ಅಂಕಣಪ್ರಚಲಿತರಾಜ್ಯ

ರಾಜ್ಯದಲ್ಲಿ ಆಘಾತಕರ ವಿಷಯ ಬೆಳಕಿಗೆ!293 ಕ್ಕೇರಿದ ಮಕ್ಕಳ ದಾರುಣ ಸಾವು! ನಾಲಗೆಯಿಲ್ಲದಂತಾದ ಮಾಧ್ಯಮಗಳು! ಟ್ರಾಜಿಡಿ ಟೂರಿಸ್ಟ್ ನೀಡುವನೇ ಭೇಟಿ?!!

ಒಂದು ಕಡೆ ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಶಾದಿಭಾಗ್ಯ, ದ್ವೇಷ ರಾಜಕಾರಣವನ್ನು ಪ್ರತಿಪಾದಿಸಲು ಶಾಲೆಗೆ ಬರುತಿದ್ದ ಅನುದಾನದ ಕಡಿತ, ಮುಸಲ್ಮಾನರ ಓಲೈಕೆಗಾಗಿ ಕುತಂತ್ರ ರಾಜಕಾರಣ, ತಮ್ಮ ಸಚಿವ ಸಂಪುಟದಲ್ಲಿ ದೇಶದ 2ನೇಯ ಅತೀ ಭ್ರಷ್ಟ ರಾಜಕಾರಣಿಗೆ ಅಭಯಹಸ್ತ, ಇನ್ನೂ ಏನೇನೋ?? ಇದುವರೆಗೆ ಕರುನಾಡು ಕಂಡಿರದ ಭ್ರಷ್ಟ, ಓಲೈಕೆಯ ಆಡಳಿತ ಕರ್ನಾಟಕದಲ್ಲಿ ಆಡಳಿತ ಮಾಡುತ್ತಿದೆ. ಕೇವಲ ಭ್ರಷ್ಟ ಸರಕಾರವಾದರೂ ಪರವಾಗಿರಲಿಲ್ಲ. ಆದರೆ ಈ ಸರಕಾರ ಮುಗ್ಧ, ಅಮಾಯಕರ ಜೀವ-ಜೀವನದ ಜತೆಗೆ ಚೆಲ್ಲಾಟವಾಡುತ್ತಿರುವುದೇ ಗಾಬರಿಯ ಸಂಗತಿ.. ಅದಕ್ಕೇ ಈ ಸರಕಾರವನ್ನು ತುಘಲಕ್ ಸರಕಾರವೆನ್ನುವುದು!!

ನಮಗೆಲ್ಲಾ ಗೋರಖ್‍ಪುರದಲ್ಲಿ ನಡೆದ ಘಟನೆಯ ಕುರಿತಾಗಿ ಅರಿವಿರಬಹುದು. ಅಲ್ಲಿನ ಆಸ್ಪತ್ರೆಯಲ್ಲಿ ಮುಗ್ಧ ಮಕ್ಕಳ ಜೀವಗಳು ಬಲಿಯಾಗಿದ್ದವು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಅನ್ನುವ ಆರೋಪವೂ ಕೇಳಿಬಂದಿತ್ತು. ಆಗ ನಿದ್ದೆಯಿಂದ ಎಚ್ಚೆತ್ತ ಕಾಂಗ್ರೆಸ್ ಬಲವಾಗಿ ಅದರ ವಿರುದ್ದ ಆಂದೋಲನಕ್ಕೇ ತಯಾರಾದ ಹಾಗಿತ್ತು. ಗಂಟಲು ಕಿತ್ತುಬರುವವರೆಗೂ ಬೊಬ್ಬೆ ಹೊಡೆದರು. ಅದೇ ಪರಿಸ್ಥಿತಿ ಕರ್ನಾಟಕದ ಕೋಲಾರದ ಆಸ್ಪತ್ರೆಯಲ್ಲಿ ನಡೆದಾಗ ಎಲ್ಲರೂ ಮೌನ!!!

ಮುಗ್ಧಜೀವಿಗಳನ್ನು ಬಲಿತೆಗೆಯುತ್ತಿದೆ ತುಘಲಕ್ ಸರಕಾರ !!

ಕೋಲಾರದ ಆಸ್ಪತ್ರೆಯಲ್ಲಿ ಅಂಖಿ-ಅಂಶದ ಪ್ರಕಾರ ಕಳೆದ 4 ತಿಂಗಳಿನಲ್ಲಿ ಬರೋಬ್ಬರಿ 293 ಮಕ್ಕಳು ಸಾವನ್ನಪ್ಪಿದರು. ನೆನಪಿರಲಿ. ಅವುಗಳು ಮಕ್ಕಳೂ ಆಗಿರಲಿಲ್ಲ. ನವಜಾತ ಶಿಶುಗಳಾಗಿದ್ದವು. ಪ್ರಪಂಚದ ಜ್ಞಾನವನ್ನು ಇನ್ನೂ ಅರಿಯದ ಮುಗ್ಧ ಜೀವಿಗಳು ಅವು. ಆಸ್ಪತ್ರೆಯ , ಅಲ್ಲಿನ ಸಿಬ್ಬಂದಿಯ, ಸರಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿ ಹೋದವು. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಗತ್ಯವಿರುವ ಮೂಲಭೂತಸೌಕರ್ಯವೇ ಅಲ್ಲಿ ಇರಲಿಲ್ಲ. ವಿಶ್ವ ಬ್ಯಾಂಕ್ ನಿಂದ ಅನುದಾನವನ್ನೂ ಪಡೆದಿರುವ ಶ್ರೀ ನರಸಿಂಹರಾಜು ಜಿಲ್ಲಾಸ್ಪತ್ರೆ, ಇನ್ನೂ ಅಭಿವೃದ್ದಿ ಆಗಿಲ್ಲವೆಂದರೆ ಆ ಅನುದಾನ ಯಾರ ಆಸ್ತಿಯನ್ನು ದುಪ್ಪಟ್ಟು ಮಾಡಿದೆ?? ಜನಪ್ರತಿನಿಧಿಗಳು ಉತ್ತರಿಸಬೇಕಿದೆ.

