ಪ್ರಚಲಿತ

ರಾಜ್ಯದ ಕಾಂಗ್ರೆಸ್‍ನಲ್ಲಿ ಮೂವರ ಒಳ ಜಗಳ!! ಕಾಂಗ್ರೆಸ್ ತಲುಪಲಿದೆಯೇ ಅಳಿವಿನ ಅಂಚು?!

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಮಾಡಿದ ಎಡವಟ್ಟು ಅಷ್ಟಿಷ್ಟಲ್ಲ!! ಆದರೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿರುವ ಸಿದ್ದರಾಮಯ್ಯ ಸರಕಾರದಲ್ಲಿ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡಿಕೊಂಡು ತಮ್ಮೊಳಗೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಮಾಡಿಕೊಂಡಿರುವುದು ಮಾತ್ರ ಆಶ್ಚರ್ಯವಾಗಿದೆ!! ಕರ್ನಾಟಕದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಬೇಕು ಎಂದು ಕಾಂಗ್ರೆಸ್ ರಾಷ್ಟ್ರಮಟ್ಟದ ನಾಯಕರು ಚಿಂತಿಸುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಒಗ್ಗಟ್ಟಿನಲ್ಲಿ ಬಲವಿಲ್ಲ ಎನ್ನುವುದನ್ನು ತೋರಿಸುತ್ತಿದೆ!!

ಹೌದು… ಈಗಾಗಲೇ 2018ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ!! ಆದರೆ, ಕರ್ನಾಟಕದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಬೇಕು ಎಂದು ಕಾಂಗ್ರೆಸ್ ರಾಷ್ಟ್ರಮಟ್ಟದ ನಾಯಕರು ಚಿಂತಿಸುತ್ತಿರುವುದು ಒಂದುಕಡೆಯಾದರೆ, ಇತ್ತ ತಮ್ಮ ಭಿನ್ನಾಭಿಪ್ರಾಯಗಳನ್ನೇ ದೊಡ್ಡದಾಗಿಸಿಕೊಂಡಿರುವ ರಾಜ್ಯ ಕಾಂಗ್ರೆಸ್‍ನ ಪ್ರಮುಖ ನಾಯಕರು ಒಬ್ಬರಿಂದ ಒಬ್ಬರು ದೂರವಾಗುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್‍ನ್ನು ಬಲಪಡಿಸುವ ವಿಚಾರ ಕನಸಂತೆ ಉಳಿಯಲಿದೆಯೋ ಏನೋ ಗೊತ್ತಿಲ್ಲ!!

ಈಗಾಗಲೇ ಕರ್ನಾಟಕದಲ್ಲಿ, ಕಾಂಗ್ರೆಸ್ ಸರಕಾರ ಮಾಡಿದ ಅನಾಚಾರಗಳು ಅಷ್ಟಿಷ್ಟಲ್ಲ!!! ಯಾಕೆಂದರೆ ಪ್ರಕರಣಗಳ ಮೇಲೆ ಪ್ರಕರಣಗಳು, ಹಗರಣಗಳ ಮೇಲೆ ಹಗರಣಗಳು ನಡೆದಿದ್ದು ಒಂದೇ ಎರಡೇ?? ರಾಜ್ಯದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಕೊಲೆ, ಹಿಂದೂ ಯುವಕ ಹತ್ಯೆಗಳು ನಡೆದಿದ್ದು, ಇದರ ಜೊತೆಗೆ ಸಿದ್ದರಾಮಯ್ಯ ಸರಕಾರದಲ್ಲಿ ತಮ್ಮ ಅಧಿಕಾರಿಗಳು ತಮ್ಮ ಬೊಕ್ಕಸವನ್ನು ತುಂಬಿಸುವಲ್ಲಿ ನಿರತರಾದರೇ ಹೊರತು ರಾಜ್ಯದ ಜನತೆಗೆ ಕೊಟ್ಟಿರುವುದು ಮಾತ್ರ ಪೊಳ್ಳು ಭರವಸೆಗಳು!! ಇನ್ನೂ ಸಿದ್ದರಾಮಯ್ಯ ಅವರ ವಿಚಾರಕ್ಕೆ ಬಂದರೆ ಬೆಲೆಬಾಳುವ ವಾಚ್ ವಿಚಾರವಾಗಿ ಸುದ್ದಿಯಾಗಿದ್ದರಲ್ಲದೇ, ತನ್ನ ಕಾರಿನ ಮೇಲೆ ಕಾಗೆ ಕುಳಿತುಕೊಂಡಿತು ಎನ್ನುವ ವಿಚಾರಕ್ಕಾಗಿ ಕಾರನ್ನೇ ಬದಲಾಯಿಸಿಕೊಂಡರು!! ಆದರೆ ರೈತರ ಸಾಲಮನ್ನಾದ ವಿಚಾರಕ್ಕೆ ಬಂದರೆ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಿದರು. ಅಷ್ಟೇ ಅಲ್ಲದೇ, ಚಾ ಕಾಫಿ ಬಿಸ್ಕೆಟ್‍ಗಾಗಿ ಕೋಟಿಗಟ್ಟಲೆ ಹಣವನ್ನು ಸರಕಾರದ ಬೊಕ್ಕಸದಿಂದಲೇ ಖರ್ಚುಮಾಡಿದ ಇವರು ಇನ್ನು ರಾಜ್ಯದ ಜನತೆಗಾಗಿ ಒಳಿತನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದೇ ಹೆಚ್ಚು!!

