ಅಂಕಣ

ಯೋಗಿ ಆದಿತ್ಯನಾಥ್ ರ ಬಗೆಗೆ ನಿಮಗೆಷ್ಟು ಗೊತ್ತು?!! ಯಾವ ಮಾಧ್ಯಮಗಳೂ ಯೋಗಿಯವರ ಕೆಲವು ಸತ್ಯಗಳನ್ನು ಹೇಳಲೇ ಇಲ್ಲ!!!

ಯೋಗಿ ಆದಿತ್ಯನಾಥ್! ರಾಜಕೀಯ ಸಂತರಿವರು! ಕರ್ತವ್ಯದ ಮೇಲಿನ ಬದ್ಧತೆ, ರಾಜಕೀಯ ನಿಷ್ಠೆ ಹಾಗೂ ಧರ್ಮದ ಪರಿಪಾಲನೆ! ಈ ಮೂರು ಗುಣಗಳನ್ನು ಹೊಂದಿದ ಯಾವುದೇ ವ್ಯಕ್ತಿಯಾದರೂ ಯಶಸ್ಸು ಸಾಧಿಸುತ್ತಾನೆ ಎಂಬುದಕ್ಕೆ ಉತ್ತರ ಪ್ರದೇಶದ ಯೋಗಿ ಉದಾಯರಣೆಯಷ್ಟೇ!

ಗೋರಖ್ ಪುರ ದುರಂತವಾದಾಗ ಎಲ್ಲಾ ಮಾಧ್ಯಮಗಳೂ ಸಹ ಯೋಗಿಯವರನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಲ್ಲದೇ, ರಾಜಕೀಯ ಬದ್ಧತೆಯ ಮೇಲೂ ಪ್ರಶ್ನೆ ಎಸೆದಿತ್ತಲ್ಲವೇ?! ಆದರೆ, ಅವರ ಒಂದಷ್ಟು ಧರ್ಮಕಾರ್ಯಗಳ ಮೇಲಾಗಲಿ, ಒಬ್ಬ ನಿಜವಾದ ಭಾರತೀಯ ಮಾಡುವ ಕಾರ್ಯಗಳ ಮೇಲಾಗಲಿ ಬೆಳಕು ಚೆಲ್ಲಲೇ ಇಲ್ಲ ಬಿಡಿ! ಇವತ್ತಿನ ಸಮಾಜಕ್ಕೆ ಸದ್ವಿಷಯಗಳಿಗಿಂತ ವಿವಾದಾತ್ಮಕ ವಾಸ್ತವಗಳೇ ಹೆಚ್ಚು ಇಷ್ಟವಾಗಿರುವುದರಿಂದ ಯೋಗಿಯವರನ್ನು ಎಗ್ಗು ಸಿಗ್ಗಿಲ್ಲದೇ ಪ್ರಶ್ನಿಸಿದವು! ಆದರೆ, ಒಬ್ಬ ರಾಜಕೀಯ ಮುಖಂಡನ ಆಡಳಿತದ ಮೇಲೆ ಬೀರುವ ದುಷ್ಪರಿಣಾಮವನ್ನು ಯಾವ ಮಾಧ್ಯಮಗಳೂ ಯೋಚಿಸಲೇ ಇಲ್ಲ
ಎಂಬುದಾದರೆ ಅದಕ್ಕಿಂತ ಬೇರಾವ ದುರಂತ ಇರಲು ಸಾಧ್ಯ?!

