ಅಕ್ಟೋಬರ್ 4, 2017!!
ಈ ದಿನಾಂಕವೊಂದಿದೆಯಲ್ಲ! ಬಹುಷಃ ಕಾಂಗ್ರೆಸ್ ಪಕ್ಷ ಜನ್ಮಾಂತರಕ್ಕೂ ನೆನಪಿಟ್ಟುಕೊಳ್ಳುತ್ತದೆ! ಹೌದು! ಕಾಂಗ್ರೆಸ್ ಏನೇ ಮಾಡಲಿ, ಎಷ್ಟೇ ಟೀಕೆ ಮಾಡಲಿ, ಒಂದು ದಿನ ಸಮಯ ಬರುತ್ತದೆಂದು ಕಾದಿದ್ದ ನರೇಂದ್ರ ಮೋದಿಯವರು ನೆನ್ನೆ ವಿರೋಧಿಗಳ ಪ್ರತಿ ಪ್ರಶ್ನೆಗೂ ಉತ್ತರಿಸಿ ಟೀಕಾಕಾರರ ಮೇಲೆ ನೇರ ಪ್ರತಿದಾಳಿ ನಡೆಸಿದ ರೀತಿಯಿದೆಯಲ್ಲವಾ?! ಉಹೂಂ! ಮೋದಿಗೆ ಮಾತ್ರ ಸಾಧ್ಯವಾಗುವ ವಾಸ್ತವಗಳನ್ನಿಟ್ಟು ಮಾತನಾಡುವ ಗಟ್ಟಿತನವೊಂದು ಸಂಸತ್ತಿನ ಯಾರಿಗೂ
ಇಲ್ಲ!
ನೆನ್ನೆ Institution of Company Secretaries of India (ICSI) ಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಮೋದಿ ಅಕ್ಷರಶಃ ಕಾಂಗ್ರೆಸ್ ನ ಜನ್ಮ ಜಾಲಾಡಿದ್ದರಷ್ಟೇ!
ಅದೆಷ್ಟೋ ದಿನಗಳಿಂದಲೂ ಸಹ ಕಾಂಗ್ರೆಸ್ ನ ನಾಯಕರಾದಿಯಾಗಿ ಎಲ್ಲರೂ ಭಾರತದ ಅರ್ಥವ್ಯವಸ್ಥೆ ಕುಸಿಯುತ್ತಿದೆ, ಜಿಡಿಪಿ ದರ ಎಲ್ಲಾ ರೀತಿಯಿಂದಲೂ ಕುಸಿತ ಕಂಡಿದೆ ಎಂದೆಲ್ಲಾ ಬೊಬ್ಬಿರಿದವರಿಗೆಲ್ಲ ಚಾಟಿ ಇಟ್ಟ ಮೋದಿ, ಇವರೆಲ್ಲರೂ ಸುಳ್ಳು ಸುದ್ದಿ ಹಬ್ಬಿಸುವಲ್ಲಿ ನಿಸ್ಸೀಮರೆಂದ ರೀತಿಗೆ ಎಲ್ಲರ ಮುಖದಲ್ಲಿಯೂ ಬೇಡವೆಂದರೂ ಬೆವರು! ಪಾಪ!
ನರೇಂದ್ರ ಮೋದಿ ಅಂಕಿ ಅಂಶಗಳನ್ನಿಟ್ಟು ಭಾರತದ ಆರ್ಥಿಕತೆಯ ಸದ್ಯದ ಪರಿಸ್ಥಿತಿ ಹಾಗೂ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೆಂಬುದನ್ನೂ ಸಹ ಹೇಳಿದ್ದಾರೆ!
ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದವರಿಗೆಲ್ಲ ಬಿತ್ತು ತಪರಾಕಿ!
ಹಾ! ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಊರ ತುಂಬಾ ತಮಟೆ ಹೊಡೆದುಕೊಂಡು ಬಂದವರಿಗೆಲ್ಲ ನೆನ್ನೆ ಸಿಕ್ಕಾಪಟ್ಟೆ ಮುಖಭಂಗ!
