ಪ್ರಚಲಿತ

ಲಿಂಗಾಯತ ಪ್ರತ್ಯೇಕ ಧರ್ಮ ಅನ್ನೋದು ಹೇಗೆ ರಾಜಕೀಯ ದಾಳವಾಗಿ ಬದಲಾಗಿದೆ ಗೊತ್ತಾ?

“ಲಿಂಗಾಯತ ಸ್ವತಂತ್ರ ಧರ್ಮದ” ಬೇಡಿಕೆ, ಹೋರಾಟವೆಂಬುದು ರಾಜಕೀಯ ಷಡ್ಯಂತ್ರ, ಕುತಂತ್ರ ಅನ್ನೋ ನಮ್ಮ ಅನುಮಾನಗಳಿಗೆ ಕೆಲವು ನಿರ್ದಿಷ್ಟ ಕಾರಣಗಳು;

* ಬೀದರ್’ನಲ್ಲಿ ನಡೆದ ಮೊದಲ ಲಿಂಗಾಯತ ಸಮಾವೇಶದಲ್ಲಿ ಲಕ್ಷಾಂತರ ಬಸವಾಭಿಮಾನಿಗಳು, ಲಿಂಗಾಯತರ ಪಾಲ್ಗೊಂಡಿದ್ದರು.

ಕಾರಣ : ಅದು ಲಿಂಗಾಯತರ ಐಕ್ಯತೆ ಮತ್ತು ಅಭಿಮಾನದ ವಿಷಯವಾಗಿತ್ತು!

ನಂತರ ಅದೇ ಜನರಿಗೆ ಹಲವಾರು ಗೊಂದಲಗಳು ಉಂಟಾಗಿ ಇದು ಯಾಕೋ ನಮ್ಮ ಆಚರಣೆಗಳಿಗೆ ಕೊಡಲಿ ಏಟು ಹಾಕೋ ಹುನ್ನಾರ
ಅಂತ ತಿಳಿದ ಜನರಿಗೆ ನಂತರದ ಸಮಾವೇಶಗಳಲ್ಲಿ ಗಣನೀಯವಾಗಿ ಜನ ಸೇರುವುದು ಕಡಿಮೆಯಾಗುತ್ತ ಬಂತು.

ಈ ಜನಗಳಿಗೆ ಉಂಟಾದ ಗೋಂದಲಗಳೇನು?

* ನಾವು ಲಿಂಗಾಯತರು ನಿಜ ಆದರೇ ‘ವೀರಶೈವ ಲಿಂಗಾಯತರೊ’, ‌’ಲಿಂಗಾಯತ ಧರ್ಮಿ ಲಿಂಗಾಯತರೊ’ ಇಲ್ಲಾ ‘ಹಿಂದೂ ಲಿಂಗಾಯತರೊ’ ಅನ್ನುವುದು ಇವರಿಗೆ ತಿಳಿಯಲಿಲ್ಲ

* ನಂಬಿಕೆಯ ತಳಹದಿ ಮೇಲೆ ಬದುಕುತ್ತಿರುವ ನಾವುಗಳು ಅದ್ಹೇಗೆ ಪಾರಂಪರಿಕ ಆಚರಣೆ , ನಂಬಿಕೆಗಳನ್ನ ಬದಿಗೊತ್ತಿ ಹಿಂದುತ್ವವನ್ನ, ಹಿಂದೂ ಧರ್ಮವನ್ನ
ಬಿಟ್ಟು ಹೊಸ ಧರ್ಮಸೇರುವುದು!?

ಇವರು ಹೇಳುತ್ತಿರೋ ಲಿಂಗಾಯತ ಹೊಸಧರ್ಮದ ಕಟ್ಟಪ್ಪಣೆಗಳಾದರೇನು ನೋಡೊಣ ಬನ್ನಿ!!

* ಮೊದಲನೆಯದು ‘ಮನೆದೇವರನ್ನ ಪೂಜಿಸುವ ಹಾಗಿಲ್ಲಾ! ಅದ್ಹೇಗೆ ನಾವು ನಮ್ಮ ಹಿರಿಯರು ಎಲ್ಲರು ನಂಬಿಕೊಂಡು ಬಂದಂತಹ ಮನೆದೇವರನ್ನಾಗಲಿ, ಕುಲದೇವರನ್ನಾಗಲಿ ಯಾರೋ ಮೂರು ಕಾಸಿನ ಕಿಮ್ಮತ್ತಿಲ್ಲದವರ ಮಾತು ಕೇಳಿ ಬಿಡೊಕ್ಕಾಗುತ್ತೆ?!!

