ಕೇಂದ್ರ ಸರಕಾರದ ಯೋಜನೆಯನ್ನು ತನ್ನ ಯೋಜನೆ ಎಂದು ಬಿಂಬಿಸಿ ಜನರಿಂದ ಉಗಿಸಿಕೊಂಡ ಸಿದ್ದರಾಮಯ್ಯ ಸರಕಾರ ಇನ್ನೂ ನೆಟ್ಟಗೆ ಆಗುವ ಲಕ್ಷಣ ಕಾಣುತ್ತಿಲ್ಲ. ಕೇಂದ್ರದಲ್ಲಿ ಸಿಗುವ ಉಚಿತ ಅಕ್ಕಿಯನ್ನು ತಾನೇ ಕೊಟ್ಟು ಹಸಿವು ನೀಗಿಸಿದೆ ಎಂದು ಬೋಂಗು ಬಿಡುವ ರೋಗ ಇದೀಗ ಕರ್ನಾಟಕದ ಇಂಧನ ಸಚಿವ
ಡಿ.ಕೆ.ಶಿವಕುಮಾರ್‍ಗೂ ಅಂಟಿಬಿಟ್ಟಿದೆ. ಕೇಂದ್ರ ಸರಕಾರದ ವಿದ್ಯುತ್ ಯೋಜನೆಯನ್ನು ತನ್ನದೇ ಯೋಜನೆ ಎಂದು ಬಿಂಬಿಸಲು ಹೊರಟಿದ್ದಾರಂತೆ ಪವರ್ ಮಿನಿಸ್ಟರ್ ಡಿಕೆಶಿ. ಇಷ್ಟು ಮಾತ್ರವಲ್ಲ, ವಿದ್ಯುತ್ ಇಲಾಖೆಯಲ್ಲು ಅಮೂಲಾಗ್ರ ಬದಲಾವಣೆ ತರುತ್ತೇನೆ, ದಿನದ ಇಪ್ಪತ್ತನಾಲ್ಕು ಗಂಟೆಯೂ ಕರೆಂಟ್ ನೀಡುತ್ತೇನೆ ಎಂದು ಬಂಡಲ್ ಬಿಟ್ಟಿದ್ದ ಡಿ.ಕೆ.ಶಿ ಅದನ್ನೆಲ್ಲಾ ಮರೆತು ಮಹಮ್ಮದ್ ಬಿನ್ ತುಘಲಕ್‍ನಂತಹಾ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ. ಇದೊಂದು ರೀತಿ ಕರ್ನಾಟಕದ ಜನರ ಕಿವಿಗೆ ಹೂ ಇಡುವ ಕ್ರಮ ಎಂದರೂ ತಪ್ಪಾಗಲಾರದು.
ವಿದ್ಯುತ್ ಇಲಾಖೆಯಲ್ಲಿ ಮಾರ್ಗದಾಳು ಕೆಲಸ ಮಾಡುವ ಕಾರ್ಮಿಕರನ್ನು ಲೈನ್‍ಮೆನ್ ಎಂದು ಕರೆಯಲಾಗುತ್ತದೆ. ಆದರೆ ಈ ಹೆಸರನ್ನು ಛೇಂಜ್ ಮಾಡಲು
ಹೊರಟಿದ್ದಾರೆ ಮಾನ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್!!! ಇನ್ನು ಮುಂದೆ ಲೈನ್‍ಮ್ಯಾನ್‍ಗಳನ್ನು ಲೈನ್‍ಮ್ಯಾನ್ ಎನ್ನುವ ಬದಲು ಪವರ್‍ಮ್ಯಾನ್ ಎಂದು
ಕರೆಯಬೇಕೆಂದು ಡಿಕೆಶಿ ಫರ್ಮಾನು ಹೊರಡಿಸಿದ್ದಾರಂತೆ. ಯಾಕೋ ಗೊತ್ತಿಲ್ಲ ಲೈನ್‍ಮೆನ್ ಹೆಸರು ಡಿಕೆಶಿಗೆ ಚೆನ್ನಾಗಿ ಕಾಣೋದಿಲ್ವಂತೆ. ಡಿಕೆಶಿ ಸಾಹೇಬ್ರೇ
ಲೈನ್‍ಮ್ಯಾನ್ ಹೆಸರನ್ನು ಪವರ್‍ಮ್ಯಾನ್ ಎಂದು ಬದಲಾಯಿಸಿದ್ರೆ ದಿನದ 24 ಗಂಟೆಯೂ ಕರೆಂಟ್ ಬರುತ್ತದಾ? ಲೈನ್‍ಮೆನ್‍ಗಳ ಸಮಸ್ಯೆ ನಿವಾರಣೆಯಾಗುತ್ತದಾ? ಇಂಥದೊಂದು ನಾಲಾಯಕ್ ಐಡಿಯಾ ಡಿಕೆಶಿ ತಲೆಗೆ ಹೇಗೆ ಹತ್ತಿತೋ ಅಥವಾ ಬೇರೆ ಯಾರಾದ್ರೂ ನೀಡಿದ್ರೋ ಗೊತ್ತಿಲ್ಲ.
