ಪ್ರಚಲಿತ

ಮೋದಿ ಮೋಡಿ!! ಈ ಬಾರಿ ಐಟಿ ಪತ್ತೆ ಮಾಡಿರುವ ಬೇನಾಮಿ ಆಸ್ತಿಯ ವಿವರ ಎಷ್ಟು ಗೊತ್ತೇ?!

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ನೋಟ್ ಬ್ಯಾನ್ ಬಳಿಕ ಕಾಳಧನಿಕರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿರುವ ವಿಚಾರ ತಿಳಿದೇ ಇದೆ. ಹಾಗಾಗಿ ಕಾಳ ಧನಿಕರು ತಮ್ಮಲ್ಲಿರುವ ಬ್ಲ್ಯಾಕ್ ಮನಿಯನ್ನು ವೈಟ್ ಮನಿಯನ್ನಾಗಿಸಿ ಬೇನಾಮಿ ಆಸ್ತಿಗಳನ್ನು ಮಾಡಿ ಸರ್ಕಾರಕ್ಕೆ ಮೋಸಮಾಡಲು ಯತ್ನಿಸಿದ್ದು, ಇದೀಗ ಮೋದಿ ಸರ್ಕಾರದ ಬೇನಾಮಿ ಆಸ್ತಿಯ ವಿರುದ್ದದ ಕ್ರಮದ ಭಾಗವಾದ ಸಿಬಿಡಿಟಿ, ಅಧಿಕೃತವಾಗಿ ಬೇನಾಮಿ ಆಸ್ತಿಯ ಮಾಹಿತಿಯನ್ನು ಪ್ರಕಟಿಸಿದೆ!!

ಹೌದು… ಕಾಳಧನಿಕರು ಬ್ಲ್ಯಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಮಾಡಿಕೊಳ್ಳಲು ನಕಲಿ ಕಂಪನಿಗಳನ್ನು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ, ವಿದೇಶಿ ಅಕ್ರಮ ಆಸ್ತಿ, ಬೇನಾಮಿ ಕಂಪನಿಗಳು ಮತ್ತು ತೆರಿಗೆ ವಂಚನೆಯಿಂದ ವಿದೇಶಿ ಬ್ಯಾಂಕ್ ಗಳಲ್ಲಿ ಕೋಟಿಗಟ್ಟಲೆ ಅಡಗಿಸಿಟ್ಟಿರುವ ಮಾಹಿತಿ ಈಗಾಗಲೇ “ಪನಾಮ ಪೇಪರ್ಸ್” ಹಾಗೂ “ಪ್ಯಾರಾಡೈಸ್ ಪೇಪರ್ಸ್” ಬಿಡುಗಡೆ ಮಾಡಿದೆ!! ಇನ್ನು ಆದಾಯ ತೆರಿಗೆ ಇಲಾಖೆ ಬರೋಬ್ಬರಿ 1,833 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿದ್ದು, ಈ ಹಿನ್ನಲೆಯಲ್ಲಿ ಮೋದಿ ಸರ್ಕಾರದ ಬೇನಾಮಿ ಆಸ್ತಿಯ ವಿರುದ್ದದ ಕ್ರಮದ ಭಾಗವಾಗಿ ಸಿಬಿಡಿ ಇತ್ತೀಚೆಗೆ ಅಧಿಕೃತವಾಗಿ ಈ ಮಾಹಿತಿಯನ್ನು ಪ್ರಕಟಿಸಿದೆ.