* ಮನೆಯಲ್ಲಿನ ಜಗುಲಿ ಒಡೆದು ಹಾಕಬೇಕಂತೆ!

ರೀ ಸ್ವಾಮಿ ಮನೆ ಕಟ್ಟುವಾಗ ನಮ್ಮ ರಕ್ಷಣೆ ಮಾಡೋ ದೇವರು ನಮ್ಮ ಸರ್ವಸ್ವನೇ ಅನ್ನೋ ಆರಾಧ್ಯದೇವರನ್ನ ಸ್ಥಾಪಿಸಲು ವೀಶೇಷ ಕಾಳಜಿ ವಹಿಸಿ ಕಟ್ಟಿದ ಜಗುಲಿ ಒಡೆದರೆ ನಾವಾಗಲಿ ನಮ್ಮ ನಂಬಿಕೆಗಳಾಗಲಿ ಬದುಕಿರ್ತಿವಾ!?

* ತುಳಜಾಪುರ ಅಂಬಾಭವಾನಿ, ಹನುಮಂತ, ಕಲಬುರಗಿ ಶರಣಬಸವೇಶ್ವರ ಅಂತ ಯಾವುದೇ ದೇವಿ ದೇವತೆಗಳನ್ನ ನಂಬಬಾರದು ಎಲ್ಲಾ ಗುಡಿಗುಂಡಾರಗಳನ್ನ ಒಡೆದು ಹಾಕಬೇಕಂತೆ!

ಎಲಾ ಹುಚ್ಚುಮುಂಡೆವುಗಳೆ,ನಾವು ಭಾರತೀಯರು 700 ವರ್ಷಗಳ ಕಾಲ ಮುಸಲ್ಮಾನರು, 300 ವರ್ಷಗಳ ಕಾಲ ಬ್ರಿಟಿಷ್(ಕ್ರಿಶ್ಚಿಯನ್)ರು
ಆಳಿ ನಮ್ಮನ್ನ ಲೂಟಿಮಾಡಿ ಅದೆಷ್ಟೋ ಲಕ್ಷ ದೇವಸ್ಥಾನ ಗಳನ್ನ ಒಡೆದು, ಸಂಪತ್ತನ್ನ ಲೂಟಿಗೈದು, ಹಿಂದುಗಳ ರಕ್ತಪಾತ ಮಾಡಿದರೂ ಎದೆಗುಂದದೇ, ಬಡವರಾಗದೇ ಅವರನ್ನ ಮೆಟ್ಟಿ ಹೋರಾಡಿ ಜಿಹಾದಿಗಳನ್ನ 72 ಕನ್ಯೆಯರ ಬಳಿ ಹಾಗು ಬ್ರಿಟಿಷರನ್ನ ಈ ದೇಶವನ್ನೇ ಬಿಟ್ಟು ಓಡಿಸಿದವರು!

ಅಂಥಾ ಹಿಂದುಗಳು ನಿಮ್ಮ ಪುಕ್ಕಟೆ ಮಾತುಗಳನ್ನ ಕೇಳಿ ಇದ್ದ ನಮ್ಮ ಮಹಾನ್ ಸಂಸ್ಕೃತಿಯನ್ನ ಬಿಟ್ಟು, ಇನ್ನೂ ಬಹುಸಂಖ್ಯಾತರಾಗಿರೋ ನಾವು ಹಿಂದೂಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಮ್ಮ ಗುಡಿಗುಂಡಾರಗಳನ್ನೇ ಒಡೆಯುವುದಾ!? ಅದು ನೀವು ಏಳು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ!!

ನಿಮ್ಮ ಈ ನೀಚ ವಿಚಾರಕ್ಕೆ, ಹಿಂದುಗಳನ್ನ ಒಡೆಯೋಕೆ ಯಾವ ‘ಅಹಿಂದ’, ಅಹಿಂದು ಸರ್ಕಾರದಿಂದ ಎಷ್ಟು ಹಣ ಬಂದಿರಬಹುದು?

