ಪ್ರಚಲಿತ

ಲಿಖಿತ ರೂಪದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದರೂ ನನ್ನ ಹೆಸರು ಹಾಕಲಾಗಿದೆಯೆಂದರೆ ವೇದಿಕೆ ಮೇಲೆಯೇ ಟಿಪ್ಪುವಿನ ಜನ್ಮಜಾಲಾಡುತ್ತೇನೆ! : ಅನಂತ ಕುಮಾರ್ ಹೆಗ್ಡೆ

ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆಯವರು ಹೆಸರು ನಮೂದಿಸಬಾರದೆಂದು ವಿರೋಧ ವ್ಯಕ್ತಪಡಿಸಿದ್ದರು!! ಆದರೆ ರಾಜ್ಯ ಸರಕಾರ ಮಾತ್ರ ಯಾವುದನ್ನೂ ಕೂಡ ಲೆಕ್ಕಿಸದೇ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಗಡೆಯವರ ಹೆಸರು ಹಾಕಿದ್ದು ಇದೀಗ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ!!

ರಾಜ್ಯ ಸರಕಾರ ಈ ವರ್ಷವೂ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿದ್ದು, ಈಗಾಗಲೇ ಬಹು ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ!! ಅಷ್ಟೇ ಅಲ್ಲದೇ ಆಮಂತ್ರಣ ಪತ್ರಿಕೆಯ ವಿಚಾರದಲ್ಲೂ ಸಾಕಷ್ಟು ಗದ್ದಲಗಳು ನಡೆದಿದ್ದು, ಈ ಬಗ್ಗೆ ಖ್ಯಾರೆ ಎನ್ನದ ರಾಜ್ಯಸರಕಾರ ಟಿಪ್ಪುವನ್ನು ಸ್ವಾತಂತ್ರ್ಯಹೋರಾಟಗಾರ & ದೇಶಪ್ರೇಮಿಯ ಸಾಲಿಗೆ ಸೇರಿಸಿ, ಟಿಪ್ಪು ಜಯಂತಿಯನ್ನು ಆಚರಿಸಲು ಸಜ್ಜಾಗಿದೆ!! ಆದರೆ ‘ನವೆಂಬರ್ ನಲ್ಲಿ ರಾಜ್ಯಾದ್ಯಂತ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೆಸರನ್ನು ನಮೂದಿಸಬಾರದು’ ಎಂದು ಹೇಳಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರ ಆಪ್ತ ಸಹಾಯಕರಿಂದ ರಾಜ್ಯ ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿಗೆ ಪತ್ರ ರವಾನೆಯಾಗಿತ್ತು.

ಹೀಗಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೆಸರನ್ನು ನಮೂದಿಸುವುದು ಬೇಡ ಎಂದು ಸೂಚಿಸಲಾಗಿದ್ದರೂ, ಶಿಷ್ಟಾಚಾರದಂತೆ ರಾಜ್ಯ ಸರಕಾರವು ಆಹ್ವಾನ ಪತ್ರಿಕೆಯಲ್ಲಿ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬೇಕಾಗಿದ್ದರೂ, ಕೆಲವು ಪ್ರಕರಣಗಳಲ್ಲಿ ಜನಪ್ರತಿನಿಧಿಗಳೇ ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸದಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದಲ್ಲಿ ಅಂತಹ ಜನಪ್ರತಿನಿಧಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕುವುದು ಬೇಡ ಎಂದು ನಿರ್ದೇಶನ ನೀಡಲಾಗಿದೆ.

ಆದರೆ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗಿದ್ದು, ಇದೇ ನವೆಂಬರ್ 11 ರಂದು ಕರ್ನಾಟಕ ಸರ್ಕಾರ ಆಚರಿಸಬೇಕೆಂದಿರುವ ಟಿಪ್ಪು ಜಯಂತಿ ಕಾರ್ಯಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಗಡೆಯವರು, ಈ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಅತ್ಯಂತ ಸ್ಪಷ್ಟವಾಗಿ, ಲಿಖಿತ ರೂಪದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದರೂ ಕೂಡ ನನ್ನ ಹೆಸರು ಹಾಕಲಾಗಿದೆ. ನನ್ನ ನಿಲುವೇನು ಎಂದು ಟಿಪ್ಪುಜಯಂತಿಯ ದಿನದಂದೇ ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇನೆಂದು ಇದೀಗಾಗಲೇ ಹೇಳಿಕೆಯನ್ನು ನೀಡಿದ್ದಾರೆ..

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯ ವಿಚಾರವಾಗಿ ಕೆಂಡಾಮಂಡಲರಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ? ಭಾಗಿಯಾದ್ರೇ ಏನಾಗಬಹುದು? ಈ ಹಿಂದೆ ಮಾತನಾಡುತ್ತಾ,”ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಹಾಕಿದ್ರೆ ಕಾರ್ಯಕ್ರಮದಲ್ಲೆ ಟಿಪ್ಪುವಿನ ಜನ್ಮಜಾಲಾಡುತ್ತೇನೆ” ಅಂತ ಹೇಳಿದ್ದರು. ಹೀಗೆನಾದ್ರು ಮಾಡಿದ್ರೆ, ಅಲ್ಲಿ ಒಂದಿಷ್ಟು ಗದ್ದಲ ಗಲಾಟೆಗಳು ಉಂಟಾಗುವ ಸಾಧ್ಯತೆ ಇರಬಹುದಾ ಎನ್ನುವ ಮಾತುಗಳು ಕೇಳಿಬಂದಿವೆ!!

