ಪ್ರಚಲಿತ

ಲವ್ ಜಿಹಾದ್ ಗೆ ಬಲಿಯಾದ ಅನುಜಾ ಸಾವಿನ ಹಿಂದೆ ಹೋದ ತನಿಖಾ ದಳಕ್ಕೆ ಸಿಕ್ಕಿಬಿದ್ದ ಆ ಜಿಹಾದಿ ಕಿಂಗ್ ಪಿನ್ ಯಾರು ಗೊತ್ತೇ?!

“ಲವ್ ಜಿಹಾದ್” ಎನ್ನುವ ಕೃತ್ಯಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಬಲಿಯಾಗಿದ್ದಾರೋ ಗೊತ್ತಿಲ್ಲ!! ಇನ್ನು ಅದೆಷ್ಟೋ ಹೆಣ್ಣು ಮಕ್ಕಳು ಪ್ರೇಮ ಎನ್ನುವ ಪಾಶಕ್ಕೆ ಸಿಲುಕಿ ಒದ್ದಾಡುತ್ತಿದ್ದರೋ ಅದೂ ಗೊತ್ತಿಲ್ಲ!! ಆದರೆ ಲವ್ ಜಿಹಾದ್ ಎನ್ನುವ ಕೂಪಕ್ಕೆ ಬಲಿಯಾದ ಎರ್ನಾಕುಳಂ ಮಹರಾಜಾ ಕಾಲೇಜಿನ ರಾಜಕೀಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿನಿ ಅನುಜಾಳ ದುರಂತ ಸಾವಿನ ಬಗ್ಗೆ ನಾವು ಧ್ವನಿ ಎತ್ತಲೇಬೇಕಾಗಿದೆ!! ಇನ್ನು ಈಕೆಯ ಪ್ರಕರಣಕ್ಕೆ ಪೊಲೀಸರೇ ಬಣ್ಣ ಹಚ್ಚಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದರೆ ಅವರಿಗೆ ಏನೆನ್ನಬೇಕೋ ಗೊತ್ತಿಲ್ಲ!!

ಈ ಹಿಂದೆ ಹದಿಯಾಳ ವಿಚಾರ ಭಾರೀ ಮಟ್ಟದಲ್ಲಿ ಸದ್ದುಮಾಡಿದ್ದು ಲವ್‍ಜಿಹಾದ್ ಕುರಿತಂತೆ ಸಾಕಷ್ಟು ಮಾಹಿತಿಗಳು ಹೊರಬಿದ್ದಿದ್ದವು. ಇನ್ನು ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅದೆಷ್ಟೋ ಹೆಣ್ಣುಮಕ್ಕಳು ಲವ್ ಜಿಹಾದ್‍ಗೆ ಬಲಿಯಾಗುತ್ತಿದ್ದಾರೋ ನಾ ಕಾಣೆ!!! ಆದರೆ ಮಹಾರಾಜ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಆಕೆಯ ಕುಟುಂಬವು ಈ ಬಗ್ಗೆ ತನಿಖೆಯನ್ನು ಮಾಡಲು ಸ್ಥಳೀಯ ಪೊಲೀಸರಿಂದ ಅಪರಾಧ ದಳಕ್ಕೆ ನೀಡಲು ನಿರ್ಧರಿಸಿದೆ!!

ಲವ್ ಜಿಹಾದ್‍ಗೆ ಬಲಿಯಾದ 23 ವರ್ಷದ ಅನುಜಾ ಪುದುಶ್ಯೇರಿ ಪರಂಬಿಲ್ ಕಾಮ್ರೆಡ್ ಅಶೋಕ್ ಕುಮಾರ್-ಶೈಲಜಾ ದಂಪತಿಯ ಪುತ್ರಿಯಾಗಿದ್ದು, ಚಾವಕ್ಕಾಡ್ನಲ್ಲಿ ಬಾಡಿಗೆ ಮನೆಯ ಕೊಠಡಿಯೊಳಗೆ 2015 ಮೇ 17ರಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಲಿಲ್ಲ ಎಂಬ ಕಾರಣಕ್ಕಾಗಿ ತಲೆ ಬೋಳಿಸಿ ಬರ್ಬರವಾಗಿ ಹತ್ಯೆಗೈದ ಘಟನೆ ಇದಾಗಿದ್ದು, ಆಕೆಯನ್ನು ಅವರು ಬಲತ್ಕರಿಸಿ, ಚಿತ್ರಹಿಂಸೆ ನೀಡಿ ಕೊನೆಗೆ ಕೊಲೆಗೈದರು….!!