ಯಾವ ಕ್ರೈಸ್ತ ಮಿಷನರಿಗಳು ಮತ್ತು ಮುಸ್ಲಿಂ ಸಂಘಟನೆಗಳು ಇದರ ಹಿಂದೆ ಕೆಲಸ ಮಾಡುತ್ತಿವೆ ಅನ್ನೋ ಅನುಮಾನ ಕಾಡುತ್ತಿದೆ.

ಯವುದೇ ಸಾಮಾಜಿಕ, ದೇಶದಪರ ಚಿಂತನೆ ಇರದ ಮತ್ತು ಹಿಂದೂ ಧರ್ಮೀಯರ ಯಾವುದೇ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸದ ಮುಸಲ್ಮಾನರು ,ಕ್ರೈಸ್ತರು ನಿಮ್ಮ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ಎದ್ದೋ ಬಿದ್ದೋ ಅಂತ ಓಡಿ ಬಂದು ‘ತನುಮನಧನ’ ದಿಂದ ಸಮಾವೇಶದಲ್ಲಿ ಭಾಗವಹಿಸಲು ಬಂದವರಿಗೆ ಹಣ್ಣು, ಜ್ಯೂಸ್, ತಂಪು ಪಾನೀಯಗಳು, ನೀರು ಹಾಗು ತಿಂಡಿಯನ್ನ ಉಚಿತವಾಗಿ ಹಂಚುತಿದ್ದಾರೆ ಅಂದರೆ ಹಿಂದೂಗಳನ್ನ ಒಡೆಯುವ ಅವರ ಮಹಾದಾಸೆ ನೀವು ಈಡೇರಿಸುತ್ತಿರೋದು ಅವರಿಗೆ ನಿಜಕ್ಕೀ ಖುಷಿಯೋ ಖುಷಿ ತಂದಿರಬೇಕಲ್ಲವೇ?

* ಕಲಬುರಗಿಯಲ್ಲಿ ಮೊನ್ನೆ ನಡೆದ ಲಿಂಗಾಯತ ಪ್ರತ್ಯೇಕ ಧರ್ಮ ಸಮಾವೇಶದಲ್ಲಿ ಕೇವಲ ಅಹಿಂದ ಸರ್ಕಾರದ ‘ಲಿಂಗಾಯತ’ ರಾಜಕಾರಣಿಗಳು ಭಾಗವಹಿಸಿದ್ದು ಮತ್ತು ಸಮಾವೇಶದಲ್ಲಿ ಅರೇ ಲಿಂಗಾಯತರು, ಅನ್ನಕೋಮಿನವರು, ಅನ್ಯಜಾತಿಯವರನ್ನ ಕರೆತಂದದ್ದು ರಾಜಕೀಯ ಉದ್ದೇಶವಲ್ಲದೆ ಮತ್ತೇನು?

* ತಲಾ ಒಂದು ಕ್ರೂಸರ್ ಗಾಡಿಗೆ 10,000/- ರೂ ಬಾಡಿಗೆ ಕೊಟ್ಟು ನೂರಾರು ವಾಹನಗಳನ್ನ ನಿಯೋಜಿಸಿ ಹಳ್ಳಿ ಹಳ್ಳಿಗಳಿಂದ, ಗ್ರಾಮ ಕುಗ್ರಾಮಗಳೆನ್ನದೆ ಕಟ್ಟೆಮೇಲೆ ಕೂತವರನ್ನ ಕರೆತಂದದ್ದರ ಪರಿಣಾಮ ಅವರಲ್ಲಿ ಬಹುತೇಕ 90% ಜನ ಸಮಾವೇಶವನ್ನ ಬಿಟ್ಟು ಬಾಯಿಚಪಲಕ್ಕೆ ಚಹಾ, ಬೀಡಿ ಅಂಗಡಿ, ವೈನ್ ಶಾಪ್’ಗಳಲ್ಲಿ, ಬಾರ್’ಗಳಲ್ಲಿ ‘ಪ್ರತ್ಯೇಕ ಧರ್ಮದ’ ಟೋಪಿ ಧರಿಸಿ ಮುಗಿಬಿದ್ದಿರುವದನ್ನ ನೋಡಿದರೆ “ರಾಜಕೀಯ ಸಮಾವೇಶವೋ” ? ಅಥವಾ “ಪ್ರತ್ಯೇಕ ಧರ್ಮ ಸಮಾವೇಶವೋ”? ಅನ್ನೋ ಅನುಮಾನಗಳು ಉಮ್ಮಳಿಸಿ ಬರುತ್ವೆ!!