” ಮಾರ್ಚ್ 2014 ರಲ್ಲಿ 35 ಮಿಲಿಯನ್ 26 ಲಕ್ಷ ಜನ ಉದ್ಯೋಗಿಗಳಿದ್ದರು! ಎಲ್ಲರೂ ಸಹ Employees Provident Fund Org ಗೆ ಪ್ರತಿ ತಿಂಗಳೂ ಸಹ PF ಹೂಡಿಕೆಯಾಗುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ, ಹೂಡಿಕೆ ಮಾಡುವವರ ಸಂಖ್ಯೆ 480 ಮಿಲಿಯನ್ ಗೆ ಏರಿಕೆಯಾಗಿದೆ! ಉದ್ಯೋಗವಿಲ್ಲದೇ ಯಾರಾದರೂ PF ಗೆ ಸುಮ್ಮನೆ ಕಂಪೆನಿ ವ್ಯವಸ್ಥೆ ಮಾಡುತ್ತದೆಯಾ?! ಇದರರ್ಥ ನಿರುದ್ಯೋಗಿಗಳು ಹೆಚ್ಚಾಗಿದ್ದಾರಾ ಅಥವಾ ಉದ್ಯೋಗಿಗಳು ಹೆಚ್ಚಾಗಿದ್ದಾರಾ?!”
ಏನು ಹೇಳಿದರು ಗೊತ್ತಾ ಮೋದಿ?!
1. ಮುಂಬರುವ ತ್ರೈಮಾಸಿಕದಲ್ಲಿ ಕನಿಷ್ಟ ಶೇಕಡ 7.7% ಆರ್ಥಿಕ ಪ್ರಗತಿ ದಾಖಲಾಗಲಿದೆ ಎಂದು ಆರ್ ಬಿಐ ಸಮೀಕ್ಷೆಯಲ್ಲಿ ಧೃಢಪಡಿಸಿದೆ!
2..ಕಳೆದ ಮೂರು ವರುಷಗಳಲ್ಲಿ 22 ಕ್ಷೇತ್ರಗಳಲ್ಲಿ 87 ಗಣನೀಯ ಸುಧಾರಣೆಗಳನ್ನು ತಂದಿದೆ.
3. ನೋಟು ನಿಷೇಧದ ಬಳಿಕ ನಗದು ಹಾಗೂ ಜಿಡಿಪಿ ಅನುಪಾತ ಮುಂಚೆ 12% ಇದ್ದದ್ದು ಈಗ 9% ಗೆ ಇಳಿಕೆಯಾಗಿದೆ.
4. ನೋಟು ನಿಷೇಧ ಹಾಗೂ ಜಿಎಸ್ ಟಿ ಯಿಂದ ಎಫ್ ಡಿ ಐ ನಲ್ಲಿ ಏರಿಕೆಯಾದರೆ ಮುಂಚೆ ಇದ್ದ ಹಣದುಬ್ಬರದ ಸಮಸ್ಯೆ 90% ಇಳಿಕೆಯಾಗಿದೆ.
5. ಎರಡೇ ತಿಂಗಳಲ್ಲಿ ನಾಗರಿಕಾ ವಿಮಾನ ಪ್ರಯಾಣದಲ್ಲಿ 14% ಏರಿಕೆ ಕಂಡಿದೆ.
6. ಅಂತರಾಷ್ಟ್ರೀಯ ಪ್ರಯಾಣ ಮತ್ತು ಸರಕು ಸಾಗಾಣಿಕೆ 16% ಏರಿಕೆಯಾಗಿದೆ!
7. ಉಜಾಲಾ ಯೋಜನೆಯ ಅಡಿಯಲ್ಲಿ 2014 ರಲ್ಲಿ 310 ರೂಗಳಷ್ಟಿದ್ದ ಎಲ್ ಇ ಡಿ ಬಲ್ಬ್ ನ ದರ 39 ರೂಗಳಿಗೆ ಇಳಿಕೆಯಾಗಿದೆ!