ಮೊದಮೊದಲು ಯೋಗಿ ಆದಿತ್ಯನಾಥ್ ರವರನ್ನು ‘ಯುಪಿ ಮೇ ರೆಹನಾ ಹೋಗಾ ತೋ ಯೋಗಿ ಯೋಗಿ ಕೆಹನಾ ಹೋಗಾ’ ಎಂಬ ಧ್ಯೇಯವಾಕ್ಯವನ್ನಿಟ್ಟು ಪರಿಚಯಿಸಿದಾಗ ಸಮಾಜಕ್ಕೆ ಯೋಗಿಯೊಬ್ಬರು ಕ್ರೂರ ಸಂತನಂತೆ ಕಂಡು ಬಂದಿದ್ದರಷ್ಟೇ! ಆದರೆ, ಸತ್ಯವಿಷಯವನ್ನರಿಯದೇ ಕೇವಲ ಕಾವಿ ಧರಿಸಿದ ವ್ಯಕ್ತಿತ್ವ ವೆಂಬುದನ್ನೇ ಗುರಿಯಾಗಿಸಿದ ಮಾಧ್ಯಮಗಳಿಗೆ ಕಳೆದ 25 ವರ್ಷಗಳ ಯೋಗಿಯ ಗೆಲುವನ್ನು ಅರಗಿಸಿಕೊಳ್ಳಲಾಗದೇ ಒದ್ದಾಡಿ ಹೋಗಿದ್ದವೆಂಬುದೂ ಅಷ್ಟೇ ಸತ್ಯ!!

ಯೋಗಿಯ ಮುನ್ನ ಉತ್ತರ ಪ್ರದೇಶದ ಸ್ಥಿತಿ ಏನಿತ್ತು ಗೊತ್ತಾ?!

ಕಾಂಗ್ರೆಸ್ ನವರು ಬಾರಿ ಬಾರಿಗೂ ತಾವು ಸಮಾಜ ಸುಧಾರಕರೆಂದೇ ಬಿಂಬಿಸಿಕೊಳ್ಳುವಾಗ ಉತ್ತರ ಪ್ರದೇಶ ಉದಾಹರಣೆಯಾಗಿ ನಿಲ್ಲುತ್ತದೆ! ಕಾಂಗ್ರೆಸ್ ಸರಕಾರದ ಆಡಳಿತಾವಧಿಯಾಗಲೀ, ಅಥವಾ ಸಮಾಜವಾದಿ ಪಕ್ಷದ ಅಖಿಲೇಶ್ ರವರ ಆಡಳಿತಕಾಲದಲ್ಲಿ ಉತ್ತರ ಪ್ರದೇಶವೆಂಬುವುದು ಭಾರತದ ‘ಕೊಳಚೆ ಪ್ರದೇಶ’ ಎಂಬುದಾಗಿಯೇ ಬಿಂಬಿತವಾಗಿತ್ತೆಂದರೆ ‘ಕೈ’ ಯ ಸುಧಾರಕತೆ ಉತ್ತರ ಪ್ರದೇಶವನ್ನು ಯಾವ ಸ್ಥಿತಿಗೆ ತಂದಿಟ್ಟಿತ್ತು ಗೊತ್ತಾ?!

1. ಕಾನೂನು ಹಾಗೂ ಸಂವಿಧಾನಗಳು ನಿಕೃಷ್ಟವಾಗಿದ್ದವು!

2. ಪೋಲಿಸ್ ಅಧಿಕಾರಿಗಳ ಮೂಲಕವೇ ನಡೆಯುತ್ತಿತ್ತು ಭ್ರಷ್ಟಾಚಾರದ ಅಭಿವೃದ್ಧಿ!

3.ಅಭಿವೃದ್ಧಿ ಹೊಂದಿದ್ದು ಕಾಂಗ್ರೆಸ್ ನ ಕೈ ಮಾತ್ರ! ಜನರ ಬದುಕಲ್ಲ!

4.ಸ್ತ್ರೀಯ ಸುರಕ್ಷತೆಯ ಮಟ್ಟ ಹೇಗಿತ್ತೆಂದರೆ ಹಾಡಹಗಲೇ ಯುಪಿಯ ಬೀದಿಗಳಲಿ ನಡೆಯುತ್ತಿತ್ತು ಅತ್ಯಾಚಾರ!

5.ರೈತನೆಂಬುವವನು ಬೆಳೆದ ಭತ್ತವನ್ನು ಮಾರಲಷ್ಟೇ ಯೋಗ್ಯರಾಗಿದ್ದರಷ್ಟೇ! ಉಳುವವನು ಹಸಿದುಕೊಂಡೇ ಪರರಿಗೆ ಭತ್ತ ನೀಡುತ್ತಿದ್ದ!

