ಅಂಕಣ

ರಾಜಸ್ಥಾನದ ಜೈಪುರನಲ್ಲಿ ‘ಪದ್ಮಾವತಿ’ ಚಿತ್ರದ ಬ್ಯಾನರ್’ಗೆ ಬೆಂಕಿ ಹಾಕಿದ್ಯಾಕೆ? ಯಾರೀ ರಾಣಿ ಪದ್ಮಿನಿ ಅಥವ ಪದ್ಮಾವತಿ?!

ಇಂದು ರಾಜಸ್ಥಾನದ ಜೈಪುರನಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಹಿಂದಿ ಚಿತ್ರದ ಪೋಸ್ಟರ್’ಗಳನ್ನ ರಜಪೂತ್ ಕರಣಿ ಸೇನಾ ಸುಟ್ಟು ಹಾಕಿದ್ದಾರೆ.

ಇದೇ ಕರಣಿ ಸೇನಾ ಕೆಲ ತಿಂಗಳ ಹಿಂದೆ ಅಂದರೆ ಜನೇವರಿಯಲ್ಲಿ “ಫೇಮಸ್” ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಯನ್ನ ರಾಜಸ್ಥಾನದಲ್ಲಿ ಎಳೆದಾಡಿ “ರಜಪೂತ ಕರಣಿ ಸೇನಾ” ಕಾರ್ಯಕರ್ತರು ಥಳಿಸಿದ್ದಾರಂತ ಸುದ್ದಿ ಬಂದಿತ್ತು, ಹಾಗೆ ಮಾಡಲು ಕಾರಣವೂ ಇತ್ತು, ‘ಪದ್ಮಾವತಿ’ ಚಿತ್ರದ ಶೂಟಿಂಗ್ ರಾಜಸ್ಥಾನದ ಜೈಪುರನಲ್ಲಿ ನಡೆದಿತ್ತು, ಚಿತ್ರದಲ್ಲಿ ರಣಬೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ & ದೀಪಿಕಾ ಪಡುಕೋಣೆ ರಾಣಿ ಪದ್ಮಿನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಶೂಟಿಂಗ್ ಸೆಟ್’ನಲ್ಲಿ ರಣಬೀರ್ ಸಿಂಗ್(ಅಲ್ಲಾವುದ್ದೀನ್ ಖಿಲ್ಜಿ) ಹಾಗು ದೀಪಿಕಾ ಪಡುಕೋಣೆ(ರಾಣಿ ಪದ್ಮಿನಿ) ನಡುವೆ ಕಿಸ್ಸಿಂಗ್ ಸೀನ್
ನಡೀಬೇಕಾದ್ರೆ, ರಜಪೂತ್ ಕರಣಿ ಸೇನಾ ಕಾರ್ಯಕರ್ತರು ಸಂಜಯ್ ಲೀಲಾ ಬನ್ಸಾಲಿ ಮೇಲೆ ದಾಳಿ ನಡೆಸಿದ್ದರು.

ಯಾಕೆ ಈ ದಾಳಿಯಾಯ್ತು? ಯಾರೀ ರಾಣಿ ಪದ್ಮಿನಿ? ಯಾರೀ ಅಲ್ಲಾವುದ್ದೀನ್ ಖಿಲ್ಜಿ? ಯಾಕೆ ರಜಪೂತ್ ಕರಣಿ ಸೇನಾ ಏಕಾಏಕಿ ದಾಳಿ ಮಾಡಿದ್ದು?

ಅದನ್ನ ತಿಳಿದುಕೊಳ್ಳೋಕೆ ರಾಣಿ ಪದ್ಮಿನಿಯ ಕಥೆ ತಿಳಿದುಕೊಳ್ಳಲೇಬೇಕು

ಬನ್ನಿ ರಾಣಿ ಪದ್ಮಿನಿಯೆಂಬ ಧೀರ ದಿಟ್ಟ ಪರಾಕ್ರಮಿ ಮಹಿಳೆಯ ಬಗ್ಗೆ ತಿಳಿದುಕೊಳ್ಳೋಣ.

ಪದ್ಮಿನಿ 13ನೇ ಶತಮಾನದ ರಾಜಸ್ಥಾನದ ‘ಮೇವಾಡ್’ ಸಂಸ್ಥಾನ(ಈಗಿನ ಚಿತ್ತೋಡಗಢ, ರಾಜಸ್ಥಾನ)ದ ರಾಜ ರಾವಲ್ ರತನ್ ಸಿಂಗ ನ ರಾಣಿಯಾಗಿದ್ದಳು.

ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ ಹಾಗು ಸಲಿಂಗಕಾಮಿಯೂ ಆಗಿದ್ದ.

ಆತನಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಗೋ ತಿಳಿದು ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳಬೇಕೆಂದು ಆಸೆಯಾದಾಗ ಆತ ಮಾಡಿದ ಕುತಂತ್ರವೆಂದರೆ ಆತ ಮೇವಾಡಕ್ಕೆ ಪತ್ರವೊಂದನ್ನ ಬರೀತಾನೆ.

“ರಕ್ಷಾ ಬಂಧನ ಸದ್ಯದಲ್ಲೇ ಇರೋದ್ರಿಂದ ನಾನು ನಿನ್ನ(ರಾವಲ್ ರತನ ಸಿಂಗ್) ಹೆಂಡತಿ(ರಾಣಿ ಪದ್ಮಿನಿ)ಯನ್ನ ತಂಗಿಯಂತೆ ಸ್ವೀಕರಿಸಿದ್ದೇನೆ, ರಕ್ಷಾಬಂಧನಕ್ಕೆ ನಿನ್ನ ರಾಜ್ಯಕ್ಕೆ ಬಂದು ನಿನ್ನ ಹೆಂಡತಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ”

ಇದನ್ನ ಓದಿದ ರಾವಲ್ ಸಿಂಗ್ “ಸರಿ ಆಯಿತು ಆದರೆ ಒಂದು ಷರತ್ತು, ನನ್ನ ಹೆಂಡತಿ ಮುಖತಃ ನಿನ್ನ ಕೈಗೆ ರಾಖಿ ಕಟ್ಟಲ್ಲ ಆದರೆ ಆಕೆ ಅದಕ್ಕೆ ಪೂಜೆ ಮಾಡಿ ಇಟ್ಟಿರುತ್ತಾಳೆ ಅದನ್ನ ನಿನ್ನ ಕೈಗೆ ನಮ್ಮ ರಾಣಿಯ ಸಖಿಯರು ಕಟ್ತಾರೆ” ಅಂತ ವಾಪಸ್ ಪತ್ರ ಬರೀತಾನೆ.

ಇದಕ್ಕೊಪ್ಪಿದ ಖಿಲ್ಜಿ ದೆಹಲಿಯಿಂದ ಹೊರಟು ಗುಪ್ತವಾಗಿ ತನ್ನ ದೊಡ್ಡ ಸೈನ್ಯವನ್ನ ಚಿತ್ತೋಡಗಢದಲ್ಲಿ ಬಿಡಾರ ಹೂಡಿಸಿ ರಾವಲ್ ಸಿಂಗನ ಆಸ್ಥಾನಕ್ಕೆ ಒಂದಿಬ್ಬರು ಸಂಗಡಿಗರ ಜೊತೆ ಬರ್ತಾನೆ, ಬಂದ ಅತಿಥಿಗೆ ಆದರ ಆತಿಥ್ಯಗಳೂ ಸಿಕ್ಕವು, ಆತನ ಕೈಗೆ ರಾಖಿ ಕಟ್ಟಲು ಬಂದ ರಾಣಿಯ ಸಖಿಯನ್ನ ಕಂಡ ಅಲ್ಲಾವುದ್ದೀನ್ ಹೇಳ್ತಾನೆ “ನಾನು ಒಂದೇ ಒಂದು ಬಾರಿ ನನ್ನ ತಂಗಿ ಸಮಾನಳಾದ ಪದ್ಮಿನಿಯನ್ನ ನೋಡಬೇಕಲ್ಲ?”

