ಪ್ರಚಲಿತ

ರಾಮಾಯಣ ಮಹಾಭಾರತವನ್ನು ಅಭ್ಯಸಿಸಲು ಮುಂದಾಗುತ್ತಿರುವ ಈ ರಾಷ್ಟ್ರ ಹಿಂದೂ ರಾಷ್ಟ್ರವಾಗುವತ್ತ ಒಲವು ತೋರಿತ್ತಿದೆಯೇ?!

ರಾಮಾಯಣ ಮಹಾಭಾರತ ನಮ್ಮ ಪವಿತ್ರ ಗ್ರಂಥಗಳು. ಆದರೆ ಕೆಲ ಹಿಂದೂ ವಿರೋಧಿಗಳು ರಾಮಾಯಣ ಮಹಾಭಾರತ ಒಂದು ಕಟ್ಟು ಕಥೆ ಎಂದು ಜರಿಯುತ್ತಿರುತ್ತಾರೆ. ಎಷ್ಟು ವಿಪರ್ಯಾಸ ನೋಡಿ ಹಿಂದೂ ದೇಶವೆಂದೇ ಪ್ರಸಿದ್ಧಿ ಹೊಂದಿದ ಭಾರತವಾದರೂ ಕೂಡಾ ಇಲ್ಲಿರುವ ಕೆಲ ಹಿಂದೂ ವಿರೋಧಿಗಳು ಮಾತ್ರ ಇದೆಲ್ಲಾ ಸುಳ್ಳು ಹೇಳಬೇಕೆಂದರೆ ಭಾರತದಿಂದ ಪ್ರೇರಿತಗೊಂಡ ಕೆಲ ರಾಷ್ಟ್ರಗಳು ಹಿಂದೂಗಳ ಆಚರಣೆಯನ್ನೇ ಮಾಡಲು ಹೊರಟಿದೆ ಎಂದರೆ ನಮ್ಮ ಭಾರತ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುವುದು ತಿಳಿಯುತ್ತದೆ. ಭಾರತ ಎಂಬ ಹೆಸರು ಕೇಳಿದರೆ ಸಾಕು ಅದೆಷ್ಟೋ ಜನ ಇಲ್ಲೇ ಜನಿಸಬೇಕಿತ್ತು ಎಂದು ದೇವರಲ್ಲಿ ಪ್ರಾರ್ಥಿಸಿದ್ದೂ ಉಂಟು.. ಅಷ್ಟ ಮಟ್ಟಿಗೆ ಈ ದೇಶ ಪ್ರೇರಿತಗೊಂಡಿದೆ. ಇಲ್ಲಿನ ಆಚಾರ ವಿಚಾರ ಸಂಸ್ಕøತಿಯನ್ನು ನೋಡಿದರೆ ಕೆಲ ರಾಷ್ಟ್ರಗಳ ಜನರು ಮುಂದಿನ ಜನ್ಮದಲ್ಲಾದರೂ ಈ ದೇಶದಲ್ಲಿ ಹುಟ್ಟ ಬೇಕು ಎಂದು ಹಾತೊರೆಯುತ್ತಾರೆ. ಆದರೆ ಕೆಲ ಜನರು ಇಲ್ಲೇ ಹುಟ್ಟಿ ಇದೇ ಮಣ್ಣಲ್ಲಿ ಬೆಳೆದರೂ ಭಾರತದ ಆಚಾರ ವಿಚಾರದ ಬಗ್ಗೆ ಬಾಯಿಗೆ ಬಂದಂತೆ ಜರಿಯುತ್ತಿರುತ್ತಾರೆ.

