ಅಂಕಣ

ರಾಮಾಯಣ ನಡೆಯಲು ಹೆಣ್ಣೇ ಕಾರಣ ಎನ್ನುವವರು, ಶ್ರೀರಾಮನ ಅವತಾರದ ಹಿಂದಿರುವ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಲೇಬೇಕು!!

ಶ್ರೀವಿಷ್ಣುವಿನ ದಶಾವತರಗಳು ಜಗತ್ತಿನ ಉದ್ಧಾರಕ್ಕೆಂದೇ ಆಗಿವೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖವಾಗಿದೆ!! ಪುರಾಣಗಳನ್ನು ಕೆದಕುತ್ತಾ ಹೋದರೆ ಅದೆಷ್ಟೋ ವಿಚಾರಗಳು ನಮ್ಮನ್ನು ಒಂದು ಕ್ಷಣ ಆಚ್ಚರಿಯನ್ನು ಉಂಟಾಗುವಂತೆ ಮಾಡುತ್ತೆ!! ಅಷ್ಟೇ ಅಲ್ಲದೇ ಇವೆಲ್ಲವೂ ಕಾಕತಾಳೀಯವೂ ಎಂಬುವುದೆಲ್ಲಾ ಅಲೋಚನೆಗೆ ಬರುತ್ತವೆ. ಆದರೆ ರಾಮಾಯಣ ಮಹಾಭಾರತವು ಈ ಜಗತ್ತಿನಲ್ಲಿ ನಡೆದಿದೆ ಎಂದು ಸಾಕಷ್ಟು ಪುರಾವೆಗಳು ನಮಗೆ ಲಭಿಸಿವೆ!!

ಶ್ರೀ ರಾಮನು ಸೂರ್ಯ ವಂಶಸ್ಥ ಎನ್ನುವುದು ಎಲ್ಲರಿಗೂ ತಿಳಿದಿದೆ. ಇನ್ನು ಸ್ವತಃ ತಾನು ಮನುಷ್ಯ ಮಾತ್ರನೆಂದು ಹೇಳಿರುವ ಶ್ರೀರಾಮನೂ, ಒಮ್ಮೆ ಕೂಡ ತಾನು
ದೈವಾಂಶವುಳ್ಳವನೆಂದು ಹೇಳಿಯೇ ಇಲ್ಲ!! ಹಿಂದುಗಳು ಶ್ರೀರಾಮನನ್ನು ಆದರ್ಶವ್ಯಕ್ತಿಯೆಂದೂ ಕರೆಯುತ್ತಾರಲ್ಲದೇ, ವಿಷ್ಣುವಿನ ಏಳನೇಯ ಅವತಾರವೆಂದೂ
ಪರಿಗಣಿಸುತ್ತಾರೆ!! ಭಾರತದಲ್ಲಿ ರಾಮನ ಆಳ್ವಿಕೆಯ ಕಾಲ ಅತ್ಯಂತ ಸುಭಿಕ್ಷವಾಗಿದ್ದು, ನ್ಯಾಯ, ನೀತಿಗಳಿಂದ ಕೂಡಿದ್ದವೆಂದು ತಿಳಿದು ಬರುತ್ತದೆ. ಇನ್ನು ವಿಷ್ಣುವಿನ
ದಶಾವತಾರದ ಬಗ್ಗೆ ಅದರ ಹಿಂದಿರುವ ವಿಚಾರಗಳನ್ನು ತಿಳಿದಿದ್ದೇವೆ. ಆದರೆ ಶ್ರೀರಾಮನಾಗಿ ಶ್ರೀವಿಷ್ಣು ಜನ್ಮತಾಳಿರೋದರ ಹಿಂದಿನ ಕಾರಣವೇನು ಎಂಬುವುದು ತಿಳಿಯುವ ಗೋಜಿಗೆ ಹೋಗಿಲ್ಲ!!

