ಪ್ರಚಲಿತ

ರಾಷ್ಟ್ರಪತಿ ಭವನ ನೆಲಸಮಗೊಳಿಸಿ: ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್!!

ಕೆಲವರಿಗೆ ತಲೆಯಲ್ಲಿ ಅದೇನಿರುತ್ತೋ ಗೊತ್ತಿಲ್ಲ. ತಾನೊಬ್ಬ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದೇನೆ ಎಂಬುದನ್ನು ಮರೆತು ಹುಚ್ಚು ಹುಚ್ಚಾಗಿ ಹೇಳಿಕೆ ನೀಡುವುದು
ಕೆಲವರಿಗೆ ಕಯಾಲಿಯಾಗಿಬಿಟ್ಟಿದೆ. ಕೆಲವರಂತೂ ವಿವಾದವನ್ನೇ ಮೈಗೂಡಿಸಿಕೊಂಡು ಸದಾ ಸುದ್ಧಿಯಲ್ಲಿರಲು ಬಯಸುತ್ತಾರೆ.

ಅಜಂ ಖಾನ್. ಉತ್ತರ ಪ್ರದೇಶದ ಮಾಜಿ ಸಚಿವ. ಪ್ರಸ್ತುತ ಶಾಸಕ. ಈ ವ್ಯಕ್ತಿಗೆ ಸದಾ ವಿವಾದದಲ್ಲೇ ಬದುಕಿ ಅಭ್ಯಾಸ. ಈ ವಿವಾದಾತ್ಮಕ ಶಾಸಕ ಈಗ ಮತ್ತೆ
ಸುದ್ಧಿಯಲ್ಲಿರಲು ಕಾರಣವೇನು ಗೊತ್ತಾ…?

ದೇಶದ ಗೌರವದ ಸಂಕೇತವಾದ ರಾಷ್ಟ್ರಪತಿ ಭವನವನ್ನು ನೆಲಸಮಗೊಳಿಸಬೇಕಂತೆ. ಅದರೊಂದಿಗೆ ಸಂಸತ್ ಹಾಗೂ ಇತರ ಸರ್ಕಾರಿ ಕಟ್ಟಡಗಳನ್ನೂ
ನೆಲಸಮಗೊಳಿಸಬೇಕಂತೆ. ಇಂತಹ ಹುಚ್ಚು ಮಾತುಗಳು ಅಜಂ ಖಾನ್‍ಗೆ ಕಾಮನ್ ಆಗಿ ಹೋಗಿದೆ. ಆದರೆ ಅದರ ನಂತರ ಯಾವ ರೀತಿಯ ಪ್ರತಿಕ್ರಿಯೆಗಳನ್ನು
ಎದುರಿಸಬೇಕು ಎಂದು ಈ ವ್ಯಕ್ತಿಗೆ ಅರಿವಿರುತ್ತದೋ ಏನೋ ಎಂಬುವುದು ಗೊತ್ತಿಲ್ಲ.

