ಪ್ರಚಲಿತ

ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಗಡೀಪಾರು ಮಾಡಿದರೆ ರಕ್ತಪಾತವಾಗಲಿದೆಯೇ? ಬೆದರಿಕೆ ಬಂದಿದ್ದು ಯಾರಿಂದ ಗೊತ್ತೇ?!

ಭಾರತ ಜಾತ್ಯಾತೀತ ರಾಷ್ಟ್ರ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಸಾಕು ಎಂಥವರನ್ನು ಕೂಡ ಕರೆದು ಆಶ್ರಯ
ನೀಡುವಂತಹ ಪುಣ್ಯ ಭೂಮಿ!! ಹೀಗಿರಬೇಕಾದರೆ ಉಂಡ ಮನೆಗೆ ಕಣ್ಣ ಹಾಕುವ ಜನಗಳನ್ನು ಎಂದಾದರೂ ನೋಡಿದ್ದೀರಾ!! ಹೌದು.. ಬರ್ಮಾದಲ್ಲಿ ರೋಹಿಂಗ್ಯಾ ಮುಸಲ್ಮಾನರನ್ನು ಅಲ್ಲಿನ ಸರಕಾರ ಮುಲಾಜಿಲ್ಲದೇ ಒದ್ದೋಡಿಸಿದ್ದು, ಆಶ್ರಯಕ್ಕೆಂದು ಬಾಂಗ್ಲಾದೇಶ- ಪಶ್ಚಿಮ ಬಂಗಾಳದ ಮೂಲಕ ಭಾರತದಲ್ಲಿ ಆಶ್ರಯ ಪಡೆದು ಇದೀಗ ಬರ್ಮಾದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಎಸಗಿದ ಹಾಗೆ ಭಾರತದಲ್ಲಿಯೋ ಹೇಶ ದ್ರೋಹಿ ಕೃತ್ಯಗಳನ್ನು ಎಸಗೋದಿಲ್ಲ ಅನ್ನೋದು ಏನು ಗ್ಯಾರೆಂಟಿ? ಹಾಗಾಗಿ ಭಾರತ ಸರಕಾರ ಈ ರೋಹಿಂಗ್ಯಾಗಳನ್ನು ಆದಷ್ಟು ಬೇಗ ದೇಶದಿಂದ ಓಡಿಸಲಾಗುವುದು ಎಂದು ಹೇಳಿದೆ. ಆದರೆ, ರೋಹಿಂಗ್ಯ ಮುಸ್ಲಿಮರನ್ನು ಭಾರತದಿಂದ ಗಡೀಪಾರು ಮಾಡಿದರೆ ರಕ್ತಪಾತವಾಗುತದೆ ಎಂದು ಕೋಮು ಪ್ರಚೋದಕ ಮೌಲ್ವಿ ಶಬ್ಬೀರ್ ಅಲಿ ಅಜಾದ್ ಹೇಳಿದ್ದಾನೆ!!!!

