ಅಂಕಣರಾಜ್ಯ

ರಾಷ‌್ಟ್ರಪತಿ ಚುನಾವಣೆಯಲ್ಲಿ ಬೇಕಂತಲೇ ಮತ ಹಾಕದೇ ಪಕ್ಷದ ಆಜ್ಞೆಯನ್ನು ಉಲ್ಲಂಘಿಸಿದರೂ ಸಹ ಮೋದಿ ಯಾಕೆ ಆ ಸಂಸದರನ್ನು ಸಂಪುಟ ಸಚಿವರನ್ನಾಗಿ ಆಯ್ಕೆ ಮಾಡಿದರು ಗೊತ್ತೇ?!

ಇತ್ತೀಚೆಗೆ ನಡೆದ ಸಂಪುಟ ಸಚಿವದ ಪುನರ್ರಚನೆಯಲ್ಲಿ ಬಹಳಷ್ಟು ಅಚ್ಚರಿಗಳೇ ಕಾದಿದ್ದವು! ಯಾವ ಮಾಧ್ಯಮಗಳಿಗೂ ಕೂಡ ಮುಂದೇನಾಗಬಹುದು ಎಂಬ ಸುಳಿವೂ ಇಲ್ಲದಂತಿತ್ತು ಮೋದಿಯ ರಾಜನೀತಿ! ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ರನ್ನು ಆಯ್ಕೆ ಮಾಡಿದ್ದಕ್ಕೆ ಸಮಸ್ತ ದೇಶವೂ ನಿಬ್ಬೆರಗಾಗಿದ್ದು ಸುಳ್ಳಲ್ಲ! ಆದರೆ., ಸಂಸದರಾಗಿದ್ದ ಅನಂತ ಕುಮಾರ್ ಹೆಗಡೆಯನ್ನು ಮಂತ್ರಿಯನ್ನಾಗಿ ಮಾಡಿದ್ದು ಬಹಳಷ್ಟು ಚರ್ಚೆಗಳನ್ನೂ ಹುಟ್ಟು ಹಾಕಿತ್ತು!

ಹೆಗಡೆ ಮತ ಹಾಕದಿರಲು ನಿರ್ಧಾರ ಮಾಡಿದ್ದರು! ಆಜ್ಞೆಯ ಉಲ್ಲಂಘನೆಗೆ ಶಿಕ್ಷಿಸುವ ಬದಲು ಶಹಬ್ಬಾಸ್ ಗಿರಿ ಕೊಟ್ಟಿದ್ಯಾಕೆ ಮೋದಿ?!

ಹೌದು! 2012 ರ ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲಾ ಸಂಸದರು ಹಾಗು ಶಾಸಕರಿಗೆ ಪಿ.ಎ.ಸಂಗ್ಮಾರಿಗೆ ಮತ ನೀಡಲೇಬೇಕೆಂಬ ಕಟ್ಟಾಜ್ಞೆಯಾಗಿತ್ತು (according to Whip Procedure)!! ಆದರೆ, ಅನಂತ ಕುಮಾರ್ ಹೆಗಡೆ ಮತ ನೀಡುವುದಿಲ್ಲ ಎಂದು ತಿರಸ್ಕರಿಸಿಬಿಟ್ಟರು! ಅದರ ಹಿಂದಿನ ಬಲವಾದ ಕಾರಣ ಗೊತ್ತೇನು?!

ಅನಂತ್ ಕುಮಾರ್ ಹೆಗಡೆ ಪ್ರತಿ ಚುನಾವಣೆಯಲ್ಲಿಯೂ ಗೆದ್ದಿದ್ದು ‘ಮತಬ್ಯಾಂಕ್’ ತಂತ್ರದಿಂದಲ್ಲ, ಬದಲಾಗಿ ಹಿಂದುತ್ವದ ಅಡಿಪಾಯದಿಂದ! ಅವರು ಯಾವುದೇ
ಸಮಯದಲ್ಲಿಯೂ ಸಹ ‘ಪ್ರಗತಿಪರ’ನೆಂಬ ಹಣೆಪಟ್ಟಿ ಕಟ್ಟಿ ಗೆಲ್ಲಲಿಲ್ಲ. ಆದರೆ, ‘ಹಿಂದುತ್ವ’ದ ಸಿದ್ದಾಂತವನ್ನೊಂದೇ ಅಪ್ಪಿ ಗೆದ್ದವರು! ಸಮಾಜಕ್ಕೆ ಸಿದ್ದಾಂತದ ತಳಹದಿಯ ಮೇಲೆ ನಿಂತ ಸುಭದ್ರತೆಯನ್ನು ಒದಗಿಸಿಕೊಟ್ಟವರಲ್ಲಿ ಅನಂತ ಕುಮಾರ್ ಹೆಗಡೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ!

