ಪ್ರಚಲಿತ

ಮೋದಿ, ಯೋಗಿಯನ್ನು ಮಹಾನ್ ನಟರೆಂದ ಪ್ರಕಾಶ್ ರೈಗೆ ರಂಗಭೂಮಿ ಕಲಾವಿದನಿಂದ ಒಂದು ಬಹಿರಂಗ ಪತ್ರ!

ಹಾಯ್ ಪ್ರಕಾಶ್ ರೈ…. ನಮಸ್ಕಾರ..
ಎಲುಬಿಲ್ಲದ ನಾಲಗೆ ಹೇಗೆ ಬೇಕಾದ್ರೂ ಮಾತಾಡಬಲ್ಲುದು ಎನ್ನುವುದಕ್ಕೆ ನಿಮ್ಮ ನಾಲಗೆಯೇ ಸಾಕ್ಷಿ.. ಮಹಾನ್ ನಟನೆಂಬ ಅಹಂಕಾರ ತಲೆಯಲ್ಲಿ ಅಡರಿದರೆ ನಾಲಗೆ ಹೇಗೆ ಬೇಕಾದ್ರೂ ಆಡುತ್ತದೆ ಅಲ್ಲವೇ… ನಾನೂ ನಿಮ್ಮಂತೆ ರಂಗಭೂಮಿಯ ಒಬ್ಬ ಕಲಾವಿದ. ನಾನೂ ಕೂಡಾ ನಿಮ್ಮಂತೆ ಲಾಬಿ ನಡೆಸಿದ್ದರೆ ನನಗೂ ನಿಮಗಿಂತ ಜಾಸ್ತಿ ರಾಷ್ಟ್ರಪ್ರಶಸ್ತಿಗಳು ಸಿಗಬಹುದಿತ್ತು. ಆದರೆ ಪ್ರಶಸ್ತಿಗಿಂತ ಅಭಿಮಾನಿಗಳ ಪ್ರೀತಿ ಮುಖ್ಯ ಎಂದು ನಂಬಿರುವ ಕಾರಣ ಯಾವ ಪ್ರಶಸ್ತಿಗೂ ಕಾಯದೆ ನನ್ನಷ್ಟಕ್ಕೇ ನಾನೇ ಕಲಾಸೇವೆ ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ…. ನನ್ನಂತೆಯೇ ರಂಗಭೂಮಿ ಕಲಾವಿದರಾರ ನಿಮಗೆ ನಾನು ಕೆಲವೊಂದು ಪ್ರಶ್ನೆ ಕೇಳುತ್ತೇನೆ.. ನೀವದಕ್ಕೆ ಪ್ರಾಮಾಣಿಕ ಉತ್ತರ ಕೊಡಬೇಕೆಂದು ನನ್ನ ವಿನಂತಿ…

ನಾನು ನೇರವಾಗಿಯೇ ಕೇಳಿಬಿಡುತ್ತೇನೆ…. ರಂಗಭೂಮಿ ಕಲಾವಿದನೆಂದರೆ ಯಾರು… ರಂಗಭೂಮಿ ಕಲಾವಿದ ಹೇಗಿರಬೇಕು… ಕಲಾವಿದ ಒಂದು ಗುಂಪಿಗೆ ಮಾತ್ರ ಸೀಮಿತನಾಗಿರಬೇಕೇ? ಅಥವಾ ಒಂದು ಗುಂಪಿನ ಜನ ಮಾತ್ರ ನಿಮ್ಮ ನಟನೆಯನ್ನು ನೋಡಬೇಕಾ? ನೀವು ನೀಡುವ ಹೇಳಿಕೆ ನೀಡುವ ಪ್ರಕಾರ ನೀವು ಪ್ರಗತಿಪರರ ಜೊತೆ ಗುರುತಿಸಿಕೊಂಡವರು. ಹಾಗಾದರೆ ನಿಮ್ಮ ನಟನೆಯನ್ನು ಪ್ರಗತಿಪರರು ನೋಡಿದರಷ್ಟೇ ಸಾಕಾ? ರಂಗಭೂಮಿ ಕಲಾವಿದರು ಒಂದು ಸಮುದಾಯ, ಧರ್ಮಕ್ಕೆ ಮಾತ್ರ ಸೀಮಿತರಾಗಿರಬೇಕಾ?

