ಪ್ರಚಲಿತ

ಮೋದಿ ವಿರೋಧಿಗಳಿಗೆ ಬರ್ನಾಲ್ ಭಾಗ್ಯ!!! ಅಂತರಾಷ್ಟ್ರೀಯ ಆಟಗಾರ್ತಿಯ ಅದ್ಭುತ ಉಡುಗೊರೆ!!!

ಅವರೊಬ್ಬರು ಡೈನಮಿಕ್ ನಾಯಕ! ಬರೀ ಸಲಹೆಗಳನ್ನು ನೀಡದೇ, ತಾವೇ ಒಂದು ಉದಾಹರಣೆಯಾಗಿ ಬದುಕಿತ್ತಿರುವ ಪರಿಯಿದೆಯಲ್ಲ, ಅದು ಎಂಥಹವರನ್ನೂ
ಅಚ್ಚರಿಗೊಳಿಸುತ್ತದೆ! ಅಂತಹ ನಾಯಕನ ಬದುಕಿನ ಅದಮ್ಯ ಕ್ಷಣಗಳನ್ನೆಲ್ಲ ಇಡಿಯ ಭಾರತವೂ ಆಚರಿಸುತ್ತದೆ ಎಂದಾಗ ಅದೆಷ್ಟು ಯುವ ಸಮೂಹಕ್ಕೆ ಅವರು
ಸ್ಪೂರ್ಥಿಯಾಗಿರಬೇಕು ಹೇಳಿ!

ಹೌದು! ನೆನ್ನೆಯಷ್ಟೇ ಭವ್ಯ ಭಾರತದ ಪ್ರಧಾನ ಮಂತ್ರಿ ತಮ್ಮ 67 ನೇ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ! ಅದೆಷ್ಟೋ ಕಡೆಗಳಲಿ, ತಮ್ಮ ನೆಚ್ಚಿನ ನಾಯಕನ ಜನುಮದಿನದ ಸಲುವಾಗಿ ಹೊಸದೊಂದು ಸತ್ಕಾರ್ಯಕ್ಕೂ ಕೈ ಹಾಕಿದ್ದಾರೆ! ಅದೇ ರೀತಿ, ಭಾರತದ ಬ್ಯಾಂಡ್ಮಿಟನ್ ಆಟಗಾರ್ತಿ ಪಿ.ವಿ.ಸಿಂಧು ಮೋದಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ?!

ನೆನ್ನೆ ನಡೆದ ಕೊರಿಯನ್ ಸೂಪರ್ ಸೀರೀಸ್ ನಲ್ಲಿ ಜಪಾನಿನ ನೊಜೊಮಿ ಒಕುಹಾರರನ್ನು ಸೋಲಿಸಿದ್ದಾರೆ! ಅಲ್ಲದೇ, ಸಿಂಧೂವಿನ ಗೆಲುವೊಂದು ‘ ಸ್ವೀಟ್ ರಿವೆಂಜ್’ ಎಂಬ ಹೆಸರನ್ನೂ ಪಡೆದುಕೊಂಡಿದೆ! ಕೆಲವು ವಾರಗಳ ಹಿಂದಷ್ಟೇ world championship ನಲ್ಲಿ ಸಿಂಧೂರವರನ್ನು ನೊಜೊಮಿ ಸೋಲಿಸಿದ್ದರಷ್ಟೇ! ಆದರೆ, ಎಲ್ಲರಿಗೂ ಒಂದು ಕಾಲವೆನ್ನುವ ಹಾಗೆ ನೆನ್ನೆ ನಡೆದ ಪಂದ್ಯದಲ್ಲಿ ಸಿಂಧೂರವರು ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ, ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ!

” ಕೊರಿಯನ್ ಸೂಪರ್ ಸೀರಿಸ್ ನಲ್ಲಿ ಅದ್ಭುತವಾಗಿ ಗೆದ್ದ ಪಿ.ವಿ.ಸಿಂಧೂರವರಿಗೆ ಶುಭಹಾರೈಕೆಗಳು! ಭಾರತ ಆಕೆಯ ಸಾಧನೆಗೆ ಬಹಳ ಹೆಮ್ಮೆ ಪಡುತ್ತಿದೆ” ಎಂಬುದಾಗಿ ಟ್ವೀಟ್ ಮಾಡಿದ್ದರು. ಪಿ.ವಿ.ಸಿಂಧೂರವರ ಪ್ರತ್ಯುತ್ತರ ಏನಿತ್ತು ಗೊತ್ತಾ?!

“ನಾನು ಈ ಗೆಲುವನ್ನು ನಮ್ಮ ಪ್ರಧಾನಿಯಾದ ಶ್ರೀ ಮೋದಿಯವರಿಗೆ ಅವರ ಜನುಮದಿನದಂದು ಅರ್ಪಿಸುತ್ತಿದ್ದೇನೆ. ಅವರ ದಣಿವಿಲ್ಲದ ಹಾಗೂ ದೇಶದೆಡೆಗಿನ
ನಿಸ್ವಾರ್ಥ ಸೇವೆಗೆ ನಾನು ಸಲ್ಲಿಸುತ್ತಿರುವ ಗೌರವ.” ಎಂದಾಗಿ ಪ್ರತಿಕ್ರಿಯಿಸಿದ್ದಾರೆ.

