ಮತ್ತೆ ಹೇಳ್ತಿದ್ದೇವೆ. ಈ ದೇಶದಲ್ಲಿ ಕುಟುಂಬ ರಾಜಕಾರಣ ಯಾವಾಗ ಕೊನೆಗೊಳ್ಳುತ್ತೋ ಅಂದು ದೇಶ ಸುಭೀಕ್ಷೆಯಾಗಿರುತ್ತೆ. ಹಾಗೆಂದ ಮಾತ್ರಕ್ಕೆ ಒಂದು ಕುಟುಂಬದಲ್ಲಿ ಓರ್ವನೇ ರಾಜಕಾರಣಿಯಾಗಬೇಕೆಂಬ ವಾದ ನಮ್ಮದಲ್ಲ. ಆದರೆ ಕುಟುಂಬ ಸದಸ್ಯನ ಒಬ್ಬನ ಕೃಪೆಯಿಂದ ಏನೂ ಕಷ್ಟಪಡದೆ ನೇರ ರಾಜಕೀಯದಲ್ಲಿ ಅಧಿಕಾರವನ್ನು ಪಡೆದುಕೊಂಡು ಮೆರೆಯುತ್ತಿರುವ ರಾಜಕಾರಣಿಗಳು ಈ ದೇಶವನ್ನು ಎಷ್ಟು ಚೆನ್ನಾಗಿ ಆಳಿಯಾರು..?
ಕುಟುಂಬ ರಾಜಕಾರಣ ಅನ್ನೋದು ದೇಶಕ್ಕೆ ಮಾರಕ. ದೇಶದಲ್ಲಿ ಕುಟುಂಬ ರಾಜಕಾರಣ ಇಲ್ಲದಿದ್ದರೆ ಆ ರಾಜಕಾರಣಿ ಹೇಗಿರುತ್ತಾನೆ ಅನ್ನೋದಕ್ಕೆ ಹಲವಾರು
ಉದಾಹರಣೆಗಳಿವೆ. ಆದರೆ ಇನ್ನು ಹಲವಾರು ಕುಟುಂಬಗಳು ಈ ದೇಶವನ್ನು ನುಂಗಿ ನೀರು ಕುಡಿಯುತ್ತಿವೆ. ಬೆನ್ನು ಹುಡಿ ಮಾಡಿ ಕೆಲಸ ಮಾಡಲು ಆಗದ
ರಾಜಕಾರಣಿಗಳು ತಮ್ಮ ಕುಟುಂಬವನ್ನೇ ರಾಜಕೀಯಕ್ಕೆ ತಂದು ಚೆನ್ನಾಗಿ ಬೆಳೆಯಲು ಬಿಡುವುದು ಮಾತ್ರವಲ್ಲದೆ, ದೇಶದ ಆಸ್ತಿಯನ್ನು ಲೂಟಿ ಮಾಡಲು ತಮ್ಮಿಂದಾದ ಎಲ್ಲಾ ಸಹಕಾರವನ್ನೂ ನೀಡುತ್ತಾ ಬರುತ್ತಿದ್ದರು. ರಾಜಕೀಯದಲ್ಲಿ ನಯಾ ಪೈಸೆಯ ಅರ್ಹತೆ ಇಲ್ಲದಿದ್ದರೂ ಜುಬ್ಬಾ, ಸೀರೆ ಧರಿಸಿಕೊಂಡು ಜನರೆದುರು ಪೋಸು ಕೊಡುತ್ತಾ ಮೋಸ ಮಾಡುವುದಕ್ಕೇನೂ ಕಡಿಮೆ ಇಲ್ಲ…
ದೇಶದ ಅತಿದೊಡ್ಡ ಕುಟುಂಬ ರಾಜಕಾರಣದ ಸ್ಟೋರಿ ಕೇಳಿದಿರೇ…?
