ಅಂಕಣ

ಯಾವುದನ್ನು ಕರ್ನಾಟಕ ಸರಕಾರ ಮಾಡಲು ವಿಫಲವಾಗಿತ್ತೋ, ಅದನ್ನು ಸ್ಮೃತಿ ಇರಾನಿ ಸಾಧಿಸಿದ್ದಾರೆ!!!

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಸತತ 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದ ಕರ್ನಾಟಕದ ವೀರಯೋಧ ಹನುಮಂತಪ್ಪ
ಕೊಪ್ಪದ್ ಅವರ ಪತ್ನಿ ಮಹಾದೇವಿಗೆ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಉದ್ಯೋಗಾವಕಾಶ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಸಭೆಯ ಸಂಸತ್‍ನ ಸದಸ್ಯರಾದ
ರಾಜೀವ್ ಚಂದ್ರಶೇಖರ್, ಕೇಂದ್ರ ರೇಷ್ಮೆ ಬೋರ್ಡ್‍ನಿಂದ ಈ ಒಂದು ಉದ್ಯೋಗವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪ್ರವಾಹದದಲ್ಲಿ ಪವಾಡದ ಮೂಲಕವೇ 6 ದಿನಗಳ ನಂತರ
ಜೀವಂತವಾಗಿ ಪತ್ತೆಯಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು 2016ರ ಫೆಬ್ರವರಿಯಲ್ಲಿ ಮೃತಪಟ್ಟಿದ್ದರು. ತನ್ನ ಜೀವವನ್ನೇ ದೇಶಕ್ಕಾಗಿ ತ್ಯಾಗ ಮಾಡಿ, 18000ಅಡಿ ದೇಶದ ಕಾವಲು ಕಾಯುತ್ತಿದ್ದ ಹನುಮಂತಪ್ಪ ಕೊಪ್ಪದ್ ತನ್ನ ಹೆಂಡತಿ, ಒಬ್ಬ ಮಗಳು ಮತ್ತು ಕುಟುಂಬವನ್ನು ಕಳೆದು ಇಹಲೋಕ ತ್ಯಜಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ 19,500 ಅಡಿ ಎತ್ತರದ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪ್ರವಾಹದಲ್ಲಿ ಕೊಪ್ಪದ್ ಮತ್ತು ಇತರ 9 ಮಂದಿ ಯೋಧರು ಸಿಕ್ಕಿಹಾಕಿಕೊಂಡು ಹಿಮರಾಶಿಯಲ್ಲಿ ಹೂತುಹೋಗಿದ್ದರು. ಇದರಲ್ಲಿ ಕೊಪ್ಪದ್ ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ದೆಹಲಿಯ ಸೇನಾ ಆಸ್ಪತ್ರೆಗೆ ವಿಮಾನ ಮೂಲಕ ಸಾಗಿಸಿ ಉಳಿಸಿಕೊಳ್ಳಲು ಸತತ ಪ್ರಯತ್ನಪಟ್ಟರು. ಕೊಪ್ಪದ್ ದೇಹದಸ್ಥಿತಿ ವಿಷಮಿಸಿದ ಪರಿಣಾಮ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತಾದರೂ ಹನುಮಂತಪ್ಪ ಕೊಪ್ಪದ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪವಾಡ ಪುರುಷನಾಗಿ ಸಿಯಾಚಿನ್‍ನಲ್ಲಿ ಆದ ಹಿಮಪಾತದಿಂದ 6 ದಿನಗಳ ಕಾಲ ಬದುಕುಳಿದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್. ಇವರ ಮರಣಾನಂತರ ‘ಸೇನಾ ಪದಕ’ ನೀಡಿ ಗೌರವಿಸಲಾಗಿದೆ. ದೇಶಸೇವೆಗಾಗಿ ಮುಡಿಪಾಗಿಸಿಟ್ಟ ಹನುಮಂತಕೊಪ್ಪದ್ ಈ ಒಂದು ಗೌರವಕ್ಕೆ ಪಾತ್ರರಾಗಿದ್ದು, ಈ ಸೇನಾ ಪದಕವನ್ನು ಕೊಪ್ಪದ್ ಪತ್ನಿ ಮಹಾದೇವಿ ಸೇನಾ ದಿನದ ಮೆರವಣಿಗೆಯ ಸಂದರ್ಭದಲ್ಲಿ ಜನರಲ್ ಬಿಪಿನ್ ರಾವತ್ ಅವರಿಂದ ಸ್ವೀಕರಿಸಿದ್ದಾರೆ.
ಹನುಮಂತಪ್ಪ ಕೊಪ್ಪದ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತಾದರೂ, ಈ ಬಳಿಕ ರಾಜ್ಯ ಸರ್ಕಾರ ಕೊಪ್ಪದ್ ಅವರ
ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 4 ಎಕರೆ ಜಮೀನು ನೀಡಿತ್ತು. ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಭರವಸೆ ನೀಡಿ ಒಂದು ವರ್ಷವಾದರೂ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಮಧ್ಯೆ ಕೇಂದ್ರ ಸಚಿವೆ ಇರಾನಿ ಮಹಾದೇವಿ ಕೊಪ್ಪದ್ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು ಜಾಬ್ ಆಫರ್ ಲೆಟರ್ ಕಳಿಸಿದ್ದಾರೆ.