ಪುರಾಣಗಳು ಹೇಳಿರುವ ಪ್ರಕಾರ ಒಂದು ಹುಲುಕಡ್ಡಿ ಅಲ್ಲಾಡಬೇಕಾದರೂ ಅದಕ್ಕೆ ಕಾರಣಗಳಿರುತ್ತವೆ ಎನ್ನುವ ಮಾತನ್ನು ಕೇಳಿದ್ದೇವೆ!! ಇನ್ನು ದೈವಸಂಭೂತನಾದ ಶ್ರೀರಾಮನು ಮನುಷ್ಯ ಕುಲದ ಉದ್ಧಾರಕ್ಕಾಗಿ ಅವತಾರಗಳನ್ನು ಪಡೆದಿರುವಾಗ ಅದರ ಹಿಂದಿರುವ ಕಾರಣಗಳು ಕೂಡ ಅತೀ ಮುಖ್ಯವಾಗಿರುತ್ತದೆ!! ಇನ್ನೂ ರಾಮಾಯಣ ನಡೆಯಲು ಹೆಣ್ಣೇ ಕಾರಣ ಎಂದು ಹೇಳುವ ಅದೆಷ್ಟೋ ಮಂದಿ ಸೀತೆಯನ್ನು ಕಡೆಗಣಿಸುವವರೂ ಇದ್ದಾರೆ!!! ಹೌದು.. ಹಾಗಾದರೆ ಶ್ರೀರಾಮನಾಗಿ ವಿಷ್ಣು ಜನ್ಮತಾಳಲು ಇರುವ ಮುಖ್ಯ ಕಾರಣಗಳಾದರು ಯಾವುದು ಗೊತ್ತೇ??

1. ದ್ವಾರಪಾಲಕರಿಂದ ಸಿಕ್ಕ ಶಾಪ

ಏನಿದು?? ಕೇವಲ ದ್ವಾರಪಾಲಕರಿಂದ ಸಿಕ್ಕ ಶಾಪದಿಂದಾಗಿ ಶ್ರೀವಿಷ್ಣು ಶ್ರೀರಾಮನಾಗಿ ಜನಿಸಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಆದರೆ ಭಾಗವತದಲ್ಲಿ ಬರುವ ಕಥೆಯ ಪ್ರಕಾರ, ಶ್ರೀ ವಿಷ್ಣುವಿನ ವೈಕುಂಠವನ್ನು ಕಾವಲು ಕಾಯೋ ಕೆಲಸ ಮಾಡುತ್ತಾ ಇದ್ದ. ಜಯ-ವಿಜಯ ಎಂಬುವ ಇಬ್ಬರು ದ್ವಾರಪಾಲಕರು, ಒಬ್ಬ ಬ್ರಾಹ್ಮಣ ಕೊಟ್ಟ ಶಾಪದಿಂದಾಗಿ ಅಸುರರಾಗಿ ಜನ್ಮಪಡೆಯುತ್ತಾರೆ!! ಆದರೆ ಈ ಅಸುರರಾಗಿ ಜನ್ಮ ಪಡೆದಿದ್ದು ಬೇರಾರು ಅಲ್ಲ, ಕಶ್ಯಪ ಬ್ರಹ್ಮನ ಪುತ್ರರಾದ ಹಿರಣ್ಯಕಶ್ಯಪ ಮತ್ತು ಹಿರಣ್ಯಾಕ್ಷ!! ಆದರೆ ಇವರಲ್ಲಿ ಅಸುರತ್ವವೇ ತುಂಬಿ ತುಳುಕಾಡುತ್ತಿದ್ದು, ತದನಂತರದಲ್ಲಿ ಇಂದ್ರನ ಪಟ್ಟವನ್ನು ತಮ್ಮದಾಗಿಸಬೇಕೆಂಬ ಆಸೆಯೂ ಇವರಲ್ಲಿ ಹೆಚ್ಚಾಗತೊಡಗಿತು!! ಆದರೆ ಇಂದ್ರನ ಪದವಿಯ ಮೇಲೆ ಕಣ್ಣುಹಾಕಿದರೆ ಅವರಿಗೆ ಎಲ್ಲಾದರೂ ಉಳಿಗಾಲವಿದೆಯೇನು?? ಹೀಗೆ ಪಟ್ಟು ಹಿಡಿದು ತಮ್ಮ ಅಸುರತ್ವದಿಂದ ಎಲ್ಲವನ್ನೂ ತಮ್ಮದಾಗಿಸುವ ಆಸೆಯನ್ನು ಹೊತ್ತಿದ್ದ ಸಂದರ್ಭದಲ್ಲಿ ಶ್ರೀವಿಷ್ಣುವು ಹಿರಣಾಕ್ಷನನ್ನು ವರಾಹವತಾರದಲ್ಲಿ ಹತ್ಯೆ ಮಾಡುತ್ತಾನೆ!! ತದನಂತರದಲ್ಲಿ ಹಿರಣ್ಯಕಶ್ಯಪ ತನ್ನ ಅಹಂಕಾರದಿಂದ ತನ್ನ ಮಗನಾದ ಶ್ರೀವಿಷ್ಣುವಿನ ಭಕ್ತನಾದ ಪ್ರಹ್ಲಾದನನ್ನು ಹಿಂಸಿಸುತ್ತಾನೆ ತದನಂತರದಲ್ಲಿ ನರಸಿಂಹವತಾರವಾಗಿ ಹಿರಣ್ಯಕಶ್ಯಪನನ್ನು ಹತ್ಯೆಗೈಯುತ್ತಾನೆ!!

