ಇತಿಹಾಸ

ರಕ್ತಕಣ್ಣೀರು ಹರಿಸಿದ್ದ ಪ್ಲೇಗ್ ಮಾರಿ ಕೊರೊನಾ ನಿಯಂತ್ರಣಕ್ಕೆ ಒಂದು ಪಾಠವಾಗಲಿ… ಪ್ಲೇಗ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಬೆಚ್ಚಿಬೀಳಿಸುತ್ತದೆ..

ಕೆಲವು ದಶಕಗಳ‌ ಹಿಂದೆ ಪ್ಲೇಗ್ ಮಹಾಮಾರಿ ಇಡೀ ಜಗತ್ತನ್ನೇ ಆಹುತಿ ಪಡೆದುಕೊಂಡಿತ್ತು. ಈ ಸೋಂಕಿಗೀಡಾದವರು ಬದುಕಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇತ್ತು… ಗಾಳಿಯ ಮೂಲಕ ಹರಡುವ ಈ ರೋಗದಿಂದಾಗಿ ಜನರನ್ನು ಪ್ರತ್ಯೇಕಿಸಿವುದು ದೊಡ್ಡ ಸವಾಲಾಗಿತ್ತು. ಈ ವೇಳೆ ಸರಕಾರ ಇಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿತ್ತು.

ಅದು ಮಾರ್ಚ್, 1898 ರ ಸಮಯ. ಮುಂಬಯಿಯ ಬೈಕುಲ್ಲಾದ ಮುಸ್ಲಿಂ ನೇಕಾರರಿರುವ ಪ್ರದೇಶದಲ್ಲಿ ಪ್ಲೇಗ್ ಕಾಣಿಸಿಕೊಂಡಿತ್ತು. ಇದರ ಪರಿಶೀಲನೆಗೆ ವೈದ್ಯರ ಜೊತೆ ತೆರಳಿದ ಪೊಲೀಸರ ವಿರುದ್ಧ ಜನರ ಪ್ರತಿರೋಧ ವ್ಯಕ್ತವಾಗಿತ್ತು.. ಆಗ ಪೊಲೀಸರು ಗನ್‌ಪಾಯಿಂಟ್‌ನಲ್ಲಿ ಶಂಕಿತ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದರು.
ಈ ವೇಳೆ ಹುಡುಗಿಯ ತಂದೆ ಪುರುಷ ವೈದ್ಯರಿಗೆ ತನ್ನ ಮಗಳ ಸೋಂಕಿನ ಚಿಹ್ನೆಗಳ ಪರಿಶೀಲನೆಗೆ ಅನುಮತಿಸಲು ನಿರಾಕರಿಸಿದರು. ಈ ವೇಳೆ ಘರ್ಷಣೆ ಉಂಟಾಗಿ ಕೋಪಗೊಂಡ ಜನಸಮೂಹವನ್ನು ಎದುರಿಸಿದ ಪೊಲೀಸರು ಗುಂಡು ಹಾರಿಸಿದರು. ಅನೇಕ ಸ್ಥಳೀಯ ನಿವಾಸಿಗಳು ಕೊಲ್ಲಲ್ಪಟ್ಟರು.

ಇಡೀ‌‌ ಜಗತ್ತನ್ನೇ ವ್ಯಾಪಿಸಿದ್ದ ಪ್ಲೇಗ್ ಪರಿಶೀಲನೆಗೆ ತೆರಳಿದ್ದ ಯುರೋಪಿಯನ್ನರು ದಾಳಿಗೆ ಒಳಗಾದರು. ಅವರ ಮೇಲೆ ದಾಳಿ ನಡೆದವು. ಆಗ ಯುರೋಪಿಯನ್ನರು ಇವರ ಮೇಲೆ ಫಿರಂಗಿಗಳಿಂದ ದಾಳಿ‌ನಡೆಸಬೇಕಾಯಿತು.

ಈಗ ಕೊರೊನಾ ಎನ್ನುವ ಮಹಾಮಾರಿ ಪ್ರಪಂಚದ‌ಮೇಲೆ ಅಪ್ಪಳಿಸಿದೆ. ಜನರು ಮನೆಯಲ್ಲೇ ಇರಿ ಎಂದು ಹೇಳಿದರೆ ಅದನ್ನು ಕೇಳಿಕೊಳ್ಳುವ ಅಸಾಮಿಗಳು ಇಲ್ಲಿಲ್ಲ. ಅದಕ್ಕಾಗಿ ಮೋದಿ ಜನತಾ ಕರ್ಫ್ಯೂಗೆ ವಿನಂತಿಸಿದರು.‌ ಜನರು ಜಾಗೃತಿಗೊಂಡು ಕೊರೊನಾ ಹರಡುವಿಕೆಯ ಬಗ್ಗೆ ಸುಲಭವಾಗಿ ಅರ್ಥ‌ ಮಾಡಿಕೊಂಡರು.