* ನೆರೆದ ಕೆಲ ಜನರಲ್ಲಿ ಕೇಳಿದರೆ ಅವರು ಬಂದಿದ್ದು ಹಿಂದೂ ಸಮಾವೇಶಕ್ಕೆ ಅಂತಾರೆ !

* ಇನ್ನೂ ಕೆಲವರು ಹಿಂದುಳಿದ ಸಮಾವೇಶಕ್ಕೆ ಬಂದಿದೀವಿ ಅಂತಾರೆ!

* ಮತ್ತೆ ಕೆಲವರು ಗೊತ್ತೇ ಇಲ್ಲಾ ಅದು ಯಾರೊ ಮಾತಾಜಿ ಬರ್ತಾರಂತೆ ಅದಕ್ಕೆ ನಮ್ಮನ್ನೆಲ್ಲ ನಮ್ಮ ಅವರ ಊರ ಲೀಡರಗಳು ಕರೆತಂದಿದ್ದಾರೆ ಅಂತ ಹೇಳ್ತಾರೆ

* ಒಟ್ಟಾರೆ ನಿಮ್ಮ ಸ್ವಾರ್ಥ ಏನೇ ಇರಲಿ ರಾಜಕಾರಣಿಗಳು ಜನರನ್ನ ಸರಿಯಾಗಿ ಟ್ರೇನಿಂಗ ಕೊಡದೇ ಕರೆತಂದಿರುವುದು ನಿಮ್ಮ ‘ರಾಜಕೀಯ(ಲಿಂಗಾಯತ) ಸಮಾವೇಶ’ದ ವಿಫಲತೆ ಅಲ್ಲವೇ?

* 5 ಲಕ್ಷ ಜನ ಸೇರಿಸುತ್ತೇವೆಂದು ಕೋಟಿ ಕೋಟಿ ಹಣ ಕಾರ್ಯಕ್ರಮಕ್ಕೆ ಸುರಿದು 50 ಸಾವಿರಕ್ಕೂ ಕಮ್ಮಿ ಜನ ಸೇರಿದ್ದೂ ನಿಮ್ಮ ರಾಜಕೀಯ ವೈಫಲ್ಯವನ್ನೂ ಎತ್ತಿ ಹಿಡಿಯುತ್ತೆ ತಾನೇ?

* ಅಷ್ಟಕ್ಕೂ ಐದು ಲಕ್ಷ ಜನ ಸೇರಿಸುತ್ತೇವೆಂದು ಹೇಳಿದ್ದ ನೀವುಗಳು ಕಲಬುರಗಿಯ ಕೇವಲ 50 ಸಾವಿರ ಜನ ಸೇರಬಹುದಾದ ಎನ್.ವಿ.ಮೈದಾನವನ್ನೇಕೆ ಆಯ್ಕೆಮಾಡಿಕೊಂಡದ್ದು? ಅಂದ್ರೆ ಸಮಾವೇಶಕ್ಕೆ ನೀವು 5 ಲಕ್ಷ 10 ಲಕ್ಷ ಅಂತ ಹೇಳಿಕೆಗಳು ಕೊಟ್ಟಿದ್ದು ಬರೀ ನಿಮ್ ಪ್ರಚಾರಕ್ಕಷ್ಟೇ ಅನ್ನೋದು ಸಾಬೀತಾಯ್ತು!

* ಸಮಾವೇಶದಲ್ಲಿ ಸೇರಿದ್ದ ಪ್ರತಿಯೊಬ್ಬ ಸ್ವಾಮಿಗಳಾಗಲಿ, ಮಾತಾಜಿ ಅಂತ ಕರೆಸಿಕೊಳ್ಳೋರಾಗಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾಗಿ ಮಾತಾಡೋದು ಬಿಟ್ಟು ಬರೀ ರಾಜಕೀಯ, ರಾಜಕೀಯ ಪಕ್ಷ, ರಾಜಕೀಯ ನಾಯಕರುಗಳ ಬಗ್ಗೆಯೇ ಭಾಷಣಗಳನ್ನ ಮಾಡಿದ್ದೆ ಮಾಡಿದ್ದು.

* ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ನಾಯಕರಂತ ಅನಿಸಿಕೊಂಡಿರುವುದು ಅವರು ತಮ್ಮ ಸಮುದಾಯಕ್ಕೆ ನೀಡಿದ ಅಪಾರ ಕೊಡುಗೆಗಳಿಂದಲೇ ತಾನೇ?

ಅಂದಮೇಲೆ ಅವರನ್ನ ಪದೇಪದೇ ಸಮಾವೇಶದಲ್ಲಿ ವಿರೋಧಿಸುತ್ತಿರುವುದು ಅಹಿಂದ ಸರ್ಕಾರದ ಪರ ನಿಮ್ಮ ನಿಲುವು ಅನ್ನೋದೇ ಜನರಿಗೆ ತಿಳಿಸುವ
ರಾಜಕೀಯ ಹುನ್ನಾರ ತಾನೆ?!

* ಬಸವಣ್ಣನವರ ಕಾರ್ಯಕ್ಷೇತ್ರ ಬಸವ ಕಲ್ಯಾಣವನ್ನ ಸುಂದರ ತಾಣವಾಗಿಸಿ ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಡಿಸಿ, ಅದೇ ಬಸವಣ್ಣನವರ ಪುತ್ತಳಿಯನ್ನ ಅನಾವರಣಗೈಯಲು ಬಂದಂತಹ ಯಡಿಯೂರಪ್ಪನವರನ್ನು ನೀವು ವಿರೋಧಿಸುತ್ತಿರುವುದು ಅಹಿಂದ ಸರ್ಕಾರದ ಪರ ನಿಮ್ಮ ಸಮಾವೇಶವನ್ನ ವೇದಿಕೆಯಾಗಿ ಬಳಸಿದ್ದಂತಲ್ಲವೇ?

* ಮುಂಬರುವ ಚುನಾವಣೆಯಲ್ಲಿ ಸೋಲುಣ್ಣುವ ಭಯವಿರುವ ಶಾಸಕರುಗಳು ಲಿಂಗಾಯತ ಸಮಾವೇಶದ ವೇದಿಕೆಯನ್ನ ರಾಜಕೀಯ ವೇದಿಕೆಯಾಗಿ ಬಳಸಿರುವುದು ಜನ ಕಾಣ್ತಾ ಇದಾರೆ.

* ಒಂದುವೇಳೆ ನಿಜವಾಗಿಯೂ ಲಿಂಗಾಯತ ಸಮಾವೇಶದಲ್ಲಿ ರಾಜಕೀಯ ಹಸ್ತಕ್ಷೇಪವೇ ಇಲ್ಲವಾದರೆ ಬಂದಂತಹ ಜನರೆಲ್ಲಾ ಲಿಂಗಾಯಿತರೇ ಆಗಿದ್ದಲ್ಲಿ 2 ರಿಂದ 3 ಗಂಟೆಯ ಸಮಾವೇಶದಲ್ಲಿ ‘ಬಸವಾಭಿಮಾನಿ’, ‘ಲಿಂಗಾಯತರು’ ಅನ್ನಿಸಿಕೊಂಡವರು ಕೂರುತ್ತಿರಲಿಲ್ಲವೇ?

ಸ್ವಘೋಣಿತ ಜಗದ್ಗುರುಗಳೇ ಭಾಷಣ ಮಧ್ಯದಲ್ಲಿ ಜನರನ್ನ ಪರಿಪರಿ ಬೇಡಿಕೊಂಡು ಕುಳ್ಳಿರಿಸಲು ಹೆಣಗಾಡಿದ್ದೂ ನಾವು ನೋಡಬೇಕಾದ ನಿಮ್ಮ ಸುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು!!

