ಪ್ರಚಲಿತ

ವರದಕ್ಷಿಣೆ ಪದ್ಧತಿ ತುಂಬಾ ಒಳ್ಳೆಯದು ಎಂದು ಬೋಧಿಸತೊಡಗಿದೆ ಸೇಂಟ್ ಜೋಸೆಫ್ ಕಾಲೇಜು! ವಿದ್ಯಾರ್ಥಿಯಿಂದ ಬಯಲಾಯಿತು ಈ ಪಠ್ಯ!!

 ಇಂದಿನ ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಅದೇನೇನೂ ಕಲಿಸುತ್ತಾರೋ ಏನೋ ಗೊತ್ತಿಲ್ಲ!! ಯಾಕೆಂದರೆ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ವರದಕ್ಷಿಣೆ ಪದ್ಧತಿಯನ್ನು ಇಂದಿನ ದಿನಗಳಲ್ಲಿಯೂ ಬೆಂಬಲಿಸುವಂತೆ ತಿಳಿಸುತ್ತಿವೆ ಈ ಪಠ್ಯಪುಸ್ತಕಗಳು ಎಂದರೆ ನಂಬ್ತೀರಾ?? ಆದರೆ ನಂಬಲೇಬೇಕು… ಯಾಕೆಂದರೆ ಈ ಯಡವಟ್ಟು ಮಾಡಿದ್ದು ಬೇರಾರು ಅಲ್ಲ, ಕನಾಟದ ರಾಜಧಾನಿಯ ಪ್ರತಿಷ್ಠಿತ, ಹೆಮ್ಮೆಯ ಸೇಂಟ್ ಜೋಸೆಫ್ ಕಾಲೇಜು !!!

ಹೌದು.. ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಬೇಕು ಎಂದು ಅದೆಷ್ಟೋ ಸಾಮಾಜಿಕ ಸುಧಾರಕರು ಈ ಬಗ್ಗೆ ಹೋರಾಡಿ ಅದೆಷ್ಟೋ ಸಮಾಜದಲ್ಲಿರುವ ಪಿಡುಗಳನ್ನು ದೂರ ಮಾಡಲು ಶ್ರಮಿಸಿದ್ದಾರೆ!! ಆದರೆ, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ ಕಾಲೇಜಿನ ಸಮಾಜಶಾಸ್ತ್ರ ವಿಷಯದ ಪಠ್ಯದಲ್ಲಿ, ವರದಕ್ಷಿಣೆ ಪದ್ಧತಿಯನ್ನು ಬೆಂಬಲಿಸುವ ಪಾಠವನ್ನು ತನ್ನ ವಿದ್ಯಾರ್ಥಿಗಳಿಗೆ ಬೋಧಿಸತೊಡಗಿದೆ ಎಂದರೆ, ವರದಕ್ಷಿಣೆ ಪದ್ಧತಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೋ ಹೇಗೆ??

ಈ ಬಗೆಗಿನ ಮಾಹಿತಿಯನ್ನು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ತಮ್ಮ ಪಠ್ಯದಲ್ಲಿ ವರದಕ್ಷಿಣೆಗೆ ಬೆಂಬಲಿಸುವ ಪಠ್ಯವಿರುವ ಕುರಿತು ಫೇಸ್‍ಬುಕ್‍ನಲ್ಲಿ ಫೆÇೀಟೋ ಶೇರ್ ಮಾಡಿದ್ದು, ತದನಂತರ ಪಠ್ಯದಲ್ಲಾಗಿರುವ ತಪ್ಪು ಬಹಿರಂಗವಾಗಿತ್ತು. ಆದರೆ ಇಂತಹ ಅನಿಷ್ಟ ಪದ್ಧತಿಯನ್ನು ಪ್ರೇರೆಪಿಸುವ ವಿಷಯವನ್ನು ಪಠ್ಯಪುಸ್ತಕದಲ್ಲಿ ಇರಿಸಿರುವುದು ಯಾಕೆ ಎನ್ನುವ ಪ್ರಶ್ನೆಗಳು ಕಾಡುತ್ತವೆ!!

ಈ ಮಧ್ಯೆ, ಸೇಂಟ್ ಜೋಸೆಫ್ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಕಿರಣ್ ಜೀವನ್ ಅವರು, ಕಾಲೇಜಿನ ಪಠ್ಯಪುಸ್ತಕದಲ್ಲಿ ಇಂತಹ ದೃಷ್ಟಿಕೋನಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಲ್ಲದೇ, ಸಮಾಜಶಾಸ್ತ್ರ ವಿಭಾಗ ಮತ್ತು ಕಾಲೇಜು ಈ ವರದಕ್ಷಿಣೆ ಪದ್ಧತಿಗೆ ವಿರೋಧ ವ್ಯಕ್ತಪಡಿಸುತ್ತದೆ. ಆದಾಗ್ಯೂ, ವರದಕ್ಷಿಣೆ ಬೆಂಬಲಿಸುವ ಪಠ್ಯದ ಮೂಲ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಈಗಾಗಲೇ ತಿಳಿಸಿದ್ದಾರೆ.

ಪಠ್ಯಪುಸ್ತಕದಲ್ಲಿರುವ ವರದಕ್ಷಿಣೆ ಪದ್ಧತಿಯ ಪ್ರಯೋಜನ/ಉಪಯೋಗಗಳು ಹೀಗಿವೆಯಂತೆ!