ಈಕೆಯನ್ನು ಮರುಳು ಮಾಡಿದ ಲವ್ ಜಿಹಾದಿ ಅನುಜಾ ಮನೆಯ ಹಿಂದಿದ್ದ ಗುರುವಾಯೂರಿನ PFI ಕಾರ್ಯಕರ್ತ!! ಅಷ್ಟೇ ಅಲ್ಲದೇ, ಲವ್ ಜಿಹಾದ್ ನ ಕಿಂಗ್ ಪಿನ್ ಆಗಿದ್ದಾತನೇ ಖಲೀಮ್!! ಈತ ಹಿಂದೂ ಹುಡುಗಿಯರನ್ನು ಮರಳು ಮಾಡುವುದರಲ್ಲಿ ನಿಸ್ಸೀಮನಾಗಿದ್ದಲ್ಲದೇ, ಕೇರಳದ ಬಿಜೆಪಿ ಶಾಸಕನ ಕೊಲೆಯಲ್ಲಿ ಭಾಗಿಯಾಗಿದ್ದ!! ಖಲೀಮ್ ಮೂರು ಮಕ್ಕಳ ತಂದೆ. ಆದರೆ ಅನುಜಾಳನ್ನು ಇಂಟರ್ನೆಟ್ ಮುಖಾಂತರ ಪರಿಚಯವಾಗಿ ಅವಳ ಮನಸ್ಸಿನಲ್ಲಿ ಪ್ರೀತಿಯ ಆಸೆ ಹುಟ್ಟಿಸಿ ಮದುವೆಯಾಗುತ್ತೇನೆಂದು ಕೂಡ ಆಸೆ ಹುಟ್ಟಿಸಿ ಅವಳ ಜೊತೆಗೆ ಲಿವಿಂಗ್ ಟುಗೆದರ್ ಜೀವನ ನಡೆಸಿದ್ದ!!

ಈತ ಯುವಮೋರ್ಚಾ ಕಾರ್ಯಕರ್ತ ಮಣಿಕಂಠನ ಕೊಲೆಯೂ ಸೇರಿದಂತೆ ವಿವಿಧ ಕ್ರಿಮಿನಲ್ ಕೇಸುಗಳಲ್ಲಿನ ಆರೋಪಿ! ಎನ್.ಟಿ.ಎಫ್ ನ ಕಾರ್ಯಕರ್ತ ಚಾವಕ್ಕಾಡು ವಲಿಯಗತ್ತ್ ಖಲೀಮ್ ಈಕೆಯನ್ನು ಪ್ರೇಮಿಸುವ ಸೋಗಿನಲ್ಲಿ ವಿವಾಹವಾಗಿ ಮತಾಂತರಗೊಳಿಸಲು ಯತ್ನಿಸಿದ್ದನು. ಆದರೆ ಇದಕ್ಕೆ ಒಪ್ಪದ ಈಕೆ ಆ ಕೂಪದಿಂದ ಮರಳಿ ಬರಲು ಯತ್ನಿಸಿದ್ದು ತದನಂತರ ನೇಣಿಗೆ ಶರಣಾಗಿದ್ದಾಳೆ!! ಆದರೆ ಆಕೆ ನೇಣಿಗೆ ಶರಣಾದ ರೀತಿಯನ್ನು ಕಂಡರೆ, ಆಕೆಯ ಕಾಲು ಸಂಪೂರ್ಣವಾಗಿ ಬಾಗಿ ನೆಲದಲ್ಲಿತ್ತು! ಕೂದಲನ್ನು ಸಂಪೂರ್ಣವಾಗಿ ಬೋಳಿಸಿ, ಕೂದಲನ್ನು ಆಕೆಯ ಕಾಲಬುಡದಲ್ಲೇ ಹಾಕಲಾಗಿತ್ತು. ಅಷ್ಟೇ ಅಲ್ಲದೇ, ಮುಖದ ಮೇಲೆಲ್ಲಾ ಸುಟ್ಟಿದ ಗಾಯಗಳಿದ್ದವು!! ಅನುಜಾಳನ್ನು ಕೊಲೆಮಾಡಲಾಗಿದೆ ಎಂದು ಆರೋಪಿಸಿ ಆಕೆಯ ಕುಟುಂಬವು ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಮಾಡಲು ಸ್ಥಳೀಯ ಪೊಲೀಸರಿಂದ ಅಪರಾಧ ದಳಕ್ಕೆ ಪ್ರಕರಣವನ್ನು ಒಪ್ಪಿಸಲು ನಿರ್ಧರಿಸಿದೆ!!