ಮೊದಲೆಲ್ಲಾ ಕರ್ಫ್ಯೂಗಳನ್ನು ಜಾರಿಗೊಳಿಸಲು ಪೊಲೀಸರು ಅಥವಾ ಸೇನೆ ಕಾರ್ಯಾಚರಿಸುತ್ತಿತ್ತು. ಶ್ರೀಮಂತ ರಾಷ್ಟ್ರಗಳಲ್ಲೂ ಇದೇ ನಡೆಯುತ್ತಿದೆ.‌

ಉದಾಹರಣೆಗೆ 1896-1921ರ ಮಹಾ ಪ್ಲೇಗ್‌ನ ನಿರ್ವಹಣೆ ಯಾವ ರೀತಿ ಇತ್ತೆಂದು ತಿಳಿದಾಗ ಮೈ ಝುಂ ಎನ್ನುತ್ತದೆ. ಪ್ಲೇಗ್‌ನಿಂದ ಈ ಅವಧಿಯಲ್ಲಿ ಹತ್ತು ದಶಲಕ್ಷಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ. ಆದ್ದರಿಂದ ಪ್ಲೇಗ್‌ನಿಂದ ಜನರು ಪಾಠ ಕಲಿಯಬೇಕು. ಯಾಕೆಂದರ ಇತಿಹಾಸದಿಂದ ಪಾಠ ಕಲಿಯದವರು‌ ಮೂರ್ಖರು.

ಪ್ಲೇಗ್ ಮಹಾಮಾರಿಯಿಂದ ಮುಂಬೈನ ಸಾವಿರಾರು ಕಾರ್ಮಿಕರು ತಮ್ಮ ವೇತನ ಪಡೆದುಕೊಂಡು ಮನೆಗೆ ತೆರಳಿದರು. ಹೆಚ್ಚಿನ ಸಂಖ್ಯೆಯ‌ಜನರು ಸಮುದ್ರ ಅಥವಾ ರೈಲು ಮೂಲಕ ಪ್ರಯಾಣಿಸಿದರು. ಇದರಿಂದ ಮೂರು ತಿಂಗಳ ಒಳಗೆ, ಪ್ಲೇಗ್‌ ಮಹಾಮಾರಿ ಕರಾಚಿ ಮತ್ತು ಪುಣೆಗೂ ವಕ್ಕರಿಸಿತು. ನಗರ ಅರ್ಧದಷ್ಟು ಖಾಲಿಯಾಯಿತು. 1897 ರ ಆರಂಭದಲ್ಲಿ, ಗುಜರಾತ್‌ನ ಇಡೀ ಕೊಂಕಣ, ಕಥಿವಾರ್, ಕಚ್ ಮತ್ತು ಸಿಂಧ್‌ನ ನಗರ ಕೇಂದ್ರಗಳು ಅಪಾರ ಸಾವುನೋವುಗಳನ್ನು ದಾಖಲಿಸಿತು. ಈ ರೋಗವು ಶೀಘ್ರದಲ್ಲೇ ಉತ್ತರಕ್ಕೆ ಹರಡಿ, ಪಂಜಾಬ್ ನಲ್ಲೂ ಅಪಾರ ಸಾವುನೋವಿಗೆ ಕಾರಣವಾಯಿತು.

ಇದರ ಮಧ್ಯೆ 1896 ರ ಸುಮಾರಿಗೆ ದಕ್ಷಿಣ ಮಹಾರಾಷ್ಟ್ರ ಬರಪೀಡೆಗೆ ಒಳಗಾಯಿತು. ಕಾರ್ಮಿಕರಿಲ್ಲದೆ ಕೃಷಿ ಮಕಾಡೆ ಮಲಗಿತು.

ಪ್ಲೇಗ್ ಸೋಂಕಿತರ ಸ್ಕ್ರೀನಿಂಗ್ ಸವಾಲು
ಅಂದಿನ ಜನರು ವಿದ್ಯಾವಂತರಾಗಿರಲಿಲ್ಲ. ಸೋಂಕಿತ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡುವುದು ಕಠಿಣ ಕೆಲಸವಾಗಿತ್ತು.

