ಅಂಕಣಪ್ರಚಲಿತ

ಮೋದಿ ಯಮರಾಜ ಮತ್ತು ರಾವಣ!! ಮೋದಿಯೊಬ್ಬ ಕೋತಿ, ರೇಬೀಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ!! ಎಂದೆಲ್ಲಾ ಹೇಳಿದ್ದು ಯಾರು ಗೊತ್ತೇ??

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್”ನ್ನು ರದ್ದುಗೊಳಿಸಬೇಕೆಂದು ಮಹಾತ್ಮಾ ಗಾಂಧೀಜಿ 7 ದಶಕಗಳ ಹಿಂದೆ ಹೇಳಿದ್ದರು!! ಖಂಡಿತವಾಗಿಯೂ ಭಾರತವನ್ನು ಕರುಣಾಜನಕ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದು ಗಾಂಧೀಜಿಗೆ ಮೊದಲೇ ಗೊತ್ತಿತ್ತೋ ಏನೋ ಗೊತ್ತಿಲ್ಲ!! ಆದರೆ ಕಾಂಗ್ರೆಸ್ ಪಕ್ಷವೂ ಶೀಘ್ರದಲ್ಲೇ ಭಾರತವನ್ನು ಕರುಣಾಜನಕ ಪರಿಸ್ಥಿತಿಗೆ ತಳ್ಳಲಿರುವುದಂತೂ ಖಂಡಿತಾ….

ಹೌದು… ಕಾಂಗ್ರೆಸ್ ತನ್ನನ್ನು ತಾವು ಜಾತ್ಯತೀತ ಪಕ್ಷವೆಂದು ಕರೆಸಿಕೊಳ್ಳುತ್ತದೆಯಲ್ಲದೇ, ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ನಿಗ್ರಹಿಸಲು ಕೋಮುವಾದಿ ಕಾಮೆಂಟ್ ಗಳನ್ನು ನೀಡುತ್ತಾ, ನಾಲಗೆ ಇಲ್ಲದ ಎಲುಬು ಏನು ಬೇಕಾದರೂ ಹೇಳುತ್ತೆ ಎನ್ನುವಂತೆ ಕಾಂಗ್ರೆಸ್ಸಿಗರು ತನ್ನ ಪ್ರತಿಸ್ಪರ್ಧಿಗಳ ಮೇಲೆ ಮಾತಿನ ಪ್ರವಾಹ ಹರಿಸುತ್ತಿರುವುದು ಗೊತ್ತೇ ಇದೆ!! ಆದರೆ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ಅವರನ್ನು ಹೇಗೆ ದುರುಪಯೋಗಪಡಿಸಿಕೊಂಡಿದೆ ಎನ್ನುವುದನ್ನು ನೋಡೋಣ.

* ಮೋದಿ “ಯಮರಾಜ್” !!! ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಈ ರೀತಿಯಾಗಿ ಕರೆದಿದ್ದಾರೆ.

* ಮೋದಿಗೆ ಗುರಿಯಾಗಿಸಿ ಸೋನಿಯಾ ಗಾಂಧಿ ಬಳಸಿದ ಪದ “ಮೌತ್ ಕಾ ಸೌಧಗರ್” ಅಂದರೆ “ಸಾವಿನ ವ್ಯಾಪಾರಿ” ಎಂದು ಕರೆದಿದ್ದು, ಕಾಂಗ್ರೆಸ್ ಪಕ್ಷವು ಹೇಗೆ ನೈತಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಮೋದಿ ತನ್ನ ಆಡಳಿತದಲ್ಲಿ ಧರ್ಮಗಳ ನಡುವೆ ವಿಷದ ಬೀಜ ಬಿತ್ತಿ ವಿಷದ ಫಸಲನ್ನು ತೆಗೆಯುವ ವ್ಯಕ್ತಿ ಎಂದು ಸೋನಿಯಾ ಗಾಂಧಿ 2007 ರಲ್ಲಿ ಮೋದಿಯನ್ನು ಟೀಕಿಸಿದ್ದರು.

