ಅಂಕಣದೇಶಪ್ರಚಲಿತ

ರವೀನಾ ಟಂಡನ್ ಕೈಲಿ ಒಂದು ಬಾರಿ ಮುಖಕ್ಕುಗಿಸಿಕೊಂಡ ನಂತರವೂ ಮತ್ತೆ ಮತ್ತೆ ಉಗಿಸಿಕೊಳ್ಳೋಕೆ ಸೆಕ್ಯುಲರ್ ಬ್ರಿಗೇಡ್’ನವರಿಗೆ ಅದೇನ್ ಆಸೆಯೋ?

ಭಾರತದಲ್ಲಿ ಈಗೀಗ ಅದ್ಯಾಕೋ ಅಲ್ಪಸಂಖ್ಯಾತರಿಗೆ ಅಸುರಕ್ಷತೆಯ ಭಾವನೆ ಕಾಡುತ್ತಿದೆಯೆಂದು ಕೆಲ ದಿನಗಳ ಹಿಂದೆ ನಿಕಟಪೂರ್ವ ಉಪರಾಷ್ಟ್ರಪತಿ ಹಮೀದ್
ಅನ್ಸಾರಿ ಹೇಳಿದ್ದು ತಮಗೆಲ್ಲ ನೆನಪಿದೆ ಅಂದುಕೊಳ್ಳುತ್ತೇನೆ.

10 ವರ್ಷ ಈ ದೇಶದ ಉಪರಾಷ್ಟ್ರಪತಿಯಾಗಿದ್ದ ಮುಸಲ್ಮಾನರು ಈ ದೇಶದಲ್ಲಿ ಅಸುರಕ್ಷತೆಯನ್ನ ಎದುರಿಸುತ್ತಿದ್ದಾರಂತ ಹಮೀದ್ ಅನ್ಸಾರಿಗೆ ಅನ್ನಿಸಲಿಲ್ಲ, ಪಾಪ
ಉಪರಾಷ್ಟ್ರಪತಿ ಹುದ್ದೆಯಿಂದ ಕೆಳಗಳಿಯುವಾಗ ಮುಂದೆ ನನ್ನ ರಾಜಕೀಯ ಭವಿಷ್ಯದ ಗತಿಯೇನು ಅನ್ನೋದರ ಬಗ್ಗೆ ಯೋಚಿಸಿ ಆ ತರಹದ Intolerance
statement ಕೊಟ್ಟಿದ್ದನೇನೋ ಪುಣ್ಯಾತ್ಮ.

ಅದೇ 9 ವರ್ಷ ತಾನು ಮಾಡಿಲ್ಲದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಕರ್ನಲ್ ಪುರೋಹಿತರು ಮಾತ್ರ ಮೀಡಿಯಾದವರು ಕೇಳಿದ ಎಲ್ಲ ಪ್ರಶ್ನೆಗಳಿಗೂ
ಕೊಟ್ಟ ಒಂದೇ ಉತ್ತರವೇನು ಗೊತ್ತಾ? “Love your Country, Jai Hind”

ಹಮೀದ್ ಅನ್ಸಾರಿಗೂ ಕರ್ನಲ್ ಪುರೋಹಿತರಿಗೂ ಇರೋ ವ್ಯತ್ಯಾಸ ಏನು ಅನ್ನೋದನ್ನ ನೀವೇ ನಿರ್ಧರಿಸಿ.!

ಅದೇನೋ ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನ ತೆಗಳುವುದು, ಅಲ್ಪಸಂಖ್ಯಾತರನ್ನ ಹೊಗಳುವುದು ಅಥವ ಸಮರ್ಥನೆ ಮಾಡಿಕೊಳ್ಳೋದು ತಮ್ಮ
ಸೆಕ್ಯೂಲರಿಸಮ್ಮಿನ ಕೀರಿಟಕ್ಕೊಂದು ಗರಿ ಅಂತ ಸೋ ಕಾಲ್ಡ್ ಸೆಕ್ಯೂಲರ್ ಬ್ರಿಗೇಡ್ ನವರು ಅಂದುಕೊಂಡಿದಾರೆ ಅನ್ಸತ್ತೆ.

