ಪ್ರಚಲಿತ

ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಷ್ಟು ಮಂದಿ ಉಗ್ರರ 72 ಮಂದಿ ಕನ್ಯೆಯರ ಬಳಿಗೆ ತೆರಳುವ ಕನಸು ಈಡೇರಿದೆ ಗೊತ್ತೇ?

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರ ಭಾರತೀಯ ಸೇನೆ ಬಲಿಷ್ಠರಾಗುತ್ತಲೇ ಇದ್ದು ದೇಶದ ಗಡಿ ಕಾಯುವ ಸೈನಿಕರೂ ತಮ್ಮ
ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ಸರಕಾರ ನಾನಾ ಸವಲತ್ತುಗಳನ್ನು ನೀಡುತ್ತಲೇ ಇರುವುದು ನಮಗೆಲ್ಲ ಗೊತ್ತಿರುವ ವಿಚಾರ!! ಆದರೆ ಭಾರತೀಯ ಸೇನೆ 2017ರಲ್ಲಿ ಭಾರತದ ಭದ್ರತೆಗೆ ಸವಾಲೊಡ್ಡಿದ್ದ 200ಕ್ಕೂ ಅಧಿಕ ಭಯೋತ್ಪಾದಕರನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಡಿಜಿಪಿ ಎಸ್.ಪಿ ವೈದ್ ಇತ್ತೀಚೆಗೆ ಹೇಳಿದ್ದಾರೆ.

ಹೌದು… ಈಗಾಗಲೇ ಭಾರತೀಯ ಸೇನೆಯನ್ನು ಬಲಿಷ್ಠ ಸೇನೆಯನ್ನಾಗಿ ಮಾಡಲು ಮುಂದಾಗುತ್ತಿರುವ ಕೇಂದ್ರ ಸರಕಾರ ಇದೀಗಾಗಲೇ ಸಾಕಷ್ಟು ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದೆ. ಈ ಬೆನ್ನಲ್ಲೇ, ಯುದ್ಧದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಡಿಯಲ್ಲಿ “ತ್ವರಿತ ಪ್ರಾಬಲ್ಯ” ಕ್ಕಾಗಿ, ರಾತ್ರಿಯ ಸಮಯದಲ್ಲಿಯೂ ಕೂಡ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗುವಂತೆ ಹಾಗೂ ಇನ್ನಿತರ ಸಂದರ್ಭದಲ್ಲಿ ನೆರವಾಗುವಂತೆ, ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ಅತ್ಯಾಧುನಿಕ ಟ್ಯಾಂಕ್ ಗಳನ್ನು ಪಡೆಯಲಿರುವ ವಿಚಾರವೂ ತಿಳಿದೆ ಇದೆ!!

ಇನ್ನು ಈ ವರ್ಷದಲ್ಲಿ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು 200ಕ್ಕೂ ಅಧಿಕ ಭಯೋತ್ಪಾದಕರನ್ನು ಕೊಂದಿರುವ ಬಗ್ಗೆ ಡಿಜಿಪಿ ಎಸ್.ಪಿ ವೈದ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಉಗ್ರರನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣವೇ, ಸೇನೆಗೆ ಕೇಂದ್ರ ಸರ್ಕಾರದ ನೀಡಿರುವ ಮುಕ್ತ ಸಹಕಾರ ಮತ್ತು ಬೆಂಬಲ ಎಂದು ಮೂಲಗಳು ತಿಳಿಸಿವೆ.

