ಪ್ರಚಲಿತ

ರವಿಶಂಕರ್‌ ಗುರೂಜಿ ಸಂಧಾನಕ್ಕಿಳಿದದ್ದು ಸುನ್ನತ್‌ಗಿಂತಲೂ ನೋವಾಯ್ತೇ ಓವೈಸಿ?!

ಹೌದು, ಸೂರು ಕಿತ್ತು ಹೋಗುವ ಹಾಗೆ ಅರಚುತ್ತಿದ್ದ ನರಿಯೊಂದು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡಿದೆ. ಕಾರಣ ಇಷ್ಟೇ, ಅದಕ್ಕೆ ಈಗ ನಿಜವಾಗಿಯೂ ಹೆದರಿಕೆ ಶುರುವಾಗಿದೆ.ನರಿಯ ಕಥೆ ಹಾಗಿರಲಿ, ಈಗ ವಿಷಯಕ್ಕೆ ಬರೋಣ. ರಾಮಜನ್ಮ ಭೂಮಿ ವಿವಾದವನ್ನು ಬಗೆಹರಿಸಲು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿಯನ್ನು ಮಧ್ಯಸ್ಥಿಕೆ ಬಿಟ್ಟಿದ್ದಾರೆ. ಈಗ ಎಲ್ಲರನ್ನೂ ಮಾತಾಡಿಸಿ ರಾಮಜನ್ಮ ಭೂಮಿ ವಿವಾದ ಬಗೆಹರಿಸುವ ಜವಾಬ್ದಾರಿ ಈಗ ರವಿಶಂಕರ್‌ ಗುರೂಜಿ ಮೇಲಿದೆ. ಅವರಿಗೆ ಈ ಜವಾಬ್ದಾರಿ ವಹಿಸಿದ ದಿನದಿಂದಲೂ ಅವರು ಬಹಳ ಚುರುಕಾಗಿ ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಅಡ್ಡಗಟ್ಟಿದ್ದ ಮಾಧ್ಯಮಕ್ಕೆ ಮೊನ್ನೆಯಷ್ಟೇ “ಎಲ್ಲರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸು‌ತ್ತಿದ್ದಾರೆ… ವಿವಾದ ಕೊನೆಗೊಳ್ಳಲಿದೆ” ಎಂದು ಹೇಳಿದ ಮೇಲಂತೂ ಅಸಾದುದ್ದೀನ್‌ ಓವೈಸಿಗೆ ಬಿಪಿ ತಾರಕಕ್ಕೇರಿದೆ. ಹದಿನೈದು ನಿಮಿಷ ಪೊಲಿಸ್ ವ್ಯವಸ್ಥೆಯನ್ನು ನಿಷ್ಕ್ರೀಯಗೊಳಿಸಿದರೆ ಮುಸ್ಲಿಮರ ತಾಕತ್ತೇನು ಅಂತ ಹಿಂದೂಗಳಿಗೆ ತೋರಿಸುತ್ತೇವೆ ಎಂದು ಅಕ್ಬರುದ್ದೀನ್‌ ಓವೈಸಿ ಹೇಳಿದಾಗಲೂ ಅಸಾದುದ್ದೀನ್‌ ಓವೈಸಿ ಇಷ್ಟು ತಲೆ ಕೆಡಿಸಿಕೊಂಡಿರಲಿಲ್ಲವೇನೋ.. ಆದರೆ, ಎಲ್ಲವೂ ಸುಖಾಂತ್ಯಗೊಳ್ಳಲಿದೆ ಎಂಬ ಮಾತು ಮಾತ್ರ ಓವೈಸಿ ಪತರಗುಟ್ಟುವಂತೆ ಮಾಡಿದೆ. ಈ ವಿಚಾರದ ಬಗ್ಗೆ ಪ್ರೆಸ್‌ ಮೀಟ್‌ನಲ್ಲಿ ಮಾತನಾಡಿದ ಓವೈಸಿ, ರವಿಶಂಕರ್‌ ಅವರು ಜೋಕರ್‌ಗಳನ್ನೆಲ್ಲ ಭೇಟಿಯಾಗುತ್ತಿದ್ದಾರೆ ಎಂದು ಇತರ ಮುಸ್ಲಿಮರನ್ನು ನಿಂದಿಸಿದ್ದಾರೆ.