ನಿನ್ನೆ ತಾನೇ ಉತ್ತರ ಪ್ರದೇಶದ ಸರ್ಧಾನಾ ಕ್ಷೇತ್ರದ ಬಿಜೆಪಿ ಶಾಸಕ ಸೋಮ್ ಸಂಗೀತ್, ತಾಜ್ ಮಹಲ್ ಕಟ್ದಡದ ಬಗ್ಗೆ ಮಾತೊಂದನ್ನು ಹೇಳಿದ್ದರು. ಬಹುಷಃ
ಕೆಲವು ಮಾಧ್ಯಮಗಳು, ಇದು ಅತಿದೊಡ್ಡ ವಿವಾದವೆಂದೇ ಬಣ್ಣಿಸಿದ್ದವು. ಆದರೆ ಅದು ನಿಜವಾದ ಸತ್ಯವಾಗಿತ್ತು. ಇತಿಹಾಸ ಪ್ರಸಿದ್ಧವಾಗಿದ್ದ ಆಗ್ರಾದಲ್ಲಿರುವ ತಾಜ್
ಮಹಲ್ ಎಂದು ಹೇಳುತ್ತಿರುವ ಕಟ್ಟಡ ಹಿಂದೂಗಳ ಪವಿತ್ರ ದೇವಾಲಯವಾಗಿತ್ತು. “ಅಗ್ರೇಶ್ವರ” ಎಂಬ ಹೆಸರಿನಿಂದ ಪರಮೇಶ್ವರನು ಅಲ್ಲಿ ಅವತಾರ ತಾಳಿ
ವೈಭವಯುತವಾಗಿ ಮೆರೆಯುತ್ತಿದ್ದನು. ಯಾವಾಗ ಮುಸಲ್ಮಾನ ದೊರೆಗಳ ಅಟ್ಟಹಾಸ ಮುಗಿಲು ಮುಟ್ಟಿತ್ತೋ ಆವಾಗಿನಿಂದ ಹಿಂದೂ ದೇವಾಲಯಗಳನ್ನು
ನೆಲಸಮಗೊಳಿಸಿದ್ದ ಇತಿಹಾಸ ಒಂದೆರಡಲ್ಲ. ಅದರಲ್ಲಿ ಅಗ್ರೇಶ್ವರ ದೇವಸ್ಥಾನವೂ ಒಂದು. ಅಗ್ರೇಶ್ವರ ದೇವಾಲಯವನ್ನು ಉರುಳಿಸಿ ತನ್ನ ಕಾಮದ ಸಂಕೇತವಾದ ತಾಜ್ ಮಹಲ್ ಕಟ್ಟಿದ್ದ ಶಹಜಾನ್, ತನ್ನ ಪ್ರೇಯಸಿಯ ಸಂಕೇತ ಎಂದು ಕಟ್ಟಿದ ಅದೇ ತಾಜ್ ಮಹಲ್ ಕಟ್ಟಡದ ಹಿಂದೆ ಹಿಂದೂ ದೇವಾಲಯದ ಕಥೆಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಇದನ್ನು ಪ್ರಶ್ನಿಸುವುದು ವಿವಾದವೇ..? ಖಂಡಿತಾ ಅಲ್ಲ. ಇದು ಪ್ರತಿಯೊಬ್ಬ ಭಾರತೀಯನ ಜನ್ಮಸಿದ್ಧ ಹಕ್ಕು. ಆದರೆ ಅದನ್ನೇ ವಿವಾದವೆಂದು ಬಣ್ಣಿಸುತ್ತಿರುವ
ಮಾಧ್ಯಮಗಳು ಹಾಗೂ ಕೆಲ ಸೋಕಾಲ್ಡ್ ರಾಜಕೀಯ ಶಕ್ತಿಗಳು ಸುಕಾಸುಮ್ಮನೆ ಪ್ರಚಾರವನ್ನು ಪಡೆಯುತ್ತಿವೆ.

ಅಜಂ ಖಾನ್ ನೀಡಿದ್ದ ಹೇಳಿಕೆ ನಿಜವಾಗಿಯೂ ಬಾಲಿಶತನದಿಂದ ಕೂಡಿದೆ. ದೇಶದ ಗೌರವಕ್ಕೆ ಪಾತ್ರವಾಗಿರುವ ರಾಷ್ಟ್ರಪತಿ ಭವನವು ದಾಸ್ಯದ ಸಂಕೇತವಾಗಿದೆ. ಅದನ್ನು ನೆಲಸಮಗೊಳಿಸಬೇಕು ಎನ್ನುವ ಹೇಳಿಕೆಯನ್ನು ಎಂತಹ ಶತಮೂರ್ಖನಾದರೂ ಇದನ್ನು ಖಂಡಿಸುತ್ತಾನೆ. ಸಂಸತ್ ಭವನ, ರಾಷ್ಟ್ರಪತಿ ಭವನ ಹೀಗೆ ಎಲ್ಲವನ್ನೂ ನಾಶಗೊಳಿಸಬೇಕು ಎಂದು ಹೇಳಿಕೆ ಕೊಡುವ ಅಜಂ ಖಾನ್ ನಿಜವಾದ ವಿವಾದಿತ ವ್ಯಕ್ತಿ.