ಸೇಂಟ್ ಜೋಸೆಫ್ ಕಾಲೇಜಿನ ಸಮಾಜಶಾಸ್ತ್ರ ವಿಷಯದ ಪಠ್ಯದಲ್ಲಿ, ವರದಕ್ಷಿಣೆ ಪದ್ಧತಿಯ ಪ್ರಯೋಜನ/ಉಪಯೋಗಗಳು ಎಂಬ ಅಡಿಬರಹದಲ್ಲಿ ಈ ಪಾಠವನ್ನು ನೀಡಲಾಗಿದೆ. “ಇದರಲ್ಲಿ ದೊಡ್ಡ ಮೊತ್ತದ ವರದಕ್ಷಿಣೆ ನೀಡುವ ಮೂಲಕ ಕುರೂಪಿ ಯುವತಿಯ ಮದುವೆ ಮಾಡಬಹುದು. ವರದಕ್ಷಿಣೆ ನೀಡದಿದ್ದರೆ ಆಕೆಯ ಮದುವೆಯಾಗುವುದು ಸಾಧ್ಯವೇ ಇಲ್ಲ! ಅಂದರೆ, ಉತ್ತಮ ವರನನ್ನು ಮದುವೆಗೆ ಒಪ್ಪಿಸಲು ವರದಕ್ಷಿಣೆ ನೆರವಾಗುತ್ತದೆ” ಎಂದು ಪಠ್ಯದಲ್ಲಿ ಓತಪೆÇ್ರೀತವಾಗಿ ತಿಳಿಸಲಾಗಿದೆ.

ಇವಿಷ್ಟೇ ಅಲ್ಲದೇ, “ವರದಕ್ಷಿಣೆ ಸಮಾಜದಲ್ಲಿ ಮಹಿಳೆಯ ಗೌರವವನ್ನು ಹೆಚ್ಚಿಸುತ್ತದೆ. ಮದುವೆಯ ಸಂದರ್ಭದಲ್ಲಿ ದೊಡ್ಡ ಮೊತ್ತದ ವರದಕ್ಷಿಣೆ ತರುವ ಮಹಿಳೆಯರನ್ನು ಉತ್ತಮವಾಗಿ ನಡೆಸಿಕೊಳ್ಳಲಾಗುತ್ತದೆ. ಇದು ಆಕೆಯ ಪತಿಯ ಪ್ರೀತಿಯ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ದೊಡ್ಡ ಮೊತ್ತದ ವರದಕ್ಷಿಣೆ ತರಲಾಗದ ಯುವತಿ ತನ್ನ ಗಂಡನ ಮನೆಯಲ್ಲಿ ಹೆಚ್ಚಿನ ಗೌರವಾದರಗಳನ್ನು ಪಡೆಯುವುದಿಲ್ಲ. ಜತೆಗೆ ಬಡತನದ ಯುವಕರಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವುದಕ್ಕೋಸ್ಕರ ವರದಕ್ಷಿಣೆ ಸಹಕಾರಿಯಾಗುತ್ತದೆ” ಎಂದು ಪಠ್ಯದಲ್ಲಿ ತಿಳಿಸಲಾಗಿದೆ!!

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹೇಳುವಾಗ, ಇಂತಹ ಅನಿಷ್ಟ ಪದ್ಧತಿಯನ್ನು ಪ್ರೇರೆಪಿಸುತ್ತಾ ಅವುಗಳನ್ನು ಪ್ರೋತ್ಸಾಹಿಸುವುದು ಎಷ್ಟರ ಮಟ್ಟಿಗೆ ಸರಿ!! ಮಕ್ಕಳ ಮನಸ್ಸಿನಲ್ಲಿ ವರದಕ್ಷಿಣೆಯ ಬಗ್ಗೆ, ಅದರ ಉಪಯೋಗಗಳ ಬಗ್ಗೆ ಹೇಳಿಕೊಡುವ ಪಾಠಗಳು ಮಕ್ಕಳ ಮನಸ್ಸಿಗೆ ಯಾವರೀತಿ ಪರಿಣಾಮವನ್ನು ಬೀರುತ್ತೆ ಎನ್ನುವುದನ್ನು ಅರಿಯದ ಇವರು ಸಾಮಾಜಿಕ ಪಿಡುಗುಗಳಿಗೆ ಪ್ರೋತ್ಸಾಹಿಸಿದಂತಲ್ಲವೇ??

ಅಷ್ಟೇ ಅಲ್ಲದೇ, ಅದೆಷ್ಟೊ ಸಾಮಾಜಿಕ ಸುಧಾರಕರು ಇಂತಹ ಅನಿಷ್ಟ ಪದ್ಧತಿಯನ್ನು ನಿಷೇಧ ಮಾಡುವಲ್ಲಿ ಶ್ರಮವಹಿಸಿದ್ದು, ಇದೀಗ ಇಂದಿನ ಮಕ್ಕಳಿಗೆ ಇದರ
ಉಪಯೋಗಗಳನ್ನು, ಪ್ರಯೋಜನಗಳನ್ನು ಭೋದಿಸುತ್ತಿದ್ದಾರೆ ಎಂದರೆ, ನಾವು ಸಾಮಾಜಿಕ ಸುಧಾರಕರಿಗೆ ಮಾಡುವ ದ್ರೋಹ ಅಲ್ವೇ?? ಇಂತಹ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಿ ಪ್ರೇರಣೆ ನೀಡುವುದು ಎಷ್ಟರ ಮಟ್ಟಿಗೆ ನ್ಯಾಯಯುತವಾದುದು ನೀವೇ ಹೇಳಿ.

ಮೂಲ:http://vijayavani.net/bangalore-st-joseph-college-endorses-dowry-system-in-sociology-syllabus-probe-initiated/

-ಅಲೋಖಾ

Tags

Related Articles

Close