ಕೆಲ ತಿಂಗಳ ಹಿಂದೆ ಬಾಲಿವುಡ್’ನ ಖ್ಯಾತ ನಟಿ ತನ್ನ ಟ್ವಿಟ್ಟರ್’ನಲ್ಲಿ ರಾಮಾಯಣದ ಕುರಿತು ಲಿಂಕ್ ಒಂದನ್ನು ಶೇರ್ ಮಾಡಿ ಅದಕ್ಕೆ “ಮೊಘಲರು / ಬ್ರಿಟಿಷರು ಹೇಗೆ ನಮ್ಮ ಇತಿಹಾಸ ತಿರುಚೋಕೆ ಪ್ರಯತ್ನಪಟ್ಟರು ಹಾಗೆಯೇ ಇಂದು ಕೂಡ ನಡಿತಿದೆ” ನಾವು ನಮ್ಮ ಧರ್ಮಗ್ರಂಥಗಳನ್ನ ಅಧ್ಯಯನ ಮಾಡುವುದು ಅವಶ್ಯವಾಗಿದೆ ಎಂಬರ್ಥದಲ್ಲಿ ಟ್ಟೀಟ್ ಮಾಡಿದ್ದರು.

ರಾಮಾಯಣ ಹಿಂದೂ ಧರ್ಮದ ಶ್ರೇಷ್ಟ ಗ್ರಂಥವಲ್ಲವೇ, ಒಬ್ಬ ಫೇಮಸ್ ನಟಿ ರಾಮಾಯಣದ ಬಗ್ಗೆ ಟ್ಟೀಟ್ ಮಾಡದ್ರೆ ಎಲ್ಲಿ ಆಕೆಗಿರೋ ಫಾಲೋವರಗಳೆಲ್ಲ
ರಾಮಾಯಣ ಓದಿ ಹಿಂದುತ್ವದ ಒಲವು ಬೆಳೆಸಿಕೊಳ್ಳೋಂಗಿದಾರೋ ಅಂತ ಸಂಯುಕ್ತಾ ಬಸು ಎಂಬ ಸೆಕ್ಯೂಲರ್ ಬ್ರಿಗೇಡ್ ನ ಎಡಬಿಡಂಗಿ ರವೀನಾ ಟಂಡನ್’ಗೆ ರಿಪ್ಲೈ ಏನಂತ ಕೊಡ್ತಾಳೆ ಗೊತ್ತಾ?

“ಯಾಕೋ ರವೀನಾ ಟಂಡನ್ ಎರಡನೆ ಪರೇಶ್ ರಾವಲ್ ಆಗೋಕೆ ಹೋಗ್ತಿದಾರೆ ಅನ್ನಸ್ತಿದೆ, ತಲೆ ಉಪಯೋಗಿಸೋದನ್ನ ಕಲಿಬೇಕು”

ಇದಕ್ಕೆ ಟ್ವಿಟ್ಟರನಲ್ಲಿ ಸಂಯುಕ್ತಾ ಬಸು ಎಂಬ ಆ ಢೋಂಗಿ ಸೆಕ್ಯೂಲರ್ ಬ್ರಿಗೇಡ್ ಆಂಟಿಗೇ ಚೆನ್ನಾಗೇ ಬೆಂಡೆತ್ತಿ ಟ್ಟಿಟ್ಟಾರತಿ ಬೆಳಗಿದ್ದಾರೆ ಜನ.

ರವೀನಾ ಟಂಡನ್ ತಾನೊಬ್ಬ ಹಿಂದೂ ಅಂತ ಗರ್ವದಿಂದ ಹೇಳಿಕೊಂಡಿದ್ದಕ್ಕೆ ಉರ್ಕೊಂಡು ಬೀಳ್ತಿರೋ ಸೆಕ್ಯೂಲರ್ ಬ್ರಿಗೇಡ್’ನವರು ಕಳೆದ ವರ್ಷ ಖಾಸಗಿ ವಾಹಿನಿಯ ಟಿವಿ ಡಿಬೇಟಿನಲ್ಲೂ ರವೀನಾರ ದೇಶಪ್ರೇಮದ ಮೇಲೆ ಪ್ರಶ್ನೆಯೆತ್ತಿ ಆಕೆಯ ಕೋಪಕ್ಕೆ ತುತ್ತಾಗಿ ಇಂಗು ತಿಂದ ಮಂಗನಂತಾಗಿದ್ದರು.