* “ಝೇರ್ ಕೀ ಕೆಳಿ” (ವಿಷದ ಫಲ) !!! ಮತ್ತೊಮ್ಮೆ ಈ ಅವಹೇಳನಕಾರಿ ಪದವನ್ನು ಬಳಸಿದ್ದು, ಇದರ ಕ್ರೆಡಿಟ್ ಕೂಡ ಸೋನಿಯಾ ಗಾಂಧಿಗೆ ಹೋಗುತ್ತದೆ.

* ಪ್ರಧಾನಿ ಮೋದಿ ಅವರನ್ನು ಸೋಲಿಸಲು ಪಾಕಿಸ್ತಾನವನ್ನು ಒತ್ತಾಯಿಸಿದ ಶ್ರೀ ಮಣಿಶಂಕರ್ ಅಯ್ಯರ್ ಒಮ್ಮೆ ಪ್ರಧಾನಿ ಮೋದಿ ಅವರನ್ನು 2013 ರಲ್ಲಿ ಹಾವು, ಚೇಳು ಮತ್ತು ಕೊಳಕು ವ್ಯಕ್ತಿ ಎಂದು ಕರೆದಿದ್ದರು. ಅಷ್ಟೇ ಅಲ್ಲದೇ “ಆಸಥ ಕಾ ಸೌಧಗರ್” (ಸುಳ್ಳಿನ ವ್ಯಾಪಾರಿ) ಎಂದು ಮತ್ತೊಮ್ಮೆ ಮಣಿ ಶಂಕರ್ ಅಯ್ಯರ್ ಪ್ರಧಾನಿ ಮೋದಿಯನ್ನು ಈ ರೀತಿಯಾಗಿ ಆರೋಪ ಮಾಡಿದ್ದಾರೆ.

* “ಮೋದಿ ರಾವಣ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಲ್ಲದೇ, ಈ ಹಿಂದೆ ಮೋದಿಯ ಅನುಯಾಯಿಗಳನ್ನು ‘ಚುಟಿಯ‘ ಎಂದು ಕರೆದಿದ್ದರು.

* ಗುಜರಾತ್‍ನ ಕಾಂಗ್ರೆಸ್ ನಾಯಕ ಅರ್ಜುನ್ ಮೊಧ್ವಾಡಿಯಾ ಅವರು 2012ರ ಅಕ್ಟೋಬರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯ ಭಾಷಣದಲ್ಲಿ ಮೋದಿ ಅವರೊಬ್ಬ ಕೋತಿ ಮತ್ತು ರೇಬೀಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು.

* ಇವರಷ್ಟೇ ಅಲ್ಲದೇ, ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭೆ ಎಂಪಿ ಹುಸೈನ್ ದಳವೈ ಅವರು ಪ್ರಧಾನಿ ಮೋದಿ ಒಬ್ಬ ಇಲಿ ಎಂದು ಹೇಳಿದ್ದಾರೆ!!

* ಕಾಂಗ್ರೆಸ್ ವಕ್ತಾರರಾದ ಮನೀಶ್ ತಿವಾರಿಯವರು ಮೋದಿ ಅವರನ್ನು ದಾವೂದ್ ಇಬ್ರಾಹಿಂ ಜೊತೆ ಹೋಲಿಸಿದ್ದಲ್ಲದೇ, ಇತ್ತೀಚೆಗಷ್ಟೇ ಮೋದಿ ಹಿಂಬಾಲಕರನ್ನು “ಚುಟಿಯಸ್” ಎಂದು ಕರೆದಿದ್ದರು. ಆದರೆ ಭಾರತೀಯ ಗುಪ್ತಚರ ಸಂಸ್ಥೆಯು ಕುಖ್ಯಾತ ಭಯೋತ್ಪಾದಕರನ್ನು ಬಂಧಿಸಲು ಸಿದ್ದವಾಗಿದ್ದರೂ ಕೂಡ ದಾವೂದ್ ಇಬ್ರಾಹಿಂನನ್ನು ಕಾಂಗ್ರೆಸ್ ಸರ್ಕಾರ ಏಕೆ ಬಂಧಿಸಲಿಲ್ಲ ಎನ್ನುವುದನ್ನು ಮಾತ್ರ ಹೇಳಲಿಲ್ಲ!!

