ಅಂಕಣಇತಿಹಾಸದೇಶಪ್ರಚಲಿತ

ಯಾರನ್ನೂ ದ್ವೇಷಿಸದ ನಾಯಕ, ಕಾಂಗ್ರೆಸ್ ನ ರಾಜಕೀಯ ಪಿತೂರಿಗೆ ಬಲಿಯಾಗಿ ಹೋದರೇ?!

ಅವರು ಶ್ರೇಷ್ಠ ತತ್ವಜ್ಞಾನಿಗಳಾಗಿದ್ದರು, ಖ್ಯಾತ ಅರ್ಥಶಾಶ್ತ್ರಜ್ಞರಾಗಿದ್ದರು, ಚೆನ್ನಾಗಿ ಇತಿಹಾಸದ ಕುರಿತಾಗಿ ಅರಿತಿದ್ದವರು, ಸಾಮಾಜಿಕ ಕಾರ್ಯಕರ್ತರಾಗಿದ್ದವರು, ಹಾಗೂ ಧುರೀಣ ರಾಜಕೀಯ ನಾಯಕರೂ ಆಗಿದ್ದವರು. ಅವರು ಬೇರಾರೂ ಅಲ್ಲ. ಭಾರತದ ಅಜಾತಶತ್ರುವೆಂದೇ ಕರೆಯಲ್ಪಡುತ್ತಿದ್ದ ರಾಷ್ಟ್ರದ ಬದಲಾವಣೆಗಾಗಿ ಪಣತೊಟ್ಟು ಆ ದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿದ್ದ ದಿಟ್ಟ ನಾಯಕ ಶ್ರೀ ದೀನ ದಯಾಳ್ ಉಪಾಧ್ಯಾಯ.

ಆ ವ್ಯಕ್ತಿ ಚಿಕ್ಕವನಿದ್ದಾಗ ಸರಿಯಾದ ಧ್ಯೇಯವಿದ್ದವನಲ್ಲ. ಚಿಕ್ಕವನಿದ್ದಾಗಲೇ ಅನಾಥನಾದ ಆತ, ನಂತರ ತನ್ನ ಅಮ್ಮನ ಮನೆಯವರು ಪ್ರೀತಿಯಿಂದ ಬೆಳೆಸುತ್ತಾರೆ. ಶಾಲೆ ಹಾಗೂ ಪಟ್ಟಣವನ್ನು ಪದೇ ಪದೇ ಬದಲಾಯಿಸಬೇಕಾದ ಅನಿವಾರ್ಯತೆಯೂ ಆತನಿಗೆ ಒದಗಿಬಂದಿತ್ತು. ಯಾಕೆಂದರೆ ತನ್ನ ಮಾವ ರೈಲ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರು ವರ್ಗಾವಣೆ ಆಗುತ್ತಿದ್ದರು.

ಸರಿಯಾದ ಧ್ಯೇಯವಿಲ್ಲದ ಅವರಿಗೆ ಜೀವನದಲ್ಲಿ ಗುರಿಯನ್ನು ಹೊಂದುವಂತೆ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕ ಸಿಕ್ಕಿದ ನಂತರ. ಅವರ ಭವಿಷ್ಯ ಉಜ್ವಲವಾಗಿತ್ತು. ಸಮಾಜದ ಬದಲಾವಣೆಗಾಗಿ ಪಣ ತೊಟ್ಟು ರಾಜಕೀಯ ಪ್ರವೇಶವನ್ನೂ ಮಾಡಿದರು. ಏಕಾತ್ಮ ಮಾನವ ಚಿಂತನೆಯನ್ನೂ ಬಲವಾಗಿ ಪ್ರತಿಪಾದಿಸಿದ್ದರು ಉಪಾಧ್ಯಾಯರು.

ಭಾರತದಲ್ಲಿ ಕಾಂಗ್ರೆಸ್ ಎಂಬ ಕುಟುಂಬ ರಾಜಕಾರಣವು ತಲೆಯೆತ್ತಿ ನಿಂತಿತ್ತು. ನಂತರ ಆ ಸಂತತಿಯು ಈ ದೇಶದಲ್ಲಿ ಮಾಡುತ್ತಿರುವ ಲೂಟಿಯನ್ನು, ಅನಾಚಾರವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದರು. ಬೇರೆ ಬೇರೆ ಪಕ್ಷದ ನಾಯಕರನ್ನು ಒಟ್ಟುಗೂಡಿಸಿ, ದೇಶ ಹಿತವನ್ನು ಬಯಸುವವರೊಂದಿಗೆ ಹೊಸ ಪಕ್ಷದ ಸ್ಥಾಪನೆಗೆ ಮುಂದಾದವರು ಶ್ರೀ ದೀನ ದಯಾಲ್ ಉಪಾಧ್ಯಾಯ. ಈ ನಡೆ ಇಡೀ ದೇಶವನ್ನೇ ಅವರನ್ನು ಬೆರಗುಗಣ್ಣಿನಿಂದ ನೋಡುವ ಹಾಗೆ ಮಾಡಿತ್ತು. ಈ ನಡೆ ಜನ ಸಂಘ ವೆಂಬ ಪಕ್ಷದ ಸ್ಥಾಪನೆಗೆ ಮುಂದಾಯಿತು.