ಭಾರತ ಎಂಬುವುದು ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವವನ್ನು ಹೊಂದಿರುವ ರಾಷ್ಟ್ರ. ಈ ದೇಶದಲ್ಲಿ ಅನೇಕ ಆಕ್ರಮಣಕಾರಿಗಳನ್ನೂ ನಾವು ಕಂಡಿದ್ದೇವೆ,
ಎದುರಿಸಿದ್ದೇವೆ. ಆದರೆ ನಮ್ಮಲ್ಲಿಯೇ ಇದ್ದು, ನಮ್ಮ ನಾಯಕರೇ ಎಂದು ಪೋಸು ಕೊಡುವ ರಾಜಕಾರಣಿಗಳು ನಮ್ಮ ದೇಶವನ್ನು ಹೇಗೆಲ್ಲಾ ನುಂಗಿ ನೀರು ಕುಡಿದಿದ್ದಾರೆ ಎಂಬುವುದನ್ನು ಕೇಳಿದರೆ ಬೆಚ್ಚಿ ಬೀಳಬಹುದು.
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ. ಪರಸ್ತ್ರೀಯರೊಡನೆ ಚಕ್ಕಂದವಾಡಿ ದೇಶದಲ್ಲಿ ತಾನೊಬ್ಬ ಮಹಾ ಸ್ವಾತಂತ್ರ್ಯ ಹೋರಾಟಗಾರನೆಂಬಂತೆ ಬಿಂಬಿಸಿಕೊಂಡು ಗಾಂಧಿ ತಾತನ ಜೊತೆ ತನ್ನ ಮಕ್ಕಳ ತರಹ ರಚ್ಚೆ ಹಿಡಿದು ಅಧಿಕಾರ ಹಿಡಿಯುವ ಈ ದೇಶದ್ರೋಹಿ ನಾಯಕನ ಸ್ಟೋರಿ ಈಗ ಸಣ್ಣ ಮಗುವಿಗೂ ಗೊತ್ತಿದೆ. ಈ ನಕಲಿ ನಾಯಕ ತಾನು ಮಾತ್ರ ಬೆಳೆದದ್ದಲ್ಲದೆ ತನ್ನ ಕುಟುಂಬವೂ ಈ ದೇಶವನ್ನು ಲೂಟಿಗೈಯ್ಯಬೇಕೆಂಬ ಬಯಕೆಯಿಂದ ತನ್ನ ಇಡೀ ಸಂತಾನವನ್ನೇ ರಾಜಕೀಯಕ್ಕೆ ಧುಮುಕುವ ಹಾಗೆ ಮಾಡಿದ್ದಾರೆ. ಅವರ ಆ ಪ್ರಯತ್ನ ಅಕ್ಷರಷಃ ಯಶಸ್ವಿಯೂ ಆಯ್ತು..!!!
ರಾಜಕೀಯದಲ್ಲಿ ಯೇನೇ ಅರ್ಹತೆ ಇಲ್ಲದಿದ್ದರೂ ತನ್ನ ಮಗಳು ಇಂದಿರಾ ಗಾಂಧಿಯನ್ನು ಕಾಂಗ್ರೆಸ್‍ನ ಅಧ್ಯಕ್ಷೆಗಾಧಿಗೆ ಸಿದ್ಧಪಡಿಸಿದ್ದರು. ಅಂದುಕೊಂಡಂತೆಯೇ
ಇಂಧಿರಾ ಕಾಂಗ್ರೆಸ್‍ನ ಅಧ್ಯಕ್ಷೆಯೂ ಆದರು, ನಂತರ ಪ್ರಧಾನಿಯೂ ಆದರು. ಆದರೆ ಅವರಿಗೆ ಗಾಂಧಿ ಎಂಬ ಹೆಸರು ಹೇಗೆ ಬಂತೆಂಬ ವಿಚಾರ ಇನ್ನೂ ಹಲವಾರು
ದೇಶವಾಸಿಗಳಿಗೆ ಗೊತ್ತೇ ಇಲ್ಲ. ನೆಹರೂ ಈ ದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಅಸ್ತಿರತೆಗೆ ದೂಡಿ ಬಿಟ್ಟಿದ್ದರು. ನಂತರ ಮಗಳು ಇಂದಿರಾ ಗಾಂಧಿಯ ಸರದಿ. ಈ ದೇಶದಲ್ಲಿ ಅದೆಷ್ಟು ಲೂಟಿ ಮಾಡಲು ಸಾಧ್ಯವೋ, ಎಷ್ಟು ಹಿಂದೂಗಳನ್ನು ಧಮನಿಸಲು ಸಾಧ್ಯವೋ ಅಷ್ಟನ್ನೂ ಮಾಡಿ ಮುಗಿಸಿಬಿಟ್ಟಿದ್ದರು. ಸಿಖ್ಖರನ್ನು ಮನಬಂದಂತೆ ಕೊಂದು ಹಾಕಿ ಅವರ ಮೇಲೆ ಅಮಾನುಶವಾಗಿ ತನ್ನ ಕ್ರೌರ್ಯವನ್ನು ತೋರಿಸಿಯೇ ಬಿಟ್ಟಿದ್ದರು. ತನ್ನ ವಿರುದ್ಧ ಮತನಾಡಿದರೆ ಸಾಕು ಅವರ ಸೊಂಟ ಮುರಿದು ಹಾಕುವ ತುರ್ತು ಪರಿಸ್ಥಿತಿಯನ್ನು ಹೇರಿಬಿಟ್ಟಿದ್ದರು.
