ಪ್ರಚಲಿತ

ರಾಷ್ಟ್ರಪತಿ ಭವನದಲ್ಲಿ ರಾರಾಜಿಸಿದ ಹಿಂದುತ್ವ! ಇಫ್ತಿಯಾರ್ ಬದಲಿಗೆ ಪ್ರಾರಂಭವಾಯಿತು ನವರಾತ್ರಿ ಕೂಟ!

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಹಾಗೂ ಆಕ್ರಮಣಕಾರರು ಭಾರತದೇಶವನ್ನು ಅಕ್ಷರಶಃ ಜಾತ್ಯಾತೀತ ಮಾಡಲಾಗದಿದ್ದರೂ ಸಹ ತಮ್ಮ ಧರ್ಮದ ಹಾಗೂ
ಸಂಪ್ರದಾಯಗಳನ್ನು ಹೇರಿದ್ದರೆಂಬುದಾದರೂ ಸ್ವಾತಂತ್ರ್ಯಾನಂತರ ಭಾರತಕ್ಕೆ ತನ್ನ ಮೂಲವನ್ನು ಕಂಡುಕೊಳ್ಳುವ ಎಲ್ಲಾ ಅವಕಾಶಗಳಿತ್ತೆಂಬುದೂ ಅಷ್ಟೇ ಸ್ಪಷ್ಟ!
ಆದರೆ. . .

ಏನಾಯಿತು?! ನಿಜಕ್ಕೂ ಸ್ವತಂತ್ರ್ಯದ ನಂತರದ ಭಾರತ ಹಿಂದಿನ ಭಾರತವಾಗುಳಿಯಿತೇ? India ಎಂದು ಕರೆಸಿಕೊಂಡಿತು! ಹಿಂದೂಸ್ಥಾನ ಎಂಬ
ಸಿದ್ಧಾಂತದ ಬದಲಾಗಿ ‘ಜಾತ್ಯಾತೀತ’ ಎಂದು ಕರೆಯಲ್ಪಟ್ಟಿತು! ಪ್ರಜಾಪ್ರಭುತ್ವ ಎನ್ನುವುದು ಮುಸಲ್ಮಾನರ ಓಲೈಕೆಗೆ ಎನ್ನುವುದು ಸಾಬೀತಾಯಿತು! ಅಯ್ಯೋ!

ಆಲೋಚಿಸಿದ್ದೀರಾ?! ಹಿಂದೂಗಳೇ! ಒಂದು ಕ್ಷಣ ಓಡುವುದನ್ನು ಬಿಟ್ಟು ನೀವೊಮ್ಮೆ ನಿಂತು ಆಲೋಚಿಸಬೇಕಾಗಿದೆ! ಎಲ್ಲಿ ನಾವು ತಪ್ಪಿದೆವೆಂದು
ಆಲೋಚಿಸಲೇಬೇಕಾಗಿದೆ! ಇದು ಭಾರತ! ಇಂದೂ ಹಿಂದೂಸ್ಥಾನ!

ನಮ್ಮ ಭಾರತದ ರಾಷ್ಟ್ರಪತಿ ಭವನಕ್ಕೂ ನುಗ್ಗಿತು ಇದೇ ಮುಸಲ್ಮಾನರ ಓಲೈಕೆಯ ಪರಮಾವಧಿ! ಪರಿಣಾಮ ಭಾರತದ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್ ರಾರಾಜಿಸಿತು! ಆದರೆ, ನವರಾತ್ರಿಯಲ್ಲ! ಒಂದಕ್ಕೊಂದು ಸಂಬಂಧವಿಲ್ಲವೆಂದು ನೀವು ಹೇಳಬಹುದಾದರೂ ಇದೆ! ಖಂಡಿತ ಇದೆ!

ರಂಜಾನ್ ತಿಂಗಳಿನ ಉಪವಾಸವನ್ನು ಕೊನೆಗೊಳಿಸುವ ದಿನ ಇಫ್ತಿಯಾರ್! ಒಂದು ತಿಂಗಳಿನ ಉಪವಾಸದ ವ್ರತವನ್ನು ಅವತ್ತು
ಸಂಪ್ರದಾಯಬದ್ಧವಾಗಿ ನಿಲ್ಲಿಸುತ್ತಾರೆ! ವಿವಿಧ ಖಾದ್ಯಗಳನ್ನೊಳಗೊಂಡ ಭೋಜನ ಸೇವಿಸಿ ಹಬ್ಬವನ್ನಾಚರಿಸುತ್ತಾರೆ! ಅದು ಮುಸಲ್ಮಾನರ ಹಬ್ಬ!

