ಅಂಕಣದೇಶಪ್ರಚಲಿತರಾಜ್ಯ

ಲವ್ ಜಿಹಾದ್ ಕುತಂತ್ರ ನೋಡಿದ್ರೆ ಖಂಡಿತಾ ಬೆಚ್ಚಿಬೀಳ್ತೀರಾ!! ನಿಮ್ಮ ಮನೆಯ ಹುಡುಗಿಯರನ್ನು ರಕ್ಷಿಸಬೇಕಾದ್ರೆ ಇದನ್ನು ಓದ್ಲೇ ಬೇಕು!!!

ಆಕೆ ಲವ್ ಜಿಹಾದ್‍ಗೆ ಸಿಲುಕುವ ಮೊದಲೇ ಸಾಂಕೇತಿಕವಾಗಿ ಮದುವೆಯಾಗಿತ್ತು. ಹೌದು, ಆಕೆಗೆ ತಾನು ಲವ್ ಜಿಹಾದ್‍ಗೆ ಸಿಲುಕಿದ್ದೇನೆ ಎಂದೂ ತಿಳಿಯದೆ ತನ್ನ
ಕಥೆಯನ್ನು ಮುಗ್ಧವಾಗಿ ವಿವರಿಸುತ್ತಿದ್ದಳು. ತಾನೆಷ್ಟು ದೊಡ್ಡ ಜಾಲದಲ್ಲಿ ಸಿಲುಕಿದ್ದೇನೆ ಎಂದೂ ಅವಳು ಅರಿವಿರದೆ ತನ್ನ ಕಥೆಯನ್ನು ನಿಧಾನವಾಗಿ ವಿವರಿಸುತ್ತಿದ್ದಳು.
ಅವಳಿಗೆ ಮುಂದೊಂದು ದಿನ ತಾನೆಷ್ಟು ಭಯಂಕರ ಕಷ್ಟಕ್ಕೆ ಸಿಲುಕುತ್ತೇನೆ ಎಂದೂ ಅರಿವಿರಲಿಲ್ಲ.
ಆಕೆಯ ಹೆಸರು ಮನೋಮ್ನಣಿ. ಈಕೆ ತಮಿಳು ಹುಡುಗಿ. ಸ್ವಲ್ಪ ಎಣ್ಣೆ ಕಪ್ಪಾಗಿದ್ದರೂ ಮಂದಸ್ಮಿತೆಯಾಗಿದ್ದು, ಕಡುಚೆಲುವಿನ ಹುಡುಗಿಯಾಗಿದ್ದಳು. ಆಕೆಯ ಸ್ವರ ಕೋಗಿಲೆ ಉಲಿದಂತೆ ಕೇಳುತ್ತಿತ್ತು. ಕಂಪನಿಯೊಂದರಲ್ಲಿ ಗುಮಾಸ್ತೆಯಾಗಿದ್ದ ಈಕೆ ತಾನಾಯಿತು ತ್ನ ಕೆಲಸವಾಯಿತೆಂದು ತನ್ನಷ್ಟಕ್ಕೆ ಇದ್ದಳು. ಈಕೆಯ ತಂದೆ ಸಿಕ್ಕಾಪಟ್ಟೆ ಕುಡಿದು ಬಂದು ಮನೆಯಲ್ಲಿ ರಂಪಾಟ ನಡೆಸುತ್ತಿದ್ದ. ಕುಡಿದ ಮತ್ತಲ್ಲಿ ಹೆಂಡ್ತಿ ಮಕ್ಕಳಿಗೆ ಹೊಡೆದು, ಮನೆಯನ್ನು ಅಕ್ಷರಶಃ ನರಕವನ್ನಾಗಿ
ಬದಲಿಸಿದ್ದ. ಮನೋನ್ಮಣಿ ಮನೆಪಾಠ ಮಾಡಿಕೊಂಡು ಬಿಕಾಂ ಮುಗಿಸಿ ಕೆಲಸ ಮಾಡುತ್ತಿದ್ದಳು.
ತಮಿಳುನಾಡಿನ ಜನರು ಅಡ್ಡನಾಮ ಹಾಕುತ್ತಾರೆ. ಅದೇ ರೀತಿ ಮನೋನ್ಮಣಿಯೂ ಹಣೆಗೆ ಕೆಂಬಣ್ಣದ ಅಡ್ಡ ತಿಲಕ ಹಾಕಿಕೊಂಡು ಬರುತ್ತಿದ್ದಳು. ತಲೆಗೂದಲನ್ನು
ಇಳಿಬಿಟ್ಟು ಮಲ್ಲಿಗೆ ಮುಡಿದುಕೊಂಡು ಬರುತ್ತಿದ್ದಳು. ಕಿವಿಗೆ ಜುಮುಕಿ, ಕೈಗೆ ಬಳೆಗಳನ್ನು ಧರಿಸಿ ಅಪ್ಪಟ ತಮಿಳರ ಸಂಸ್ಕøತಿಯ ಪ್ರತೀಕದಂತೆ ಕಾಣುತ್ತಿದ್ದಳು. ಆಕೆ ತನ್ನ ಚೂಡಿದಾರದ ಬಣ್ಣಕ್ಕೆ ತಕ್ಕಂತೆ ಕೈಬಳೆ ಧರಿಸುತ್ತಿದ್ದಳು. ಇವಿಷ್ಟು ಮನೋನ್ಮಣಿಯ ವೇಷಭೂಷಣ, ಇದನ್ನು ಹೊರತುಪಡಿಸಿ ಆಕೆಯನ್ನು ಕಲ್ಪಿಸಲೂ ಸಾಧ್ಯವಿರಲಿಲ್ಲ.