ಲೈನ್‍ಮ್ಯಾನ್ ಹೆಸರನ್ನು ಪವರ್ ಮ್ಯಾನ್ ಎಂದು ಬದಲಾಯಿಸಿದ್ರೆ ವಿದ್ಯುತ್ ಎಲ್ಲಾ ಸಮಸ್ಯೆ ನಿವಾರಣೆಯಾಗುವುದೇ? ಇದರಿಂದ ಲೈನ್‍ಮೆನ್‍ಗಳಿಗೆ ಆಗುವ
ಲಾಭವಾದ್ರೂ ಏನು? ಅವರ ಸಂಬಳ ಜಾಸ್ತಿಯಾಗುತ್ತದಾ? ಅಥವಾ ಇನ್ನಿತರ ಸವಲತ್ತುಗಳು ಸಿಗುತ್ತದಾ? ಅವರಿಗೆ ರಕ್ಷಣಾ ಉಪಕರಣ ಸಿಗುತ್ತದೆಯೇ? ಅಷ್ಟಕ್ಕೂ ಲೈನ್‍ಮ್ಯಾನ್ ಹೆಸರಿನಿಂದ ಅವರು ಕೀಳರಿಮೆ ಅನುಸರಿಸುತ್ತಿದ್ದಾರೆಯೇ? ಈ ಬಗ್ಗೆ ಲೈನ್‍ಮೆನ್‍ಗಳಿಂದ ಡಿಕೆಶಿಗೆ ದೂರು ಬಂದಿದೆಯೇ? ಆದ್ದರಿಂದ ಇಂಧನ ಇಲಾಖೆ ಕೆಲಸಕ್ಕೆ ಬಾರದ ಕೆಲಸಕ್ಕೆ ಮುಂದಾಗಿ ಕರ್ನಾಟಕ ಜನತೆಯ ಮುಂದೆ ಮರ್ಯಾದೆ ಕಳೆದುಕೊಳ್ಳುವುದಂತೂ ಸ್ಪಷ್ಟ.
ಲೈನ್‍ಮೆನ್‍ಗಳ ಸಮಸ್ಯೆ ಒಂದೇ ಎರಡೇ….
