ಪ್ರಚಲಿತ

ರಮ್ಯಾ ಸಿಎಂ ಅಂತೆ, ರಾಹುಲ್ ಪಿಎಂ ಅಂತೆ, ಸೋನಿಯಾ ರಾಷ್ಟ್ರಪತಿ, ಪ್ರಿಯಾಂಕ ಉಪರಾಷ್ಟ್ರಪತಿ, ವಾದ್ರಾ ಗೃಹ ಸಚಿವ…!!!

ನಮ್ಮ ಮೋಹಕ ತಾರೆ ಪದ್ಮಾವತಿ, ರಮ್ಯಾ ಮುಖ್ಯ ಮಂತ್ರಿ ಆಗ್ತಾರಂತೇ..! ಹೂಂ… ಹೀಗೊಂದು ಸದ್ಯ ಕರ್ನಾಟಕದಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಸುದ್ಧಿ. ಇದಕ್ಕೆ ಕಾರಣ ರಮ್ಯಾರ ಮತ್ತೆ ರಾಜ್ಯ ರಾಜಕೀಯ ಚುಕ್ಕಾಣಿ.

ಹೌದು. ಎಐಸಿಸಿ ಯ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾದ ನಂತರ, ಸದಾ ಒಂದಲ್ಲ ಒಂದು ಕಾರಣದಿಂದ ದೇಶದ ಪ್ರಧಾನಿ ಮೋದೀಜೀಯನ್ನು
ಅನಾವಶ್ಯಕವಾಗಿ ತೆಗಳುವುದರಲ್ಲೇ ಬ್ಯುಸಿಯಾಗಿದ್ದ ರಮ್ಯಾ ಈಗ ಮತ್ತೆ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ಕರ್ನಾಟಕದ ಮಂಡ್ಯದಲ್ಲಿ ಕಳೆದ ಬಾರಿ ನಡೆದ ಸಂಸತ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಮೋಹಕ ತಾರೆ ರಮ್ಯಾ ಈಗ ಮತ್ತೆ ವಾಪಾಸ್ ಆಗುತ್ತಿರುವುದು ರಾಜ್ಯ ಕಾಂಗ್ರೆಸ್‍ನಲ್ಲಿ ಸಂಚಲನವನ್ನೇ ಮೂಡಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೊರೆಯಾಗಿದ್ದ ರಮ್ಯಾ ಎಐಸಿಸಿ ಯ ಜವಭ್ಧಾರಿ ವಹಿಸಿಕೊಂಡ ನಂತರ ರಾಜ್ಯ ಕಾಂಗ್ರೆಸ್ ನಿಟ್ಟುಸಿರು ಬಿಟ್ಟಿತ್ತು. ಆದರೆ ಈಗ ಮತ್ತೆ ರಾಜ್ಯಕ್ಕೆ ಎಂಟ್ರಿಯಾಗುತ್ತಿದ್ದು ರಾಜ್ಯ ಕಾಂಗ್ರೆಸ್ ನಾಯಕರನ್ನು ಆತಂಕಕ್ಕೆ ದೂಡಿದೆ.

ಕಳೆದ ಬಾರಿಯ ಸಂಸತ್ ಚುನಾವಣೆಯಲ್ಲಿ ದೇಶದಾದ್ಯಂತ ಮೋದಿ ಅಲೆ ಬುಗಿಲೆದ್ದಿದ್ದು ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಜಯಭೇರಿ ಸಾಧಿಸಿತ್ತು.
ಕರ್ನಾಟಕದಲ್ಲೂ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ತತ್ತರಿಸಿ ಹೋಗಿತ್ತು. ಅದರ ಹಿಂದಿನ ಮಂಡ್ಯದ ಉಪಚುನಾವಣೆಯಲ್ಲಿ ಆಗ ತಾನೇ ರಾಜಕೀಯಕ್ಕೆ ಎಂಟ್ರಿಯಾಗಿದ್ದ ನಟಿ ರಮ್ಯಾಗೆ ಛಾನ್ಸ್ ನೀಡಲಾಗಿತ್ತು. ಗೆಲುವು ಕೂಡಾ ಕಂಡಿದ್ದರು. ಆದರೆ ನಂತರ ನಡೆದ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ರಮ್ಯಾ ಸೋತಿದ್ದರು.

