ಅಂಕಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಷ್ಟು ಅಗಾಧವಾಗಿದೆಯೆಂಬುದು ಗೊತ್ತೇ?! ರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜಕೀಯವು ಎಷ್ಟು ಸಂಘದ ಹಿಡಿತಕ್ಕೊಳಪಟ್ಟಿದೆ ಎಂಬುದು ಅರಿವಾದರೆ ದಂಗಾಗುವಿರಿ!

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಭಾರತಾದಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಅಧಿಕಾರದ ನಿಮ್ಮ ವ್ಯಾಖ್ಯಾನವು ಎಷ್ಟು ಪ್ರಬಲವಾಗಿದೆ ಎಂಬುವುದರ ಮೇಲೆ ವ್ಯಾಖ್ಯಾನವಾಗಿದೆ. ಎಲ್ಲಾ ಸದಸ್ಯರು ಕುಟುಂಬದ ಒಂದು ಭಾಗವೆಂದು ಬದುಕುತ್ತಾರೆ ಎಲ್ಲರನ್ನೂ ಸಮಾನ ಭಾವದಿಂದ ಕಂಡುಕೊಳ್ಳುತ್ತಾರೆ.
ಎಲ್ಲಾ ಹಿಂದೂಗಳನ್ನು ತಮ್ಮ ಸಹೋದರ ಸಹೋದರಿಯನ್ನಾಗಿ ಕಾಣುವ ಸಂಸ್ಕಾರ ಪಡೆದ ಸ್ವಯಂ ಸೇವಕರಿಗೆ ದೇಶದ ಯಾವುದೇ ಮೂಲೆಯಲ್ಲಿನ ನಮ್ಮ
ಬಾಂಧವರಿಗೆ ಯಾವ ರೀತಿಯ ವಿಪತ್ತು ಬಂದರೂ ಒಡನೆಯೇ ಅವರ ಆಸರೆಗೆ ಧಾವಿಸುವುದು ಸಹಜ ಸ್ವಭಾವವಾಗಿದೆ.

ಮಾಧ್ಯಮಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಏನೇನೂ ಉಲ್ಲೇಖ ಮಾಡಿದರೂ, ಆರ್‍ಎಸ್‍ಎಸ್ ಬಿಜೆಪಿ ಅಥವಾ ಜನ ಸಂಘಕ್ಕಿಂತ ಮುಂಚೇನೇ ಇದು ಇತ್ತು. ವಾಸ್ತವಿಕವಾಗಿ ಆರ್‍ಎಸ್‍ಎಸ್ ಎನ್ನುವುದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅನೇಕ ಸಂಘಟನೆಗಳ ಪೋಷಕ ಅಂಗವಾಗಿದೆ.

ಭಾರತದಲ್ಲಿ ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಎಂದರೆ ಐದು ಮಿಲಿಯನ್ ಕ್ರೀಯಾಶೀಲ ಸದಸ್ಯರು ಹಾಗೂ ದೇಶದೆಲ್ಲೆಡೆ 50 ಸಾವಿರ ಶಾಖೆಗಳಿವೆ. ಹಾಗಾದರೆ ಆರ್‍ಎಸ್‍ಎಸ್‍ನ ಎಷ್ಟರ ಮಟ್ಟಿಗೆ ದೇಶದೆಲ್ಲೆಡೆ ಪ್ರಭಾವ ಬಿದ್ದಿರಬಹುದು. 100ಕ್ಕಿಂತಲೂ ಹೆಚ್ಚು ಅಂಗಸಂಸ್ಥೆಗಳಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಹಾಗು ವಿಶ್ವದ ಅತೀ ದೊಡ್ಡ ಸ್ವಯಂ ಸೇವಿ ಸಂಘಟನೆ. ಸಪ್ಟೆಂಬರ್ 27, 1925 ರಂದು ಆರಂಭವಾಯಿತು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ ಸಂಘ ಪರಿವಾರ ಎಂದು ಕರೆಯಲಾಗುತ್ತದೆ. ಸಂಘದ ಹೆಸರಲ್ಲೇ ಸೇವೆ ಸೇರಿದೆ. ಸ್ವಪ್ರೇರಣೆ ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರದ, ಸಮಾಜದ ಸೇವೆ ಮಾಡುವವನೇ ಸ್ವಯಂ ಸೇವಕ. ಶಾಖಾ ಕಾರ್ಯಕ್ರಮದಲ್ಲಿ ಶಾರೀರಿಕ- ಬೌದ್ಧಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ಪಡೆಯುವ ಸ್ವಯಂ ಸೇವಕನಿಗೆ ಸೇವಾ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ಪಡೆಯುವ ಮೂಲಕ ಸಂಸ್ಕಾರ ಪಡೆಯುವ ಸ್ವಯಂ ಸೇವಕನಿಗೆ ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದ ಏಕತೆಯ ವ್ಯಾವಹಾರಿಕ ಸಂಸ್ಕಾರವೂ ದೊರೆಯುತ್ತದೆ. ಯಾವುದಾದರೂ ಕಾರ್ಯಕ್ರಮಗಳು ಆಗುವ ಮುಂಚೆ ಎಲ್ಲಾ ಸಂಘಟನೆಗಳ ಸದಸ್ಯರು ಸಭೆ ಸೇರಿ ಸ್ಪಷ್ಟ ಮಾಹಿತಿಯನ್ನು ಪಡೆಯುತ್ತಾರೆ.