ಮೋದಿ ಸರಕಾರ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಲ್ಲಿ ಸೇನೆಗೆ ಮುಕ್ತ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಲೇ ಬರುತ್ತಿದ್ದು ಇದರೊಂದಿಗೆ ಸೈನಿಕರಿಗೆ ಬೇಕಾದ ಬುಲೆಟ್ ಫ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ಗಳನ್ನು ನೀಡಿದ್ದಲ್ಲದೇ ಸಾಕಷ್ಟು ಇನ್ನಿತರ ಸವಲತ್ತುಗಳನ್ನು ನೀಡಿದೆ. ಅಷ್ಟೇ ಅಲ್ಲದೇ, ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತದ ಗಡಿ ಪ್ರದೇಶದಲ್ಲಿನ “ತ್ವರಿತ ಪ್ರಾಬಲ್ಯ”ಕ್ಕಾಗಿ ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)ನ್ನು ತರಲಿದೆಯಲ್ಲದೆ, ಈ ಅಭಿವೃದ್ಧಿಯ ನಂತರ ಪಾಕಿಸ್ತಾನ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಈ ಅತ್ಯಾಧುನಿಕ ಎಫ್.ಆರ್.ಸಿ.ವಿ ಟ್ಯಾಂಕ್ ಗಳನ್ನು ನಿಯೋಜಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಒಟ್ಟಾರೆಯಾಗಿ 2,000 ಕ್ಕಿಂತಲೂ ಹೆಚ್ಚು ವಾಹನಗಳನ್ನು ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿತ್ತು!!

ಅಂತೂ ಭಾರತೀಯ ಸೇನೆ ಒಟ್ಟಾರೆಯಾಗಿ 2017 ರಲ್ಲಿ ಭಾರತದ ಭದ್ರತೆಗೆ ಸವಾಲೊಡ್ಡಿದ್ದ 200 ಕ್ಕಿಂತ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಲು
ಯಶಸ್ವಿಯಾಗಿದ್ದಾರೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ!! ಇದು ದೇಶದ ಭದ್ರತೆಗೆ ಪ್ರಮುಖವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಒಂದು ದೊಡ್ಡ ಹೆಗ್ಗುರುತಾಗಿದೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 200 ಕ್ಕೂ ಹೆಚ್ಚು ಉಗ್ರರನ್ನು ದಮನ ಮಾಡುವಲ್ಲಿ ಯಶಸ್ವಿಯಾಗಿದ್ದು, ಇನ್ನು
2015ರ ಅಂತ್ಯದ ವೇಳೆಗೆ ಈ ಸಂಖ್ಯೆ 100 ಕ್ಕಿಂತಲೂ ಕಡಿಮೆಯಾಗಿತ್ತು!! ಆದರೆ 2016 ರಲ್ಲಿ, 165 ಉಗ್ರಗಾಮಿಗಳು ಭದ್ರತಾ ಪಡೆಗಳಿಂದ ನಿಯಂತ್ರಣ
ರೇಖೆ (ಎಲ್ ಒಸಿ) ಮತ್ತು ಹಿಂಟರ್ ಲ್ಯಾಂಡ್‍ನಲ್ಲಿ ಕೊಲ್ಲಲ್ಪಟ್ಟಿದ್ದರು. ಆದರೆ ಇದೀಗ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಐದು ಮಂದಿ ಉಗ್ರರನ್ನು ಕೊಂದ ಬೆನ್ನಲ್ಲೇ ಡಿಜಿಪಿ ಈ ಟ್ವೀಟ್ ಮಾಡಿದ್ದಾರೆ..

ಇದೇ ರೀತಿ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಭದ್ರತಾ ಪಡೆಗಳು ನಿನ್ನೆ ಬೆಳಗ್ಗೆ ಕಾಶ್ಮೀರದ ಕೇಂದ್ರವಾದ ಬುದ್ಗಮ್ ಜಿಲ್ಲೆಯ ಪಾಖೆರ್  ಪ್ರದೇಶದಲ್ಲಿ ಬರೋಬ್ಬರಿ 4 ಉಗ್ರರನ್ನು ಕೊಂದಿದ್ದಾರೆ..! ಅಷ್ಟೇ ಅಲ್ಲದೇ, ನವೆಂಬರ್ 19 ರಂದು, ಜನರಲ್ ಆಫೀಸರ್ ಕಮಾಂಡಿಂಗ್ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಭದ್ರತಾ ಪಡೆಗಳು 2017 ರಲ್ಲಿ ನವೆಂಬರ್ 19 ವರೆಗೆ 190 ಉಗ್ರಗಾಮಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಸ್ಪಷ್ಟ ಪಡಿಸಿದ್ದರು. ಆದರೆ ಈ 190 ಭಯೋತ್ಪಾದಕರಲ್ಲಿ 80 ಭಯೋತ್ಪಾದಕರು ಸ್ಥಳೀಯರು ಮತ್ತು ಉಳಿದ 110 ಉಗ್ರರು ಪಾಕಿಸ್ತಾನದ ಮೂಲದವರು ಎಂದು ಬಹಿರಂಗ ಪಡಿಸಲಾಗಿದೆ..

