ಪ್ರಚಲಿತ

ಮೋದಿಯ ಉಗ್ರತಾಪ!! ರಾಮ ಮಂದಿರದ ವಿಚಾರವಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಗೆ ತಿರುಗೇಟು ನೀಡಿದ್ದು ಹೇಗೆ ಗೊತ್ತೇ?!

136 ವರ್ಷಗಳ ಬಳಿಕವೂ ಕಾಂಗ‌್ರೆಸ್ ಪ್ರಶ್ನಿಸುತ್ತಿದೆ "ಅವಸರ ಯಾಕೆ?!"

ಗುಜರಾತ್ ನ ಚುನಾವಣೆ ಯಾತ್ರೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ಉಗ್ರ ಸ್ವರೂಪ ತಾಳಿದ್ದಾರೆ! ಹಿಂದಿನ ದಿನವಷ್ಟೇ, ಸರ್ವೋಚ್ಛ ನ್ಯಾಯಾಲಯದಲ್ಲಿ, ಸುನ್ನಿ ವಕ್ಫ್ ಬೋರ್ಡ್ “ಮಂದಿರದ ವಿಚಾರಣೆಯನ್ನು ಮುಂದೂಡಿ” ಎಂದು ವಿನಂತಿಸಿ ಅರ್ಜಿ ಸಲ್ಲಿಸಿದ್ದನ್ನು ತಳ್ಳಿ ಹಾಕಿತ್ತು ಸರ್ವೋಚ್ಛ ನ್ಯಾಯಾಲಯ!

ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್, “ಮಂದಿರದ ವಿಚಾರಣೆಯನ್ನು 2019 ರ ಲೋಕಸಭಾ ಚುನಾವಣೆಯಾದ ನಂತರ ನಡೆಸಿ” ಎಂದು ವಾದಿಸಿದ್ದ ಕಪಿಲ್ ಸಿಬಲ್ ವಾದಕ್ಕೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ ಮೋದಿ!

ಮೋದಿ ಹೇಳಿದ್ದೇನು ಗೊತ್ತೇ?!

“ರಾಮ ಮಂದಿರದ ವಿಷಯವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದು ಯಾಕೆ?! ಹಿಂದೂ ವಿನ ಧಾರ್ಮಿಕ ಭಾವನೆ ಹಾಗೂ ಶ್ರದ್ಧೆಗೆ ರಾಜಕೀಯ ಎನ್ನುವ ತೇಪೆ ಯಾಕೆ ಹಚ್ಚುತ್ತೀರಿ?! ಮಂದಿರದ ವಿಚಾರಣೆಯನ್ನು 2019 ರ ಲೋಕಸಭಾ ಚುನಾವಣೆಯ ನಂತರ ನಡೆಸಿ ಎಂದ ಕಪಿಲ್ ಸಿಬಲ್ ರ ಉದ್ದೇಶ ಏನು ಹಾಗಾದರೆ?! 2019 ರ ಚುನಾವಣೆಯಾದ ಮೇಲೆ ನಡೆಸಲಿ ಎಂದು ವಾದಿಸುತ್ತಿರುವ ಕಪಿಲ್ “ಯಾಕೆ?!” ಎಂಬುದನ್ನು ಸ್ಪಷ್ಟಪಡಿಸಲಿ! ಅದನ್ನು ಬಿಟ್ಟು, ಮಂದಿರದ ವಿಚಾರವಾಗಿ ರಾಜಕೀಯ ಚುನಾವಣೆಗಳನ್ನು ತಳುಕು ಹಾಕುತ್ತಿರುವುದು ಯಾವ ಉದ್ದೇಶಕ್ಕಾಗಿ?!” ಎಂದು ಪ್ರಧಾನಿ ಮೋದಿ
ಕಿಡಿಕಾರಿದ್ದಾರೆ!

ರಾಮ ಮಂದಿರವೊಂದೇ ಅಲ್ಲ, ಬದಲಾಗಿ ರಾಮನ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ಸಿಗರು, ಬಾಬರಿಯನ್ನಾಗಲೀ, ಅಥವಾ ಇನ್ಯಾವುದೋ ಮೊಘಲ ರಾಜನ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಯಾವ ಅರ್ಥ ಕೊಡಬಲ್ಲದು?!

ಈ ಹಿಂದೆಯೂ ಪ್ರಧಾನಿ ಮೋದಿ ಕಾಂಗ್ರೆಸ್ಸಿಗರ ನಡೆಗೆ ಕಿಡಿಕಾರಿದ್ದಲ್ಲದೇ, ಪದೇ ಪದೇ ಕಾಂಗ್ರೆಸ್ಸಿಗರು ರಾಮ ಮಂದಿರವನ್ನೇ ಯಾಕೆ ಗುರಿಯಾಗಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.

ರಾಮ ಮಂದಿರ v/s ಬಾಬರೀ ಮಸೀದಿ! ಇನ್ನೂ ಎಷ್ಟು ವರ್ಷ?!

ಹಿಂದೂ ಸಂಘಟನೆಗಳು ರಾಮ ಮಂದಿರದ ಕುರಿತಾಗಿ 1885 ರಲ್ಲಿಯೇ ಮೊಕದ್ದಮೆಯನ್ನು ಹೂಡಿದ್ದಾರೆಂಬ ಸತ್ಯ ಎಷ್ಟು ಜನರಿಗೆ ಗೊತ್ತಿದೆ?! 136 ವರ್ಷಗಳ ನಂತರವೂ ಸಹ, ಕಾಂಗ್ರೆಸ್ ನಾಯಕ “ಅವಸರವೇನಿದೆ?!” ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲದೇ ಮತ್ತೇನು?!

ಜೊತೆಗೆ ಕಪಿಲ್ ಸಿಬಲ್ ಸ್ವತಃ ಮುಸಲ್ಮಾನರಿಂದಲೇ ಬಹಿರಂಗವಾಗಿ ಮುಖಭಂಗಕ್ಕೊಳಗಾಗಿದ್ದಾರೆ! ಅಯೋಧ್ಯಾ ವಿವಾದವನ್ನು ಸಂಪೂರ್ಣವಾಗಿ ರಾಜಕೀಯ ಮಾಡುವ ಹುನ್ನಾರವೊಂದಕ್ಕೆ ಸ್ವತಃ ಶಿಯಾ ಬೋರ್ಡ್ ವಿರೋಧ ವ್ಯಕ್ತಪಡಿಸಿದ್ದು, “ಕಾಂಗ್ರೆಸ್ ಅಯೋಧ್ಯಾ ವಿವಾದವನ್ನು ಯಾವತ್ತೂ ಶಾಂತವಾಗಲು ಬಿಡುವುದಿಲ್ಲ” ಎಂದು ಹೇಳಿಕೆ ನೀಡಿದೆ!

ಭಾರತದ ಇತಿಹಾಸದಲ್ಲಿಯೇ, ಇಷ್ಟು ವರ್ಷಗಳ ಕಾಲ ನಡೆಯುತ್ತ ಬಂದ ವಿವಾದ ಬೇರಿಲ್ಲವೇನೋ! ಆದರೂ, ಕಾಂಗ್ರೆಸ್ ಗೆ ಮಾತ್ರ ಯಾವುದೇ ಅವಸರವಿಲ್ಲ! 2019 ರಲ್ಲಿ ಮಾತ್ರ ಹಾಗಾದರೆ ಅವಸರ ಬಂದುಬಿಡುತ್ತದೆಯೇ ಕಾಂಗ್ರೆಸ್ ಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ!

– ಪೃಥು ಅಗ್ನಿಹೋತ್ರಿ!

Tags

Related Articles

Close