ಈಕೆಯ ಅಟ್ಟಹಾಸ ಕೊನೆಗಂಡ ನಂತರ ಇನ್ನಾದರೂ ಉತ್ತಮ ನಾಯಕನೊಬ್ಬನ ಉದಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಕಂಡದ್ದು ಓರ್ವ ಸುಂದರ ಪುರುಷ. ಆತ ಇಂದಿರಾಳ ಮಗ ರಾಜೀವ್ ಗಾಂಧಿ. ಕಾಂಗ್ರೆಸ್‍ನಲ್ಲಿ ಅಷ್ಟೊಂದು ಉತ್ತಮ ನಾಯಕರಿದ್ದರೂ ಕೇವಲ ಈ ನಕಲಿ ಗಾಂಧಿಗಳಿಗೇ ಮಣೆ ಹಾಕಲಾಗಿತ್ತು. ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಕಾಂಗ್ರೆಸ್ಸಿಗರಿಗೆ ಕಂಡದ್ದು ರಾಜೀವ್ ಗಾಂಧಿಯ ಪತ್ನಿ ಸೋನಿಯಾ ಆಂಟನಿಯಾ ಮೈನೋ. ಅರ್ಥ ಆಗಿಲ್ವಾ..? ಅದೇ, ಸೋನಿಯಾ ಗಾಂಧಿ ಎಂದು ಸೀರೆ ಉಟ್ಟುಕೊಂಡು ದೇಶದ ಜನತೆಯನ್ನು ಮೋಸ ಮಾಡುತ್ತಿರುವ ಇಟಲಿಯ ಮಹಿಳೆ.
ಈ ದೇಶದ ವ್ಯವಸ್ಥೆ ಎಷ್ಟೊಂದು ಕುಲಗೆಟ್ಟು ಹೋಗಿದೆ ನೋಡಿ. ಕೇವಲ ಗಾಂಧಿ ಕುಟುಂಬದ ಸದಸ್ಯೆ ಎಂಬ ಮಾತ್ರಕ್ಕೆ, ಇಟಲಿಯಲ್ಲಿ ಬಾರ್ ಡಾನ್ಸರ್ ಆಗಿದ್ದ
ಸೋನಿಯಾ ಗಾಂಧಿಯನ್ನು ಪ್ರಧಾನಿಯಾಗಿಸಬೇಕೆಂಬ ಹಠಕ್ಕೆ ಬಿದ್ದಿದ್ದರು ಕಾಂಗ್ರೆಸ್ಸಿಗರು. ರಾಜಕೀಯ ಬಿಡಿ, ದೇಶದ ಪ್ರಜಾತಂತ್ರ ಅಂದರೆ ಏನು ಅಂತಾನೆ ಗೊತ್ತಿಲ್ಲದ ಸೋನಿಯಾ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸಲು ಎಲ್ಲಾ ಪ್ರಯತ್ನಗಳು ನಡೆದಿದ್ದವು. ಆದರೆ ಅಷ್ಟರಲ್ಲೇ ದೇಶದ ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದ ಸುಬ್ರಹ್ಮಣ್ಯಂ ಸ್ವಾಮಿ ಸೋನಿಯಾ ಗಾಂಧಿಯ ಪ್ರಧಾನಿಯಾಗುವ ಕನಸಿಗೆ ತಣ್ಣೀರೆರೆಚಿದ್ದರು. