆಗಳನ್ನು ನಾನು ಹೊಂದಿರುವುದರಿಂದ, ನಾನು ಭಾರತವು ಏಳಿಗೆಯಾಗಬೇಕೆಂದು ಬಯಸುತ್ತೇನೆ!!

ಈ ಹಿನ್ನಲೆಯಲ್ಲಿ, ಭಾರತದಲ್ಲಿ ನಾನು ನೋಡಿರುವ ಹಾಗೆ, ಕೆಲವು ಅಸ್ಪಷ್ಟವಾದ ಕೆಲವು ಗೊಂದಲಗಳ ಬಗ್ಗೆ ಹಾಗೂ ತೊಂದರೆಗೀಡಾಗಿರುವ ಬಗ್ಗೆ ನಾನು
ಒಪ್ಪಿಕೊಳ್ಳಲೇಬೇಕು!! ನಾನು, ಅನೇಕ ಭಾರತೀಯರನ್ನು ಗಮನಿಸಿದ ಅತ್ಯಂತ ವಿಸ್ಮಯಕಾರಿ ವಿಷಯವೆಂದರೆ ಭಾರತದಲ್ಲಿ ಭಾರತೀಯರಿಗೆ ಭಾರತ ಪ್ರಬಲವಾಗಿರುವ ರಾಷ್ಟ್ರವಾಗಲು ಬಯಸುವುದಿಲ್ಲ, ಯಶಸ್ವಿಯನ್ನು ಹೊಂದಲು ಬಯಸುವುದಿಲ್ಲ, ಅಲ್ಲದೇ ನಿಜವಾದ ಬದಲಾವಣೆಯಾಗಬೇಕೆಂದು ಕೂಡ ಬಯಸುವುದಿಲ್ಲ, ಅಷ್ಟೇ ಅಲ್ಲದೇ ಭಾರತ ಖಂಡಿತಾವಾಗಿಯೂ ಗೆಲ್ಲಬಾರದೆಂದೇ ಬಯಸುತ್ತಾರೆ!! ಈ ಸ್ವ-ದ್ವೇಷ ಮತ್ತು ಸ್ವಯಂ ಕೇಂದ್ರೀಕರಣದಿಂದಾಗಿ, ವೈಯಕ್ತಿಕ ಅಥವಾ ಪಂಥೀಯ ಹಿತಾಸಕ್ತಿಯಿಂದ ಸಮಾಜಕ್ಕೆ ನೀಡುವ ಮೂಲಭೂತ ಅಸಮರ್ಥನೆಯನ್ನು ನೋಡಿರುವ ನಾನು ಕೆಲವು ರಹಸ್ಯಗಳನ್ನು ಗುರುತಿಸಿದ್ದು ಅದನ್ನು ನಿಮ್ಮ ಮುಂದೆ ಹೇಳಲು ಇಚ್ಚಿಸಿದ್ದೇನೆ!!

ಮೋದಿ ವಿಮರ್ಶಕರು ಮತ್ತು ಕೆಲವರ್ಗಗಗಳು…!!!

ಹಲವು ವರ್ಷಗಳಿಂದ ನಾನು ಸಾಕಷ್ಟು ವಿಮರ್ಶಕರನ್ನು ನೋಡಿದ್ದೇನೆ ಹಾಗೂ ಮಾತಾನಾಡಿದ್ದೇನೆ. ಈ ಎಲ್ಲಾ ವಿಮರ್ಶಕರಲ್ಲಿ ಯಾರು ಸಂಪೂರ್ಣವಾಗಿ ದ್ವೇಷಿಸುತ್ತಾರೆ ಅಥವಾ ಯಾರು ನಿರಾಶೆಗೊಳಗಾಗಿದ್ದಾರೆ ಎನ್ನುವುದರ ಬಗ್ಗೆ ಕೆಲವು ವಿಭಾಗಗಳನ್ನು ಮಾಡಿದ್ದೇನೆ!!

