ಪ್ರಚಲಿತ

ರಾಜಕೀಯ ನಿವೃತ್ತಿಯ ಸವಾಲೆಸೆದ ಬಿ.ಎಸ್.ವೈ.! ಅಲ್ಲಾಹುವಿನ ಶಾಪವೆಂದ ಕೋಟ.! ಮೈತ್ರಿ ಸರಕಾರ ವಿರುದ್ಧ ತಿರುಗಿ ಬಿದ್ದ ಬಿಜೆಪಿ ನಾಯಕರು.!

ರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರಕಾರ ವಿರುದ್ಧ ಭಾರತೀಯ ಜನತಾ ಪಕ್ಷದ ನಾಯಕರು ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್-ಜನತಾ ದಳ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರ ಆರೋಪಗಳಿಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಜನತಾ ಪಕ್ಷದ ನಾಯಕರು ಕುಮಾರ ಸ್ವಾಮಿಗೆ ಇಕ್ಕಟ್ಟು ತಂದಿಟ್ಟಿದ್ದಾರೆ.!

ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರೇ ವಿಜಯೇಂದ್ರ?

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು “ನಮ್ಮ ಸರಕಾರವನ್ನು ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರ ಮಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ” ಎಂದು ಆರೋಪಿಸಿದ್ದರು. ಯಾವಾಗ ಇಂತಹಾ ಆರೋಪಗಳು ಮುಖ್ಯಮಂತ್ರಿಯಿಂದ ಬಂತೋ ಆ ಕೂಡಲೇ ಬಿಜೆಪಿ ನಾಯಕರು ಸಿಎಂ ವಿರುದ್ಧ ಗರಂ ಆಗಿದ್ದಾರೆ. ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿ ಎಂದು ಹೇಳಿದ್ದಾರೆ. ಬಿ.ಎಸ್.ವೈ., ವಿಜಯೇಂದ್ರ, ಅರವಿಂದ ಲಿಂಬಾವಳಿ ಸೇರಿದಂತೆ ಘಟಾನುಘಟಿ ನಾಯಕರುಗಳೇ ಸಿಎಂ ವಿರುದ್ಧ ಮುಗಿಬಿದ್ದಿದ್ದಾರೆ. ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಸಿಎಂ ಹೆದರಿಕೊಳ್ಳೋದ್ಯಾಕೆ? ತಪ್ಪು ಮಾಡಿದ್ರೆ ತಾನೇ ಭಯ ಪಡೋದು! ಎಂದು ಹೇಳಿದ್ದಾರೆ.

Image result for kumaraswami

ರಾಜಕೀಯ ನಿವೃತ್ತಿ..!

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿರುವ ಈ ಆರೋಪದ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಆರೋಪ ಸಾಭೀತಾದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಸುಳ್ಳು ಆರೋಪ ಹೊರಿಸಿ ನಮ್ಮ ಮೇಲೆ ಅಪವಾದವನ್ನು ಹೊರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲೂ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.

Image result for bsy

ಸಿಎಂ ಹೇಳಿದ್ದು ಸುಳ್ಳು-ಐಟಿ ಇಲಾಖೆ.!

ಇನ್ನು ಕುಮಾರಸ್ವಾಮಿಯವರ ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ ಇದೊಂದು ಸತ್ಯಾಂಶವಿಲ್ಲದ ಹೇಳಿಕೆಯಾಗಿದೆ ಎಂದಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗೋವಾ, ಕರ್ನಾಟಕ ಐಟಿ ಆಯುಕ್ತರು “ಕಳೆದ 2 ವರ್ಷದಿಂದ ರಾಜಕೀಯ ಹಸ್ತಕ್ಷೇಪವಿಲ್ಲದೆ ಪಾರದರ್ಶಕ ಆಡಳಿತವನ್ನು ನೀಡುತ್ತಾ ಬಂದಿದ್ದೇವೆ. ರಾಜಕೀಯ ನಾಯಕರ ಹಾಗೂ ನಮ್ಮ ಭೇಟಿ ಆಧಾರ ರಹಿತ” ಎಂದು ಹೇಳಿದ್ದಾರೆ.

ಅಲ್ಲಾಹುವಿನ ಶಾಪ..!

ಒಂದು ಕಡೆ ಐಟಿ ಸಮರವಾದರೆ ಮತ್ತೊಂದೆಡೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ವಕ್ಫ್ ಇಲಾಖೆಯಲ್ಲಿ ನಡೆದಿದ್ದ ಭಾರೀ ಅವ್ಯವಹಾರವನ್ನು ಬಯಲಿಗೆಳೆದು ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಮೈತ್ರಿ ಸರಕಾರ ಉರುಳಿದರೆ ಅದಕ್ಕೆ ಬಿಜೆಪಿ ಕಾರಣವಲ್ಲ, ಮೈತ್ರಿ ಸರಕಾರ ಉರುಳಿದರೆ ಅದಕ್ಕೆ ಅಲ್ಲಾಹುವಿನ ಶಾಪವೇ ಕಾರಣ. ಮುಸ್ಲಿಮರಿಗೆ ಈ ಮೈತ್ರಿ ಸರಕಾರ ಮಾಡಿದ ಮೋಸವೇ ಮೈತ್ರಿ ಸರಕಾರಕ್ಕೆ ಕಂಟಕವಾಗುತ್ತದೆ” ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Image result for kota shrinivas poojari press meet

ಒಟ್ಟಾರೆ ಮೈತ್ರಿ ಸರಕಾರಕ್ಕೆ ಉಂಟಾಗಿದ್ದ ಕಂಟಕ ಇದೀಗ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಒಂದೆಡೆ ಭಾರತೀಯ ಜನತಾ ಪಕ್ಷದ ನಾಯಕರು ಮೈತ್ರಿ ಸರಕಾರವನ್ನು ಕೆಳಗಿಳಿಸಲು ಶತ ಪ್ರಯತ್ನ ನಡೆಸುತ್ತಿದ್ದರೆ ಇದಕ್ಕೆ ಸ್ವತಃ ಕಾಂಗ್ರೆಸ್ ನಾಯಕರೇ ತುಪ್ಪ ಸುರಿಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಒಳಜಗಳದಿಂದ ಮೈತ್ರಿ ಸರಕಾರ ಉರುಳಲೂಬಹುದು ಎನ್ನಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close