Image result for hiranyakashipu killed by shri narasimha

ಆದರೆ, ಶ್ರೀವಿಷ್ಣುವು ಆ ಅಸುರರನ್ನು ವರಾಹ ಮತ್ತು ನರಸಿಂಹಾವತಾರದಿಂದ ಕೊಂದರೆ, ಶ್ರೀರಾಮನ ಅವತಾರ ಈ ದ್ವಾರಪಾಲಕರಿಗೆ ಸಿಕ್ಕ ಶಾಪದಿಂದ ಎಂದು
ಹೇಳಲು ಸಾಧ್ಯವೇ??! ಹಾಗಾದರೆ ಶ್ರೀರಾಮನು ಇವರನ್ನು ಕೊಂದಿದ್ದಾದರೂ ಯಾವಾಗ ಗೊತ್ತೆ?? ಹಿರಣ್ಯಕಶ್ಯಪ ಮತ್ತು ಹಿರಣ್ಯಾಕ್ಷ ತಮ್ಮ ಈ ಜನ್ಮದಿಂದ
ಮೋಕ್ಷವನ್ನು ಪಡೆಯದೇ ತದನಂತರದಲ್ಲಿ ಮತ್ತೆ ರಾಮಾಯಣದ ಸಂದರ್ಭದಲ್ಲಿ ಜನಿಸುತ್ತಾರೆ. ಅವರೇ ರಾವಣ ಮತ್ತು ಕುಂಭಕರ್ಣ!! ಹಾಗಾಗಿ ಶ್ರೀವಿಷ್ಣುವು
ಶ್ರೀರಾಮನ ಅವತಾರದಲ್ಲಿ ರಾವಣ ಮತ್ತು ಕುಂಭಕರ್ಣರನ್ನು ಲಂಕೆಯಲ್ಲಿ ಕೊಲ್ಲುತ್ತಾನೆ!! ಹಾಗಾಗಿ ರಾಮಾಯಾಣ ನಡೆಯಲು ಸೀತೆ ಮಾತ್ರ ಕಾರಣಳಲ್ಲ ಬದಲಾಗಿ ಈ ದ್ವಾರಪಾಲಕರ ಶಾಪದಿಂದಾಗಿ ಅವರ ಶಾಪವಿಮೋಚನೆ ಮಾಡಲು ಶ್ರೀವಿಷ್ಣುವು ರಾಮನಾಗಿ ಅವತರಿಸಿದ್ದು, ಹಾಗಾಗಿ ರಾಮಯಾಣ ನಡೆಯಲು ಇದು ಒಂದು ಕಾರಣವಾಗಿದೆ!!

2. ಜಲಂಧರನ ಹೆಂಡತಿ ಕೊಟ್ಟ ಶಾಪದಿಂದ..!!