ಜನರಿಂದ ಪ್ರತಿರೋಧ,‌ ಜನಾಂಗೀಯ ಘರ್ಷಣೆಗೂ ಕಾರಣವಾಯಿತು. ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ತಪಾಸಣೆ ಅಧಿಕಾರಿಗಳನ್ನು ನಿಜಕ್ಕೂ ಪೀಕಲಾಟಕ್ಕೆ ಸಿಲುಕಿಸಿತು. ತೊಡೆಯ ಮೇಲಿನ ಪ್ಲೇಗ್ ಗುಳ್ಳೆಗಳನ್ನು ಪರೀಕ್ಷಿಸಲು ಭಾರತೀಯ ಮಹಿಳೆಯರಿಗೆ ತಮ್ಮ ಸೀರೆಗಳನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಎತ್ತುವಂತೆ ಒತ್ತಾಯಿಸಲಾಯಿತು. ಈ ವೇಳೆ ಸಾಕಷ್ಟು ವಿರೋಧ ವ್ಯಕ್ತವಾಯಿತು.

ಪ್ಲೇಗ್ ಮಾರಿ ಯಾರೊಬ್ಬರನ್ನೂ ಬಿಟ್ಟಿರಲಿಲ್ಲ. ಅನೇಕ‌ ಮಂದಿ ಗಣ್ಯರೂ ಇದಕ್ಕೆ ತುತ್ತಾಗಿದ್ದಾರೆ.
1896 ರಲ್ಲಿ ದೊಡ್ಡ ಪ್ರಮಾಣದ ಜನಸಂಖ್ಯೆಯ ಹರಿವನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲಿನ ಕೆಲಸ‌ಆಗಿತ್ತು.

ರೈಲುಗಳನ್ನು ನಿರ್ಬಂಧಿಸಲು ಸರ್ಕಾರ ಮುಂದಾಗಿದ್ದರೂ, ಈಗ ನಗರಗಳಲ್ಲಿ ಸಿಲುಕಿರುವ ಲಕ್ಷಾಂತರ ಗ್ರಾಮೀಣ ಕಾರ್ಮಿಕರು ಪರ್ಯಾಯ ಮಾರ್ಗಗಳನ್ನು ಬಳಸಿ ಮನೆಗೆ ತೆರಳಿದ್ದರು. ಇದು ಪ್ಲೇಗ್ ವ್ಯಾಪಿಸಲು‌ಕಾರಣವಾಯಿತು. ವೈದ್ಯಕೀಯ ಸೇವೆಗಾಗಿ ಅಂದು ಕೂಡ ಲಾಕ್‌ಡೌನ್ ಮಾಡಿದರೂ ಅದು ಕೂಡ ಯಶಸ್ವಿಯಾಗಿರಲಿಲ್ಲ.

ಇಂಥಾ ಸನ್ನಿವೇಷ ಎದುರಾದಾಗ ಬ್ರಿಟಿಷ್ ಸರಕಾರ ಯಾವುದೇ ಮರ್ಜಿಗೆ ಒಳಗಾಗದೆ ಕಠಿಣ ಮಾರ್ಗಗಳನ್ನು ಕೈಗೊಂಡಿತು.

ಒಂದು ಕಡೆ ಅನಾರೋಗ್ಯ, ಮತ್ತೊಂದೆಡೆ ಗಡಿ ಮುಚ್ಚುವುದು, ಸರಕಾರದ ಕಠಿಣ ಕ್ರಮ,‌ ಪ್ರತ್ಯೇಕತೆ ಇದು ಈ ಅವಧಿಯಲ್ಲಿ ದೊಡ್ಡ‌ಮಟ್ಟದ ಘರ್ಷಣೆಗೂ ಕಾರಣವಾಗಿತ್ತು.
ಆಗಸ್ಟ್ 1897 ರಲ್ಲಿ, ಪ್ಲೇಗ್ ಸಮಿತಿಯು ಸೋಂಕಿತರನ್ನು ತಮ್ಮ ಮನೆಗಳಿಂದ ಹೊರಹಾಕಲು ಪ್ರಾರಂಭಿಸಿತು. ಸೋಂಕಿನಿಂದ ಜನರನ್ನು ಕಾಪಾಡಲು ಈ ರೀತಿಯ ಮಿಲಿಟರಿ ಶೈಲಿಯ ಕಾರ್ಯಾಚರಣೆಗಳಿಂದ ರೋಗಪೀಡಿತ ಜನರನ್ನು ಜರ್ಜರಿತರನ್ನಾಗಿಸಿತು.

