ಪ್ರಚಲಿತ

ಮೌಢ್ಯ ನಿಷೇಧಿಸಿ ಎಂದು ಬೊಬ್ಬಿರಿದ ಸಿದ್ಧರಾಮಯ್ಯನವರೇ… ನಿಮಗೆ ಈ ಮೌಢ್ಯಗಳು ಕಣ್ಣಿಗೆ ರಾಚಲಿಲ್ಲವೇ?! ಅಥವಾ, ತಂಪು ಕನ್ನಡಕಕ್ಕೆ ಹಿಂದೂ ಮಾತ್ರ ಕಂಡಿದ್ದೇ?!

ಮೌಢ್ಯ ಮೌಢ್ಯ ಎಂದು ಬಡಿದಾಡಿಕೊಳ್ಳುವ ಸಿಎಂ ಸಿದ್ದರಾಮಯ್ಯ ಕೊನೆಗೂ “ಮೌಢ್ಯ ನಿಷೇಧ ಪ್ರತಿಬಂಧಕ” ಎಂಬ ವಿಧೇಯಕವನ್ನು ಮಂಡಿಸಿದ್ದಾರೆ. ಆದರೆ
ಜನಸಾಮಾನ್ಯನಲ್ಲಿ ಹಲವಾರು ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿದೆ. ಸರ್ಕಾರ ಬಂದಾಗಿನಿಂದ ಹಾಗೆ ಮಾಡ್ತೇನೆ ಹೀಗೆ ಮಾಡ್ತೇನೆ ಎಂದು ಬಡಾಯಿ ಕೊಚ್ಚಿದ್ದೇ ಕೊಚ್ಚಿದ್ದು. ತೀರಾ ಅವಶ್ಯಕತೆಯಿರುವ ಹಲವಾರು ವಿಷಯಗಳನ್ನು ಬಿಟ್ಟು ಅಗತ್ಯವಿಲ್ಲದ ಕೆಲಸಕ್ಕೆ ಕೈ ಹಾಕಿ ಟೀಕೆಗಳನ್ನು ಎದುರಿಸಿರುವುದು
ಸಿದ್ದರಾಮಯ್ಯನವರಿಗೆ ಹೊಸದೇನಲ್ಲ.

ರಾಜ್ಯದಲ್ಲಿ ರೈತರ ಸಮಸ್ಯೆ ಸಾಕಷ್ಟಿದೆ. ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಪೊಲೀಸರ ಸಮಸ್ಯೆ ಬೇಕಾದಷ್ಟಿದೆ ಆದರೆ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ
ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ, ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ಅನೇಕ ಬಡವರು ಶಿಕ್ಷಣ ವಂಚಿತರಾಗಿದ್ದಾರೆ, ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ಅನೇಕ ರೀತಿಯಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ. ಆದರೆ ಸಿದ್ದರಾಮಯ್ಯ ಮಾತ್ರ ಟಿಪ್ಪು ಜಯಂತಿ ಆಚರಿಸಿ ಕೋಮು
ಗಲಭೆಗಳಿಗೆ ತುಪ್ಪ ಸುರಿಸುತ್ತಿದ್ದಾರೆ.

ಈಗ ಮಂಡಿಸಿದ ವಿಧೇಯಕ ಮೌಢ್ಯ ಪ್ರತಿಬಂಧಕ ವಿಧೇಯಕ. ಈ ಮುಖ್ಯಮಂತ್ರಿಗಳು ಏನು ಮಾಡುತ್ತಾರೆ, ಏನು ಮಾಡಲ್ಲ ಎಂಬುವುದು ಸ್ವತಃ ಅವರಿಗೇ
ಗೊತ್ತಿರೋದಿಲ್ಲ. ಮೌಢ್ಯ ನಿಷೇಧವೇನೂ ಸರಿ. ಆದರೆ ಅದನ್ನು ಯಾರ ಮೇಲೆ, ಹೇಗೆ ಮಾಡಿದ್ದಾರೆ ಎಂಬುವುದು ಈಗ ನಮ್ಮಲ್ಲಿರುವ ಗೊಂದಲ.