ಅದೇ ರೀತಿ ಹಿಂದೂಗಳು ಸಹ ನವರಾತ್ರಿಯಂದು ಉಪವಾಸ ಕೈಗೊಳ್ಳುತ್ತಾರೆ! ತೀರಾ ಸಂಪ್ರದಾಯಬದ್ಧವಲ್ಲದಿದ್ದರೂ ಮಾಂಸ ಮದಿರೆಗಳನ್ನು ತ್ಯಜಿಸುತ್ತಾರೆ! ಹತ್ತನೆಯ ದಿನ ವಿಜಯದಶಮಿಯನ್ನಾಚರಿಸಿ ವ್ರತ ಕೊನೆಗೊಳಿಸುತ್ತಾರೆ!

ಆದರೆ, ಇಷ್ಟು ವರ್ಷದ ತನಕವೂ ಎಲ್ಲಿಯಾದರೂ ರಾಷ್ಟ್ರಪತಿ ಭವನದಲ್ಲಿ ನವರಾತ್ರಿ ಕೂಟವನ್ನು ಆಯೋಜಿಸಿದ ಮಾಹಿತಿ ನಿಮಗಿದೆಯೇ?! ಪ್ರಶ್ನೆ ಇಷ್ಟೇ!

ನಿಖರವಾಗಿಯೇ ಹೇಳುತ್ತೇನೆ! ಮೊನ್ನೆಯವರೆಗೂ ಇಲ್ಲ! ಅದೇ ಇಫ್ತಿಯಾರ್ ಕೂಟದ ಸಂಜೆಯ ಇತಿಹಾಸವನ್ನು ಕೆದಕಿದರೆ ಸ್ವತಂತ್ರ್ಯಗೊಂಡ ಹಿಂದೂಸ್ಥಾನ ನೆಹರೂ ಎಂಬ ಹಿಂದೂವಿನ ಮುಖವಾಡ ತೊಟ್ಟ ಮುಸಲ್ಮಾನನ ಕೈಯೊಳಗೆ ಬಂಧಿಯಾಯಿತು! ಸೈದ್ಧಾಂತಿಕವಾಗಿಯೇ!

ರಾಷ್ಟ್ರಪತಿ ಭವನದಲ್ಲಿ ಮೊದಲ ಇಫ್ತಿಯಾರ್ ಕೂಟ ಆಯೋಜಿಸಿದ್ದು ಇದೇ ನೆಹರು! ಅವತ್ತು ದೆಹಲಿಯಲ್ಲಿ ಬೆಳದಿಂಗಳೊಂದು ದುಃಖಿತವಾಗಿತ್ತು! ಸಾಕಷ್ಟು
ಮಳೆಯಿಲ್ಲದೇ ಜನರ ಹಸಿವು ಹೆಚ್ಚಿತ್ತು! ಬರದ ಹೊಡೆತಕ್ಕೆ ಸಾವಿನ ಬರೆ! ದೇಶದ ಆರ್ಥಿಕ ಸ್ಥಿತಿ ಸಧೃಢವಾಗಿರಲಿಲ್ಲ! ರಂಜಾನಿನ ತಿಂಗಳ ಹಸಿವು ಮನುಷ್ಯನಿಗೆ
ಹಸಿವು ಹಾಗೂ ಕೃತಜ್ಞತೆಯನ್ನು ತೋರಿಸಿಕೊಡುತ್ತದೆಂಬ ನಂಬಿಕೆಯೊಂದು ಅವತ್ತು ಮೂರ್ಖತನದ ಮಾತಾಗಿ ನಿಂತಿತ್ತು!

ನೆಹರೂವಿಗಾಗಲಿ, ಉಳಿದ ಕಾಂಗ್ರೆಸ್ ನವರಿಗಾಗಲಿ, ಉಹೂಂ! ದೇಶದ ಬಗ್ಗೆ ಯಾವುದೇ ಗಂಭೀರತನವೂ ಅವತ್ತಿರಲಿಲ್ಲ! ‘What’s the Menu for Iftiyar tonight?!’ ಎಂಬ ಪ್ರಶ್ನೆಯ ಹೊರತಾಗಿ ದೇಶದ ಸಮಸ್ಯೆಗಳಿಗೆ ಯಾವ ಪ್ರಶ್ನೆಯೂ ಅವತ್ತು ಉದ್ಭವಿಸಲಿಲ್ಲ! ಇಮಾಮ್-ಸೈಯದ್-ಅಹ್ಮದ್-ಬುಕರ್ ಇಫ್ತಿಯಾರ್ ಕೂಟವನ್ನು ಮೊದಲ ಬಾರಿಗೆ ಉದ್ಘಾಟಿಸಿದ್ದೇ ಭವನದಲ್ಲಿ ಶಾಶ್ವತವಾಗಿ ಮುಸಲ್ಮಾನರ ಕಬಾಬ್ ಬಿರಿಯಾನಿಗಳು ನೆಲೆನಿಂತವು!