ಈತನ ಹುಚ್ಚು ತನ ಇದು ಮೊದಲೇನಲ್ಲ. ಈ ಹಿಂದೆ ಕೂಡಾ ಇಂತಹ ಅಸಂಬದ್ದ ಹೇಳಿಕೆ ನೀಡುವ ಮೂಲಕ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. ತಾನು
ಉತ್ತರ ಪ್ರದೇಶದ ಸಚಿವನಾಗಿದ್ದ ಸಮಯದಲ್ಲಿ ತನ್ನ ಮನೆಯ ಎಮ್ಮೆಗಳು ನಾಪತ್ತೆಯಾದಾಗ ಅದನ್ನು ಹುಡುಕಲು ತನ್ನ ಸುಪರ್ದಿಯಲ್ಲಿದ್ದ ಪೊಲೀಸರನ್ನು ನೇಮಿಸಿ ತೀವ್ರ ವಿವಾದಕ್ಕೀಡಾಗಿದ್ದ. ತನ್ನ ಆಡಳಿತವನ್ನು ದುರುಪಯೋಗಗೊಳಿಸಿ ಪೊಲೀಸರಲ್ಲಿ ಎಮ್ಮೆಗಳನ್ನು ಹುಡುಕಲು ಹೇಳಿರುವುದು ಎಷ್ಟು ಸರಿ. ಅದೂ ಒಂದು ವಿಶೇಷ ಪೊಲೀಸ್ ತಂಡವನ್ನಾಗಿ ನಿರ್ಮಿಸಿ…! ಇಂತಹ ನಾಯಕರ ಹೇಳಿಕೆಗಳು ವಿವಾದದ ಗೂಡಾಗುವುದೇ ಇಲ್ಲ. ಇದನ್ಯಾರೂ ಪ್ರಶ್ನಿಸುವುದೂ ಇಲ್ಲ.

ಇಷ್ಟೇ ಅಲ್ಲ, ಇದೇ ಅಜಂ ಖಾನ್ 2015ರಲ್ಲಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದ. ತಾನು ಮಾಡಿದ್ದ ಪ್ರಚೋದನಕಾರಿ ಭಾಷಣವನ್ನು ರಾಮಪುರದ 12ನೇ
ತರಗತಿಯ ವಿದ್ಯಾರ್ಥಿಯೋರ್ವ ಆಕ್ಷೇಪಣಾಕಾರಿ ಅಭಿಪ್ರಾಯವನ್ನು ಮಂಡಿಸಿದ್ದ ಎನ್ನುವ ಕಾರಣಕ್ಕಾಗಿ ಆ ಹುಡುಗನನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸುತ್ತಾನೆ.