ನಿಮ್ಮ ಹೇಳಿಕೆ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ವಿಡಿಯೋ ಒಂದನ್ನು ನೋಡಿದೆ, ಅದರಲ್ಲಿದ್ದುದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು.

ಹೆಲೋ ಮಿಸ್ಟರ್ ಪ್ರಕಾಶ್ ರೈ… ಯೋಗೀಜಿ ದೇವಸ್ಥಾನದ ಪೂಜಾರಿಯಂತೆ ಕಂಡುಬಂದರು ಎಂದಿರಲ್ಲ ಹಾಗಾದರೆ ಮುಖ್ಯಮಂತ್ರಿಗಳ ಉಡುಗೆ ಯಾವ ರೀತಿ
ಇರಬೇಕು ಎಂದು ರೂಲ್ಸ್ ಇದೆಯಾ.. ಯೋಗಿ ಸನ್ಯಾಸಿ ದೀಕ್ಷೆ ತೆಗದುಕೊಂಡಿರುವುರಿಂದ ಅವರು ಕಾವಿ ಧರಿಸುತ್ತಾರೆ. ಒಂದೊಂದು ರಾಜ್ಯದ ಮುಖ್ಯಮಂತ್ರಿ
ಒಂದೊಂದು ರೀತಿಯ ವಸ್ತ್ರ ಧರಿಸುತ್ತಾರೆ.. ಆದರೆ ಯೋಗೀಜಿ ಮಾತ್ರ ಉಟ್ಟಿರುವ ಉಡುಗೆ ನೋಡಿ ನಿಮಗೆ ನಾಟಕದಂತೆ ಕಂಡಿತೆಂದರೆ ನಿಮಗೆ ಕಾವಿ ಮೇಲೆ
ಸಿಟ್ಟೋ ಅಥವಾ ಯೋಗಿ ಮೇಲೆ ಸಿಟ್ಟೋ… ಹಾಗೆಂದು ಮುಖ್ಯಮಂತ್ರಿಗಳಿಗೆ ಇಂಥದ್ದೇ ಆದ ಸಮವಸ್ತ್ರ ಇದೆಯಾ?

ಒಬ್ಬ ಧರಿಸಿದ ಉಡುಗೆಯನ್ನು ನೋಡಿಕೊಂಡು ಯೋಗ್ಯತೆ ಅರಿಯುವ ನೀವು, ನೀವು ಧರಿಸುವ ಉಡುಗೆಯಿಂದ ನಿಮ್ಮ ಯೋಗ್ಯತೆಯನ್ನು ಅಳೆಯಬೇಕಿತ್ತೇ? ಯೋಗೀಜಿ ವಿಡಿಯೋ ನೋಡಿ ಅವರು ಚೀಫ್ ಮಿನಿಸ್ಟರೋ ಅಥವಾ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ನಟನೆಯಿತ್ತು ಎನ್ನುವ ನೀವು ಹಾಗಾದರೆ ನಟನೆ ಎಂದರೆ ಏನು? ಯೋಗೀಜಿ ವರ್ತನೆಗೂ ನೀವು ಹೇಳುವ ನಟನೆಗೂ ಏನು ಸಂಬಂಧ… ನೀವು ನಿನ್ನೆ ಭಾಷಣ ಮಾಡಿರುವುದನ್ನೂ ನಾನು ನಟನೆ ಎಂದು ಕರೆಯಬೇಕೇ? ಯೋಗೀಜಿಯವರದ್ದು ನಟನೆ ಎನುವ ನೀವು ಯೋಗೀಜಿ ರಾಜಕೀಯಕ್ಕೆ ಬಂದು ಎಷ್ಟು ವರ್ಷವಾಯಿತೆಂದು ಅರಿವಿದೆಯಾ? ಒಂದು ವೇಳೆ ಅವರು ಆಡಿದ್ದು ನಾಟಕವೇ ಆಗಿದ್ದರೆ ಸಿಎಂ ಆಗುವ ಮುನ್ನ ಐದು ಬಾರಿ ಸಂಸದರಾಗಿದ್ದು ಹೇಗೆ? ಅವರದ್ದು ನಟನೆಯೇ ಆಗಿದ್ದರೆ ಜನರು ಯಾಕೆ ಅವರನ್ನು ಆಯ್ಕೆ ಮಾಡಿದ್ದು…?