ಈ ಜಲಂಧರ ಯಾರು ಗೊತ್ತೆ?? ಶಿವ ಪುರಾಣದ ಪ್ರಕಾರ ಶಿವನ ಅಂಶನಾಗಿದ್ದ ಜಲಂಧರ ಮಹಾನ್ ಕೋಪಿಷ್ಠ!! ಎಲ್ಲ ದೇವತೆಗಳು, ರಾಕ್ಷಸತ್ವವನ್ನು
ಮೈಗೂಡಿಸಿಕೊಂಡಿದ್ದ ಜಲಂಧರನ ಜೊತೆ ಯುದ್ದಮಾಡುವಲ್ಲಿ ವಿಫಲರಾಗುತ್ತಾರೆ!! ಅಷ್ಟೇ ಅಲ್ಲದೇ ಹೀನಾಯವಾಗಿ ಸೋಲನ್ನು ಅನುಭವಿಸುತ್ತಾರೆ. ಹಾಗಾಗಿ ಶಿವನ ಅಂಶವನ್ನು ಹೊಂದಿರುವ ಈತನನ್ನು ಕೊಲ್ಲಲು ಶಿವನಿಂದ ಮಾತ್ರ ಸಾಧ್ಯ ಎಂದು ತಿಳಿದ ದೇವತೆಗಳು ನೀಲಕಂಠನಾದ ಮಹಾದೇವನಲ್ಲಿಗೆ ಧಾವಿಸುತ್ತಾರೆ!! ಹಾಗಾಗಿ ಶಿವನು ಈತನನ್ನು ನಿರ್ಣಾಮ ಮಾಡುವಲ್ಲಿ ಜಲಂಧರನ ಜೊತೆ ಕಾದಾಡುತ್ತಾನೆ. ಆದರೆ ಆತನನ್ನು ಕೊಲ್ಲೋದಕ್ಕೆ ಶಿವನಿಂದಲೂ ಆಗಲಿಲ್ಲ. ಯಾಕೆಂದರೆ ಆ ಸಮಯದಲ್ಲಿ ವಿಷ್ಣುವಿನ ಮಾಹಾನ್ ಭಕ್ತೆಯಾದ ಜಲಂಧರನ ಹೆಂಡತಿ ವೃಂದಾ, ಗಂಡನಿಗೋಸ್ಕರ ಕಠಿಣವಾದ ಉಪವಾಸವನ್ನು ಕೈಗೊಂಡಿರುತ್ತಾಳೆ!!. ಆದರೆ ಜಗತ್ತಿನ ಕಲ್ಯಾಣಕ್ಕೋಸ್ಕರ ಶ್ರಿ ವಿಷ್ಣುವು ಆಕೆಯ ವೃತವನ್ನು ಮುರಿಯಬೇಕೆಂದು ಜಲಂಧರನ ವೇಷದಲ್ಲಿ ವೃಂದಾಳ ಬಳಿ ಆಗಮಿಸುತ್ತಾನೆ. ಅಷ್ಟೇ ಅಲ್ಲದೇ, ಆಕೆಯ ಪಾತಿವೃತ್ಯವನ್ನು ಭಂಗ ಮಾಡುತ್ತಾನೆ. ಈ ಮಧ್ಯೆ ಮಹಾದೇವನು ಜಲಂಧರನನ್ನು ಕೊಲ್ಲುತ್ತಾನೆ!! ಸತ್ಯ ಗೊತ್ತಾದ ವೃಂದಾ ವಿಷ್ಣುವಿಗೆ ಶಾಪವನ್ನು ನೀಡುತ್ತಾಳೆ. ಅದೇನೆಂದರೆ; ಮುಂದಿನ ಅವತಾರದಲ್ಲಿ ವಿಷ್ಣು ರಾಜನಾಗಿ ಹುಟ್ಟಿದ್ದರೂ ಸಾಮಾನ್ಯವಾಗಿ ಜೀವನ ನಡೆಸಿ, ಅವನ ಹೆಂಡತಿ ಮೋಸದಿಂದ ಅವನಿಂದ ದೂರ ಆಗಲಿ ಎನ್ನುವ ಶಾಪವನ್ನು ನೀಡುತ್ತಾಳೆ!! ಹಾಗಾಗಿ ಶ್ರೀರಾಮನು ವನವಾಸಕ್ಕೆ ಹೋದ ಸಂದರ್ಭದಲ್ಲಿ ಸೀತಾ ಮಾತೆಯನ್ನು ಮೋಸದಿಂದ ರಾವಣ ಅಪಹರಿಸಿದ ಎಂದರೆ ಅದು ವೃಂದಾಳ ಶಾಪದಿಂದ ಎನ್ನುವುದು ಇಲ್ಲಿ ತಿಳಿಯುತ್ತದೆ!!