“ಭಾರತೀಯ ಜನಸಂಘ ಭಿನ್ನವಾದ ಒಂದು ಪಕ್ಷವಾಗಿದೆ. ಇದು ಹೇಗಾದರೂ ಅಧಿಕಾರಕ್ಕೆ ಬರಬೇಕೆಂದು ಲಲಾಸೆ ಪಡುವ ಪಕ್ಷವಲ್ಲ. ಇದು ಒಂದು ಆಂದೋಲನವೇ ಆಗಿದೆ. ಇದು ರಾಜಕೀಯ ಅಭಿಲಾಷೆಯ ಸ್ವಯಂಸ್ಫೂರ್ತಿಯ ನಿರ್ಝರಿಣಿಯೂ ಆಗಿದೆ. ಇದು ರಾಷ್ಟ್ರ ನಿಶ್ಚಿತಲಕ್ಷ್ಯವನ್ನು ಆಗ್ರಹಪೂರ್ವಕವಾಗಿ ಸಾಧಿಸುವ ಆಕಾಂಕ್ಷೆಯೇ ಆಗಿದೆ.” ಎಂಬ ಚಿಂತನೆಯನ್ನು ಕೊಡುತ್ತಿದ್ದರು ಪಂಡಿತ್ ಜೀ. ಈ ಚಿಂತನೆಗಳು ಅದು ಯಾವ ಪಕ್ಷದವರಿಗೇ ಆದರೂ ಕಿರಿಕಿರಿಯಾಗುವಂತಹದ್ದು. ಯಾಕೆಂದರೆ ಇಲ್ಲಿ ಸ್ವಾರ್ಥ ರಾಜಕಾರಣಕ್ಕೆ ದಾರಿಯಿರಲಿಲ್ಲ. ದೇಶಹಿತ ಚಿಂತನೆ ಮಾಡುವವರಿಗೆ ಮಾತ್ರ ವೇದಿಕೆಯಿದ್ದುದು. ಇಂತಹ ಚಿಂತನೆಯನ್ನು ಹರಿಯಬಿಟ್ಟ ಪಂಡಿತ್ ಜೀಯವರು ಕೆಲವೇ ದಿನಗಳಲ್ಲಿ 5 ರುಪಾಯಿಗಳನ್ನು ಹಿಡಿದುಕೊಂಡ ಸ್ಥಿತಿಯಲ್ಲಿ ಮುಘಲಸರಾಯಿ ನಿಲ್ದಾಣದಲ್ಲಿ ಶವವಾಗಿ ಸಿಕ್ಕಿದ್ದರು.

ಯಾವ ವ್ಯಕ್ತಿ ಚಿಕ್ಕಂದಿನಿಂದಲೇ ಕಷ್ಟವನ್ನೆದುರಿಸಿಯೇ ಬಂದಿದ್ದರೋ, ನಂತರವೂ ಅವರ ಸಾವು ನೆಮ್ಮದಿಯಿಂದ ಕೂಡಿರಲಿಲ್ಲ. ಯಾವ ವ್ಯಕ್ತಿ ಸಮಾಜ ಹಿತವನ್ನೇ ಬಯಸಿ, ಸಮಾಜಕ್ಕಾಗಿ , ಸಮಾಜಕ್ಕೋಸ್ಕರ ಬದುಕಿದ್ದರೋ ಅದೇ ವ್ಯಕ್ತಿಯನ್ನು ಸಮಾಜದಲ್ಲಿರುವ ಸ್ವಾರ್ಥಿಗಳು ಕೊಲೆಗೈದಿದ್ದರು. ಸದಾ ಪ್ರೇಮವನ್ನು ಸಾರುತ್ತಿದ್ದ, ಯಾರನ್ನೂ ದ್ವೇಷಿದ ವ್ಯಕ್ತಿ ಯಾರದ್ದೋ ದ್ವೇಷಕ್ಕೆ ಬಲಿಯಾಗಿ ಹೋದರು. ಇತರೆ ಪಕ್ಷದೊಂದಿಗೆ ಅದೆಷ್ಟೇ ಭಿನ್ನಾಭಿಪ್ರಾಯವನ್ನೂ ಹೊಂದಿದ್ದರೂ, ರಾಷ್ಟ್ರದ ವಿಚಾರ ಬಂದಾಗ ಅವರೊಂದಿಗೆ ನಾವಿದ್ದೇವೆ ಎಂಬುದಾಗಿ ಸದಾ ಪ್ರತಿಪಾದಿಸುತ್ತಿದ್ದರು. ಅಂತಹ ಪಂಡಿತ್ ಜೀ ಒಂದು ದಿವಸ ಬರ್ಬರವಾಗಿ ಕೊಲೆಯಾಗಿ ಹೋದರು.