ಸಿದ್ದರಾಮಯ್ಯ ಸರ್ಕಾರ ಮಂಡಿಸಿರುವ ಮೌಢ್ಯ ಪ್ರತಿಬಂಧಕ ವಿಧೇಯಕದಲ್ಲಿ ಹಲವಾರು ವಿಷಯಗಳು ಓಕೆ ಎನಿಸಿದರೆ, ಇನ್ನು ಕೆಲವು ವಿಷಯ ಇದ್ಯಾಕೆ ಅನ್ನಿಸುವಷ್ಟರ ಮಟ್ಟಿಗೆ ಇದೆ. ಇರಲಿ ಬಿಡಿ. ಅವರು ಏನೋ ಮಾಡಿದ್ದಾರೆ, ಅದು ಮಂಡನೆ ಆಗಿದೆ. ಆದರೆ ನಮ್ಮಲ್ಲಿರುವ ಪ್ರಶ್ನೆಗಳನ್ನು ನಾವು ಇಲ್ಲಿ ಹಂಚಿಕೊಳ್ಳಲೇಬೇಕಲ್ವೇ…

* ಮೊಟ್ಟಮೊದಲಾಗಿ ರಾಜ್ಯದಲ್ಲಿ ಸರ್ಕಾರವೊಂದು ಕಾರ್ಯನಿರ್ವಹಿಸುತ್ತಿದೆ ಎಂಬುವುದೇ ಮೂಢನಂಬಿಕೆ. ಬಿಡಿ… ಅದು ಇನ್ನಾರು ತಿಂಗಳಲ್ಲೇ ನಿಷೇಧ ಆಗುತ್ತೆ.

* ಮೂಢನಂಬಿಕೆ ಅನ್ನೋದು ಕೇವಲ ಹಿಂದೂಗಳಲ್ಲಿ ಮಾತ್ರನಾ ಸಿಎಂ ಸಾಹೇಬ್ರೇ… ಇಸ್ಲಾಂ ಧರ್ಮದಲ್ಲಿ ನಿಮಗೆ ಮೂಢನಂಬಿಕೆ ಕಾಣೋದಿಲ್ವೇ..? ಇಸ್ಲಾಂ ಧರ್ಮದ ಮೂಢನಂಬಿಕೆ ನಿಷೇಧಿಸಿದರೆ ನಿಮ್ಮ ಓಟ್ ಬ್ಯಾಂಕ್ ಮುರಿದು ಬೀಳುತ್ತೆ ಅನ್ನೋ ಭಯನಾ..?

* ಇಸ್ಲಾಂ ಧರ್ಮದಲ್ಲಿ ಸುನ್ನತ್ ಅನ್ನುವ ಕೆಟ್ಟ ಸಂಸ್ಕಾರವಿದೆ. ಇಸ್ಲಾಂನಲ್ಲಿರುವ ಈ ಸುನ್ನತ್‍ನ ಪ್ರಕಾರ ಹುಟ್ಟಿದ ಮಗುವಿನ ಮರ್ಮಾಂಗದ ಒಂದು ಭಾಗದ ಚರ್ಮವನ್ನು ಕತ್ತರಿಸಿಕೊಳ್ಳುವ ಅತಿ ಹಿಂಸಾತ್ಮಕ ಆಚರಣೆ ಇದೆ. ಇದರಿಂದ ಅನೇಕ ಮಕ್ಕಳು ತನ್ನ ಬುದ್ಧಿ ಭ್ರಮಣೆಯನ್ನೇ ಕಳೆದುಕೊಂಡಿದ್ದಾರೆ. ಈ ಸುನ್ನತ್ ಮಾಡುವಾಗ ರಕ್ತ ಸ್ರಾವ ಆಗಿ ಮೃತಪಟ್ಟ ಮಕ್ಕಳ ಪ್ರಕರಣಗಳು ಹಲವಾರು ಇದೆ. ಅನೇಕರಿಗೆ ಬಾಲ್ಯದಲ್ಲಿ ಮಾಡಿದ್ದ ತಪ್ಪಿನಿಂದಾಗಿ ತನ್ನ ಪುರುಷತ್ವವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇದು ಮೂಢನಂಬಿಕೆ ಅಲ್ವೇ..? ಇದರ ಬಗ್ಗೆ ಯಾಕೆ ಸಿಎಂ ಸಾಹೇಬ್ರು ತಲೆ ಕೆಡಿಸಿಕೊಳ್ಳೋದಿಲ್ಲ. ಓಟ್ ಬ್ಯಾಂಕ್ ಪ್ಲಾನಿಂಗೋ ಅಥವಾ ತಾವೇನಾದರೂ ಸುನ್ನತ್…?