ಈ ಬಗ್ಗೆ ಕೇಂದ್ರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಹೇಳಿರುವ ಪ್ರಕಾರ, “ತೆರಿಗೆ ಇಲಾಖೆಯು ತನ್ನ ನಿರಂತರ ಕ್ರಮದ ಯೋಜನೆಯಡಿ ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಈ ಕ್ರಮಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, “ಈ ತನಿಖೆ ಯಾವುದೇ ಕಾರಣಕ್ಕೂ ಅಂತ್ಯಗೊಳ್ಳುವುದಿಲ್ಲ ಎಂದು ನಾನು ಸ್ಪಷ್ಟ ಪಡಿಸುತ್ತೇನೆ ಅಂತಹ ಆಸ್ತಿಗಳ ಬಗ್ಗೆ ಲಭ್ಯವಿರುವ ಎಲ್ಲಾ ಆದಾಯದ ಮಾಹಿತಿಯನ್ನೂ ನಾವು ಪಡೆಯುತ್ತೇವೆ. ಹಾಗೆಯೇ, ಬೇನಾಮಿ ಅಕ್ರಮ ಆಸ್ತಿಗಳನ್ನು ಗುರುತಿಸಿ ಬಲವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ!!

ಯಾವ ರಾಜ್ಯದಲ್ಲಿ ಎಷ್ಟು ಬೇನಾಮಿ ಆಸ್ತಿ ಪ್ರಕರಣಗಳು ದಾಖಲಾಗಿವೆ ಗೊತ್ತೇ??!!!

“ಬೇನಾಮಿ” ಆಸ್ತಿಯ ವಿರುದ್ದ ಸೆಟೆದು ನಿಂತಿರುವ ಮೋದಿ ಸರಕಾರ ಆಕ್ರಮ ಆಸ್ತಿಗಳನ್ನೆಲ್ಲ ಬಯಲಿಗೆಳೆಯುವುದು ಖಂಡಿತ…. ಅಷ್ಟೇ ಅಲ್ಲದೇ, ಐಟಿ ಇಲಾಖೆಯು 1,833 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮೇಲೆ ಒಟ್ಟು 517 ನೋಟಿಸ್ ಜಾರಿಗೊಳಿಸಿದೆ ಎಂದು ಅಕ್ಟೋಬರ್ ವರೆಗಿನ ಅಧಿಕೃತ ಮಾಹಿತಿ ತಿಳಿಸಿದೆ!! ಇನ್ನು ಇಲ್ಲಿಯವರೆಗೆ ಅಹಮದಾಬಾದ್ ಒಂದರಲ್ಲೇ 136 ಪ್ರಕರಣಗಳು ದಾಖಲಾಗಿವೆ!! ಅದರಂತೆ ಭೋಪಾಲ್ ನಲ್ಲಿ 93ಗಳು ದಾಖಲಾಗಿದ್ದರೆ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 76 ಪ್ರಕರಣಗಳು ದಾಖಲಾಗಿವೆ!! ಅಷ್ಟೇ ಅಲ್ಲದೇ, ಚೆನ್ನೈ ನಲ್ಲಿ 72 ಪ್ರಕರಣಗಳು , ಜೈಪುರದಲ್ಲಿ 62 ಪ್ರಕರಣಗಳು, ಮುಂಬೈನಲ್ಲಿ 61 ಪ್ರಕರಣಗಳು ಮತ್ತು ದೆಹಲಿಯಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿವೆ!!

ಹಿಮಾಚಲ ಪ್ರದೇಶದ ಇತ್ತೀಚಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ಬೇನಾಮಿ” ಆಸ್ತಿಗಳ ಮೇಲೆ ನಿರಂತರ ಕಠಿಣ ಕ್ರಮದ ಬಗ್ಗೆ
ಸುಳಿವು ನೀಡಿದ್ದರು, ಇದೀಗ ತೆರಿಗೆ ಇಲಾಖೆ ಕಾರ್ಯಾಚರಣೆಗೆ ಇಳಿದಿರುವುದು ಬೆನಾಮಿ ಆಸ್ತಿ ಹೊಂದಿರುವವರಿಗೆ ಭಾರಿ ಹೊಡೆತ ನೀಡಿದೆ..! ಅಷ್ಟೇ ಅಲ್ಲದೇ
ಬೇನಾಮಿ ಆಸ್ತಿ ಹೊಂದಿರುವ ಪ್ರತಿಯೊಬ್ಬರಿಗೂ ಬೇನಾಮಿ ಆಸ್ತಿಯೇ ಬಿಸಿ ತುಪ್ಪದಂತೆ ಪರಿಣಮಿಸಿದಂತೂ ಖಂಡಿತ…….!!!