ಇಷ್ಟಕ್ಕೇ ಅವರ ಬುಡಕ್ಕೆ ಹೊತ್ತಿದ್ದ ಬೆಂಕಿ ಆರಲಿಲ್ಲ, ಬದಲಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಂಧಾನ ನಡೆಯುತ್ತಿದೆಯೋ ಅಥವಾ ಸರ್ಕಸ್‌ ನಡೆಯುತ್ತಿದೆಯೋ ಎಂದಿದ್ದಾರೆ. ಅಸಾದುದ್ದೀನ್‌ ಓವೈಸಿ ಸೇರಿದಂತೆ ಹಲವಾರು ಮುಸ್ಲಿಮ್‌ ರಾಜಕಾರಣಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದೇ ಬಾಬ್ರಿ ಮಸೀದಿಯ ಕಲ್ಲುಗಳಲ್ಲಿ. ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟಿ ಮೈಕ್‌ ಮುಂದೆ ಕೂಗುವುದಕ್ಕೆ ವಿಷಯ ಇಲ್ಲವೆಂದರೆ, ಮುಸ್ಲಿಮರು ಇಂಥ ರಾಜಕಾರಣಿಗಳನ್ನು ಮೂಸಿಯೂ ನೋಡುತ್ತಿರಲಿಲ್ಲ. ಇಷ್ಟು ವರ್ಷ, ಅನ್ನ ಹಾಕಿದ್ದಷ್ಟೇ ಅಲ್ಲದೇ ಗೋಡಂಬಿ ದ್ರಾಕ್ಷಿಯನ್ನೂ ಕೊಡುತ್ತಿದ್ದ ವಿವಾದ ಬಗೆಹರಿದುಬಿಟ್ಟರೆ, ಓವೈಸಿ ಪಾಕಿಸ್ತಾನದಲ್ಲಷ್ಟೇ ಚುನಾವಣೆಗೆ ನಿಲ್ಲಬೇಕು. ಅದಕ್ಕೇ ಈಗ ಓವೈಸಿಗೆ ನಿದ್ದೆ ಬರದೇ ಇರುವುದು.