ಆದರೆ ಸ್ವಲ್ಪ ದಿನಗಳ ನಂತರದಲ್ಲೇ ಮನೋನ್ಮನಿ ನಿಧಾನವಾಗಿ ಬದಲಾಗುತ್ತಾ ಬಂದಳು.

ಹಣೆಗೆ ತಿಲಕ, ಸುಂದರವಾಗಿ ಹೂ ಮುಡಿದುಕೊಂಡು ಬರುತ್ತಿದ್ದ ಮನೋನ್ಮಣಿ ಬರಬರುತ್ತಾ ಅವೆರಡನ್ನೂ ತ್ಯಜಿಸುತ್ತಾ ಬಂದಳು. ಚೂಡಿದಾರದ ಶಾಲನ್ನು ಎದೆಯಿಂದ ಹಾಗೆಯೇ ಇಳಿಬಿಡುತ್ತಿದ್ದ ಮನೋನ್ಮಣಿ ಬರಬರುತ್ತಾ ಶಾಲನ್ನು ಬುರ್ಖಾದಂತೆ ತಲೆಗೆ ಸುತ್ತಿಕೊಂಡು ಬರುತ್ತಿದ್ದಳು. ಈಕೆಯ ಅವತಾರ ಬದಲಾಗಲು ಕಾರಣವನ್ನು ಆಕೆ ವಿವರಿಸಿದ್ದು ಹೀಗೆ….
ಆಕೆಗೆ ಒಬ್ಬ ಮುಸ್ಲಿಂ ಹುಡುಗ ಪರಿಚಯವಾಗಿದ್ದು, ಆತ ಈಕೆಯನ್ನು ಲವ್ ಮಾಡುತ್ತಿದ್ದನಂತೆ. ಈಕೆಗಾಗಿ ಆತ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದು ಕೆಲವೇ ದಿನಗಳಲ್ಲಿ ಈತ ಮದುವೆಯಾಗುತ್ತಾನಂತೆ… ಆತ ಈಕೆಯನ್ನು ಕಾಲೇಜ್ ದಿನಗಳಿಂದಲೇ ಲವ್ ಮಾಡುತ್ತಿದ್ದನಂತೆ… ಮುಖ್ಯವಾಗಿ ಆತ ಈಕೆಯನ್ನು ಲವ್ ಮಾಡಿದ ವಿಧಾನ ಹೇಗೆ ಎಂಬುವುದೇ ಇಲ್ಲಿ ಮುಖ್ಯ ವಿಷಯ.