ಹೌದು… ಇನ್ನು ಟಿಪ್ಪು ಮಹಾನ್ ನಾಯಕನೆಂದು ಹಾಡಿ ಕೊಂಡಾಡುತ್ತಿರುವ ಇವರು ಟಿಪ್ಪು ಜಯಂತಿಯನ್ನು ಮಾಡಹೊರಟು, ಟಿಪ್ಪು ದೇಶಪ್ರೇಮಿ, ದೇಶಕ್ಕೋಸ್ಕರ ಮಕ್ಕಳನ್ನೇ ಅಡವಿಟ್ಟ ಎಂದೆಲ್ಲಾ ಹೇಳಿ ಆತನನ್ನು ಹೀರೋ ಎಂದು ಬಿಂಬಿಸುತ್ತಿದ್ದಾರೆ. ಹೀಗೆ, ಒಂದಲ್ಲಾ ಒಂದು ವಿಚಾರದಲ್ಲಿ ಮೂರ್ಖತನದ ಪರಾಮಾವಧಿಯನ್ನು ತಲುಪುತ್ತಿರುವ ಇವರು, ತಮ್ಮೊಳಗೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ತಮ್ಮ ತಮ್ಮಳೊಗೆ ಯುದ್ದವನ್ನು ಆರಂಭಿಸಿಯೇ ಬಿಟ್ಟಿದ್ದಾರೆ!!

ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿದ್ದು, ಜನವರಿ 15ರಿಂದ ಒಂದು ತಿಂಗಳು ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರೆ ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಮಾತ್ರ ಇದರ ಬಗ್ಗೆ ಸೈಲೆಂಟ್ ಆಗಿದ್ದಾರೆ. ಆದರೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತ್ರ ಈ ವಿಚಾರಗಳ ಬಗ್ಗೆ ತುಟಿಪಿಟಿಕ್ ಎನ್ನಿಲ್ಲ!!

Image result for d k shivakumar, siddaramaiah and g parameshwar

ಆದರೆ ಪಕ್ಷದ ವೇದಿಕೆಯ ಮೂಲಕವೇ ಪ್ರಚಾರ ಮಾಡಬೇಕು ಎಂಬುವುದು ಪರಮೇಶ್ವರ್ ಅವರ ಆಸೆಯಾಗಿದೆ. ಹಾಗಾಗಿ ಆ ಮೂಲಕ ಸಾಮೂಹಿಕ ನಾಯಕತ್ವ ಎಂಬುವುದನ್ನು ಜನರಿಗೆ ತಿಳಿಸಿ, ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಮಾಡಬೇಕು ಎನ್ನುವುದು ಇವರ ಪ್ಲಾನ್ ಆಗಿತ್ತು!! ಆದರೆ ಪಕ್ಷದೊಳಗಡೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಳಿವಿನ ಅಂಚನ್ನು ತಲುಪಲಿದೆಯೇ ಎನ್ನುವ ಪ್ರಶ್ನೆಯೂ ಮೂಡುತ್ತದೆ!!

