ಪ್ರಚಲಿತ

ರಮ್ಯಾಳ ಮತ್ತೊಂದು ಕಿರಿಕ್..! ಮೋದಿಗೆ ಟಾಂಗ್ ಕೊಡಲು ಹೋಗಿ ತಾನೇ ಅಪಮಾನಿತಳಾದಲೇ ಪದ್ಮಾವತಿ…!!!

ಈ ರಮ್ಯಾಳ ಟೈಮ್ ಅದೇಕೋ ಸರಿ ಇಲ್ಲಾ ಅಂತ ಅನ್ಸುತ್ತೆ. ತನ್ನನ್ನು ತಾನು ಪೋಷಿಸಿಕೊಳ್ಳಲು, ರಾಷ್ಟ್ರಮಟ್ಟದಲ್ಲಿ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಮೋದಿಯವರನ್ನು ಸದಾ ಟೀಕಿಸುತ್ತಲೇ ಇರುತ್ತಾಳೆ ಈ ಮೋಹಕ ತಾರೆ. ಮೋದಿಯನ್ನು ಟೀಕಿಸಿದರೆ ಅದು ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗುತ್ತೆ. ಹೀಗಾದರೆ ತಾನು ರಾಷ್ಟ್ರನಾಯಕಿಯಾಗಿ ಹೊರಹೊಮ್ಮುತ್ತೇನೆ ಅನ್ನುವ ಹುಚ್ಚು ಮನಸ್ಥಿತಿ ಈಕೆಯದ್ದು.

ರಾಜಕೀಯದಲ್ಲಿ ನಯಾ ಪೈಸೆಯ ಅರ್ಹತೆ ಇಲ್ಲದಿದ್ದರೂ ಯಾರದ್ದೋ ಕೃಪಾ ಕಟಾಕ್ಷದಿಂದ ರಾಜಕೀಯಕ್ಕೆ ಬಂದವಳು ಈ ರಮ್ಯಾ. ಸೌಂದರ್ಯವತಿಯರನ್ನೇ ಹುಡುಕುವ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದ್ದು ಈ ರಮ್ಯಾ. ಅಂದ ಚೆಂದವನ್ನು ತೋರಿಸಿ ಪಡ್ಡೆ ಹುಡುಗರ ಮೈ ಚಳಿಯನ್ನು ಬಿಡಿಸಿ ಅವರಿಗೆ ಹುಡುಗಿಯರ ಮೈಮಾಟವನ್ನು ತೋರಿಸಲೆಂದು ಕಾಂಗ್ರೆಸ್ ಪಕ್ಷಕ್ಕೆ ಕೆಂಪು ಹಾಸಿನ ಸ್ವಾಗತವನ್ನು ಹಾಸಿತ್ತು ಕಾಂಗ್ರೆಸ್.

ಆದರೆ ಈಕೆಗೆ ರಾಜಕೀಯ ಅಂದ್ರೆ ಏನಂತಲೇ ಗೊತ್ತಿಲ್ಲ. ರಾಜಕೀಯ ಅಂದ್ರೆ ರಾಹುಲ್ ಗಾಂಧಿ ಆಟ ಆಡುವ ಆಟಿಕೆ ಸಾಮಾನು ಅಂತ ತಿಳಿದಿದ್ದಾಳೋ ಏನೋ..! ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿನಿಂದ ಒಂದಲ್ಲಾ ಒಂದು ವಿಷಯಗಳಿಂದ ಸುದ್ಧಿಯಾಗುತ್ತನೇ ಇರುತ್ತಿದ್ದಳು ಈ ಪಾರ್ಟ್ ಟೈಮ್ ರಾಜಕಾರಿಣಿ…