ಅನ್ಯಾಯವಾಗಿ ಭಕ್ತರಾದರು ಪಿ.ವಿ.ಸಿಂಧೂ!

ಈ ‘ಭಯೋತ್ಪಾದಕರ ಹಿತೈಷಿ’ ಗಳಾದವರೆಲ್ಲ ನರೇಂದ್ರ ಮೋದಿಯವರನ್ನು ಬೆಂಬಲಿಸುವರಿಗೆಲ್ಲ.’ಭಕ್ತರು’ ಎಂದು ನಾಮಕರಣ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಬಿಡಿ! ಪಾಪಾ! ಈಗ ಬೆಂಕಿ ಬಿದ್ದು ಬರ್ನಾಲ್ ಹಚ್ಚುವಂತಾಗಿರುವುದರಿಂದ ಅಂಗಡಿಗಳಲ್ಲಿ ಬರ್ನಾಲ್ ಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆಯಂತೆ! ಪಿ.ವಿ.ಸಿಂಧೂ ಅನ್ಯಾಯವಾಗಿ ಮೋದಿಯ ಭಕ್ತರಾಗಿಬಿಟ್ಟಿದ್ದಾರೆ!

ಪಿ.ವಿ.ಸಿಂಧೂರವರ ಬ್ಯಾಂಡ್ಮಿಟನ್ ಬದುಕು!

ಜುಲೈ 5, 1995 ರಂದು ಜನಿಸಿದ ಪಿ.ವಿ.ಸಿಂಧೂ BWF World Ranking ನ ಟಾಪ್ 20 ಯೊಳಗೊಬ್ಬರಾದಾಗ ಆಕೆಗೆ ಕೇವಲ 17 ವರ್ಷವಷ್ಟೇ!
ಆಕೆಯ ಈ ಸಾಧನೆ ಬ್ಯಾಂಡ್ಮಿಟನ್ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನಕ್ಕೇರಿಸಿಬಿಟ್ಟಿತು! 2013 ರಲ್ಲಿ ನಡೆದ Badminton World Championship ನ
ಸಿಂಗಲ್ಸ್ ನಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ!

ತದನಂತರ, 2016 ರ Summer Olympics ನಲ್ಲಿ ಬೆಳ್ಳಿ ಪದಕ ಪಡೆದಾಗಲೂ ಆಕೆ ಬೆಳ್ಳಿ ಪದಕ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ
ಪಾತ್ರವಾಗಿದ್ದಲ್ಲದೇ, ಇವತ್ತು ಸೈನಾ ನೆಹವಾಪ್ ಬಿಟ್ಟರೆ, ಮತ್ತೋರ್ವ ಪ್ರತಿಭೆ ಪಿ.ವಿ.ಸಿಂಧೂ!

ಅಂತರಾಷ್ಟ್ರೀಯ ಮಟ್ಟದ ಸಾಧನೆಗಳು ಆಕೆಯನ್ನು BWF Ranking ನಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲಿಸಿದೆ!

ಚಿನ್ನಗೆದ್ದಪಂದ್ಯಗಳೆಷ್ಟು ಗೊತ್ತಾ?

2011 ರ ಇಂಡೋನೇಷಿಯಾ ಇಂಟರ್ ನ್ಯಾಷನಲ್ ಪಂದ್ಯ!

2013 ರ ಮಲೇಷಿಯನ್ ಮಾಸ್ಟರ್ಸ್ ಪಂದ್ಯ.

2013, 2014 ಹಾಗೂ 2015 ರಲ್ಲಿ ನಡೆದ ಮಕಾವ್ ಓಪನ್ ಪಂದ್ಯಗಳಲ್ಲಿ ಸತತ ಮೂರು ಸಲವೂ ಚಿನ್ನದ ಪದಕ!

2016 ರ ಮಲೇಷಿಯಾ ಮಾಸ್ಟರ್ಸ್ ಪಂದ್ಯ!

ಅದೇ ವರ್ಷ ನಡೆದ ಚೈನಾ ಓಪನ್ ಪಂದ್ಯದಲ್ಲಿಯೂ ಗೆಲುವು!

2017 ರಲ್ಲಿ ಸೈಯದ್ ಮೋದಿ ಇಂಟರ್ನ್ಯಾಷನಲ್, ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್ ಪಂದ್ಯಗಳಲ್ಲಿ ಸತತ ಗೆಲುವು!

ಇದಾಗಿಯೂ ಸಹ ಎಂಟು ಪಂದ್ಯಗಳಲ್ಲಿ ರಜತ ಪದಕ ಗೆದ್ದ ಅಸಾಮಾನ್ಯ ಪ್ರತಿಭೆ ಸಿಂಧೂ!