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿರುವ ನಿಮಗೆ, ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಮಾತ್ರ ಮಹಾನ್ ನಟರೆಂದು ಅನಿಸಿದ್ದು ಯಾಕೆ? ದೇಶದ ಇತರ ಬೇರೆ ಬೇರೆ ಪಕ್ಷಗಳ ಮುಖಂಡರಲ್ಲಿ ಯಾರೂ ನಿಮ್ಮನ್ನು ಮೀರಿಸುವ ನಟರು ಇಲ್ಲವೇ? ರಾಹುಲ್ ಗಾಂಧಿ, ಪಿಣರಾಯಿ ವಿಜಯನ್ ಇವರೆಲ್ಲಾ ನಟರಂತೆ ಕಾಣಿಸಲಿಲ್ಲ ಯಾಕೆ?

ಗೌರಿ ಹತ್ಯೆಯ ವಿಚಾರದಲ್ಲಿ ಮೌನವಾಗಿರುವ ಪ್ರಧಾನಿ ಮೋದಿಗೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ, ನಾನ್ಯಾಕೆ ನನ್ನ ಪ್ರಶಸ್ತಿಯನ್ನು ನೀಡಬಾರದು ಎಂದು ಆಲೋಚಿಸುತ್ತಿದ್ದೇನೆಂದು ನೀವು ಹೇಳಿಕೆ ನೀಡಿದ್ದೀರಿ… ನನ್ನ ಪ್ರಶ್ನೆ ಏನೆಂದರೆ ನೀವು ನಿಮ್ಮ ಪ್ರಶಸ್ತಿಯನ್ನು ಅವರಿಗೆ ಕೊಟ್ಟರೆ ನಿಮಗೆ ನಷ್ಟವಾಗುತ್ತದೆಯೇ ಹೊರತು ಮೋದಿಗಾಗಲೀ, ಯೋಗಿಗಾಗಲೀ ಇದರಿಂದ ಏನಾದರೂ ಲಾಭವಾಗುತ್ತದಾ? ಅಥವಾ ನೀವು ಪ್ರಶಸ್ತಿ ವಾಪಸ್ ಕೊಟ್ಟರೆ ಗೌರಿ ಹಂತಕ ಎದ್ದುಕೊಂಡು ಬರುತ್ತಾನಾ?

ಐದು ರಾಷ್ಟ್ರಪ್ರಶಸ್ತಿ ಸಿಗುತ್ತದೆ ಎನ್ನುವ ನೀವು ಈ ಪ್ರಶಸ್ತಿಗೆ ಏನೆಲ್ಲಾ ಲಾಬಿ ನಡೆಸಿದ್ದೀರಿ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ನಿಮಗಿಂತ ಚೆನ್ನಾಗಿ
ನಟಿಸಬಲ್ಲ ನಟರು ಇಲ್ಲಿದ್ದಾರೆ. ತನಗೆ ಪ್ರಶಸ್ತಿ ಸಿಕ್ಕಿದೆ ಎಂದು ನಿಮ್ಮನ್ನೇ ನೀವು ಮಾರ್ಕೆಟಿಂಗ್ ಮಾಡುವ ನೀವು ಕಲಾವಿದನಲ್ಲಿ ಇರಬೇಕಾಗಿದ್ದ ಸೌಜನ್ಯ ಗುಣ
ಇದೆಯೇ? ನಾನು ನಿಮ್ಮಂತೆಯೇ ಲಾಬಿ ನಡೆಸಿ ಪ್ರಶಸ್ತಿ ಪಡೆಯಬೇಕೇ… ಅಷ್ಟಕ್ಕೂ ಪ್ರಶಸ್ತಿಗೂ ನಟನೆಗೂ ಏನು ಸಂಬಂಧ ಹೇಳಿ. ಜನರು ನಿಮಗೆ ಪ್ರಶಸ್ತಿ ಸಿಕ್ಕಿದೆ
ಎಂದು ನಿಮ್ಮ ನಟನೆಯನ್ನು ನೋಡ್ತಾರೋ ಅಥವಾ ನೀವು ಉತ್ತಮವಾಗಿ ನಟಿಸ್ತೀರಿ ಎಂದು ನಿಮ್ಮ ನಟನೆಯನ್ನು ನೋಡ್ತಾರೋ…?