ಇದು ಕೆಲವು ಉದಾಹರಣೆಗಳಷ್ಟೇ! ಯಾವತ್ತು ಯುಪಿಯ ಜನ ತಮಗೊಬ್ಬ ರಾಜಕೀಯ ಬದ್ಧತೆ ಇರುವ ‘ಮನುಷ್ಯ’ ಅಧಿಕಾರಕ್ಕಿಳಿಯಬೇಕೆನ್ನಿಸಿತೋ, ಯೋಗಿಯನ್ನೇ ತಂದು ನಿಲ್ಲಿಸಿ ಸಂತಸದಿಂದ ಮತ ಹಾಕಿದ ಗುರುತನ್ನು ತೋರಿಸಿಕೊಂಡು ಸಂಭ್ರಮಿಸಿಬಿಟ್ಟಿದ್ದರು!! ನರೇಂದ್ರ ಮೋದಿಯಗರ ಬೆಂಬಲದಿಂದ ಯೋಗಿ ಉತ್ತರ ಪ್ರದೇಶದ ದಿಕ್ಕನ್ನೇ ಬದಲಾಯಿಸಿದರೆಂಬುದು ಕೇವಲ ಮಾತಷ್ಟೇ ಅಲ್ಲ, ಅದೊಂದು ಇತಿಹಾಸ!

ಕಳೆದ 25 ವರ್ಷಗಳ ಯೋಗಿಯ ಪ್ರೋಗ್ರೆಸ್ ಕಾರ್ಡ್!!!