ಇದಕ್ಕೆ ರಾಜ ಹೇಳ್ತಾನೆ “ಸರಿ ಆಯಿತು ಆದರೆ ಒಂದು ಷರತ್ತು, ರಾಣಿ ಮುಖತಃ ನಿಮಗೆ ತನ್ನ ಮುಖ ತೋರಿಸಲ್ಲ, ಆಕೆ ಆಕೆಯ ಅರಮನೆಯ ಹೊರಾಂಗಣದಲ್ಲಿ ನಿಂತಿರುತ್ತಾಳೆ, ಆಕೆಯ ಪ್ರತಿಬಿಂಬ ಒಂದು ರೂಮಿನ ಕನ್ನಡಿಯಲ್ಲಿ ಕಾಣುತ್ತೆ, ಆ ಪ್ರತಿಬಿಂಬದಲ್ಲಿ ನೀವು ಆಕೆಯ ಮುಖವನ್ನು ನೋಡಬಹುದು”

ಇದಕ್ಕೊಪ್ಪಿದ ಖಿಲ್ಜಿ “ಆಯ್ತು ಸರಿ” ಅಂತಾನೆ.

ಸರಿ ರಾಣಿ ಪದ್ಮಿನಿ ತನ್ನ ಮಹಲಿನ ಸರೋವರದ ಹತ್ತಿರ ಬಂದು ನಿಲ್ತಾಳೆ, ಅವಳ ಪ್ರತಿಬಿಂಬ ಆ ಕೊಠಡಿಯ ಕನ್ನಡಿಯ ಮೇಲೆ ಕಂಡ ಖಿಲ್ಜಿಗೆ ಆಕೆಯ ಸೌಂದರ್ಯ ದಂಗುಬಡಿಸಿತ್ತು, ಹೇಗಾದರೂ ಮಾಡಿ ಈಕೆಯನ್ನ ತನ್ನ ಪಟ್ಟದರಸಿ ಮಾಡಿಕೊಳ್ಳೇಬೇಕು ಅಂತ ಖಿಲ್ಜಿ ತೀರ್ಮಾನಿಸಿ ಒಮ್ಮಿಂದೊಮ್ಮೆಲೇ ರಾಜನ ಮೇಲೆ ದಾಳಿ ನಡೆಸಿ ರಾವಲ್ ಸಿಂಗನನನ್ನ ಯುದ್ಧಕೈದಿಯಾಗಿ ದೆಹಲಿಗೆ ಕರೆದುಕೊಂಡು ಹೋಗ್ತಾನೆ ಆದರೆ ರಾಣಿ ಪದ್ಮಿನಿ ಆತನ ಕೈಗೆ ಸಿಗಲ್ಲ.

(ಆದರೆ ರಜಪೂತ ಇತಿಹಾಸಕಾರರ ಪ್ರಕಾರ ಅಲ್ಲಿ ಬಂದು ಖಿಲ್ಜಿಗೆ ಮುಖ ತೋರಿಸಿದ್ದು ರಾಣಿ ಪದ್ಮಿನಿಯದ್ದಲ್ಲ, ಬದಲಾಗಿ ರಾಣಿಯ ಸಖಿ ಅಲ್ಲಿ ಬಂದು ನಿಂತದ್ದು, ಆದರೆ ಖಿಲ್ಜಿ ಒಂದು ಬಾರಿಯೂ ರಾಣಿ ಪದ್ಮಿನಿಯ ಮುಖ ನೋಡಿರದ ಕಾರಣ ರಾಣಿಯ ಸಖಿಯನ್ನೇ ಪದ್ಮಿನಿ ಅಂದುಕೊಂಡಿರುತ್ತಾನಂತೆ)

ನಿಜವಾಗಿಯೂ ಆತನಿಗೆ ಪದ್ಮಿನಿಯ ಸೌಂದರ್ಯ ಕಂಡು ಆಕೆಯನ್ನ ಮದುವೆ ಆಗೋ ಚಪಲವಿತ್ತೇ ಹೊರತು ಆಕೆಯನ್ನ ಆತ ತಂಗಿ ಅಂತ ಬಾಯಿಮಾತಿಗಷ್ಟೇ ತನ್ನ ಮಾಯಾಜಾಲ ಬೀಸಲು ಸುಳ್ಳು ಹೇಳಿದ್ದು.