ವಿಹೆಚ್‍ಪಿ ಯಂತಹ ಮಕ್ಕಳ ಸಂಘಟನೆಯಂಯಹ ಉಪ ಸಂಘಟನೆಗಳು ಅವುಗಳಲ್ಲಿ ಅನೇಕ ಉಪ ಸಂಸ್ಥೆಗಳಿವೆ ಅವುಗಳಲ್ಲಿ ಬಜರಂಗದಳ ಕೂಡಾ ಒಂದಾಗಿದೆ. ರಾಜಕೀಯದಲ್ಲಿ ಬದಲಾವಣೆಯನ್ನು ತರಲು ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿದೆ. ಆದ್ದರಿಂದ ಒಂದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಡುವೆ ಸಭೆ ನಡೆಯುತ್ತದೆ. ಆದ್ದರಿಂದ ಹಲವು ಬಿಜೆಪಿ ಮುಖಂಡರು ಆರ್‍ಎಸ್‍ಎಸ್ ಮುಖಂಡರನ್ನು ಭೇಟಿ ಮಾಡುತ್ತಾರೆ. ಅಂದರೆ ಆರ್‍ಎಸ್‍ಎಸ್ ರಾಜಕೀಯ ಪಕ್ಷವಲ್ಲ ನಂಬೂವುದನ್ನು ಜನರು ಅರ್ಥಮಾಡಬೇಕಾಗಿದೆ.

ಮಾಧ್ಯಮಗಳ ಸುಳ್ಳು ಹೇಳಿಕೆಗಳಿಗೆ ನಾವು ತಲೆದೂಗಬಾರದು..ಹೆಚ್ಚಿನ ಸಮಯದಲ್ಲಿ ಮಾಧ್ಯಮಗಳ ಸರಿಯಾದ ಮಾಹಿತಿ ಕೊರತೆಯಿಂದ ಕೆಲವು ಜನಗಳಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಮಾಡುತ್ತದೆ. ಸಕಾರಾಯ್ಮಕ ಅಭಿಪ್ರಾಯ ಹೊಂದಿರುವ ಕೆಲವು ಜನರು ನಕರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತದೆ.
ಸಾಮಾಜಿಯ ಸೇವೆ, ಬಡವರಿಗೆ ಸಹಾಯ ,ಮಕ್ಕಳಿಗೆ ಶಿಕ್ಷಣ, ಬುಡಕಟ್ಟಿನವರು, ವಿಕೋಪದಲ್ಲಿದ್ದವರಿಗೆ ಪರಿಹಾರವನ್ನು ಒದಗಿಸುತ್ತದೆ. ಋಣಾತ್ಮಕ ದೃಷ್ಟಿಕೋನವನ್ನು ಹೊಂದಿರುವವರು ಎಲ್ಲಾ ಆರ್‍ಎಸ್‍ಎಸ್ ಕಾರ್ಯಕರ್ತರು ಇತರ ಧರ್ಮದೊಂದಿಗೆ ಪಿತೂರಿ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ ಆದರೆ ಇದರ ಉದ್ಧೇಶ ಅದಲ್ಲ… ಜನರ ಹಾದಿ ತಪ್ಪಿಸುವ ಗುರಿ ಆರ್‍ಎಸ್‍ಎಸ್‍ನದಲ್ಲ. ಅದು ದೇಶಕ್ಕೆ ಕೇವಲ ಒಳ್ಳೆಯ ಜನರನ್ನು ಸೃಷ್ಟಿಸುತ್ತದೆ ಅಷ್ಟೆ ಹೊತು ಬೇರಾವ ಉದ್ಧೇಶವಲ್ಲ.