ಇನ್ನು ನಿಮ್ಮ ಪ್ರಶ್ನೆ ಏನೆಂದರೆ ಗೌರಿ ಹತ್ಯೆಯ ಬಗ್ಗೆ ಮೋದಿ ಯಾಕೆ ಸುಮ್ಮನಿದ್ದಾರೆ ಎಂದು ಕೇಳುತ್ತೀರಿ… ಇದೇ ಪ್ರಶ್ನೆಯನ್ನು ಈಗ ನಾನು ನಿಮ್ಮಲ್ಲಿ ಕೇಳುತ್ತೇನೆ..
ಸಂಘಪರಿವಾರದವರ ಹತ್ಯೆ ನಡೆಯಿತು.. ಕೇರಳದ್ಲಿ ಇತ್ತೀಚೆಗೆ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಹತ್ಯೆ ನಡೆಯಿತು. ನೀವ್ಯಾಕೆ ಆಗ ಮಾತಾಡಲಿಲ್ಲ.
ಸಂಘಪರಿವಾರದವರ ಹತ್ಯೆಯಾದಾಗಲೂ ಮೋದಿ ಮಾತಾಡಲಿಲ್ಲ ಎಂದು ಇದೇ ಪ್ರಶ್ನೆಯನ್ನು ಸಂಘಪರಿವಾರದವರಿಗೂ ಕೇಳಬಹುದಿತ್ತಲ್ಲವೇ? ಉದಾಹರಣೆಗೆ
ಕೇರಳದಲ್ಲಿ ಆರೆಸ್ಸೆಸ್ ಮುಖಂಡ ರಾಜೇಶ್ ಹತ್ಯೆಯಾದಾಗ, ಕ್ಯಾಮಾರನಹಳ್ಳಿ ರಾಜು ಹತ್ಯೆಯಾದಾಗಲೂ ಮೋದಿ ಮಾತಾಡಲಿಲ್ಲ ಎಂದು ಕೇಳಬಹುದಲ್ವಾ?

ನೀವು ಗೌರಿ ಹತ್ಯೆಯ ಬಗ್ಗೆ ಮೋದಿ ಮೌನವಾಗಿದ್ದಾರೆಂದು ಹೇಳುತ್ತಿದ್ದೀರಲ್ಲಾ… ಹಾಗಾದರೆ ಇದೇ ಪ್ರಶ್ನೆಯನ್ನು ನೀವು ಸಿದ್ದರಾಮಯ್ಯನಿಗೂ ಕೇಳಬಹುದಿತ್ತು.
ಯಾಕೆಂದರೆ ಒಬ್ಬರು ಜೀವಬೆದರಿಕೆ ಇದ್ದ ಸಾಹಿತಿಗೆ ನೀವ್ಯಾಕೆ ರಕ್ಷಣೆ ಕೊಡಲಿಲ್ಲ ಸಿದ್ದರಾಮಯ್ಯರೇ ಎಂದು ಯಾಕೆ ಕೇಳಲಿಲ್ಲ? ಇನ್ನು ಗೌರಿ ಹತ್ಯೆಯಾಗಿರುವುದು
ಕರ್ನಾಟಕದಲ್ಲಿ, ಅದರ ತನಿಖೆ ನಡೆಸುತ್ತಿರುವುದು ಎಸ್‍ಐಟಿ. ಸ್ವತಃ ರಾಜ್ಯಸರಕಾರವೇ ಕುದ್ದಾಗಿ ಎಸ್‍ಐಟಿಗೆ ವಹಿಸಿದೆ. ಇಷ್ಟಾದರೂ ಕೊಲೆಗಟುಕನನ್ನು
ಪತ್ತೆಮಾಡಲಾಗದೇ ಇರುವಾಗ ನೀವು ಸಿದ್ದರಾಮಯ್ಯಗೆ ಯಾಕೆ ಹಂತಕನನ್ನು ಪತ್ತೆ ಮಾಡಲಾಗಿಲ್ಲ ಎಂಬ ಒಂದೇ ಒಂದು ಪ್ರಶ್ನೆಯನ್ನು ಕೇಳಲಿಲ್ಲ. ಒಂದು ವೇಳೆ
ಸಿಬಿಐಗೆ ವಹಿಸಿದ್ದರೆ ನೀವು ಮೋದಿ ಮೌನದ ಬಗ್ಗೆ ಕೇಳಿದ್ದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು.

ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಮತ್ತೆ ಹೇಳಿಕೆ ನೀಡಿದ ನೀವು, ರಾಷ್ಟ್ರ ಪ್ರಶಸ್ತಿ ವಾಪಸ್ ಮಾಡಲು ನಾನು ಮೂರ್ಖನಲ್ಲ. ಗೌರಿ ಹತ್ಯೆಯಲ್ಲಿ ಸಾಮಾಜಿಕ
ನ್ಯಾಯದ ಕೊಲೆಯಾಗಿದೆ. ಪ್ರಧಾನಿ ಮೌನವಾಗಿರುವುದಕ್ಕೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ, ಈ ದೇಶದ ಪ್ರಜೆಯಾಗಿ ಇದು ನನ್ನ ಕರ್ತವ್ಯ ಎಂದು ಹೇಳಿದ್ದೀರಿ.
ಹಾಗಾದರೆ ನೀವು ಪ್ರಶಸ್ತಿ ಕೊಡುತ್ತೇನೆ ಎಂದು ಹೇಳಿರುವುದು ಮೂರ್ಖತನವಲ್ಲವೇ.. ಪ್ರಶಸ್ತಿಯನ್ನು ಕೊಡಲು ಮನಸ್ಸಿಲ್ಲದೆ ಸುಮ್ನೆ ಕೊಡ್ತೇನೆ ಕೊಡ್ತೇನೆ ಎಂದು
ಬೋಂಗು ಬಿಟ್ಟಿರುವುದು ನಿಮ್ಮ ಮೂರ್ಖತನದ ಪರಮಾವಧಿಯಲ್ಲವೇ? ಗೌರಿ ಹತ್ಯೆಯಲ್ಲಿ ಸಮಾಜಿಕ ನ್ಯಾಯದ ಕೊಲೆಯಾಗಿದೆ ಎನ್ನುವ ನೀವು, ಈ ಕೊಲೆ
ಪ್ರಕರಣವನ್ನಿಟ್ಟುಕೊಂಡು ರಾಜ್ಯ ಸರಕಾರ ಮಾಡುವ ರಾಜಕೀಯದಾಟವನ್ನು ನೋಡುವಾಗ ಏನೂ ಅನಿಸುವುದಿಲ್ಲವೇ? ನೀವು ಯಾರಲ್ಲಿ ಪ್ರಶ್ನೆ ಕೇಳಬೇಕಿತ್ತೋ ಅದನ್ನು ಮೋದಿ, ಯೋಗಿಯಲ್ಲಿ ಕೇಳಿದರೆ ಅದಕ್ಕೆ ತಕ್ಕ ಉತ್ತರ ಸಿಗುತ್ತದೆಯೇ?

ಹಲವಾರು ದಶಕಗಳಿಂದ ಸಮಸ್ಯೆಯಾಗಿರುವ ಕಾವೇರಿ ನದಿನೀರು ಹಂಚಿಕೆಯ ವಿಚಾರದಲ್ಲಿ ನಿಮ್ಮ ನಿಲುವೇನು ಎಂದು ಟಿವಿವಾಹಿನಿ ನಿರೂಪಕಿಯೊಬ್ಬಳು ಪ್ರಶ್ನಿಸಿದಾಗ ಕಾಲರ್ ಮೈಕ್ ಎಸೆದು, ಚಿತ್ರದ ಬಗ್ಗೆ ಮಾತನಾಡಿ, ಕಾವೇರಿ ಬಗ್ಗೆ ಮಾತನಾಡಬೇಡಿ ಎಂದು ಕೂಗಾಡಿದಿರಿ. ಕಾವೇರಿ ವಿಚಾರ ಮಾತನಾಡುವುದು ನಿಮಗೆ ಸಾಮಾಜಿಕ ನ್ಯಾಯ ಎಂದು ಅನಿಸಲಿಲ್ಲವೇ? ಕಾವೇರಿ ವಿಚಾರದಲ್ಲಿ ಮಾತಾಡಿದಾಗ ವ್ಯಗ್ರರಾದ ನೀವು ತಮಿಳು ರೈತರ ಜೊತೆ ಕೂತಿರಲಿಲ್ಲವೇ? ಪ್ರಶ್ನೆ ಕೇಳಿದ್ದಕ್ಕೆಯೇ ಕಲಾವಿದನೆಂದೂ ಮರೆತು ಆ ಚಿಕ್ಕ ಹುಡುಗಿಯ ಮುಂದೆ ಬೂಟಾಟಿಕೆ ಮೆರೆದಿರಲ್ಲ ನಿಜವಾಗಿಯೂ ಹಾಗೆ ಮಾಡುವುದು ಒಬ್ಬ ಕಲಾವಿದನಿಗೆ ಒಪ್ಪುತ್ತದೆಯೇ?