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ಪತ್ರ ಬರೆದ ಸುಬ್ರಹ್ಮಣ್ಯಂ ಸ್ವಾಮಿ “ಸೋನಿಯಾ ಇಟಲಿ ಪ್ರಜೆ. ಆಕೆಗೆ ಇಲ್ಲಿ ಪ್ರಧಾನಿಯಾಗುವ ಹಕ್ಕಿಲ್ಲ” ಎಂಬ ವಾದವನ್ನು ದಾಖಲೆ ಸಮೇತ ಮಂಡಿಸಿದ್ದರು. ಇದರಿಂದ ವಿಲವಿಲನೆ ಒದ್ದಾಡಿದ್ದ ಸೋನಿಯಾ ತಾನು ಪ್ರಧಾನಿಯಾಗದಿದ್ದರೂ ಪರವಾಗಿಲ್ಲ, ತಾನು ಹೇಳಿದ ಮಾತನ್ನು ದೇಶ ಕೇಳಬೇಕೆನ್ನುವ ಉದ್ಧೇಶದಿಂದ, ತನ್ನ ರಿಮೋಟ್ ಕಂಟ್ರೋಲ್ ಆಗಿ ಮನಮೋಹನ್ ಸಿಂಗ್‍ರನ್ನು ಪ್ರಧಾನಿಯಾಗಿ ನೇಮಿಸಿಕೊಂಡರು. ನಂತರ ನಡೆದದ್ದೇ ದೇಶದ ಕಾಂಗ್ರೆಸ್ ಸರ್ಕಾರದ ಭ್ರಹ್ಮಾಂಡ ಭ್ರಷ್ಟಾಚಾರ.
ನಂತರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸಬೇಕೆನ್ನುವ ಉದ್ಧೇಶದಿಂದ ನಿಷ್ಟಾವಂತ, ಸಜ್ಜನ
ರಾಜಕಾರಣಿ ಪ್ರಣಬ್ ಮುಖರ್ಜಿಯನ್ನು ರಾಷ್ಟ್ರಪತಿ ಮಾಡಿ ರಾಹುಲನಿಗೆ ಪ್ರಧಾನಿ ಹುದ್ದೆಗೆ ಪಟ್ಟಾಭಿಶೇಕ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದವು. ಆದರೆ ಅಷ್ಟರಲ್ಲಿ “ಮೋದಿ” ಅನ್ನುವ ಸುಂಟರಗಾಳಿ ದೇಶವನ್ನೆಲ್ಲಾ ವ್ಯಾಪಿಸಿ ಗಾಂಧಿ ಪರಿವಾರದ ನಿಜಮುಖವನ್ನು ಅನಾವರಣಗೊಳಿಸಿತ್ತು. ಕನಿಷ್ಟ ವಿರೋಧ ಪಕ್ಷದ ಸೀಟುಗಳನ್ನು ಪಡೆಯಲೂ ಕಾಂಗ್ರೆಸ್ ಪಕ್ಷ ಅಸಮರ್ಥವಾಯಿತು.
ಇಷ್ಟು ಮಾತ್ರವಲ್ಲದೆ ಸೋನಿಯಾ ಗಾಂಧಿ ಮಗಳು ಪ್ರಿಯಾಂಕ ಗಾಂಧಿ(ವಾದ್ರ), ಆಕೆಯ ಗಂಡ ರಾಬರ್ಟ್ ವಾದ್ರಾ ಸಹಿತ ಅನೇಕ ಕುಟುಂಬಸ್ಥರು ದೇಶದ
ಆಸ್ತಿಯನ್ನು ಕೊಳ್ಳೆ ಹೊಡೆದಿದ್ದರು. ವಿಮಾನ ನಿಲ್ದಾಣ ಸಹಿತ ಎಲ್ಲಾ ಕಡೆಗಳಲ್ಲಿ ವಿವಿಐಪಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ವಾದ್ರಾ ಸಹಿತ ನಕಲಿ ಗಾಂಧಿ ಕುಟುಂಬಸ್ಥರು ದೇಶಕ್ಕೆ ಮಾರಕವಾಗಿದ್ದರು.