ವಿದ್ಯಾರ್ಥಿನಿಯರೇ ಟಾರ್ಗೆಟ್!!!
ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಲವ್ ಮಾಡಲು ಒಂದು ಟೀಂ ಅನ್ನೇ ಕಟ್ಟಿಕೊಂಡಿದ್ದರು. ಅವರು ಕಾಲೇಜ್ ಹುಡುಗಿಯರನ್ನು ಪರಿಚಯ ಮಾಡುವುದು ತನ್ನ ಸಹೋದರಿಯರ ಮೂಲಕ. ಮುಸ್ಲಿಂ ಹುಡುಗಿಯರಿಗೆ ತನ್ನ ಹಿಂದೂ ಗೆಳತಿಯರನ್ನು ತನ್ನ ಮುಸ್ಲಿಂ ಅಣ್ಣ, ಗೆಳೆಯರಿಗೆ ಪರಿಚಯ ಮಾಡಿಸುವುದು ಅವರ ಕೆಲಸವಾಗಿತ್ತು. ಕಾಲೇಜ್ ಹುಡುಗಿಯರಿಗೆ ಹಣಕಾಸಿನ ಸಮಸ್ಯೆ ಇದ್ದೇ ಇರುತ್ತದೆ. ಈ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಲು ಹಿಂದೂ ವಿದ್ಯಾರ್ಥಿನಿಯರಿಗೆ ನೆರವಾಗುತ್ತಿದ್ದು ಕ್ಲಾಸಿನ ಮುಸ್ಲಿಂ ಹುಡುಗಿಯರು. ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗೆ ತನ್ನ ಮತದ ಬಗ್ಗೆ ಒಲವು ಮೂಡುವಂತೆ ಮಾಡುತ್ತಾರೆ. ಹಿಂದೂ ಹುಡುಗಿಯರನ್ನು ಪರಿಚಯಿಸಿ ಅವರನ್ನು ಪುಸಲಾಯಿಸಿ ಮುಸ್ಲಿಮ್ ಹುಡುಗರ ಜೊತೆ ಲವ್ ಉಂಟಾಗುವಂತೆ ನೋಡಿಕೊಳ್ಳುತ್ತಿದ್ದರಂತೆ. ಈ ಹುಡುಗರು ಆಕೆಯ ಕಾಲೇಜಿನ ಫೀಸ್ ಕಟ್ಟುವುದು, ಆಕೆಗೆ ಹಣಕಾಸಿನ ನೆರವು ನೀಡುವುದು, ಮನೆಯಲ್ಲಿ ಕಷ್ಟವಿದ್ದರೆ ಅದಕ್ಕೂ ಹಣಕಾಸಿನ ನೆರವನ್ನು ನೀಡುವ ಕೆಲಸವನ್ನು ಮಾಡುತ್ತಾರೆ.

ಮನೋನ್ಮಣಿಯ ತಂದೆ ಕುಡಿದು ಕುಪ್ಪಳಿಸಿ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಈಕೆಯ ಬೆನ್ನು ಬಿದ್ದ ಮುಸ್ಲಿಂ ಹುಡುಗರು ಇದನ್ನೇ ಪ್ಲಸ್ ಪಾಯಿಂಟ್
ಮಾಡಿಕೊಂಡು, ಹಿಂದೂ ಹುಡುಗರು ಇದೇ ರೀತಿ ಕುಡಿಯುತ್ತಾರೆ, ಆದರೆ ಮುಸ್ಲಿಂ ಹುಡುಗರು ಮದ್ಯ ಸೇವನೆ ಮಾಡದೆ ಹೆಂಡ್ತಿ ಮಕ್ಕಳನ್ನು ಚೆನ್ನಾಗಿ
ನೋಡಿಕೊಳ್ಳುತ್ತಾರೆ ಎಂದೆಲ್ಲಾ ಹೇಳುತ್ತಿದ್ದರು. ಮನೋನ್ಮಣಿಯ ತಂದೆ ಕುಡುಕನಾಗಿದ್ದುದರಿಂದ ಆಕೆಯ ಪ್ರಿಯಕರ ಮುಸ್ಲಿಂ ಹುಡುಗ ಆಕೆಗೆ ಅದೇ ರೀತಿ
ಹೇಳುತ್ತಿದ್ದನಂತೆ.