1. ಮಾಧ್ಯಮಗಳಿಗಿಂತಲೂ ರಾಷ್ಟ್ರೀಯ ವಿಷಯಗಳಲ್ಲಿ ಯೋಗಿಗೆ ಬಹಳ ಆಸಕ್ತಿಯಿದೆ.
2.ಉಳಿದೆಲ್ಲ ಲೋಕ ಸಭೆಯ ಸದಸ್ಯರ ಹಾಜರಾತಿ ಸರಾಸರಿಗಿಂತ ಮೇಲಿರುವುದು ಯೋಗಿಯ ಹಾಜರಾತಿ!
3.ಲೋಕಸಭೆಯ ದಾಖಲೆಗಳನ್ನವಲೋಕಿಸಿದರೆ ಯೋಗಿಯವರು ಸರಕಾರಕ್ಕೆ ನೀಡಿದಂತಹ ಸಲಹೆ, ಪ್ರಶ್ನೆಗಳು ಎಂತಹವರಿಗೂ ಅವರ ದೂರದೃಷ್ಟಿಯನ್ನು ಪರಿಚಯ ಮಾಡಿಸುತ್ತದೆ!
4. ಇವತ್ತು ಯೋಗಿಗೆ ಕೇವಲ 44 ವರ್ಷಗಳಷ್ಟೇ! ಅವರ 26 ನೇ ವಯಸ್ಸಿನಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ ಯೋಗಿ ನಂತರದಲ್ಲಿ ನಡೆದ ಚುನಾವಣೆಯಲ್ಲಿಯೂ ಸಥ 5 ಬಾರಿ ಪ್ರಚಂಡ ಗೆಲುವು ಸಾಧಿಸಿದ್ದಾರೆ!
5.ಯೋಗಿ ಗೋರಖ್ ಪುರದ ಲೋಕ ಸಭಾದ 1998, 1999, 2004, 2009 ಹಾಗೂ 2014 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದನ್ನು ನೋಡುವಾಗ ಅವರ ಅನುಭವಗಳ ಮಟ್ಟದ ಅರಿವಾಗುತ್ತದೆ!
6. ಜಪಾನೀಸ್ ಇನ್ಸೆಫಿಲಿಟಿಸ್ ಬಗೆಗೆ ಲೋಕಸಭಾದಲ್ಲಿ ಪ್ರಶ್ನಿಸಿದ್ದು ಯೋಗಿ ಮಾತ್ರ!
7. ಯೋಗಿಯೋರ್ವ 12 ನೇ ಲೋಕಸಭಾದ ಅತಿ ಕಿರಿಯ ಸಂಸದ! ಅದೂ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಗದ್ದುಗೆಗೇರಿದ ಯೋಗಿ ಇವತ್ತು ಅನುಭವದಿಂದ ಮುಖ್ಯಮಂತ್ರಿಯ ಗೌರವಸ್ಥಾನಕ್ಕೇರಿದ್ದಾರೆ!
8. ಯೋಗಿ 14 ನೇ ಲೋಕಸಭಾದಲ್ಲಿ 150 ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಅಧ್ಯಯನದ ಬಗ್ಗೆ ಎಲ್ಲರಿಗೂ ಸೂಕ್ತ ಮಾಹಿತಿ ದೊರಕಿತ್ತು. ಅದೇ ರಾಹುಲ್ ಗಾಂಧಿ ಕೇಳಿದ್ದು ಅರ್ಥವಿಲ್ಲದ 5 ಪ್ರಶ್ನೆಗಳು ಮಾತ್ರ.
9. ಯೋಗಿಯ ಹಾಜರಾತಿ ಹಾಗೂ ರಾಷ್ಟ್ರೀಯ ಅಧ್ಯಯನವೊಂದು ದಾಖಲೆ ಮಾಡಿದೆ.
10. 50 ಕ್ಕೂ ಹೆಚ್ಚು ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯ ಯೋಗಿ!
11.ಪ್ರಸ್ತುತ ಲೋಕಸಭೆಯಲ್ಲಿ 250 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ (ಸೂಕ್ತವಾದ) ಯೋಗಿ ಮತ್ತೊಂದಿಷ್ಟು ಅಧ್ಯಯನದಲ್ಲಿ ತೊಡಗಿದ್ದಾರೆ!
12.ರೈತರ ಸ್ಥಿತಿಯ ಬಗ್ಗೆ, ಮಾರುಕಟ್ಟೆಯ ಬಗ್ಗೆ, ಆತ್ಮಹತ್ಯೆಗಳ ಬಗ್ಗೆ ಪ್ರಶ್ನಿಸಿ ಕಟುವಾಗಿ ವಿರೋಧಿಸಿದ ಏಕೈಕ ವ್ಯಕ್ತಿ ಯೋಗಿ!
13. ಕೃಷಿ, ರೈತಸಮಾಜ, ರಾಸಾಯನಿಕ, ಆರೋಗ್ಯ, ನಾಗರಿಕ ಸೇವೆ, ಕಲ್ಲಿದ್ದಲು, ವಾಣಿಜ್ಯ, ಸಂವಹನ, ಮಾಹಿತಿ ತಂತ್ರಜ್ಞಾನ, ಪಿಡಿಎಸ್, ಸಂಸ್ಕೃತಿ, ಭದ್ರತೆ, ಪರಿಸರ, ಹವಾಮಾನ ಬದಲಾವಣೆ, ಹಣಕಾಸು, ಆಧಾರ್, ತಾಂತ್ರಿಕ ಭದ್ರತೆ, ಶಿಕ್ಷಣ, ಇಸ್ಲಾಂ ನ ಅನಿಷ್ಟ ಪದ್ಧತಿಗಳು. . . ಹೀಗೆ ಅದೆಷ್ಟೋ ವಿಷಯಗಳ ಬಗೆಗೆ ಗಮನ ಹರಿಸಿದ್ದಾರೆ ಯೋಗಿ!
14. ಅಂತರಾಷ್ಟ್ರೀಯ ವಿಷಯದ ಬಗೆಗೂ ಗಮನ ಹರಿಸಿದ ಯೋಗಿ ಅಫ್ಘಾನಿಸ್ಥಾನದಲ್ಲಿ ಅಮೇರಿಕಾ ಸೇನೆ ಹಿಂಪಡೆದುದರ ಬಗ್ಗೆಯೂ ಅವಲೋಕಿಸಿದ್ದರು.
15. ಸೋಲಾರ್ ಎನರ್ಜಿ, ಸ್ಕಿಲ್ಸ್, ತಂತ್ರಜ್ಞಾನ ಬಗೆಗಿನ ಅವರ ಅವಲೋಕನಗಳು ರಾಷ್ಟ್ರೀಯ ಅಭಿವೃದ್ಧಿಗೆ ಹಿಡಿದ ಕನ್ನಡಿ!
16. ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಯೋಗಿ 284 ಪ್ರಶ್ನೆಗಳನ್ನು ಕೇಳಿದ್ದರು. ಇಲ್ಲಿಯ ತನಕವಿದ್ದ ಸರಾಸರಿ ಕೇವಲ 116 ಅಷ್ಟೇ!!!
17. ಮೂರು ವೈಯುಕ್ತಿಕ ಸದಸ್ಯತ್ವದ ಬಿಲ್ ಗಳನ್ನು ಕೇಳಿದ್ದರು ಯೋಗಿ! ರಾಷ್ಟ್ರೀಯ ಹಾಗೂ ರಾಜ್ಯದ ಸರಾಸರಿ ಕೇವಲ ಒಂದು!
18.ಭೋಜ್ ಪುರಿ ಭಾಷೆಗೆ ಒತ್ತು ನೀಡಿದ ಮೊದಲ ಸಂಸದ ಯೋಗಿ!
19. 2015 ರಲ್ಲಿ ಯೋಗಿ ಇಟ್ಟಿಗೆ ತಯಾರಿಕಾ ಘಟಕದ ಕಾರ್ಮಿಕರ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಿಸಿದ್ದರಲ್ಲದೇ, ಅವರ ಹಕ್ಕುಗಳಿಗಾಗಿ ಹೋರಾಟುದ ಏಕೈಕ ಸಂಸದ!
20. ಕಬ್ಬು ತಯಾರಿಸುವ ರೈತರಿಗೆ ಸರಿಯಾಗಿ ಮಾರುಕಟ್ಟೆಯ ದರ ದೊರೆಯದಾದಾಗ ಪರಿಹರಿಸಿದ್ದವರು ಯೋಗಿ!
21.ಮಾಫಿಯಾದ ಬಗ್ಗೆ ತೀವ್ರವಾಗಿ ಹೋರಾಡಿದವರು ಯೋಗಿ!!