ಡಿಕೆಶಿಯವರೇ ನೀವು ಆತುರಾತುರವಾಗಿ ಲೈನ್‍ಮೆನ್‍ಗಳ ಹೆಸರನ್ನು ಬದಲಿಸಲು ತುದಿಗಾಲಲ್ಲಿ ನಿಂತಿದ್ದೀರಲ್ಲ… ಲೈನ್‍ಮೆನ್‍ಗಳ ಸಮಸ್ಯೆಗಳನ್ನು ನಿಮ್ಮ ಮುಂದೆ ಇಡುವ ಕೆಲಸವನ್ನು ನಾವಿಂದು ಮಾಡುತ್ತೇವೆ. ಇಂದು ಲೈನ್‍ಮೆನ್‍ಗಳು ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಲೈನ್‍ಮೆನ್‍ಗಳ ಸಮಸ್ಯೆಗಳಿಗೆ ಡಿಕೆಶಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಸ್ವತಃ ಲೈನ್‍ಮೆನ್‍ಗಳಿಂದ ಕೇಳಿಬರುವ ಮಾತುಗಳು. ಮುಂಚೆ ತಾತ್ಕಾಲಿಕ ನೆಲೆಯಲ್ಲಿ ಲೈನ್‍ಮೆನ್‍ಗಳು ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಾತ್ಕಾಲಿಕ ಉದ್ಯೋಗಿಗಳನ್ನು ಪರ್ಮನೆಂಟ್ ಮಾಡುವುದನ್ನು ಬಿಟ್ಟು ಲೈನ್‍ಮೆನ್ ಹುದ್ದೆಗಳಿಗೆ ಪರೀಕ್ಷೆ ಇಟ್ಟು ಅವರನ್ನು ಆಯ್ಕೆ ಮಾಡಲಾಗುವುದು ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ ಇದರಲ್ಲಿ ನಡೆದದ್ದು ಮಾತ್ರ ಗೋಲ್‍ಮಾಲ್ ಮೇಲೆ ಗೋಲ್‍ಮಾಲ್. ಮೆರಿಟ್ ಆಧಾರದಲ್ಲಿ ಎಸ್‍ಎಲ್‍ಸಿ ಮತ್ತು ಐಟಿಐ ಆದವರನ್ನು ಕೆಲಸ ಸೇರಿಸಿಕೊಳ್ಳುವುದಾಗಿ ನಿರ್ಧರಿಸಲಾಯಿತು. ಈ ಮಾತನ್ನು ನಂಬಿ
ಸಾವಿರಾರು ಮಂದಿ ಅರ್ಜಿ ಹಾಕಿದ್ದರು. ಆದರೆ ಅರ್ಜಿ ಹಾಕಿದವರಿಗೆ ಕೆಲಸ ಸಿಗಲೇ ಇಲ್ಲ. ಜೂನಿಯರ್ ಲೈನ್‍ಮೆನ್ ಎಂದು ವಿಜಾಪುರ, ಕೋಟೆ ಧಾರವಾಡ, ಗದಗ ಮುಂತಾದ ಕಡೆಗಳಿಂದಷ್ಟೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಇಲಾಖೆಗೆ ಸೇರಿಸಿದ್ದು ಬಿಟ್ಟರೆ ಆಯಾಯ ಊರಿನ ಅರ್ಜಿ ಸಲ್ಲಿಸಿದ ಸ್ಥಳೀಯರಿಗೆ ಆ ಕೆಲಸ ಸಿಗಲೇ ಇಲ್ಲ. ಈ ವೇಳೆ ಇನ್ನೊಂದು ಮೂರ್ಖತನದ ಕೆಲಸವೂ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಪರಿಣತ ಲೈನ್‍ಮನ್‍ಗಳನ್ನು