* ಇಸ್ಲಾಂನಲ್ಲಿ ಬಕ್ರೀದ್ ಆಚೆಣೆಯನ್ನು ಮಾಡುತ್ತಾರೆ. ಬಕ್ರೀದ್ ಎಂದರೆ ತ್ಯಾಗದ ಹಬ್ಬ ಎಂದೇ ಕರೆಯುತ್ತಾರೆ. ಆದರೆ ಈ ಹಬ್ಬದಲ್ಲಿ ತಮ್ಮನ್ನು ತಾವು ತ್ಯಾಗ
ಮಾಡಿಕೊಳ್ಳದೆ ಆ ಕುರಿ, ಮೇಕೆ, ಒಂಟೆ, ದನಗಳನ್ನು ಬಲಿಕೊಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಲ್ವೋ… ಸಿಎಂ ಸಾಹೇಬ್ರೇ… ಇದು ಮೂಢನಂಬಿಕೆ ಅಲ್ವೇ..?

* ಈ ಹಿಂದೆ ಪ್ರಧಾನಿ ನರೇಂದ್ರ ಮೋದೀಯವರು ಇಸ್ಲಾಂನಲ್ಲಿ ಮಹಿಳೆಯರ ಬದುಕನ್ನೇ ಕಿತ್ತುಕೊಳ್ಳುವ ತ್ರಿವಳಿ ತಲಾಖ್‍ನ್ನು ನಿಷೇಧಗೊಳಿಸಿದ್ರು. ಆದರೆ ನೀವು
ಗಂಟಲು ಒಡೆದು ಹೋಗುವಂತೆ ಮೋದಿ ವಿರುದ್ಧ ಕಿರುಚಾಡಿಕೊಂಡಿರಲ್ವಾ… ಅದು ನಿಮಗೆ ಸಹ್ಯವೆನಿಸಿತಾ..? ಅದು ಮೂಢನಂಬಿಕೆ ಅಲ್ವಾ..? ಹಾಗಾದ್ರೆ ಹಿಂದೂಗಳು ಮಾಡಿದ್ರೆ ಮಾತ್ರ ತಪ್ಪಾ..?

* ಮಹಿಳೆಯರು ದೇವಾಲಯಕ್ಕೆ ಏಕೆ ಪ್ರವೇಶಿಸಬಾರದು ಎಂದು ಪ್ರಶ್ನಿಸುವ ತಾವು ಇಸ್ಲಾಂನಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧದ ಬಗ್ಗೆ ಯಾಕೆ
ಪ್ರಸ್ತಾಪಿಸುತ್ತಿಲ್ಲ..?

* ಮಹಿಳೆಯರ ಬಟ್ಟೆಗಳ ಬಗ್ಗೆ ಮಾತನಾಡಿದ್ರೆ ಕೋಮುವಾದಿಗಳು ಎನ್ನುವ ತಾವು, ಇಸ್ಲಾಂನಲ್ಲಿ ಬುರ್ಖಾ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ..?

* ಇಸ್ಲಾಂ ಧರ್ಮಗುರುಗಳು ಬಾಯಿಯಲ್ಲಿ ಉಗುಳಿದರೆ ಅದನ್ನು ಮುಸಲ್ಮಾನರು ಪ್ರಸಾದ ಎಂದು ತಿಳಿದು ಸ್ವೀಕರಿಸಿ ತಮ್ಮ ಬಾಯಿಗೆ ಹಾಕಿಕೊಳ್ಳುವ ಅತ್ಯಂತ ಅಸಹ್ಯ ಹುಟ್ಟಿಸುವ ಸಂಪ್ರದಾಯವಿದೆ. ಇದು ಮೂಡನಂಬಿಕೆ ಅಲ್ವೇನು? ಇದನ್ಯಾಕೆ ನಿಮ್ಮ ಮೌಢ್ಯ ಪ್ರತಿಬಂಧಕ ವಿಧೇಯಕದಲ್ಲಿ ಸೇರಿಸಿಲ್ಲ..?

