ಪ್ರಧಾನಿ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಹೊರತು ಕಡಿಮೆಯಂತು ಆಗಿಲ್ಲ ಅಂತ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆಗ ಅಟಲ್ ಬಿಹಾರಿ ವಾಜಪೇಯಿ ವರ್ಚಸ್ಸು ಹೇಗಿತ್ತೋ ಹಾಗೆ ಈಗ ಮೋದಿಯವರ ವರ್ಚಸ್ಸು ಇದೆ. ವಿರೋಧ ಪಕ್ಷದವರ ಕಡೆಯಿಂದಲೂ ನಿಂದನೆಗೆ ಒಳಗಾಗದೇ,ಟೀಕಿಸಿಕೊಳ್ಳದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಅಜಾತ ಶತ್ರು ಕವಿ ಹೃದಯಿ ಅಟಲ್ ಬಿಹಾರಿ ವಾಜಪೇಯಿ. ಅವರ ನಂತರ ಈ ದೇಶಕ್ಕೆ ಭಾರತಾಂಬೆ ಕೊಟ್ಟ ಒಳ್ಳೆಯ ಕೊಡುಗೆ ಅಂದ್ರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಅಂದ್ರೆ ಅತಿಶಯೋಕ್ತಿ ಅನಿಸಲಿಕ್ಕಿಲ್ಲ. ಮೋದಿಯವರಿಗೆ ವಿರೋಧ ಪಕ್ಷಗಳ ಟೀಕೆಗಳು ನಿಂದನೆಗಳು ತುಂಬಾನೆ ಜಾಸ್ತಿ ಇವೆ ಆದರೆ ಅದೆಷ್ಟೇ ನಿಂದನೆ ಟೀಕೆಗಳಿದ್ದರೂ ಜಗತ್ತಿನ ಪ್ರಭಾವಿ ನಾಯಕ ಎನಿಸಿಕೊಂಡಿದ್ದಾರೆ. ಎಷ್ಟೇ ನಿಂದನೆಗಳಿದ್ದರೂ ಅವರ ವರ್ಚಸ್ಸಿಗೆ ಧಕ್ಕೆಯಾಗಿಲ್ಲ,ಬದಲಿಗೆ ವರ್ಚಸ್ಸು ಜಾಸ್ತಿಯಾಗಿದೆ. ಮೋದಿಯವರ ವರ್ಚಸ್ಸು ಜಾಸ್ತಿಯಾಗಿದೆ ಅಂತ ಹೇಳಲು ಪ್ರಬಲ ಸಾಕ್ಷಿ ಎಂದರೆ ಇತ್ತೀಚೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತರಾಗಿದ್ದ ಖಟ್ಟರ್ ಕಾಂಗ್ರೆಸ್ಸಿಗ ಲೋಕೇಶ್ ಚಂದ್ರ ಅವರು ಮೋದಿಯವರು ಗಾಂಧೀಜಿಗಿಂತಲೂ ಶ್ರೇಷ್ಠವೆಂದು ಹಾಡಿ ಹೊಗಳಿದ್ದಾರೆ. ಒಬ್ಬ ಖಟ್ಟರ್ ಕಾಂಗ್ರೆಸ್ಸಿಗ ಅದು ಕೂಡಾ ಇಂದಿರಾಗಾಂಧಿಯವರ ಆಪ್ತ ಮೋದಿಯವರನ್ನು ಹಾಡಿ ಹೊಗಳಿದ್ದಾರೆಂದರೆ ನೀವೇ ಅಲೋಚಿಸಿ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆಯೋ ಜಾಸ್ತಿ ಆಗಿದೆಯೋ ಅಂತ.
ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮ ಗಾಂಧೀಜಿಗಿಂತ ಶ್ರೇಷ್ಠ. ಬಡವರ ಜೀವನದಲ್ಲಿ ಕಾರ್ಲ್ ಮಾರ್ಕ್ಸ್ ಗಿಂತ ಹೆಚ್ಚು ಮೌಲ್ಯಯುತ ಪರಿಣಾಮವನ್ನು ಮೋದಿ ಬೀರಿದ್ದಾರೆ ಹಾಗೂ ಅವರು ಭಗವಂತನ ಅವತಾರವಿದ್ದಂತೆ.