3. ಮನು ಮತ್ತು ಆತನ ಹೆಂಡತಿಗೆ ವಿಷ್ಣು ಕೊಟ್ಟ ವರ

ಶ್ರೀವಿಷ್ಣುವು ನೀಡಿದ ವರವು ಕೂಡ, ರಾಮಾಯಣ ನಡೆಯಲು ಸಾಧ್ಯವಾಯಿತೇ ಎನ್ನುವ ಪ್ರಶ್ನೆಗಳು ಇಲ್ಲಿ ಮೂಡುತ್ತವೆ. ಯಾಕೆಂದರೆ, ಹಿಂದೂ ಪುರಾಣದ ಪ್ರಕಾರ ಮನು ಮತ್ತವನ ಹೆಂಡತಿ ಸತ್ರುಪ, ಮನುಷ್ಯ ಜನಾಂಗ ಶುರು ಮಾಡಿದವರು. ಹಾಗಾಗಿ ಇಬ್ಬರೂ ಕೂಡ ವಿಷ್ಣುವಿನ ಪರಮ ಭಕ್ತರಾಗಿದ್ದರು!! ಈ ಸತಿ-ಪತಿಯರು ವಿಷ್ಣುವಿನ ಧ್ಯಾನ ಮಾಡ್ತಾ ಕಾಲ ಕಳೆಯುತ್ತಿರುತ್ತಾರೆ!! ಹೀಗೆ ವಿಷ್ಣುವಿನ ಆರಾಧಕರಾದ ಈ ಮನು-ಸತ್ರುಪನಿಗೆ ಒಲಿದ ವಿಷ್ಣುವು ಪ್ರತ್ಯಕ್ಷನಾಗಿ ಏನು ವರಬೇಕು ಎಂದು ಕೇಳುತ್ತಾನೆ. ಆಗ ಗಂಡ ಹೆಂಡತಿ ವಿಷ್ಣು ತಮ್ಮ ಮಗನಾಗಿ ಹುಟ್ಟಬೇಕು ಎಂದು ಕೇಳಿಕೊಳ್ಳುತ್ತಾರೆ. ಹೀಗೆ ವಿಷ್ಣು ಕೊಟ್ಟ ವರದಿಂದಾಗಿ ಮನು ದಶರಥನಾಗಿ ಆತನ ಹೆಂಡತಿ ಸತ್ರುಪ ಕೌಸಲ್ಯೆಯಾಗಿ ಜನ್ಮತಾಳುತ್ತಾರೆ. ಹಾಗಾಗಿ ವಿಷ್ಣುವು ಶ್ರೀರಾಮನಾಗಿ ಜನ್ಮತಾಳುತ್ತಾನೆ ಎಂದು ಪುರಾಣ ಹೇಳುತ್ತವೆ.

Image result for dasharatha and kausalya

4. ನಾರದ ವಿಷ್ಣುವಿಗೆ ಕೊಟ್ಟ ಶಾಪ

ಒಂದುಸಲ ದೇವಋಷಿ ನಾರದ, ನಾನು ಧ್ಯಾನ ಮಾಡುತ್ತಾ ಇದ್ದರೆ ಸ್ವತಃ ಕಾಮದೇವ ಕೂಡ ನನ್ನನ್ನು ಕದಲಿಸಲಾಗದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಈ ವಿಚಾರವನ್ನು ಮಹಾದೇವನ ಬಳಿಯೂ ಹೇಳುತ್ತಾರೆ ನಾರದ!! ಆದರೆ ಈ ವಿಚಾರವನ್ನು ವಿಷ್ಣುವಿನ ಬಳಿ ಮಾತ್ರ ಹೇಳಿಕೊಳ್ಳಬೇಡಿ ಎಂದು ಸ್ವತಃ ಮಹಾದೇವನೇ ಹೇಳುತ್ತಾನೆ. ಆದರೆ ಅಹಂಕಾರವನ್ನು ಬಿಡದ ನಾರದ ಈ ವಿಚಾರವನ್ನು ವಿಷ್ಣುವಿನ ಬಳಿ ಹೇಳಿಯೇ ಬಿಡುತ್ತಾನೆ!! ಈ ವಿಚಾರವನ್ನು ಗಮನಿಸಿದ ವಿಷ್ಣು, ನಾರದನ ಅಹಂಕಾರ ಮುರಿಯಬೇಕು ಎಂದು ನಿರ್ಧರಿಸಿದ ವಿಷ್ಣು ಒಂದು ಉಪಾಯವನ್ನು ಮಾಡುತ್ತಾನೆ.