ಪರಿಗಣಿಸುವ ಬದಲು ಮೆರಿಟ್ ಮೇಲೆ ಇತರರನ್ನು ಪರಿಗಣಿಸಲಾಯಿತು. ಯಾರಿಗೆ ಕಂಬ ಹತ್ತಲು ಗೊತ್ತಿಲ್ಲವೋ ಅವರ ಮಾರ್ಕ್ ನೋಡಿ ಕೆಲಸ ನೀಡಲಾಯಿತು. ಅದೂ ಕೂಡಾ ಸ್ಥಳೀಯ ವ್ಯಕ್ತಿಗೆ ಕೆಲಸ ಸಿಗಲೇ ಇಲ್ಲ. ಇದರಿಂದಾಗಿ ಕಂಬ ಹತ್ತಲು ನಾಲ್ಕು ದಿನ ಪ್ರಾಕ್ಟೀಸ್ ಮಾಡಿ ಬಂದವರು ಕೆಲಸ ಸಿಗದೆ ವಾಪಸ್ ಆದರು. ಆಯ್ಕೆಯ ದಿನ ಕಷ್ಟಪಟ್ಟು ಕಂಬ ಹತ್ತಿ ಬಿಟ್ಟು ಲೈನ್‍ಮನ್‍ಗಳಾಗಿ ಆಯ್ಕೆಯಾಗುತ್ತಾರೆ. ಲೈನ್‍ಮನ್‍ಗಳಿಗೆ ಮುಖ್ಯವಾಗಿ ಗೊತ್ತಿರಬೇಕಾದ ಕಂಬದಲ್ಲಿ ನಿಂತು ಕೆಲಸ ಮಾಡುವುದು, ಟ್ರಾನ್ಸ್ ಫಾರ್ಮರ್ ಬಗ್ಗೆ, ವಿದ್ಯುತ್ ಲೈನ್, ಫಾಲ್ಟ್, ಲೀಕೇಜ್ ಹುಡುಕುವುದು ಅವರಿಗೆ ಗೊತ್ತಿರೋದಿಲ್ಲ. ಈ ರೀತಿ ಆಯ್ಕೆಯಾದವರ ಎಸ್‍ಎಲ್‍ಸಿ ಮಾರ್ಕ್ ಶೇ. 36 ಆದರೆ ಐಟಿಐನಲ್ಲಿ ಶೇ.96, 97 ಹೀಗೆ ಆಸುಪಾಸು ಇತ್ತೆಂದು ಪರೀಕ್ಷೆ ಬರೆದವರ ಮಾಹಿತಿಯಾಗಿತ್ತು. ಸ್ಥಳೀಯರಿಗೆ ಕೆಲಸ ಸಿಗದಿರುವುದರಿಂದ ವಿದ್ಯತ್ ಸಮಸ್ಯೆ ಉಂಟಾದರೆ ಲೈನ್‍ಮೆನ್‍ಗಳನ್ನು ಬಿಜಾಪುರದಿಂದ ಕರೆಸಬೇಕೇ ಡಿಕೆಶಿ?
ಸಮಸ್ಯೆ ಮುಗಿದ್ದಿಲ್ಲ.. ಇಂದು ಲೈನ್‍ಮೆನ್‍ಗಳಾಗಿ ದುಡಿಯುತ್ತಿರುವ ಕಾರ್ಮಿಕರಿಗೆ ಯಾವ ರೀತಿಯ ರಕ್ಷಣೆ ಇದೆ? ಎಷ್ಟೋ ಮಂದಿ ಲೈನ್‍ಮೆನ್‍ಗಳು ವಿದ್ಯುತ್
ಅವಘಡದಿಂದ ಮೃತಪಟ್ಟಿದ್ದಾರೆ. ಆದರೆ ಅವರಿಗೆ ಇನ್ನೂ ಕೂಡಾ ಜೀವರಕ್ಷಕ ಸಾಮಗ್ರಿಗಳನ್ನು ವಿತರಿಸಲಾಗಿಲ್ಲ. ಶಾಖ್ ಹೊಡೆಯದಂತೆ ತಪ್ಪಿಸಲು, ತಲೆಗೆ ಹೆಲ್ಮೆಟ್, ಕಂಬ ಹತ್ತುವ ಸಾಮಗ್ರಿ ಹೀಗೆ ಯಾವುದೂ ಸಿಕ್ಕಿಲ್ಲ. ಇಂದಿಗೂ ಕಾರ್ಮಿಕರು ಜೀವ ಪಣಕ್ಕಿಟ್ಟು ಕೆಲಸ ಮಾಡಬೇಕಾಗಿದೆ. ಇಂಥಾ ಸಮಸ್ಯೆಗಳನ್ನು ನಿವಾರಿಸುವುದನ್ನು ಬಿಟ್ಟು ಡಿಕೆಶಿಯವರು ಪವರ್‍ಮ್ಯಾನ್ ಎಂದು ಬದಲಿಸಲು ಹೋಗುವಾಗ ಒಂದು ದೊಡ್ಡ ಮೂರ್ಖತನದಂತೆ ಕಂಡುಬರುತ್ತದೆ.