ಈ ಮಾತುಗಳನ್ನು ಹೇಳಿರುವುದು ಬಿಜೆಪಿಯ ಕಾರ್ಯಕರ್ತರು ಇರಬೇಕು ಅಂತ ನೀವು ಅಂದುಕೊಂಡಿದ್ದರೆ ಅದು ಸುಳ್ಳು!! ಹೌದು ಮೇಲಿನ ಮಾತುಗಳನ್ನು ಹೇಳಿದ್ದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದ ಹಾಗೂ ಜೀವನದುದ್ದಕ್ಕೂ ಖಟ್ಟರ್ ಕಾಂಗ್ರೆಸ್ಸಿಗರಾಗಿದ್ದ ಪದ್ಮಭೂಷಣ್ ಲೋಕೇಶ್ ಚಂದ್ರ ಹೊಗಳಿದ ಪರಿಯಿದು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಅಧ್ಯಕ್ಷರಾಗಿ ಲೋಕೇಶ್ ಚಂದ್ರ ಅವರು ನೇಮಕವಾಗಿದ್ದು, ಸಂದರ್ಶನವೊಂದರಲ್ಲಿ ಅವರು ಆಡಿದ ಮಾತುಗಳಿವು.
ಬಡವರಿಗೆ ಮೋದಿಯವರು ದೇವರ ಅವತಾರವಿದ್ದಂತೆ. ಜನಧನ ಸೇರಿದಂತೆ ಹಲವು ಯೋಜನೆಗಳು ಇದಕ್ಕೆ ಪುಷ್ಠಿ ನೀಡಿವೆ. ಬಡತನ ಹೋಗಲಾಡಿಸುವ ಕುರಿತು ಹಲವು ಹೊತ್ತುಗೆಗಳನ್ನು ಕಾರ್ಲ್ ಮಾರ್ಕ್ಸ್ ಬರೆದಿದ್ದಾದರೂ ಬಡತನ ತೊಲಗಿಸಲು ಅವರ ಕೊಡುಗೆ ಏನು? ಆದರೆ ಮಹತ್ವದ ಯೋಜನೆಗಳ ಮೂಲಕ ಈ ಕಾರ್ಯದಲ್ಲಿ ಮೋದಿ ಅರ್ಥಪೂರ್ಣವಾಗಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಮಹಾತ್ಮ ಗಾಂಧೀಜಿಗಿಂತ ಮೋದಿ ಶ್ರೇಷ್ಠರಾಗಿದ್ದು, ಭಾರತೀಯ ಮೌಲ್ಯಗಳಿಗೆ ಸಾಕಷ್ಟು ಮನ್ನಣೆ ನೀಡುತ್ತಾರೆ. ನವರಾತ್ರಿ ವೇಳೆಯಲ್ಲಿ 9 ದಿನ ಉಪವಾಸ ಮಾಡುತ್ತಲೇ ನಿರಂತರವಾಗಿ ಕಾರ್ಯ ನಿರ್ವಹಿಸಿದ್ದು ಇದಕ್ಕೆ
ಸಾಕ್ಷಿ. ಜತೆಗೆ ಮೋದಿ ಹೆಸರಿನಲ್ಲಿ ವಿದೇಶದಲ್ಲಿ ಬ್ಯಾಂಕ್ ಖಾತೆಯಾಗಲಿ,ಮಕ್ಕಳು-ಅಳಿಯಂದಿರಾಗಲಿ ಇಲ್ಲ. ಹಾಗಾಗಿ ಅವರಿಗೆ ದೇಶವೇ ಮಕ್ಕಳು ಮತ್ತು
ಅಳಿಯಂದಿರಿದ್ದಂತೆ ಎಂದಿದ್ದಾರೆ ಲೋಕೇಶ್ ಚಂದ್ರ.