ಕೊನೆಗೆ ಇನ್ನೂ ಹಲವರು ಮಾತನಾಡುವವರಿರುವಾಗಲೇಸೋ ಕಾಲ್ಡ್ ಜಗದ್ಗುರು ಅನಿಸಿಕೊಂಡವರು ಜನರನ್ನುದ್ದೇಶಿಸಿ “ನೀವು ಕೇವಲ ನೂರು ಇನ್ನೂರು ಜನರೇ ಇರುವಾಗ ಇನ್ನೂ ಬಹಳಷ್ಟು ಜನ ಸ್ವಾಮೀಜಿಗಳು ಮಾತನಾಡುವವರಿದ್ದಾರೆ ನೀವು ಇಷ್ಟೇ ಜನ ಇರೋದ್ರಿಂದ ಅವರು ‘ಭಾಷಣ’ ಮಾಡುವುದು ಸರಿಯನ್ಸಲ್ಲ, ನಾವು ಇನ್ನೂ DC office ಗೆ ಮನವಿ ಪತ್ರ ಕೊಡೋಕೆ ಹೋಗೋದಿದೆ, ನಮ್ಮ ಒಗ್ಗಟ್ಟನ್ನು, ಶಕ್ತಿಯನ್ನ ಪ್ರದರ್ಶಿಸೋದಿದೆ ದಯವಿಟ್ಟು ನೀವ್ಯಾರು (ನೂರಿನ್ನೂರು ಜನ)ಹೋಗದಿರಿ” ಅಂತ ಅಂಗಲಾಚುವ ಪರಿಸ್ಥಿತಿಗೆ ಬಂದದ್ದು ನೋಡಿದರೆ ಆವತ್ತು ನಗು ಬರುತ್ತಿತ್ತು.

* ಇದು ಲಿಂಗಾಯತ ಸಮಾವೇಶವೇ ಆಗಿದ್ದಲ್ಲಿ ಲಿಂಗಾಯತನೇ ಆಗಿದ್ದ ದಿಟ್ಟ, ದಕ್ಷ ಪೋಲಿಸ್ ಅಧಿಕಾರಿ ‘ಮಲ್ಲಿಕಾರ್ಜುನ ಬಂಡೆ’ಯವರ ಬಲಿಪಡೆದ ಅಹಿಂದ ಸರ್ಕಾರವನ್ಯಾಕೆ ಒಮ್ಮೆಯೂ ಪ್ರಶ್ನೆ ಮಾಡಲಿಲ್ಲ?

ಅದೇ ಲಿಂಗಾಯತರು ಅನ್ನೋ ಪದ ಬಳಸಿ ದೇಶದ್ರೋಹಿಗಳಿಗೆ support ನೀಡಿದ, ಬಹುಸಂಖ್ಯಾತ ಹಿಂದೂಗಳ ಭಾವನೆ ಕೆರಳಿಸಿದ, ‘ಮಾಂಸತಿನ್ನಲು’ ಪ್ರೇರೇಪಿಸಿದವರಿಗೋಸ್ಕರ ‘ಮಾಂಸವಿರೋಧಿ ಬಸವಣ್ಣನವರ’ ಅನುಯಾಯಿಗಳನ್ನ ಬಳಸಿಕೊಂಡು ಅಹಿಂದ ಸರ್ಕಾರದ ಪರ ಇದ್ದ ಬುದ್ದಿಜೀವಿಗಳೆನ್ನಿಸಿಕೊಂಡ ‘ಗಂಜಿಗಿರಾಕಿ’ಗಳನ್ನ ಬೆಂಬಲಕ್ಕೆ ನಿಂತ ನಿಮ್ಮ ವೇದಿಕೆ ಲಿಂಗಾಯತರ ಉನ್ನತಿಗಾಗಿ ಅಥವಾ ಸ್ವತಂತ್ರ ಧರ್ಮದ ಬೇಡಿಕೆಗಾಗಿ ಅಲ್ಲ ಬದಲಾಗಿ ಹಿಂದೂಗಳನ್ನ ಒಡೆಯಲು ಮತ್ತು ಕೇವಲ ಕಾಂಗ್ರೆಸ್‌ ಪಕ್ಷಕ್ಕೆ ಮಣೆಹಾಕಲು ಮಾಡಿದ ಹಾಗು ಮಾಡಲಿರುವ ವ್ಯವಸ್ಥಿತ ಹುನ್ನಾರದ ಸಮಾವೇಶಗಳೆಂದು ಜನರಿಗೆ ಅದಾಗಲೇ ಗೊತ್ತಾಗಿದೆ!!!!

