ಪ್ರಚಲಿತ

ರಾಜ್ಯದಲ್ಲಿ ಮೂರು ಸಾವಿರ ರೈತರ ಹೆಣ ಬಿದ್ದಿವೆ ಆದರೆ ಕರ್ನಾಟಕದ ಸರ್ವಾಧಿಕಾರಿ ಸಿದ್ದರಾಮಯ್ಯನವರು ನಡೆಸುತ್ತಿರೋ ಐಶಾರಾಮಿ ಜೀವನ ಮಾತ್ರ.. ಅಬ್ಬಾ!!!

ಕರ್ನಾಟಕದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಜೆಡಿಎಸ್ ನಲ್ಲಿದ್ದಾಗ ಖಡಕ್ ಮನುಷ್ಯ, ಪ್ರಾಮಾಣಿಕನೆಂದೇ ಹೆಸರಾಗಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾಗ ಖಡಕ್ ಮನುಷ್ಯನೊಬ್ಬ ಸಿಎಂ ಆಗಿದ್ದು ಕರ್ನಾಟಕದ ಜನತೆಗೆ ಸಂತಸವಾಗಿತ್ತು.

ಆದರೆ ಅದೇನಾಯಿತೋ ಗೊತ್ತಿಲ್ಲ ಅಧಿಕಾರದ ಮದ ತಲೆಗೇರುತ್ತಲೇ ಸಿದ್ದರಾಮಯ್ಯನವರು ಪೂರ್ತಿ ಬದಲಾಗಿಬಿಟ್ಟರು, ‘ಕೈ’ ಪಕ್ಷ ಸೇರಿದ್ದೇ ತಡ ತಮ್ಮ ಸಮಾಜವಾದ ಸಿದ್ಧಾಂತದ ‘ಕೈ’ ಬಿಟ್ಟೇಬಿಟ್ಟರು.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಯೇ ತನ್ನ ಸರ್ಕಾರಾವಧಿಯಲ್ಲಿ ಭ್ರಷ್ಟಾಚಾರಗಳ ಸರಮಾಲೆಯನ್ನ ಕೊರಳಲ್ಲಿ ಹಾಕಿಕೊಂಡು ಓಡಾಡತೊಡಗಿರು.

ನಾನೊಬ್ಬ ರೈತನ ಮಗ, ನನಗೂ ರೈತನ ಕಷ್ಟ ಗೊತ್ತು ಅಂತ ಹೇಳುತ್ತಿದ್ದ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ರೈತರ ಪಾಡಂತೂ ಕೇಳೋ ಹಾಗೇ ಇಲ್ಲ ಅನ್ನುವಂತಾಗಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಇಲ್ಲಿಯವರೆಗೆ ಸುಮಾರು ಮೂರು ಸಾವಿರ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲೀವರೆಗೂ ಸುಮಾರು 25-30 ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಕೊಲೆಗೀಡಾಗಿದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ಮಾತ್ರ ತಮ್ಮ ಐಶಾರಾಮಿ ಜೀವನವನ್ನ ಮಾತ್ರ ಚೆನ್ನಾಗೇ ನಡೆಸುತ್ತಿದ್ದಾರೆ.

ಅವರ ಖರ್ಚು ವೆಚ್ಚಗಳ ಬಗ್ಗೆ ನೀವು ತಿಳಿದರೆ ನಿಮಗೆ ದಂಗು ಬಡಿಯೋದಂತು ಸತ್ಯ

ಯಾರು ಹೇಳಿದ್ದು ಕರ್ನಾಟಕಕ್ಕೆ ಬರಗಾಲ ಬಂದಿದೆ ಎಂದು.?
ದಸರಾಗೆ ದುಡ್ಡಿಲ್ಲದಿದ್ದರೇನಂತೆ,
ರಾಜ್ಯದ ರೈತರು ಸತ್ತರೇನಂತೆ,
ನಾವು ಆರಾಮಾಗಿರುತ್ತೇವೆ ಅನ್ನುತ್ತಿದೆ ರಾಜ್ಯ ಸರ್ಕಾರ.

ಇದಷ್ಟೆ ಅಲ್ಲ,

* ಮುಖ್ಯಮಂತ್ರಿಗಳಿಗೆ ಸಿದ್ಧವಾಗುತ್ತಿದೆ 25 ಕೋಟಿಯ ರಾಜಬಂಗಲೆ!