ಹಿಂದೂ ಧರ್ಮದ ಸೊಗಡನ್ನು ತುಂಬಿಕೊಂಡಿರುವ ಭಾರತದಲ್ಲಿ ಅದೆಷ್ಟೋ ಗ್ರಂಥಗಳ ಆಗರ ತುಂಬಿಕೊಂಡಿದೆ ಎಂದರೆ ಅದಕ್ಕೆ ಲೆಕ್ಕವೇ ಇಲ್ಲ ಎಂದು ಹೇಳಬಹುದು. ಆದರೆ ಹಿಂದೂ ಧರ್ಮವನ್ನು ಆರಾಧಿಸುವ ರಾಷ್ಟ್ರ ಮತ್ತೊಂದಿದೆ ಎಂದು ತಿಳಿದಾಕ್ಷಣ ಅಚ್ಚರಿಯಾಗುವುದು ಸಹಜ. ಹಿಂದೂ ಧರ್ಮವನ್ನು ಭಾರತಕ್ಕಿಂತಲೂ ಮಿಗಿಲಾಗಿ ಆರಾಧಿಸುವ ಪುಣ್ಯಭೂಮಿ ಮತ್ತೊಂದಿದೆ ಎಂದರೆ ಅದು ಹೆಮ್ಮೆಯ ವಿಚಾರ. ಈಗಾಗಲೇ ಇಂಡೋನೇಷ್ಯಾ ಎಂಬ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ಧರ್ಮದ ಸೊಗಡು ತುಂಬಿ ತುಳುಕಾಡುತ್ತಿರುವ ಬೆನ್ನಲ್ಲೇ ವಿಶ್ವದ ದೊಡ್ಡಣ್ಣ ಎನಿಕೊಂಡ ಅಮೆರಿಕಾದಲ್ಲೂ ರಾಮಾಯಣ ಮಹಾಭಾರತದ ಅಧ್ಯಯನಕ್ಕೆ ಮುಂದಾಗಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯ ವಿಚಾರವಲ್ಲವೇ..?

ಹಿಂದೂ ಧರ್ಮದ ಕುರಿತಂತೆ ಅವಹೇಳನ ಮಾಡುವ ರೀತಿಯಲ್ಲಿ ಕೆಲವರು ಮಾತನಾಡುತ್ತಾರೆ. ಆದರೆ ವಿಶ್ವದ ಟಾಪ್ ಎನಿಸಿಕೊಂಡ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ರಾಮಾಯಣ-ಮಹಾಭಾರತ ಅಧ್ಯಯನಕ್ಕೆ ಮುಂದಾಗಿದೆ. ಹೀಗಾಗಿ ಇಲ್ಲಿನ ಬುದ್ಧಿ ಜೀವಿಗಳಿಗೆ ತಡೆಯಲಾಗದಷ್ಟು ಸಂಕಟವಾಗುವುದಂತೂ ಖಂಡಿತ. ಕೆಲ ಗಂಜಿಗಿರಾಕಿಗಳು ರಾಮಾಯಣ-ಮಹಾಭಾರತ ಕುರಿತಂತೆ ಕೀಳಾಗಿ ಮಾತನಾಡುತ್ತಿರುವಾಗಲೇ ವಿಶ್ವದ ಈ ದೊಡ್ಡ ರಾಷ್ಟ್ರ ತನ್ನ ರಾಷ್ಟ್ರದ ವಿಶ್ವವಿದ್ಯಾಲಯದಲ್ಲಿ ರಾಮಾಯಣ-ಮಹಾಭಾರತದ ಅಧ್ಯಯನ ಮಾಡಿಸುತ್ತಿದೆ.

ಜಗತ್ತಿನ ಟಾಪ್ ಯುನಿವರ್ಸಿಟಿ ಎನಿಸಿಕೊಂಡ ಅಮೆರಿಕಾದ ಹಾರ್ವರ್ಡ್ ಯುನಿವರ್ಸಿಟಿ ಕಳೆದ ವರ್ಷ ಹಿಂದುಗಳ ಶ್ರೇಷ್ಟ ಗ್ರಂಥಗಳಾದ ರಾಮಾಯಣ-ಮಹಾಭಾರತವನ್ನು ಅಧ್ಯಯನ ಮಾಡಲು ಮುಂದಾಗಿ ಭಾರತದದಲ್ಲಿರುವ ಬುದ್ಧಿ ಜೀವಿಗಳಿಗೆ ಕಪಾಳ ಮೋಕ್ಷವಾದಂತಾಗಿದೆ. ಹಾರ್ವರ್ಡ್ ಯುನಿವರ್ಸಿಟಿ `ಇಂಡಿಯನ್ ರಿಲಿಜಿಯನ್ಸ್ ಥ್ರೂ ದೇರ್ ನರೇಟಿವ್ ಲಿಟ್ರೇಚರ್’ ಕೋರ್ಸ್ ಮೂಲಕ ಈ ಮಹಾಕಾವ್ಯಗಳನ್ನು ಪಠ್ಯದಲ್ಲಿ ಪರಿಚಯಿಸಲಾಗಿದೆ. ಹಾರ್ವರ್ಡ್ ಯುನಿವರ್ಸಿಟಿ `ಇಂಡಿಯನ್ ರಿಲಿಜಿಯನ್ಸ್ ಥ್ರೂ ದೇರ್ ನರೇಟಿವ್ ಲಿಟ್ರೇಚರ್’ ಕೋರ್ಸ್ ಮೂಲಕ ಭಾರತೀಯ ಧರ್ಮ, ಕವಿ ವ್ಯಾಸ ಮತ್ತು ವಾಲ್ಮೀಕಿಯ ದೃಷ್ಟಿಕೋನ, ಸಿನಿಮಾ ಮತ್ತು ಧಾರವಾಹಿಗಳಲ್ಲಿ ಮಹಾಕಾವ್ಯಗಳನ್ನು ಬಳಸಿಕೊಂಡು ಅಲ್ಲಿನ ವಿದ್ಯಾರ್ಥಿಗಳು ರಾಮಾಯಣ-ಮಹಾಭಾರತವನ್ನು ಅಧ್ಯಯನ ಮಾಡುತ್ತಿದ್ದಾರೆ.