ಹಾಗಾಗಿ ಅತ್ತಾಪಾಡಿಯಲ್ಲಿರುವ ಅನುಜಾ ಹಾಗೂ ಆಕೆಯ ಪತಿ ಖಲೀಲ್ ಪಿ.ಎ ಅಲಿಯಾಸ್ ಸಲೀಮ್ ಅಲಿಯ, ಆದಾಯದ ಮೂಲ ವಿವರ ಸೇರಿದಂತೆ ಇತರ ದಾಖಲೆಗಳ ಬಗ್ಗೆ ಅಪರಾಧ ದಳ ತನಿಖೆ ಮಾಡಲಿದೆ ಎಂದು ತಿಳಿದು ಬಂದಿದೆ!! “ನನ್ನ ಮಗಳು ಅನುಜ ಆಕೆಯ ಮುಸ್ಲಿಂ ಗೆಳೆಯ ಸಲೀಮ್ ಆಕೆಯನ್ನು ಹತ್ಯೆ ಮಾಡಿದ್ದಾನೆ. ಆದರೆ ಆತನ ನಿಜ ಹೆಸರು ಖಲೀಮ್ ಆಗಿದ್ದು, ಆತನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎನ್ನುವ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಈಗಾಗಲೇ ಆತ ಹಿಂದೂ ನಾಯಕನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಆದರೆ ನನ್ನ ಮಗಳ ಕೊಲೆ ಪ್ರಕರಣವನ್ನು ಪೊಲೀಸರು ಆತ್ಮಹತ್ಯೆ ಎಂದು ಬಣ್ಣಹಚ್ಚುತ್ತಿದ್ದಾರೆ” ಎಂದು ಅನುಜಾಳ ತಾಯಿ ಶೈಲಜಾ ಹೇಳಿದ್ದಾರೆ.

ಅನುಜಾ, ಖಲೀಲ್ ಪಿ.ಎ ಅಲಿಯಾಸ್ ಸಲೀಮ್ ಅಲಿ ಪ್ರೀತಿಯ ಬಲೆಯಲ್ಲಿ ಸಿಕ್ಕಿ ಇಸ್ಲಾಂಗೆ ಮತಾಂತರ ಆಗಲು ಒಪ್ಪದಿದ್ದಾಗ ಆಕೆಯ ಪ್ರಿಯಕರನೇ ತಲೆ ಬೋಳಿಸಿ ನೇಣಿಗೆ ಹಾಕಿದ್ದ ಎಂದರೆ ಈ ಪ್ರೀತಿ ಪ್ರೇಮಕ್ಕೆ ಬೆಲೆನೇ ಇಲ್ವೇ?? ಇಂದು ದೇಶದುದ್ದಗಲದಲ್ಲಿ ಸದ್ದು ಮಾಡಿದ ಲವ್ ಜಿಹಾದ್ ಪ್ರಕರಣ, ಇಡೀ ವಿಶ್ವಕ್ಕೆ ಆತಂಕ ತಂದೊಡ್ಡಿದ್ದ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಯಾವ ರೀತಿ ನಿರ್ಲಕ್ಷ್ಯ ವಹಿಸುತ್ತಾ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ನೋಡಿದಾಗ ಖಂಡಿತವಾಗಿಯೂ ಕೇರಳ ಅಪಾಯಕ್ಕೆ ಸಿಲುಕಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಅಲ್ಲಿನ ಪೊಲೀಸರೇ ಪ್ರಕರಣಕ್ಕೆ ಬಣ್ಣವನ್ನು ಹಚ್ಚಿ ಕೊಲೆಗಾರರನನ್ನೇ ಉಳಿಸಲು ನೋಡುತ್ತಿದ್ದಾರೆ ಎಂದರೆ ಕೇರಳದ ಸ್ಥಿತಿಯನ್ನು ನೋಡಿದಾಗ ಲವ್‍ಜಿಹಾದಿಗಳಿಗೆ ಪರೋಕ್ಷವಾಗಿ ಬೆಂಬಲಿಸುವಂತೆ ಕಾಣುತ್ತಿದೆ!!