ಕಾಂಗ್ರೆಸ್‍ನ ಕುಟುಂಬ ರಾಜಕಾರಣಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ನೋಡಿ, 1998ರಿಂದ ಕಾಂಗ್ರೆಸ್‍ನಿಂದ ಸೋನಿಯಾ ಗಾಂಧಿ ಹೊರತು ಪಡಿಸಿ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗ ಕಾಂಗ್ರೆಸ್ ಅಧ್ಯಕ್ಷನಾಗಿಲ್ಲ. ನಂತರ ನಡೆದ 9 ಅವಧಿಯಲ್ಲೂ ಸೋನಿಯಾ ಗಾಂಧಿನೇ ಕಾಂಗ್ರೆಸ್‍ನ ಅಧ್ಯಕ್ಷೆಯಾಗುತ್ತಾರೆ ಎಂದಾದರೆ ಕಾಂಗ್ರೆಸ್ ಪಕ್ಷದಲ್ಲಿ ಅದೆಷ್ಟು ಕುಟುಂಬ ರಾಜಕಾರಣ ಇದ್ದಿರಬಹುದು..? ಹಾ… ಈಗ ಮತ್ತೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಪಟ್ಟಾಭಿಶೇಕ ಮಾಡಲು ತಯಾರಾಗಿ ನಿಂತಿದೆ ಎಐಸಿಸಿ…
ಕರ್ನಾಟಕದ ಜೆಡಿಎಸ್‍ನಲ್ಲೂ ತಾಂಡವವಾಡುತ್ತಿದೆ ಕುಟುಂಬ ರಾಜಕಾರಣ…
ಕರ್ಣಾಟಕದಲ್ಲೂ ಕುಟುಂಬ ರಾಜಕಾರಣ ಅನ್ನೋದು ಕಡಿಮೆಯಲ್ಲಿಲ್ಲ. ದೇಶದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿಕೊಂಡು, ರಾಜ್ಯದಲ್ಲಿ ತನ್ನ ಪಾರುಪತ್ಯವನ್ನು
ಸ್ಥಾಪಿಸಿದ್ದ ಜಾತ್ಯಾತೀತ ಜನತಾ ದಳವೂ ಕುಟುಂಬ ರಾಜಕಾರಣದಲ್ಲಿ ಎತ್ತಿದ ಕೈ. ಜೆಡಿಎಸ್‍ನಲ್ಲಿ ಹೆಚ್.ಡಿ.ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರೆ, ಅವರ ಮಗ ಹೆಚ್.ಡಿ.ಕುಮಾರ ಸ್ವಾಮಿ ರಾಜ್ಯಾಧ್ಯಕ್ಷ. ಇನ್ನು ಅವರ ಮತ್ತೊಬ್ಬ ಮಗ ರೇವಣ್ಣನೂ ರಾಜಕೀಯದಲ್ಲಿ ಮುಂಚೂಣಿ. ಕುಮಾರ ಸ್ವಾಮಿ ಪತ್ನಿಯೂ ರಾಜಕಾರಣಿ, ರೇವಣ್ಣನ ಪತ್ನಿಯೂ ರಾಜಕಾರಣ. ಸದ್ಯ ರೇವಣ್ಣನ ಮಗನೂ ರಾಜಕೀಯದ ಪ್ರಮುಖ ರಂಗಕ್ಕೆ ಧುಮುಕಿದ್ದು ಕುಟುಂಬ ರಾಜಕಾರಣವನ್ನು ಮತ್ತಷ್ಟು ಬೆಳೆಸಲು ಸಜ್ಜಾಗಿ ನಿಂತಿದ್ದಾರೆ. ಅಂದಹಾಗೆ ಜೆಡಿಎಸ್‍ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿನೂ ಕುಮಾರಸ್ವಾಮಿನೆ…
ಇನ್ನು ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿಯೂ ಹೇಗೆ ರಾಜಕೀಯ ಬೆರೆತಿದೆ ಎಂಬುವುದಕ್ಕೆ ಉದಾಹರಣೆಗಳಿವೆ. ತನ್ನ ಮಗ ಅಖಿಲೇಶ್ ಸಿಂಗ್ ಯಾದವ್‍ರನ್ನು ಮುಖ್ಯಮಂತ್ರಿ ಮಾಡಿ ಉತ್ತರ ಪ್ರದೇಶದಲ್ಲೂ ಕುಟುಂಬ ರಾಜಕೀಯವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಆದರೆ ಕಡೆಗೆ ಆ ಸಮಾಜವಾದಿ ಪಕ್ಷ ಸೋಲಲೂ ಕುಟುಂಬ ರಾಜಕಾರಣನೇ ಕಾರಣವಾಗಿತ್ತು.