‘ಸಂಗ್ಮಾ ಒಬ್ಬ ಕ್ಯಾಥೋಲಿಕ್! ನನ್ನ ಆತ್ಮಸಾಕ್ಷಿಯ ವಿರುದ್ಧವಾಗಿ ನಾನು ನಡೆಯಲು ಸಾಧ್ಯವೇ ಇಲ್ಲ. ನಾನು ನಂಬಿದ ಸಿದ್ಧಾಂತಕ್ಕೆ ದ್ರೋಹ ಎಸಗಿ ನಾನು
ಅನ್ಯಧರ್ಮೀಯನಿಗೆ ಮತ ನೀಡಲು ಸಾಧ್ಯವೇ ಇಲ್ಲ.’ ಎಂದು ಬಿಟ್ಟರು ಅನಂತ ಕುಮಾರ್ ಹೆಗಡೆ! ವ್ಹಾ! ಸಿದ್ಧಾಂತದ ಮೇಲಿನ ಬದ್ಧತೆ ವ್ಯಕ್ತವಾಗಿದ್ದು ಇಲ್ಲಿಯೇ!

ಅವರ ಧರ್ಮನಿಷ್ಠೆಯನ್ನುವೊಂದಿದೆಯಲ್ಲ, ಅದು ತರ್ಕಕ್ಕೆ ಮೀರಿದ್ದು ಅಷ್ಟೇ! ಅಲ್ಲಿ ಯಾವುದೇ ಪ್ರಶ್ನೆಗಳಿಗೆ, ತಿರುಗು ನೋಟಗಳಿಗೆ ಅವಕಾಶವೇ ಇಲ್ಲ. ರಾಜಕೀಯದ ‘ಜಾತ್ಯಾತೀತ’ ಸಿದ್ಧಾಂತವೆಂಬ ಮಿಥ್ಯೆಯೊಳಗೂ ಸಹ, ಒಂಟಿಯಾಗಿಯೇ ಅಸ್ತಿತ್ವ ಕಂಡುಕೊಂಡವರು ಹೆಗಡೆ!

ಐದು ಸಲವೂ ಹಿಂದುತ್ವದ ತಳಹದಿಯಲ್ಲಿಯೇ ಗೆದ್ದ ಹೆಗಡೆ ತನ್ನ 28 ನೇ ವಯಸ್ಸಿನಲ್ಲಿ ರಾಜಕೀಯದ ಪ್ರವೇಶ ಮಾಡಿ, ತನ್ನದೇ ಆದ ಛಾಪು ಮೂಡಿಸಿದ್ದು ರಾಜ್ಯ
ಕಂಡ ಇತಿಹಾಸವೂ ಕೂಡ! ಕೊರಿಯನ್ ದೇಶದ ‘ಟೇ ಕ್ವಾನ್ ಡೋ’ ಎಂಬ ಸಮರ ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಹೆಗಡೆಗೆ ಜೊತೆ ಜೊತೆಗೆ ‘ಅಧ್ಯಯನ’ದ ಅಭ್ಯಾಸವೂ ಇದೆ!

ಭಾರತದಲ್ಲಿ ಸತ್ಯ ಹೇಳಿದರೆ ಮೆಚ್ಚುಗೆ ವ್ಯಕ್ತವಾಗುವುದಕ್ಕಿಂತ ವಿರೋಧ ಗಳಿಸುವುದೇ ಹೆಚ್ಚು! ಹೆಗಡೆಯ ವಿಷಯದಲ್ಲಿಯೂ ವಿವಾದಗಳಾಗಿದ್ದೂ ಇದೇ ಕಾರಣಕ್ಕೆ
ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಬಿಡಿ! ನೇರನುಡಿ, ಧರ್ಮನಿಷ್ಠೆ, ಕರ್ತವ್ಯ ಪಾಲನೆ! ಇವು ಮೂರೂ ಸಹ ಒಮ್ಮೊಮ್ಮೆ ಅವರಿಗೆ ಮುಳ್ಳಾಗಿತ್ತು!