ಆಹಾ! ಕಬಾಬ್ ಬಿರಿಯಾನಿ ತಿಂದುಂಡ ಕಾಂಗ್ರೆಸ್ ನಾಯಕರ ಮೈಯಲ್ಲಿ ತಾನೇ ತಾನಾಗಿ ಔರಂಗಜೇಬ ಹೊಕ್ಕಿ ತಾಂಡವವಾಡತೊಡಗಿದ್ದ!

ತೀರಾ ಎಂದರೆ ಮೊನ್ನೆ ಮೊನ್ನೆಯವರೆಗೂ ಇಫ್ತಿಯಾರ್ ಕೂಟ ನಡೆದಿದೆ! ಆದರೆ, ಈ ವರ್ಷ ಹೊಸದಾದ ಸಂಪ್ರದಾಯವೊಂದು ರಾಷ್ಟ್ರಪತಿ ಭವನದೊಳು ಶುಭಸೂಚಕವಾಗಿ ಕಾಲಿಟ್ಟಿದೆ! ಅದು ಮೋದಿಯವರ ‘ನವರಾತ್ರಿ ಕೂಟ’!!!!!!

ಹೌದು! ಇಲ್ಲಿಯವರೆಗೂ ಹಿಂದುತ್ವದ ಘಮಲಿಲ್ಲದಿದ್ದ ರಾಷ್ಟ್ರಪತಿ ಭವನದೊಳು ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರಷ್ಟೇ! ಆಗಲೇ, ಮೋದಿ ‘ಕೋಮುವಾದಿ’ ಎಂಬ ಜಪವೊಂದು ಸಣ್ಣಗೆ ಅದೆಲ್ಲೋ ಗಂಜಿ ಕೇಂದ್ರದ ಬದಿಯಿಂದ ಕೀರಲು ಕೂಗು ಕೇಳಿಸುತ್ತಿದೆ!

ಒಬ್ಬ ಭಾರತೀಯನ ನಿಜವಾದ ಕರ್ತವ್ಯವಿದು!

ಭಾರತೀಯನೆಂದರೆ ಹಿಂದೂ! ಅಷ್ಟೇ! ತೀರಾ ಆಳದ ತರ್ಕಕ್ಕಿಳಿದರೂ ಈ ವಾಸ್ತವವನ್ನು ಬದಲಿಸಲು ಸಾಧ್ಯವಿಲ್ಲವಷ್ಟೇ! ಒಬ್ಬ ನಿಜವಾದ ಭಾರತೀಯ ತನ್ನ ದೇಶವನ್ನು ಗೌರವಿಸುತ್ತಾನೆ! ತನ್ನ ಬದುಕಿನ ಆಚರಣೆಗಳಲಿ ಭಾರತವನ್ನು ಪ್ರತಿನಿಧಿಸುತ್ತಾನೆ! ಆಧುನಿಕವಾಗಿ ಅದೆಷ್ಟೇ ಬದಲಾದರೂ ಸಹ ನಡೆ ನುಡಿಯಲ್ಲಿ ಆತ ಒಬ್ಬ ಭಾರತೀಯನಷ್ಟೇ! ಹಾಗೇ ಉಳಿಯುತ್ತಾನೆ ಕೂಡ!

ಉದಾಹರಣೆ ‘ನರೇಂದ್ರ ಮೋದಿ’ ಅಷ್ಟೇ!

ಹೌದು! ಮೋದಿಯ ನೇತೃತ್ವದಲ್ಲಿ ಇಫ್ತಿಯಾರ್ ಕೂಟದ ಬದಲಿಗೆ ‘ನವರಾತ್ರಿ ಕೂಟ’ ಪ್ರಾರಂಭವಾಗಿದೆ ರಾಷ್ಟ್ರಪತಿ ಭವನದಲ್ಲಿ! ಹಿಂದುತ್ವದ ಕಿರಣವೊಂದು ಬಲುಬೇಗನೇ ಪಸರಿಸಿದೆ! ಭಾರತ ಮತ್ತೆ ತನ್ನ ಮೂಲಸ್ವರೂಪವನ್ನು ಪಡೆದುಕೊಳ್ಳುತ್ತಿದೆ!

– ತಪಸ್ವಿ

Tags

Related Articles

Close