ಹೀಗೆ ಅನೇಕ ರಾಜಕಾರಣಿಗಳ ಕುಟುಂಬ ಸದಸ್ಯರು ಭಾರತ ದೇಶದ ಆಸ್ತಿಯನ್ನು ಬ್ರಿಟಿಷರಿಗಿಂತಲೂ ಹೆಚ್ಚಾಗಿಯೇ ಗುಡಿಸಿ ಗುಂಡಾಂತರ ಮಾಡಿ ಬಿಟ್ಟಿದ್ದಾರೆ.
ರಾಷ್ಟ್ರದಲ್ಲಿ ಮೋದಿ ಅಧಿಕಾರಕ್ಕೆ ಹಿಡಿದ ನಂತರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವ ಸನ್ನಿವೇಶ ಒದಗಿ ಬಂದಿದೆ. ಆದರೆ ರಾಜ್ಯಗಳಲ್ಲಿ ಮಾತ್ರ ಇಂದಿಗೂ
ಕುಟುಂಬ ರಾಜಕಾರಣಗಳು ಅಧಿಕಾರವನ್ನು ಕಿತ್ತು ತಿನ್ನುತ್ತಿವೆ.
ರಾಜಕೀಯ ಮಾಡುತ್ತಿಲ್ಲ… ಆದ್ರೂ ಕೆಲವು ಸನ್ನಿವೇಶಗಳನ್ನು ತಿಳಿಸುತ್ತೇವೆ ನೋಡಿ…ಮಾದರಿಯಾಗಿವೆ…
* ಸಾಮಾನ್ಯ ಪತ್ರಕರ್ತನಾಗಿದ್ದ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾದರು. ತಮ್ಮ ಕುಟುಂಬವನ್ನು ಕರೆತರಲೇ ಇಲ್ಲ…
* ರಾಜಸ್ಥಾನದ ಒಣ ಬಿಸಿಲಿನಲ್ಲಿ ಸಂಘದ ಪ್ರಚಾರಕರಾಗಿ ದುಡಿದ ಎಲ್.ಕೆ.ಅಡ್ವಾನಿ ದೇಶದ ಉಪಪ್ರಧಾನಿಯಾಗಿದ್ದರು. ತಮ್ಮ ಕುಟುಂಬವನ್ನು ಕರೆತರಲೇ ಇಲ್ಲ…
* ಕುಬ್ಜ ದೇಹದ ವ್ಯಕ್ತಿ, ಕಾಂಗ್ರೆಸ್‍ನ ಕುಟುಂಬ ರಾಜಕಾರಣದ ಮಧ್ಯೆಯೂ ದೇಶದ ಶ್ರೇಷ್ಟ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯು ತಮ್ಮ ಕುಟುಂಬವನ್ನು ಕರೆತರಲೇ ಇಲ್ಲ…
* ರೈಲ್ವೇ ನಿಲ್ದಾಣದಲ್ಲಿ ಚಾಹಾ ಮಾರುತ್ತಿದ್ದ ಚಾಯ್ ವಾಲಾ, ನರೇಂದ್ರ ದಾಮೋದರ್ ದಾಸ್ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದಾರೆ. ಯುವಕರ ಮನದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ. ಅವರೆಂದಿಗೂ ತಮ್ಮ ಕುಟುಂಬವನ್ನು ಕರೆತರುವುದು ಬಿಡಿ, ಹತ್ತಿರಕ್ಕೂ ಸುಳಿಯಲು ಬಿಟ್ಟಿಲ್ಲ.
