ಅಂಕಣ

ಯಾವನೇ ಒಬ್ಬ ಮುಸ್ಲಿಂ ಪ್ರಗತಿಪರ ವ್ಯಕ್ತಿ ಇಸ್ಲಾಂ ಕಂದಾಚಾರ, ನಂಬಿಕೆ ಇತ್ಯಾದಿಗಳ ವಿರುದ್ಧ ಮಾತಾಡುವುದನ್ನು ನೋಡಿದ್ದೀರಾ?

ಇಸ್ಲಾಂ ಅನ್ನು ನಂಬದವನಿಗೆ ಮುಂದೆ ಘೋರ ನರಕ ಕಾದಿದೆ ಎಂದು ಮುಗ್ಧ ಮುಸ್ಲಿಮರನ್ನು ಹೆದರಿಸಿ, ಬೆದರಿಸಿ ನಂಬಿಕೆ ಬರುವಂತೆ ಒತ್ತಡ ಹೇರಲಾಗುತ್ತದೆ. ಇಸ್ಲಾಂ ಹೊರತುಪಡಿಸಿ ಬೇರೆ ಧರ್ಮದವರೆಲ್ಲಾ ನರಕವಾಸಿಗಳಾಗುತ್ತಾರೆ ಎಂದು ಮುಸ್ಲಿಮರು ಬೆದರಿಸುತ್ತಾರೆ. ಇಸ್ಲಾಂ ನಂಬಿಕೆ, ಆಚರಣೆ, ಇಸ್ಲಾಂನ ಕಂದಾಚಾರದ ಬಗ್ಗೆ ಮಾತಾಡಿದರೆ ಅದೊಂದು ದೊಡ್ಡ ವಿವಾದಾತ್ಮಕ ವಿಚಾರವಾಗಿ ರಣರಂಗವಾಗುತ್ತದೆ. ಇಸ್ಲಾಂ ವಿರುದ್ಧ ಮಾತಾಡಿದ ಬಳಿಕ ರಕ್ತಪಾತವಾದ ಅನೇಕ ಘಟನೆಗಳು ನಡೆದಿವೆ. ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಆತನನ್ನು ಸಮರ್ಥನೆ ಮಾಡಲು ಇಸ್ಲಾಂನ ನಂಬಿಕೆ, ಗ್ರಂಥ ಇತ್ಯಾದಿಗಳನ್ನು ತರಲಾಗುತ್ತದೆ. ಉದಾಹರಣೆಗೆ ಭಯೋತ್ಪಾದಕರು ಯಾವುದರಿಂದ ಪ್ರೇರಿತರಾಗಿ ವಿದ್ವಂಸಕ ಕೃತ್ಯ ಎಸಗುತ್ತಾರೆ?, ಐಸಿಸ್ ಉಗ್ರರು ಕ್ರೌರ್ಯ ಮೆರೆಯಲು ಮೂಲ ಕಾರಣ ಯಾವುದು ಎಂದು ಕೇಳಿದರೆ ಅದಕ್ಕೆ ಸೂಕ್ತ ಉತ್ತರ ನೀಡದೆ, ಇಸ್ಲಾಂ ಶಾಂತಿಯನ್ನು ಸಾರುತ್ತದೆ ಎಂದಷ್ಟೇ ಹೇಳುತ್ತಾರೆ. ಮುಸ್ಲಿಮರ ಶಾಂತಿ ಇಸ್ಲಾಮೇತರರಿಗೆ ಅನ್ವಯವಾಗುತ್ತದಾ ಎಂದು ಕೇಳಿ ನೋಡಿ.. ಆದರೆ ಆಗ ಅವರ ಬಾಯಲ್ಲಿ ಒಂದು ಶಬ್ದವೂ ಬರುವುದಿಲ್ಲ.