* ಕೇವಲ ಹಿಂದೂ ಧರ್ಮದಲ್ಲಿ ಮಾತ್ರವೇ ಮೂಢನಂಬಿಕೆ ಎನ್ನುವುದನ್ನು ಜಗದ್ಜಾಹೀರುಗೊಳಿಸಿ ಮಾನ ಮರ್ಯಾದೆ ಕಳೆಯಲು ಯತ್ನಿಸುತ್ತೀರಲ್ಲಾ, ನಿಮಗೆ ನೀವೇ ಮೂಢನಂಬಿಕೆ ಅಂತ ಅನ್ನಿಸೋದಿಲ್ವಾ..?

* ಸಿಎಂ ಸಾಹೇಬ್ರೇ… ನೀವು ಮೂಢನಂಬಿಕೆ ಪ್ರತಿಬಂಧ ವಿಧೇಯಕವನ್ನೇನೋ ಮಂಡಿಸಿದ್ದೀರಿ. ಆದರೆ ನಿಮ್ಮ ಕಾರಿನ ಮೇಲೆ ಕಾಗೆ ಕುಳಿತುಬಿಟ್ಟಿತು ಎನ್ನುವ
ಕಾರಣಕ್ಕಾಗಿ ನೀವು ನಿಮ್ಮಕಾರನ್ನೇ ಬದಲಾಯಿಸಿದ್ದೀರಲ್ವಾ ಸ್ವಾಮೀ… ಅದು ಮೂಢನಂಬಿಕೆ ಅಲ್ವಾ..? ಕೇವಲ ಕಾಗೆ ಕೂತ ಕಾರಣಕ್ಕಾಗಿ ಅಷ್ಟೊಂದು
ಸುಂದರವಾಗಿರುವ ಕಾರನ್ನು ಯಾರಾದ್ರು ಬದಲಾಯಿಸುತ್ತಾರೆಯೇ..?

* ನಿಮ್ಮ ಸಚಿವರುಗಳು ಅವರ ಕೊಠಡಿಗಳ ವಾಸ್ತು ಸರಿಯಿಲ್ಲ ಎಂದು ಕೊಠಡಿಗಳನ್ನು ಕೆಡವಿ, ವಾಸ್ತು ಪ್ರಕಾರ ಧಿಕ್ಕುಗಳನ್ನೇ ಬದಲಾಯಿಸಿಕೊಂಡಿದ್ದರಲ್ಲಾ. ಕೆಂಗಲ್ ಹನುಮಂತಯ್ಯ ಕಟ್ಟಿರುವ ಆ ಸುಂದರ ವಿಧಾನಸೌಧಾದ ಕೊಠಡಿಗಳನ್ನೇ ಮುರಿದು ಹಾಕಿದ್ದರಲ್ಲಾ… ಅದು ಮೂಢನಂಬಿಕೆ ಅಲ್ವಾ..? ನೀವ್ಯಾಕೆ ನಿಮ್ಮ ಸಚಿವರುಗಳನ್ನು ಪ್ರಶ್ನಿಸಿಲ್ಲಾ ಸಾಹೇಬ್ರೇ..?

* ತಾನೊಬ್ಬ ಮಹಾ ನಾಸ್ತಿಕ ಎಂದು ಹೇಳಿಕೊಂಡು ಬರುತ್ತಿರುವ ತಾವು ಅನೇಕ ಬಾರಿ ನಾಸ್ತಿಕತೆಯನ್ನು ನಿರೂಪಿಸಿದ್ದೀರಿ. ಉಡುಪಿಗೆ ಆಗಮಿಸಿದರೂ ಮಠಕ್ಕೆ
ಆಗಮಿಸಿಲ್ಲ, ಮಂಗಳೂರಿಗೆ ಬಂದರೂ ಕುದ್ರೊಳ್ಳಿಗೆ ಆಗಮಿಸಿಲ್ಲ. ಆದರೆ ಧರ್ಮಸ್ಥಳಕ್ಕೆ ಮೀನು ತಿಂದು ದರ್ಶನ ಮಾಡಿ ನಾಸ್ತಿಕನೆಂದು ಸಾಭೀತುಪಡಿಸುತ್ತಿದ್ದೀರ. ಆದರೆ ಕದ್ದು ಮುಚ್ಚಿ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಶತ್ರುಸಂಹಾರ ಪೂಜೆಯನ್ನು ಮೈಸೂರಿನ ಹಳ್ಳಿಯೊಂದರಲ್ಲಿ ಮಾಡಿದ್ರಲ್ಲಾ… ಅದು ಮೂಢನಂಬಿಕೆ ಅಂತ ಅನ್ನಿಸೋದಿಲ್ವಾ..?