ಈ ಹಿಂದೂ ಹುಡುಗಿಯರನ್ನು ಮೋಸದಿಂದ ಪ್ರೇಮಕ್ಕೆ ಸಿಲುಕಿಸಿ ಅವರನ್ನು ಉಗ್ರವಾದಿ ಸಂಘಟನೆಗಳಿಗೆ ಸೇರಿಸುವ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಿ ಇಸ್ಲಾಂ ಸ್ಟೇಟ್ ನಿರ್ಮಿಸುವ ಮುಸ್ಲಿಮರ ಷಡ್ಯಂತರದ ಬಗ್ಗೆ ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದ್ದು ಇದರಲ್ಲಿ ಸುಮಾರು 90 ಲವ್ ಜಿಹಾದ್ ಪ್ರಕರಣದ ಪುರಾವೆಗಳು ತಮಗೆ ಸಿಕ್ಕಿವೆ ಎಂದು ನ್ಯಾಯಾಲಯಕ್ಕೆ ಖುದ್ದಾಗಿ ಹೇಳಿಕೊಂಡಿದೆ!! ಇದರಿಂದಾಗಿ ಲವ್‍ಜಿಹಾದ್ ಪ್ರಕರಣದ ತೀವ್ರಸ್ವರೂಪ ಕೊನೆಗೂ ಬಹಿರಂಗಗೊಂಡಂತಾಗಿದೆ!!

ಈ ಹಿಂದೆ ತನಿಖಾದಳ ಪತ್ತೆ ಮಾಡಿರುವ ಪ್ರಕಾರ, ಕೇರಳದಲ್ಲಿ ಸಾವಿರಾರು ಮಂದಿ ಹುಡುಗಿಯರು ಲವ್‍ಜಿಹಾದ್‍ಗೆ ಬಲಿಯಾಗಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದರೆ, ಇನ್ನು ಅನೇಕ ಹುಡುಗಿಯರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ!! ಇವರೆಲ್ಲಿದ್ದಾರೆ ಎನ್ನುವ ಕುರುಹು ಕೂಡ ಈವರೆಗೆ ಪತ್ತೆಯಾಗಿಲ್ಲ. ಈ ಬಗ್ಗೆ ತನಿಖಾ ದಳ ಲವ್ ಜಿಹಾದ್ ಕುರಿತಂತೆ ಸಾಕ್ಷಿಗಳು ಸಿಕ್ಕಿದೆ ಎಂದು ಹೇಳಿರುವುದರಿಂದ ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡುವ ಸಾಧ್ಯತೆ ಇದೆ!! ಇನ್ನು ಈ ಜಿಹಾದಿ ಮುಸ್ಲಿಮರ ವಿರುದ್ದ ತೀವ್ರವಾದ ಕ್ರಮ ಕೈಗೊಳ್ಳಲು ಸಮಯ ಬಂದಂತೆ ಕಾಣುತ್ತಿದೆ!! ನಮ್ಮದು ಪ್ಯೂರ್ ಲವ್ ಎಂದು ಹೇಳಿಕೊಂಡಿರುವ ಹಿಂದೂ ಹೆಣ್ಣುಮಕ್ಕಳೇ, ಪ್ರೀತಿಯ ಅಮಲಿಗೆ ಸಿಕ್ಕಿ ಮೋಸಹೋಗದಿರಿ. ಇನ್ನೂ ಅದೆಷ್ಟೋ ಹೆಣ್ಣು ಮಕ್ಕಳು ಪ್ರೇಮ ಪಾಶಕ್ಕೆ ಸಿಲುಕಿಕೊಂಡಿದ್ದಾರೋ ಗೊತ್ತಿಲ್ಲ. ಅಪಾಯ ಬರುವುದಕ್ಕಿಂತ ಮುಂಚೆಯೇ ಜಾಗ್ರತವಹಿಸಿ ನಮ್ಮ ಸಹೋದರಿಯನ್ನು ಕಾಪಾಡಿರಿ!!

– ಅಲೋಖಾ

Tags

Related Articles

Close