ಜೊತೆಗೆ ಇತರ ಮಂತ್ರಿಗಳ ಬಂಗಲೆಗಳಿಗೆ ಕೋಟಿ ಕೋಟಿ ಖರ್ಚು!!

ಮರಿಲಿಂಗೇಗೌಡ ಮಾಲೀ ಪಾಟೀಲ್ ಅವರು ಆರ್‍ಟಿಐ ಅಡಿಯಲ್ಲಿ ಪ್ರಶ್ನೆ ಕೇಳಿ ಪಡೆದಿರುವ ಮಾಹಿತಿಯಲ್ಲಿ ಸಿಎಂ ವಿಲಾಸಿ ಜೀವನ ಬಹಿರಂಗವಾಗಿದೆ..!!!

* ಸಿದ್ದರಾಮಯ್ಯನವರು ಪೀಠೋಪಕರಣಗಳಿಗಾಗಿ ಹಾಗೂ 4 ಟಿವಿ ಗಳಿಗಾಗಿ ಖರ್ಚು ಮಾಡಿದ್ದು ಬರೋಬ್ಬರಿ ಹದಿನೆಂಟು ಲಕ್ಷದ ಮೂವತ್ತೆಂಟು ಸಾವಿರದ ನಾಲ್ಕು ನೂರ ಇಪ್ಪತ್ತಾರು ರೂ (18,38,426 ರೂ).

* ಇನ್ನು ಸಿಎಂ ಸಾಹೇಬರು ಮಲಗೋಕೆ ಬೆಡ್ ಶೀಟ್, ಪಿಲ್ಲೋ ಕವರ್, ಟವಲ್ ರಬ್ಬರ್ ಮ್ಯಾಟ್, ಸೋಫಾ ಬೆಡ್ ಕವರ್‍ಗಳಿಗಾಗಿ ಖರ್ಚು ಮಾಡಿದ್ದು ಬರೋಬ್ಬರಿ ಹದಿನೈದು ಲಕ್ಷದ ತೊಂಭತ್ತೇಳು ಸಾವಿರದ ಎಂಟು ನೂರ ತೊಂಭತ್ತೆಂಟು ರೂ (15,97,898 ರೂ.)

* ಸಿದ್ದರಾಮಯ್ಯನವರ ಶೌಚಾಲಯ, ವಾಟರ್ ಪ್ರೂಫಿಂಗ್ ಇತ್ಯಾದಿ ಗಳಿಗೆ ಖರ್ಚು ಮಾಡಿದ್ದು ಸುಮಾರು ಇಪ್ಪತ್ನಾಲ್ಕು ಲಕ್ಷದ ಎಂಭತ್ತೇಳು ಸಾವಿರದ ಎರಡು ನೂರ ಮೂವತ್ನಾಲ್ಕು ರೂ. (24,87,234 ರೂ.)

* ಸಿಎಂ ಅಡುಗೆ ಮನೆ, ಪೂಜೆ ರೂಂ, ಸ್ಟೋರ್ ರೂಂ ರಿಪೇರಿಗಂತ ಇಲ್ಲೀವರೆಗೆ ಖರ್ಚು ಮಾಡಿದ್ದು ಬರೋಬ್ಬರಿ ಮೂವತ್ತೈದು ಲಕ್ಷದ ಅರವತ್ಮೂರು ಸಾವಿರದ ಎಂಟು ನೂರ ಏಳು ರೂ. (35,63,807 ರೂ.)

* ವುಡನ್ ವರ್ಕ್, ಷೋ ಕೇಸ್,ಗ್ಲಾಸ್ ವರ್ಕ್ ಇತ್ಯಾದಿ ಕೆಲಸಗಳಿಗೆ ಖರ್ಚು ಮಾಡಿದ್ದು 43,00,900 ರೂ.

ಇವು ಕೇವಲ ಪ್ರಮುಖ ದೊಡ್ಡ ಖರ್ಚುಗಳಾದರೆ, ಸಿಎಂ ಸಾಹೇಬ್ರು ದಿನ ಉಪಯೋಗಿಸುವ ವಸ್ತುಗಳಿಗೆ ಲಕ್ಷ ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ. ಅವುಗಳ ಪೈಕಿ ಕೆಲವೊಂದಿಷ್ಟು ಕೆಳಗಿನಂತಿದೆ

* ಸೋಪ್ ಬಾಕ್ಸ್ ಮತ್ತು ರೂಂ ಫ್ರೆಶ್‍ನರ್ ಗಾಗಿ – 1,26,858 ರೂ.

