ಪ್ರಚಲಿತ

ರಾಷ್ಟ್ರಪತಿಗಳು ವಿಧಾನಸೌಧದಲ್ಲಿ ಟಿಪ್ಪುವನ್ನು ಹೊಗಳಿ ಭಾಷಣ ಮಾಡಿದ್ದು ಯಾಕೆ ಗೊತ್ತೇ?! ಆರ್ ಟಿ ಐ ನಲ್ಲಿ ಬಹಿರಂಗವಾಯಿತು ಮಾಹಿತಿ!!!

ನವೆಂಬರ್ 10 ರಂದು ಹಠ ಸಾಧಿಸಿಯೇ ಬಿಡಬೇಕೆಂದು ಪಣ ತೊಟ್ಟು ಸಿದ್ಧರಾಮಯ್ಯನ ಸರಕಾರ ಟಿಪ್ಪು ಜಯಂತಿಯನ್ನು ಎಲ್ಲರ ವಿರೋಧದ ನಡುವೆಯೂ ಆಚರಣೆ ಮಾಡಿತ್ತು! ಬಿಜೆಪಿ ಶಾಸಕರು, ಸಚಿವರು ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಕೆಂಡಾ ಮಂಡಲವಾಗಿದ್ದಲ್ಲದೇ, ದೇಶದ್ರೋಹಿಯ ಜಯಂತಿಯನ್ನು ತಡೆಯಲು ಹರಸಾಹಸ ಪಟ್ಟರೂ ಏನೂ ಮಾಡಲಿಕ್ಕಾಗಿರಲಿಲ್ಲ. ಅಷ್ಟರಲ್ಲಿಯೇ, ವಿಧಾನಸೌಧದ ಮಹೋತ್ಸವವೂ ಬಂದಿತ್ತು!

ಅದೆಷ್ಟೋ ಕೋಟಿಗಟ್ಟಲೇ ಖರ್ಚು ಮಾಡಿ ವಿಧಾನ ಸೌಧದ ವಜ್ರ ಮಹೋತ್ಸವವನ್ನು ಆಚರಿಸಿದ ಸಿದ್ಧರಾಮಯ್ಯ ಶಾನೇ ಬುದ್ದಿವಂತ! ಬಿಜೆಪಿಯಿಂದಲೇ ರಾಜಕೀಯದಲ್ಲಿ ವರ್ಚಸ್ಸು ಸಾಧಿಸಿ, ಕೊನೆಗೆ ಪಕ್ಷದಿಂದಲೇ ಗೆದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರು ವಿಧಾನಸೌಧದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಾಗ ಕಿರು ಭಾಷಣವನ್ನು ಮಾಡಿದ್ದರು! ಅವತ್ತು, ಟಿಪ್ಪುವನ್ನು ಹೊಗಳಿದ್ದ ಕೋವಿಂದ್ ರವರ ಮಾತಿಗೆ ಕಾಂಗ್ರೆಸ್ ಮೇಜು ಕುಟ್ಟಿ ಸಂಭ್ರಮಿಸಿದರೆ, ಬಿಜೆಪಿ ನಾಯಕರು ತಲೆ ತಗ್ಗಿಸುವ ಹಾಗಾಗಿದ್ದಲ್ಲದೇ, ಗೊಂದಲಕ್ಕೂ ಒಳಗಾಗಿದ್ದರು!

ಆದರೆ. . . .

ತೀರಾ ಇತ್ತೀಚೆಗೆ ಆದಿತ್ಯ ನಾರಾಯಣ್ ಎಂಬುವವರು ಆರ್ ಟಿ ಐ ಗೆ ರಾಷ್ಟ್ರಪತಿ ಯವರಿಗೆ ಭಾಷಣವನ್ನು ಬರೆದು ಕೊಡುವವರಾರು ಎಂಬುದರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು! ಆದರೆ, ಆರ್ ಟಿ ಐ ಬಹಿರಂಗಪಡಿಸಿರುವ ಪ್ರಕಾರ, ಈಗ ಸಿದ್ಧರಾಮಯ್ಯನ ಸರಕಾರವೇ ಜಿದ್ದಿಗೆ ಬಿದ್ದು, ಕೋವಿಂದ್ ರವರಿಗೆ ಬೇಕಾ ಬಿಟ್ಟಿಯಾಗಿ ಭಾಷಣ ಬರೆದು ಕೊಟ್ಟಿರುವುದು ಸಾಬೀತಾಗಿದೆ!