* ಕಾಂಗ್ರೆಸ್ ಪಕ್ಷವು ಈ ರೀತಿಯಾಗಿ ಕೀಳಾಗಿ ಮಾತಾನಾಡುವ ತಂತ್ರಗಳನ್ನು ಬಳಸುವುದೇ ಇವರ ಕಾಯಕವಾಗಿದ್ದು, “ಹೆಂಡತಿಯನ್ನು ನೋಡಿಕೊಳ್ಳಾಗದ ಮೋದಿ ಅಪ್ರಯೋಜಕ ಪತಿ”, “ಮೋದಿ ಔರಂಗಜೇಬ್ ನ ಹಾಗೆ” ಎಂದು ನಾಯಕ ಅರ್ಜುನ್ ಮೊಧ್ವಾಡಿಯಾ ಹೇಳಿದ್ದರು.

* “ಮೋದಿ ಒಬ್ಬ ನಾಲಾಯಕ್, ಅವನ ಅಪ್ಪ ಅಮ್ಮ ಯಾರು??” ಎನ್ನುವ ಮಾತುಗಳು ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ ಬೇರೆ ಯಾರು ಹೇಳಲು ಸಾದü್ಯ?? ಈ ಮಾತನ್ನು ಹೇಳಿದ್ದು ಬೇರಾರು ಅಲ್ಲ!! ಕಾಂಗ್ರೆಸ್ ನಾಯಕ ರಿಜ್ವಾನ್ ಉಸ್ಮಾನಿ ಎಂದು 2009 ರಲ್ಲಿ ಈ ರೀತಿಯಾಗಿ ಪ್ರಶ್ನಿಸಿದ್ದಾರೆ!!

* ಜೂನ್ 7, 2013 ರಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧ್ರಿ “ಈ ದೇಶಕ್ಕೆ ಮೋದಿ ವೈರಸ್ ಇದ್ದ ಹಾಗೆ” ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಜೂನ್ 8, 2013 ರಲ್ಲಿ
ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮೋದಿಯೊಬ್ಬ ಕೋತಿ ಎಂದಿದ್ದಾರೆ!!

* “ಮೋದಿ ಭಸ್ಮಾಸುರ” ಎಂದು ಜೂನ್ 13, 2013 ರಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು. “ಮೋದಿಯೊಬ್ಬ ಹುಚ್ಚು ನಾಯಿ”, “ಮೋದಿಯೊಬ್ಬ ಗೂಂಡಾ”, “ಮೋದಿಯೊಬ್ಬ ವಿಚಿತ್ರ ಪ್ರಾಣಿ” ಎಂದು ಕಾಂಗ್ರೆಸ್ ನಾಯಕ ಬೇನಿ ಪ್ರಸಾದ ಹೇಳಿದ ಮಾತಾಗಿದೆ.

* ಕರ್ನಾಟಕ ನಾಡಿನ “ನೆಚ್ಚಿನ” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಮೋದಿ ನರಹಂತಕ” ಎಂದು ಏಪ್ರಿಲ್ 2014 ರಲ್ಲಿ ಹೇಳಿದ್ದ ಮಾತು ಹೇಳಿದ್ದ ಮಾತಾಗಿದೆ. ಇನ್ನು “ಮೋದಿ ಕ್ರೂರಿ, ಹಿಟ್ಲರ್, ಬಿಜೆಪಿಯೊಂದು ಕೋಮುವಾದಿ ಪಕ್ಷ” ಎಂದು ಮೆಗಾ ಸ್ಟಾರ್ ಚಿರಂಜೀವಿ ಹೇಳಿದ್ದಲ್ಲದೇ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ “ಮೋದಿಯದ್ದು ನೀಚ ರಾಜನೀತಿ” ಎಂದು ಹೇಳಿದ್ದರು!!