ಇಷ್ಟೆಲ್ಲಾ ಆದಾಗ ಮನೋನ್ಮಣಿಗೆ ಮುಸ್ಲಿಂ ಹುಡುಗನ ಜೊತೆ ಆಸಕ್ತಿ ಉಂಟಾಗಿತ್ತು. ಬರಬರುತ್ತಾ ಇಸ್ಲಾಂ ಬಗ್ಗೆ ಆಕೆಗೂ ಒಲವು ಮೂಡಿತ್ತು. ಬರಬರುತ್ತಾ ಪ್ರತಿದಿನ ತಿಲಕ ಹಾಕಿಕೊಂಡು ಬರುತ್ತಿದ್ದ ಮನೋನ್ಮಣಿಯ ಹಣೆಯಲ್ಲಿ ತಿಲಕ ನಾಪತ್ತೆಯಾಯಿತು. ಜಡೆಯಲ್ಲಿ ಮುಡಿದುಕೊಂಡು ಬರುತ್ತಿದ್ದ ಮಲ್ಲಿಗೆ ಹೂ, ಕೈಬಳೆ, ಕಿವಿಯಲ್ಲಿನ ಜುಮುಕಿ ನಾಪತ್ತೆಯಾಗಿ ಮನೋನ್ಮಣಿಯ ಮುಖದಲ್ಲಿ ಪ್ರೇತಕಳೆ ವ್ಯಾಪಿಸಿತ್ತು. ಆಫೀಸಿಗೆ ಬರುವಾಗ ತನ್ನ ಚೂಡಿದಾರದ ಶಾಲನ್ನು ಬುರ್ಖಾದ ತರ ಸುತ್ತಿಕೊಂಡು ಬರಲಾರಂಭಿಸಿದಳು.

ಇದೇ ಮನೋನ್ಮಣಿ ಮುಂದೆ ತನ್ನ ಇತರ ಗೆಳತಿಯರಲ್ಲೂ ಮುಸ್ಲಿಂ ಹುಡುಗರ ಬಗ್ಗೆ ಆಸಕ್ತಿ ಬರುವಂತೆ ಮಾಡುತ್ತಿದ್ದಳು. ಇಸ್ಲಾಂ ಸೇರಿದ ಬಳಿಕ ಸ್ತ್ರೀಯರನ್ನು ಯಾವ ರೀತಿ ಶೋಷಣೆ ಮಾಡಲಾಗುತ್ತದೆ ಎಂಬ ಅರಿವಿರದ ಮುಗ್ಧ ಮನೋನ್ಮಣಿ ತನಗಾದ ವೈಯಕ್ತಿಕ ಲಾಭದಿಂದಾಗಿ ಆಕೆಯ ಗೆಳತಿಯರನ್ನೂ ಪುಸಲಾಯಿಸುತ್ತಿದ್ದಳು. ಮನೋನ್ಮಣಿಗೆ ಬಲಿಯಾಗಿದ್ದು ಆಕೆಯ ಸ್ವತಃ ಒಡಹುಟ್ಟಿದ ತಂಗಿ!

ಹಿಂದೂ ಹುಡುಗಿಯರನ್ನು ಮುಸ್ಲಿಂ ಹುಡುಗರಿಗೆ ಪರಿಚಯ ಮಾಡಿಸುವುದು ಒಂದು ದೊಡ್ಡ ಕೆಲಸವನ್ನಾಗಿ ಮಾಡಲಾಗುತ್ತಿತ್ತು. ಒಬ್ಬಳು ಹಿಂದೂ ಹುಡುಗಿ ತನ್ನ ಇತರ ಹಿಂದೂ ಗೆಳತಿಯರನ್ನು ಮುಸ್ಲಿಂ ಯುವಕರಿಗೆ ಪರಿಚಯ ಮಾಡಿಕೊಟ್ಟರೆ ಈಕೆಯಂತೆ ಆ ಹುಡುಗಿಯರ ಬದುಕಲ್ಲಿ ಆವರಿಸಿದ್ದ ಕತ್ತಲು ಕೂಡಾ ನಿವಾರಣೆಯಾಗುತ್ತದೆ ಎಂದೆಲ್ಲಾ ಹೇಳಲಾಗುತ್ತಿತ್ತು. ಇದೊಂದು ತರ ಚೈನ್ ಸಿಸ್ಟಮ್ ತರ. ಹೆಚ್ಚು ಹೆಚ್ಚು ಹುಡುಗಿಯರನ್ನು ಇಸ್ಲಾಂಗೆ ಕರೆತರುವಂತೆ ಸ್ವತಃ ಲವ್‍ಜಿಹಾದ್‍ಗೊಳಗಾದ ಹಿಂದೂ ಹುಡುಗಿಯರನ್ನೇ ಪ್ರೇರೇಪಿಸಲಾಗುತ್ತಿತ್ತು.