ರಾಜಾ ರಾವಲ್ ರತನ್ ಸಿಂಗ್ ಬಂಧಿಯಾಗಿ ದೆಹಲಿಯಲ್ಲಿದ್ದಾಗ ಅಲ್ಲಾವುದ್ದಿನ್ ಖಿಲ್ಜಿ ಚಿತ್ತೋಡಗಢಕ್ಕೆ ಪತ್ರ ಬರೆದು ಪದ್ಮಿನಿಗೆ ಹೀಗೆ ಹೇಳ್ತಾನೆ “ನಿನ್ನ ಗಂಡನನ್ನ ನೀನು ಜೀವಸಹಿತವಾಗಿ ನೋಡಬೇಕೆಂದರೆ ನೀನು ನನ್ನವಳಾಗಬೇಕು, ನೀ ನನ್ನ ಮದುವೆಯಾಗಿ ನನ್ನ ಜನಾನಾಗೆ ಬರಬೇಕು ಆಗ ಮಾತ್ರ ನಾ ನಿನ್ನ ಗಂಡನನ್ನ ಬಿಡುಗಡೆ ಮಾಡ್ತೀನಿ”

ಇದನ್ನೋದಿದ ರಾಣಿ ಪದ್ಮಿನಿಯ ರಕ್ತ ಕೊತ ಕೊತ ಕುದಿಯುತ್ತ ಆಕೆ ಖಿಲ್ಜಿಗೆ ಉತ್ತರ ಕೊಡ್ತಾ ಹೀಗೆ ಹೇಳ್ತಾಳೆ

“ನನಗೆ ನನ್ನ ಗಂಡನ ಕ್ಷೇಮ ಮುಖ್ಯ, ನಾನು ನಿನ್ನ ಷರತ್ತಿಗೆ ಒಪ್ಪುತ್ತೇನೆ, ಆದರೆ ನೀವು ಚಿತ್ತೋಡಗಢಕ್ಕೆ ಬರೋದು ಬೇಡ, ನಾನೇ ನಮ್ಮ ರಜಪೂತ ಪರಂಪರೆಯ ಪ್ರಕಾರ 100 ಪಲ್ಲಕ್ಕಿಗಳ ಜೊತೆಗೆ ನನ್ನ ಸಖಿಯರೊಂದಿಗೆ ನಿಮ್ಮ ಆಸ್ಥಾನಕ್ಕೆ ಬಂದು ನಿಮಗೆ ಶರಣಾಗ್ತೀನಿ”

ಇದನ್ನೋದಿದ ಖಿಲ್ಜಿಗೆ ಮತ್ತೂ ಖುಷಿಯಾಗಿ ಒಬ್ಬ ಸುರಸುಂದರಾಂಗಿ ಪದ್ಮಿನಿ ಸಿಗ್ತಾಳೆ ಅನ್ಕೊಂಡಿದ್ದ, ಆದರೆ ಆಕೆ ಜೊತೆಗೆ ಇನ್ನೂ ನೂರು ಜನ ಸುಂದರ ಸಖಿಯರಿರ್ತಾರೆ ಅಂತ ಮನದಲ್ಲೇ ತನ್ನ ಕಾಮಾಗ್ನಿಯ ಬಯಕೆಯನ್ನು ಇಮ್ಮಡಿಗೊಳಿಸಿಕೊಳ್ತಾನೆ.

ಆ ದಿನ ಬಂದೇ ಬಿಟ್ಟಿತು, ರಾಣಿ ಪದ್ಮಿನಿ ನೂರು ಪಲ್ಲಕ್ಕಿಗಳ ಮೂಲಕ ಖಿಲ್ಜಿಯ ಆಸ್ಥಾನಕ್ಕೆ ಬಂದೇ ಬಿಟ್ಟಳು, ಆಗಲೂ ಆತ ಆಕೆಯ ನಿಜವಾದ ಮುಖ ಇನ್ನೂ ನೋಡಿರಲಿಲ್ಲ, ಯಾವಾಗ ಆತ ಪಲ್ಲಕ್ಕಿಯ ಹತ್ತಿರ ಹೊರಟು ಪದ್ಮಿನಿಯನ್ನ ನೋಡಲು ಬರುತ್ತಾನೋ ಆಗ ಪಲ್ಲಕ್ಕಿಗಳಿಂದ ‘ಹರ ಹರ ಮಹಾದೇವ’ ಘೋಷಣೆಗಳನ್ನ ಕೂಗುತ್ತ ನೂರು ಜನ ರಜಪೂತ ಸೈನಿಕರು ಒಮ್ಮೆಲೆ ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡ್ತಾರೆ.