ಇನ್ನು, ಹಿಮಾಚಲ ಪ್ರದೇಶದಲ್ಲಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೇನಾಮಿ ಆಸ್ತಿಯ ಮೇಲೆ ಕ್ರಮ ಕೈಗೊಳ್ಳುವ ಭಯದಿಂದ ನೋಟ್ ಬ್ಯಾನ್ ಬಗ್ಗೆ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಹೇಳಿದ ಅವರು, ಭ್ರಷ್ಟಾಚಾರದ ವಿರುದ್ದದ ಹೋರಾಟ
ಮುಂದುವರೆಸುವುದಾಗಿ ಸ್ಪಷ್ಟ ಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನರನ್ನು ತಪ್ಪು ದಾರಿಗೆ ಎಳೆದುಕೊಳ್ಳುವ ಕಾಂಗ್ರೆಸ್‍ನ ಅಭಿಯಾನ ಯಾವತ್ತೂ ಯಶಸ್ಸನ್ನು ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ!!

“ಬಡವರಿಂದ ಕಳವು ಮಾಡಿದ್ದನ್ನು ಮರಳಿ ಪಡೆಯುವ ಸಮಯ ಬಂದಿದೆ. ಕಾಂಗ್ರೆಸ್ ಮುಖಂಡರು ತಮ್ಮ ಬೇನಾಮಿ ಆಸ್ತಿಯನ್ನು ಪುನಃ ಪಡೆದುಕೊಳ್ಳುವಂತಿಲ್ಲ ಅಂತಹ ಪರಿಸ್ಥಿತಿಯನ್ನು ನಾನು ಸೃಷ್ಟಿಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದರು. ಅಷ್ಟೇ ಅಲ್ಲದೇ, ಕಪ್ಪು ದಿನವೆಂದು ನವೆಂಬರ್ 8 ರಂದು ನೋಟ್ ಬ್ಯಾನಿನ ಮೊದಲ ವಾರ್ಷಿಕೋತ್ಸವವನ್ನು ಕೈಗೊಳ್ಳುವ ಕಾಂಗ್ರೆಸ್ಸಿನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ ಇದು ನಿಜವಾಗಿ ವಿರೋಧ ಪಕ್ಷಕ್ಕೆ “ಕಪ್ಪ ಹಣದ ದಿನ” ಎಂದು ಹೇಳಿದ್ದಾರೆ!!

ಕಾಂಗ್ರೆಸ್ ಮುಖಂಡರಿಂದ ಕೆಲವು ಮಾಹಿತಿ ಪಡೆಯಲು ನಾನು ಪ್ರಯತ್ನಿಸಿದೆ, ನೋಟ್ ಬ್ಯಾನ್ ನಂತರ ಕೆಲವು ಕಾಂಗ್ರೆಸ್ ಮುಖಂಡರು ಅಕ್ರಮವಾದ ಕೋಟಿ ಕೋಟಿರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಈ ಮಧ್ಯೆ, ಮೋದಿ ಬೇನಾಮಿ ಕಾನೂನಿನೊಂದಿಗೆ ಬಂದಿದ್ದಾರೆ ಎನ್ನುವ ಭಯ ಈ ಕಾಂಗ್ರೆಸ್ ಮುಖಂಡರಿಗೆ ಕಾಣುತ್ತಿರುವುದುಮಾತ್ರ ಅಕ್ಷರಶಃ ನಿಜ!!!.

ಬೇನಾಮಿ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಏನು ಗೊತ್ತೇ??