* ನಿಮ್ಮದೇ ಸಚಿವ ಸಂಪುಟದ ಸಚಿವರು ಮಳೆಗಾಗಿ ಯಾಗದ ಮೊರೆ ಹೋಗಿದ್ದಾಗ ನೀವೇ ಅದನ್ನೆಲ್ಲಾ ಮೂಢನಂಬಿಕೆ ಎಂದು ನಿರಾಕರಿಸಿ ಬಿಟ್ರಿ. ಆದರೆ ನಂತರ
ಸುರಿದ ಭಾರೀ ಮಳೆಯಿಂದಾಗಿ ಇಡೀ ರಾಜ್ಯದ ಜನಜೀವನವೇ ಅಸ್ತವ್ಯಸ್ತವಾದಾಗ, ಸಾಕಪ್ಪಾ ಮಳೆ ಎಂದು ದೇವರ ಮೊರೆ ಹೋಗಿದ್ದಿರಿ ಅಲ್ವಾ… ಅದು ಮೂಢ
ನಂಬಿಕೆ ಅಲ್ವಾ..?

ಸಿಎಂ ಸಾಹೇಬ್ರೇ…ಒಟ್ಟಾರೆಯಾಗಿ ನಿಮ್ಮ ಸರ್ಕಾರ ಇದೆಯೆಂಬುವುದೇ ಮೂಢನಂಬಿಕೆಯಾಗಿದೆ. ಮೊದಲು ಅದನ್ನು ನಿಷೇಧಿಸಬೇಕಾಗಿದೆ. ಅದನ್ನು ನೀವು
ನಿಷೇಧಿಸುವುದಲ್ಲ. ಬದಲಾಗಿ ಜನರೇ ನಿಷೇಧಿಸುತ್ತಾರೆ. ಈ ರಾಜ್ಯದ ಅತಿ ದೊಡ್ಡ ಮೂಢನಂಬಿಕೆಯಾದ “ಕಾಂಗ್ರೆಸ್” ಎಂಬ ಪಕ್ಷವನ್ನು ಶಾಶ್ವತವಾಗಿ ನಿಷೇಧಿಸುವತ್ತ ಜನರು ಈಗಾಗಲೇ ತೀರ್ಮಾನಿಸಿಯಾಗಿದೆ.

ಹೌದು… ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಲು ಜನರು ತೀರ್ಮಾನಿಸಿ ಆಗಿದೆ.
ಹೀಗಾಗಿಯೇ ತನ್ನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕೆನ್ನುವ ಉದ್ಧೇಶದಿಂದ ಈ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಡಿಸಿದ್ದಾರೆ ಅಷ್ಟೇ…
ಅಷ್ಟಾದರೂ ಅಲ್ಪಸಂಖ್ಯಾತ ಓಲೈಕೆಯನ್ನು ಮಾತ್ರ ಬಿಟ್ಟೇ ಇಲ್ಲ ಈ ಸಿದ್ದರಾಮಯ್ಯ. ಇರಲಿ… ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯದ ಅತಿ ದೊಡ್ಡ
ಮೂಢನಂಬಿಕೆಯಾದ ಕಾಂಗ್ರೆಸ್ಸನ್ನು ಮತದಾರರು ನಿಷೇಧಿಸಿ ದೊಡ್ಡ ಸಾಧನೆ ಮಾಡಬೇಕಾಗಿದೆ. ಇದರೊಂದಿಗೆ ಮತದಾರರೂ ತಮ್ಮ ಹೆಸರನ್ನು ಇತಿಹಾಸದಲ್ಲಿ ಬರೆದುಕೊಳ್ಳಬೇಕಾಗಿದೆ.

-ಸುನಿಲ್

Tags

Related Articles

Close