ಅದಾದ ನಂತರ ರಮ್ಯಾ ಯಾರ ಕಣ್ಣಿಗೂ ಕಾಣಲೇ ಇಲ್ಲ. ಅದೆಷ್ಟೋ ಸಮಯದಲ್ಲಿ ರಮ್ಯಾ ಕರ್ಣಾಟಕದಲ್ಲಿ ಇರಲೇ ಇಲ್ಲ. ಆಶ್ಚರ್ಯವೆಂಬಂತೆ ರಾಹುಲ್
ಗಾಂಧಿಯವರೂ ಸುಮಾರು 40 ದಿಗಳ ಕಾಲ ದೇಶ ಬಿಟ್ಟು ಹೊರ ಹೋಗಿದ್ದರು. ಈ ಇಬ್ಬರು ಕಾಂಗ್ರೆಸ್ ನಾಯಕರು ಎಲ್ಲಿ ಹೋಗಿದ್ದರು ಎಂಬುವುದೇ ನಿಗೂಢವಾಗಿತ್ತು. ಅದಾದ ನಂತರ ಮೆಲ್ಲನೆ ರಾಷ್ಟ್ರಕ್ಕೆ ಎಂಟ್ರಿಯಾಗಿದ್ದರು. ರಾಹುಲ್ ಗಾಂಧಿ ಲಂಡನ್ ಗೆ ಹೋಗಿದ್ದರೋ ಅಥವಾ ಇಟಲಿಗೆ ಹೋಗಿದ್ದರೋ ಎಂಬುದೇ ಸುದ್ಧಿಯಾಗಿತ್ತು.

ಹೀಗೆ ಸೋಲಿನ ಸುಳಿಯಲ್ಲಿ ನಲುಗಿದ ರಮ್ಯಾ ಮಂಡ್ಯದಲ್ಲಿದ್ದ ತಮ್ಮ ನಿವಾಸವನ್ನು ತೆರವುಗೊಳಿಸಿದ್ರು. ಮಂಡ್ಯಾದ ಹಲವು ನಾಯಕರೂ ರಮ್ಯಾ ವಿರುದ್ಧ ತಿರುಗಿ
ಬಿದ್ದಿದ್ರು. ಮಂಡ್ಯದ ಗಂಡು ಶಾಸಕ ಅಂಬರೀಶ್ ಕೂಡಾ ರಮ್ಯಾ ವಿರುದ್ಧ ರೆಬೆಲ್ ಆಗಿದ್ರು. ಇದರಿಂದ ಸಂಕಷ್ಟಕ್ಕೊಳಗಾದ ರಮ್ಯಾರ “ಕೈ” ಹಿಡಿದಿದ್ದು ಕಾಂಗ್ರೆಸ್‍ನ ಪರಮೋಚ್ಛ ನಾಯಕ ರಾಹುಲ್ ಗಾಂಧಿ.

ಹೌದು. ರಾಜ್ಯ ರಾಜಕಾರಣದಲ್ಲಿ ಸೋತು ಹತಾಶಾ ಮನೋಭಾವನೆಗೆ ಒಳಗಾಗಿದ್ದ ರಮ್ಯಾರನ್ನು ಕರೆದು ಎಐಸಿಸಿಯಲ್ಲಿ ಜವಬ್ಧಾರಿ ನೀಡಲಾಯಿತು. ಎಐಸಿಸಿ ಯ ಸಾಮಾಜಿಕ ಜಾಲತಾಣಗಳ ಜವಬ್ಧಾರಿಯನ್ನು ರಮ್ಯಾಗೆ ನೀಡಿ ಸಮಾದಾನ ಪಡಿಸಿದ್ರು ರಾಹುಲ್ ಗಾಂಧಿ. ನಂತರ ರಮ್ಯಾರದ್ದೇ ಕಾರುಬಾರು. ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದು ಕೇಂದ್ರದಲ್ಲಿ ಭದ್ರವಾಗಿ ಕುಳಿತಿದ್ರು ರಮ್ಯಾ.