ಹೌದು… ನಮ್ಮ ದೇಶಕ್ಕೆ ಯಾವ ಸ್ಥಿತಿ ಬರುತ್ತದೋ ಎಂದು ಗೊತ್ತಾಗುತ್ತಿಲ್ಲ. ಯಾಕೆಂದರೆ ಭಾರತ ದೇಶದಲ್ಲಿ ರೋಹಿಂಗ್ಯಾಗಳಿದ್ದರೆ ಅಪಾಯ ಎಂದು ಗೊತ್ತಿದ್ದರು ಕೂಡ, ಇವರ ಬೆಂಬಲಕ್ಕೆ ನಿಂತ ಈ ಮೌಲ್ವಿಗಳನ್ನು ಏನೆನ್ನಬೇಕೋ!! ವಿಷದ ಹಾವನ್ನು ಕೈಯಲ್ಲಿ ಹಿಡಿದು ಕಚ್ಚು ಕಚ್ಚು ಎನ್ನುವಂತಹ ಪರಿಸ್ಥಿತಿ ಎದುರಾಗುತ್ತಿರೋದು ಖಂಡಿತಾ! ಹೀಗಿರಬೇಕಾದ್ರೆ ಅವರನ್ನೇ ಬೆಂಬಲಿಸುವ ಈ ಮಂದಿಯ ಬುದ್ದಿ ಏನಾಗಿದೋ ಗೊತ್ತಿಲ್ಲ. ಆದರೆ, ಬಾಂಗ್ಲಾದೇಶದಲ್ಲಿ ವಲಸೆ ಬಂದು ನೆಲೆ ನಿಂತಿರುವ ರೊಹಿಂಗ್ಯಾ ಮುಸ್ಲಿಮರಿಗೆ ಭಾರತ ನೆರವಿನ ಹಸ್ತ ಚಾಚಿದೆ. ಆದರೆ, ಏಕಾಏಕಿ ಲಕ್ಷಾಂತರ ಜನ ನಿರಾಶ್ರಿತರಾಗಿ ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರನ್ನು ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಅದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿತ್ತು. ಆದರೆ ರೋಹಿಂಗ್ಯಾ ಮುಸ್ಲಿಮರು ಭಾರತದ ಭದ್ರತೆಗೆ ತೊಡಕಾಗಿರೋದು ಮಾತ್ರ ನಿಜ!!

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ರೋಹಿಂಗ್ಯಾ ಮುಸ್ಲಿಮರು ನೆಲೆ ನಿಂತಿದ್ದಾರೆ. ಇವರನ್ನು ಉಗ್ರ ಸಂಘಟನೆಗಳು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಕಳೆದ ಆಗಸ್ಟ್‍ನಲ್ಲಿ ಹೇಳಿತ್ತು. ಮಾತ್ರವಲ್ಲ ರಾಜ್ಯ ಸರಕಾರಗಳು ರೋಹಿಂಗ್ಯಾ ಮುಸ್ಲಿಮರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆಯೂ ಸೂಚನೆ ನೀಡಿತ್ತು.

ಮಯನ್ಮಾರ್ ನ ರಖಿನೆ ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿರುವ ರೋಹಿಂಗ್ಯಾ ಸಮುದಾಯದವರ ಮೇಲೆ ದಾಳಿಗಳು ನಡೆಯುತ್ತಿದ್ದ, ಈ ಜನರು ವಿಶ್ವದ ಬೇರೆ ಬೇರೆ
ಭಾಗಗಳಿಗೆ ವಲಸೆ ಹೋಗಿದ್ದು, ಇದೇ ರೀತಿ ಭಾರತಕ್ಕೂ ಬಂದಿದ್ದಾರೆ. ಹಾಗಾಗಿ, ಕಳೆದ ತಿಂಗಳು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ದೇಶದಲ್ಲಿ 40 ಸಾವಿರ ರೋಹಿಂಗ್ಯಾ ಮುಸ್ಲಿಮರು ನೆಲೆಸಿದ್ದಾರೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದರು. ಇದರಲ್ಲಿ ಹೆಚ್ಚಿನ ಜನರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರು. ದೇಶದ ಸೀಮಿತ ಸಂಪನ್ಮೂಲಗಳನ್ನು ಈ ಜನರು ಬಳಸಿಕೊಳ್ಳುವುದರಿಂದ ದೇಶದ ಜನರಿಗೆ ಅನ್ಯಾಯವಾಗುತ್ತಿದೆ ಎಂದೂ ಕೇಂದ್ರ ಗೃಹ ಇಲಾಖೆ ಈ ಹಿಂದೆ ಹೇಳಿತ್ತು.