ಇದು ರಾಣಿ ಪದ್ಮಿನಿಯೇ ಖಿಲ್ಜಿಯ ಸೊಕ್ಕು ಮುರಿಯೋದಕ್ಕೆ ರಚಿಸಿದ್ದ ಪದ್ಮವ್ಯೂಹವಾಗಿತ್ತು, ನೂರು ಪಲ್ಲಕ್ಕಿಗಳಲ್ಲಿ ತನ್ನ ಸಖಿಯರಿರ್ತಾರೆ ಅಂತ ಹೇಳಿದ್ದ ಪದ್ಮಿನಿ
ಅವುಗಳಲ್ಲಿ ತನ್ನ 100 ಬಲಾಢ್ಯ ರಜಪೂತ ಸೈನಿಕರನ್ನ ಕರೆತಂದಿರ್ತಾಳೆ.

ಖಿಲ್ಜಿಗೆ ತನ್ನ ಆಸ್ಥಾನದಲ್ಲಿ ಏನ್ ನಡೀತಿದೆ ಅಂತ ಅರ್ಥವಾಗೋಕೂ ಮುಂಚೆಯೇ ರಾಣಿ ಪದ್ಮಿನಿ ಖಿಲ್ಜಿಯ ಹೆಡೆಮುರಿಕಟ್ಟಿ ಸೋಲಿಸಿ ತನ್ನ ಗಂಡ ರಾವಲ್ ರತನ್ ಸಿಂಗನನ್ನ ಬಿಡಿಸಿಕೊಂಡು ಚಿತ್ತೋಡಗಢಕ್ಕೆ ವಾಪಸ್ಸಾಗ್ತಾಳೆ.

ಈ ಘಟನೆಯಿಂದ ಅದೂ ಒಂದು ಹೆಣ್ಣಿನ ಕೈಯಿಂದ ನಾನು ಸೋಲೋದಾ ಅಂತ ಪಿತ್ತ ನಿತ್ತಗೇರಿದ ಅಲ್ಲಾವುದ್ದೀನ್ ಖಿಲ್ಜಿ, ಈ ಬಾರಿ ಮತ್ತೆ ಚಿತ್ತೋಡಗಢದ ಮೇಲೆ ದಾಳಿ ಮಾಡ್ತಾನೆ, ಕೆಲ ದಿನಗಳ ಕಾಲ ರಜಪೂತರು ಖಿಲ್ಜಿಗೆ ಪ್ರತಿರೋಧ ತೋರುತ್ತಾರೆ ಆದರೆ ಖಿಲ್ಜಿಯ ಬೃಹತ್ ಸೈನ್ಯದೆದುರು ರಜಪೂತರು ಸೋಲುತ್ತಾರೆ. ಕೋಟೆಗಿದ್ದ ಒಂದೇ ಒಂದು ದ್ವಾರವನ್ನು ತನ್ನ ಸೈನಿಕರಿಂದ Seal ಮಾಡಿ ರಜಪೂತ ಸೈನಿಕರಿಗೆ ಹೊರಗಿನಿಂದ ಯಾವ ಸಾಮಗ್ರಿಗಳು ಸಿಗದ ಹಾಗೆ ಮಾಡಿ ಚಿತ್ತೋಡವನ್ನ ಖಿಲ್ಜಿ ವಶಪಡಿಸಿಕೊಂಡು ರಾವಲ್ ರತನ್ ಸಿಂಹನಾದ ತಲೆ ಕಡಿದು ಹಾಕ್ತಾನೆ.

ಈಗ ಮುಂದೇನು? ಅಲ್ಲಾವುದ್ದೀನ್ ಎಂಬ ಕಾಮುಕ ಚಿತ್ತೋಡದಲ್ಲಿರೊ ಎಲ್ಲ ರಜಪೂತ ಮಹಿಳೆಯರನ್ನೂ Sex Slaves ಗಳಾಗಿ ಕರೆದುಕೊಂಡು ಹೋಗೋಕೆ ಕೋಟೆ ಒಳ ಬರುವ ಮುಂಚೆಯೇ ಈ ವಿಷಯ ಅರಿತ ರಾಣಿ ಪದ್ಮಿನಿ, ನಾವು ರಜಪೂತರು ಯಾವತ್ತೂ ನಮ್ಮ ಶೀಲವನ್ನ ಕಳೆದುಕೊಂಡವರಲ್ಲ, ಅಂಥದ್ರಲ್ಲಿ ಈ ಮುಸಲ್ಮಾನ ದೊರೆಗೆ ನಮ್ಮ ಶೀಲ ಅರ್ಪಿತವಾಗೋದೇ? ಛೀ ಹಾಗೇ ಮಾಡೋದಕ್ಕಿಂತ ವೀರಸ್ವರ್ಗ ಪ್ರಾಪ್ತಿ ಮಾಡಿಕೊಳ್ಳೋದೇ ಎಷ್ಟೋ ವಾಸಿ ಅಂತ ತಕ್ಷಣ ಆಕೆ ಚಿತ್ತೋಡದಲ್ಲಿದ್ದ ತನ್ನ 16,000 ರಜಪೂತನಿಯರೊಂದಿಗೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡು ಬಿಡ್ತಾಳೆ.