ಅದ್ಯಾವಾಗ ಎಐಸಿಸಿಯ ಸಾಮಾಜಿಕ ಜಾಲತಾಣಗಳ ಜವಬ್ದಾರಿ ರಮ್ಯಾ ಹೆಗಲೇರಿತ್ತೋ ಅಂದಿನಿಂದ ಆಕೆ ಅದೇನೋ ಇರುವೆ ಬಿಟ್ಟಂತೆ ವರ್ತಿಸುತ್ತಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ಅಸ್ತ್ರಗಳು ಇಲ್ಲವಾದಾಗ ಮೋದೀಜಿಯ ವಿಷಯವಾಗಿ ಕಾಲೆಳೆಯುತ್ತಿದ್ದರು. ಆದರೆ ಮೋದೀಜಿಗೆ ರಮ್ಯಾ ಯಾರೆಂದು ಗೊತ್ತೇ ಇರಲಿಕ್ಕಿಲ್ಲ. ಒಂದೊಮ್ಮೆ ರಮ್ಯಾಳ ಅವಿವೇಕತನ ಅತಿರೇಕಕ್ಕೂ ಹೋಗುತ್ತಿತ್ತು. ಈ ಭರತ ಭೂಮಿಗಾಗಿ ತಮ್ಮ ಜೀವವನ್ನೇ ಸವೆಸಿ, ದೇಶಕ್ಕಾಗಿ ಪ್ರಾಣಾರ್ಪಣೆಗೈದಿದ್ದ ಮೃತ್ಯುಂಜಯ, “ವೀರ ಸಾವರ್ಕರ್” ಗೆ “ವೀರ” ಎಂಬ ಬಿರುದು ಯಾಕೆ ಎಂದು ಪ್ರಶ್ನಿಸುವ ಮೂಲಕ ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಳು.

* ಮತ್ತೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ರಮ್ಯಾ.
* ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ರಮ್ಯಾ.

ಹೌದು. ಹೀಗೊಂದು ಸುದ್ಧಿ ಹರಿದಾಡಲು ಕಾರಣವೂ ಇದೆ. ಇನ್ನೇನು ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದೆ. ರಾಜ್ಯ ರಾಜಕೀಯ ಪಕ್ಷಗಳ ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ಸಾಗುತ್ತಿವೆ. ಹೀಗಿರುವಾಗ ರಮ್ಯಾರನ್ನು ರಾಜ್ಯ ಕಾಂಗ್ರೆಸ್, ಅಂದರೆ ಕೆಪಿಸಿಸಿಯಲ್ಲಿ ಸ್ಥಾನ ನೀಡಲಾಗಿದೆ. ಎಐಸಿಸಿ ಬಿಡುಗಡೆಗೊಳಿಸಿರುವ ರಾಜ್ಯ
ಕಾರ್ಯಕಾರಣಿಯ 94 ಜನರ ಪಟ್ಟಿಯಲ್ಲಿ ರಮ್ಯಾಗೂ ಸ್ಥಾನ ನೀಡಲಾಗಿದೆ. ಹೀಗಾಗಿ ರಮ್ಯಾ ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಲಿದ್ದಾರೆ. ಮತ್ರವಲ್ಲದೆ ತಮಗೆ ಈ ಹಿಂದೆ ಕಿರಿಕಿರಿ ಮಾಡಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಈ ಮೂಲಕ ಬಿಸಿ ಮುಟ್ಟಿಸಲು ತಯಾರಾಗಿ ನಿಂತಿದ್ದಾರೆ. ಇದು ರಾಜ್ಯ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ಮುಂದಿನ ಚುನಾವಣೆಯಲ್ಲಿ ಅಲ್ಲದಿದ್ರೂ 2023ರ ವಿಧಾನ ಸಭಾ ಚುನಾವಣೆಯಲ್ಲಾದ್ರೂ ಮುಖ್ಯಮಂತ್ರಿ ಸ್ಥಾನಕ್ಕೇರಬೇಕೆಂಬ ಬಯಕೆ ರಮ್ಯಾ ಹೊಂದಿದ್ದರು. ರಮ್ಯಾ ಅಂದ್ರೆ ಸುಮ್ನೇನಾ. ರಾಹುಲ್ ಗಾಂಧಿಯ ಸಂಪೂರ್ಣ ಕೃಪಾ ಕಟಾಕ್ಷ ರಮ್ಯಾ ಮೇಲಿರುತ್ತದೆ. ಹೀಗಾಗಿ ಆಕೆಯ ಬಯಕೆಗೆ ಮತ್ತಷ್ಟು ಬಲ ಬಂದಿದೆ. ಹೀಗಾಗಿ ರಮ್ಯಾಗೆ ಮತ್ತೆ ರಾಜ್ಯ ರಾಜಕಾರಣದ ಜವಭ್ಧಾರಿ ನೀಡಲಾಗಿದೆ. ಇದು ರಾಹುಲ್ ಗಾಂಧಿ ತಂತ್ರಗಾರಿಕೆಯನ್ನೋದು ಗುಟ್ಟಾಗಿ ಉಳಿದಿಲ್ಲ.