ಆದರೆ ಸರಕಾರದಲ್ಲಿ ನಡೆದ ಎಲ್ಲಾ ಯೋಜನೆಗಳ ಕ್ರೆಡಿಟ್ ನಾನೇ ಪಡೆಯಬೇಕು ಎಂದು ಪ್ರತ್ಯೇಕವಾಗಿ ಪ್ರಚಾರ ಮಾಡಿ ಮುಂದೆಯೂ ನಾನೇ ಸಿಎಂ ಅಭ್ಯರ್ಥಿ ಅಂತ ಬಿಂಬಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರೆ. ಇನ್ನು ಹೆಚ್ಚು ಸ್ಥಾನ ಗೆದ್ದು ಬಂದರೆ ಅದಕ್ಕೆ ನಾನೇ ಕಾರಣ ಅನ್ನುವ ಸಂದೇಶ ಹೈಕಮಾಂಡ್ ರವಾನಿಸುವುದು ಸಿದ್ದರಾಮಯ್ಯ ಅವರ ತಂತ್ರವಾಗಿದೆ!! ಇನ್ನು ಎಲೆಕ್ಷನ್‍ಗಳಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಡಿ.ಕೆ ಶಿವಕುಮಾರ್, ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ವಿಭಿನ್ನವಾಗಿ ಯೋಚನೆ ಮಾಡುತ್ತಿದ್ದಾರೆ. ಪಕ್ಷದ ವೇದಿಕೆ ಮೂಲಕ ಪ್ರಚಾರಕ್ಕೆ ಹೋದರೆ ಅದು ಕೆಪಿಸಿಸಿ ಅಧ್ಯಕ್ಷರಿಗೆ ಕ್ರೆಡಿಟ್!! ಹಾಗಾಗಿ ಸಿಎಂ ಜೊತೆ ಕಾಣಿಸಿಕೊಂಡ್ರೆ ಸಿದ್ದರಾಮಯ್ಯನಿಗೆ ಲಾಭ. ಹೀಗಾಗಿ ಇಬ್ಬರಿಂದಲೂ ಸಮಾನಂತರ ದೂರ ಕಾಯ್ದುಕೊಂಡು ಬೆಂಬಲಿಗರ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡಬೇಕು ಅನ್ನೋ ಯೋಚನೆಯಲ್ಲಿ ಇದ್ದಾರೆ ಎನ್ನುವ ವಿಚಾರಗಳು ಇದೀಗ ತಿಳಿದುಬಂದಿದೆ!!

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‍ನಲ್ಲಿ ಮುಂದಿನ ಬಾರಿಯ ಸಿಎಂ ಆಕಾಂಕ್ಷಿಗಳಾಗಿರುವ ಈ ಮೂವರು ಒಮ್ಮತದ ಅಭಿಪ್ರಾಯವನ್ನು ಹೊಂದದೇ, ಭಿನ್ನಾಭಿಪ್ರಾಯಗಳನ್ನು ಬೇಳೆಸಿದ್ದು, ಈ ಕಾರಣದಿಂದಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದನ್ನು ಕೆಪಿಸಿಸಿ ಮೂಲಗಳು ತಿಳಿಸಿವೆ!! ಯಾವಾಗಲೂ ಬಿಜೆಪಿ ಮೇಲೆ ಗೂಬೆ ಕೂರಿಸಲು ಸಿದ್ದರಾಗಿರುವ ಇವರು ಇದೀಗ ತಾವೇ ವಿಭಿನ್ನವಾದ ಅಭಿಪ್ರಾಯಗಳನ್ನು ಸೃಷ್ಟಿಮಾಡುತ್ತಿದ್ದು, ಸಿಎಂ ಸೀಟಿಗಾಗಿ ಗುದ್ದಾಡುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ!!

ಮೂಲ:http://vijayavani.net/internal-feud-in-karnataka-state-congress/

– ಅಲೋಖಾ

Tags

Related Articles

Close