* ತಮ್ಮ ಕುಟುಂಬವನ್ನೇ ತ್ಯಜಿಸಿ ಸನ್ಯಾಸಿಯಾಗಿ, ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ವ್ಯಕ್ತಿ ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಕುಟುಂಬ
ರಾಜಕಾರಣ ಅನ್ನೋದು ಹತ್ತಿರ ಬರಲೇ ಇಲ್ಲ.
* ದಲಿತ ಜಾತಿಯಲ್ಲಿ ಜನಿಸಿ ನತದೃಷ್ಟ ಎನಿಸಿಕೊಂಡು, ಸೋರುತ್ತಿದ್ದ ಮನೆಯಲ್ಲಿಯೇ ಜೀವನ ಸಾಗಿಸಿ, ಸಾಮಾಜಿಕತೆಯ ಮೂಲಕ ರಾಜಕೀಯ ಪ್ರವೇಶಿಸಿದ ವ್ಯಕ್ತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿಯಾಗಿದ್ದಾರೆ. ತಮ್ಮ ಕುಟುಂಬವನ್ನು ಕರೆತರಲೇ ಇಲ್ಲ.
* ಆಂಧ್ರ ಪ್ರದೇಶದ ಹಳ್ಳಿಗಳಲ್ಲಿ ಪಕ್ಷದ ಬಿತ್ತಿ ಪತ್ರಗಳನ್ನು ಅಂಟಿಸುತ್ತಿದ್ದ ವ್ಯಕ್ತಿ ವೆಂಕಯ್ಯ ನಾಯ್ಡು ಇಂದು ದೇಶದ ಉಪರಾಷ್ಟ್ರಪತಿಯಾಗಿದ್ದಾರೆ. ಕುಟುಂಬ ರಾಜಕಾರಣ ಇಲ್ವೇ ಇಲ್ಲ.
* ಕೇವಲ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿದ್ದ ಅರುಣ್ ಜೇತ್ಲಿ ಇಂದು ದೇಶದ ವಿತ್ತ ಸಚಿವರಾಗಿದ್ದಾರೆ. ತಮ್ಮ ಕುಟುಂಬವನ್ನು ಕರೆತರಲೇ ಇಲ್ಲ…
* ಅಮೇರಿಕಾದ ರಸ್ತೆಗಳಲ್ಲಿ ಸೇಲ್ಸ್ ಗರ್ಲ್ ಆಗಿದ್ದ ನಿರ್ಮಲಾ ಸೀತಾರಾಮನ್ ಇಂದು ಭವ್ಯ ಭಾರತದ ರಕ್ಷಣಾ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ
ಕುಟುಂಬವನ್ನು ಕರೆತರಲೇ ಇಲ್ಲ…
ಹೌದು . ಕೆಲವು ಬಿಜೆಪಿ ನಾಯಕರ ಮಕ್ಕಳು ಕೂಡಾ ರಾಜಕೀಯ ಮಾಡುತ್ತಿದ್ದಾರೆ. ಆದರೆ ಅವರೆಲ್ಲರಿಗೂ ತಂದೆಯವರು ಬಿಟ್ಟು ಹೋದ ಹುದ್ದೆ ನೀಡಲು ಬಿಜೆಪಿ
ಕುಟುಂಬ ರಾಜಕೀಯ ಮಾಡಿಲ್ಲ. ಈಗಲಂತೂ ಕುಟುಂಬ ರಾಜಕಾರಣವನ್ನು ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಬಿಜೆಪಿಯ ಕೀಲಿ ಕೈ ಇರುವುದು ಅಮಿತ್ ಶಾ, ಮೋದಿ ಜೋಡಿಯಲ್ಲಿ… ಕುಟುಂಬ ರಾಜಕರಣ ಸಾಧ್ಯವೇ..?
-ಸುನಿಲ್ ಪಣಪಿಲ