ನವೆಂಬರ್ 11 ರಂದು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಎಂದು ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಿಗೆ ಸರ್ಕಾರದ ಮತ್ತೊಂದು ಮುಖ ಬಯಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಪುಸ್ತಕದಲ್ಲಿ ಟಿಪ್ಪು ಚರ್ಚ್ ನಾಶ ಮಾಡಿದ್ದ ಎಂಬ ಉಲ್ಲೇಖವಿದೆ. ಅಷ್ಟೇ ಅಲ್ಲದೇ, ಟಿಪ್ಪು ಮತಾಂಧ ಕ್ರೂರಿ ಎನ್ನುವ ಬಿಜೆಪಿ ಕಾಮಾಲೆ ಕಣ್ಣಿನಿಂದ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವಕಾಶ ಸಿಕ್ಕಾಗೆಲ್ಲಾ ಟೀಕಿಸುತ್ತಲೇ ಇದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗಿದೆ!! ಹೌದು…. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವೇ ಪ್ರಕಟಿಸಿರುವ “ಮಂಗಳೂರು ದರ್ಶನ” ಪುಸ್ತಕದಲ್ಲಿ ಟಿಪ್ಪು ಕ್ರೂರಿ ಎಂಬ ಬಗ್ಗೆ ವಿಸ್ತೃತ ಉಲ್ಲೇಖಗಳಿವೆ.

50 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 2016ರಲ್ಲಿ ಪ್ರಕಟಿಸಿರುವ ಪುಸ್ತಕದಲ್ಲಿ ಮಂಗಳೂರು ಮತ್ತು ಮೈಸೂರಿನಲ್ಲಿ ಟಿಪ್ಪುವಿನಿಂದ ಚರ್ಚ್ ನಾಶವಾಗಿತ್ತು. ಚರ್ಚ್ ನಾಶ ಮಾಡಿ ಅದರ ಕಲ್ಲಿನಿಂದ ಮಸೀದಿ ನಿರ್ಮಿಸಿದ್ದ ಎಂಬ ಉಲ್ಲೇಖಗಳಿವೆ. ಇನ್ನು ಈ ಪುಸ್ತಕದ ಸಂಪುಟ -1 ಪುಟ ಸಂಖ್ಯೆ 199, 200 ಮತ್ತು 201ರಲ್ಲಿ ಟಿಪ್ಪುವಿನ ಅನಾಚಾರಗಳ ಕುರಿತು ವಿವರಗಳು ದಾಖಲಾಗಿವೆ. ಈ ಪುಸ್ತಕವನ್ನು ಈ ಹಿಂದೆ ನಗರಾಭಿವೃದ್ದಿ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಅವರೇ ಬಿಡುಗಡೆ ಮಾಡಿದ್ದರು!! ಆದರೆ ಮುಸಲ್ಮಾನರನ್ನು ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿಯನ್ನು ಮಾಡ ಹೊರಟಿರುವುದು ಮಾತ್ರ ವಿಪರ್ಯಾಸ!!

ಇನ್ನು ಟಿಪ್ಪು ಜಯಂತಿಯನ್ನು ಆಚರಿಸುವ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದರೂ ಕೂಡ ಟಿಪ್ಪು ಜಯಂತಿಯನ್ನು ಆಚರಿಸುವುದು ಹೆಮ್ಮೆಯ ವಿಚಾರವೆಂದು ತಿಳಿದುಕೊಂಡಿದೆ ಸಿದ್ದರಾಮಯ್ಯ ಸರಕಾರ!! ಇದಷ್ಟೇ ಅಲ್ಲದೇ, ಆಮಂತ್ರಣ ಪತ್ರಿಕೆಯ ವಿಚಾರದಲ್ಲಿ ಗದ್ದಲಗಳು ಸೃಷ್ಟಿಯಾಗಿದ್ದು, ಈ ಹಿಂದೆಯು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಇರುವ ವೇದಿಕೆಯಲ್ಲಿ ಟಿಪ್ಪು ಇತಿಹಾಸವನ್ನು ಬಿಚ್ಚಿಡುತ್ತೇನೆ, ಅಷ್ಟೆ ಅಲ್ಲದೇ ಧಿಕ್ಕಾರ ಕೂಗುತ್ತೇನೆ ಎಂದು ಅನಂತ್ ಕುಮಾರ್ ಹೆಗಡೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು .ಇದೀಗ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದ್ದು ಟಿಪ್ಪು ಜಯಂತಿಯಂದು ಹೆಗಡೆ ಅವರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ!!

 

source: http://suddi24x7.in/anathkumar-hegade-statement-on-tippujayanti/

-ಅಲೋಖಾ

Tags

Related Articles

Close