ಸಿಂಗಲ್ಸ್ ನಲ್ಲಿ ಇವತ್ತಿನವರೆಗೂ ಆಡಿದ 326 ಪಂದ್ಯಗಳಲ್ಲಿ ಆಕೆ 227 ಗೆಲುವು ಸಾಧಿಸಿದ್ದಾರೆ!

ಇದಷ್ಟೇ ಅಲ್ಲ, 24 ಸಲ ರೆಕಾರ್ಡ್ ಬ್ರೇಕ್ ಮಾಡಿದ ಪಿ.ವಿ.ಸಿಂಧೂ ದೇಶದ ಮಹತ್ತರ ಪ್ರಶಸ್ತಿಗಳಿಗೂ ಭಾಜನವಾಗಿದ್ದಾರೆ!

ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಕ್ಕಾಗಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ!

ದೇಶದ ನಾಲ್ಕನೇ ಉನ್ನತ ಪದ್ಮಶ್ರೀ ಪ್ರಶಸ್ತಿ! ಹಾಗೂ,

ಅರ್ಜುನ ಪ್ರಶಸ್ತಿ!!

ಎಂತಹ ಸಾಧನೆ ಎಂದೆನಿಸಿಬಿಡುತ್ತದಲ್ಲವೇ?!

ಪಿ.ವಿ.ಸಿಂಧೂ ಮುಂಬರುವ ವರ್ಷಗಳಲ್ಲಿ 120 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ! ಇನ್ನೆಷ್ಟು ಗೆಲುವಿನ ಕಿರೀಟಗಳು ಆಕೆಯ ಮುಡಿಗೇರಬೇಕೋ, ಕಾದು ನೋಡಬೇಕಿದೆ.

ಈ ಎಡಪಂಥೀಯರ ತಿರಸ್ಕಾರದ ಟ್ವೀಟ್ ಗಳನ್ನೆಲ್ಲ ನೋಡಿರುವ ಪಿ.ವಿ.ಸಿಂಧೂ, “ನಾನು ಮತ್ತು ಒಕುಹಾರಾ ಎರಡನೇ ಸಲ ಪಂದ್ಯದಲ್ಲಿ ಭೇಟಿಯಾಗಿದ್ದು. ಮೊದಲು ಕಾರೋಲಿನಾಳ ಜೊತೆ ಆಡುವಾಗ, ಕಾರೋಲಿನಾ ಸಿಂಧೂಳನ್ನು ಸೋಲಿಸುತ್ತಾಳೆ ಎಂದು ಹೇಳಿದ್ದರು! ಕೊನೆಗೆ, ಒಕುಹಾರಾ ಸೋಲಿಸುತ್ತಾರೆ ಎಂದೇ ನಂಬಿದ್ದರು! ಆದರೆ, ಅವರ ನಂಬಿಕೆ ಸುಳ್ಳಾಗಿದ್ದಕ್ಕೆ ನನಗೆ ವಿಷಾದವಿದೆ.‘ ಎಂದಷ್ಟೇ ನಗು ನಗುತ್ತಾ ಹೇಳಿ ಚಾಟಿ ಬೀಸಿದ್ದಾರೆ!

https://twitter.com/Ravi_Funny/status/909441557828382721

ಈ ಹಿಂದೆ ಜೆ ಎನ್ ಯು ವಿಶ್ವ ವಿದ್ಯಾನಿಲಯದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ್ದನ್ನು ಕೆಲವು ಅಂತರಾಷ್ಟ್ರೀಯ ಆಟಗಾರರು ಕಟುವಾಗಿ ವಿರೋಧಿಸಿದ್ದರು! ಆದರೆ, ಎಡಪಂಥೀಯರು ಅಂತಹ ದೇಶಭಕ್ತರನ್ನು ಗುರಿಯಾಗಿಸಿದ್ದಲ್ಲದೇ, ಅವರ ಸಾಧನೆಗಳೆಲ್ಲವೂ ‘ವಿಫಲ ಗೆಲುವು’ ಎಂದೆಲ್ಲ ಬಿರುದು ನೀಡಿ ಟ್ವೀಟಿಸಿದ್ದರ ಪರಿಣಾಮ ಎಡಪಂಥೀಯರ ಅಪ್ಪಟ ಪಾಕಿಸ್ಥಾನದ ಬಗೆಗಿನ ಭಕ್ತಿ ಜಗಜ್ಜಾಹೀರಾಗಿತ್ತು! ಎಂತಹ ದುಃ ಸ್ಥಿತಿ!

ಇದರ ಜೊತೆಗೆ ಜನಸಾಮಾನ್ಯ ಹೇಳುತ್ತಿದ್ದಾನೆ!!
‘ದೇಶಭಕ್ತರೆಲ್ಲ ಭಕ್ತರೇ ತಾನೆ! ದೇಶದ್ರೋಹಿಗಳೆಲ್ಲರೂ ‘ಪಂಥ’ ಭೇಧ ಮಾಡುವವರೇ! ಅದಕ್ಕೆ ಅವರೆಲ್ಲ
ಎಡಪಂಥೀಯರಷ್ಟೇ!’

– ಪೃಥ ಅಗ್ನಿಹೋತ್ರಿ

Tags

Related Articles

Close