“ವಿಶ್ವದ ಜ್ಞಾನದ ಆಧಾರದ ಮೇಲೆ , ಇಂದಿನವರೆಗೆ ನಮ್ಮ ಸಂಪೂರ್ಣ ಪರಂಪರೆಯ ಆಧಾರದ ಮೇಲೆ ನಾವು ಎಂಥೆಂಥ ಭಾರತವನ್ನು ನಿರ್ಮಿಸುತ್ತೇವೆ ಎಂದರೆ ಅದು ನಮ್ಮ ಪೂರ್ವಿಕರ ಭಾರತಕ್ಕಿಂತಲೂ ಹೆಚ್ಚು ಗೌರವಪೂರ್ಣವಾಗಿರುತ್ತದೆ” ಎಂದು ಹೇಳುತ್ತಿದ್ದರು ಪಂಡಿತ್ ಜೀ.

ಅಂತಹ ಶ್ರೇಷ್ಠ ಚಿಂತಕರನ್ನು ಕೊಲೆಗೈದರು ಸ್ವಾರ್ಥಿಗಳು. ನಂತರ ಅವರ ಚಿಂತನೆಯನ್ನು ಅವರ ಹಿಂಬಾಲಕೆರೆಸಿಕೊಂಡವರು ಕೊಲೆಗೈಯುತ್ತಿರುವುದು ವಿಪರ್ಯಾಸವೇ ಸರಿ.

ನಮ್ಮ ದೇಶದ ದೌರ್ಭಾಗ್ಯವೆಂದೇ ಹೇಳಬೇಕು. ಯಾವ ವ್ಯಕ್ತಿ ದೇಶದ ಹಿತವನ್ನು ಬಯಸುತ್ತಾನೋ, ಆ ವ್ಯಕ್ತಿ ನಿಗೂಢವಾಗಿ ಒಂದು ದಿವಸ ಸಾವನ್ನಪ್ಪುತ್ತಾನೆ. ಇದು ಅನೇಕ ನಿದರ್ಶನದಿಂದ ನಿರೂಪಿಸಲ್ಪಟ್ಟಿದೆ. ಲಾಲ್ ಬಹದ್ದೂರ್ ಶಾಸ್ತ್ರೀಜಿ, ರಾಜೀವ್ ದೀಕ್ಷಿತ್ ರವರ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ. ಅದೇ ರೀತಿಯಾಗಿ ನಿಗೂಢತೆಯ ಸಾವನ್ನಪ್ಪಿದರು ಪಂಡಿತಜೀ. ಅವರ ಸಾವುಗಳಿಗೆ ನ್ಯಾಯವನ್ನು ಇನ್ನೂ ಒದಗಿಸಲಾಗಿಲ್ಲ. ಆ ಸಾವುಗಳ ಹಿಂದಿನ “ಕೈ”ಗಳನ್ನು ಕಂಡುಹಿಡಿಯಬೇಕಿದೆ.

ಇದುವರೆಗಿನ ಇತಿಹಾಸವನ್ನು ಗಮನಿಸಿದರೆ ಸಂಘದ ಹಿನ್ನಲೆಯಿಂದ ಬಂದ ನಾಯಕರೇ ಬರ್ಬರವಾಗಿ ನಿಗೂಢತೆಯಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದರೆ ಇದರ ಹಿಂದಿನ ಮರ್ಮವೇನು ? ಯಾಕೆ ಪದೇ ಪದೇ ರಾಷ್ಟ್ರಪ್ರೇಮಿಗಳೇ ಸಾವನ್ನಪ್ಪುತ್ತಿದ್ದಾರೆ?? ಈ ಪ್ರಶ್ನೆಗಳಿಗೆ ಉತ್ತರ ಒಗಟಾಗಿಯೇ ಉಳಿದಿದೆ.

– ವಸಿಷ್ಠ

Tags

Related Articles

Close