ಮೂಲದ ಪ್ರಕಾರ ಕಾಶ್ಮೀರದಲ್ಲಿ ಪ್ರಸ್ತುತ 100 ವಿದೇಶಿಯರು ಸೇರಿದಂತೆ 200 ಭಯೋತ್ಪಾದಕರು ಇನ್ನೂ ಸಕ್ರಿಯರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಸೇನೆ ಯೋಜನೆ ರೂಪಿಸಿದ್ದು ಶೀಘ್ರದಲ್ಲೇ ಕಾರ್ಯಾಚರಣೆ ಆರಂಭವಾಗಲಿದೆ. ಹಾಗಾಗಿ ಕಾಶ್ಮೀರದಲ್ಲಿನ ಈ ವ್ಯಾಪಕ ಭಯೋತ್ಪಾದಕ ವಿರುದ್ದದ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಹಕಾರ ನೀಡಿರುವುದು ಸೇನೆಯ ಸಾಮರ್ಥ್ಯವನ್ನು ಹಿಮ್ಮಡಿಗೊಳಿಸುವಲ್ಲಿ ನೆರವಾಗಲಿದೆ.

ವಿಶ್ವ ಆರ್ಥಿಕ ಸಂಸ್ಥೆಯ ಅತ್ಯಂತ ವಿಶ್ವಾಸಾರ್ಹ ಸರಕಾರಗಳ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನ ಪಡೆದಿದ್ದಲ್ಲದೇ, ದೇಶದ ಬಹುಸಂಖ್ಯಾತ ಜನರು ಪ್ರಧಾನಿ
ಮೋದಿಯವರ ಆರ್ಥಿಕ ಮತ್ತು ಪರಿಣಾಮಕಾರಿ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಬೆಂಬಲಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದೆ. ಹಾಗಾಗಿ
ಸುಮಾರು ಮೂರು ಕ್ವಾರ್ಟರ್ಸ್ ಅಂದರೆ 74 ಶೇಕಡಾ ಭಾರತೀಯರು ಕೇಂದ್ರ ಸರ್ಕಾರದ ಮೇಲೆ ಭರವಸೆ ಹೊಂದಿದ್ದಾರೆಂದು ವರದಿ ಹೇಳಿದ್ದಲ್ಲದೇ ಪ್ರಮುಖ ಕಠಿಣ ಭ್ರಷ್ಟಾಚಾರ ವಿರೋಧಿ ಕ್ರಮಗಳು, ಪರಿಣಾಮಕಾರಿ ಆರ್ಥಿಕ ಯೋಜನೆಗಳು ಮತ್ತು ರಾಜಕೀಯ ಸ್ಥಿರತೆಯಂತಹ ಅಂಶಗಳನ್ನು ಕೂಡ ವಿಶ್ವ ಆರ್ಥಿಕ ಸಂಸ್ಥೆ
ಪರಿಗಣಿಸಿರುವುದು ಗೊತ್ತೇ ಇದೆ!!

ಹಾಗಾಗಿ ಈ ವರ್ಷದಲ್ಲಿ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳು 200ಕ್ಕೂ ಅಧಿಕ ಭಯೋತ್ಪಾದಕರನ್ನು ಕೊಂದಿದೆಯಲ್ಲದೇ ಇವೆಲ್ಲವೂ
ಯಶಸ್ವಿಯಾಗಲು ಪ್ರಮುಖ ಕಾರಣವೇ ಸೇನೆಗೆ ಕೇಂದ್ರ ಸರ್ಕಾರದ ನೀಡಿರುವ ಮುಕ್ತ ಸಹಕಾರ ಮತ್ತು ಬೆಂಬಲ ಎಂದು ಮೂಲಗಳು ತಿಳಿಸಿರುವುದು ಹೆಮ್ಮೆಯ
ವಿಚಾರವಾಗಿದೆ!!

– ಅಲೋಖಾ

Tags

Related Articles

Close