ಶಾಖೆಯಲ್ಲಿ ನಿತ್ಯ ನಡೆಯುವ ಪ್ರಾರ್ಥನೆಯಲ್ಲಿ “ವಯಂ ಹಿಂದು ರಾಷ್ಟ್ರಾಂಗಭೂತಾಃ”- ಎಂದು ಸರ್ವಶಕ್ತಿವಂತನಾದ ಭಗವಂತನಿಗೆ ನಮ್ಮ ಪರಿಚಯ ಮಾಡಿ
ನಮಸ್ಕರಿಸಲಾಗುತ್ತದೆ. ಇದರಲ್ಲಿ ಎಲ್ಲರೂ ಸೇರಿದ್ದಾರೆ. ಯಾವ ಹಿಂದುವೂ ಹೊರತಲ್ಲ. ಸಮಾಜದ ಯಾವ ಅಂಗವನ್ನೂ ಉಪೇಕ್ಷೆ ಮಾಡುವಂತಿಲ್ಲ. ಎಲ್ಲಾ ಅಂಗಗಳೂ ಸಮಾನವಾಗಿ ಮುಂದುವರಿದಾಗಲೇ ಈ ಸಮಾಜ, ಈ ರಾಷ್ಟ್ರ ಸರ್ವಾಂಗ ಸುಂದರವಾದ ಸದೃಢ ಸಮಾಜವಾಗುವುದಕ್ಕೆ ಸಾಧ್ಯವಾಗುವುದು ಎಂದು ಪ್ರೇರೇಪಿಸುತ್ತಾರೆ.

ಭಾರತದಲ್ಲಿ ಇಂದು ಕೆಲವು ವರ್ಗಗಳನ್ನು “ದುರ್ಬಲ ವರ್ಗಗಳು” ಎಂದು ಕರೆಯಲ್ಪಡುತ್ತದೆ, ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಸರಕಾರ ಈ ದುರ್ಬಲ ವರ್ಗಗಳ ಸಾಕಷ್ಟು ಚಿಂತನೆ, ಪರಿಶ್ರಮ ಮಾಡದಿರುವುದೇ ಇದಕ್ಕೆ ಕಾರಣ. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಐವತ್ತು ಭಾಗ ಜನ ಅನಕ್ಷರಸ್ಥರು. ಅಷ್ಟೇ ಜನ ಬಡತನ ರೇಖೆಯ ಕೆಳಗಿದ್ದಾರೆ. ಮೂಲ ಭೂತ ಅವಶ್ಯಕತೆಗಳಾದ ಅನ್ನ, ಬಟ್ಟ, ವಸತಿ ಇವುಗಳಿಂದ ವಂಚಿತರಾಗಿದ್ದಾರೆ. ಇಂತಹವರನ್ನು ಸಂಪರ್ಕಿಸಿ ಅವರಿಗೆ ಸಹಾಯ ಮಾಡಲಾಗುತ್ತದೆ.

ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ?

ಭಾರತದ ಟಾಪ್ ಮೂರು ಸಾಂವಿಧಾನಿಕ ಹುದ್ದೆಗಳು ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಪ್ರದಾನ ಮಂತ್ರಿಗಳು ಆರ್‍ಎಸ್‍ಎಸ್‍ನ ಹೆಮ್ಮೆಯ
ಸದಸ್ಯರಾಗಿದ್ದಾರೆ.ಭಾರತದಲ್ಲಿ ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಎಂದರೆ ಐದು ಮಿಲಿಯನ್ ಕ್ರೀಯಾಶೀಲ ಸದಸ್ಯರು ಹಾಗೂ ದೇಶದೆಲ್ಲೆಡೆ 50 ಸಾವಿರ
ಶಾಖೆಗಳಿವೆ. ಹಾಗಾದರೆ ಆರ್‍ಎಸ್‍ಎಸ್‍ನ ಎಷ್ಟರ ಮಟ್ಟಿಗೆ ದೇಶದೆಲ್ಲೆಡೆ ಪ್ರಭಾವ ಬಿದ್ದಿರಬಹುದು. 100ಕ್ಕಿಂತಲೂ ಹೆಚ್ಚು ಅಂಗಸಂಸ್ಥೆಗಳಿವೆ. ಬಿಜೆಪಿ ಆರ್‍ಎಸ್‍ಎಸ್‍ನ ಹೆಮ್ಮೆಯ ಅಂಗ ಸಂಸ್ಥೆಯಾಗಿದ್ದು, ಬಿಜೆಪಿಯ 70%ರಷ್ಟು ಜನರು ಆರ್‍ಎಸ್‍ಎಸ್‍ನಿಂದ ಬಂದಿದ್ದಾರೆ.
ಯಾವಾಗಲೂ ಆರ್‍ಎಸ್‍ಎಸ್ ಮತ್ತು ಎನ್‍ಡಿಎ ನಡುವೆ ಸರಕಾರದ ಕೆಲವು ಕಾರ್ಯಕ್ರಮಗಳು ಮತ್ತು ವಿಷಯಗಳ ಕುರಿತು ಕಾರ್ಯಕರ್ತರು ಸೇರಿ ಸಭೆ ನಡೆಸುತ್ತಾರೆ.ಗೋವಾದದಲ್ಲಿ ಎನ್‍ಡಿಎ ಆರ್‍ಎಸ್‍ಎಸ್‍ನೊಂದಿಗೆ ಆಂತರಿಕ ಸಂಘರ್ಷದ ಕಾರಣದಿಂದ ಚುನಾವಣೆಯಲ್ಲಿ ಸೋತಿತು.