ಆದರೆ ಯಾವನೇ ಒಬ್ಬ ಮುಸ್ಲಿಂ ಪ್ರಗತಿಪರ ವ್ಯಕ್ತಿ ಇಸ್ಲಾಂ ಕಂದಾಚಾರ, ನಂಬಿಕೆ ಇತ್ಯಾದಿಗಳ ಬಗ್ಗೆ ಮಾತಾಡುವುದನ್ನು ಗಮನಿಸಿದ್ದೀರಾ? ಆತ ಪ್ರಗತಿಪರನೆಂದು ಕರೆಸಿಕೊಳುವುದು ಹಿಂದೂ ಸಂಪ್ರದಾಯ ಮತ್ತು ನಂಬಿಕೆಗಳನ್ನು ದೂರಿದರೆ ಮಾತ್ರ. ಆದರೆ ಇಸ್ಲಾಂನ ಮತದ ಬಗ್ಗೆ ಮಾತಾಡಿದರೆ ಆತನ ಹೆಣವನ್ನು ದಫನ ಮಾಡ್ಲಿಕ್ಕೆ ಅವಕಾಶವಿಲ್ಲ, ಬದಲಿಗೆ ತನಗೆ ಘೋರ ನರಕ ಕಾದಿದೆ ಎಂದು ಆತನಿಗೆ ಭಯ ಕಾಡುತ್ತದೆ.

ಯಾವನೇ ಒಬ್ಬ ಮುಸ್ಲಿಂ ಸಾಹಿತಿ ಇರಲಿ, ಮುಸ್ಲಿಂ ಪ್ರಗತಿಪರ ವ್ಯಕ್ತಿ, ಡಿವೈಎಫ್‍ಐ ಮುಖಂಡನಿರಲಿ ಯಾರೇ ಇರಲಿ ಆತ ಇಸ್ಲಾಂ ನಂಬಿಕೆಯ ಬಗ್ಗೆ ಮಾತಾಡಿದ್ದನ್ನು ಗಮನಿಸಿದ್ದೀರಾ?

ಹಿಂದೂ ಧರ್ಮದ ಬ್ರಾಹ್ಮಣ, ಜಾತಿ, ಸತಿಸಹಗಮನ, ಅಸ್ಪøಷ್ಯತೆ, ದಲಿತ, ಆದಿವಾಸಿ, ಅಸ್ಪøಷ್ಯತೆ ಇದರ ವಿರುದ್ಧ ಒಂದು ಗಂಟೆ ನಿರರ್ಗಳವಾಗಿ ಮಾತನಾಡಬಲ್ಲ ಆದರೆ ಅದೇ ಇಸ್ಲಾಂನಲ್ಲಿ ಭಯೋತ್ಪಾದನೆಯ ಹೆಸರಲ್ಲಿ ಮುಗ್ಧ ಜನರನ್ನು ಕೊಲ್ಲುವುದರ ಬಗ್ಗೆ ಒಂದು ಬಿಂದಷ್ಟಾದರೂ ಕಣ್ಣೀರು ಹಾಕಿದ್ದಾನಾ? ಮಸೀದಿಗಳಲ್ಲಿ ಮೈಕ್ ಇಡುವುದು ತಪ್ಪು ಎಂದು ಒಂದು ಸ್ಟೇಟ್‍ಮೆಂಟ್ ಕೊಟ್ಟಿದ್ದಾನಾ? ಮತದ ಹೆಸರಲ್ಲಿ ಒಂದಷ್ಟು ಮಕ್ಕಳನ್ನು ಹೆತ್ತು ಅವರನ್ನು ಬೀದಿಯಲ್ಲಿ ಬಿಡುವುದರ ಬಗ್ಗೆ ಪ್ರಶ್ನಿಸಿದ್ದಾನಾ? ಇಷ್ಟೆಲ್ಲಾ ಬಿಡಿ ಆತ ಶುಕ್ರವಾರ ಮಸೀದಿಗೆ ಹೋಗುವುದನ್ನು ನಿಲ್ಲಿಸಿದ್ದಾನಾ, ಇದೂ ಹೋಗ್ಲಿಬಿಡಿ ಪ್ರತಿದಿನ ಐದು ಬಾರಿ ನಮಾಝು ಮಾಡುವುದನ್ನಾದ್ರೂ ನಿಲ್ಲಿಸಿದ್ದಾನಾ? ಆತ ಎಷ್ಟೇ ಪ್ರಗತಿಪರ ಸಾಹಿತಿಯಾಗಿರಲಿ, ಯಾರೇ ಆಗಿರಲಿ ಆತ ಹಿಂದೂ ಧರ್ಮದ ಬಗ್ಗೆ ಮಾತಾಡುತ್ತಾನೆಯೇ ಹೊರತು ಮೂಲತ: ಆತ ಕಟ್ಟರ್ ಮುಸ್ಲಿಮನಾಗಿರುತ್ತಾನೆ.