ಬೆಂಕಿ, ಉಗಿಯಂತ್ರ ಮುಂತಾದ ಅಸ್ತ್ರ ಬಳಸಲಾಗಿತ್ತು. ಕೊಳಚೆ ಪ್ರದೇಶಗಳಿಗೆ ಬೆಂಕಿ ಕೊಡಲಾಯಿತು. ಕ್ರಿಮಿನಾಶಕ ನೀರು ಬಳಸಲಾಯಿತು. ಈ ಕಠಿಣ‌ಕ್ರಮಗಳ ಮೂಲಕ‌ ಅವರ ಮನೆಗಳನ್ನು ಸೋಂಕುರಹಿತಗೊಳಿಸಲಾಯಿತು.

ಪ್ಲೇಗ್ ಪೀಡಿತ ಹಳ್ಳಿಗಳನ್ನು ಸುತ್ತುವರಿದು ದಿಗ್ಭಂಧನ ವಿಧಸಲಾಯಿತು. ಕೆಲವರನ್ನುಸ್ಥಳಾಂತರಿಸಲಾಯಿತು, ಸ್ಥಳೀಯ ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ಕೇವಲ 48 ಗಂಟೆಗಳ ಕಾಲಾವಕಾಶ ನೀಡಲಾಯಿತು. ಎರಡು ತಿಂಗಳ ಆಹಾರ ಪಡೆಯಲು ಅವಕಾಶ ನೀಡಲಾಯಿತು.

ರೋಗಿಗಳನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸಿ ಖೈದಿಗಳಂತೆ ನೋಡಲಾಯಿತು.

ರೋಗ ಇಲ್ಲದವರನ್ನು ಬೇರೆ ಶಿಬಿರಗಳ ವ್ಯವಸ್ಥೆ ಮಾಡಲಾಯಿತು. ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಹೊರಗೆ ಹೋಗಿ ಕೆಲಸ ಮಾಡಲು ಅನುಮತಿ ನೀಡಲಾಯಿತು. ಇದು ಜಾತಿ ಸಂಘರ್ಷ ಕ್ಕೂ ಎಡೆಮಾಡಿತು. ದಲಿತ, ಬ್ರಾಹ್ಮಣ,‌ಮುಸ್ಲಿಮರು ಸಂಘರ್ಷಕ್ಕೆ ಇಳಿದು ಒಂದಷ್ಟು ಮಂದಿ ಸತ್ತರು. ಇದು ದ್ವೇಷವನ್ನೂ ಉಂಟು ಮಾಡಿತು.
ಪ್ಲೇಗ್ ನಿಯಂತ್ರಿಸುವುದಕ್ಕಿಂತಲೂ‌ ಜಾತಿ‌ ಸಂಘರ್ಷವನ್ನು ನಿಯಂತ್ರಿಸೋದೇ ಸವಾಲಾಗಿತ್ತು.

ಸ್ಥಳೀಯ ಮಹಿಳೆಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಪ್ಲೇಗ್ ಸಮಿತಿ ಸಿಬ್ಬಂದಿ ಪ್ರಯತ್ನಿಸಿದ ನಂತರ 1896 ರಲ್ಲಿ ಮುಂಬೈ ಗಿರಣಿ ಕಾರ್ಮಿಕರು ಗಲಭೆ ನಡೆಸಿದರು. 1901 ರ ಏಪ್ರಿಲ್‌ನಲ್ಲಿ, ಸಿಯಾಲ್‌ಕೋಟ್‌ನ ಶಹಜಾದಾ ಗ್ರಾಮದಲ್ಲಿ ಗಲಭೆಗಳಲ್ಲಿ ನಡೆದವು. ಆಗ ಅಧಿಕಾರಿಗಳು ಬಲ ಪ್ರಯೋಗ ನಡೆಸಬೇಕಾಯಿತು.

ಪ್ಲೇಗ್‌ನಿಂದ ಸ್ಥಳೀಯ ಆಡಳಿತ ಕುಸಿತಗೊಂಡಾಗ ಬ್ರಿಟಿಷರು ಅಲ್ಲಿನ ಅಧಿಕಾರ ನೋಡಲು ಹೋದಾಗ ಘರ್ಷಣೆ ಉಂಟಾಗಿತ್ತು. ಸ್ಥಳೀಯರ ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆ ವೇಳೆ ರಕ್ತಪಾತಕ್ಕೂ ನಾಂದಿ ಹಾಡಿತ್ತು.

ಪಂಜಾಬ್, ಮೈಸೂರು ಮತ್ತು ಕಲ್ಕತ್ತಾದಲ್ಲಿ ಪ್ಲೇಗ್ ನಿಂದ ಗಲಭೆಗಳು ಸಂಭವಿಸಿದವು.