ಮೂರುಲೋಕವನ್ನು ಸುತ್ತುವ ನಾರದ ವೈಕುಂಠದಿಂದ ಮರಳುವಾಗ ಒಂದು ರಾಜ್ಯದಲ್ಲಿ ಸ್ವಯಂವರವು ನಡೆಯುತ್ತಿರುತ್ತದೆ. ಇದನ್ನು ನೋಡಿದ ನಾರದನಿಗೆ ಆ
ಹುಡುಗೀಯ ಮೇಲೆ ಪ್ರೇಮಾಂಕುರ ಹುಟ್ಟುತ್ತೆ!! ಆದರೆ ಇವೆಲ್ಲವೂ ವಿಷ್ಣುವು ನಾರದನ ಅಹಂಕಾರ ಮುರಿಯಲು ಮಾಡಿದ ಉಪಾಯವಾಗಿತ್ತು. ನಾರದ ವಿಷ್ಣುವಿನ ಬಳಿ ಬಂದು ನಾನು ಆ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅದಕ್ಕಾಗಿ ಆಕೆಯನ್ನು ಮೆಚ್ಚಿಸಲು ನಿನ್ನ ತರ ನನಗೆ ಸುಂದರವಾದ ರೂಪನ್ನು ಕೊಡು ಎಂದು ಕೇಳುತ್ತಾನೆ!!! ವಿಷ್ಣು ಸರಿ ಎಂದು ಸುಂದರವಾದ ರೂಪ ಕೊಡುತ್ತಾನೆ. ಹಾಗಾಗಿ ಹುಡುಗಿ ನಾರದನನ್ನು ಮೆಚ್ಚಿ ಹೂವಿನ ಹಾರವನ್ನು ಹಾಕಲು ಮುಂದಾಗುತ್ತಾಳೆ. ಆ ಸಮಯದಲ್ಲಿ ನಾರದನ ಮುಖ ಕೋತಿಯ ಮುಖದ ತರ ಬದಲಾಗುತ್ತೆ. ಇದನ್ನು ಕಂಡು ಆಕೆ ನಗೋದಕ್ಕೆ ಶುರು ಮಾಡುತ್ತಾಳೆ!! ಇದರಿಂದ ಕೋಪಗೊಂಡ ನಾರದ ವಿಷ್ಣುವಿಗೆ ನೀನು ಕೂಡ ನಿನ್ನ ಹೆಂಡತಿಯಿಂದ ದೂರ ಆಗಿ, ಸೇರುವುದಕ್ಕೆ ಪರಿತಪಿಸುವ ಹಾಗೆ ಆಗಲಿ ಎಂದು ಶಾಪ ನೀಡುತ್ತಾನೆ!! ನಾರದನ ಶಾಪದಿಂದಲೇ ರಾಮನಿಂದ ಸೀತೆ ದೂರವಾಗಿ ಪರಿತಪಿಸುವುದಕ್ಕೆ ಕಾರಣವಾಗಿದೆ!! ಹಾಗಾಗಿ ಇದು ಕೂಡ ಒಂದು ರೀತಿಯ ಕಾರಣವಾಗಿದೆ!!!

ಸಾಮಾನ್ಯವಾಗಿ ಹೆಣ್ಣಿನಿಂದಲೇ ರಾಮಾಯಾಣ ನಡೆಯಿತು ಎಂದು ಹೇಳುವ ಅದೆಷ್ಟೋ ಮಂದಿಗೆ, ರಾಮಾಯಣ ನಡೆಯಲು ಮೂಲ ಕಾರಣಗಳು ಇವೆಯಾ..
ಎನ್ನುವುದನ್ನು ತಿಳಿದು ಕೊಳ್ಳುವುದು ಅತೀ ಮುಖ್ಯವಾಗಿದೆ. ಹಾಗಾಗಿ ಈ ಎಲ್ಲಾ ಕಾರಣಗಳು ಕೂಡ ರಾಮನ ಅವತಾರಕ್ಕೆ ಹಾಗೂ ರಾಮಾಯಣ ನಡೆಯಲು
ಕಾರಣವಾದ ಪ್ರಮುಖ ಅಂಶಗಳಾಗಿವೆ!!

– ಅಲೋಖಾ

Tags

Related Articles

Close