ಡೋಂಗಿ ಸೆಕ್ಯೂಲರ್, ಬುದ್ಧಿಜೀವಿಗಳಿಗೆ ಜೀ ನ್ಯೂಸ್’ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ನೀರಿಳಿಸಿಬಿಟ್ಟಿದ್ರು.

ಆ ಡಿಬೇಟಿನ ಕೆಲ ತುಣುಕುಗಳು ಹೀಗಿವೆ, ನೀವೂ ಕೇಳಿ!

ಡಿಬೇಟ್ ಶುರುವಾಗುತ್ತ, ಕಾಂಗ್ರೆಸಿನ್ ಮಹಿಳಾ ಪ್ರವಕ್ತೆಯೊಬ್ಬಳು ಮಾತಾಡ್ತಾ ರವಿನಾ ಟಂಡನ್’ಗೆ ಹೇಳ್ತಿದ್ಳು “ಓಹ್ ನಿಮ್ ದೇಶದಲ್ಲಿ ನೀವೇ ಇರಿ” ಅಂತ ಅದಕ್ಕೆ ರವಿನಾ ಟಂಡನ್ ಉತ್ತರ “Get lost from this country if you don’t feel that it is your country (ಈ ದೇಶ ನಿನ್ನದಲ್ಲ ಅಂತ
ನಿನಗನಿಸಿದರೆ ಮೊದಲು ಈ ದೇಶ ಬಿಟ್ಟು ಹೋಗು)”

ವಾಹ್ ವಾಹ್ ರವಿನಾ ಟಂಡನ್’ಜಿ ಹ್ಯಾಟ್ಸಾಫ್ ಟು ಯೂ!!

ರವೀನಾ ಟಂಡನ್’ರು ಈ ಡೋಂಗಿ ಜಾತ್ಯಾತೀತವಾದಿ, ಬುದ್ಧಿಜೀವಿಗಳಿಗೆ, ಲೇಖಕರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸಾತಿ ಮೇಲೆ ಕೆಲ ಪ್ರಶ್ನೆಗಳನ್ನ ಕೇಳದ್ರು, ಅವು ಹೇಗಿವೆ ನೀವೇ ನೋಡಿ:

1. ನಾನು ಒಬ್ಬ ಕಲಾವಿದೆಯಾಗಿ ನನ್ನ ದೇಶವನ್ನ ಮಹಾನ್ ಅಂತ ತಿಳೀತಿನಿ, ನಾನು ಯಾವುದೇ ಪಾಲಿಟಿಕ್ಸ್ ಮಾತಾಡಲ್ಲ. ಅಮೀರ್ ಖಾನ್’ನಂತವರು “ಹಿಂದೂ ಧರ್ಮದ ವಿರುದ್ಧ ವಿಡಂಬನೆ ಮಾಡಿದ ‘ಪಿಕೆ’ ಚಿತ್ರವನ್ನ ನಮ್ ಜನ ಹಿಟ್ ಮಾಡ್ತಾರೆ ಅಂದ್ರೆ ಹಿಂದುಗಳು ಅಸಹಿಷ್ಣು ಅಂತೀರಾ? ಹಿಂದುಗಳು ನಿಜವಾಗಲೂ ಅಸಹಿಷ್ಣುಗಳಾಗಿದ್ದರೆ ಆ ಚಿತ್ರ ಹಿಟ್ ಆಗ್ತಿತ್ತಾ?”

2. ಸನ್ 1970ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್’ಗೆ ಒಂದು ಪಾರ್ಟಿ(ಕಾಂಗ್ರೆಸ್)ಯವರು ಎಲೆಕ್ಷನ್ ಕ್ಯಾಂಪೆನ್ ಕರೆದಾಗ ಅವರು ಹೋಗ್ಲಿಲ್ಲ ಅಂತ ಅವರ ಹಾಡುಗಳನ್ನ ಬ್ಯಾನ್ ಮಾಡಿದ್ರಲ್ಲ ಅವಾಗ ಯಾರಾದರೂ ಫಿಲ್ಮ್ ಮೇಕರ್ಸ್, ಬುದ್ಧಿಜೀವಿಗಳು ನಿಮ್ ಅವಾರ್ಡ್ ವಾಪಸ್ ಮಾಡದ್ರಾ?