2016ರ ನವೆಂಬರ್ 1ರಂದು ಭಾರತ ಸರ್ಕಾರ ಹೊಸ ಬೇನಾಮಿ ಕಾಯ್ದೆಯನ್ನು ಜಾರಿಗೆ ಗೊಳಿಸಿತ್ತು. ಈ ಹಿನ್ನಲೆಯಲ್ಲಿ ಬೇನಾಮಿ ಕಾಯ್ದೆ ಜಾರಿಗೊಳಿಸಿದ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ದೇಶದಾದ್ಯಂತ 24 ಬೇನಾಮಿ ನಿಷೇಧ ಘಟಕಗಳನ್ನು ಸ್ಥಾಪಿಸಿ ತನ್ನ ಕೆಲಸವನ್ನು ಪ್ರಾರಂಭಿಸಿರುವ ಇಲಾಖೆ, ಬೇನಾಮಿ ವ್ಯವಹಾರಗಳಮೇಲೆ ಕ್ರಮ ಕೈಗೊಳ್ಳಲು ಸಜ್ಜಾಗಿದ್ದ ವಿಚಾರ ತಿಳಿದೆ ಇದೆ!!

ಬೇನಾಮಿ ಪ್ರಕರಣದಲ್ಲಿ ಅಪರಾಧಿಗಳಿಗೆ ಕಾನೂನಿನ ಪ್ರಕಾರ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ!! ಇನ್ನು ಈ ಪ್ರಕರಣದಲ್ಲಿ ಸ್ಥಿರ, ಚರ ಇನ್ನಿತರ ಆಸ್ತಿಗಳು ಒಳಗೊಂಡಿರುತ್ತದಲ್ಲದೇ, ಬೇರೊಬ್ಬನ ಹೆಸರಲ್ಲಿ ಆಸ್ತಿ ಹೊಂದಿದ್ದರೂ ಕೂಡ ಈ ಪ್ರಕರಣದ ಅಡಿಯಲ್ಲಿ ಬರುತ್ತದೆ ಎಂದು ತಿಳಿಸಿದೆ.

ಇನ್ನು, 2016 ರಿಂದ ತನಿಖೆ ಆರಂಭಿಸಿರುವ ಆದಾಯ ತೆರಿಗೆ ಇಲಾಖೆ ಮೇ 23, 2017ರವರೆಗೆ ಸುಮಾರು 400 ಬೇನಾಮಿ ಟ್ರಾಂಜಕ್ಸನ್‍ಗಳನ್ನು ಪತ್ತೆ
ಹಚ್ಚಿತ್ತು!! ಇದರಲ್ಲಿ ಬ್ಯಾಂಕ್ ಖಾತೆಗಳಲ್ಲಿನ ಡೆಪಾಸಿಟ್, ಜಮೀನು ಹಂಚಿಕೆ ಹಾಗೂ ನಿವೇಶನ ಮತ್ತು ಆಭರಣಗಳು ಸೇರಿವೆ ಎಂದು ಇಲಾಖೆ ತಿಳಿಸಿದೆ. ಇನ್ನು,
ಕೋಲ್ಕತ್ತಾ, ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನ್ ಹಾಗೂ ಮಧ್ಯ ಪ್ರದೇಶದಲ್ಲಿ ಸುಮಾರು 530 ಕೋಟಿಗಿಂತ ಹೆಚ್ಚು ಬೇನಾಮಿ ವ್ಯವಹಾರ ನಡೆದಿವೆ ಎಂದು ಇಲಾಖೆ ತಿಳಿಸಿದೆ!! ಆದರೆ ಈ ಬಾರಿ ಆದಾಯ ತೆರಿಗೆ ಇಲಾಖೆ ಬರೋಬ್ಬರಿ 1,833 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿದ್ದು ಹೆಮ್ಮೆಯ ವಿಚಾರವಾಗಿದೆ.

– ಅಲೋಖಾ

Tags

Related Articles

Close