ಅಂಕಣ

ಯಾವಾಗ ಸೋಮನಾಥ ದೇಗುಲದ ಪುನರುಜ್ಜೀವನಕ್ಕೆ ನೆಹರೂ ತಡೆ ಒಡ್ಡಿದರೋ. . . . . .

ಕಂಬಗಳ ಮೇಲೆ ಮುತ್ತು ರತ್ನಗಳಿಂದ ಶೋಭಿಸುತ್ತಿದ್ದ, ಇಡೀ ಮಂದಿರವೇ ಬೆಳ್ಳಿ-ಬಂಗಾರದಿಂದ ಕೂಡಿದ್ದ ಸೋಮನಾಥ ದೇವಾಲಯವನ್ನು ಮುಸ್ಲಿಂ ದೊರೆ
ಅಲ್ಲಾವುದ್ದೀನ್ ಖಿಲ್ಜಿ ನಾಶ ಮಾಡಿದನು. ಸಹಸ್ರಾರು ಹಿಂದೂಗಳ ಆರಾಧ್ಯ ದೇವರಾಗಿದ್ದ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ದರುಶನ ಕೊಡುತ್ತಿದ್ದ ದೇವಸ್ಥಾನದ
ಮೇಲೆ ದಾಳಿ ನಡೆಸಿದ ಅಲ್ಲಾವುದ್ದೀನ್ ಖಿಲ್ಜಿ ಅದರಲ್ಲಿದ್ದ ಸಂಪತ್ತನ್ನೆಲ್ಲಾ ದೋಚಿದ್ದ. ಇದಾದ ಮೇಲೆ ಮೊಘಲ್ ದೊರೆ ಔರಂಗಜೇಬನೂ ದಾಳಿ ನಡೆಸಿ ದೇವಸ್ಥಾನವನ್ನು ಧ್ವಂಸಗೊಳಿಸಿದ್ದ. ಸಮಸ್ತ ಹಿಂದೂಗಳ ಆತ್ಮಪ್ರತೀಕದಂತಿದ್ದ ಸೋಮನಾಥ ದೇವಾಲಯ ಧ್ವಂಸಗೊಂಡಿರುವುದನ್ನು ಕಂಡು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲರಿಗೆ ಅದನ್ನು ಮನುನಿರ್ಮಾಣ ಮಾಡಬೇಕೆಂಬ ಉತ್ಕಟ ಬಯಕೆ ಮೂಡಿತು.

ಆದ್ದರಿಂದ ಸೋಮನಾಥ ದೇವಾಲಯವನ್ನು ಮತ್ತೆ ನಿರ್ಮಣ ಮಾಡಿ, ದಾಳಿಕೋರರ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ಈ ವಿಷಯವನ್ನು ಪಟೇಲ್ ಪ್ರಧಾನಿ ನೆಹರೂ ಬಳಿ ಪ್ರಸ್ತಾಪಿಸಿದಾಗ, ಸರ್ಕಾರ ಒಂದೇ ಒಂದು ಪೈಸೆಯನ್ನೂ ಕೊಡುವುದಿಲ್ಲ ಎಂದು ಕಡ್ಡಿಮುರಿದಂತೆ ನುಡಿದರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯದಿಂದ ನೆಹರೂ ಹಿಂದೂಗಳ ಪಾಲಿನ ವಿಲನ್ ತರ ವರ್ತಿಸಿದರು. ಇದರಿಂದ ಕಂಗಾಲಾದ ಅಂದಿನ ಗೃಹ ಮಂತ್ರಿ ಪಟೇಲರು ಗಾಂಧೀಜಿ ಬಳಿ ತೆರಳಿ ನೆಹರೂಗೆ ಬುದ್ಧಿ ಹೇಳುವಂತೆ ಕೇಳಿಕೊಂಡರು. ಆಗ ಗಾಂಧೀಜಿ ದೇವಸ್ಥಾನ ನಿರ್ಮಿಸಲು ಜನರಿಂದ ದೇಣಿಗೆ ಸಂಗ್ರಹಿಸುವಂತೆ ಸಲಹೆ ನೀಡಿದರು. ಅಂತೆಯೇ ದೇವಸ್ಥಾನದ ಪುನನಿರ್ಮಾಣ ಕಾರ್ಯ ನಡೆಯಲಾರಂಭಿಸಿತು. ಸರ್ದಾರ್‍ಗೆ ಸಾಥ್ ನೀಡಿದ್ದು ಕೆ.ಎಂ. ಮುನ್ಷಿ. ಸರ್ದಾರ್ ಪಟೇಲ್ ಮರಣಾನಂತರ ದೇವಸ್ಥಾನದ ಮನುನಿರ್ಮಾಣದ ಕಾರ್ಯವನ್ನು ಕೆ.ಎಂ. ಮುನ್ಷಿ ಅವರು ಸಮರ್ಪಪಕವಾಗಿ ನಿರ್ವಹಿಸಿದರು.