1. ವೃತ್ತಿಪರ ಮೋದಿ ವಿರೋಧಿಗಳು

ಕೆಲವೊಂದು ಮುಖ್ಯವಾಹಿನಿಗಳು ಮತ್ತು ವೃತ್ತಿಪರ ಉದ್ಯಮಿಗಳು 2002ರಲ್ಲಿ ಗುಜರಾತ್‍ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಬಗ್ಗೆ ಸಾಮಾನ್ಯ ಜನರಿಗೆ ಹೇಳಿ, ಜನರನ್ನು ಮರಳು ಮಾಡುವುದೇ ಇವರ ಕಾಯಕವಾಗಿದೆ!! ಸ್ವಯಂ-ಘೋಷಿತ ಎಡಪಂಥೀಯ ಉದಾರವಾದಿಗಳು, ಕಾಂಗ್ರೆಸ್ ಪಕ್ಷದ ಬೆಂಬಲಿಗರು ಮತ್ತು ಅವರ ಅನುಯಾಯಿಗಳೆಲ್ಲರೂ ನಿಸ್ಸಂಶಯವಾಗಿ, ಇಡೀ ರಾಜಕೀಯ ಪಕ್ಷದ ಪರಿಸರ ವ್ಯವಸ್ಥೆಯೇ ಜನಸಾಮಾನ್ಯರನ್ನು ಮರುಳುಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ!! ಹಾಗಾಗಿ ಈ ಮಾತಿಗೆ ಮರುಳಾದ ಸಾಮಾನ್ಯಜನರು ತನ್ನ ಮನಸ್ಸನ್ನು ಸಂಪೂರ್ಣವಾಗಿ ಬದಲಿಸಿ ಮೋದಿಯನ್ನು ವಿರೋಧಿಸುವಂತೆ ಮಾಡಿದ್ದಾರೆ!!

2. ಅನ್ಯಾಯಕ್ಕೊಳಗಾದ ವರ್ಗ:

70 ವರ್ಷಗಳಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿದ್ದು, ಅಲ್ಪಸಂಖ್ಯಾತರು ಮತ ಬ್ಯಾಂಕಿನ ಅಂಚಿನಲ್ಲಿದ್ದಾರೆ!! ಹಾಗಾಗಿ ಸರಕಾರವು ಹಿಂದೂ ದೇವಾಲಯಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರಿಗೆ ಮೀಸಲಾತಿ ವ್ಯವಸ್ಥೆ ಮತ್ತು ಸಬ್ಸಿಡಿಗಳನ್ನು ನೀಡುತ್ತಿದೆ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಭಿತ್ತರಿಸುತ್ತಿದೆ!! ಆದರೆ ಮಾಧ್ಯಮಗಳು ಈ ಬಗ್ಗೆ ಮೋದಿ ವಿರೋಧಿ ಮಾಹಿತಿಗಳನ್ನು ನೀಡುತ್ತಿದೆ!! ಅಷ್ಟೇ ಅಲ್ಲದೇ ಮೋದಿಯ ವಿರುದ್ದವಾಗಿರುವ ಕೆಲ ಮಾಹಿತಿಯನ್ನು ಕಲೆಹಾಕಿ ಅದರ ಬಗ್ಗೆ ವಿಮರ್ಶಾತ್ಮಕ ಚಿಂತನೆಗಳನ್ನು ನೀಡುತ್ತಿರುವ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿದೆ!! ಇದರ ಪ್ರಭಾವದಿಂದ ಈ ವರ್ಗದ ಜನರು, ಮೋದಿಯಿಂದ ಯಾವುದೇ ರೀತಿಯಾ ಬದಲಾವಣೆಯಾಗುತ್ತಿಲ್ಲ ಎಂದು ಹೇಳುವಷ್ಟರ ಮಟ್ಟಿಗೆ ಜನರಲ್ಲಿ ನಿರಾಸೆಯನ್ನು ಹುಟ್ಟಿಸುವಲ್ಲಿ ಕಾರಣಕರ್ತರಾಗುತ್ತಾರೆ ಈ ಮಾಧ್ಯಮದವರು!! ಅಷ್ಟೆ ಅಲ್ಲದೇ, ಜನರಿಗೆ ಸಾಮಾಜಿಕ ಮತ್ತು ಕಾನೂನು ವಿರೂಪಗಳನ್ನು ತೋರಿಸಿ ಸಮಸ್ಯೆಗಳು ಹೆಚ್ಚಾಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಜನಸಾಮಾನ್ಯರ ಮನಸ್ಸನ್ನು ಮೋದಿಯನ್ನು ವಿರೋಧಿಸುವಂತೆ ತೋರಿಸಿ, ಈ ಸಮಸ್ಯೆಗಳನ್ನು ಯಾವತ್ತು ಪರಿಹರಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರೇರಣೆಯನ್ನೂ ನೀಡುತ್ತಾರೆ.