ಹಾಗಾಗಿ ಕೇಂದ್ರದ ಈ ನಿಲುವಿನ ಬಗ್ಗೆ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿದ ಮೌಲ್ವಿಗಳು ರೋಹಿಂಗ್ಯಾಗಳಿಗೆ ಬೆಂಬಲ ನೀಡುತ್ತಿದೆ. ಅಷ್ಟೇ ಅಲ್ಲದೇ ರೋಹಿಂಗ್ಯ
ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಲು ಈಗಾಗಲೇ ನಿರಾಕರಿಸಿರುವ ಭಾರತ ಸರಕಾರವು ತನ್ನ ನಿರ್ಧಾರದ ಹಿಂದಿನ ಕಾರಣವನ್ನು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‍ಗೆ ತಿಳಿಸಿದ ಹಿನ್ನಲೆಯಲ್ಲಿ, ನಿರಾಶ್ರಿತರ ಮೂಲಭೂತ ಹಕ್ಕುಗಳನ್ನು ಕೇಂದ್ರ ಸರ್ಕಾರದ ಕಸಿಯುತಿದೆ ಎಂದು ಕೋಮು ಪ್ರಚೋದಕ ಮೌಲ್ವಿ ಶಬ್ಬೀರ್ ಅಲಿ ಅಜಾದ್ ಹೇಳಿದ್ದಾನೆ.

ಪ್ರತಿಭಟನೆಯಲ್ಲಿ ಮಾತನಾಡಿದ ಮೌಲ್ವಿ ಶಬ್ಬೀರ್ ಅಲಿ ಅಜಾದ್, ಒಂದು ವೇಳೆ ಕೇಂದ್ರ ಸರ್ಕಾರ ರೋಹಿಂಗ್ಯ ಮುಸ್ಲಿಮರನ್ನು ಭಾರತದಿಂದ ಗಡೀಪಾರು ಮಾಡಿದರೆ ರಕ್ತಪಾತವಾಗುತ್ತದೆ ಎಂದು ಹೇಳಿಕೆ ನೀಡಿದ್ದಾನೆ!! ಅದಲ್ಲದೆ ಮುಸ್ಲಿಮರು ಅಲ್ಪಸಂಖ್ಯಾತರು ಎಂದ ಕಾರಣಕ್ಕೆ ನಾವು ದುರ್ಬಲರಾಗಿದ್ದೇವೆ ಎಂದರ್ಥವಲ್ಲ. ಕೇಂದ್ರ ಸರ್ಕಾರಕ್ಕೆ ಮುಸ್ಲಿಮರ ಇತಿಹಾಸವನ್ನು ತಿಳಿದಿಲ್ಲ ಎಂದು ಹೇಳಿದ್ದ. ಮಾತ್ರವಲ್ಲದೇ, ನಾವು ಹುಸೈನ್ ಮುಸ್ಲಿಮರು. ನಾವು 72 ಜನ ಸಾಕು ನಾವು ಲಕ್ಷಗಟ್ಟಲೆ ಜನರನ್ನು ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ ಈ ಕೋಮು ಪ್ರಚಾರಕ.

ಅದೇನೋ ಗೊತ್ತಿಲ್ಲ… ಇವರ ಬಾಯಿಯಲ್ಲಿ ಕೊಲ್ಲುವ ಮಾತು ಬಿಟ್ಟರೆ, ದೇಶದ ರಕ್ಷಣೆ ಎನ್ನುವ ಪದ ಇವರಲ್ಲಿ ಬಾಯಿಯಲ್ಲಿ ಬಂದಿಲ್ಲ. ಇಂತಹ ಪ್ರತಿಯೊಬ್ಬ ಕೋಮು ಪ್ರಚಾರಕ ಭಾರತದ ದೇಶದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರೆ ಅದು ಇವರ ಪುಣ್ಯವೇ ಸರಿ!! ಯಾಕೆಂದರೆ ಬೇರೆ ಮುಸ್ಲಿಂ ರಾಷ್ಟ್ರಗಳಲ್ಲಿ ಈ ರೀತಿಯಾಗಿ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರೆ ಇವರು ದೇಶದಲ್ಲಿ ಬಿಡಿ, ಭೂಲೋಕದಲ್ಲಿಯೇ ಇರುತ್ತಿರಲಿಲ್ಲ ಅದು ನೆನಪಿರಲಿ!!

– ಅಲೋಖಾ

Tags

Related Articles

Close