3. ನಿಮ್ಮದೇ ಸಹೋದ್ಯೋಗಿ ಪತ್ರಕರ್ತ, ಸಾಹಿತಿ, ಚಿತ್ರಕಲಾ ವ್ಯಕ್ತಿಗಳಾದ ಸಲ್ಮಾನ್ ರಶ್ದಿ, ತಸ್ಲೀಮಾ ನಸ್ರೀನ್, ಎಂ.ಎಫ್.ಹುಸೇನ್ ಪುಸ್ತಕ, ಬರಹ, ಲೇಖನಗಳನ್ನ ಬ್ಯಾನ್ ಮಾಡಿ ಅವರನ್ನ ದೇಶ ಬಿಟ್ಟು ಓಡಿಸ್ದಾಗ ಯಾರಾದರೂ ಅವಾರ್ಡ್ ರಿಟರ್ನ್ ಮಾಡದ್ರಾ?

4. ಅಮೇರಿಕಾದಲ್ಲಿ ಜನಾಂಗೀಯ ಹತ್ಯೆಗಳನ್ನ ದಿನ ಬೆಳಗಾದರೆ ನೋಡೋ ಅಮೇರಿಕನ್ನರೂ ನಿಮ್ಮ ಹಾಗೆ ಪ್ರಶಸ್ತಿ ವಾಪಸ್ ಮಾಡಿ ವಿಶ್ವಾದ್ಯಂತ “ಅಮೇರಿಕ
ಅಸಹಿಷ್ಣು ದೇಶ” ಅಂತ ಒಬಾಮಾ ವಿರುದ್ಧ ಪ್ರೊಟೆಸ್ಟ್ ಮಾಡದ್ರಾ?

5. ಫ್ರಾನ್ಸ್’ನಲ್ಲಿ ಪ್ರವಾದಿ ಮೊಹಮ್ಮದನ ಚಿತ್ರ ಬಿಡಿಸಿದ್ದಕ್ಕೆ ಜಿಹಾದಿಗಳಿಂದ “ಚಾರ್ಲಿ ಹೆಬ್ಡೋ” ಮ್ಯಾಗ್’ಜೀನ್’ನ 12 ಜನ ವ್ಯಂಗ ಚಿತ್ರಕಾರರ ಮರ್ಡರ್ ಆಯ್ತಲ್ಲ ಅವಾಗ ಫ್ರಾನ್ಸ್ ದೇಶದ ಜನ ಕೂಡ ಜಗತ್ತಿನಲ್ಲೇ ಫ್ರಾನ್ಸ್ ಅಸಹಿಷ್ಣು ರಾಷ್ಟ್ರ ಅಂತ ಅವಾರ್ಡ್ಸ್ ರಿಟರ್ನ್ ಮಾಡದ್ರಾ?

6. ಎ.ಆರ್.ರೆಹಮಾನ್ ಒಂದು ಪ್ರವಾದಿ ಮಹಮ್ಮದನ ಚಿತ್ರಕ್ಕೆ ಸಂಗೀತ ನೀಡಿದರು ಅಂತ ಅವರ ಮುಸಲ್ಮಾನರು ಫತ್ವಾ ಹೊರಡಿಸಿದಾಗ ಯಾವ ಸೋ ಕಾಲ್ಡ್
ಫಿಲಮ್ ಮೇಕರ್ಸ್, ವ್ರೈಟರ್ಸ್, ಬುದ್ಧಿಜೀವಿಗಳು, ಲೇಖಕರು ಅವಾರ್ಡ್ ರಿಟರ್ನ್ ಮಾಡದ್ರಿ?