ಯೋಗಿ ಆದಿತ್ಯನಾಥ್ ಎಂಬ ಸಹೃದಯಿ ಸಂತ!

1. ಪೂರ್ವ ಉತ್ತರ ಪ್ರದೇಶದಲ್ಲಿ ಯೋಗಿಯ ಸಾರಥ್ಯದ 10 ಕ್ಕೂ ಹೆಚ್ಚು ಕಾಲೇಜುಗಳು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವುದಲ್ಲದೇ, ಕಡಿಮೆ ಶುಲ್ಕವನ್ನು ಹೊಂದಿದೆ.

2. ಯೋಗಿಯ ಸಾರಥ್ಯದಲ್ಲಿ ಅದೆಷ್ಟೋ ಆಸ್ಪತ್ರೆಗಳು ಬಡವರಿಗೆ ಉಚಿತ ಸೇವೆಯನ್ನು ಒದಗಿಸುತ್ತಿದೆ.

3. ಪ್ರತಿದಿನ ಗೋರಖ್ ಪುರದ ಸಾವಿರಾರು ಬಡ ನಾಗರಿಕರಿಗೆ ಉಚಿತ ಆಹಾರವನ್ನೊದಗಿಸಲಾಗುತ್ತದೆ!

4. ಪ್ರತಿದಿನವೂ ನಡೆಯುವ ‘ಜನತಾ ದರ್ಬಾರ್’ ನಲ್ಲಿ ಭಾಗವಹಿಸುವ ಯೋಗಿ, ಜನರ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡುತ್ತಾರೆ.

5. ಯಾವುದೇ ದುರಂತವಾದರೂ ಸಹ ತಕ್ಷಣವೇ ‘ಸತ್ಯಾಸತ್ಯತೆಗಳ’ ಅರಿತು ಹೆಜ್ಜೆ ಇಡುವ ಯೋಗಿ ಕೇವಲ ನ್ಯಾಯವೊಂದನ್ನೇ ನೋಡುತ್ತಾರಷ್ಟೇ.