ಸೋಮನಾಥ ದೇವಸ್ಥಾನದ ಮೇಲೆ ಆಳವಾದ ಪ್ರೀತಿ ಇಟ್ಟುಕೊಂಡಿದ್ದ ಮುನ್ಷಿ, ಇದು ಪುರಾತನ ದೇವಾಲಯವಷ್ಟೇ ಅಲ್ಲದೆ ಇಡೀ ರಾಷ್ಟ್ರದ ಜನರ ಹೃದಯದಲ್ಲಿ
ನೆಲೆಸಿದ ದೇಗುಲವಾಗಿದೆ ಎಂದು ಭಾವಿಸಿ ಅದನ್ನು ನಿರ್ಮಿಸಲೇಬೇಕೆಂಬ ಪ್ರತಿಜ್ಞೆಯನ್ನು ಕೈಗೊಂಡಿದ್ದರು. ಆದರೆ ಮುನ್ಷಿಯವರ ಆಸಕ್ತಿಯನ್ನು ಕಂಡು ಟೀಕಿಸಿದ್ದ
ನೆಹರೂ ಈ ಬಗ್ಗೆ ಆಗಾಗ ಮುನ್ಷಿಯವರನ್ನು ಗೇಲಿ ಮಾಡುತ್ತಿದ್ದರು. ದೇವಸ್ಥಾನದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲೂ ಮುನ್ಷಿಯವರನ್ನು ನೆಹರೂ ನಿರಂತರವಾಗಿ ಟೀಕಿಸುತ್ತಲೇ ಬರುತ್ತಿದ್ದರು. 1951ರಲ್ಲಿ ದೇವಸ್ಥಾನ ಸಂಪೂರ್ಣವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದ್ದರೂ ನೆಹರೂ ಮಾತ್ರ ಅಲ್ಲಿಗೆ ಬರಲೊಲ್ಲಲಿಲ್ಲ. ಜೊತೆಗೆ ನೀವು ದೇವಸ್ಥಾನ ಪುನರುಜ್ಜೀವನಗೊಳಿಸುವುದಷ್ಟೇ ಅಲ್ಲದೆ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಒತ್ತು ನೀಡುತ್ತಿದ್ದೀರಿ ಎಂದು ಟೀಕಿಸಿದ್ದರು. ಒಟ್ಟಿನಲ್ಲಿ ಮುಸ್ಲಿಮರಿಂದ ಧ್ವಂಸಗೊಂಡಿದ್ದ ದೇವಸ್ಥಾನವನ್ನು ಪುನನಿರ್ಮಿಸಲು ನೆಹರೂಗೆ ಕೊಂಚವೂ ಇಷ್ಟವಿರಲಿಲ್ಲ ಎಂದರೆ ದೊಡ್ಡ ಶಕುನದಂತೆ ಕಂಡುಬರುತ್ತದೆ. ಜೊತೆಗೆ ಪುರಾತನ ದೇವಸ್ಥಾನವೊಂದು ಪುನರುಜ್ಜೀವನಗೊಳ್ಳುತ್ತದೆ ಎಂಬ ಪರಿಕಲ್ಪನೆಯನ್ನೂ ಅವರು ಹೊಂದಿರಲಿಲ್ಲ.