8. ಮೂರು ವರ್ಷಗಳಲ್ಲಿ 1.2 ಲಕ್ಷ ರಸ್ತೆಗಳನ್ನು ನಿರ್ಮಿಸಲಾಗಿದೆ! ಇದೇ ಮೂರು ವರ್ಷದ ಹಿಂದೆ ನೀತಿ ನಿಷ್ಕ್ರಿಯತೆಯಿಂದ ಇಡೀ ದೇಶ ಅವ್ಯವಸ್ಥೆಯ ಆಗರವಾಗಿತ್ತು.
9. ಟ್ರ್ಯಾಕ್ಟರ್ ಮಾರಾಟದಲ್ಲಿ 34% ಏರಿಕೆಯಾಗಿದೆ. ವಾಣಿಜ್ಯೋದ್ಯಮ ವಾಹನ ಮಾರಾಟ 23% ಗಿಂತಲೂ ಹೆಚ್ಚಾಗಿದೆ!
10. ಪ್ರಯಾಣಿಕ ಕಾರುಗಳ ಮಾರಾಟ 12% ಗೆ ಏರಿಕೆಯಾಗಿದೆ.
11. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ಸರಕಾರ ಹೂಡಿಕೆ ಮಾಡಿರುವ ಒಟ್ಟು ಮೊತ್ತ 10,600 ಕೋಟಿ ರೂ!
12.ಬದುಕು ಪರಿವರ್ತಿಸುವ ಮುದ್ರಾ ಯೋಜನೆಯಡಿಯಲ್ಲಿ 2015 ರಿಂದ ಇಲ್ಲಿಯವರೆಗೆ ಸಾಲ ಪಡೆದಿರುವವರು 9.13 ಕೋಟಿ ಮಂದಿ!
13. ಆವಾಸ್ ಯೋಜನೆಯ ಅಡಿಯಲ್ಲಿ ವಸತಿ ಕ್ಷೇತ್ರಕ್ಕೆ 1.53 ಲಕ್ಷ ಕೋಟಿ ಹೂಡಿಕೆಯಾಗಿದೆ!
14. ನೋಟು ನಿಷೇಧದ ಬಳಿಕ ಸಿಕ್ಕಿಬಿದ್ದ 3 ಲಕ್ಷ ಸಂಶಯಾಸ್ಪದ ವಹಿವಾಟಿನ ಕಂಪೆನಿಗಳ ಪೈಕಿ 2.10 ಲಕ್ಷ ಕಂಪೆನಿಗಳ ನೋಂದಣಿ ರದ್ದುಪಡಿಸಲಾಗಿದೆ. 2022 ರ ಒಳಗೆ ಬೇನಾಮಿ ಕಂಪೆನಿಗಳ ಅಸ್ತಿತ್ವವೇ ಇನ್ನಿಲ್ಲದಂತೆ ಮಾಡುತ್ತೇವೆ.
15. ಕಾರ್ಮಿಕ ವಿಭಾಗದಲ್ಲಿ ಹಾಲಿ ಶೇ.12 % ತೆರಿಗೆ ವಿಧಿಸಲಾಗುತ್ತಿದ್ದು ಅದನ್ನು ಶೇ.5% ಗೆ ಇಳಿಸುವ ಯೋಚನೆ ಮಾಡುತ್ತಿದ್ದೇವೆ.
16. ನಿರಾಶಾವಾದ ಹರಡಿ ಉತ್ತಮ ಆಡಳಿತದ ವಿರುದ್ಧ ಅಶಾಂತಿ ಸೃಷ್ಟಿಸಿ ತನ್ಮೂಲಕ ಸಮಾಜದಲ್ಲಿ ಗೊಂದಲವನ್ನು ಮೂಡಿಸದಿದ್ದರೆ ಕೆಲವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ! ಅಂತಹವರನ್ನು ಸಮಾಜ ನಿಶ್ಚಿತವಾಗಿ ಗುರುತಿಸಬೇಕಿದೆ!