ಯಾವಾಗ ಹೆಗಡೆ ಭಯೋತ್ಪಾದನೆಯನ್ನು ಬಲವಾಗಿ ಧಿಕ್ಕರಿಸಿದರೋ, ಮುಸಲ್ಮಾನರಿಗೆ ಸಹಜವಾಗಿಯೇ ಧರ್ಮ ನಿಂದನೆಯಾಗಿ ಭಾಸವಾಗಿತ್ತು! ಇಸ್ಲಾಂ
ಸಂಘಟನೆಗಳು ದಾವೆಯನ್ನೂ ದಾಖಲಿಸಿದ್ದರು! ಅದಾದ ಮೇಲೂ, ಕ್ರೈಸ್ತ ಮತದವರ ಮತಾಂತರಕ್ಕೆ ಬಲವಾಗಿ ವಿರೋಧಿಸಿದ್ದ ಹೆಗಡೆ ಅದೆಷ್ಟು ಮತಾಂತರಗಳನ್ನು ತಡೆದರೋ! ಅದೆಷ್ಟು ‘ಧರ್ಮನಿಂದನೆ’ ಯೆಂಬ ಆರೋಪಕ್ಕೊಳಗಾದರೋ!ಹೆಗಡೆ ಕ್ಯಾರೇ ಅನ್ನಲಿಲ್ಲ! ಬದಲಿಗೆ ಬದುಕಿನ ಬದ್ಧತೆಯೊಂದು ಹೆಚ್ಚುತ್ತಲೇ ಹೋಯಿತು!

ರೋಹಿಂಗ್ಯಾ ಮುಸಲ್ಮಾನರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಬೀದಿಗಿಳಿದ ಪ್ರಗತಿಪರರಿಗೆ ಬಾಂಗ್ಲಾ ಹಿಂದೂಗಳ ನೆನಪೇ ಇರಲಿಲ್ಲವೇನೋ! ಆಗಲೂ, ಹೆಗಡೆ ಬಾಂಗ್ಲಾ
ಹಿಂದೂಗಳ ಪರವಾಗಿ ಧ್ವನಿ ಎತ್ತಿದರು!

ಸಿದ್ಧಾಂತವನ್ನು ನಂಬಿ ನಡೆಯುವ ಅನಂತ ಕುಮಾರ್ ಹೆಗಡೆಯ ಬಗ್ಗೆ ಎಲ್ಲಾ ಮಾಧ್ಯಮಗಳೂ ಪ್ರಶ್ನೆ ಮಾಡಿದವು! ಮೋದಿಯ ನಡೆಯನ್ನೂ ಪ್ರಶ್ನಿಸಿದವು! ಹಾಗಾದರೆ, ತನ್ನ ಧರ್ಮದ ಬಗ್ಗೆ ಅಭಿಮಾನ ಹೊಂದಿರುವುದು ತಪ್ಪೇ?! ಅಥವಾ ಅದು ಹಿಂದೂವಿಗೆ ಮಾತ್ರವಾ?! ಭಯೋತ್ಪಾದನೆಯ ವಿರುದ್ಧ ಮಾತನಾಡುವುದು ತಪ್ಪೇ?! ಹಿಂದೂಗಳ ಪರವಾಗಿ ಧ್ವನಿ ಎತ್ತುವುದೂ ಹಾಗಾದರೆ ಭಾರತದ ಸಮಾಜದಲ್ಲಿ ತಪ್ಪೇ?! ಮಾಧ್ಯಮಗಳ ಅತಿರೇಕವೊಂದಿದೆಯಲ್ಲ, ಸಮಾಜ ಹಿತಕ್ಕೋಸ್ಕರ ಕೆಲಸ ಮಾಡುವ ಬದಲು, ಇಸ್ಲಾಮೀಕರಣದ ಹಾದಿಯಲ್ಲ ನಡೆಯುವ ಎಲ್ಲಾ ಲಕ್ಷಣಗಳೂ ಇರುವಾಗ.. ಯಾರದು ತಪ್ಪು?!

– ಪೃಥ

Tags

Related Articles

Close