ಈಗಾಗಲೇ ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಮುರಿದು ಬಿದ್ದಿತ್ತು. ಮುಂದಿನ ಚುನಾವಣೆಯಲ್ಲಾದರೂ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ
ಬಯಕೆಯನ್ನು ಹೊಂದಿದ್ದಾರೆ. ಹೀಗಾಗಿ ಚುರುಕ್ಕಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ತನ್ನ ಕುಟುಂಬದ ಯಾರೇ ಪ್ರಧಾನಿಯಾದರೂ ಅವರನ್ನು ಕೊಲ್ಲುತ್ತಿದ್ದ ಭಯದಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದೆ ಮೌನಮೋಹನ್ ಸಿಂಗ್‍ರನ್ನು ರಿಮೋಟ್ ಕಂಟ್ರೋಲ್ ಪಿಎಮ್ ಆಗಿ ನೇಮಿಸಿದ್ದರು. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ದೇಶದ ಮಜಹೋನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬ ಬಯಕೆಯನ್ನು ಸೋನಿಯಾ ಬಯಸುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂದಿಯನ್ನು ಪಿಎಮ್ ಮಾಡಿ ತಾನ ರಾಷ್ಟ್ರಪತಿಯಾಗುವ ಕನಸು ಕಾಣುತ್ತಿದ್ದಾರೆ ಎಂಬ ಹಾಸ್ಯ ತುಣುಕುಗಳು ಹರಿದಾಡುತ್ತಿದೆ.

ಹೇಗಿರುತ್ತೆ ಅಲ್ವಾ. ದೇಶದಲ್ಲಿ ಸೋನಿಯಾ ಗಾಂಧಿ ರಾಷ್ಟ್ರಪತಿ, ರಾಹುಲ್ ಗಾಂಧಿ ಪ್ರಧಾನಿ, ಪ್ರಿಯಾಂಕ ಗಾಂಧಿ ಉಪರಾಷ್ಟ್ರಪತಿ, ರಾಬರ್ಟ್ ವಾದ್ರಾ ಗೃಹ ಸಚಿವ ಮತ್ತು ಕರ್ನಾಟಕದಲ್ಲಿ ರಮ್ಯಾ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಅಲ್ವಾ. ಒಂದು ಕುಟುಂಬವೇ ದೇಶದ ಉನ್ನತ ಹುದ್ದೆಗಳ ಚುಕ್ಕಾಣಿಯನ್ನು ಹಿಡಿದರೆ ಎಷ್ಟು ಅದ್ಭುತವಾಗಿರುತ್ತೆ ಅನ್ನೋದು ಊಹಿಸೋಕ್ಕು ಆಗೋದಿಲ್ಲ. ಒಟ್ಟಿನಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟು, ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಹಿಡಿತ ಸಾಧಿಸಲು ಹೊರಟಿರುವ ರಮ್ಯಾಗೆ ಆಲ್ ದಿ ಬೆಸ್ಟ್. ಜೀವನದಲ್ಲಿ ಒಮ್ಮೆಯಾದರೂ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ್ಯತೆ ಬರಲಿ…

-ಸುನಿಲ್

Tags

Related Articles

Close