ನಂತರ ಕೋಟೆಯ ಒಳಗೆ ಖಿಲ್ಜಿ ಬಂದು ನೋಡಿದಾಗ ಆತನಿಗೆ ಯಾವೊಬ್ಬ ಹೆಂಗಸೂ ಚಿತ್ತೋಡದಲ್ಲಿ ಸಿಗದೆ ಹೆಣಗಳನ್ನ ಹದ್ದುಗಳು ಕುಕ್ಕಿ ತಿನ್ನುತ್ತಿರುವ ದೃಶ್ಯಗಳೇ ಕಂಡು ಆತ ದೆಹಲಿಗೆ ವಾಪಸ್ ಆಗ್ತಾನೆ.

ನೋಡಿ ತನ್ನ ಆತ್ಮ ಹಾಗು ಶೀಲರಕ್ಷಣೆಗಾಗಿ ತನ್ನನ್ನ ತಾನು ಬೆಂಕಿಗಾಹುತಿ ಮಾಡಿಕೊಂಡ ಹಾಗು ತಾನು ಸಾಯೋವರೆಗೂ ಖಿಲ್ಜಿಯ ವಿರುದ್ಧ
ಹೊರಾಡಿದ್ದ ರಜಪೂತರಷ್ಟೇ ಯಾಕೆ ಇಡೀ ಭಾರತದ ಮಹಿಳೆಯರಿಗೆ ಆದರ್ಶಪ್ರಾಯವಾಗಿರೋ ಇಂತಹ ವೀರವನಿತೆ ಪದ್ಮಿನಿ ಯನ್ನ ತನ್ನ ಚಿತ್ರದಲ್ಲಿ ಖಿಲ್ಜಿಯ ಜೊತೆ ಕಿಸ್ಸಿಂಗ್ ಸೀನ್’ನಲ್ಲಿ ತನಗಿಷ್ಟ ಬಂದ್ಹಾಗೆ ತೋರಿಸಿ ಇತಿಹಾಸಕ್ಕೆ ಅಪಚಾರ ಮಾಡುವವನಿಗೆ ‘ರಜಪೂತ ಕರಣಿ ಸೇನಾ’ ಚೆನ್ನಾಗೇ ಗೂಸ ಕೊಟ್ಟಿತ್ತು. ಈಗ ಅದರ ಮುಂದುವರೆದ ಭಾಗವೆಂಬಂತೆ ರಾಜಸ್ಥಾನದ ಜೈಪುರನಲ್ಲಿ ‘ಪದ್ಮಿನಿ’ ಚಿತ್ರದ ಬ್ಯಾನರ್’ಗಳನ್ನ ಸುಟ್ಟು ಹಾಕಿದ್ದಾರೆ.

ಇತಿಹಾಸವನ್ನ ಇತಿಹಾಸದ ರೂಪದಲ್ಲೇ ತೋರಿಸಿದರೆ ಒಳಿತು, ಅದನ್ನ ತಿರುಚೋಕೆ ಪ್ರಯತ್ನಪಟ್ಟರೆ ಯಾವ ಸ್ವಾಭಿಮಾನಿ ಹಿಂದೂಗಳಾದರೂ ಸುಮ್ಮನಿರುವವರಲ್ಲ. ಅದರಲ್ಲೂ ರಜಪೂತರು ಸುಮ್ಮನಿರುವಂಥವರೇ?

ಇದರ ನಡುವೆ ಸಂಜಯ್ ಲೀಲಾ ಬನ್ಸಾಲಿ ಕಥೆ ಮಾಡಿದ್ದುಣ್ಣೋ ಮಹಾರಾಯ ಅಂದಂಗಾಗಿದೆ.

– Vinod Hindu Nationalist

Tags

Related Articles

Close