87 ವರ್ಷದ ಲೋಕೇಶ್ ಚಂದ್ರ ಅವರು 16 ಭಾಷೆಗಳಲ್ಲಿ ಪಾಂಡಿತ್ತವಿರುವವರು. ಸುಮಾರು 60 ಕೃತಿಗಳನ್ನು ಹೊರ ತಂದಿದ್ದಾರೆ. ಲೋಕೇಶ್ ಚಂದ್ರ ಅವರು ಇಂದಿರಾಗಾಂಧಿಯವರ ಕಾಲದಿಂದಲೂ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದರು. ಹಾಗೆ ತಮ್ಮ ಜೀವನದುದ್ದಕ್ಕೂ ಖಟ್ಟರ್ ಕಾಂಗ್ರೆಸ್ಸಿಗರಾಗಿದ್ದರು. ಈಗ ಮೋದಿಯವರನ್ನು ಭಗವಂತನ ಅವತಾರವಿದ್ದಂತೆ,ಮಹಾತ್ಮ ಗಾಂಧೀಜಿಗಿಂತಲೂ ಶ್ರೇಷ್ಠ ಎಂಬಂತೆ ಹೇಳಿದ್ದು ಕಾಂಗ್ರೆಸ್ಸಿನವರಿಗೆ ಇರಿಸು ಮುರಿಸಿನಂತಾಗಿದೆ.
ದೇಶಕ್ಕಾಗಿ ಒಂದೇ ಒಂದು ವಿರಾಮ ತೆಗೆದುಕೊಳ್ಳದೆ ಕೆಲಸ ಮಾಡುವ ಪ್ರಧಾನಿ ಇಲ್ಲಿಯವರೆಗೆ ಸಿಕ್ಕಿಲ್ಲ , ಕಪ್ಪು ಹಣದ ವಿರುದ್ಧ ಹೋರಾಟ, ಸೈನಿಕರಿಗೆ ಪ್ರೇರಣೆ ಮತ್ತು ಇತರ ರಾಜಕಾರಣಿಗಳಂತೆ ಜಾತಿ ಅಥವಾ ಮತ ಬ್ಯಾಂಕ್ ರಾಜಕೀಯವನ್ನು ಮಾಡದೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ನಿರಂತರ ಪ್ರಯತ್ನ ನಡೆಸಿದ ಮೊದಲ ಪ್ರಧಾನಿಯವರನ್ನು ಲೋಕೇಶ್ ಚಂದ್ರರವರು ಹೊಗಳಿದ್ದರಲ್ಲಿ ತಪ್ಪೇನಿದೆ? ಯಾವುದೇ ಪಕ್ಷವಾಗಿದ್ದರೂ ದೇಶದ ಪ್ರಗತಿಗಾಗಿ ಶ್ರಮಿಸುವವರನ್ನು ಹೊಗಳಿದ್ದರಲ್ಲಿ ತಪ್ಪಿಲ್ಲ. ಇದರಿಂದ ಒಂದಷ್ಟು ಕ್ರಿಮಿಗಳಿಗೆ ಇರಿಸುಮುರುಸಾದರೆ ಅದು ಅವರ ಕರ್ಮ.
ಮೋದಿಯವರು ಯಾವತ್ತೂ ಮತ ಬ್ಯಾಂಕ್ ಆಲೋಚನೆ ಮಾಡಲೇ ಇಲ್ಲ. ಮತ ಬ್ಯಾಂಕ್ ಉದ್ದೇಶ ಹೊಂದಿದ್ದರೆ ಪ್ರಧಾನಿ ಮೋದಿ ನೋಟ್ ಬ್ಯಾನ್ ನಂತಹ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ, ದೇಶದ ಪ್ರಯೋಜನಕ್ಕಾಗಿ ನೋಟ್ ಬ್ಯಾನ್ ಮತ್ತು ಸರ್ಜಿಕಲ್ ಸ್ಟ್ರೈಕ್ ನಿರ್ಧಾರ ಅಗತ್ಯವಾಗಿತ್ತು.