ಹೀಗೆ ತನ್ನ ವಿರುದ್ಧ ಮಾತೆತ್ತಿದರೆ ಸಾಕು ಅವರನ್ನು ಹಡೆಮುರಿ ಕಟ್ಟಲು ಪೊಲೀಸರ ತಂಡವನ್ನೇ ಕಳುಹಿಸಿ ಹಿಟ್ಲರ್ ಪ್ರವೃತ್ತಿ ಮೆರೆಯುತ್ತಿದ್ದ ಅಜಂ ಖಾನ್ ರಾಷ್ಟ್ರಪತಿ ಭವನ ದಾಸ್ಯದ ಸಂಕೇತ ಎಂದಿದ್ದಾನೆ. ಇಷ್ಟು ವರ್ಷ ನಿಜವಾಗಿಯೂ ಜನರನ್ನು ದಾಸ್ಯದ ಬಲೆಯಲ್ಲಿ ಕಟ್ಟಿ ಹಾಕಿದವರು ಯಾರು..? ಉತ್ತರ ಪ್ರದೇಶದಲ್ಲಿ ನಿಮ್ಮ ಸರ್ಕಾರ ಇರುವಾಗ ಉತ್ತರ ಪ್ರದೇಶದ ಜನರು ಭಯದ ಭೀತಿಯಿಂದ ಬದುಕಿಸುತ್ತಿದ್ದವರು ಯಾರು..? ಕೊಲೆ, ಸುಲಿಗೆ, ದರೋಡೆಗಳಿಂದ ಉತ್ತರ ತತ್ತರಿಸುವಂತೆ ಮಾಡಿದವರು ಯಾರು..? ಅತ್ಯಾಚಾರ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿ ನಡೆಯುತ್ತಿದ್ದರೂ, ಸುಮ್ಮನಿದ್ದು ಅತ್ಯಾಚಾರಿಗಳಿಗೆ ಬೆಂಬಲ ಕೊಟ್ಟವರು ಯಾರು..? ರೌಡಿಗಳು ಅಟ್ಟಹಾಸದಿಂದ ಮೆರೆಯುತ್ತಿರುವಾಗ ಅವರ ಕ್ರೌರ್ಯಕ್ಕೆ ಅಂಕುಷ ಹಾಕದೆ, ಮೆರೆಯಲು ಬಿಟ್ಟ ಅಂದಿನ ಉತ್ತರ ಪ್ರದೇಶದ ಸರ್ಕಾರ ಯಾವುದು..? ಗೋಕಳ್ಳರಿಗೆ ರಕ್ಷಣೆ ನೀಡಿ, ಗೋರಕ್ಷಕರ ವಿರುದ್ಧ ಪ್ರಹಾರವನ್ನು ಮಾಡುತ್ತಿದ್ದ ಅಖಿಲೇಶ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದವರು ಯಾರು..?

ಇಷ್ಟೆಲ್ಲ ಸಾಲು ಸಾಲು ಆಪಾದನೆಗಳನ್ನು ಹೊತ್ತುಕೊಂಡು ರಾಷ್ಟ್ರಪತಿ ಭವನವನ್ನು ದಾಸ್ಯದ ಸಂಕೇತ ಎಂದು ಸಂಬೋದಿಸುವ ಅಜಂ ಖಾನ್ ಆತನ ಸರ್ಕಾರದಲ್ಲಿ ತನ್ನ ರಾಜ್ಯದ ಜನರನ್ನು ಯಾವ ರೀತಿ ನೋಡಿಕೊಂಡಿದೆ ಎಂದು ತಿಳಿದುಕೊಳ್ಳಬೇಕು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಯಾವ ರೀತಿ ಸೋಲನ್ನು ಅನುಭವಿಸಿದೆ, ಮತ್ತು ಅದಕ್ಕೆ ಕಾರಣಗಳೇನೆಂಬುದನ್ನು ಆತ್ಮಾವಲೋಕನ ಮಾಡಬೇಕಿದೆ.

ರಾಷ್ಟ್ರಪತಿ ಭವನ, ಸಂಸತ್ತನ್ನು ಧ್ವಂಸಗೊಳಿಸಬೇಕೆನ್ನುವ ಅಜಂ ಖಾನ್ ಮಾತುಗಳು, ಉತ್ತರ ಪ್ರದೇಶದಲ್ಲಿ ತಾನು ಕಂಡ ಸೋಲಿನ ಹತಾಶ ಮಾತುಗಳನ್ನು
ಬಿಂಬಿಸುತ್ತಿರುವುದಂತು ಸುಳ್ಳಲ್ಲ…

-ಸುನಿಲ್

Tags

Related Articles

Close