ಅದೆಷ್ಟೇ ರಾಜಕಾರಣಿಗಳು ಇದ್ದರೂ ಮಂಡ್ಯದ ಉಪಚುನಾವಣೆಯಲ್ಲಿ ಈಕೆಯ ಬ್ಯೂಟಿಯನ್ನು ನೋಡಿ ಮಣೆ ಹಾಕಿತ್ತು ಕಾಂಗ್ರೆಸ್. ಅಂದ ಹಾಗೆ ಈಕೆಯ ಬ್ಯೂಟಿ ವರ್ಕೌಟ್ ಕೂಡಾ ಮಾಡಿತ್ತು. ಆ ಉಪಚುನಾವಣೆಯಲ್ಲಿ ರಮ್ಯಾ ಗೆದ್ದುಬಿಟ್ಟಿದ್ದಳು. ಅಂದಹಾಗೆ, ಅಲ್ಲಿ ಕೇವಲ ಆಕೆಯ ಬ್ಯೂಟಿ ಮಾತ್ರ ಕೆಲಸ ಮಾಡಿಲ್ಲ. ಅದರ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣಾರ ಕೆಲಸವೂ ವರ್ಕೌಟ್ ಆಗಿತ್ತು.

ಆದರೆ ಯಾವಾಗ ರಮ್ಯಾ ಸಂಸದೆ ಸ್ಥಾನವನ್ನು ಅಲಂಕರಿಸಿದರೋ ಅಂದಿನಿಂದ ಆಕೆ ತನ್ನದೇ ಶೈಲಿಯಲ್ಲಿ ಹಿರಿಯರನ್ನು ಕಡೆಗಣಿಸುತ್ತಾ, “ಊರಿಗೊಬ್ಲೇ ಪದ್ಮಾವತಿ” ಎಂಬಂತೆ ಪೋಸುಕೊಡಲು ಆರಂಭಿಸಿದಳು. ಅಂಕಲ್ ಅಂಕಲ್ ಎಂದು ಅಂಬರೀಶ್ ಹಿಂದೆನೇ ಓಡಾಡುತ್ತಿದ್ದ ರಮ್ಯಾ ರಾಹುಲ್ ಗಾಂಧಿಯ ಬಲೆಗೆ ಬಿದ್ದು ಅಂಬಿ ಅಂಕಲ್‍ರನ್ನು ಕಡೆಗಣಿಸಿಯೇ ಬಿಟ್ಟಿದ್ದಳು. ನಂತರ ಎಲ್ಲವೂ ರಾಹುಲ್‍ಮಯವಾಗಿಯೇ ಬಿಟ್ಟಿತ್ತು. ಇದರ ಪರಿಣಾಮವೇ 2014ರ ಲೋಕಸಭಾ ಚುನಾವಣೆ.

2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯಾದಲ್ಲಿ ರಮ್ಯಾಳಿಗೆ ಸೀಟು ಕೊಟ್ಟಿದ್ದರೂ ಆಕೆ ಸೋತು ಬಿಟ್ಟಿದ್ದಳು. ಅಂಬಿ ಅಂಕಲ್ ಹಾಗೂ ಎಸ್.ಎಂ.ಕೃಷ್ಣ ಅಂಕಲ್(?) ರೆಬೆಲ್ ಆಗಿ ಬಿಟ್ಟಿದ್ದರು. ರಮ್ಯಾಳ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿದ್ದರು. ಆ ಚುನಾವಣೆಯಲ್ಲಿ ರಮ್ಯಾ ಸೋತು ಸುಣ್ಣವಾಗಿದ್ದರು. ನಂತರ ಶುರುವಾಗಿದ್ದೇ ರಾಜಕೀಯ ಅಸ್ಥಿರತೆ.

ಇತ್ತ ಮಂಡ್ಯನೂ ಇಲ್ಲದೆ, ಅತ್ತ ಅಂಬಿ ಅಂಕಲೂ ಇಲ್ಲದೆ ಒದ್ದಾಡುತ್ತಿದ್ದ ರಮ್ಯಾಳ ಸಹಾಯಕ್ಕೆ ಬಂದಿದ್ದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ. “ನೀನೇನೂ ಹೆದರಬೇಡ. ನಿನಗೆ ನಾನಿದ್ದೇನೆ” ಎಂದು ರಮ್ಯಾಳ ತಲೆಯ ಮೇಲೆ ಕೈ ಇಟ್ಟಿದ್ದರು. ನಂತರ ನಡೆದದ್ದೇ ರಮ್ಯಾಳ ಅಧಿಕ ಪ್ರಸಂಗ.