3. ‘ಸಿಂಗಿಸ್’ಗಳ ವರ್ಗ:

ಈ ವರ್ಗದ ಜನರು ಸಂಪೂರ್ಣವಾಗಿ ಮೋದಿಯವರನ್ನು ಪ್ರಧಾನಿಯಾಗಿ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರೂ ಕೂಡ ಮೋದಿ ವಿಫಲರಾಗಿದ್ದಾರೆ ಎಂದು ಅವರೇ ನಿರ್ಧರಿಸುದ್ದಾರೆ!! ಇವರೆಲ್ಲ ಕಾಂಗ್ರೆಸ್ ಪಕ್ಷದ ಬೆಂಬಲಿಗರಲ್ಲ. ಆದರೆ ಇವರೆಲ್ಲಾ ಜನಸಾಮಾನ್ಯರು!! ಮೋದಿ ಒರ್ವ ನಿಪುಣ ಆರ್ಥಿಕತಜ್ಞ ಮತ್ತು ಯೋಗ್ಯ ಮನುಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ!! ಆದರೆ ನಾನು ಗಮನಿಸಿರುವ ಹಾಗೆ ಸಿಖ್ಖರು ತಮ್ಮ ಜನಾಂಗದ ವ್ಯಕ್ತಿಯಾದ ಮನಮೋಹನ್ ಸಿಂಗ್ ಅಧಿಕಾರದಲ್ಲಿರಬೇಕಾದರೆ ತುಂಬಾ ಸಂತಸವನ್ನು ವ್ಯಕ್ತಪಡಿಸಿದ್ದರು. ಆದರೆ ಮನಮೋಹನ್ ಸಿಂಗ್ ಅವರ ವೈಫಲ್ಯತೆಯನ್ನು ಜೀರ್ಣಿಸಿಕೊಳ್ಳಲು ಇವರಿಂದ ಸಾಧ್ಯವಾಗಿರಲಿಲ್ಲ!! ಇದು ಧರ್ಮದ ವಿಚಾರವಲ್ಲ. ಆದರೆ ಒಬ್ಬ ಪ್ರಧಾನಿಯಾಗಿ ತಮ್ಮವರನ್ನಾದರೂ ಹೆಮ್ಮೆ ಪಡಿಸಬಹುದಾಗಿತ್ತು. ಆದರೆ ಅವರಿದ್ದ ಎರಡು ಕಾಲಮಾನಗಳಲ್ಲಿ, ಈ ಜನರನ್ನು ಅಪಹಾಸ್ಯ ಮಾಡಿ ಅವಮಾನಿಸಿದ್ದಾರೆ!!

4. ಬದಲಾವಣೆಯನ್ನು ತಂದದ್ದಕ್ಕಾಗಿ ದ್ವೇಷಿಸುವ ವರ್ಗ:

ವೈಯಕ್ತಿಕವಾಗಿ ಇವರ್ಯಾರು ಮೋದಿಯನ್ನು ದ್ವೇಷಿಸುವುದಿಲ್ಲ ಆದರೆ ಬದಲಾವಣೆಯನ್ನು ಪ್ರತಿನಿಧಿಸುವ ಕಾರಣಕ್ಕಾಗಿ ದ್ವೇಷಿಸುತ್ತಾರೆ. ಯಾಕೆಂದರೆ ಇವರ್ಯಾರಿಗೂ ಬದಲಾವಣೆಯೇ ಬೇಕಾಗಿಲ್ಲ. ಯಾಕೆಂದರೆ ಇವರಿಗೆ ಹೊಸತನಕ್ಕೆ ಹೊಂದಾಣಿಕೆಯಾಗಲು ಕಷ್ಟ ಎನ್ನುವ ಕಾರಣಕ್ಕೆ ಮೋದಿಯ ಬದಲಾವಣೆಯನ್ನು ದ್ವೇಷಿಸುತ್ತಾರೆ. ದ್ವೇಷಿಸುವವರಲ್ಲಿ ವ್ಯಾಪಾರಿಗಳು, ದಲ್ಲಾಳಿಗಳು, ಕೈಗಾರಿಕೋದ್ಯಮಿಗಳು, ಆಡಳಿತಶಾಹಿಗಳು ತಮ್ಮ ಕೆಲಸಗಳಲ್ಲಿ ಬದಲಾವಣೆಯನ್ನು ತರಲು ಉದಾಸೀನ ತೋರಿಸುವ ಇವರು ದ್ವೇಷಿಸುವುದು ಸಹಜ!! ಆದರೆ, ಇವರ ನ್ಯಾಯೋಚಿತವಾದ ಮನಸ್ಸು ಏನು ಹೇಳುತ್ತೆ ಎಂದರೆ ‘ಮೋದಿ ಯಶಸ್ವಿಯಾಗಬೇಕೆಂದು ನಾನು ನಿಜವಾಗಿಯೂ ಬಯುಸುತ್ತೇನೆ ಆದರೆ….’ ಹೀಗೆ ತಮ್ಮ ಮಾತನ್ನು ಹೇಳುತ್ತಾರೆ. ಅಷ್ಟೇ ಅಲ್ಲದೇ, ಕೆಲವರು ಮೋದಿ ಸಿಎಂ ನಿಂದ ಪಿಎಂ ಅಧಿಕಾರದಲ್ಲಿ ಮುನ್ನಡೆಯನ್ನು ಸಾಧಿಸಲು ಇನ್ನೂ ಕಲಿಯಬೇಕಾಗಿದೆ, ಹಾಗಾಗಿ ಇವರು ಯೋಗ್ಯತೆಯನ್ನು ವೃದ್ದಿಸಿಲ್ಲ, ಸರ್ವಾಧಿಕಾರದ ಧೋರಣೆಯನ್ನು ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ಹೇಳುತ್ತಾರೆ!!

5. ಮೇಧಾವಿಗಳ ಸಮರ್ಥನೆ:

ಬುದ್ದಿಜೀವಿಗಳು, ಮೇಧಾವಿಗಳು, ಅನೇಕ ಪಧವಿಗಳನ್ನು ಹೊಂದಿದವರು ಏನು ಮಾಡಿದ್ದಾರೇ ಎಂದರೆ ತಮ್ಮ ಕೈಯಲ್ಲಿ ಒಂದು ಸಣ್ಣ ಪ್ರಮಾದ ಹಗ್ಗವನ್ನು ನೀಡಿ,
ಇನ್ನೊಂದು ಕೈಯಲ್ಲಿ ಬಂದೂಕು ಹಿಡಿದ್ದಾರೆ!! ಅಂದರೆ ಮೇಲ್ನೋಟಕ್ಕೆ ಮೋದಿಗೆ ಸಹಾಯ ಹಸ್ತ ನೀಡುತ್ತಾ, ಇನ್ನೊಂದು ಕಡೆ ವಿರೋಧವನ್ನು ಕಟ್ಟುತ್ತಿರುವ ವ್ಯಕ್ತಿಗಳು ಇವರು!! ಇವರೆಲ್ಲ 2012 ಮತ್ತು 2014ರಲ್ಲಿ ದೇಶದ ಸ್ಥಿತಿ ಹೇಗಿತ್ತು ಎಂಬುವುದರ ಬಗ್ಗೆ ಮೂಗು ತುರಿಸಿಕೊಂಡು ಅದನ್ನು ಒಪ್ಪಿಕೊಳ್ಳುತ್ತಾರೆ!! ಆದರೆ ಈ ಮೇಧಾವಿಗಳೆಲ್ಲರೂ ಏನು ಹೇಳುತ್ತಾರೆ ಎಂದರೆ ಮೋದಿ ಈ ದೇಶದಲ್ಲಿ ಶಿಕ್ಷಣ ಪಡೆದು, ದೇಶಿಯ ವಿಚಾರವನ್ನು ಮಾತ್ರ ತಿಳಿದಿರುವ ವ್ಯಕ್ತಿ!! ಆದರೆ ಪಾಶ್ಚಾತ್ಯ
ಸಂಕೀರ್ಣತೆಯ ಬಗ್ಗೆ ಯಾವುದೇ ರೀತಿಯ ತಿಳುವಳಿಕೆವನ್ನು ಹೊಂದಿಲ್ಲ ಎನ್ನುತ್ತಾರೆ!! “ಹಾಗಾಗಿ ಈ ವರ್ಗಕ್ಕೆ ನಾನು ಕೂಡ ಸೇರಿದ್ದೇನೆ”!! ಆದರೆ ಈ ಬುದ್ದಿ ಜೀವಿಗಳು ಏನೂ ಹೇಳುತ್ತಾರೆ ಎಂದರೆ, “ನಾವು ಮೋದಿಯನ್ನು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತೇವೆ, ಆದರೆ ರಘರಾಮ್ ರಾಜನ್ ಅವರನ್ನು ಮೋದಿಗಿಂತ ಹೆಚ್ಚಾಗಿಯೇ ಒಪ್ಪಿಕೊಳ್ಳುತ್ತೇವೆ” ಎನ್ನುತ್ತಾರೆ!! ಅಲ್ಲದೇ, ಆರ್ಥಿಕತೆ ಸ್ಥಿತಿಯ ಬಗ್ಗೆ ದೇಶದಲ್ಲಿ ಬದಲಾವಣೆಗಳು ಕಂಡರೆ ವಿರೋಧವನ್ನು ವ್ಯಕ್ತಪಡಿಸುವ ಇವರು, ಆರ್ಥಿಕತೆಯ ಬಗ್ಗೆ ಯಾವುದೇ ತಿಳುವಳಿಕೆಯನ್ನು ಹೊಂದದೆ ಮಾತಾನಾಡುವುದು ಮಾತ್ರ ವಿಪರ್ಯಾಸ!! ಅಷ್ಟೇ ಅಲ್ಲದೇ, “ನಮಗೂ ದೇಶದ ಸ್ಥಿತಿಗತಿ ಬದಲಾಗಬೇಕು, ಆದರೆ, ಚುನಾವಣೆಗಳನ್ನು ಗೆಲ್ಲುವುದಕ್ಕೂ ಮತ್ತು ಸರಕಾರವನ್ನು ನಡೆಸುವುದಕ್ಕೂ ತುಂಬಾ ವ್ಯತ್ಯಾಸ ಇದೆ” ಎನ್ನುತ್ತಾರೆ ಈ ಬುದ್ದಿಜೀವಿಗಳು!!!

6. ವರ್ಗೀಕೃತ ಸಂಸ್ಥೆಗಳಲ್ಲಿರುವ ವ್ಯಕ್ತಿಗಳು:

ಅನುವಂಶೀಯವಾಗಿ ಪ್ರಸ್ತುತ ಘಟನೆಗಳ ಬಗ್ಗೆ, ರಾಜಕೀಯ ಹಾಗೂ ಸಾಮಾಜಿಕ ವಿಷಯಗಳನ್ನು ಕುರಿತು ಬರೆಯುವ ವರ್ಗದವರು ಮೋದಿಯ ಬಗ್ಗೆ ವಟಗುಟ್ಟತ್ತಲೇ ಇರುತ್ತಾರೆ!!ಇವರೆಲ್ಲ ಕೆಲವು ಟ್ಯಾಬ್ಲಾಯ್ಡ್‍ಗಳನ್ನು ಹಾಗೂ ಕೆಲವು ವರ್ಗೀಕೃತ ಸಂಸ್ಥೆಗಳಲ್ಲಿ ಕೆಲವು ರಾಜಕೀಯ ವಿಚಾರದ ಬಗ್ಗೆ ಸ್ವಾಮಿನಿಷ್ಠೆಯನ್ನು ಹೊಂದಿದ್ದಾರೆ!! ಅಷ್ಟೇ ಅಲ್ಲದೇ ವ್ಯವಸ್ಥಿತವಾದ ಸೌಕಾರ್ಯವನ್ನು ತಮ್ಮ ಸುತ್ತಲು ಹೊಂದಿದ್ದು, ತಮ್ಮ ಸಾಧನೆಯಿಂದಲೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ವರ್ಗವಾಗಿದೆ!! ಹಾಗಾಗಿ ಈ ಒಂದು ವರ್ಗದ ಜನರು, ಮೋದಿ ಏನು ಹೇಳಬೇಕು, ಏನು ಧರಿಸಬೇಕು ಮತ್ತು ಏನು ಮಾಡಬೇಕು, ಮಾಡಬಾರದು ಎಂದು ಈ ಗುಂಪು ಸೂಚಿಸುತ್ತದೆ!! ಅಷ್ಟೇ ಅಲ್ಲದೇ ಇವರೆಲ್ಲರೂ ಕೂಡ ದೇಶದ ರಕ್ಷಣೆ ಹಾಗೂ ಆರ್ಥಿಕತೆಯ ಬಗ್ಗೆ ಏನಾದರೂ ಮೋದಿ ವಿರೋಧವಾಗಿ ಕಮೆಂಟ್ ಮಾಡುವುದೇ ಇವರ ಕೆಲಸ!!