ಇವತ್ತಿಗೆ ಬಾಬ್ರಿ ಮಸೀದಿ ಕೆಡವಿ ೯೧೧೨ ದಿನಗಳಾಯ್ತು. ಈ ವಿವಾದವನ್ನು ಬಗೆಹರಿಸುವುದಕ್ಕೆ ಇಡೀ ದೇಶವೇ ಕಾತರದಿಂದ ಕಾಯುತ್ತಾ ಇದೆ. ಏನೋ ಒಂದು
ತೀರ್ಪು ಬಂದರೆ ಸಾಕು ಎಂದು ಪ್ರಕರಣ ದಾಖಲಿಸಿದವರ ಮಕ್ಕಳು ಮೊಮ್ಮಕ್ಕಳು ಕಾಯುತ್ತಾ ಇದ್ದಾರೆ. ಈ ಹಿಂದೆ ಇದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಹ, ಬಾಬ್ರಿ ಮಸೀದಿ ವಿವಾದವನ್ನು ಕೋರ್ಟ್‌‌ನಿಂದ ಹೊರಗೆ ಬಗೆಹರಿಸುವುದಾದರೆ ಅದಕ್ಕೆ ಮಧ್ಯಸ್ಥಿಕೆ ವಹಿಸಲೂ ಸಿದ್ಧ ಎಂದು ಹೇಳಿದ್ದನ್ನೂ ನಾವಿಲ್ಲಿ
ನೆನಪಿಸಿಕೊಳ್ಳಬಹುದು. ಭಾರತ ಪುರಾತತ್ವ ಇಲಾಖೆಯೂ ಸಹ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ಇದ್ದ ಬಗ್ಗೆ ಸಾಕ್ಷಿಗಳನ್ನು ಸಲ್ಲಿಸಿದ್ದರು. ಅಯೋಧ್ಯೆಯ
ವಿವಾದದ ಬಗ್ಗೆ ದಿನವೂ ಹಿಯರಿಂಗ್‌ ನಡೆಯುತ್ತಿರುವುದರಿಂದ ಹೆಚ್ಚೂಕಡಿಮೆ ಪ್ರಕರಣ ಅಂತ್ಯಗೊಳ್ಳುವ ಲಕ್ಷಣಗಳೂ ಕಾಣುತ್ತಿವೆ. ಆದರೂ ಕೊರ್ಟ್‌‌ನಿಂದ ಹೊರಗೇ ಇದನ್ನು ಮಾತಾಡಿ ಒಮ್ಮತದಿಂದ ಬಗೆಹರಿಸಿಕೊಳ್ಳಲಿ, ಅದಿಲ್ಲವಾದರೆ ನಾವು ಇದನ್ನು ನಿರ್ಧರಿಸಬೇಕಾಗುತ್ತದೆ ಎಂದು ಸುಪ್ರೀಂ ಕೊರ್ಟ್‌ ಹೇಳಿತ್ತು. ಆದರೂ ಅದೇಕೋ ಓವೈಸಿಗೆ ಮಾತ್ರ ಬಾಬ್ರಿ ಮಸೀದಿ ವಿವಾದ ಹೊಗೆಯಾಡುತ್ತಿದ್ದರೇ ಚೆನ್ನ ಎನಿಸುವಂತೆ ವರ್ತಿಸುತ್ತಿದ್ದಾರೆ.

೧೯೯೪ನಲ್ಲಿ ಆಲ್‌ ಇಂಡಿಯಾ ಬಾಬ್ರಿ ಮಸೀದಿ ಹಿಯರಿಂಗ್‌ ಕಮಿಟಿಯ ಮುಖ್ಯಸ್ಥರಾಗಿದ್ದ ಸೈಯದ್‌ ಸಹಾಬುದ್ದೀನ್ ಹೇಳುತ್ತಾರೆ..  “ಬಾಬ್ರಿ ಮಸೀದಿಯು ರಾಮ
ಮಂದಿರವನ್ನು ಕೆಡವಿ ರಾಮಜನ್ಮ ಭೂಮಿಯಲ್ಲೇ ಕಟ್ಟಿದ್ದು ಅಂತಾದರೆ ಖಂಡಿತವಾಗಿಯೂ ಮಸೀದಿಯನ್ನು ನಾಶ ಮಾಡಬಹುದು ಮತ್ತು ಅಲ್ಲಿ ನಮಾಜ್‌ ಮಾಡುವುದಕ್ಕೆ ಯಾವುದೇ ಮೌಲ್ವಿಯೂ ಫತ್ವಾ ಕೊಡುವುದಕ್ಕೆ ಸಾಧ್ಯವಿಲ್ಲ. ಒಮ್ಮೆ ಅಲ್ಲಿ ರಾಮ ಮಂದಿರ ಇತ್ತು ಎಂಬುದು ಸಾಬೀತಾದರೆ ನಾನೇ ಖುದ್ದು ಹೋಗಿ ಮಸೀದಿಯನ್ನು ಕೆಡವುತ್ತೇನೆ” ಎಂದು ಹೇಳಿದ್ದರು. ಆದರೆ ಅವರ ದುರದೃಷ್ಟಕ್ಕೆ ಅದೂ ಸಾಬೀತಾಗಿದೆ. ಇದೆಲ್ಲ ಜನರಿಗೆ ತಿಳಿದಿರುವ ಸಮಯದಲ್ಲಿ ರವಿಶಂಕರ್‌ ಗುರೂಜಿ ಹೋಗಿ ಎಲ್ಲಿ ಇದನ್ನೆಲ್ಲ ಹೇಳಿಬಿಡುತ್ತಾರೆ ಎಂದು ಓವೈಸಿ ಹೆದರಿ ಒದ್ದೆಯಾಗುತ್ತಿದ್ದಾರೆ.

ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಲು ರವಿಶಂಕರ್‌ ಗುರೂಜಿಯವರು ಅಕ್ಟೋಬರ್‌ ೨೭ನೇ ತಾರೀಖಿನಂದು ನಿರ್ಮೋಹಿ ಅಖಾಡದವರನ್ನು ಭೇಟಿಯಾಗಿದ್ದರು. ೧೯೪೯ರಲ್ಲಿ ನಿರ್ಮೋಹಿ ಅಖಾಡದ ದಿವಂಗತ ಮಹಂತ್‌ ಭಾಸ್ಕರ್‌ ದಾಸ್‌ ರಾಮಜನ್ಮಭೂಮಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಾಬ್ರಿ ಮಸೀದಿಯ ಸಮಸ್ಯೆಯ ಬುಡಕ್ಕೆ ಎಲ್ಲಿ ರವಿಶಂಕರ್‌ ಗುರೂಜಿಯವರು ಇಳಿದರೋ ಆಗ ಕೆಲ ಮುಸ್ಲಿಮರಿಗೆ ಉರಿ ಉಂಟಾಯಿತು.

ವಿವಾದಿತ ಜಾಗವು ರಾಮಜನ್ಮಭೂಮಿಯಾಗಿದೆ. ಅದರಲ್ಲಿ ವಿವಾದಿತ ಕಟ್ಟಡವನ್ನು ಬಾಬರ್‌ ಕಟ್ಟಿದ್ದಾನೆ. ಇಸವಿಯ ನಿಖರತೆ ಇಲ್ಲದಿದ್ದರೂ ಖಂಡಿತವಾಗಿಯೂ ಆ ಕಟ್ಟಡವನ್ನು ರಾಮಜನ್ಮಭೂಮಿಯನ್ನು ಅತಿಕ್ರಮಿಸಿ ಕಟ್ಟಿದ್ದರಿಂದ, ಯಾವುದೇ ರೀತಿಯಿಂದಲೂ ಅದು ಮಸೀದಿಯಾಗುವುದಿಲ್ಲ.” ಎಂದು ಸೆಪ್ಟೆಂಬರ್‌ ೨೦೧೦ರಲ್ಲಿ ಅಲಹಾಬದ್‌ ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ರವಿಶಂಕರ್‌ ಗುರೂಜಿ ಈಗ ಜನರನ್ನು ಭೇಟಿ ಮಾಡುವುದಕ್ಕೆ ಹೋದಾಗಿನಿಂದ ಇಂಥ ಎಲ್ಲ ವಿಚಾರವನ್ನು ಚರ್ಚಿಸಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ಹಿತ್ತಾಳೆ ಕಿವಿ ಓವೈಸಿಗೆ ಢವಢವ ಶುರುವಾಗಿದ್ದಂತೂ ಸುಳ್ಳಲ್ಲ. ಇಷ್ಟು ದಿನ ಓವೈಸಿಯ ಪ್ರೀಪೇಯ್ಡ್‌ ಜನರ ಮುಂದೆ ಮಸೀದಿಯ ಅಜಾನ್‌ಗಿಂತಲೂ ಮೈಕ್‌ ಸೌಂಡ್‌ ಹೆಚ್ಚು ಕೊಟ್ಟು, ಬಾಬ್ರಿ ಮಸೀದಿಯನ್ನು ಮತ್ತೆ ಕಟ್ಟುತ್ತೇವೆ ಎಂದು ಮೇಜು ಕುಟ್ಟುತ್ತಿದ್ದರೋ ಅದಕ್ಕೆಲ್ಲ ಈಗ ಬೆಂಕಿ ಬೀಳಲಿದೆ. ಮಾತಿನಲ್ಲೇ ಕಟ್ಟಿದ್ದ ಬಾಬ್ರಿ ಮಸೀದಿ ಮುರಿದು ಬೀಳಲಿದೆ. ಇದೇ ಹೆದರಿಕೆಯಿಂದಲೇ ಓವೈಸಿ ಮೊನ್ನೆ ಪ್ರೆಸ್‌ ಮೀಟ್‌ನಲ್ಲಿ ರವಿಶಂಕರ್‌ ಗುರೂಜಿ ಭೇಟಿಯಾಗುತ್ತಿರುವ ಮುಸ್ಲಿಮರನ್ನೆಲ್ಲ ಜೋಕರ್‌ಗಳು ಎಂದು ಬಾಯಿಗೆ ಬಂದ ಹಾಗೆ ಬಡಬಡಾಯಿಸಿದ್ದು. ದುರಂತ ಎಂದರೆ, ರವಿಶಂಕರ್‌ ಗುರೂಜಿಯವರು ಯಾರನ್ನು ಭೇಟಿಯಾಗಬೇಕೋ ಅವರನ್ನೆಲ್ಲ ಖುದ್ದು ಭೇಟಿಯಾಗಿ ಓವೈಸಿಯಂಥ ಕೋಮುವಾದಿಗಳನ್ನು ಜೋಕರ್‌ ಮಾಡಿ ಬಿಡುತ್ತಿದ್ದಾರೆ. ಆ ಉರಿಯೇ ಅವರನ್ನು ಹಾಗೆ ಮಾತಾಡುವಂತೆ ಪ್ರೇರೆಪಿಸಿದ್ದು.