“ನಿನಗೆ ರಾಜ್ಯದ ವಿಷಯ ಬೇಡ. ನೀನಿಲ್ಲೇ ಇರು” ಎಂದು ಆಕೆಗೆ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಜವಬ್ಧಾರಿಯನ್ನು ನೀಡಿದ್ರು ಯುವರಾಜ ರಾಹುಲ್ ಗಾಂಧಿ. ನಂತರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದ ರಮ್ಯಾ ತನ್ನ ಆಟವನ್ನು ಶುರುವಿಟ್ಟುಕೊಂಡಿದ್ದರು. ಪದೇ ಪದೇ ಮೋದಿಯನ್ನ ತೆಗಳುವುದರೊಂದಿಗನೇ ಕಾಲ ಕಳೆಯುತ್ತಿದ್ದ ರಮ್ಯಾ ದೇಶವಾಸಿಗಳಿಂದ ತೀವ್ರ ಟೀಕೆಗೊಳಗಾಗಿದ್ದಳು.

ಆಕೆಯ ಅಜೆಂಡಾ ಇದ್ದದ್ದು ಒಂದೇ. ಅದು “ಪಪ್ಪು” ಎಂಬ ಖ್ಯಾತನಾಮವನ್ನು ಹೊಂದಿದ್ದ ರಾಹುಲನನ್ನು ಹೀರೋ ಎಂಬಂತೆ ಬಿಂಬಿಸಲು ಶತ ಪ್ರಯತ್ನ ಮಾಡುವುದು. ಇದರ ಪ್ರಯತ್ನದ ಫಲವಾಗಿಯೇ ರಾಹುಲ್ ಹೀರೋ ಕೂಡಾ ಆದರು. ಟ್ವಿಟರ್‍ನಲ್ಲಿ ಮೋದಿಗಿಂತ ರಾಹುಲ್ ಗಾಂಧಿಯನ್ನು ಜನ ಹೆಚ್ಚು ಫಾಲೋ ಮಾಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬರುತ್ತೆ. ರಮ್ಯಾಳ ಸತತ ಶ್ರಮದಿಂದ ಇನ್ನೇನು ಪಪ್ಪು ಅನ್ನುವ ಪಟ್ಟ ಕಳಚುತ್ತಿದೆ ಅನ್ನುವಷ್ಟರಲ್ಲಿ ಬ್ರೇಕಿಂಗ್ ನ್ಯೂಸ್ ಬಂದಿರುತ್ತೆ. ರಾಹುಲ್ ಗಾಂಧಿಯನ್ನು ಫಾಲೋ ಮಾಡುತ್ತಿದ್ದ ಟ್ವೀಟರ್ಸ್‍ಗಳು ನಕಲಿಗಳು ಎಂಬ ಸತ್ಯವನ್ನು ಪ್ರತಿಷ್ಟಿತ ಸುದ್ಧಿವಾಹಿನಿಯೊಂದು ಬಯಲಿಗೆ ತರುತ್ತೆ. ರಾಹುಲ್ ಮತ್ತೆ “ಪಪ್ಪು” ಆಗಿಯೇ ಬಿಟ್ಟ. ಮತ್ತೆ ಪೋಗೋ ಛಾನೆಲ್ ನೋಡುವ ಸರದಿ.

ತನ್ನ ಈ ವೈಫಲ್ಯದಿಂದ ಕಂಗೆಟ್ಟು ಹೋದ ರಮ್ಯಾ ಅಳುತ್ತಾ ಕುಳಿತಿದ್ದರೇನೋ..!!! “ನನಗೆ ಈ ಹುದ್ದೆ ಬೇಡ. ನಾನು ಮಂಡ್ಯಾಕ್ಕೆ ವಾಪಾಸ್ ಹೋಗ್ತೇನೆ. ಆದ್ರೆ ಅಲ್ಲಿ ಅಂಬಿ ಅಂಕಲ್ ನನಗೆ ಬೈತಾರೆ” ಅಂತ ರಾಹುಲ್ ಬಳಿ ರಚ್ಚೆ ಹಿಡಿದಿದ್ದಳಂತೆ. ಇದಕ್ಕಾಗಿ ರಮ್ಯಾಳ ಕಣ್ಣೊರೆಸಿ ಮಂಡ್ಯಾದ ಬಾಗಿಲು ನಿನಗಾಗಿ ತೆರೆದಿರುತ್ತೆ ಎಂದು ಅಭಯವಿತ್ತು ಕಳಿಸಿದ್ದರು ರಾಹುಲ್ ಗಾಂಧಿ.