7.ಸೆಲೆಬ್ರಿಟಿಗಳ ವರ್ಗ:

ಬಾಲಿವುಡ್‍ನಲ್ಲಿರುವ ಕೆಲವು ತಾರೆಯರು, ಸ್ಯಾಂಡಲ್‍ವುಡ್, ಟಾಲಿವುಡ್ ಹೀಗೆ ‘ವುಡ್’ಗಳಲ್ಲಿ ಹೆಸರುವಾಸಿಯಾದ ಕೆಲ ಸೆಲೆಬ್ರಿಟಿಗಳು ಭಾರತದಲ್ಲಿ ತಮ್ಮದೇ ಆದ ಛಾಪನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮೋದಿಯನ್ನು ಬೆಂಬಲಿಸಿ ಅವರ ವಿಚಾರವಾಗಿ ಸಹಾಯ ಹಸ್ತವನ್ನು ಮಾಡಲು ಪ್ರಯತ್ನಿಸುತ್ತಾರೆ. ಆದರೆ, ತಮ್ಮ
ಸಹಪಾಠಿಗಳು ಮೋದಿಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದರೆ, ಇವರ ಹಿಂದೆ ಹೋಗಿ ಮೋದಿಯನ್ನು ತೆಗಳುವವರ ಕಡೆ ನಿಂತು ‘ಉಚಿತ ಭಾಷಣ’ವನ್ನು
ನೀಡುತ್ತಾರೆ!!

8. ಮಹಾತ್ವಾಕಾಂಕ್ಷಿಗಳು:

ಮೋದಿಯ ಬೆಂಬಲಿಗರು ಮೋದಿಯ ಮೇಲೆ ಭರವಸೆಯನ್ನು ಹೊಂದಿದ್ದರು ಕೂಡ, ತಮಗೆ ಸಿಗುವ ಭರವಸೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ!! ಆದರೆ ಈ ಜನಸಾಮಾನ್ಯರು ದೇಶದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದು, ರಾಷ್ಟ್ರವನ್ನು ಸುಲಭವಾಗಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದಾರೆ!! ಅಲ್ಲದೇ ನ್ಯಾಯಕ್ಕಾಗಿ ಹೋರಾಟ ನಡೆಸುವುದಲ್ಲದೇ, ಹಲವು ಮಹಾತ್ವಾಕಾಂಕ್ಷೆಯನ್ನು ಹೊಂದಿರುವವರಾಗಿದ್ದಾರೆ!! ಇದರಲ್ಲಿ ರಾಜಕಾರಣಿಗಳು, ಮಾಜಿ ಸಿಇಒಗಳು, ಶಿಕ್ಷಣತಜ್ಞರು, ಲೇಖಕರು ಈ ಒಂದು ವರ್ಗದಲ್ಲಿದ್ದು, ಇವರೆಲ್ಲರು ಕೂಡ ಸ್ವಯಂಪ್ರಚೋದನೆಯ ಭಾವನೆಗಳನ್ನು ದೇಶದ ಮುಂದಿಟ್ಟು, ತಮಗೇನು ಲಾಭ ಎನ್ನುವುದನ್ನೇ ಯೋಚನೆ ಮಾಡುತ್ತಾರೆ!!