ಅದಕ್ಕಿಂತ ಬದಲು ಸೂಪರ್‍ಮ್ಯಾನ್, ಸ್ಪೈಡರ್‍ಮ್ಯಾನ್, ಶಕ್ತಿಮಾನ್ ಎಂದು ಹೆಸರಿಟ್ಟರೆ ಒಳ್ಳೆಯದಿತ್ತು. ಲೈನ್‍ಮೆನ್‍ಗಳು ಹಾರಿಕೊಂಡು ಹೋಗಿ ವಿದ್ಯುತ್ ಸಮಸ್ಯೆ ನಿವಾರಿಸಿಯಾರು! ಸಮಸ್ಯೆಗಳನ್ನು ಪರಿಹರಿಸಲಾಗದೆ ತೇಪೆ ಹಾಕಿ ಮುಚ್ಚಿಬಿಡಲು ಲೈನ್‍ಮೆನ್‍ಗಳಿಗೆ ಪವರ್‍ಮೆನ್ ಎಂದು ಹೆಸರಿಡುವ ಹುನ್ನಾರದಂತೆ
ಕಂಡುಬರುತ್ತಿದೆ. ಇದರಿಂದ ಸರಕಾರಕ್ಕೂ ಲಾಭವಿಲ್ಲ ಅರ್ಥಾತ್ ಕಾರ್ಮಿಕರಿಗೂ ಲಾಭವಿಲ್ಲ..
ಎಕ್ಸಾಂ ಬರೆದವರ ಕಥೆ ಏನಾಯಿತು ಡಿಕೆಶಿ ಸಾಹೇಬ್ರೇ?
ವಿದ್ಯುತ್ ಇಲಾಖೆಯಲ್ಲಿ ಇರುವ ಕಿರಿಯ ಇಂಜಿನಿಯರ್ ಸೇರಿ ಹಲವು ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ವೆರಿಫಿಕೇಶನ್ ಕೂಡಾ ಆಗಿದೆ. ಆದರೆ ಅವರಿಗೆ ಕೆಲಸ ಯಾವಾಗ ಸಿಗುತ್ತದೆ ಮಿಸ್ಟರ್ ಡಿಕೆಶಿಯವರೇ? ನಾನಾ ಹುದ್ದೆಗಳಿಗೆ ಎಕ್ಸಾಂ ನಡೆಸಲಾಗಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ ಎಲ್ಲಾ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಅಭ್ಯರ್ಥಿಗಳಿಗೆ ಕೆಲಸ ಸಿಗಲೆಂದು ಎಲ್ಲಾ ರೀತಿಯ ವೆರಿಫಿಕೇಶನ್ ಕೂಡಾ ನಡೆದಿದೆ. ಆದರೆ ಅಭ್ಯರ್ಥಿಗಳಿಗೆ ಕೆಲಸ ಇನ್ನೂ ಸಿಕ್ಕಿಲ್ಲ. ಇದೆಲ್ಲಾ ಮರೆತುಹೋಯಿತೇ ಅಥವಾ ಅಭ್ಯರ್ಥಿಗಳನ್ನು ಕೈಬಿಡಲಾಗಿದೆಯೋ? ಡಿಕೆಶಿ ಸ್ವಾಮಿ ಸ್ವಲ್ಪ ಇತ್ತ ಕಡೆ ಗಮನಿಸುವಿರಾ?
ಕೇಂದ್ರ ಸರಕಾರದ ಯೋಜನೆಯನ್ನು ತನ್ನದೆಂದರೆ ಮುಗಿಯಿತಾ?