ಇದನ್ನು ಕೇಳಿದ ಅಂಬಿ ಅಂಕಲ್ ಮತ್ತೆ ರೆಬೆಲ್ ಆಗಿ ಬಿಟ್ಟಿದ್ದರು. ನಂತ್ರ ಸಿದ್ದರಾಮಯ್ಯರ ಪ್ರಯತ್ನದಿಂದ ಸ್ವಲ್ಪ ಕೂಲ್ ಆಗಿಬಿಟ್ಟಿದ್ದರು. ಇದರಿಂದ ಮತ್ತೆ ಗರಿಗೆದರಿದ ರಮ್ಯಾ ಈಗ ಮತ್ತೆ ತನ್ನ ಅಧಿಕ ಪ್ರಸಂಗವನ್ನು ಮುಂದುವರಿಸಲು ಶುರುವಿಟ್ಟುಕೊಂಡಿದ್ದಾಳೆ. ತನ್ನ ಚಾಲಿಯನ್ನು ಮುಂದುವರೆಸಿದ ಅವಳು ಮತ್ತೊಮ್ಮೆ ಮೋದಿಯನ್ನು ಕೆಣಕಲು ಆರಂಭಿಸಿದ್ದಾಳೆ.

ಜಗತ್ತಿನ ಮಹಾ ಸುಳ್ಳುಗಾರ ಮೋದಿ…!!!

ಸದಾ ಮೋದಿ ವಿರುದ್ಧ ಟೀಕೆಗಳನ್ನು ಮಾಡಿ ಮತ್ತೆ ದೇಶದ ಜನತೆಯ ಮುಂದೆ ಮಂಕಾಗಿ ತೆಪ್ಪಗೆ ಬಿದ್ದುಗೊಂಡಿರುವ ಈಕೆಗೆ ಇನ್ನೂ ಬುದ್ಧಿ ಬಂದಿಲ್ಲ ಅಂತ ಕಾಣುತ್ತೆ. ಮೋದಿಯನ್ನು ಕೆಣಕಿದಷ್ಟು ಟೀಕೆಗೆ ಗುರಿಯಾಗುವ ರಮ್ಯಾ ಈ ಬಾರಿ ಮತ್ತೆ ಮೋದಿಯನ್ನು ಟೀಕಿಸಿದ್ದಾಳೆ. “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಅನ್ನೋ ಗಾದೆ ಇದೆಯಲ್ಲಾ, ಅದು ಕಾಂಗ್ರೆಸ್ ಪಕ್ಷಕ್ಕೆ ಹೇಳಿ ಮಾಡಿಸಿದಂತಿದೆ. ರಮ್ಯಾಳೂ ಹಾಗೇನೆ. ಸುಳ್ಳು ಹೇಳಿಯಾದರೂ ಪರವಾಗಿಲ್ಲ, ತನ್ನನ್ನು ಜನ ಥೂ ಎಂದು ಟೀಕಿಸಿದರೂ ಪರವಾಗಿಲ್ಲ, ನಾನೊಬ್ಬಳು ಶೈನ್ ಆಗಬೆನ್ನುವ ಉದ್ಧೇಶ ರಮ್ಯಾಳದ್ದು.