9. ಆಧುನಿಕ ಜನವರ್ಗ:

ಮುಂದುವರೆದ ಸಮಾಜದಲ್ಲಿ, ಎಲ್ಲರೂ ವಿದ್ಯಾಭ್ಯಾಸವನ್ನು ಪಡೆದು, ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ!! ಅಲ್ಲದೆ, ಇವರೆಲ್ಲರೂ ಕೂಡ ಮೋದಿಯವರ ಬಗ್ಗೆ ದಿನಪತ್ರಿಕೆಗಳನ್ನು ಮತ್ತು ಟಿವಿಯಲ್ಲಿ ಭಿತ್ತರಿಸುವ ಅರ್ಧಜ್ಞಾನ ತುಂಬಿದ ಅಪಾಯಕಾರಿ ವಿಚಾರಗಳನ್ನು ತಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಾರೆ. ತದನಂತರದಲ್ಲಿ ಈ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳನ್ನು ಬರೆದು ಅಥವಾ ವ್ಯಾಖ್ಯಾನಿಸಿ ಟ್ರೋಲ್‍ಗಳನ್ನು ಮಾಡುತ್ತಾರಲ್ಲದೇ ಅಪಪ್ರಚಾರಗಳನ್ನು ಸೃಷ್ಟಿಸುತ್ತಾರೆ!! ಅಷ್ಟೇ ಅಲ್ಲದೇ ಮೋದಿಯ ಬೆಂಬಲಿಗರನ್ನು ಭಕ್ತರು ಎಂದು ನಮೂಧಿಸಿ, ತಮ್ಮ ಬುದ್ಧಿವಂತಿಕೆಯಿಂದ ಬೆಂಬಲಿಗರನ್ನು ಅನೈತಿಕವಾಗಿ ದಾರಿ ತಪ್ಪಿಸುವ ಉಪಾಯನ್ನು ಮಾಡುತ್ತಿದ್ದಾರೆ!!

10. ಪಕ್ಷದೊಳಗಿರುವ ವಿರೋಧಿಗಳು:

ಇತಿಹಾಸ ಕಲಿಸಿಕೊಟ್ಟಂತೆ ಶತ್ರುಗಳು ಎಲ್ಲಿದ್ದಾರೆ ಎಂದರೆ ನಮ್ಮ ಹೆಗಲ ಮೇಲೆ ಇದ್ದಾರೆ ಎನ್ನುವಂತೆ, ಮೋದಿ ವಿರೋಧಿಗಳು ಪಕ್ಷದ ಒಳಗೆಯೇ ಇದ್ದಾರೆ!! ತಮ್ಮ ಪಕ್ಷದಲ್ಲಿಯೇ ಅನೇಕರು ಮೋದಿಯವರನ್ನು ಯಶಸ್ವಿಯಾಗಲು ಬಯಸುವುದಿಲ್ಲ!! ರಾಜಕೀಯದ ಅಸ್ಥಿರತೆಯ ಬಗ್ಗೆ ಒಳಗೊಳಗೆ ಅಸುರಕ್ಷಿತ ವಾತಾವರಣ ಅವರಲ್ಲಿ ಕಾಡುತ್ತಿದ್ದು, ಪಕ್ಷದೊಳಗೆ ಬದುಕುಳಿಯುವ ಸಮಸ್ಯೆಗಳು ಮತ್ತು ಬೆಳವಣಿಗೆಯ ಸಮಸ್ಯೆಗಳು ಕಂಡು ಬರುತ್ತಿದೆ!! ಹಾಗಾಗಿ ಪಕ್ಷದೊಳಗೆ ಅನುಕೂಲಗಳು ಇದ್ದರೂ ಕೂಡ, ಬದುಕುಳಿಯುವ ಒಂದು ಸಮಸ್ಯೆಯಿಂದ ಪಕ್ಷದೊಳಗೆ ಗಾಬರಿಯ ವಾತವರಣವನ್ನೇ ಸೃಷ್ಟಿಸುತ್ತಿದೆ!!

ಮೋದಿಯನ್ನು ಜನಸಾಮಾನ್ಯರೆಲ್ಲರೂ ಪ್ರಾಮಾಣಿಕತೆಯ ವ್ಯಕ್ತಿ ಎಂದು ಹೇಳುತ್ತಾರೆ!!!