ಇಂದು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 13000 ಸೋಲಾರ್ ಪ್ಯಾನಲ್ ಬಳಸಲು ನಿರ್ಧರಿಸಿದ್ದಾರೆ ಡಿಕೆಶಿಯವರು. ಆದರೆ ಇದು ಕೇಂದ್ರ ಸರಕಾರದ ಸಬ್ಸಿಡಿಯಿಂದ ತಯಾರಾಗುವ ಯೋಜನೆ. ಇಷ್ಟವರೆಗೆ ಅದನ್ನು ಮಾಡಿಮುಗಿಸಬೇಕಿತ್ತು. ಆದರೆ ಕೇಂದ್ರ ಸರಕಾರದ ಒತ್ತಡ ಇರುವುದರಿಂದ ಅದನ್ನು ಆದಷ್ಟು ಬೇಗ ಮುಗಿಸಲು ಕರ್ನಾಟಕ ಮುಂದಾಗಿದೆ. ಆದ್ದರಿಂದ ಈ ಯೋಜನೆಯನ್ನು ತನ್ನದೆಂದು ಬಿಂಬಿಸಲು ಮುಂದಾಗಿರುವುದೇಕೆ? ಅಷ್ಟಕ್ಕೂ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗೆ ಏನು ಕ್ರಮ ಕೈಗೊಂಡಿದೆ? ಈ ಬಗ್ಗೆ ಸ್ವತಃ ಡಿಕೆಶಿಯವರೇ ಉತ್ತರಿಸಬೇಕಾಗಿದೆ. ಯಾಕೆಂದರೆ ಇಂದು ಕೆಲಸ ಮಾಡುವ ಪವರ್ ಪ್ರಾಜೆಕ್ಟ್‍ಗಳು ಮಾಜಿ ಸಚಿವೆ ಶೋಭಾ ಕರಂದ್ಲಾಜೆಯ ಕಾಲದಲ್ಲಿ ಆದ ಕೆಲಸಗಳು. ಅವರ ಕೆಲಸ ಇಂದು ರಾಜ್ಯದಲ್ಲಿ ಕತ್ತಲೆಯನ್ನು ನಿವಾರಿಸಿದೆ. ಆದರೆ ವಿದ್ಯುತ್ ಸಮಸ್ಯೆ ಉಂಟಾದರೆ ದಕ್ಷ ಕೆಲಸಗಾರರ ಕೊರತೆ ಕಾಣಿಸುತ್ತದೆ. ಇದರಿಂದ ಸೂಕ್ತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆಯೇ? ಈ ಬಗ್ಗೆ ಮಾಹಿತಿ ಇದೆಯೇ ಡಿಕೆಶಿ ಸಾಹೇಬ್ರೇ? ನೀವು ವಿದುತ್ ಉತ್ಪಾದಿಸಲು ಬಳಸಲಿರುವ ಪ್ಯಾನಲ್‍ಗೆ ಯಾವ ಕಂಪೆನಿಗೆ ಗುತ್ತಿಗೆ ನೀಡುತ್ತೀರಿ? ಇದರಲ್ಲಿ ನಡೆಯುವ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸಬಹುದೇ? ಎಷ್ಟು ಮೊತ್ತಕ್ಕೆ ಟೆಂಡರ್ ನೀಡಲಿದ್ದೀರಿ? ಈ ಬಗ್ಗೆ ಸರಿಯಾದ ಮಾಹಿತಿ ಸಿಗಬಹುದೇ? ಇದರಲ್ಲಿ ಯಾವುದೇ ಗೋಲ್‍ಮಾಲ್ ನಡೆಯದಂತೆ ನೋಡಿಕೊಳ್ಳಬೇಕಾಗಿ ಡಿಕೆಶಿಯವರಲ್ಲಿ ಕೇಳುತ್ತಿದ್ದೇನೆ.