6. ಉತ್ತರ ಪ್ರದೇಶದಲ್ಲಿ ರುವ ಅದೆಷ್ಟೋ ನಿರ್ಗತಿಕರಿಗೆ ಆಶ್ರಯ ಒದಗಿಸುತ್ತಿರುವುದು ಯೋಗಿ!

ಇಷ್ಟಾದರೂ ಮಾಧ್ಯಮಗಳಿಗೆ ಉರಿ ಬೀಳುವುದೇಕೆ ಗೊತ್ತಾ?!!

ಒಬ್ಬ ಪತ್ರಕರ್ತರಾಗಿ ನಾನು ಈ ಮಾತನ್ನು ಹೇಳಬಾರದು. ಆದರೂ, ಇರುವ ಸತ್ಯವನ್ನೇ ಹೇಳುತ್ತೇನೆ! ಕಳೆದೊಂದಿಷ್ಟು ವರ್ಷಗಳಿಂದ ಈ ಮಾಧ್ಯಮಗಳೆಲ್ಲ ಬಿತ್ತರಿಸಿದ ಸುದ್ದಿಗಳೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ನೀಡಿದವೆಂದರೆ ‘ನಾನು ಹಿಂದೂ’ ಎಂದು ಕರೆದುಕೊಳ್ಳುವುದಕ್ಕೂ ಎರಡು ಕ್ಷಣ ಯೋಚಿಸುವಂತೆ, ಹಿಂದೂ ಹಬ್ಬಗಳನ್ಬೂ ಸ್ವಚ್ಛ ಮನಸ್ಸಿನಿಂದ ಆಚರಿಸಲಾಗದಂತೆ, ಹಾಗೂ ಕೇಸರೀ ವಸ್ತ್ರವನ್ನೂ ಉಡಲು ಹೆದರುವಂತೆ, ನಿಧಾನವಾಗಿ ‘anti – hindu’ ವಿನ ಎಲ್ಲಾ ಅಜೆಂಡಾಗಳನ್ನು ನಿರ್ಭೀತಿಯಿಂದಲೇ ಸಾರುತ್ತಾ ಬಂದಿದ್ದು ಸುಳ್ಳೇ?!

ಪರೋಕ್ಷವಾಗಿಯಲ್ಲವಾದರೂ, ಅಪರೋಕ್ಷವಾಗಿಯೇ ಹಿಂದೂ ವಿರೋಧಿ ಸುದ್ದಿಯನ್ನೇ ಬಿತ್ತರಿಸಿದ ಮಾಧ್ಯಮಗಳಿಗೆ ಇವತ್ತು ಕಾವಿ ಧರಿಸಿದ ಸಂತನೊಬ್ಬ ಅಧಿಕಾರದ ಗದ್ದುಗೆಗೇರಿದಾಗ ಅದೆಷ್ಟು ಭ್ರಮನಿರಸನವಾಗಬಹುದು ಹೇಳಿ!!! ಬಿಡಿ! ಮತ್ತೊಂದು ವಿಷಯವನ್ನು ಹೇಳಿಬಿಡುತ್ತೇನೆ! ಉತ್ತರ ಪ್ರದೇಶದ ಗೋರಖ್ ಪುರ ದೇವಸ್ಥಾನಕ್ಕೆ ಒಮ್ಮೆ ಭೇಟಿಕೊಡಿ! ಅಲ್ಲಿ, ಹಿಂದೂ ಮುಸಲ್ಮಾನರಿಬ್ಬರೂ ಸಹ ಸೌಹಾರ್ದತೆಯಿಂದಲೇ ಬದುಕುತ್ತಿದ್ದಾರೆ! ಕಳೆದ 15 ವರ್ಷಗಳಲಿ ಯಾವ ಗಲಭೆಯೂ ಅಲ್ಲಿ ನಡೆದೇ ಇಲ್ಲ. ಯೋಗಿ ಆದಿತ್ಯನಾಥ್ ರವರಿಗೆ ಮುಸಲ್ಮಾನರ ಬೆಂಬಲವೂ ಸಾಕಷ್ಟಿದ್ದದ್ದು ಸಾರ್ವಜನಿಕವಾಗಿಯೇ ಪ್ರಕಟಗೊಂಡಾಗ ಮಾಧ್ಯಮಗಳಿಗೊಂದಷ್ಟು ಟಿಆರ್ ಪಿ ತಪ್ಪಿ ಹೋಗಿತ್ತು! ಆದರೆ, ಆ ಸೌಹಾರ್ದತೆಯನ್ನೇ ದೊಡ್ಡ ಬೂಟಾಟಿಕೆ ಎಂದು ಬಿಂಬಿಸಿದವಷ್ಟೇ!