ಆದಿತ್ಯ ನಾರಾಯಣ್ ರವರು ರಾಷ್ಟ್ರಪತಿಗೆ ಭಾಷಣವನ್ನು ಬರೆದು ಕೊಡುವವರು ಯಾರು ಮತ್ತು ರಾಷ್ಟ್ರಪತಿ ಟಿಪ್ಪುವಿನ ಸುದ್ದಿ ತೆಗೆದದ್ದು ಯಾಕೆ ಎಂಬುದರ ಮೇಲೆ ರಾಷ್ಟ್ರಪತಿಯವರ ಕಾರ್ಯದರ್ಶಿಗೆ ಪ್ರಶ್ನೆ ಹಾಕಿದ್ದರು! ಪ್ರತಿಯಾಗಿ,

” ಭಾಷಣವನ್ನು ಸಿದ್ಧ ಪಡಿಸಿದ್ದು ರಾಷ್ಟ್ರಪತಿಯವರ ಕಾರ್ಯದರ್ಶಿ. ಆದರೆ, ಕರಡು ಪ್ರತಿ ಮತ್ತು ಪ್ರಸ್ತಾಪಿಸಲಾದ ಟಿಪ್ಪುವಿನ ವಿಷಯ ಕೊಟ್ಟಿದ್ದು ವಿಧಾನ ಸೌಧದ ಕಾರ್ಯದರ್ಶಿಗಳು.” ಎಂದು ಉತ್ತರ ನೀಡಿದ್ದಾರೆ!

ಸಿಕ್ಕಿಬಿದ್ದ ಕಳ್ಳ! ಕಳ್ಳರ ಕಳ್ಳ ಕಾಂಗ್ರೆಸ್ ಪಕ್ಷದ ಕಳ್ಳ!

ಇನ್ನೇನು ಹೇಳಬೇಕು ಹೇಳಿ?! ರಾಷ್ಟ್ರಪತಿಯವರಿಗೆ ಕನ್ನಡ ಬರುವುದಿಲ್ಲವೆಂಬ ಕಾರಣಕ್ಕೆ ತಮಗಿಷ್ಟ ಬಂದ ಹಾಗೆ ದೇಶ ದ್ರೋಹಿಯನ್ನು ಹಾಡಿ ಹೊಗಳಿ ಬರೆದ ಭಾಷಣದ ಪ್ರತಿಯನ್ನು ನೀಡಿ, ಆಗಮಿಸಿದ ರಾಷ್ಟ್ರಪತಿಯವರಿಗೂ ಇರಿಸು ಮುರಿಸಾಗುವಂತೆ ಮಾಡಿ, ಅವಮಾನ ಮಾಡಿದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯವರ ಘನತೆ ಎಂತಹದ್ದಿರಬಹುದು ಸ್ವಾಮಿ?!

ರಾಷ್ಟ್ರಪತಿಯವರೇ ಹೊಗಳಿದ್ದಾರೆ ನೋಡಿದಿರಾ ಎಂದು ಭುಜ ಕುಣಿಸಿ ನಡೆದಿದ್ದ ಕಾಂಗ್ರೆಸ್ ಕೊನೆಗೆ ರಾಷ್ಟ್ರಪತಿಯವರಿಗೆ ಟಿಪ್ಪು ಯಾರೆಂದು ಗೊತ್ತಿದೆ ಎಂದೆಲ್ಲ ನಾಟಕ ಮಾಡಿತ್ತಲ್ಲದೇ, ವಿಧಾನ ಸಭಾ ಕಾರ್ಯದರ್ಶಿಯ ತಪ್ಪೇನೂ ಇಲ್ಲವೆಂದು ಬಿಂಬಿಸಿ ಬಚಾವ್ ಆಗಲು ನೋಡಿತ್ತಾದರೂ, ಬಿಜೆಪಿ ನಾಯಕರಿಗೆ ಇದು ಇರಿಸು ಮುರಿಸಾಗಿತ್ತಲ್ಲದೇ, ಕಾಂಗ್ರೆಸ್ ಇದನ್ನೇ ಇಟ್ಟುಕೊಂಡು ಗೆ‌ದ್ದೆನೆಂದು ಬೀಗಿತ್ತು!

ಆದರೆ.. ಈಗ, ವಿಧಾಬ ಸಭಾ ಕಾರ್ಯದರ್ಶಿಯ ಕೈಚಳಕದ ಹಿಂದೆ ಕಾಂಗ್ರೆಸ್ ಪಕ್ಷದ ಕೈ ಚಳಕ ಇರುವುದು ಸ್ಪಷ್ಟವಾಗಿದ್ದು ಸಿದ್ಧರಾಮಯ್ಯನವರ ಕೃಪಾದೃಷ್ಟಿಯಿಂದ ಹಾಗೂ ತುಘಲಕ್ ದರ್ಬಾರ್ ನ ಧ್ಯೇಯದಿಂದ ರಾಷ್ಟ್ರಪತಿಗಳ ಭಾಷಣದ ಪ್ರತಿಯಲ್ಲಿ ಟಿಪ್ಪುವಿನ ಹೆಸರು ಬಂದಿದೆ ಎಂದು ಸಾಬೀತಾಗಿದೆ! ಕೋವಿಂದ್ ರವರಿಗೆ ಟಿಪ್ಪು ಯಾರು ಎಂಬ ಸ್ಪಷ್ಟ ಅರಿವಿಲ್ಲವೆಂಬುದನ್ನೇ ದುರುಪಯೋಗ ಪಡಿಸಿಕೊಂಡ ಇಂತಹ ಸಿದ್ಧರಾಮಯ್ಯನ ಸರಕಾರ! ಛೇ!

– ಪೃಥು ಅಗ್ನಿಹೋತ್ರಿ

Tags

Related Articles

Close