ವಿಪರ್ಯಾಸ ಎಂದರೆ, ರಾಮಾಯಣ ಮತ್ತು ಮಹಾಭಾರತದಲ್ಲಿ ನಂಬಿಕೆ ಇರದ ಪಕ್ಷವು ಅದರ ಖಳನಾಯಕನ ಪಾತ್ರಗಳ ಬಗ್ಗೆ ಚೆನ್ನಾಗಿಯೇ ತಿಳಿದಿದ್ದಾರೆ ಎಂದನಿಸುತ್ತದೆ. ಪ್ರಧಾನಿ ಮೋದಿಯವರನ್ನು “ರಾವಣ್” ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದು, ಇನ್ನೊಬ್ಬ ಕಾಂಗ್ರೆಸ್ ನಾಯಕನಾಗಿರುವ ಜೈರಾಮ್ ರಮೇಶ್ ಅವರು ಪ್ರಧಾನಿ ಮೋದಿ ಅವರನ್ನು “ಭಸ್ಮಾಸುರ, ಅವರು ಎಲ್ಲರನ್ನೂ ನುಂಗುತ್ತಾರೆ” ಎಂದು ಹೇಳಿದ್ದಾರೆ. ಆದರೆ ಮೋದಿ ನುಂಗಿರುವುದು ಮಾತ್ರ ಭ್ರಷ್ಟಚಾರಿಗಳನ್ನು ಅನ್ನೋದನ್ನು ಕಾಂಗ್ರೆಸ್ಸಿಗರು ಮರೆಯಬಾರದು!!

ಈ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ಮೋದಿಯವರನ್ನು ಗುಜರಾತಿನ ಖಳನಾಯಕರಾಗಿ, ಮುಸ್ಲಿಂ ವಿರೋಧಿಯಾಗಿ ಬಿಂಬಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಅಷ್ಟೇ ಅಲ್ಲದೇ, 2002 ರಿಂದ 2014 ರವರೆಗೆ 12 ವರ್ಷಗಳ ಕಾಲ ಮೋದಿಯವರ ತೇಜೋವಧೆ ಮಾಡೋಕೆ ಕಾಂಗ್ರೆಸ್ ಇನ್ನಿಲ್ಲದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು. ಆದರೆ ಶುದ್ಧಚಾರಿತ್ರ್ಯವುಳ್ಳ ಮೋದಿ 12 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ 2014 ರಲ್ಲಿ ಭಾರತದ ಪ್ರಧಾನಿಯಾಗೇ ಬಿಟ್ಟರು. ಇದರಿಂದ ಹೊಟ್ಟೆಗೆ ಬೆಂಕಿ ಬಿದ್ದಿದ್ದ ಕಾಂಗ್ರೆಸ್ಸಿಗರು, ಎಡಪಕ್ಷಗಳು, ಸೋ ಕಾಲ್ಡ್ ಸೆಕ್ಯೂಲರ್ ಪಕ್ಷಗಳು ಮೋದಿಯನ್ನು ಟೀಕಿಸುವುದನ್ನು ಮಾತ್ರ ಇನ್ನೂ ಬಿಡಲೇ ಇಲ್ಲ ಎನ್ನುವುದು ವಿಪರ್ಯಾಸ!!

source:
http://postcard.news/modi-yamraj-ravan-modi-monkey-suffering-rabies-know-said/
ಅಲೋಖಾ

Tags

Related Articles

Close