* ಪೇಪರ್ ಕಪ್‍ಗೆ 1,87,950 ರೂ.

* ಸ್ಪೂನ್, ಮೊಟ್ಟೆ ಇಡುವ ಡಬ್ಬಿ, ಆಲೂಗಡ್ಡೆ ಕತ್ತರಿಸುವ ಯಂತ್ರ – 20 ಸಾವಿರ ರೂ.

* ಅಗರ ಬತ್ತಿ, ವಾಷಿಂಗ್ ಪೌಡರ್, ಎವರೆಡಿ ಬ್ಯಾಟರಿ, ಹಾರ್ಪಿಕ್ ಕ್ಲೀನರ್- 50 ಸಾವಿರ ರೂ.

* ಸ್ನಾನ ಮಾಡುವ ಸ್ಟೂಲ್‍ಗೆ 22 ಸಾವಿರ ರೂ..

ಈ ಲೆಕ್ಕವನ್ನ ನೋಡಿ ಉರಿ ತಡೆದುಕೊಳ್ಳಲಾಗದೇ, ಮುಖ್ಯಮಂತ್ರಿಗಳನ್ನ ಸಮರ್ಥಿಸಿಕೊಳ್ಳುವ ನೆಪದಲ್ಲಿ ಖಂಡಿತಾ ಒಂದಷ್ಟು ಜನ ಮೋದಿಯವರನ್ನ ತೆಗಳುವ ಕಾರ್ಯಕ್ಕೆ ಕೈ ಹಾಕುತ್ತಾರಂತ ಗೊತ್ತು.

ಮೋದಿಜಿಯ ಬಗ್ಗೆ ಹೋದಲ್ಲಿ ಬಂದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವ ಇಂಥವರಿಗೆ ಮೋದಿಜೀಯ ಜೊತೆ ಸಿದ್ದರಾಮಯ್ಯನವರನ್ನ ಹೋಲಿಕೆ ಮಾಡಲೂ ಸಾಧ್ಯವಿಲ್ಲ.

ಮೋದಿಜಿಯ ಒಂದು ವಿದೇಶ ಪ್ರವಾಸದಿಂದ ಭಾರತಕ್ಕೆ ಕೋಟಿ ಕೋಟಿ ಹಣ ಹರಿದು ಬರುತ್ತೆ, ಜೊತೆಗೆ ಆರ್.ಟಿ.ಐ.ನಲ್ಲಿ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ಅವರಿಗಿಂತ ಶೇ.40 ರಷ್ಟು ಕಡಿಮೆ ಹಣವನ್ನು ಮೋದಿಜಿ ಖರ್ಚು ಮಾಡಿದ್ದಾರೆ.

ಜೊತೆಗೆ ನೆನಪಿರಲಿ, ಮೋದಿ ತಮಗೆ 10 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಬಂದಿದ್ದ ಉಡುಗೊರೆಗಳನ್ನೂ ಕೂಡಿಟ್ಟು ಅದನ್ನ ಹರಾಜು ಹಾಕಿ ಅದರಿಂದ ಬಂದ ಕೋಟ್ಯಾಂತರ ಹಣವನ್ನು ಗುಜರಾತಿನ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ದಾನ ನೀಡಿದ್ದ ಪುಣ್ಯಾತ್ಮ, ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ.

ಮೋದಿಯ ಬಗ್ಗೆ ಮಾತನಾಡುವ ನೈತಿಕತೆಯು ಇವರಿಗಿಲ್ಲ. ಅಹಿಂದ ಹಾಗು ಸರಳತೆಯ ಹೆಸರಿನಲ್ಲಿ ರಾಜ್ಯದ ಜನತೆಗೆ ಮೋಸ ಮಾಡುತ್ತಿರುವವರು ಇವರುಗಳನ್ನ ನೋಡಿದರೆ ಲೂಟಿ ಕೋರರ ಸರ್ಕಾರಕ್ಕಿಂತ ಸೂಟು ಬೂಟಿನ ಸರ್ಕಾರವೇ ಲೇಸು ಅನಿಸುತ್ತೆ

ಮೇಲೆ ಕೊಟ್ಟಿರುವ ಪ್ರತಿಯೊಂದು ವಿವರಗಳೂ RTI ನಿಂದ ಬಯಲಾದ ಸತ್ಯಗಳು

ಮಾಹಿತಿ ಕೃಪೆ: ಪಬ್ಲಿಕ್ ಟಿವಿ

– Vinod Hindu Nationalist

Tags

Related Articles

Close