ಅಂಕಣದೇಶಪ್ರಚಲಿತ

ರಾಷ್ಟ್ರಗೀತೆಯಿಂದ “ಸಿಂಧ್” ಶಬ್ದವನ್ನು ತೆಗೆಯಿರಿ, ಆಗ ಮಾತ್ರ ನಾವು ಹೆಮ್ಮೆಯಿಂದ ಹಾಡುತ್ತೇವೆ ಎಂದ ಮದರಸಾ!!!

ನಮ್ಮ ರಾಷ್ಟ್ರದ ಗೀತೆಯನ್ನು ಹಾಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳು ನಮಗೆಲ್ಲಾ ಗೊತ್ತಿದೆ. ಆದರೆ ಈಗ ಅದೇ ಗೊಂದಲಗಳು, ವಿವಾದಗಳು ತೀರಾ ಕೆಳ ಮಟ್ಟಕ್ಕಿಳಿದಿರುವುದು ನೋಡಿದರೆ ವಿಷಾದವಾಗುತ್ತದೆ. ಯಾವ ಸ್ವತಂತ್ರ ರಾಷ್ಟ್ರದ ಪ್ರಜೆ ರಾಷ್ಟ್ರಗೀತೆಯನ್ನು ಹಾಡುವಾಗ ಹೆಮ್ಮೆಯಿಂದ ಎದೆಯುಬ್ಬಿಸಿ ಹಾಡಬೇಕಾಗಿತ್ತೋ, ಅವರಲ್ಲಿ ಕೆಲವರಿಗೆ ಆ ಭಾವನೆ ಬಾರದಿರುವುದು ದೌರ್ಭಾಗ್ಯವೇ ಸರಿ. ಲಖನೌ ಮದ್ರಾಸವು ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿತ್ತು. ಅದಕ್ಕೆ ಕಾರಣವನ್ನು ಕೇಳಿದಾಗ ಆ ಗೀತೆಯಲ್ಲಿ “ಸಿಂಧ್” ಎಂಬ ಶಬ್ದವಿದೆ. ಅದೇ ಕಾರಣಕ್ಕೆ ಹಾಡುವುದಿಲ್ಲ ಎಂಬ ಕಾರಣವನ್ನಿಟ್ಟಿತ್ತು.

ಉತ್ತರಪ್ರದೇಶ ಸರಕಾರದ ನಿರ್ದೇಶನದಂತೆ ಪ್ರಸಿದ್ಧ ಮುಸಲ್ಮಾನ ಸಂಸ್ಥೆ ದಾರುಲ್ ಉಲೂಮ್ ನದ್ವಾತುಲ್ ಉಲೇಮ ದ ವಿದ್ಯಾರ್ಥಿಗಳು, ಉಪನ್ಯಾಸಕರು, ಹಾಗೂ ಪದಾಧಿಕಾರಿಗಳು ಸ್ವಾತಂತ್ರ್ಯ ದಿನವನ್ನು ಆಚರಿಸಿಲು ನಿರ್ಧರಿಸಿದ್ದರು. ನಾಡ್ವದಲ್ಲಿ ಧ್ವಜವನ್ನು ಆರೋಹಣೆ ಮಾಡಿದ ನಂತರ ಅವರೆಲ್ಲಾ ಹಾಡಿದ್ದು “ಸಾರೆ ಜಹಾನ್ ಸೆ ಅಚ್ಛಾ” ಆಗಿತ್ತು. ನಂತರ ದೇಶದ ಹಿತಕ್ಕಾಗಿ ಎಲ್ಲರೂ ಪ್ರಾರ್ಥಿಸಿದರು. ಆದರೆ ಯಾರೊಬ್ಬರೂ ರಾಷ್ಟ್ರಗೀತೆಯನ್ನು ಹಾಡಿರಲಿಲ್ಲ.

ನಾಡ್ವದ ಮೌಲಾನ ಖಾಲಿದ್ ಘಸಿಪುರಿ ಅವರಲ್ಲಿ ಈ ವಿಚಾರದ ಕುರಿತಾಗಿ ಕೇಳಿದಾಗ, “1947 ಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ದಿನವನ್ನು ಆಚರಿಸುತ್ತಾ ಬಂದಿದ್ದೇವೆ. ಇವತ್ತೂ ಅದೇ ಸಂಪ್ರದಾಯದಂತೆ ಆಚರಿಸುತ್ತಿದ್ದೇವೆ ” ಎಂದರು.