ನಿಮ್ಮದೇ ವಿಚಾರಧಾರೆ, ನಿಮ್ಮ ಪ್ರತ್ಯೇಕ ಧರ್ಮದ ಪ್ರತಿಪಾದನೆಯನ್ನೇ ಬೆಂಬಲಿಸುವ ‘ಲಂಕೇಶ್ ಪತ್ರಿಕೆ’ಯಲ್ಲೂ ನಿಮ್ಮ ಸಮಾವೇಶದ ಬಗ್ಗೆ ಬಾಯ್ತುಂಬ ‘ಹೊಗಳಿ’ ಬರೆದದ್ದನ್ನ ನೋಡಿದರೆ ಅರ್ಥವಾಗತ್ತೆ ನಿಮ್ಮ ನಿಮ್ಮಲ್ಲೇ ಕಿತ್ತಾಟ ಇಟ್ಟುಕೊಂಡು ಪ್ರತ್ಯೇಕ ಧರ್ಮದ ಹೆಸರಮೇಲೆ ಹಿಂದೂ ಧರ್ಮವನ್ನ ಒಡೆದು ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭ ಮಾಡಿಕೊಡಲು ಹೊರಟಿರೋ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರಂತ ಅಂದುಕೊಂಡಿದ್ದೀರಂದರೆ ಅದು ನಿಮ್ಮ ಮೂರ್ಖತನ ಅಲ್ದೆ ಮತ್ತೇನಲ್ಲ!!

ಬೀದರನಲ್ಲಿ ನಡೆದ ಮೊದಲನೆ ಸಮಾವೇಶದಲ್ಲಿ ಸೇರಿದ ಜನಕ್ಕೆ, ಎರಡನೆ ಸಮಾವೇಶ ಬೆಳಗಾವಿಯಲ್ಲಿ ಸೇರಿದ ಜನಕ್ಕೆ & ಈಗ ಕಲಬುರಗಿಯಲ್ಲಿ ನಡೆದ ಸಮಾವೇಶಕ್ಕೆ ಸೇರಿದ ಜನವನ್ನ ಸಂಖ್ಯೆಯ ಆಧಾರ ಮೇಲೆ compare ಮಾಡಿ ನೋಡಿದರೆ ನಿಮ್ಮ ಪ್ರತಿಯೊಂದು ಸಮಾವೇಶಕ್ಕೂ ಜನ ನಿಮ್ಮನ್ನ ತಿರಸ್ಕರಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ.

ನೀವು ಏಳು ಜನ್ಮ ಎತ್ತಿ ಬಂದರೂ ಲಿಂಗಾಯತರನ್ನ ಹಿಂದೂ ವಿರೋಧಿಯಾಗಿ ಮಾರ್ಪಡಿಸಿ ನಿಮ್ಮ ಪ್ರತ್ಯೇಕ ಧರ್ಮ ಮಾಡಿಕೊಳ್ಳಲು ಸಾಧ್ಯವಿಲ್ಲ.

ಇಷ್ಟೆಲ್ಲ ನಿಮ್ಮ ಬಗ್ಗೆ ಬರೆಯುತ್ತಿರೋ ನಾನು ಅನ್ಯಜಾತಿಯವನು ಅನ್ಕೋಬೇಡಿ, ನಾನೂ ಲಿಂಗಾಯತನೇ, ನಾನೂ ಬಸವಕೇಂದ್ರದ ಬೀದರ್ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಬಸವಣ್ಣನ ಸೇವೆಯನ್ನು ನಿಸ್ವಾರ್ಥವಾಗೇ ಸಲ್ಲಿಸಿದ ನಿಯತ್ತಿನ ಬಸವಾನುಯಾಯಿ ಹೊರತು ನಿಮ್ಮಗಳ ರೀತಿಯಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಬಸವ ಬಸವ ಅಂತ ಓಡಾಡಿದವನಲ್ಲ.

ನೀವು ಧರ್ಮವನ್ನ ಒಡೆಯುತ್ತಿರೋ ವಿಷಯಗಳ ಬಗ್ಗೆ ತಿಳಿದುಕೊಂಡೇ ನಿಮ್ಮ ಆ ಸಂಘಟನೆಗಳಿಂದ ಹೊರಗೆ ಬಂದು ಇಂದು ನಿಮ್ಮನ್ನ, ನಿಮ್ಮ ಧರ್ಮ ಒಡೆಯುವ ಕುತಂತ್ರಗಳನ್ನ ಜನರೆದುರಿಡೋ ಪ್ರಯತ್ನ ಮಾಡ್ತಿದ್ದೇನೆ

– ರಮೇಶ್ ಪಾಟೀಲ್ (ಹಿಂದೂ ಲಿಂಗಾಯತ)

Tags

Related Articles

Close