ನಿಮಗೆ ಗೊತ್ತಿರುವ ಯಾವುದೇ ಪ್ರಗತಿಪರರ ಜೊತೆ ಗುರುತಿಸಿಕೊಂಡ ಮುಸ್ಲಿಂ ವ್ಯಕ್ತಿಯಲ್ಲಿ ನೀನ್ಯಾಕೆ ಇಸ್ಲಾಂ ಕಂದಾಚಾರದ ಬಗ್ಗೆ ಮಾತಾಡುವುದಿಲ್ಲ ಎಂದು ಕೇಳಿನೋಡಿ ಆತ ಒಂದು ಶಬ್ದವನ್ನೂ ಮಾತಾಡುವುದಿಲ್ಲ.

ನನಗೊಬ್ಬ ಪ್ರಗತಿಪರರ ಜೊತೆ ಗುರುತಿಸಿಕೊಂಡ ವ್ಯಕ್ತಿಯ ಪರಿಚಯವಿದೆ. ಆತ ಜಾತ್ಯತೀತ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡ ಒಬ್ಬ ಮುಸ್ಲಿಂ ವ್ಯಕ್ತಿ. ಪ್ರತಿಭಟನೆ ನಡೆದರೆ ಈತ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾನೆ. ಈತ ಹಣ ಕೊಟ್ಟರೆ ಎಷ್ಟು ದೊಡ್ಡ ಪ್ರತಿಭಟನೆ ಮಾಡ್ತಾನೆ ಎಂದು ನನಗೆ ಆಮೇಲೆ ಗೊತ್ತಾಯಿತು. ಹೇಗೆ ಗೊತ್ತಾ?

ಗಣಿಧಣಿಯೊಬ್ಬ ಒಂದೇ ಸಮನೆ ಕಲ್ಲುಗಣಿಗಾರಿಕೆ ಮಾಡಿಕೊಂಡು ಊರವರಿಗೆ ದುಸ್ವಪ್ನವಾಗಿ ಕಾಡುತ್ತಿದ್ದ. ಈತನ ವಿರುದ್ಧ ಜನರು ತಿರುಗಿಬಿದ್ದಿದ್ದರು. ಈ ವೇಳೆ ವಕ್ಕರಿಸಿದ ಈತ ಊರವರ ತಲೆಯನ್ನೆಲ್ಲಾ ಹಾಳು ಮಾಡಿ ಪ್ರತಿಭಟನೆ ಮಾಡುವುದಾಗಿ ಅರಚಾಟ ನಡೆಸಿದ. ಈತನ ಮಾಧ್ಯಮಗಳ ಜೊತೆ ಸಾಕಷ್ಟು ಸಂಪರ್ಕ ಇಟ್ಟುಕೊಂಡಿದ್ದರಿಂದ ಈತ ಒಂದಷ್ಟು ಅರಚಿದರೂ ಈತನ ಭಾಷಣ ರಂಗುರಂಗಾಗಿ ಪತ್ರಿಕೆಗಳಲ್ಲಿ ಬರುತ್ತದೆ. ಈತ ಊರವರಿಂದ ಪ್ರತಿಭಟನೆ ನಡೆಸಲು ಹಣ ಪಡೆದುಕೊಂಡು ಆ ಬಳಿಕ ಗಣಿಮಾಲನೊಂದಿಗೂ ಡೀಲ್ ಮಾಡಿಕೊಂಡು ಊರ ಜನರನ್ನು ನಡುನೀರಲ್ಲಿ ಬಿಟ್ಟು ಪರಾರಿಯಾಗಿದ್ದ.