ತಮ್ಮ ರಾಜಕಾರಣನ್ನು ಬೇಯಿಸಿಕೊಳ್ಳಲು ಮುಗ್ಧ ಜೀವಿಗಳನ್ನು ಬಲಿಕೊಡುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ಎಂಬ ತುಘಲಕ್ ಸರಕಾರ ಬಂದಾಗಿನಿಂದ , ಅಂದರೆ 2013-14 ರಿಂದ 2016 ಸಪ್ಟೆಂಬರ್ ವರೆಗೆ ಕರುನಾಡ ರಾಜ್ಯದ್ಲಿ ಅಪೌಷ್ಟಿಕತೆಯಿಂದ 2321 ಗರ್ಭಿಣಿಯರು, 5 ವರ್ಷದೊಳಗಿನ 43172 ಮಕ್ಕಳು ಸಾವನ್ನಪ್ಪಿದ್ದಾರೆಂದರೆ ಸರಕಾರ ಯಾವ ರೀತಿ ಪ್ರಜಾಕಾಳಜಿಯನ್ನು ವಹಿಸುತ್ತಿದೆ ಎಂಬುದರ ಅರಿವು ನಮಗಾಗಬಹುದು. ಮುಂದಿನ ಪೀಳಿಗೆಯ ಕುರಿತಾಗಿ ಮಾತನಾಡುವ ಸಿಎಂ ಇಂದಿನ ಪರಿಸ್ಥಿಯ ಕುರಿತಾಗಿ ಮಾತನಾಡುತ್ತಿರುವುದು ಕೇಳಿದ, ನೋಡಿದ ಉದಾಹರಣೆ ಇಲ್ಲ.

ಹೀಗೆ ಸಾವನ್ನಪ್ಪಿದ ಮಕ್ಕಳಲ್ಲಿ ಶೇ. 40 ರಿಂದ 48 ಮಕ್ಕಳು 2 ರಿಂದ 5 ವರ್ಷ ವಯಸ್ಸಿನವರೇ ಆಗಿರುವುದು ಇನ್ನೊಂದು ಗಾಬರಿ ಹಾಗೂ ಅಚ್ಚರಿಯ ವಿಚಾರ. ತಮ್ಮ ಮಕ್ಕಳು ಸಾವನ್ನಪ್ಪುವಾಗ ಆಗ ನೋವು, ವೇದನೆ ತಮ್ಮ ಪ್ರಜೆಗಳ ಸಾವನ್ನಪ್ಪುವಾಗ ಯಾಕೆ ಆಗದು?? ತಮ್ಮ ರಾಜಕಾರಣಕ್ಕೆ, ಮತ ಸಿಗಲು ಅವರು ಬಳಕೆಗೆ ಬರೋದಿಲ್ಲ ಎನ್ನುವ ಅಗಾಧ , ದುರಾಲೋಚನೆಯ ಚಿಂತನೆಯೇ ??!!

ಉತ್ತರ ಪ್ರದೇಶದ ಗೋರಖ್ ಪುರದ ದುರಂತದ ಬಗ್ಗೆ ಬಾಯಿಗೆ ಬಂದ ಹಾಗೆ ಅರಚಿದ್ದ ರಾಹುಲ್ ಗಾಂಧಿ ಕೋಲಾರಕ್ಕೆ ಭೇಟಿ ಕೊಡುವನೇ?! ಬಹುಷಃ ಸೋನಿಯಾ ತನ್ನ ಬುದ್ಧಿಮಾಂದ್ಯ ಮಗನನ್ನು ಕಳುಹಿಸಲಾರಳು! ದುರಂತ ನಡೆದ ಜಾಗಗಳಿಗೆಲ್ಲ ರಾಹುಲ್ ಗಾಂಧಿ ಭೇಟಿ ನೀಡುವ ಹವ್ಯಾಸ ಇಟ್ಟುಕೊಂಡಿರುವುದರಿಂದ, ಸಿದ್ಧರಾಮಯ್ಯ ಆಹ್ವಾನ ಪತ್ರಿಕೆ ಕಳಿಸಿರಲೂಬಹುದು.

ವಿನಾಶಕಾಲೇ ವಿಪರೀತ ಬುದ್ಧಿ ಅನ್ನುವ ಮಾತೊಂದಿದೆ. ಈ ವಿಚಾರದಲ್ಲಿಯೂ ಅದೇ ರೀತಿಯಾಗಿರುವ ಹಾಗಿದೆ. ಇನ್ನಾದರೂ ಕರ್ನಾಟಕ ಸರಕಾರ ನಿದ್ದೆಯಿಂದೆದ್ದು ಪರಜೆಗಳಿಗೆ ಅಗತ್ಯವಾದ ಪೌಷ್ಟಿಕಾಂಶವನ್ನು ಪೂರೈಸಬೇಕಾಗಿದೆ, ಅವರ ಹಿತವನ್ನು ಕಾಪಾಡುವಲ್ಲೇ ಅವರು ಚಿಂತಿಸಬೇಕಾಗಿದೆ. ಇಲ್ಲವಾದರೆ ಮುಂದೊಂದು ದಿವಸ ಘೊರವಾದ ಶಿಕ್ಷೆಯನ್ನು, ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಅನುಭವಿಸಬೇಕಾದೀತು.

– ಆತ್ಮಿಕಾ

Tags

Related Articles

Close