“ಜನ-ಗಣ-ಮನ” ಹಾಡಿನಲ್ಲಿ ಸಿಂಧ್ ಎಂಬ ಶಬ್ದವಿದೆ.ಪ್ರಸ್ತುತ ಆ ಪ್ರದೇಶ ಈಗ ಪಾಕಿಸ್ತಾನದಲ್ಲಿದೆ. ನಾವು ದಿನನಿತ್ಯ ಪಾಕಿಸ್ತಾನಕ್ಕೆ ಪ್ರಾರ್ಥಿಸಲಾಗುವುದಿಲ್ಲ. ಒಂದು ವೇಳೆ ಭಾರತ ಸರಕಾರ ಆ ಶಬ್ದವನ್ನು ರಾಷ್ಟ್ರಗೀತೆಯಿಂದ ತೆಗೆದುಹಾಕಿದರೆ ನಾವೂ ಆ ಗೀತೆಯನ್ನು ಹೆಮ್ಮೆಯಿಂದ ಹಾಡುತ್ತೇವೆ” ಎಂದರು.

ಉತ್ತರಪ್ರದೇಶ ಮದರಾಸ ನಿಗಮಕ್ಕೆ ನಾಡ್ವ ಮದರಾಸವು ಒಳಪಟ್ಟಿಲ್ಲ. ಹಾಗಾಗಿ ಯಾವದೇ ರೀತಿಯಾದ ಸಾಕ್ಷಿ-ಪುರಾವೆಗಳನ್ನು ಸರಕಾರಕ್ಕೆ ಕೊಡಬೇಕಾಗಿಲ್ಲ. ” ಸರಕಾರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಯಾವುದೇ ನಿರ್ದೇಶನ ಬಂದಿಲ್ಲ. ಪತ್ರಿಕೆಗಳನ್ನು ನೋಡಿಯೇ ಈ ವಿಚಾರವನ್ನು ತಿಳಿದೆವು.ಅದಕ್ಕೆ ವಿಡಿಯೋ ಮಾಡುತ್ತಿದ್ದೇವೆ” ಎಂಬುದಾಗಿ ನಾಡ್ವ ಮದರಾಸದ ಪ್ರಾಂಶುಪಾಲರಾದ ಮೌಲಾನಾ ಡಾ. ಸಾಯಿದೂರ್ ರೆಹಮಾನ್ ಅಜ್ಮಿ ಯವರು ಸ್ಪಷ್ಟಪಡಿಸಿದರು

“ನಾವು ಪ್ರತೀ ವರ್ಷವೂ ಸ್ವಾತಂತ್ರ್ಯ ದಿನಚಾರಣೆಯನ್ನು ಆಚರಿಸಿತ್ತೇವೆ. ಆದರೆ ಮೊದಲ ಬಾರಿಗೆ ವಿಡಿಯೋ ಮಾಡುತ್ತಿದ್ದೇವೆ. ಕೆಲವು ತಿಂಗಳುಗಳಿಂದ ಅಭ್ಯಸಿಸಿದ ” ಸಾರೇ ಜಹಾನ್ ಸೇ ಅಚ್ಛಾ” ಹಾಡನ್ನೇ ಹಾಡುತ್ತೇವೆ. ” ಎಂದು ಅವರು ಮಾಧ್ಯಮಕ್ಕೆ ಹೇಳಿದ್ದರು.

3 ಗಂಟೆಗಳ ಕಾರ್ಯಕ್ರಮದ ನಂತರ ಪರಸ್ಪರ ಆಲಂಗಿಸಿ ಸಹಿತಿಂಡಿ ಹಂಚಿದರು. ಸ್ವಾತಂತ್ರ್ಯ ದಿನದ ಶುಭಾಶಯ ಎಂಬುದಾಗಿ ಹೇಳಿ ಇತರರಿಗೆ ಶುಭಾಶಯ ತಿಳಿಸುತ್ತಾರೆ.

“ಆ ವಿಶೇಷ ದಿನದಂದು ಮುಸಲ್ಮಾನ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಬೋಧಿಸುತ್ತಾರೆ. ಆ ಹೋರಾಟದ ಹಾದಿಯನ್ನೂ ವಿವರಿಸಿ ರಾಷ್ಟ್ರ ಪ್ರೇಮವನ್ನು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ” ಈ ರೀತಿಯಾಗಿ ಅವರು ಸ್ಪಷ್ಟನೆಯನ್ನು ಕೊಡುತ್ತಾರೆ.

ಈ ಬದಲಾವಣೆಯ ಘಟನೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು?

– ಆತ್ಮಿಕ

Tags

Related Articles

Close