ದೇವಸ್ಥಾನ ಪುನರುಜ್ಜೀವನಗೊಂಡರೆ ನೆಹರೂಗೆ ಆಗುವ ನಷ್ಟವೇನು? ಸರಕಾರದ ವತಿಯಿಂದ ಯಾಕೆ ನಯಾಪೈಸೆಯನ್ನೂ ಬಿಚ್ಚಲಿಲ್ಲ? ಎಂಬ ಪ್ರಶ್ನೆಗಳೆಲ್ಲಾ ಕಾಡಿದರೆ ಅದಕ್ಕೆ ನೆಹರೂನ ಹಿಂದೂ ವಿರೋಧಿ ನೀತಿಯೇ ಆಗಿತ್ತು. ಹಿಂದೂಗಳು ಪೂಜೆ ಮಾಡುವುದು, ಪುರಾತನ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡುವುದಕ್ಕೆ ನೆಹರೂಗೆ ಇಷ್ಟವೇ ಆಗದ ವಿಷಯವಾಗಿತ್ತು. ನೆಹರೂಗೆ ಹಿಂದೂ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ಇಷ್ಟವಿಲ್ಲ ಎಂದು ತಿಳಿದು, ಜೊತೆಗೆ ಅವರ ಟೀಕೆಯನ್ನೂ ಕೇಳಿ ಸಿಟ್ಟಿಗೆದ್ದಿದ್ದ ಮುನ್ಷಿ ಯಾವುದನ್ನೂ ಪ್ರತಿಕ್ರಿಯಿಸದೆ ಸಭೆಯಿಂದ ಎದ್ದುಹೋಗಿದ್ದರು. ಕೊನೆಗೆ ನೆಹರೂಗೆ ಪತ್ರವೊಂದನ್ನು ಬರೆದರು.

`ಹಿಂದೂ ಪುನರುಜ್ಜೀವನದ ಬಗ್ಗೆ ನಿಮ್ಮ ಧ್ವನಿ ಏನೆಂದು ಸ್ಪಷ್ಟವಾಗಿ ಅರ್ಥ ಮಾಡಿಕೊಂಡೆ. ನಾನು ನನ್ನ ಕೆಲಸದ ಮುಖಾಂತರ ಅವರಿಗೆ(ಭಕ್ತರಿಗೆ)
ನ್ಯಾಯವನ್ನೊದಗಿಸುತ್ತೇನೆ. ನನ್ನ ಮೇಲಿನ ನಂಬಿಕೆಯು ಭವಿಷ್ಯದಲ್ಲಿ ಕೆಲಸ ಮಾಡಲು ಶಕ್ತಿಯನ್ನು ಕೊಟ್ಟಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಅದರ ಮೌಲ್ಯ
ಉಳಿಯಬೇಕಾದರೆ ನಾವು ಜನರಿಗೆ ಅಗತ್ಯವಾಗಿರುವ ಸ್ಮಾರಕಗಳತ್ತನೂ ಗಮನಹರಿಸಬೇಕು. ಅವುಗಳನ್ನು ನಾಶಪಡಿಸಿದರೆ ನಮಗೆ ಯಾವ ಗೌರವವಿದೆ? ದೇವಸ್ಥಾನ ನಿರ್ಮಿಸದಿದ್ದರೆ ನಮಗೆ ಸಿಕ್ಕ ಸ್ವಾತಂತ್ರ್ಯಕ್ಕೆ ಏನು ಬೆಲೆ ಇದೆ? ಜನರು ಧರ್ಮದ ಮೇಲೆ ಪರಿಶುದ್ಧವಾದ ಪರಿಕಲ್ಪನೆಯನ್ನು ಹೊಂದಿದ್ದಾರೆ. ಆದ್ದರಿಂದ ಸೋಮನಾಥ ದೇವಸ್ಥಾನ ಖಂಡಿತಾ ಮರುನಿರ್ಮಾಣವಾಗುತ್ತದೆ ...’ ಎಂಬ ಧೀರ್ಘವಾದ ಪತ್ರ ಬರೆದಿದ್ದರು.

ನೆಹರೂಗೆ ದೇವಸ್ಥಾನ ಆಗುತ್ತದೆ ಎಂಬ ನಂಬಿಕೆಯೇ ಇರಲಿಲ್ಲ. ಆದರೆ ಎಲ್ಲರ ನಿರೀಕ್ಷೆ ಮೀರಿ ಗುಜರಾತ್ ರಾಜ್ಯದ ಸೌರಾಷ್ತ್ರ – ಜುನಾಗಡ ಜಿಲ್ಲೆಯ ಪ್ರಭಾಸ ಎಂಬಲ್ಲಿ ಶ್ರೀಸೋಮನಾಥ ಜ್ಯೊತಿರ್ಲಿಂಗದ ದೇವಾಲಯ ಪುನರುಜ್ಜೀವನಗೊಂಡಿತು. ಇದರ ಉದ್ಘಾಟನೆಗೆ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಕೂಡಾ ಬಂದಿದ್ದರು.