ಈತ ಭಾಷಣ ಮಾಡುವುದೆಲ್ಲಾ ಬ್ರಾಹ್ಮಣ, ದಲಿತ, ಶೂದ್ರ, ಅಸ್ಪøಶ್ಯತೆ ಇತ್ಯಾದಿಗಳ ಬಗ್ಗೆ ಮಾತ್ರ. ಫೇಸ್‍ಬುಕ್‍ನಲ್ಲಿಯೂ ಈತ ಒಂದಷ್ಟು ಬರಹ ಬರೆದು ಹಾಕುತ್ತಿದ್ದ. ಈತ ಒಂದು ದಿನವೂ ನಮಾಝ್ ಮಾಡುವುದನ್ನು ನಿಲ್ಲಿಸುವುದಿಲ್ಲ, ಶುಕ್ರವಾರ ಮಸೀದಿಗೆ ಹೋಗುವುದನ್ನೂ ನಿಲ್ಲಿಸುವುದಿಲ್ಲ.

ವಿಗ್ರಹಾರಾಧನೆಯನ್ನು ನಂಬದ ನೀವು ಮಸೀದಿಗೆ ಹೋಗುವುದು ಯಾಕೆ ಎಂದು ಒಬ್ಬ ಮುಸ್ಲಿಮನಲ್ಲಿ ಕೇಳಿ ನೋಡಿ… ಆತ ನಿಮ್ಮ ಕಪಾಳಕ್ಕೆ ಬಾರಿಸುತ್ತಾನೆ. ದಲಿತ, ಅಸ್ಪøಶ್ಯರಿಗೆ ದೇವಸ್ಥಾನ ಪ್ರವೇಶವಿಲ್ಲ ಎಂದು ಅರಚಾಡುವ ಒಬ್ಬ ಮುಸ್ಲಿಂ ಪ್ರಗತಿಪರ ತನ್ನದೇ ಸಮುದಾಯದ ಮಹಿಳೆಗೆ ಮಸೀದಿಗೆ ಪ್ರವೇಶವಿಲ್ಲ ಯಾಕೆ ಎಂದು ಅರಚುವುದಿಲ್ಲ. ಬುರ್ಖಾ ತೊಡಿಸಿ ಮಹಿಳೆಯರ ಸ್ವಾತಂತ್ರ್ಯವನ್ನು ಕಸಿಯುವುದು ಮಾನವಹಕ್ಕು ಉಲ್ಲಂಘನೆಯಲ್ಲವೇ ಎಂದು ಕೇಳಿದರೆ ಅದಕ್ಕೆ ಆತ ಯಾವ ರೀತಿ ಪ್ರತಿಕ್ರಿಸುತ್ತಾನೆ ಎಂದು ಇಲ್ಲಿ ವಿವರಿಸಬೇಕಾಗಿಲ್ಲ.

ಇತ್ತೀಚೆಗೆ ತಲಾಖ್ ನಿಷೇಧಗೊಂಡಿತು. ಸುಪ್ರೀಂಕೋರ್ಟ್‍ನ ನಿರ್ಣಯವನ್ನು ಸ್ವಾಗತಿಸಿದ ಒಬ್ಬನೇ ಒಬ್ಬ ಮುಸ್ಲಿಂ ಸಾಹಿತಿ, ಪ್ರಗತಿಪರ ಚಿಂತಕನನ್ನು ಹುಡುಕಿಕೊಡಿ. ದುರ್ಬೀನು ಹಾಕಿದರೂ ಕಾಣುವುದಿಲ್ಲ ಅಲ್ಲವೇ?

ಹಿಂದೂ ಧರ್ಮದ ನಂಬಿಕೆ, ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ಕರೆಯುವ ಒಬ್ಬ ಮುಸ್ಲಿಂ ಬಂಡಾಯ ವ್ಯಕ್ತಿ ಅವರ ಮತದಲ್ಲಿ ಬರುವ ಸ್ವರ್ಗ, ನರಕವನ್ನು ನಂಬುತ್ತಾನೆ. ಶುಕ್ರವಾರದ ಮಸೀದಿಗೆ ಹೋಗಲಾಗದಿದ್ದರೆ ಶವ ದಫನ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಹೆದರುತ್ತಾನೆ.