ಸರಳವಾದ ಸತ್ಯವೆಂದರೆ, ಜನಸಾಮನ್ಯರೆಲ್ಲರೂ ಮೋದಿಯನ್ನು ಪ್ರಾಮಾಣಿಕತೆಯ ವ್ಯಕ್ತಿ ಎಂದು ಹೇಳುತ್ತಾರೆ. ಅಲ್ಲದೇ, ಮೋದಿ ದೇಶಕ್ಕಾಗಿ ಶ್ರಮ ವಹಿಸುತ್ತಾರಲ್ಲದೇ, ತಮ್ಮ ಉದ್ದೇಶ ಮತ್ತು ಬದ್ದತೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಜನರು ವ್ಯಾಪಕವಾಗಿ ಒಪ್ಪಿಕೊಳ್ಳುತ್ತಾರೆ!! ಅಷ್ಟೇ ಅಲ್ಲದೇ, ದೇಶ ಅಭಿವೃದ್ದಿ ಪಥದತ್ತ ಸಾಗುವುದನ್ನು ಕೂಡ ಒಪ್ಪುತ್ತಾರೆ. ಹಾಗೆಯೇ ದೇಶದಲ್ಲಿ ಈ ಹಿಂದೆ ಆದ ಅಧಿಕಾರಶಾಹಿಗಳ ಬಗ್ಗೆ, ದೇಶದಲ್ಲಿ ಆದ ಎಷ್ಟೋ ವಿಭಜನೆಗಳ ಬಗ್ಗೆ ಆಗಾಗ್ಗೆ ಕಿಡಿಕಾರುತ್ತಾರೆ ಕೂಡ!! ಹಾಗಾಗಿ ಮೋದಿಯನ್ನು ಪ್ರಾಮಾಣಿಕ ವ್ಯಕ್ತಿ ಎಂದು ಹೇಳುತ್ತಾರೆ!!

ಆದರೆ ಮೋದಿಗೆ ಅವಕಾಶ ನೀಡುತ್ತಿಲ್ಲ!!

ಆದರೆ ಅವರೆಲ್ಲರೂ ಕೂಡ ಮೋದಿಯವರಿಗೆ ಪ್ರಾಮಾಣಿಕವಾಗಿ ಅವಕಾಶವನ್ನೇ ನೀಡುತ್ತಿಲ್ಲ!! ‘ಕಟ್ಟಕಡೆಯಾಗಿ… ನಮ್ಮ ದೇಶವನ್ನು ಕಾಳಜಿವಹಿಸುವ ಒಬ್ಬ ವ್ಯಕ್ತಿಯನ್ನು ನಾವು ಹೊಂದಿದ್ದೇವೆ, ಅವರು ದೇಶಕ್ಕಾಗಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರಲ್ಲದೇ ತಮ್ಮ ಸುತ್ತಮುತ್ತ ಶ್ರಮಜೀವಿಗಳ ಗುಂಪನ್ನು ಹೊಂದಿದ್ದಾರೆ, ಅಲ್ಲದೇ ಬದಲಾವಣೆ ತರಲು ಪ್ರಯತ್ನಿಸುವ ಇರುವ ಅನೇಕ ಕಷ್ಟಕರ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ, ಇವಿಷ್ಟೇ ಅಲ್ಲದೇ ತನ್ನ ತಪ್ಪುಗಳನ್ನು ಸ್ವೀಕರಿಸಿ ಒಪ್ಪಿಕೊಳ್ಳುವ ವ್ಯಕ್ತಿ. ಹಾಗಾಗಿ ನಮ್ಮ ಬೆಂಬಲ ಮತ್ತು ಮನಸ್ಥೈರ್ಯ ಇವರಿಗೆ ಬೇಕು, ಅದಕ್ಕಾಗಿ ಸಮಯ ನೀಡಬೇಕು” ಎಂದೆಲ್ಲ ಜನರು ಯೋಚಿಸುವುದಿಲ್ಲ ಯಾಕೆ???

ಮೂಲ:Original Link – Read Here

ಕನ್ನಡಕ್ಕೆ ಅನುವಾದ- ಸರಿತಾ

Tags

Related Articles

Close