ತಾತ್ಕಾಲಿಕ ನೆಲೆಗಟ್ಟಿನಲ್ಲಿ ಮಾನವ ಸಂಪನ್ಮೂಲವನ್ನು ಒದಗಿಸಲು ನೀವು ಯಾವ ಸಂಸ್ಥೆಗೆ ಗುತ್ತಿಗೆ ನೀಡಿದ್ದೀರಿ? ಸರಕಾರಿ ಸಂಸ್ಥೆಯೊಂದು ತೆಗೆದುಕೊಂಡಿದ್ದರೂ ಅದನ್ನು ಖಾಸಗಿ ಸಂಸ್ಥೆಗೆ ಸಬ್‍ಕಾಂಟ್ರಾಕ್ಟ್ ನೀಡಿದ್ದಾರೆಂದು ಮಾಹಿತಿ ಇದೆ ಇದು ನಿಜವೇ? ಇನ್ನು ಕೆಇಬಿಗೆ ಒದಗಿಸುವ ಸಾಫ್ಟ್‍ವೇರ್ ಕೂಡಾ ಮಂಗಳೂರು ಮೂಲದ ಪ್ರಭಾವಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ ಎಂಬ ಮಾಹಿತಿ ಇದೆ ಇದು ನಿಜವೇ? ಮೆಸ್ಕಾಂ ಬಳಸುತ್ತಿರುವ ಎನರ್ಜಿಸಿಂಗ್ ಸಾಫ್ಟ್‍ವೇರ್ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿಯಾದರೂ ಇದೆಯೇ?
ಶೋಭಾ ಕರಂದ್ಲಾಜೆಯವರು ರೂಪಿಸಿದ ವಿದ್ಯುತ್ ಪ್ರಾಜೆಕ್ಟ್‍ಗಳನ್ನು ಇಂಪ್ಲಿಮೆಂಟ್ ಮಾಡಲು ಹೆಣಗಾಡುತ್ತಿರುವ ಇಂದಿನ ಸರಕಾರ ವಿದ್ಯುತ್ ಉತ್ಪಾದನೆಗೆ ಏನು ಕ್ರಮ ಕೈಗೊಂಡಿದೆ? ಸರಿಯಾಗಿ ಕೆಲಸ ಮಾಡಿದ್ದರೆ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಬಹುದಿತ್ತು. ಆದರೆ ವಿದ್ಯುತ್ ಉತ್ಪಾದನೆಯಲ್ಲಿ ದಕ್ಷತೆಯ ಕೊರತೆಯಿಂದ ಇಂದು ಕರ್ನಾಟಕ ಸರಕಾರ ವಿದ್ಯುತ್‍ಗಾಗಿ ಹೆಣಗಾಟ ನಡೆಸುತ್ತಿದೆ. ಅದರಂತೆಯೇ ಸೋಲಾರ್ ಪ್ಯಾನಲ್‍ಗಳಿಗೂ ಆಗದಂತೆ ಡಿಕೆಶಿಯವರು ಖುದ್ದಾಗಿ ಜವಾಬ್ದಾರಿ ವಹಿಸಬೇಕಾಗಿದೆ.
ಯಾಕೆಂದರೆ ಸಿದ್ದರಾಮಯ್ಯನವರ ಹಲವಾರು ಭಾಗ್ಯಗಳಂತೆ ಕತ್ತಲೆಭಾಗ್ಯವನ್ನೂ ಕರುಣಿಸಿದ್ದು, ಇದರಿಂದ ಶಾಲಾ ಮಕ್ಕಳಿಂದ ಹಿಡಿದು, ಹಲವಾರು ಉತ್ಪಾದಕ
ಕಂಪೆನಿಗಳು ಸೇರಿ ಹಲವಾರು ಮಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೆಲ್ಲಾ ನಿಮ್ಮ ಸರಕಾರಕ್ಕೆ ಐದು ವರ್ಷಗಳ ಕಾಲ ಸರಿಮಾಡಲಾಗಲಿಲ್ಲ.. ಅದು ಬಿಟ್ಟು
ಲೈನ್‍ಮೆನ್‍ಗಳ ಹೆಸರು ಬದಲಿಸಲು ಮುಂದಾಗುತ್ತಿರುವುದನ್ನು ನೋಡಿದಾಗ ನಗು ಬರುತ್ತದೆ.