ಮೋದಿಯವರ ಆಶ್ವಾಸನೆಯೇ ಹಾಗಿದೆ!
ಈ ಕಾರ್ಪೋರೇಟ್ ಸಂಸ್ಕ್ರತಿಯೆನ್ನುವುದು ನೀವು ನಿರ್ವಹಿಸುವ ಕರ್ತವ್ಯದ ಮೇಲೆ ಅವಲಂಬಿತವಾಗಿರುತ್ತದೆ! ನಿಮ್ಮ ಸಂಸ್ಥೆಯ ನೀತಿ, ಸತ್ಯ ಹಾಗೂ ಕಾನೂನಿನ ತಳಹದಿಯ ಮೇಲೆ ನಿಂತಿದ್ದರೆ ಸರಕಾರ ನಿಮ್ಮೆಲ್ಲ ಸಲಹೆಗಳಿಗೆ ಬದ್ಧವಾಗಿರುತ್ತದೆ. ತನ್ಮೂಲಕ ದೇಶದಲ್ಲಿ ಅಭಿವೃದ್ಧಿಯೆನ್ನುವ ಗಗನ ಕುಸುಮ ಕೈಗೆಟಕುತ್ತದೆಯಷ್ಟೇ!
ಸುಧೀರ್ಘವಾದ ಮಾತುಕಥೆಯಲ್ಲಿ ಮೋದಿ ಸರಕಾರದ ಸಾಧನೆ!
1. ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ವಿಶೇಷ ತನಿಖಾ ದಳ (SIT) ಯನ್ನು ಸ್ಥಾಪಿಸಲಾಗಿದೆ. ಇದರ ಉದ್ದೇಶ ವಿದೇಶಿ ಹೂಡಿಕೆ ಮಾಡಿರುವ ಕಾಳಧನಿಕರನ್ನು ಬಲೆಗೆ ಬೀಳಿಸುವುದಷ್ಟೇ!
2. ವಿದೇಶಿ ಹೂಡಿಕೆಯ ಬಗ್ಗೆ ಅರಿಯಲು ಸಹಕರಿಸಿದ್ದು ಕಪ್ಪು ಹಣ ಕಾಯ್ದೆ!
3. ವಿದೇಶಿ ಆಮದು ಹಾಗೂ ರಫ್ತುಗಳ ಮೇಲಿದ್ದ ಅದೆಷ್ಟೋ ಹಳೆಯ ತೆರಿಗೆಗಳನ್ನು ತೆಗೆದು ಕಾಯ್ದೆಯಲ್ಲಿ ನವೀಕರಣ ಮಾಡಿ ಹೊಸದಾದ ತೆರಿಗೆಯನ್ನು ಪರಿಚಯಿಸಿದ ಫಲವಾಗಿ ವಿದೇಶಿ ಕಂಪೆನಿಗಳು ಭಾರತದ ಆರ್ಥಿಕತೆಗೆ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿಯತ್ತ ಕೊಂಡುಯ್ಯುತ್ತಲಿದೆ!
4. ದಿವಾಳಿಯಾಗಿದ್ದ ಬ್ಯಾಂಕುಗಳಿಗೆಲ್ಲ ಪರಿಹಾರವನ್ನು ಸೂಚಿಸಿ ಕಾಯ್ದೆ ಮಾಡಿದ್ದರ ಫಲ ಲಾಭದಲ್ಲಿ ನಡೆಯುತ್ತಿದೆ ಭಾರತೀಯ ಬ್ಯಾಂಕುಗಳು.
5. ಬೇನಾಮಿ ಆಸ್ತಿಗಳ ವಿರುದ್ಧ ಕಾನೂನನ್ನೂ ತರಲಾಗಿದೆ!
6. ಸರಳವಾದ ಜಿಎಸ್ ಟಿ ತೆರಿಗೆಯನ್ನು ಪರಿಚಯಿಸಲಾಗಿದೆ.