ಬರೀ ಇಷ್ಟೇ ಅಲ್ಲದೆ… ಇದರ ಜೊತೆಗೆ ದಕ್ಷಿಣ ಏಷ್ಯಾದ ಧಾರ್ಮಿಕ ಸಂಪ್ರದಾಯಗಳು ಮತ್ತು ಸಮುದಾಯಗಳು ಕುರಿತ ಕೋರ್ಸ್‍ಗಳನ್ನು ಆರಂಭಿಸಲಿದ್ದು, ಇಲ್ಲಿನ ನೃತ್ಯ ಪ್ರಕಾರಗಳು, ತೊಗಲು ಗೊಂಬೆ, ಬೀದಿ ನಾಟಕ, ಆಧುನಿಕ ಕಾಲಘಟ್ಟದಲ್ಲಿ ಮಹಾಕಾವ್ಯಗಳ ಬಳಕೆ ಕುರಿತಾದ ವಿಷಯಗಳನ್ನು ಇತಿಹಾಸ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ. ಭಾರತೀಯ ಮಹಾಕಾವ್ಯಗಳು ದೀರ್ಘ ಮತ್ತು ಸಂಕೀರ್ಣ ನಿರೂಪಣೆಯನ್ನು ಹೊಂದಿವೆ. ಇದರಲ್ಲಿ ಬರುವ ಪ್ರತಿಯೊಂದು ಅಂಶವೂ ಮಾನವನ ಅನುಭವಕ್ಕೆ ತಲುಪುವಂತಹುವೇ ಆಗಿವೆ. ಈ ಮೂಲಕ ಮಹಾಕಾವ್ಯಗಳ ಅಧ್ಯಯನ ಮತ್ತು ಹಿಂದೂ ಧರ್ಮದ ವಿವಿಧ ಆಯಾಮಗಳನ್ನು, ಸಂಪ್ರದಾಯಗಳನ್ನು ಅಮೆರಿಕಾದ ವಿದ್ಯಾರ್ಥಿಗಳು ಅಭ್ಯಸಿಸಲಿದ್ದು ಇದು ಕೇವಲ ಭಾರತಕ್ಕೆ ಮಾತ್ರ ಹೆಮ್ಮೆಯ ವಿಚಾರವಲ್ಲದೆ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ!!

ಅದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ ಭೇಟಿಯಿಂದಾಗಿ ಭಾರತದ ಕೆಲವು ಸಂಸ್ಕøತಿಯನ್ನು ಕೂಡಾ ಅಮೇರಿಕಾ ಅಳವಡಿಸುತ್ತಿದೆ ಎಂಬುವುದಕ್ಕೆ ನಿದರ್ಶನವಾಗಿ ಭಾರತದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬಕ್ಕೆ ಅಮೆರಿಕಾದಲ್ಲೂ ರಜೆ ಘೋಷಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಿ ನಮ್ಮ ದೇಶದ ಅಭಿವೃದ್ಧಿ ಮತ್ತು ನಮ್ಮ ಕೆಲ ಸಂಸ್ಕತಿಯನ್ನು ಕೂಡಾ ಆ ದೇಶಕ್ಕೆ ಧಾರೆ ಎರೆದುಕೊಟ್ಟು ಬಂದಿದ್ದಾರೆ ಎಂದು ಹೇಳಬಹುದು. ಇಲ್ಲದಿದ್ದಲ್ಲಿ ನಮ್ಮ ದೇಶದಲ್ಲಿ ನಡೆಯುವ ಹಬ್ಬದ ಬಗ್ಗೆ ನಮ್ಮ ಜನರಿಗೇ ತಿಳಿದಿಲ್ಲ.. ಆದರೆ ಅಮೆರಿಕಾ ಇಲ್ಲಿನ ಹಬ್ಬ ವೈಶಿಷ್ಟ್ಯತೆಗಳ ಬಗ್ಗೆ ತಿಳಿದು ಅದನ್ನು ಪಾಲಿಸುತ್ತಿದೆ ಎಂದರೆ ನಿಜಕ್ಕೂ ನಾವು ಗ್ರೇಟ್!! ಮೋದಿ ಯಾವುದೇ ರಾಷ್ಟ್ರಕ್ಕೂ ಭೇಟಿ ನೀಡಿದರೂ ಒಂದು ಮಹತ್ವದ ರಾಜತಾಂತ್ರಿಕ ಯಶಸ್ಸನ್ನು ಕೈಗೊಂಡು ಬರುತ್ತಾರೆ. ಮೋದಿಜೀಯವರು ಏನೇ ಮಾಡಿದರೂ ಅದಕ್ಕೊಂದು ಮಹತ್ವ ಪೂರ್ಣವಾದ ಅರ್ಥವಿರುತ್ತದೆ..

ಅದಲ್ಲದೆ ಇಂಡೋನೇಷ್ಯಾದ ಹಿಂದುತ್ವವನ್ನು ನೋಡಿಯೇ ಇಲ್ಲಿನ ಕೆಲ ಹಿಂದೂಗಳು ಬೆಪ್ಪರಾಗಿದ್ದರು. ಇದೀಗ ಅಮೆರಿಕಾ ಕೂಡಾ ಹಿಂದುತ್ವವನ್ನು ಅನುಸರಿಸಲು ಹಿಂದುಗಳ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಲು ಮುಂದಾಗಿದೆ ಎಂದರೆ ನಮ್ಮ ದೇಶದ ಬುದ್ಧಿ ಜೀವಿಗಳಿಗೆ ಯಾವ ರೀತಿ ಉರಿಯುತ್ತಿರಬಹುದು. ದೇವರ ಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಹಾಕಿದರೆ ಎಲ್ಲಿ ಕೋಮುವಾದ ಎಂಬ ವಾಸನೆ ಅಂಟಿಬಿಡುತ್ತದೋ ಎಂಬ ಭಯದಲ್ಲಿ ದೇಶದ ಜಾತ್ಯಾತೀತ ನಾಯಕರು ತಾನು ಹುಟ್ಟಿದ ಧರ್ಮವನ್ನೇ ಮರೆತು ಬಿಡುತ್ತಾರೆ. ಭಾರತದಲ್ಲಿ ಹಿಂದೂ ಧರ್ಮವನ್ನು ಕೆಲವರು ಶತಾಯಗತಾಯ ಧ್ವೇಷಿಸುತ್ತಿರಬೇಕಾದರೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೆಲ್ಲಾ ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದೆ ಎಂದರೆ ನಿಜಕ್ಕೂ ಭಾರತ ಗ್ರೇಟ್. ಹಿಂದೂ ಧರ್ಮ ವಿಶ್ವಕ್ಕೇ ಪ್ರಭಾವ ಬೀರಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಅಲ್ಲ. ಸುಪ್ರೀಂ ಕೋರ್ಟೇ ಹಿಂದೂ ಒಂದು ಧರ್ಮ ಮಾತ್ರ ಅಲ್ಲ, ಅದೊಂದು ಜೀವನ ವಿಧಾನ ಎಂದು ಕೂಡಾ ಹೇಳಿದೆ.

Tags

Related Articles

FOR DAILY ALERTS
Close