ಅಂತೆಯೇ ನೆಹರೂ ಅವರಿಗೆ ಆಹ್ವಾನ ನೀಡಿದಾಗ ನೆಹರೂ ಏನಂದರೂ ಗೊತ್ತೇ?

ದೇವಸ್ಥಾನಕ್ಕೆ ಆಹ್ವಾನಿಸಿದಾಗ ಬರಲೊಲ್ಲದ ನೆಹರೂ ಅದಕ್ಕೆ ಪತ್ರವೊಂದನ್ನು ಬರೆದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. `ಸೋಮನಾಥ ದೇವಾಲಯ
ಲೋಕಾರ್ಪಣೆಯಾಗುವುದು ಇದೆಲ್ಲಾ ನನಗೆ ಹಿಡಿಸುವ ವಿಚಾರವಲ್ಲ. ನಾನು ಆ ದೇವಸ್ಥಾನಕ್ಕೆ ಭೇಟಿಯನ್ನೂ ನೀಡುವುದಿಲ್ಲ. ನಿಮಗೆ ಯಾರು ಬೇಕೋ ಅವರನ್ನು ಕರೆಸಿ ಉದ್ಘಾಟನೆ ಮಾಡಿಸಿಕೊಳ್ಳಿ… ನನಗೆ ಇದರಿಂದ ತುಂಬಾ ಪರಿಣಾಮ ಉಂಟಾಗುತ್ತದೆ. ಅಲ್ಲದೆ ನಗೆ ಪರಿಣಾಮಗಳ ಸಂಖ್ಯೆಯನ್ನು ಎದುರಿಸಲು ಕಷ್ಟವಾಗುತ್ತದೆ’ ಎಂದು ಬರೆದಿದ್ದರು. ಒಟ್ಟಾರೆ ದೇವಸ್ಥಾನಕ್ಕೆ ಬಂದರೆ ನೆಹರೂ ಅವರ ಗಂಟೇನು ಹೋಗುತ್ತಿತ್ತೋ ಆ ದೇವರಿಗೇ ಗೊತ್ತು.

ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ದೇಗುಲದ ಶಂಕುಸ್ಥಾಪನೆಗೆ ತೆರಳಿರುವುದಕ್ಕೆ ಸಾಕಷ್ಟು ಮಂದಿಯ ಟೀಕೆಗೊಳಗಾದರು. ಪ್ರಸಾದ್ ಅವರು ಜಾತ್ಯತೀತ ತತ್ವಕ್ಕೆ
ತಿಲಾಂಜಲಿ ಇಟ್ಟಿದ್ದಾರೆ ಎಂದು ಟೀಕಿಸಲಾಯಿತು. ನೆಹರೂ ಕೂಡಾ ರಾಜೇಂದ್ರ ಅವರಲ್ಲಿ ಅವರು ಏನು ಮಾಡುತ್ತಾರೋ ಮಾಡಲಿ, ನೀವು ತೆರಳುವುದು ಬೇಡ ಎಂದು ಸಲಹೆ ನೀಡಿದ್ದರು. ಆದರೆ ಈ ಸಲಹೆಯನ್ನು ನಿರ್ಲಕ್ಷಿಸಿದ್ದ ಬಾಬು ರಾಜೇಂದ್ರ ಪ್ರಸಾದ್, ಆಮಂತ್ರಿಸಿದರೆ ನಾನು ಚರ್ಚ್, ಮಸೀದಿ ಉದ್ಘಾಟನೆಗೂ ತೆರಳುತ್ತೇನೆ ಎಂದು ನುಡಿದು ನೆಹರೂ ಬಾಯಿ ಮುಚ್ಚಿಸಿದ್ದರು.

ಪಟೇಲ್ ಅವರ ಪ್ರತಿಜ್ಞೆ, ಮುನ್ಷಿ ಅವರ ಸಾಧನೆ, ಗಾಂಧೀಜಿಯ ಸಲಹೆಯಿಂದ ಗುಜರಾತ್‍ನಲ್ಲಿ ವೈಭವೋಪೇತ ದೇವಸ್ಥಾನ ನಿರ್ಮಾಣಗೊಂಡಿತು.