ಕಳ್ಳತನ ಮಾಡಿದ, ಕೊಲೆ ಮಾಡಿದ, ಬಾಂಬಿಟ್ಟು ನೂರಾರು ಮುಗ್ಧರನ್ನು ಕೊಂದ ಒಬ್ಬ ಮುಸ್ಲಿಂ ವ್ಯಕ್ತಿಗೆ ಮಸೀದಿಗೆ ಬರದಂತೆ ನಿಷೇಧ ಮಾಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ…? ಓದಿದ್ದೀರಾ? ಅಥವಾ ಅಂತವರನ್ನು ಜಮಾತ್‍ನಿಂದ ಹೊರಗಟ್ಟಿರುವುದನ್ನು ಗಮನಿಸಿದ್ದೀರಾ? ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ ಆತ ಗುತ್ತಿಗೆ ಪಡೆದಿರುವುದು ಹಿಂದೂ ಧರ್ಮವನ್ನು ನಿಂದಿಸಲು ಮಾತ್ರ.

ದಲಿತ-ಬ್ರಾಹ್ಮಣ ಮಧ್ಯೆ ಗಲಾಟೆ ನಡೆದು ಸವರ್ಣೀಯರು ಅಸ್ಪøಷ್ಯರನ್ನು ಕೊಲ್ಲುತ್ತಾರೆ ಎಂದು ಅರಚುವ ಒಬ್ಬ ಮುಸ್ಲಿಂ ನಿಮ್ಮಲ್ಲಿ ಸುನ್ನಿಗಳು ಷಿಯಾಗಳನ್ನು ಯಾಕೆ ಬಾಂಬಿಟ್ಟು ಕೊಲ್ಲುತ್ತಾರೆ ಎಂದರೆ ಅದಕ್ಕೆ ಅವರು ಉತ್ತರಿಸುವುದೇ ಇಲ್ಲ. ಇನ್ನು ಪಾಕಿಸ್ತಾನಗಳಲ್ಲಿ ಪವಿತ್ರ ಸ್ಥಳ ಮಸೀದಿಗಳನ್ನು ಯಾಕೆ ಸ್ಫೋಟಿಸುತ್ತಾರೆ ಅವರು ಕೂಡಾ ಮುಸ್ಲಿಮರಲ್ವಾ ಎಂದು ಕೇಳಿದರೆ ಅದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ನೀವೇ ಕೇಳಿ ನೋಡಿ.

ಮುಸ್ಲಿಮರು ಹೆದರುವುದು ಸತ್ತ ಬಳಿಕ ಸಿಗುವ ನರಕಕ್ಕೆ. ಇಂಥದೊಂದು ನರಕ ಇದೆಯೋ ಇಲ್ಲವೋ ಎಂದು 72 ವರ್ಜಿನ್ ಕನ್ಯೆಯರ ಆಸೆಗೆ ಬಾಂಬಿಟ್ಟು ಸಾಯುವ ಒಬ್ಬ ಉಗ್ರವಾದಿಗೂ ಗೊತ್ತಿರಲಿಕ್ಕಿಲ್ಲ. ನರಕವು ಹೊಂಚು ಹಾಕುತ್ತಲಿದೆ! ದೇವನ ಆಜ್ಞೆಯನ್ನು ಉಲ್ಲಂಘಿಸಿದವರು ಕುದಿಯುತ್ತಿರುವ ನೀರು ಮತ್ತು ಕೀವುಗಳಂತಹ ಅಸಹ್ಯಕರ ನರಕ ಲೋಕದಲ್ಲಿ ತಿನ್ನಲು, ಕುಡಿಯಲು ಏನೂ ಇಲ್ಲದೆ ಬಿದ್ದುಕೊಂಡಿರುತ್ತಾರೆ ಎಂದು ಹೆದರಿಸಲಾಗುತ್ತದೆ.

ಹಿಂದೂ ಧರ್ಮವನ್ನು ನಿಂದಿಸುವ ಮುಸ್ಲಿಂ ಗಂಜಿಗಿರಾಕಿಗಳು ಅವರ ಮತದ ಮಾತಾಡುವುದೇ ಇಲ್ಲ. ಯಾಕೆಂದರೆ ಮುಂದೆ ಅವರಿಗೆ ನರಕ ಸಿಕ್ಕರೆ ಏನು ಗತಿ ಎಂಬ ಭಯ ಇರುತ್ತದೆ.

-ಚೇಕಿತಾನ

Tags

Related Articles

Close