ಬಾಬ್ರಿ ಮಸೀದಿ ಪ್ರಕರಣವನ್ನು ದಾಖಲಿಸಿದ್ದ ಹಾಷಿಮ್‌ ಅನ್ಸಾರಿಯವರ ಪುತ್ರ ಮೊಹ್ಮದ್‌ ಇಕ್ಬಾಲ್‌ ಅನ್ಸಾರಿಯನ್ನೂ ರವಿಶಂಕರ್‌ ಗುರೂಜಿ ಭೇಟಿ ಮಾಡಿದ್ದಾರೆ.
ಹಾಗಾದರೆ ಮೊಹ್ಮದ್‌ ಇಕ್ಬಾಲ್‌ ಅನ್ಸಾರಿಯೂ ಜೋಕರ್‌ ಆದರೇ? ಒಬ್ಬ ಹಿರಿಯ ವ್ಯಕ್ತಿಯನ್ನು ಜೋಕರ್‌ ಎಂದು ಕರೆಯುವ ಓವೈಸಿಯ ಧಿಮಾಕಾದರೂ ಎಂಥದ್ದು?

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅವರ ಜೊತೆಗೂ ರವಿಶಂಕರ್‌ ಗುರೂಜಿ ಮಾತಾಡಿದ್ದರು. ಓವೈಸಿಯವರೇ ದಯವಿಟ್ಟು ಹೇಳಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನವರು ನಿಮಗೆ ಯಾವಾಗ ಜೋಕರ್‌ ರೀತಿ ಕಂಡರು. ಮುಸಲ್ಮಾನ ಬಂಧುಗಳೇ, ನಿಮ್ಮದೇ ಬೋರ್ಡ್‌‌ನವರಿಗೆ ನಿಮ್ಮ ಧರ್ಮದವರೇ ಜೋಕರ್‌ ಎಂದು ಕರೆಯುವುದಕ್ಕಿಂತ ದೊಡ್ಡ ಅವಮಾನ ನಿಮಗೆ ಬೇಕಾ? ಹೋಗಲಿ, ಓವೈಸಿಯ ಜೊತೆಗೇ ಜೈ ಹೋ ಎಂದು ತಿರುಗಾಡುವ ಪ್ರೀಪೇಯ್ಡ್‌ ಮಂದಿಯಾದರೂ ಅವರಿಗೆ ಕಿವಿ ಹಿಂಡಬಾರದೇ?