7. ಜನಧನ ಯೋಜನೆಯಡಿಯಲ್ಲಿ 300 ಮಿಲಿಯನ್ ಬಡಬಗ‌್ಗರು ಬ್ಯಾಂಕಿನ ಮೆಟ್ಟಿಲು ಹತ್ತಿದ್ದಾರೆ. ಅದರಲ್ಲಿ 15 ಮಿಲಿಯನ್ ಸರಕಾರದ ಇನ್ಶೂರೆನ್ಸ್ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ!
8.Money Scheme ಅಡಿಯಲ್ಲಿ ಅದೆಷ್ಟೋ ಕೋಟಿ ಜನರು ಸಾಲ ತೆಗೆದುಕೊಂಡಿದ್ದಾರೆ. ಮರುಪಾವತಿಸಿದ್ದಾರೆ. ಸತತವಾಗಿ ಬ್ಯಾಂಕುಗಳ ವಹಿವಾಟು ಹೆಚ್ಚಾಗುತ್ತಲೇ ಸಾಗಿದೆ. 63 ಲಕ್ಷ ತರುಣರು ತಮ್ಮ Start-Up ಗಳಿಗೆ ಸಾಲವನ್ನು ತೆಗೆದುಕೊಂಡಿದ್ದಾರೆ. ತನ್ಮೂಲಕ.ದೇಶದ ಉದ್ಯೋಗ ಸಮಸ್ಯೆಯೂ ನಿವಾರಣೆಯಾಗುತ್ತಲಿದೆ!
ಸಮಸ್ಯೆ ಎಲ್ಲಿರುವುದು ಗೊತ್ತಾ?!
ಮಾಡುವುದಕ್ಕೆ ಬೇರೆ ಕೆಲಸವಿಲ್ಲದೆಯೇ ಬೀದಿಗಳಲ್ಲಿ ಬಂದು ಕಂಡವರ ಸಾವಿನಲ್ಲಿ ತಿರುಪೆ ಎತ್ತಿ ಹೊಟ್ಟೆ ತಂಪಾಗಿಸಿಕೊಳ್ಳುವ ಒಂದಷ್ಟು ಜನರ ಮಾತಿಗೆ ಮರುಳಾಗಿ ಸರಕಾರದ ವಿರುದ್ಧ ಗೊತ್ತು ಗುರಿಯಿಲ್ಲದೇ ಪ್ರಹಾರ ನಡೆಸುವಾಗ ಕಳೆದ 70 ವರ್ಷಗಳಲ್ಲಿ ದೇಶವನ್ನು ನಿರ್ನಾಮ ಮಾಡಿದ ಕಾಂಗ್ರೆಸ್ ನ ತಪ್ಪನ್ನು ಮೋದಿ ಬಂದವರೇ 70 ಸೆಕೆಂಡುಗಳಲ್ಲಿ ಪರಿಹರಿಸಬೇಕೆಂಬ ಬೇಡಿಕೆ ಇಡುತ್ತೇವೆ!
ಆದರೆ, ಮೋದಿ ದೇಶಕ್ಕೇನು ಮಾಡುತ್ತಿದ್ದಾರೆ ಎಂಬ ಒಂದೇ ಪ್ರಶ್ನೆಯನ್ನಿಟ್ಟು ಕೂಗುವ ಮುನ್ನ ನಾವೇನು ದೇಶಕ್ಕೆ ಮಾಡುತ್ತಿದ್ದೇವೆಂಬ ಪ್ರಶ್ನೆಗೆ ಉತ್ತರ
ಬರೆಯಲು ಕೂತಾಗ ಭಾರತ ನಿಜಕ್ಕೂ ಅಖಂಡವಾಗುತ್ತದೆ.
Fall in price of LED bulbs. #ModiTransformsIndia pic.twitter.com/1bwe9pJXl1
— BJP (@BJP4India) October 4, 2017
Inflation over the years. #ModiTransformsIndia pic.twitter.com/EQmDsBmFVp
— BJP (@BJP4India) October 4, 2017
– ತಪಸ್ವಿ