ಇದಕ್ಕಾಗಿ ಪದೇ ಪದೇ ಮೋದಿಯನ್ನು ಟೀಕಿಸುತ್ತಿದ್ದ ರಮ್ಯಾ ಈ ಬಾರಿ ಮತ್ತೆ ಮೋದಿಯವರ ಕಾಲೆಳೆದಿದ್ದಾಳೆ. “ಮೋದಿ ಜಗತ್ತಿನ ಮಹಾ ಸುಳ್ಳುಗಾರ” ಎಂಬ ಟ್ವೀಟ್‍ನ್ನು ರೀಟ್ವೀಟ್ ಮಾಡಿದ್ದ ರಮ್ಯಾ “ನೀವು ಚಾಯ್ ವಾಲಾ ಹೌದೋ ಅಲ್ಲವೋ, ಅದು ವಿಷಯವಲ್ಲ” ಎನ್ನುವ ರೀತಿ ಟ್ವೀಟ್ ಮಾಡಿದ್ದಾಳೆ. ಕಾಂಗ್ರೆಸ್ ಅದೆಷ್ಟು ಬಾರಿ ಮೋದಿಯನ್ನು ಚಾಯ್‍ವಾಲಾ ಎಂದು ಜರೆದರೂ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬ ಸತ್ಯ ಗೊತ್ತಿದ್ದರೂ ಕಾಲೆಳೆಯಲು ಪ್ರಯತ್ನಿಸಿ ಮತ್ತೆ ತಾನು ತೋಡಿದ ಖೆಡ್ಡಾಕ್ಕ ತಾನೇ ಬಿದ್ದು ವಿಲ ವಿಲ ಒದ್ದಾಡುತ್ತಾರೆ.

ರಮ್ಯಾ ಬುದ್ಧಿವಂತಳು ಅಂದಕೊಂಡಿದ್ದೆವು,ಆದರೆ…!!!

ಅಯ್ಯೋ ಇದನ್ನು ನಾವು ಹೇಳ್ತಿಲ್ಲ. ದೇಶದ ಪ್ರತಿಷ್ಠಿತ ಸುದ್ಧಿ ಸಂಸ್ಥೆಯೊಂದು ರಮ್ಯಾಳನ್ನು ಹೀಗೆ ಕಾಲೆಳೆದಿದೆ. “ರಾಹುಲ್ ಗಾಂಧಿಯನ್ನು ಹೀರೋ ಮಾಡಲು ರಮ್ಯಾ ತುಂಬಾನೆ ಪ್ರಯತ್ನ ಪಟ್ಟಿದ್ದರು. ಅದ್ರಲ್ಲಿ ಯಶಸ್ವಿಯೂ ಆಗಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಜೀನಿಯರ್ಸ್ (ಬುದ್ಧಿವಂತ) ಎಂದು ಅಂದು ಕೊಂಡಿದ್ದೆವು. ಆದರೆ ಅವರು ಇಷ್ಟೊಂದು ದಡ್ಡಿ ಎಂದು ಗೊತ್ತೇ ಇರಲಿಲ್ಲ” ಎಂದು ರಿಪಬ್ಲಿಕ್ ಟಿವಿ ಕಾಲೆಳೆದಿದೆ. ಇದರಿಂದ ಇಂಗು ತಿಂದ ಮಂಗನಂತಾದ ರಮ್ಯಾ ಮತ್ತೆ ಅಳವತ್ತುಕೊಂಡು ರಾಹುಲ್ ಗಾಂಧಿ ಬಳಿ ಹೋದರೂ ಅಚ್ಛರಿಯಿಲ್ಲ.

ಒಟ್ಟಿನಲ್ಲಿ ರಮ್ಯಾ ಅನ್ನುವ ಕಾಂಗ್ರೆಸ್ ಕಿಲಾಡಿ ಗರ್ಲ್‍ಗೆ ದಿನಾ ದಿನ ರಾಹುಲ್ ಗಾಂಧಿಯನ್ನು ಹೊಗಳಿ ಅಟ್ಟಕ್ಕೇರಿಸುವ ಭರದಲ್ಲಿ ತಾನೇ ಹೋಗಿ ಗುಂಡಿಗೆ ಬೀಳುವುದಲ್ಲದೆ ರಾಹುಲ್ ಗಾಂಧಿಯನ್ನೂ ದೂಡುವುದು ಹಾಸ್ಯಾಸ್ಪದವೇ ಸರಿ…

-ಸುನಿಲ್ ಪಣಪಿಲ

Tags

Related Articles

Close