ಇದೇ ? ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನವರು ತ್ರಿವಳಿ ತಲಾಖ್‌ ಬೇಕು ಎಂದು ಮಾತಾಡಿದ್ದಾಗ ನಾಚಿಕೆಯನ್ನೆಲ್ಲ ಬಿಟ್ಟು ಓವೈಸಿ ಅದನ್ನು
ಬೆಂಬಲಿಸಿದ್ದರು. ಆಗ ಇಷ್ಟವಾದ ಬೋರ್ಡ್‌‌ನವರು ಈಕೇಕೆ ಇಷ್ಟವಾಗುತ್ತಿಲ್ಲ? ಪ್ರಿಯ ಮುಸ್ಲಿಮರೇ ಇನ್ನಾದರೂ ಅರ್ಥ ಮಾಡಿಕೊಳ್ಳಿ. ಅಸಾದುದ್ದೀನ್‌ ಓವೈಸಿ ನಿಮ್ಮನ್ನು ಉದ್ಧಾರ ಮಾಡುವುದಕ್ಕೆ ಬಂದ ಪ್ರವಾದಿಯಲ್ಲ. ಹಾಗೆಂದುಕೊಂಡಿದ್ದರೆ, ಒವೈಸಿಯಿಂದ ನೀವು ಪ್ರತೀ ದಿನ ಬಕ್ರೀದ್‌ ಆಚರಿಸಿಕೊಳ್ಳುತ್ತಿದ್ದೀರಿ ಎಂದಷ್ಟೇ. ತನ್ನ ಕೆಲಸ ಆಗಬೇಕು, ತಾನು ಅಧಿಕಾರದಲ್ಲಿರಬೇಕಾದರೆ ಓವೈಸಿ ತಮ್ಮದೇ ಮುಸ್ಲಿಮರನ್ನೂ ವಿರೋಧಿಸುತ್ತಾರೆ, ಐಸಿಸ್‌ ಶಂಕಿತ ಉಗ್ರನ ಪರವಾಗಿಯಾದರೂ ವಾದ ಮಾಡುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದಿಲ್ಲ.

ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ಓವೈಸಿ ವಿರೋಧ ಮಾಡುತ್ತಿರುವುದಕ್ಕೆ ಕಾರಣ ಇಷ್ಟೇ: ಮುಂದೆ ಚುನಾವಣೆ ಬರುತ್ತಿದೆ. ಈಗಲೇ ಮಾತಾಡಿ ವಿವಾದ ಬಗೆಹರಿಸಿದರೆ, ಮೈಕ್‌ನಲ್ಲಿ ಕೂಗುವುದಕ್ಕೆ, ಮೋದಿಗೆ ಬಯ್ಯುವುದಕ್ಕೆ ವಿಷಯ ಇರುವುದಿಲ್ಲ. ಅದೇ ಕೋರ್ಟ್‌ ಇದನ್ನು ತೆಗೆದುಕೊಂಡರೆ, ಖಂಡಿತವಾಗಿಯೂ ಒಂದು ವರ್ಷದಲ್ಲಿ ಸಮಸ್ಯೆ ಬಗೆಹರಿಯುವುದಿಲ್ಲ. ಮತ್ತೆ ಬಾಬ್ರಿ ಮಸೀದಿ ಕಟ್ಟುತ್ತೇವೆ ಎಂದು ಕೂಗಿಕೊಂಡಾದರೂ ಮುಸ್ಲಿಮರ ವೋಟು ಗಿಟ್ಟಿಸೋಣ ಎಂಬುದು ಓವೈಸಿ ದುರಾಲೋಚನೆ. ನೋಡಿ, ಇಂಥ ಓವೈಸಿಯನ್ನು ಬೆಂಬಲಿಸಿ ಬಕ್ರಾ ಆಗುತ್ತೀರೋ, ಬ್ರಿಲಿಯಂಟ್‌ ಆಗುತ್ತೀರೋ ನೀವೇ ನಿರ್ಧರಿಸಿ.

– ಚಿರಂಜೀವಿ ಭಟ್‌

Tags

Related Articles

Close