ಅನೇಕ ವರ್ಷಗಳ ನಂತರ ಮುನ್ಷಿ ಅವರು ಈ ಘಟನೆಯನ್ನು ನೆನೆದು ನೆಹರೂ ಅವರ ಜಾತ್ಯತೀತ ತತ್ವ ವಿನಾಶಕಾರಿ, ಧಾರ್ಮಿಕ ವಿರೋಧಿ ಎಂದು ಕಟು
ವಿಮರ್ಶೆಯನ್ನು ಬರೆದಿದ್ದರು. ಜಾತ್ಯತೀತತೆಯ ಹೆಸರಲ್ಲಿ ಧಾರ್ಮಿಕ ವಿರೋಧಿಯಾಗುವುದು, ಜಾತ್ಯತೀತತೆಯ ಹೆಸರಲ್ಲಿ ಮಾನವತಾವಾದವನ್ನು ಮರೆಯುವುದು, ಅಥವಾ ಕಮ್ಯುನಿಸಂ ಸಿದ್ದಾಂತದಿಂದ ಧರ್ಮನಿಷ್ಠೆಯನ್ನು ಮರೆಯುವುದನ್ನು ಖಂಡಿಸುತ್ತೇನೆ ಎಂದಿದ್ದರು. ಜೊತೆಗೆ ಅಲ್ಪಸಂಖ್ಯಾತರ ವಿಚಾರದಲ್ಲಿ ನೆಹರೂ ತೋರುತ್ತಿದ್ದ ಹೆಚ್ಚಿನ ಒಲವನ್ನೂ ಮುನ್ಷಿ ಖಂಡಿಸಿದ್ದರು. ತನ್ನ ಮಾತುಗಳನ್ನು ಮುಂದುವರಿಸಿ, ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ವಿಚಿತ್ರವಾದ ಧೋರಣೆಯನ್ನು ಹೊಂದಿದ್ದಾರೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಒಲವು ತೋರಿಸುವ ಸಲುವಾಗಿ ಉಳಿದವರನ್ನು ಕಡೆಗಣಿಸಲಾಗುತ್ತದೆ. ಇದು ಕೋಮುಭಾವನೆಗೆ ನಾಂದಿ ಹಾಡುತ್ತದೆ. ಪವಿತ್ರಕ್ಷೇತ್ರಗಳಾದ ಬನಾರಸ್, ಮಧುರಾ ಮತ್ತು ರಿಷಿಕೇಶ ಮುಂತಾದ ಕ್ಷೇತ್ರಗಳು ಕೊಳೆಗೇರಿಗಳಾಂತಾದರೆ ಮುಂದೆ ಅಹಿಷ್ಣುತೆ ಉಂಟಾಗಿ ಘರ್ಷಣೆಗೂ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಇಂದು ನಿಜವಾಗುತ್ತಿದ್ದು, ನೆಹರೂ ತಾಳಿದ ಹಿಂದೂ ವಿರೋಧಿ ನೀತಿಯಿಂದ ಇಂದಿಗೂ ಹಿಂದೂಗಳು ಅನುಭವಿಸುತ್ತಿದ್ದಾರೆ. ಮೊಘಲ್ ದೊರೆಗಳಿಗೂ ನೆಹರೂಗೂ ಯಾವ ವ್ಯತ್ಯಾಸವೂ ಇರಲಿಲ್ಲ.

ಮುನ್ಷಿ, ಪಟೇಲ್ ದಿಟ್ಟ ನಿಲುವು ತಾಳದೇ ಇರುತ್ತಿದ್ದರೆ ಇಂದಿಗೂ ಸೋಮನಾಥ ದೇಗುಲ ನಿರ್ಮಾಣವಾಗಲು ಸಾಧ್ಯವೇ ಇರಲಿಲ್ಲ. ಒಟ್ಟಿನಲ್ಲಿ ನೆಹರೂನಿಂದ ಸಾಕಷ್ಟು ಅಡ್ಡಿಯಾಗಿದ್ದರೂ ಅತ್ಯಂತ ಪ್ರಾಚೀನ ಕಾಲದ, ಜ್ಯೋತಿರ್ಲಿಂಗವನ್ನು ಹೊಂದಿರುವ ದೇವಾಲಯ ಇಂದು ಭಕ್ತರ ಪಾಲಿನ ಆರಾಧನಾ ಕ್ಷೇತ್ರವಾಗಿದೆ.

Source :https://swarajyamag.com/politics/the-somnath-saga-a-precursor-to-debates-around-secularism-in-india

-ಚೇಕಿತಾನ

 

Tags

Related Articles

Close