೧೮೯೭ರಲ್ಲಿ ಮೊಟ್ಟ ಮೊದಲಿಗೆ ಬಾಂಬೈಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ ವಾಲ್ಡೆಮರ್ ಹಫ್‌ಕಿನ್ಸ್‌ರವರು ಪ್ಲೇಗ್ ರೋಗದ ವಿರುದ್ಧ ಲಸಿಕೆಯನ್ನೂ ಕಂಡು ಹಿಡಿದು ಅದನ್ನು ಗೆಡ್ಡೆ ಪ್ಲೇಗ್ ರೋಗ ವಿನಾಶದ ಮೇಲೆ ಪರೀಕ್ಷಿಸಿದ್ದರು.ಆನಂತರ ಆ ಲಸಿಕೆಯನ್ನು ರೋಗದ ಚಿಕಿತ್ಸೆಯಾಗಿ‌ ಬಳಸಲಾಯಿತು. ಆ ಬಳಿಕ ಪ್ಲೇಗ್ ನಿಧಾನಕ್ಕೆ ನಿಯಂತ್ರಣಕ್ಕೆ ಬಂದಿತು. ಇಲ್ಲದಿದ್ದರೆ ಇಡೀ ಮನುಕುಲವೇ ನಾಶವಾಗುವ ಅಪಾಯ ಇತ್ತು.

ಆದರೆ ಈಗಿನ ಪರಿಸ್ಥಿತಿ ನೋಡಿ…

ಇಂದು ಇಟಲಿ, ಚೀನಾ, ರಷ್ಯಾಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ? ಮನೆಯಿಂದ ಹೊರಬಂದವರ ಮೇಲೆ ಅಲ್ಲಿನ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ. ಅಲ್ಲಿನ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.‌

ಆದರೆ ಭಾರತದಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಿಲ್ಲ. ಈಗಾಗಲೇ‌‌ CAA, NRC ವಿರುದ್ಧ ಬೀದಿಗಿಳಿದ ಜನತೆ ದೇಶವನ್ನು ರಣರಂಗವಾಗಿಸಿದ್ದರು.‌ ಇದರ ನಡುವೆ ಕೊರೊನಾ ಹಬ್ಬಿದ್ದು ಜನರನ್ನು ನಿಯಂತ್ರಿಸುವುದು ಒಂದು ಸವಾಲಿನ ಕೆಲಸವಾಗಿತ್ತು.
ಅದಕ್ಕಾಗಿಯೇ‌ ಮೋದಿ ಭಾರತೀಯರಿಗೆ ಗಿಣಿಗೆ ಹೇಳುವಂತೆ ಹೇಳಿ ಜನತಾ ಕರ್ಫ್ಯೂಗೆ ಹುರಿದುಂಬಿಸಿದ್ದಾರೆ.‌ ಇದು ಒಂದು ದಿನದ ಕೆಲಸವಾಗಿರದೆ ಕೊರೊನಾ ಮಹಾಮಾರಿ ನಿರ್ಮೂಲನೆಯಾಗುವವರೆಗೆ ನಮಗೆ ನಾವೇ ಕರ್ಫ್ಯೂ ವಿಧಿಸೋಣ.

ಲಾಕ್‌ಡೌನ್ ಆದ ಪ್ರದೇಶಗಳಲ್ಲಿ‌ ಮನೆಯಿಂದ ಹೊರಬರುವುದು ಬೇಡ. ಪೊಲೀಸರಿಗೆ ನಾವು ಯಾವುದೇ ಕೆಲಸವನ್ನು ಕೊಡುವುದು ಬೇಡ. ಈಗ ನಾವೆಲ್ಲಾ ಬುದ್ದಿವಂತರೇ ಆಗಿದ್ದಾರೆ.‌ ಪ್ಲೇಗ್ ಯುಗದ ಪರಿಸ್ಥಿತಿ ಇಲ್ಲ.‌ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲಿಸಿ ಕೊರೊನಾವನ್ನು ನಿಯಂತ್ರಿಸಿ ಇಡೀ ಜಗತ್ತಿಗೆ‌ ಮಾದರಿಯಾಗೋಣ.

ಅಷ್ಟರ ಒಳಗಡೆ ಇದಕ್ಕೆ ಸೂಕ್ತ ಔಷಧಿ ಪತ್ತೆಯಾಗಬಹುದು ಎನ್ನುವ ಆಶಾಭಾವನೆ ಹೊಂದೋಣ.

ಗಿರೀಶ್

Tags

Related Articles

FOR DAILY ALERTS
Close