ಅವರ ಪ್ರಸ್ತುತ ರಾಜಕೀಯ ಬದ್ಧತೆಗಳನ್ನು ಮಾತ್ರವಲ್ಲದೇ, ಗತದ ಗೆಲುವಿನ ಬಗ್ಗೆಯೂ ಅವಲೋಕಿಸಿದರೆ ಯೋಗಿ ಯಾರೆಂಬುದು ಅರ್ಥವಾಗಿ ಹೋಗುತ್ತದೆ. ಕಳೆದ ವರ್ಷಗಳಲಿ 5 ಸಲವೂ ಚುನಾವಣೆಯನ್ನು ಗೆಲ್ಲುತ್ತಲೇ ಬಂದಿರುವ ಯೋಗಿಗೆ 25 ವರ್ಷಗಳಿಂದಲೂ ಉತ್ತರ ಪ್ರದೇಶದ ನಾಗರಿಕರು ಬೆಂಬಲಿಸುತ್ತಲೇ ಬಂದಿದ್ದಾರೆಂದರೆ ಇತಿಹಾಸದ ಅದ್ಭುತವಲ್ಲದೇ ಮತ್ತೇನು?!

ಯೋಗಿ ಆದಿತ್ಯನಾಥರ ದೂರದೃಷ್ಟಿಗಳನ್ನು ತಿಳಿಯುವ ಹಂಬಲವಿದ್ದರೆ ಈ ಕೆಳಗಿನ ವೀಡಿಯೋನನ್ನೊಮ್ಮೆ ನೋಡಿಬಿಡಿ! ಒಬ್ಬ ವ್ಯಕ್ತಿಯ ಮಾತುಗಳಲ್ಲಿನ ಧೃಢತೆ ಆತನ ನೈಜತೆಯನ್ನು ತಿಳಿಸುತ್ತದೆಂಬ ಮಾತು ಅಕ್ಷರಶಃ ಸಾಬೀತಾಗುತ್ತದೆ!!!

ನೋಡಿದಿರಾ?!

ಯೋಗಿಯ ಬದುಕನ್ನೊಮ್ಮೆ ಅವಲೋಕಿಸಿದರೆ ನಾನು ಮೊದಲೇ ಹೇಳಿದ ರಾಜಕೀಯ ಸಂತನೆಂಬುವುದು ಮತ್ತೆ ಮತ್ತೆ ಕಾವಿಯ ಕಾವನ್ನು ಬಡಿದೆಬ್ಬಿಸುತ್ತದೆ. ತಮ್ಮ ಲಾಭಕ್ಕೋಸ್ಕರ ಬರೀ ವಿವಾದಾತ್ಮವಾದ ಸುದ್ದಿಗಳನ್ನೇ ಮತ್ತೆ ಮತ್ತೆ ಹರಿಯಬಿಡುವ ಮಾಧ್ಯಮಗಳು ಒಂದು ವಾಸ್ತವವನ್ನು ಅರ್ಥೈಸಿಕೊಳ್ಳಲೇ ಬೇಕಿದೆ.

” ಸತ್ಕಾರ್ಯಗಳನ್ನು ಮಾಡಿದಾಗ ಬೆಂಬಲಿಸದೇ ಹೋದವನಿಗೆ ದುಷ್ಕಾರ್ಯಗಳನ್ನು ವಿರೋಧಿಸುವ ಹಕ್ಕೇ ಇಲ್ಲವಷ್ಟೇ!”

– ತಪಸ್ವಿ

Tags

Related Articles

Close