ಲೋಕೇಶ್ ಚಂದ್ರ ಅವರು ಮೋದಿಯವರು ಭಗವಂತನ ಅವತಾರವಿದ್ದಂತೆ ಎಂದು ಹೇಳಿದ್ದಕ್ಕೆ ಇಂಬು ಕೊಡುವಂತೆ ನೋಟ್ ಬ್ಯಾನ್ ನಂತರ ಮೋದಿಯವರ ವರ್ಚಸ್ಸು ಕಡಿಮೆಯಾಗಿಲ್ಲ ಹೊರತು ಜಾಸ್ತಿಯಾಗಿದೆ ಎಂದು ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದೆ. ನೋಟ್ ಬ್ಯಾನ್ ಮತ್ತು GST ನಂತರ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರೇ ಅತ್ಯಂತ ಪ್ರಖ್ಯಾತ ವ್ಯಕ್ತಿ ಎಂದು ಸಾಬೀತಾಗಿದೆ.
ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ ನೋಟ್ ಬ್ಯಾನ್ ನಂತರವೂ ದೇಶದ 88 % ಜನರು ಪ್ರಧಾನಿ ಮೋದಿಯವರ ಮೇಲೆ ಭರವಸೆ ಇಟ್ಟಿದ್ದಾರೆ. ಮೋದಿಯವರು ಏನೇ ಮಾಡಿದರು ಅದು ದೇಶದ ಅಭಿವೃದ್ಧಿಗೆ ಮಾತ್ರ ಎಂದು ಜನಸಾಮಾನ್ಯರಿಂದ ಹಿಡಿದು ದೊಡ್ಡವರ ತನಕ ಮೋದಿಯವರ ಪರವಾಗಿ ಮಾತನಾಡುತ್ತಿದ್ದಾರೆ.
ಇವೆಲ್ಲ ಅಂಶಗಳ ಜೊತೆ ಜೊತೆಗೆ ಕಳೆದ 4 ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿರುವುದು ಕಂಡು ಬಂದಿದೆ. ಈ ದಾಖಲೆಯ ಏರಿಕೆಗೆ ಕಾರಣವೇ ನೋಟ್ ಬ್ಯಾನ್ ಮತ್ತು GST ಎಂಬುದಂತು ನಿಜ. ಇದನ್ನು ಅಮೆರಿಕಾ ಮೂಲದ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನ ವರದಿಯ ದೃಢಪಡಿಸಿದೆ.
ಮೈಕಲ್ ಪಿಲ್ಸ್ಬರ್ ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕರು ಹಾಗೂ ಅಮೆರಿಕಾದ ಖ್ಯಾತ ತಜ್ಞ ಮೈಕೆಲ್ಯಾಂಜೆಲೊನ ಪಿಲ್ಸ್ಬರ್ ಅವರು ಮೋದಿಯವರ ಕುರಿತು ಗುಣಗಾನ ಮಾಡಿದ್ದಾಯ್ತು , ಅಮೆರಿಕಾದ ಖ್ಯಾತ ಅರ್ಥಶಾಸ್ತ್ರ ಮತ್ತು ನೊಬೆಲ್ ಪ್ರಶಸ್ತಿಯನ್ನು ಪಡೆದ ರಿಚರ್ಡ್ ಥಾಲೇರ್ ಅವರು ಮೋದಿಯವರನ್ನು ಕೊಂಡಾಡಿದ್ದಾಗಿದೆ. ಜಗತ್ತಿನ ದಿಗ್ಗಜ ಅರ್ಥ ಶಾಸ್ತ್ರಜ್ಞರೇ ಮೋದಿಯವರನ್ನು ಹೊಗಳಿದ್ದಾರೆಂದರೆ ಮೋದಿಯವರ ವರ್ಚಸ್ಸಿನ ಬಗ್ಗೆ ಊಹೆ ಮಾಡಿಕೊಳ್ಳಿ.
ಏನೇ ಇರಲಿ ಒಬ್ಬ ಖಟ್ಟರ್ ಕಾಂಗ್ರೆಸ್ಸಿಗ ಇಂದಿರಾಗಾಂಧಿಯವರ ಆಪ್ತರು ಮೋದಿಯವರನ್ನು ಹಾಡಿ ಹೊಗಳಿದ್ದು ಮೋದಿಯವರ ವರ್ಚಸ್ಸು ಜಾಸ್ತಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
-ಶಿವಾಂಶ