ಆರ್‍ಎಸ್‍ಎಸ್‍ನ ಕೆಲವು ತಿಳಿಯಬೇಕಾದ ಸತ್ಯಗಳು!

.ಇಲ್ಲಿ ಯಾವುದೇ ಔಪಚಾರಿಕ ಸದಸ್ಯತ್ವ ಇಲ್ಲ. ಯಾವ ಪತ್ರವನ್ನು ಪೂರ್ತಿಗೊಳಿಸುವುದಕ್ಕಿಲ್ಲ. ಯಾವುದೇ ವಯಸಿನ ಅಂತರವಿಲ್ಲ. ಮಹಿಳೆಯರಿಗೆ ಪ್ರತ್ಯೇಕ
ವಿಭಾಗವಿದೆ.

.ಇಲ್ಲಿ ಯಾವುದೇ ದೇಣಿಗೆಯನ್ನು ಸ್ವೀಕರಿಸುವಂತಿಲ್ಲ. ಅಂತಹ ದೊಡ್ಡ ಸಂಸ್ಥೆಯು “ಗುರು ಪೂರ್ಣಿಮಾದಲ್ಲಿ” ಗುರು ದಕ್ಷಿಣೆಯಂತೆ ಸ್ವಯಂ ಸೇವಕರಿಂದ ಹಣವನ್ನು ಪಡೆಯುತ್ತದೆ. ಅದು ವರ್ಷದಲ್ಲಿ ಒಮ್ಮೆ ಮಾತ್ರ ನೀಡಬೇಕು.

.ಇಲ್ಲಿ ಭಾರತಮಾತೆಯನ್ನು ಪೂಜಿಸಲಾಗುವುದು.

.ಭಾವ ಧ್ವಜ್ (ಕೇಸರಿ ಧ್ವಜ) ಗುರು ಮತ್ತು ಈ ದೇಶದ ಸಾಂಸ್ಕøತಿಕ ಪರಂಪರೆಯ ಸಂಕೇತವಾಗಿದೆ.

ಆರ್‍ಎಸ್‍ಎಸ್ ಬಗ್ಗೆ ಕೆಲವರು ಅಪ ಪ್ರಚಾರ ಹಬ್ಬಿಸಿದರೆ ಅದಕ್ಕೆ ಆರ್‍ಎಸ್‍ಎಸ್ ಕಾಯ್ಕರ್ತರು ಕಾರಣೀಭೂತರಲ್ಲ. ಸಂಘ ಸಂಬಂದಿತ ವಿವಿಧ ಸಂಸ್ಥೆಗಳ ಮೂಲಕ ಸ್ವಯಂ ಸೇವಕರು ಕೈಗೊಂಡಿರುವ ಸೇವಾ ಕಾರ್ಯಗಳು ದೇಶದ ಎಲ್ಲಾ ಪ್ರಾಂತ್ಯಗಳಲ್ಲಿ ನಡೆಯುತ್ತಿದೆ. ದೇಶದೆಲ್ಲೆಡೆ ಏನೇ ಸಮಸ್ಯೆಯಾದರೂ ಆರ್‍ಎಸ್‍ಎಸ್ ಸಹಾಯ ಮಾಡಲು ಮುನ್ನುಗ್ಗುತ್ತದೆ. ಅನೇಕ ಸಮಸ್ಯೆಗಳಿಂದ ತುಂಬಿದ ಈ ವಿಶಾಲ ದೇಶದಲ್ಲಿ ಈ ಸೇವಾ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಾ ಬಂದಿದೆ. ಇನ್ನೂ ಬಹಳಷ್ಟು ದೂರ ಸಾಗಬೇಕಾಗಿದೆ. ಸುಖಾ ಸುಮ್ಮನೆ ಅಪಪ್ರಚಾರ ಸರಿಯಲ್ಲ.

-ಶೃಜನ್ಯಾ

Tags

Related Articles

Close