ಡಿಕೆಶಿಯವರಿಗೆ ನೆನಪಿಲ್ಲದಿದ್ದರೂ ರಾಜ್ಯದ ರೈತರಿಗಿನ್ನೂ ನೆನಪಿದೆ. ಅದೇನೆಂದರೆ ಕಳೆದ 2014 ಸೆಪ್ಟೆಂಬರ್ ತಿಂಗಳಲ್ಲಿ ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರೈತರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಸಿದ್ದಿರಿ. ಪಾಪ ರೈತರು ಸಾಲಸೋಲ ಮಾಡಿ ಪಂಪ್ ಖರೀದಿಸಿ ಕೃಷಿ ಮಾಡಿದ್ರೆ ಡಿಕೆಶಿಯವರು ಅವರ ಮೇಲೆಯೇ ಕ್ರಿಮಿನಲ್ ಕ್ರಮ ಕೈಗೊಳ್ಳುವ ಎಚ್ಚರಿಗೆ ನೀಡಿರುವುದನ್ನು ರಾಜ್ಯದ ಜನರು ಇನ್ನೂ ಮರೆತಿಲ್ಲ.
ಸುಳ್ಯ ತಾಲೂಕಿನ ಬೆಳ್ಳಾರೆಯ ಸಾಮಾಜಿಕ ಕಾರ್ಯಕರ್ತ, ಕೃಷಿಕ ಸಾಯಿ ಗಿರಿಧರ್ ರೈ ಡಿಕೆಶಿಗೆ ಪೊಲೀನ್ ಮಾಡಿ, ತಮ್ಮ ಊರಿನ ವಿದ್ಯುತ್ ಸಮಸ್ಯೆ ಬಗ್ಗೆ
ಹೇಳಿಕೊಂಡಿದ್ದರು. ಆಗ ಸಿಟ್ಟುಗೊಂಡ ಸಚಿವರು, ಸುಳ್ಯದ ಪೆÇೀಸರಿಗೆ ಪೊಲೀನ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಮೂರು ವಾಹನಗಳಲ್ಲಿ ಮನೆ ಮುಂದೆ ಬಂದಿಳಿದ ಪೊಲೀಸರಿಗೆ ಮನೆಯವರ ಮಾತನ್ನೂ ಕೇಳದೆ ನೇರವಾಗಿ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದರು. ಮಹಿಳೆಯರ, ಮಕ್ಕಳ
ರೋದನವನ್ನೂ ಲೆಕ್ಕಿಸದೆ ದರದರನೆ ಎಳೆದುಕೊಂಡು ಹೋದರು. ಒಂದು ರಾಜ್ಯದ ಪ್ರಜೆ ಸಮಸ್ಯೆ ಹೇಳಿದರೆ ಸಚಿವರಾದ ಡಿಕೆಶಿ ಕೇಸ್ ಹಾಕುತ್ತಾರೆ ಎಂದರೆ ಏನರ್ಥ?
ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿ, ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಸೂಕ್ತ ಕಂಪಿನಿಗಳಿಗೆ
ಪಾರದರ್ಶಕವಾಗಿ ಟೆಂಡರ್ ನೀಡಿ, ಸಾಕಷ್ಟು ವಿದ್ಯುತ್ ಉತ್ಪಾದಿಸಿ ಅದರಿಂದ ;ಲಾಭವಾಗುವಂತೆ ಮಾಡುವುದನ್ನು ಬಿಟ್ಟು, ಲೈನ್‍ಮೆನ್ ಎಂಬ ಹೆಸರನ್ನು ಬದಲಿಸಿ ಪವರ್‍ಮೆನ್ ಎಂದು ಹೆಸರು ಬದಲಿಸಲು ನೋಡುತ್ತಿದ್ದಾರೆ. ಇದೆಲ್ಲಾ ಚುನಾವಣೆಗೆ ನಡೆಸುವ ಗಿಮಿಕ್ ಎಂದು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಸರಕಾರಕ್ಕೆ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ಇಚ್ಛಾಶಕ್ತಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು.
-ಚೇಕಿತಾನ