ಗೌರಿ ಲಂಕೇಶ್ ಹತ್ಯೆಯ ಹಿಹಿಂದೂಪರ ಸಂಘಟನೆಗಳ ಕೈವಾಡವಿದೆ ಎನ್ನುವ ನೀವು ಯಾವ ಆಧಾರದಲ್ಲಿ ಹೇಳಿಕೆ ನೀಡುತ್ತೀರಿ? ನಿಮಗೆ ಯಾರು ಕೊಲೆ ಮಾಡಿದ್ದು ಎಂದು ಸಾಕ್ಷಿ ಇದ್ದರೆ ಅದನ್ನು ಎಸ್‍ಐಟಿಗೆ ನೀಡಬಹುದಲ್ವಾ? ಅದು ಬಿಟ್ಟು ಪೂರ್ವನಿರ್ಧರಿತವಾಗಿ ಬಲಪಂಥೀಯ ಸಂಘಟನೆಗಳತ್ತ ಗುಮಾನಿಯಿಟ್ಟುಕೊಳ್ಳುವುದು ಯಾಕೆ?

ಈ ಪ್ರಶ್ನೆ ತೀರಾ ವೈಯಕ್ತಿಕ ಎಂದೆನಿಸಬಹುದು. ಆದರೂ ಕೇಳುತ್ತೇನೆ… ನಿಮ್ಮ ಹೆಂಡತಿಗೆ ಕೈ ಕೊಟ್ಟು ವಿಚ್ಛೇಧನವನ್ನೂ ಕೊಡದೆ ಯಾವುದೋ ಹೆಣ್ಣಿನ ಹಿಂದೆ
ಓಡಿದಾಗ ನಿಮ್ಮ ಹೆಂಡತಿಯ ಮುಗ್ಧ ಮುಖ ನೆನಪಿಗೆ ಬರಲಿಲ್ಲವೇ? ನಿಮ್ಮ ಮಗುವಿನ ನೆನಪೂ ಆಗಲಿಲ್ಲವೇ? ಕಲಾವಿದನಾಗಿ ನೀವು ಸಮಾಜಕ್ಕೆ ಹೇಳುವ
ಸಂದೇಶವಿದಾ?

ಗೌರಿ ಹತ್ಯೆ ನಡೆದಿರುವುದು ನಮಗೂ ತುಂಬಾ ಬೇಸರವಿದೆ. ಗೌರಿ ಬಿಡಿ ಯಾರ ಹತ್ಯೆಯೂ ನಡೆಯಬಾರದು. ಆದರೆ ಇಷ್ಟೆಲ್ಲಾ ಕೊಲೆ ನಡೆದಾಗ ನೀವ್ಯಾಕೆ
ಮಾತಾಡಲಿಲ್ಲ.

ಸಿಆರ್ ಪಿಎಫ್ ಯೋಧರನ್ನು ನಕ್ಸಲರು ಕೊಂದಾಗ ಇದೇ ಗೌರಿ ಲಂಕೇಶ್ ಬೆಂಬಲಿಸುತ್ತಿದ್ದ ಜೆಎನ್‍ಯು ವಿದ್ಯಾರ್ಥಿಗಳಾದ ಕನ್ನಯ್ಯ ಮತ್ತವರ ಸಹಚರರು ಹೇಗೆ
ಸಂಭ್ರಮ ಆಚರಿಸುತ್ತಿದ್ದರು ಎಂಬುದು ನಿಮಗೆ ತಿಳಿದಿಲ್ಲವೇ? ಆಗ ಯಾಕೆ ಮಾತಾಡಲಿಲ್ಲ.?

ನನ್ನ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ಹೇಳುವ ಪ್ರಯತ್ನ ಮಾಡಿ ಮಿಸ್ಟರ್ ಪ್ರಕಾಶ್ ರೈ… ನಿಮ್ಮ ಉತ್ತರಕ್ಕಾಗಿ ಕಾಯುತ್ತಾ ಇರುತ್ತೇನೆ…

ಇತೀ,

ಕುಲಭೂಷಣ್ ಕಾರಂತ್

ರಂಗಭೂಮಿ ಕಲಾವಿದ… ಬೆಂಗಳೂರು

Tags

Related Articles

Close