ಸಿಯಾಚಿನ್ ಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಡೆದ ಕಠಿಣ ಹೋರಾಟದಲ್ಲಿ ಭಾರತ 900 ಕೆಚ್ಚೆದೆಯ ವೀರಸೈನಿಕರನ್ನು ಕಳೆದುಕೊಂಡಿದೆ. ಹನುಮಂತ ಕೊಪ್ಪದ್ ಹಾಗೂ ಅವರ ಸಹದ್ಯೋಗಿಗಳು ತಂಗಿದ್ದ ಸೋನಮ್ ಪೋಸ್ಟ್‍ನಲ್ಲಿದ್ದ ಆಶ್ರಯಧಾಮಕ್ಕೆ 25ಅಡಿಯಷ್ಟು ಕುಗ್ಗಿದ ಮಂಜು ಅವರನ್ನೆಲ್ಲ ಜೀವಂತ ಸಮಾಧಿಮಾಡಿತ್ತು.

ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ 14 ವರ್ಷದ ಸೈನಿಕ ಸೇವೆಯಲ್ಲಿ 10 ವರ್ಷಗಳ ಕಾಲ ದೇಶದ ಅತ್ಯಂತ ಕಠಿಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದ್ದರು.
2003ರಿಂದ 2006 ತನಕ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 2008ರಿಂದ 2010ರವರೆಗೆ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ, 2010ರಿಂದ 2012ರವರಿಗೆ ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2015ರಿಂದ ಸಿಯಾಚಿನ್ ನಲ್ಲಿ ಸೇವೆ ಆರಂಭಿಸಿದ್ದರು. ಫೆಬ್ರವರಿ 3ರಂದು ಹಿಮ ಕುಸಿತದಿಂದಾಗಿ ನಾಪತ್ತೆಯಾಗಿದ್ದ ಹನುಮಂತಪ್ಪ, ಫೆಬ್ರವರಿ 9ರಂದು ಪತ್ತೆಯಾಗಿ, ನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೀರಯೋಧ.

ವೀರ ಮರಣವನ್ನಪ್ಪಿದ ಹನುಮಂತಪ್ಪ ಕೊಪ್ಪದ್ ದೇಶಕ್ಕೋಸ್ಕರ, ತನ್ನ ತಾಯಿನಾಡಿಗೋಸ್ಕರ ಹೋರಾಡಿದ ವೀರಯೋಧ. ಪತಿ ಮರಣದ ನಂತರ ತನ್ನ ಮಗಳು ನೇತ್ರಾಳನ್ನು ಶಕ್ತಿಶಾಲಿ ಭಾರತೀಯನ್ನಾಗಿಸಿ, ದೊಡ್ಡವಳಾದ ಮೇಲೆ ಭಾರತೀಯ ಸೈನ್ಯಕ್ಕೆ ಸೇರಿಸುತ್ತೇನೆ ಎಂದ ಮಹಾದೇವಿಗೆ ನಾವು ಸೆಲ್ಯೂಟ್ ಹೇಳಲೇಬೇಕು.

– ಅಲೋಖಾ

Tags

Related Articles

Close