ನಾಪತ್ತೆಯಾಗುವ ಮುಂಚೆ ಸಾಂಕೇತಿಕ ಮದುವೆ!
ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಪರಿಚಯ ಮಾಡಿದ ಬಳಿಕ ಅವರು ಮತ್ತೆ ಇಸ್ಲಾಂನಿಂದ ಹೊರಹೋಗದಂತೆ ಮೊದಲೇ ಒಂದು ಸಾಂಕೇತಿಕವಾಗಿ
ಮದುವೆ ಮಾಡಲಾಗುತ್ತದೆ. ಇದನ್ನು ಸ್ವತಃ ಮನೋನ್ಮಣಿಯೇ ತಿಳಿಸಿದ್ದು! ಮನೋನ್ಮಣಿ ಅಂತಿಮ ಬಿಕಾಂ ಓದುತ್ತಿದ್ದ ಸಂದರ್ಭ, ಆಕೆಗೆ ಆಕೆ ಪ್ರೀತಿಸಿದ
ಹುಡುಗನೊಂದಿಗೆ ಸಾಂಕೇತಿಕವಾಗಿ ನಿಕಾಹ್ ಮಾಡಿಕೊಡಲಾಗಿತ್ತು. ಇದಾದ ಬಳಿಕವೇ ಮನೋನ್ಮಣಿ ತನ್ನ ಹಿಂದೂ ಸಂಪ್ರದಾಯವನ್ನು ಕೈಬಿಡಲು ಆರಂಭಿಸಿದ್ದು!
ಹೀಗೆ ಸಾಂಕೇತಿಕವಾಗಿ ಮದುವೆಯಾದ ಬಳಿಕ ನಿಜವಾದ ಮದುವೆಯಾಗುವ ಮುಂಚೆ ಆ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗುತ್ತಾರೆ!!! ಇದೇ ರೀತಿ ಹಲವು ಹುಡುಗಿಯರು ನಿಗೂಢವಾಗಿ ನಾಪತ್ತೆಯಾದ ಘಟನೆಗಳು ನಡೆಯುತ್ತಿವೆ.

ಮನೋನ್ಮಣಿಗೆ ಪರಿಚಯವಾದಂತೆ ಆಕೆಯ ತಂಗಿಗೂ ಒಬ್ಬ ಮುಸ್ಲಿಂ ಹುಡುಗನ ಪರಿಚಯವಾಗಿತ್ತು. ಆತ ಮೂಲತಃ ಕೇರಳದವನು. ತಮಿಳುನಾಡಲ್ಲಿ ಕೆಲಸ
ಮಾಡಿಕೊಂಡಿರುತ್ತಿದ್ದ. ಆತ ಈಕೆಯನ್ನು ಆರಂಭದಲ್ಲಿ ಸಾಂಕೇತಿಕವಾಗಿ ಮದುವೆಯಾಗಿದ್ದನಂತೆ. ಆದರೆ ಕೆಲವು ದಿನಗಳ ನಂತರ ಆಕೆಯ ತಂಗಿ ನಿಗೂಢವಾಗಿ
ನಾಪತ್ತೆಯಾಗಿದ್ದಳು. ಆಮೇಲೆ ಆಕೆ ಎಲ್ಲಿಗೆ ಹೋದಳು ಏನಾದಳು ಎಂಬ ಸುದ್ದಿಯೇ ಇರಲಿಲ್ಲ. ಮನೋನ್ಮಣಿಯ ಪ್ರಕಾರ ಆಕೆ ಗಂಡನೊಂದಿಗೆ ಸುಖವಾದ ಜೀವನ ನಡೆಸುತ್ತಿದ್ದಾಳೆ ಎಂದೇ ಭಾವಿಸಿದ್ದಳು.