7. ದೇಶದಲ್ಲಿ ಅಸಹಿಷ್ಣುತೆ, ಕೊಲೆ ಸುಲಿಗಗಳೇನು ಈ ವರ್ಷವೇ ನಡೆದಿದೆ ಅನ್ನೋ ಹಾಗೆ ಬೊಂಬ್ಡಾ ಹೊಡ್ಕೊತಿರೋದು ಯಾಕೆ? 1947ರಿಂದ ಇವತ್ತಿನವರೆಗೆ ಇಂತಹ ಘಟನೆಗಳು ನಡಿತಾನೆ ಬಂದಿವೆ ಇವಾಗ ಸಡನ್ ಆಗಿ ನೀವು ದೇಶದಲ್ಲಿ ಇಂಟಾಲರೆನ್ಸ್ ಹೆಚ್ಚಾಗಿದೆ ಅಂತ ಅವಾರ್ಡ್ ರಿಟರ್ನ್ ಯಾಕ್ ಮಾಡ್ತಿದೀರಾ?

8. ಅಂಕಿ ಅಂಶಗಳ ಪ್ರಕಾರ ನೋಡದ್ರೆ ವರ್ಷದಿಂದ ವರ್ಷಕ್ಕೆ ಕೋಮುಗಲಭೆ, ಸಾವು ನೋವು ಭಾರತದಲ್ಲಿ ಕಮ್ಮಿ ಆಗ್ತಿದೆ, ಅಂದ್ಮೇಲೆ ನೀವು ಅವಾರ್ಡ್ ರಿಟರ್ನ್
ಮಾಡ್ತಿರೋ ಉದ್ದೇಶವದರೂ ಏನೂಂತ?

9. ನಮ್ ದೇಶ ಹಿಂದೆ ಯಾವತ್ತೂ ಕಂಡರಿಯದಂತೆ ಇಡೀ ಜಗತ್ತಿನ ಗಮನ ಸೆಳೆದು ಮುನ್ನುಗ್ಗುತ್ತಿದೆ ಅಂಥದ್ದರಲ್ಲಿ ನಮ್ ದೇಶ ಕೋಮುವಾದಿ ದೇಶ ಅಂತ ನೀವು ಅವಾರ್ಡ್ ರಿಟರ್ನ್ ಮಾಡಿ ನಮ್ ದೇಶದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾಕ್ ಕಳೀತಿದಿರಾ?

10. ನಮ್ ದೇಶ ಸಹಿಷ್ಣು ರಾಷ್ಟ್ರವಾಗಿದ್ದಿದ್ದಕ್ಕೆ ಇಷ್ಟು ವರ್ಷ ಗುಲಾಮಿ ಮಾಡ್ತಾ ಬಂದಿದ್ದು, ನಾವು ಭಾರತೀಯರೇನಾದ್ರು ಅಸಹಿಷ್ಣು ಇಂಟಾಲರೆಂಟ್ ಆಗಿದ್ರೆ ನಾವು ಯಾವನ ಕೈಯಿಂದನೂ ಗುಲಾಮಿ ಮಾಡಸ್ಕೊಳ್ತಿರಲಿಲ್ಲ.

“Finally as a Indian citizen I proud myself to call myself and Indians as very tolerant, Mera Bharat Mahan” ಅಂದ್ರು!

ರಿಯಲಿ ಹ್ಯಾಟ್ಸಾಫ್ ರವೀನಾ ಜಿ!!

ರವೀನಾ ಟಂಡನ್’ರವರ ಈ ಡಿಬೇಟ್’ನಲ್ಲಿ ಮುಖಕ್ಕುಗಿಸಿಕೊಂಡ ನಂತರವೂ ಬುದ್ಧಿ ಬರದ ಢೋಂಗಿ ಸೆಕ್ಯೂಲರ್’ಗಳು ಟ್ವಿಟ್ಟರ್’ನಲ್ಲಿ ಮತ್ತೆ ರವೀನಾರನ್ನ ಕೆಣಕೋಕೆ ಹೋಗಿ ಈ ಬಾರಿ ರವೀನಾ ಟಂಡನ್ ಟ್ಟಿಟ್ಟರ್ ಫಾಲೋವರ್’ಗಳಿಂದ ಮುಖಭಂಗಕ್ಕೊಳಗಾಗಿದ್ದಾರೆ.

– Vinod Hindu Nationalist

Tags

Related Articles

Close