ಹಿಂದೂ ಹುಡುಗಿಯರಿಗೆ ಮದುವೆ ಬಗ್ಗೆ ಒಂದು ಭಾವನಾತ್ಮಕ ಸಂಬಂಧವಿದೆ. ಒಬ್ಬನನ್ನು ಮದುವೆಯಾದ ಬಳಿಕ ಅವರು ಪರಪುರುಷನತ್ತ ಕಣ್ಣು ಕೂಡಾ
ಹಾಯಿಸುವುದಿಲ್ಲ. ಇದೇ ಭಾವನಾತ್ಮಕ ಸಂಬಂಧದಿಂದ ಹಿಂದೂ ಹುಡುಗಿಯರನ್ನು ಕಟ್ಟಿ ಹಾಕಲಾಗುತ್ತದೆ. ಸಾಂಕೇತಿಕವಾಗಿ ಮುಸ್ಲಿಂ ಹುಡುಗನ ಮದುವೆಯಾದ ಬಳಿಕ ಅವರಲ್ಲಿ ತನ್ನ ಮುಸ್ಲಿಂ ಗಂಡನ ಬಗ್ಗೆ ಆರಾಧನಾ ಭಾವ ಬೆಳೆಯುತ್ತದಲ್ಲದೆ, ತನ್ನನ್ನು ತಾನು ಗಂಡನಿಗೆ ಸಮರ್ಪಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಮುಸ್ಲಿಂ ಹುಡುಗನೊಬ್ಬ ಲವ್ ಜಿಹಾದ್ ನಡೆಸಿದ ಹುಡುಗಿಯನ್ನು ಆರಂಭದಲ್ಲಿ ಸಾಂಕೇತಿಕವಾಗಿ ಮದುವೆಯಾಗುತ್ತಾನಂತೆ. ಇದು ಕೇರಳದಲ್ಲಿ ನಡೆದ ಹಲವು ಲವ್ ಜಿಹಾದ್ ಪ್ರಕರಣಗಳಲ್ಲಿ ಬೆಳಕಿಗೆ ಬಂದಿತ್ತು.
ಮನೋನ್ಮಣಿಯ ತಂಗಿ ನಾಪತ್ತೆಯಾದ ಒಂದು ತಿಂಗಳ ಬಳಿಕ ಮನೋನ್ಮಣಿ ಕೂಡಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಹೀಗೆ ಎಷ್ಟೋ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹೀಗೆ ನಾಪತ್ತೆಯಾದ ಹಲವು ಹುಡುಗಿಯರನ್ನು ಪತ್ತೆಹಚ್ಚಲು ಪೊಲೀಸರು ಕೂಡಾ ವಿಫಲರಾಗಿದ್ದಾರೆ. ಹಿಂದೂಗಳಲ್ಲಿ ಒಬ್ಬಳು ಯುವತಿ ಪರಪುರುಷನ ಜೊತೆ ಓಡಿಹೋದರೆ ಮನೆಯವರು ಆಕೆಯ ಬಗ್ಗೆ ತತ್ಸಾರ ಭಾವನೆಯನ್ನು ಬೆಳೆಸಿಕೊಂಡು ಮತ್ತೆ ಆಕೆಯನ್ನು ಮನೆಗೆ ಸೇರಿಸುವುದಿಲ್ಲ. ಇದನ್ನೇ ಲವ್ ಜಿಹಾದ್ ಪ್ರಕರಣಗಳಲ್ಲಿ ಬಂಡವಾಳವನ್ನಾಗಿ ಮಾಡಲಾಗುತ್ತಿತ್ತು.

ಕೇರಳ ಮತ್ತು ತಮಿಳುನಾಡಿನಲ್ಲಿ ಹಿಂದೂ ಹುಡುಗಿಯರ ಮತಾಂತರ ಅತಿ ಹೆಚ್ಚಾಗಿ ನಡೆಯುತ್ತದೆ. ಒಬ್ಬಳು ಹುಡುಗಿಯನ್ನು ಇಸ್ಲಾಂಗೆ ಮತಾಂತರಗೊಳಿಸಲು ನಾನಾ ತಂತ್ರಗಳನ್ನು ಬಳಸಲಾಗುತ್ತದೆ. ಅದರಲ್ಲಿ ಇದೂ ಕೂಡಾ ಒಂದು. ಕೇರಳದಲ್ಲಿ ಇಂದು ಆರೆಸ್ಸೆಸ್ ಪ್ರಬಲವಾಗುತ್ತಾ ಬಂದಿರುವುದರಿಂದ ಲವ್ ಜಿಹಾದ್ ತಂತ್ರಗಳೆಲ್ಲಾ ಬಯಲಾಗುತ್ತಿದೆ. ಆದರೆ ತಮಿಳುನಾಡಲ್ಲಿಯೂ ಅತಿಹೆಚ್ಚು ಲವ್ ಜಿಹಾದ್ ಪ್ರಕರಣ ಜರುಗುತ್ತಿದ್ದರೂ ಈ ಬಗ್ಗೆ ಯಾರೂ ಕೂಡಾ ಅಲರ್ಟ್ ಆದಂತೆ ಕಂಡುಬರುತ್ತಿಲ್ಲ.
-ಚೇಕಿತಾನ

Tags

Related Articles

Close